ಕೋಲಾರ ಜಿಲ್ಲೆಯ ನೂತನ ಆರಕ್ಷಕ ಅಧೀಕ್ಷಕರಾಗಿ ಮಾನ್ಯ ಶ್ರೀ ರಾಮ್‌ನಿವಾಸ್ ಸೆಪಟ್, ಐ.ಪಿ.ಎಸ್ ರವರು ಅಧಿಕಾರ ಸ್ವೀಕಾರ ಮಾಡಿಕೊಂಡಿರುತ್ತಾರೆ. ಮಾನ್ಯ ಶ್ರೀ ರಾಮ್‌ನಿವಾಸ್ ಸೆಪಟ್, ಐ.ಪಿ.ಎಸ್ ರವರು ಈ ಹಿಂದೆ ತಮ್ಮ ಪ್ರಾಯೋಗಿಕ ತರಬೇತಿ ಅವಧಿಯನ್ನು ಪೂರ್ಣಗೊಳಿಸಿ ಇದೆ ಪ್ರಥಮ ಬಾರಿಗೆ ದಿನಾಂಕ೨೭-೦೧-೨೦೧೨ ರಂದು ಬೆಳಗ್ಗೆ ಕೋಲಾರ ಜಿಲ್ಲೆಯ ಆರಕ್ಷಕ ಅಧೀಕ್ಷಕರಾಗಿದ್ದ ಡಾ. ಕೆ ತ್ಯಾಗರಾಜನ್, ಐ.ಪಿ.ಎಸ್ ರವರಿಂದ ಪ್ರಭಾರವನ್ನು ವಹಿಸಿಕೊಂಡಿರುತ್ತಾರೆ.
ದಿನದ ಅಪರಾಧಗಳ ಪಕ್ಷಿನೋಟ ೨೫ ನೇ ಜನವರಿ ೨೦೧೨
January 24, 2012ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: ೨೫-೦೧-೨೦೧೨ ರಂದು ೧೪೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕಾಣೆಯಾದವರ ಬಗ್ಗೆ :
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೩-೦೧-೨೦೧೨ ರಂದು ರಾತ್ರಿ ಸಮಯದಲ್ಲಿ ಕೋಲಾರ ತಾಲೂಕು ಕೊಂಡರಾಜನಹಳ್ಳಿ ಗ್ರಾಮದ ವಾಸಿ ಬಾಬುರಾವ್ ಎಂಬುವರ ತಂಗಿಯಾದ ದೀಪಾ(೨೧) ಎಂಬುವರು ಮನೆಯಲ್ಲಿದ್ದವರು ಕಾಣೆಯಾಗಿರುತ್ತಾರೆ.
ಹಲ್ಲೆ :
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೩-೦೯-೨೦೧೧ ರಂದು ೦೬೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಹಳೇ ಸೋಮಾರಸನಹಳ್ಳಿ ಗ್ರಾಮದ ವಾಸಿ ಲಕ್ಷ್ಮಯ್ಯ ಎಂಬುವರು ತನ್ನ ಗ್ರಾಮದಲ್ಲಿರುವ ಹೊಸ ರಸ್ತೆಗೆ ನೀರು ಹಾಕುತ್ತಿದ್ದರು. ಕಾಮಗಾರಿ ರಸ್ತೆಯ ಮೇಲೆ ಅದೇ ಗ್ರಾಮದ ವಾಸಿಯಾದ ಯಲ್ಲಪ್ಪ ಎಂಬುವರು ಟೆಂಪೋ ಚಾಲನೆ ಮಾಡಿಕೊಂಡು ಬಂದಿದ್ದು, ಇದನ್ನು ಪ್ರಶ್ನಿಸಿದ ಲಕ್ಷ್ಮಯ್ಯ ರವರಿಗೆ ಯಲ್ಲಪ್ಪ ಮತ್ತು ಇತರೆ ೩ ಜನರು ದೊಣ್ಣೆಯಿಂದ ಹೊಡೆದು ಗಾಯಪಡಿಸಿರುತ್ತರೆ.
ವರದಕ್ಷಿಣೆ ಕಿರುಕುಳ :
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೦-೦೫-೨೦೧೦ ರಂದು ಕೋಲಾರ ತಾಲೂಕು ಹಾರೋಹಳ್ಳಿ ಗ್ರಾಮದ ವಾಸಿ ಅರುಣಾ ಎಂಬುವರನ್ನು ಬೆಗ್ಲಿಬೆಣಜೇನಹಳ್ಳಿ ಗ್ರಾಮದ ವಾಸಿ ಮಂಜುನಾಥ ಎಂಬುವರಿಗೆ ಮದುವೆ ಮಾಡಿ ಕೊಟ್ಟಿದ್ದರು. ಮದುವೆ ಸಮಯದಲ್ಲಿ ಒಡವೆ, ನಗದು ಮತ್ತು ದ್ವಿಚಕ್ರ ವಾಹನ ನೀಡಿದ್ದರು ಸಹ ಗಂಡ ಮಂಜುನಾಥ ಮತ್ತು ಅವರ ಮನೆಯವರು ಇನ್ನು ಹೆಚ್ಚಿನ ರೂ. ೫೦,೦೦೦/- ವರದಕ್ಷಿಣೆ ತರುವಂತೆ ಒತ್ತಾಯ ಮಾಡಿ ಅವಾಚ್ಚ ಶಬ್ದಗಳಿಂದ ಬೈದು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
ಮನೆ ಕಳ್ಳತನ :
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೦೧-೨೦೧೨ ರಂದು ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಕೋಲಾರ ತಾಲೂಕು ವಕ್ಕಲೇರಿ ಗ್ರಾಮದ ವಾಸಿ ವೆಂಕಟಾಚಲಯ್ಯ ಎಂಬುವರ ಅಂಗಡಿಗೆ ಹಾಕಿದ್ದ ರೋಲಿಂಗ್ ಷಲ್ಟರ್ ಅನ್ನು ಮೀಟಿ ತೆಗೆದು ಅಂಗಡಿಯಲ್ಲಿದ್ದ ೩ ಮೊಬೈಲ್ ಫೋನ್ ಮತ್ತು ರೂ. ೧,೫೦೦/- ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೧-೨೦೧೨ ರಿಂದ ೨೪-೦೧-೨೦೧೨ ರ ನಡುವೆ ಯಾರೋ ಕಳ್ಳರು ಕೋಲಾರ ನಗರದ ಹಾರೋಹಳ್ಳಿ ವಾಸಿ ಪಂಕಜಮ್ಮ ಎಂಬುವರ ಮನೆಗೆ ಹಾಕಿದ್ದ ಬೀಗವನ್ನು ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ ಬಂಗಾರ ಮತ್ತು ವಜ್ರದ ವಡವೆ ನಗದು ರೂ. ೧,೦೦,೦೦೦/- ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
