July 23, 2007
ಕೋಲಾರ ಜಿಲ್ಲೆಯಲ್ಲಿ ಖಾಲಿಯಿರುವ ೧೨೫ ಪುರುಷ ಹಾಗೂ ೨೮ ಮಹಿಳಾ ಪೊಲೀಸ್ ಪೇದೆ ಹುದ್ದೆಗಳನ್ನು ತುಂಬಲು ಅರ್ಹ ಅಹ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಪೊಲೀಸ್ ಅಧೀಕ್ಷಕರು ಕೋಲಾರ ಜಿಲ್ಲೆರವರ ಕಚೇರಿಯಲ್ಲಿ ದಿನಾಂಕ ೨೩-೦೭-೦೭ರ ಬೆಳಗ್ಗೆ ೧೦:೦೦ ಗಂಟೆಯಿಂದ ದಿನಾಂಕ ೦೪-೦೮-೦೭ ರ ಸಂಜೆ ೦೫:೦೦ ಗಂಟೆಯವರೆಗೆ ಎಲ್ಲ ಕೆಲಸದ ದಿನಗಳಂದು ಕೊಡಲಾಗುವುದು. ಅರ್ಜಿಗಳನ್ನು ಪಡೆಯಲು ಶುಲ್ಕ ರೂ.೫೦/ಗಳನ್ನು ಮಾತ್ರ ಪಾವತಿ ಮಾಡಬೇಕು. ಭರ್ತಿ ಮಾಡಿದ ಅರ್ಜಿಗಳೊಂದಿಗೆ ಪರಿಕ್ಷಾ ಶುಲ್ಕವಾಗಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-೧ರ ಅಭ್ಯರ್ಥಿಗಳು ರೂ.೫೦/ಗಳನ್ನು ಮತ್ತು ಇತರ ಎಲ್ಲ ಅಭ್ಯರ್ಥಿಗಳು ರೂ.೧೫೦/ಗಳನ್ನು ನಗದಾಗಿ ಪಾವತಿಸಿ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ.
ಅರ್ಜಿಗಳನ್ನು ಸಲ್ಲಿಸಲು ಕಡೆಯ ದಿನಾಂಕ ೦೪-೦೮-೦೭ರ ಸಂಜೆ ೦೬-೦೦ ಗಂಟೆವರೆಗೆ.
ವಿಶೇಷ ಸೂಚನೆಗಳು:
-
ಅರ್ಜಿಗಳ ಜೊತೆ ವಿದ್ಯಾರ್ಹತೆ, ಹುಟ್ಟಿದ ದಿನಾಂಕ ಮತ್ತು ಮೀಸಲಾತಿಗೆ ಸಂಬಂಧಿಸಿದ ನಕಲು ಪ್ರಮಾಣ ಪತ್ರಗಳನ್ನು ಕೂಡ ಸಲ್ಲಿಸಬೇಕು.
-
ಅರ್ಜಿಗಳನ್ನು ಸ್ವತಃ ಬಂದು ಸಲ್ಲಿಸಬೇಕಾಗಿರುತ್ತದೆ.
-
ಅರ್ಜಿ ಸಲ್ಲಿಸಲು ಬೇಕಾಗಿರುವ ಕನಿಷ್ಠ ವಿದ್ಯಾರ್ಹತೆ ಪಿ.ಯು.ಸಿ ಅಥವ ಜೆ.ಓ.ಸಿ ಅಥವ ಜೆ.ಎಲ್.ಸಿ ಆಗಿರುತ್ತದೆ.
-
ಕನಿಷ್ಠ ವಯೋಮಿತಿ ದಿನಾಂಕ ೦೪-೦೮-೦೭ಕ್ಕೆ ೧೯ ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ ವಯೋಮಿತಿ ಪರಿಶಿಷ್ಠ ಜಾತಿ/ಪಂಗಡ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ೨೫ ವರ್ಷಗಳು ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ ೨೩ ವರ್ಷಗಳು. ಅಲ್ಲದೇ ಮಾಜಿ ಸೈನಿಕರಾದವರಿಗೆ ಮೇಲ್ಕಂಡ ವಯೋಮಿತಿಯಲ್ಲಿ ಅವರು ಸೇವೆ ಸಲ್ಲಿಸಿದ ಅವಧಿಯನ್ನು ಸಡಿಲಿಕೆ ಮಾಡಲಾಗುವುದು.
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದೇಹದಾರ್ಢ್ಯತೆ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯಗಳ ಪರೀಕ್ಷೆಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಆಯ್ಕೆ ಸಮೀತಿ ತೀರ್ಮಾನವೇ ಅಂತಿಮ. ಹೆಚ್ಚಿನ ವಿವರಗಳಿಗೆ ಕರ್ನಾಟಕ ವಿಶೇಷ ರಾಜ್ಯಪತ್ರ ದಿನಾಂಕ ೧೦-೦೭-೦೭ ಅಥವ ಅಭ್ಯರ್ಥಿಗಳಿಗೆ ಅರ್ಜಿಗಳ ಜೊತೆಗೆ ಕೊಡಲಾಗುವ ಮಾಹಿತಿ ಪುಸ್ತಕವನ್ನು ನೋಡುವುದು.