ಜಾನುವಾರು ಕಳ್ಳತನ :
ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸೀಮೆ ಹಸು ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೧-೨೦೧೨ ರಂದು ೧೭೦೦ ಗಂಟೆ ಸಮಯದಲ್ಲಿ ಯಾರೋ ಕಳ್ಳರು ಮುಳಬಾಗಿಲು ತಾಲೂಕು ಬೆಳ್ಳಂಬಳ್ಳಿ ಗ್ರಾಮದ ವಾಸಿ ಮಂಜುನಾಥ ಎಂಬುವರ ಮನೆಯ ಬಳಿ ಕಟ್ಟಿ ಹಾಕಿದ್ದ ರೂ. ೪೦,೦೦೦/- ಬೆಲೆ ಬಾಳುವ ಸೀಮೆ ಹಸುವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
ಬಾಲಕಿ ಅಪಹರಣ :
ವೇಮಗಲ್ ಪೊಲೀಸ್ ಠಾಣೆಯಲ್ಲಿ ಅಪಹರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೦೧-೨೦೧೨ ರಂದು ೧೦೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ರಾಮಸಂದ್ರ ಗ್ರಾಮದ ವಾಸಿ ಸಾವಿತ್ರಮ್ಮ ಎಂಬುವರ ಮಗಳಾದ ಕು. ಪವಿತ್ತಾ @ ದೇವಿ(೧೭) ಎಂಬುವನರನು ಸೊಣ್ಣೇನಹಳ್ಳಿ ಗ್ರಾಮದ ವಾಸಿಗಳಾದ ರಮೇಶ ಮತ್ತು ವೇಣುಮಾಧವ ಎಂಬುವರು ನರಸಾಪುರ ಕಾಲೇಜಿನ ಬಳಿ ದ್ವಿಚಕ್ರ ವಾಹನದಲ್ಲಿ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
ದಿನದ ಅಪರಾಧಗಳ ಪಕ್ಷಿನೋಟ ೨೪ ನೇ ಜನವರಿ ೨೦೧೨
January 24, 2012ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: ೨೪-೦೧-೨೦೧೨ ರಂದು ೧೪೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕಾಣೆಯಾದವರ ಬಗ್ಗೆ :
ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೯-೦೧-೨೦೧೨ ರಂದು ೧೭೦೦ ಗಂಟೆ ಸಮಯದಲ್ಲಿ ಮುಳಬಾಗಿಲು ಪಟ್ಟಣದ ಟೀಚರ್ಸ್ ಕಾಲೋನಿ ವಾಸಿ ರಾಮಕೃಷ್ಣಪ್ಪ ಎಂಬುವರ ತಾಯಿಯಾದ ಆದೆಮ್ಮ(೫೨) ಎಂಬುವರು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ.
ವರದಕ್ಷಿಣೆ ಕಿರುಕುಳ :
ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೧-೦೯-೨೦೧೧ ರಂದು ಮುಳಬಾಗಿಲು ತಾಲೂಕು ಕೆ.ಉಗಿನಿ ಗ್ರಾಮದ ವಾಸಿ ಭಾಗ್ಯ ಎಂಬುವರನ್ನು ಮಾಲೂರು ತಾಲೂಕು ಹುಲಿಮಂಗಲ ಗ್ರಾಮದ ವಾಸಿ ಬಾಬು ಎಂಬುವರಿಗೆ ಮದುವೆ ಮಾಡಿ ಕೊಟ್ಟಿದ್ದರು. ಮದುವೆ ಸಮಯದಲ್ಲಿ ಒಡವೆ, ನಗದು ಮತ್ತು ದ್ವಿಚಕ್ರ ವಾಹನ ನೀಡಿದ್ದರು ಸಹ ಗಂಡ ಬಾಬು ಮತ್ತು ಅವರ ಮನೆಯವರು ಇನ್ನು ಹೆಚ್ಚಿನ ವರದಕ್ಷಿಣೆ ತರುವಂತೆ ಒತ್ತಾಯ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಮನೆಯಿಂದ ಹೊರಗೆ ಹಾಕಿದ್ದು, ನಂತರ ಭಾಗ್ಯ ತವರು ಮನೆಗೆ ಬಂದಿದ್ದರು. ದಿನಾಂಕ: ೧೭-೦೧-೨೦೧೨ ರಂದು ೧೬೩೦ ಗಂಟೆ ಸಮಯದಲ್ಲಿ ಬಾಬು ಮತ್ತು ಅವರ ಸ್ನೇಹಿತ ಭಾಗ್ಯ ರವರ ಮನೆಗೆ ಬಂದು ಅವಾಚ್ಚ ಶಬ್ದಗಳಿಂದ ಬೈದು ಹಲ್ಲೆ ಮಾಡಿ ಇನ್ನು ಹೆಚ್ಚಿನ ರೂ. ೫೦,೦೦೦/- ವರದಕ್ಷಿಣೆ ತರುವಂತೆ ಒತ್ತಾಯ ಮಾಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