Leave a Comment » |
ಆಡಳಿತಾತ್ಮಕ |
Permalink
Posted by kolarpolice
July 15, 2007
ದಿನಾಂಕ ೧೪-೦೭-೦೭ರಂದು ವ್ಯಕ್ತಿಯೊಬ್ಬ ಪೂರ್ವವೈಷಮ್ಯದಿಂದ ತನ್ನ ಪರಿಚಿತನೊಬ್ಬನನ್ನು ಹಾಡುಹಗಲೇ ಕೊಲೆಗೈದು ನಂತರ ಆತನ ತಲೆಯನ್ನು ದೇಹದಿಂದ ಬೇರ್ಪಡಿಸಿ ಅದನ್ನು ತೆಗೆದುಕೊಂಡು ಬಂದು ಪೊಲೀಸ್ ಠಾಣೆಗೆ ಶರಣಾದ ಘಟನೆ ಜಿಲ್ಲೆಯ ಮಾಲೂರು ಪೊಲೀಸ್ ಠಾಣೆಯಿಂದ ವರದಿಯಾಗಿದೆ.
ಮಾಲೂರು ತಾಲೂಕಿನ ಹುರಳಗೆರೆ ಗ್ರಾಮದ ಆನಂದ ಕುಮಾರ್ (೨೨) ಮತ್ತು ಅದೇ ತಾಲೂಕಿನ ನಲ್ಲಪ್ಪನಹಳ್ಳಿಯ ಆನಂದ (೩೧) ಇವರು ಕಳೆದ ಮೂರು ವರ್ಷಗಳಿಂದ ಪರಿಚಯದವರು. ಇವರಲ್ಲಿ ಆನಂದ ಮಾಲೂರಿನಲ್ಲಿ ಆಟೊರಿಕ್ಷ ಚಾಲಕನಾಗಿದ್ದರೆ; ಆನಂದ ಕುಮಾರ್ ಮಾಲೂರಿನ ಹೊರವಲಯದ ಖಾಸಗಿ ಕಾರ್ಖಾನೆಯಲ್ಲಿ ಕೆಲಸಕ್ಕಿದ್ದ. ದಿನಾಂಕ ೧೪-೦೭-೦೭ರಂದು ಮಧ್ಯಹ್ನ ಆನಂದಕುಮಾರ್ ಕೆಲಸನಿಮಿತ್ತ ಮಾಲೂರಿಗೆ ಬಂದಾಗ ಅಲ್ಲಿ ಅವನಿಗೆ ಆನಂದ ಮತ್ತು ಆತನ ಮೂವರು ಸ್ನೇಹಿತರು ಸಿಕ್ಕು ಅವನ ಬಳಿ ಇದ್ದ ಹಣದಿಂದ ಮಧ್ಯ ಮತ್ತು ತಿಂಡಿ ಪದಾರ್ಥಗಳನ್ನು ಕಟ್ಟಿಸಿಕೊಂಡು ಊರ ಹೊರವಲಯದಲ್ಲಿರುವ ಮಾವಿನ ತೋಪಿಗೆ ಆನಂದನ ಆಟೊರಿಕ್ಷಾದಲ್ಲಿ ತೆರಳಿ ಅಲ್ಲಿ ಜೊತೆಯಲ್ಲಿ ಕುಡಿಯಲು ಪ್ರಾರಂಭಿಸಿದರು. ಆ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ನಂತರ ಅದು ಹೊಡೆದಾಟಕ್ಕೆ ತಿರುಗಿದಾಗ ಆನಂದ ಕುಮಾರನು ಆನಂದನನ್ನು ಮಚ್ಚಿನಿಂದ ಹೊಡೆದಿದ್ದರಿಂದ ಆತ ಅಲ್ಲಿಯೇ ಅಸುನೀಗಿದ್ದಾನೆ. ಈ ಹೊಡೆದಾಟವನ್ನು ನೋಡಿದ ಆತನ ಸ್ನೇಹಿತರು ಅಲ್ಲಿಂದ ಓಡಿಹೋದರೆ ಆನಂದ ಕುಮಾರನು ನಂತರ ಮೃತ ವ್ಯಕ್ತಿಯ ತಲೆಯನ್ನು ಕತ್ತರಿಸಿ ಅದನ್ನು ತೆಗೆದುಕೊಂಡು ನೇರವಾಗಿ ಮಾಲೂರು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಈ ಬಗ್ಗೆ ಮಾಲೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆನಂದಕುಮಾರನನ್ನು ಬಂಧಿಸಿರುತ್ತಾರೆ. ಆನಂದನು ತನಗೆ ಕಳೆದ ಮೂರುವರ್ಷಗಳಿಂದ ನಾನಾ ಕಾರಣಗಳಿಗೆ ನಾನಾವಿಧದಿಂದ ಕಿರುಕುಳ ಕೊಡುತ್ತಿದ್ದುದಾಗಿ ಆನಂದಕುಮಾರನು ತನಿಖೆಯ ವೇಳೆ ಪೊಲೀಸರಿಗೆ ತಿಳಿಸಿರುತ್ತಾನೆ.
ಕೊಲೆಯಾದ ವ್ಯಕ್ತಿ ಆನಂದನ ಮೇಲೆ ಮಾಲೂರು ಪೊಲೀಸ್ ಠಾಣೆಯಲ್ಲಿ ದ್ವಿಚಕ್ರವಾಹನ ಕಳ್ಳತನದ ಪ್ರಕರಣ ದಾಖಲಾಗಿರುವುದು ಕೂಡ ತನಿಖೆಯಲ್ಲಿ ತಿಳಿದು ಬಂದಿದೆ.
ಆನಂದ ಕುಮಾರನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Leave a Comment » |
ಅಪರಾಧ |
Permalink
Posted by kolarpolice