ಸಾಮಾನ್ಯ ಅಪಘಾತ :
ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೩-೦೧-೨೦೧೨ ರಂದು ೧೫೦೦ ಗಂಟೆ ಸಮಯದಲ್ಲಿ ಬಂಗಾರುಪೇಟೆ ತಾಲೂಕು ಅತ್ತಿಗಿರಿ ಗ್ರಾಮದ ವಾಸಿ ನಾಗಮಣಿ ಮತ್ತು ಅವರ ಮಗಳಾದ ಪುಷ್ಕರಣಿ ಎಂಬುವರು ಕೋಲಾರ ನಗರದ ಪಲ್ಲವಿ ಮೃತ್ತದ ಬಳಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದರು. ಆ ಸಮಯದಲ್ಲಿ ಬಂದ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೭-ಆರ್-೨೦೫೫ರ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪುಷ್ಕರಣಿ ರವರಿಗೆ ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ಗಾಯಗಳಾಗಿರುತ್ತದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
ಜೂಜಾಟ ದಾಳಿ : ೪ ಜನರ ಬಂದನ: ರೂ. ೧,೦೦೦/- ವಶ :
January 22, 2012ದಿನಾಂಕ: ೨೨-೦೧-೨೦೧೨ ರಂದು ೧೭೩೦ ಗಂಟೆ ಸಮಯದಲ್ಲಿ ವೇಮಗಲ್ ಪೊಲೀಸ್ ಠಾಣೆಯ ಪಿಎಸ್‌ಐ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ತಮ್ಮ ಸಿಬ್ಬಂದಿಯವರೊಂದಿಗೆ ಕೋಲಾರ ತಾಲೂಕು ತಲಗುಂದ ಗ್ರಾಮದ ಸಮೀಪ ಹಣವನ್ನು ಪಣವಾಗಿಟ್ಟು ಅಂದರ್ – ಬಾಹರ್ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ಮಾಡಿ ಶ್ರೀನಿವಾಸ ಮತ್ತು ಇತರೆ ೩ ಜನರನ್ನು ಬಂದಿಸಿ ಪಣವಾಗಿಟ್ಟಿದ್ದ ರೂ. ೧,೦೦೦/- ಗಳನ್ನು ವಶ ಪಡಿಸಿಕೊಂಡಿರುತ್ತಾರೆ.
ಬಂದಿತರ ವಿವರಗಳು :
- ಶ್ರೀನಿವಾಸ ಬಿನ್ ರಾಮಣ್ಣ, ತಲಗುಂದ ಗ್ರಾಮ, ಕೋಲಾರ ತಾಲೂಕು.
- ಸುಬ್ರಮಣಿ ಬಿನ್ ನರಸಿಂಹಯ್ಯ, ತಲಗುಂದ ಗ್ರಾಮ, ಕೋಲಾರ ತಾಲೂಕು.
- ಚಿರಂಜೀವಿ ಬಿನ್ ಕಾಳಪ್ಪ, ತಲಗುಂದ ಗ್ರಾಮ, ಕೋಲಾರ ತಾಲೂಕು.
- ವಿನೋದ್ ಬಿನ್ ತಿಮ್ಮರಾಯಪ್ಪ, ತಲಗುಂದ ಗ್ರಾಮ, ಕೋಲಾರ ತಾಲೂಕು.
ಈ ಬಗ್ಗೆ ವೇಮಗಲ್ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ದಿನದ ಅಪರಾಧಗಳ ಪಕ್ಷಿನೋಟ ೨೩ ನೇ ಜನವರಿ ೨೦೧೨
January 22, 2012ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: ೨೩-೦೧-೨೦೧೨ ರಂದು ೧೪೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಸಾಮಾನ್ಯ ಅಪಘಾತ :
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೧-೦೧-೨೦೧೨ ರಂದು ೧೨೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಯಾನಾದನಹಳ್ಳಿ ಗ್ರಾಮದ ವಾಸಿ ವೆಂಕಟಮ್ಮ ಎಂಬುವರು ತಂಬಿಹಳ್ಳಿ ಗ್ರಾಮದ ಚೌಡಮ್ಮ ರವರ ಮನೆಯ ಬಳಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದರು. ಆ ಸಮಯದಲ್ಲಿ ಬಂದ ಕಾರು ಸಂಖ್ಯೆ ಕೆಎ-೦೧-ಎನ್-೮೧೧೪ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ವೆಂಕಟಮ್ಮ ರವರಿಗೆ ಗಾಯಗಳಾಗಿರುತ್ತದೆ.
ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೧-೦೧-೨೦೧೨ ರಂದು ೨೦೩೦ ಗಂಟೆ ಸಮಯದಲ್ಲಿ ಪುಂಗನೂರು ತಾಲೂಕು ಮರಿಮಾಕನಪಲ್ಲಿ ಗ್ರಾಮದ ವಾಸಿ ಶಿವಾ @ ಶಿವರಾಜ್ ಎಂಬುವರು ತನ್ನ ಕಾರು ಸಂಖ್ಯೆ ಕೆಎ-೦೫-ಎಂಇ-೯೦೫೬ ಅನ್ನು ಚಾಲನೆ ಮಾಡಿಕೊಂಡು ರಾಷ್ಟ್ರೀಯ ಹೆದ್ದಾರಿ-೪ರ ಮಾಲೂರು ಜಿಗ್‌ಜಾಗ್ ಬಳಿ ಬರುತ್ತಿದ್ದರು. ಆ ಸಮಯದಲ್ಲಿ ನರಸಾಪುರ ಕಡೆಯಿಂದ ಬಂದ ಟೆಂಪೋ ಸಂಖ್ಯೆ ಕೆಎ-೫೩-೧೦೦ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ಕಾರಿನಲ್ಲಿದ್ದ ಮೂರು ಜನರಿಗೆ ಗಾಯಗಳಾಗಿರುತ್ತದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
ದಿನದ ಅಪರಾಧಗಳ ಪಕ್ಷಿನೋಟ ೨೨ ನೇ ಜನವರಿ ೨೦೧೨
January 22, 2012ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: ೨೨-೦೧-೨೦೧೨ ರಂದು ೧೪೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಸಾಮಾನ್ಯ ಅಪಘಾತ :
ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೧-೦೧-೨೦೧೨ ರಂದು ೧೫೩೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಯಲುವಹಳ್ಳಿ ಗ್ರಾಮದ ವಾಸಿ ನರಸಿಂಹಮೂರ್ತಿ ಎಂಬುವರು ತನ್ನ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೨-ಆರ್-೪೮೬೧ ರಲ್ಲಿ ಮುಳಬಾಗಿಲು ರಸ್ತೆಯ ಮೀಸಗಾನಹಳ್ಳಿ ಬಳಿ ಬರುತ್ತಿದ್ದರು. ಆ ಸಮಯದಲ್ಲಿ ಬಂದ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೧-ಆರ್-೯೦೪೧ರ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ನರಸಿಂಹಮೂರ್ತಿ ರವರಿಗೆ ಗಾಯಗಳಾಗಿರುತ್ತದೆ.
ಸರ್ಕಾರಿ ನೌಕರನ ಮೇಲೆ ಹಲ್ಲೆ :
ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ನೌಕರನ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೦-೦೧-೨೦೧೨ ರಂದು ೧೭೦೦ ಗಂಟೆ ಸಮಯದಲ್ಲಿ ಸರ್ಕಾರಿ ಬಸ್ ಸಂಖ್ಯೆ ಕೆಎ-೦೭-ಎಫ್-೧೩೫೪ರ ಚಾಲಕ ಗೋಪಾಲ ಮತ್ತು ನಿರ್ವಾಹ ಆನಂದ ಎಂಬುವರು ಕೋಲಾರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸುತ್ತಿದ್ದರು. ಆ ಸಮಯದಲ್ಲಿ ಯಾರೋ ಒಬ್ಬ ಆಸಾಮಿ ಸಿಗರೇಟ್ ಸೇದಿಕೊಂಡು ಬಸ್ ಹತ್ತುತ್ತಿದ್ದು, ಇದನ್ನು ಪ್ರಶ್ನಿಸಿದ ಚಾಲಕ ಗೋಪಾಲ್ ರವರಿಗೆ ಸುನಿಲ್, ದೇವರಾಜ, ಶಿವಕಮಲ್ ಮತ್ತು ಶಿವಾ @ ಸಾರಾಯಿ ಶಿವ ಎಲ್ಲರೂ ಕೋಲಾರ ನಗರ ವಾಸಿಗಳು ಅವಾಚ್ಚಶಬ್ದಗಳಿಂದ ಬೈದು ಕಲ್ಲಿನಿಂದ ಹಣೆಗೆ ಹೊಡೆದು ಗಾಯಪಡಿಸಿದ್ದು, ಬಿಡಿಸಲು ಹೋದ ಆನಂದ್ ರವರ ಕೈಗೆ ಹೊಡೆದು ಗಾಯಪಡಿಸಿ, ಸರ್ಕಾರಿ ಕೆಲಸಕ್ಕೆ ಅಡಚಣೆಯನ್ನುಂಟು ಮಾಡಿರುತ್ತಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
ದಿನದ ಅಪರಾಧಗಳ ಪಕ್ಷಿನೋಟ ೨೧ ನೇ ಜನವರಿ ೨೦೧೨
January 20, 2012ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: ೨೧-೦೧-೨೦೧೨ ರಂದು ೧೪೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ದೊಂಬಿ :
ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೯-೦೧-೨೦೧೨ ರಂದು ೦೯೩೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ದೇವರಹಳ್ಳಿ ಗ್ರಾಮದ ವಾಸಿ ನಾಗರಾಜ ಎಂಬುವರು ಗ್ರಾಮದಲ್ಲಿ ಚಂರಡಿ ಕೆಲಸಗಳನ್ನು ಮಾಡಿಸುತ್ತಿದ್ದರು. ಆ ಸಮಯದಲ್ಲಿ ಅದೇ ಗ್ರಾಮದ ವಾಸಿಗಳಾದ ಸಿ.ಮುನಿಯಪ್ಪ ಮತ್ತು ಇತರೆ ೭ ಜನರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಚಾಕಿವಿನಿಂದ ಹೊಡೆದು ಅವಾಚ್ಚಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ದೂರು ಮತ್ತು ಪ್ರತಿದೂರುಗಳು ದಾಖಲಾಗಿರುತ್ತದೆ.
ಹುಡುಗಿ ಅಪಹರಣ :
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹುಡುಗಿ ಅಪಹರಣದ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೯-೦೧-೨೦೧೨ ರಂದು ೦೯೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಕುಂಬಾರಹಳ್ಳಿ ಗ್ರಾಮದ ವಾಸಿಯಾದ ನಾರಾಯಣಮ್ಮ ಎಂಬುವರ ಮೈದನ ಮಗಳಾದ ಕು. ವಿ.ರಮ್ಯ ಎಂಬುವರನ್ನು ಹೆಚ್.ಮಲ್ಲಾಂಡಹಳ್ಳಿ ಗ್ರಾಮದ ವಾಸಿಯಾದ ಸಂತೋಷ್ ಕುಮಾರ್ ಮತ್ತು ಇತರೆ ೯ ಜನರು ಅಪಹರಣ ಮಾಡಿಕೊಂಡು ಹೋಗಿರುತ್ತಾರೆ.
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹುಡುಗಿ ಅಪಹರಣದ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೬-೦೧-೨೦೧೨ ರಂದು ೧೦೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಯಳಚೀಪುರ ಗ್ರಾಮದ ವಾಸಿಯಾದ ನಾರಾಯಸ್ವಾಮಿ ಎಂಬುವರ ಮಗಳಾದ ಕು. ವಿ.ಶ್ವೇತ(೧೭) ಎಂಬುವರನ್ನು ಅದೇ ಗ್ರಾಮದ ವಾಸಿಯಾದ ನಾರಾಯಣಸ್ವಾಮಿ ಎಂಬುವರು ಇತರೆ ೯ ಜನರ ಕುಮ್ಮಕ್ಕಿನಿಂದ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ.
ಹಲ್ಲೆ :
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೦-೦೧-೨೦೧೨ ರಂದು ಕೋಲಾರ ತಾಲೂಕು ಐತರಾಸನಹಳ್ಳಿ ಗ್ರಾಮದಲ್ಲಿ ಸಾಮಾನ್ಯ ಸಭೆ ನಡೆಯುತ್ತಿದ್ದು, ಆ ಸಮಯದಲ್ಲಿ ಅದೇ ಗ್ರಾಮದ ವಾಸಿಯಾದ ಮಂಜುನಾಥ ಎಂಬುವರು ಗ್ರಾಮ ಪಂಚಾಯಿತಿ ಸಭೆ ನಡೆಸದಂತೆ ತೊಂದರೆ ನೀಡಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮತ್ತು ಕಾರ್ಯದರ್ಶಿ ರವರನ್ನು ಅವಾಚ್ಚಶಬ್ದಗಳಿಂದ ಬೈದು ದೊಣ್ಣೆಯಿಂದ ಹೊಡೆಯಲು ಪ್ರಯತ್ನ ಪಟ್ಟು ಪ್ರಾಣ ಬೆದರಿಕೆ ಹಾಕಿರುತ್ತಾರೆ.
ಕಾಣೆಯಾದವರ ಬಗ್ಗೆ :
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೭-೦೧-೨೦೧೨ ರಂದು ೨೨೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಬೆಳಗಾನಹಳ್ಳಿ ಗ್ರಾಮದ ವಾಸಿಯಾದ ಅಮರೇಶ ಎಂಬುವರ ತಂಗಿಯಾದ ಸೌಭಾಗ್ಯ(೨೨) ಎಂಬುವರು ಮನೆಯಿಂದ ಹೊರಗೆ ಹೋದವರು ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
ದಿನದ ಅಪರಾಧಗಳ ಪಕ್ಷಿನೋಟ ೧೮ ನೇ ಜನವರಿ ೨೦೧೨
January 17, 2012ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: ೧೮-೦೧-೨೦೧೨ ರಂದು ೧೪೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಮಹಿಳೆಯರ ಮೇಲೆ ದೌರ್ಜನ್ಯ :
ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರದ ಶಾಂತಿನಗರದ ವಾಸಿ ಷಾಹೀನ್ ಎಂಬುವರ ಮಗಳಾದ ಶಬರೀನ್ ಫರ್ಜಾನ್ ಎಂಬುರನ್ನು ನ್ಯಾಮತ್ ಬೀ ದರ್ಗ ವಾಸಿ ತಬರೇಜ್ ಎಂಬುವರಿಗೆ ಕೊಟ್ಟು ಮದುವೆ ಮಾಡಿದ್ದರು. ತಬರೇಜ್ ಯಾವುದೇ ಕೆಲಸ ಮಾಡದೆ ಅಲೆದಾಡಿಕೊಂಡಿದ್ದು, ಇದರಿಂದ ಸಂಸಾರ ನಡೆಸಲು ಕಷ್ಟವಾದ ಕಾರಣ ಶಬರೀನ್ ತವರು ಮನೆಗೆ ವಾಪಸ್ಸು ಬಂದಿದ್ದು, ದಿನಾಂಕ: ೧೭-೦೧-೨೦೧೨ ರಂದು ೨೧೧೫ ಗಂಟೆ ಸಮಯದಲ್ಲಿ ತಬರೇಜ್ ಮತ್ತು ಮತ್ತು ಇತರೆ ಮೂರು ಜನರು ಬಂದು ವಾಪಸ್ಸು ಮನೆಗೆ ಬರುವಂತ ಒತ್ತಾಯ ಮಾಡಿದ್ದು, ಇದಕ್ಕೆ ಒಪ್ಪದ ಕಾರಣ ಅವಾಚ್ಚಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ಕಾಲಿನಿಂದ ಹೊಟ್ಟೆಗೆ ಒದ್ದ ಕಾರಣ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುತ್ತಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲೆ ದೌರ್ಜನ್ಯ :
ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೬-೦೧-೨೦೧೨ ರಂದು ೦೭೩೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ನಂಗಲಿ ಗ್ರಾಮದ ವಾಸಿಯಾದ ಗಂಗಮ್ಮ ಎಂಬುವರು ಮುಳಬಾಗಿಲು ಪಟ್ಟಣದ ದರ್ಗಮೊಹಲ್ಲಾ ವಾಸಿ ತಸ್ಲೀಂಪಾಷ ರವರ ಮನೆಯ ಮುಂದೆ ನಡೆದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ ಗಂಗಮ್ಮ ರವರು ತಸ್ಲೀಂ ಪಾಷ ರವರನ್ನು ಕುರಿತು ತನ್ನ ಮಾವನ ಜೊತೆ ಜಗಳ ಮಾಡಿಕೊಂಡಿರುವ ವಿಚಾರ ಕೇಳಿದರು. ಇದಕ್ಕೆ ಕೊಪಗೊಂಡ ತಸ್ಲೀಂಪಾಷ ಮತ್ತು ಇತರೆ ಇಬ್ಬರು ಅವಾಚ್ಚಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಚಪ್ಪಲಿಯಿಂದ ಹೊಡೆದು ಗಾಯಪಡಿಸಿರುತ್ತಾರೆ.
ಮಾರಣಾಂತಿಕ ಅಪಘಾತ :
ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಾರಣಾಂತಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೭-೦೧-೨೦೧೨ ರಂದು ೨೩೧೫ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಟಮಕ ಕೈಗಾರಿಕಾ ಪ್ರದೇಶದ ವಾಸಿ ಬಾಬೂಲಿ ದಾಸ್ @ ಜ್ಯೋತಿಶಂಕರ್ ದಾಸ್ ಎಂಬುವರು ರಾಷ್ಟ್ರೀಯ ಹೆದ್ದಾರಿ-೪ರ ಬೇತಮಂಗಲ ಜಿಗ್-ಜಾಗ್ ಬಳಿ ರಸ್ತೆ ದಾಟುತ್ತಿದ್ದರು. ಆ ಸಮಯದಲ್ಲಿ ಬಂದ ಯಾವುದೋ ಅಪರಿಚಿತ ವಾಹನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿರುತ್ತಾರೆ. ಇದರ ಪರಿಣಾಮವಾಗಿ ಬಾಬೂಲಿ ದಾಸ್ @ ಜ್ಯೋತಿಶಂಕರ್ ದಾಸ್ ವರಿಗೆ ಗಾಯಗಳಾಗಿ ಚಿಕಿತ್ಸೆಗಾಗಿ ಸಾಗಿಸುವ ಮಾರ್ಗ ಮದ್ಯ ಮೃತ ಪಟ್ಟಿರುತ್ತಾರೆ.
ಇತರೆ :
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಂಗಡಿಗೆ ಬೆಂಕಿ ಇಟ್ಟಿರುವ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೮-೧೧-೨೦೧೧ ರಂದು ೦೧೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ದಿಂಬ ಚಾಮನಹಳ್ಳಿ ಗ್ರಾಮದ ವಾಸಿಯಾದ ಸರಸ್ವತಮ್ಮ ಎಂಬುವರು ದಿಂಬಾ ಗೇಟ್ ನಲ್ಲಿ ಇಟ್ಟಿಕೊಂಡಿದ್ದ ಪೆಟ್ಟಿಗೆ ಅಂಗಡಿಗೆ ಯಾರೋ ದುರಾತ್ಮರು ಬೆಂಕಿ ಹಚ್ಚಿದ್ದರಿಂದ ರೂ. ೧,೫೦,೦೦೦/- ನಷ್ಟವಾಗಿರುತ್ತದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
ದಿನದ ಅಪರಾಧಗಳ ಪಕ್ಷಿನೋಟ ೧೭ ನೇ ಜನವರಿ ೨೦೧೨
January 16, 2012ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: ೧೭-೦೧-೨೦೧೨ ರಂದು ೧೪೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಇತರೆ :
ರಾಯಲ್ಪಾಡ್ ಪೊಲೀಸ್ ಠಾಣೆಯಲ್ಲಿ ಬೆಳೆ ನಾಶಪಡಿಸಿರುವ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೧-೦೧-೨೦೧೨ ರಂದು ರಾತ್ರಿ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಪಾತಕೋಟೆ ಗ್ರಾಮದ ವಾಸಿಯಾದ ಪಿಳ್ಳಪ್ಪರೆಡ್ಡಿ ಎಂಬುವರ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿದ ಅದೇ ಗ್ರಾಮದ ವಾಸಿಗಳಾದ ರಾಮಕೃಷ್ಣರೆಡ್ಡಿ ಮತ್ತು ಇತರೆ ೩ ಜನರು ಟ್ರಾಕ್ಟರ್ ನಿಂದ ಜಮೀನಿನಲ್ಲಿ ಬೆಳೆದಿದ್ದ ಮೆಣಸಿನ ಗಿಡಗಳನ್ನು ಉಳುಮೆ ಮಾಡಿ ನಾಶಪಡಿಸಿ ನಷ್ಟವನ್ನುಂಟುಮಾಡಿರುತ್ತಾರೆ.
ಸಾಮಾನ್ಯ ಅಪಘಾತ :
ನಂಗಲಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೬-೦೧-೨೦೧೨ ರಂದು ೧೬೩೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಕನ್ನತ್ತ ಗ್ರಾಮದ ವಾಸಿಗಳಾದ ಹರೀಶ್ ಮತ್ತು ಚಾಮರಾಜ ಎಂಬುವರು ತನ್ನ ಹೊಸ ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಬೈರಕೂರು ಸಮೀಸ ಶ್ರೀನಿವಾಸ ಸಾಗರ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಬಂದ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೭-ಕ್ಯೂ-೧೯೭೯ರ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿರುತ್ತಾರೆ. ಇದರ ಪರಿಣಾಮವಾಗಿ ಹರೀಶ್ ಮತ್ತು ಚಾಮರಾಜ ರವರಿಗೆ ಗಾಯಗಳಾಗಿ ಚಿಕಿತ್ಸೆಗಾಗಿ ದಾಖಲಾಗಿರುತ್ತಾರೆ.
ಹಲ್ಲೆ :
ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೬-೦೧-೨೦೧೨ ರಂದು ೧೬೩೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಜೀಡಮಾಕಲಹಳ್ಳಿ ಗ್ರಾಮದ ವಾಸಿಯಾದ ಜನಗ್ ಪಾಷ ಎಂಬುವರ ಗೌನಿಪಲ್ಲಿ ಗ್ರಾಮದಲ್ಲಿವರು ಖಾಲಿ ನಿವೇಶನದಲ್ಲಿ ಗೌನಿಪಲ್ಲಿ ವಾಸಿಗಳಾದ ಬಾಬು ಮತ್ತು ಇತರೆ ಒಬ್ಬರು ಪೈಪು ಅಳವಡಿಸಿದ್ದು, ಇದನ್ನು ಪ್ರಶ್ನಿಸಿದ ಜಗನ್ ಪಾಷ ರವರ ಮೇಲೆ ಜಗಳ ತೆಗೆದು ಕಲ್ಲಿನಿಂದ ತಲೆಗೆ ಹೊಡೆದು ಗಾಯಪಡಿಸಿರುತ್ತಾರೆ.
ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೭-೦೧-೨೦೧೨ ರಂದು ೧೮೩೦ ಗಂಟೆ ಸಮಯದಲ್ಲಿ ಮುಳಬಾಗಿಲು ಪಟ್ಟಣದ ಮುಜಾವರ್ ಮೊಹಲ್ಲಾ ವಾಸಿಯಾದ ಸಫೀರುದ್ದೀನ್ ಎಂಬುವರು ಸೊಣ್ಣವಾಡಿ ಗ್ರಾಮದ ಬಳಿ ಕಟ್ಟಡವನ್ನು ಕಟ್ಟಿದ್ದು, ಸದರಿ ಕಟ್ಟಡವನ್ನು ಮುಜಾವರ ಮೊಹಲ್ಲಾ ವಾಸಿಗಳಾದ ಸರ್ದಾರ್ ಮತ್ತು ಇತರೆ ಇಬ್ಬರು ಏಕಾಏಕಿ ನೆಲಸಮ ಮಾಡಿದ್ದು, ಇದನ್ನು ಪ್ರಶ್ನಿಸಿದಕ್ಕೆ ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ.
ಕಾಣೆಯಾದವರ ಬಗ್ಗೆ :
ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆಯಾದ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೧-೧೧-೨೦೧೧ ರಂದು ೧೧೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಸೀತರೆಡ್ಡಿಹಳ್ಳಿ ಗ್ರಾಮದ ವಾಸಿಯಾದ ಶ್ರೀನಿವಾಸರೆಡ್ಡಿ (೫೫) ಎಂಬುವರು ಕೋಲಾರಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
ದಿನದ ಅಪರಾಧಗಳ ಪಕ್ಷಿನೋಟ ೧೬ನೇ ಜನವರಿ ೨೦೧೨
January 15, 2012ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: ೧೬-೦೧-೨೦೧೨ ರಂದು ೧೪೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಹಲ್ಲೆ :
ಮಾಸ್ತಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೧-೦೧-೨೦೧೨ ರಂದು ೨೦೩೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ಹುಳದೇನಹಳ್ಳಿ ಗ್ರಾಮದ ವಾಸಿಯಾದ ಶ್ರೀಮತಿ ರಮಾದೇವಿ ಎಂಬುವರ ಮೇಲೆ ಗ್ರಾಮ ಪಂಚಾಯಿತಿ ಸದಸ್ಯತ್ವಕ್ಕೆ ರಾಜಿನಾಮೆ ಕೊಡಿ ಎಂದು ಅದೇ ಗ್ರಾಮದ ವಾಸಿಗಳಾದ ಕಿಟ್ಟಪ್ಪ ಮತ್ತು ಇತರೆ ಇಬ್ಬರು ಜಗಳ ತೆಗೆದು ದೊಣ್ಣೆಯಿಂದ ಹೊಡೆದು ಅವಾಚ್ಚಶಬದ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ.
ಮಾಸ್ತಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೫-೦೧-೨೦೧೨ ರಂದು ೧೯೩೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ತೋಟಗೌಡನಹಳ್ಳಿ ಗ್ರಾಮದ ವಾಸಿಯಾದ ಶ್ರೀಮತಿ ಚಿನ್ನಮ್ಮ ಎಂಬುವರ ಮೇಲೆ ಖಾಲಿ ನಿವೇಶನದ ವಿಚಾರದಲ್ಲಿ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ ವೆಂಕಟಮ್ಮ ಮತ್ತು ಇತರೆ ಮೂರು ಜನರು ದೊಣ್ಣೆಯಿಂದ ಹೊಡೆದು ಅವಾಚ್ಚ ಶಬದ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ.
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೪-೦೧-೨೦೧೨ ರಂದು ೨೨೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಅಬ್ಬಣಿ ಗ್ರಾಮದ ವಾಸಿಯಾದ ನಾಗರಾಜ ಎಂಬುವರ ಮೇಲೆ ಕೂಲಿ ಹಣದ ವಿಚಾರದಲ್ಲಿ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ ನಾರಾಯಣಸ್ವಾಮಿ ಮತ್ತು ಶ್ರೀನಿವಾಸ ಎಂಬುವರು ಚರಂಡಿಗೆ ತಳ್ಳಿ ದೊಣ್ಣೆಯಿಂದ ತಲೆಗೆ ಹೊಡೆದು ಅವಾಚ್ಚ ಶಬದ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ.
ಸಾಮಾನ್ಯ ಅಪಘಾತ :
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೫-೦೧-೨೦೧೨ ರಂದು ೧೬೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಅರಾಭಿಕೊತ್ತನೂರು ಗ್ರಾಮದ ವಾಸಿಯಾದ ಸೋಮಪ್ಪ ತನ್ನ ಆಟೋ ಸಂಖ್ಯೆ ಕೆಎ-೦೨-೮೬೭೧ ಅನ್ನು ಚಾಲನೆ ಮಾಡಿಕೊಂಡು ರಾಷ್ಟ್ರೀಯ ಹೆದ್ದಾರಿ-೪ರ ಚುಂಚದೇನಹಳ್ಳಿ ಕೆರೆಯ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಹಿಂದಿನಿಂದ ಬಂದ ಕಾರು ಸಂಖ್ಯೆ ಕೆಎ-೫೧-ಎಂಎ-೧೩೨೨ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿರುತ್ತಾರೆ. ಇದರ ಪರಿಣಾಮವಾಗಿ ಸೋಮಪ್ಪ ರವರಿಗೆ ಗಾಯಗಳಾಗಿ ಚಿಕಿತ್ಸೆಗಾಗಿ ದಾಖಲಾಗಿರುತ್ತಾರೆ.
ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೪-೦೧-೨೦೧೨ ರಂದು ೧೭೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ನರಸಾಪುರ ಗ್ರಾಮದ ಎಸ್.ಎಲ್.ವಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ರವಿನಾಯಕ ಎಂಬುವರ ಮಗನಾದ ರಾಜಾನಾಯಕ ಎಂಬುವರು ರಾಷ್ಟ್ರೀಯ ಹೆದ್ದಾರಿ-೪ರ ಲಕ್ಷ್ಮೀಸಾಗರ ಗೇಟ್ ಬಳಿ ರಸ್ತೆ ದಾಟುತ್ತಿದ್ದರು. ಆ ಸಮಯದಲ್ಲಿ ಬಂದ ಕಾರು ಸಂಖ್ಯೆ ಕೆಎ-೦೭-ಎಂ-೩೧೨೬ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿರುತ್ತಾರೆ. ಇದರ ಪರಿಣಾಮವಾಗಿ ರಾಜಾನಾಯಕ ರವರಿಗೆ ಗಾಯಗಳಾಗಿ ಚಿಕಿತ್ಸೆಗಾಗಿ ದಾಖಲಾಗಿರುತ್ತಾರೆ.
ಮಾರಣಾಂತಿಕ ಅಪಘಾತ :
ಮಾಲೂರು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೫-೦೧-೨೦೧೨ ರಂದು ೨೦೩೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ಹೆಡಗಿನಬೆಲೆ ಗ್ರಾಮದ ವಾಸಿಯಾದ ವೀರರಾಜು ಎಂಬುವರು ತನ್ನ ಟಾಟಾ ಏಸ್ ಆಟೋ ಸಂಖ್ಯೆ ಕೆಎ-೫೩-ಎ-೨೦೨ ಅನ್ನು ಚಾಲನೆ ಮಾಡಿಕೊಂಡು ಬೆಂಗಳೂರು ರಸ್ತೆಯ ರಿಲಯನ್ಸ್ ಪೆಟ್ರೋಲ್ ಬಂಕ್ ಮುಂದೆ ಹೋಗುತ್ತಿದ್ದರು. ಆ ಸಮಯದಲ್ಲಿ ಬಂದ ಲಾರಿ ಸಂಖ್ಯೆ ಡಬ್ಲ್ಯೂಬಿ-೨೯-ಎ-೨೭೫೭ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿರುತ್ತಾರೆ. ಇದರ ಪರಿಣಾಮವಾಗಿ ವೀರರಾಜು ರವರಿಗೆ ತೀವ್ರವಾದ ಗಾಯಗಳಾಗಿ ಚಿಕಿತ್ಸೆಗಾಗಿ ಸಾಗಿಸುವ ಮಾರ್ಗ ಮದ್ಯೆ ಮೃತ ಪಟ್ಟಿರುತ್ತಾರೆ.
ಮಾಲೂರು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೫-೦೧-೨೦೧೨ ರಂದು ೧೯೪೫ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ಕೆ.ತಿಮ್ಮನಹಳ್ಳಿ ಗ್ರಾಮದ ವಾಸಿಯಾದ ಅಣ್ಣಯ್ಯಪ್ಪ.ಕೆ ಎಂಬುವರು ತನ್ನ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೫-ಹೆಚ್‌ಬಿ-೧೮೪೪ ಅನ್ನು ಚಾಲನೆ ಮಾಡಿಕೊಂಡು ಮಾಲೂರು – ಟೇಕಲ್ ರಸ್ತೆಯ ನಾಗಣ್ಣ ರವರ ಇಟ್ಟಿಗೆ ಫ್ಯಾಕ್ಟರಿ ಬಳಿ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ಬದಿಯಲ್ಲಿ ಬದ್ದು ತೀವ್ರವಾದ ಗಾಯಗಳಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ.
ವಾಹನ ಕಳ್ಳತನ :
ವೇಮಗಲ್ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೫-೦೧-೨೦೧೨ ರಂದು ೦೪೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಕಾಡಹಳ್ಳಿ ಗ್ರಾಮದ ವಾಸಿ ಶ್ರೀನಿವಾಸ ಎಂಬುವರು ರೂ. ೩೬,೦೦೦/- ಬೆಲೆ ಬಾಳುವ ತನ್ನ ದ್ವಿಚಕ್ರ ವಾಹನ ಸಂಖ್ಯೆ ಕೆಎ-೫೧-ಆರ್-೫೮೨೧ ಅನ್ನು ತಮ್ಮ ಗ್ರಾಮದ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಮುಂದೆ ನಿಲ್ಲಿಸಿ ಪೂಜೆ ಮುಗಿಸಿಕೊಂಡು ಬರುವಷ್ಠರಲ್ಲಿ ಯಾರೋ ಕಳ್ಳರು ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಅದೇ ಗ್ರಾಮದ ವಾಸಿಗಳಾದ ಆನಂದ ಮತ್ತು ಮುನಿರಾಜು ಎಂಬುವರು ಕದ್ದಿರುವುದಾಗಿ ಅನುಮಾನ ವ್ಯೆಕ್ತ ಪಡಿಸಿರುತ್ತಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Posted by kolarpolice