ದಿನದ ಅಪರಾಧಗಳ ಪಕ್ಷಿನೋಟ ೩೧ನೇ ಅಕ್ಟೋಬರ್‍ ೦೭

October 31, 2007

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೧-೧೦-೦೭ ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ:  ಇಲ್ಲ 

ಡಕಾಯತಿ:  ಇಲ್ಲ

ಸುಲಿಗೆ:  ಇಲ್ಲ

ಮನೆಗಳ್ಳತನ:  ಇಲ್ಲ

ಸಾಧಾರಣ ಕಳ್ಳತನ:  ಇಲ್ಲ

ವಾಹನ ಕಳ್ಳತನ : ಇಲ್ಲ  

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು:  ೦೨

  •   ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಮಾನಭಂಗ ಪ್ರಯತ್ನಕ್ಕೆ ಸಂಬಂಧಪಟ್ಟಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೮-೧೦-೨೦೦೭ ರಂದು ೨೧೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ಪಟ್ಟಣದ ವಲ್ಲಭಿ ರಸ್ತೆಯ ವಾಸಿಯಾದ ಶ್ರೀಮತಿ ಜಯಮ್ಮ ಎಂಬುವರು ಅದೇ ರಸ್ತೆಯ ವಾಸಿಯಾದ ಲಕ್ಷ್ಮೀನರಸಮ್ಮ ರವರ ಮನೆಯ ಬಳಿ ಹೋಗಿದ್ದರು.  ಅ ಸಮಯದಲ್ಲಿ ಲಕ್ಷ್ಮೀನರಸಮ್ಮ ರವರ ಗಂಡ ಶಿವಣ್ಣ ಎಂಬುವರು ಚೀಟಿ ವಿಚಾರದಲ್ಲಿ ಜಯಮ್ಮನೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಹೊಡೆದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿರುತ್ತಾನೆ.  ಶಿವಣ್ಣನನ್ನು ಬಂಧಿಸಿ ಜಾಮೀನಿನ ಮೇಲೆ ಬಿಟ್ಟಿರುತ್ತೆ.

  •   ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕೊಲೆಗೆ  ಸಂಬಂಧಪಟ್ಟಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೩೧-೧೦-೨೦೦೭ ರಂದು ಬೆಳಗಿನ ಜಾವ  ಶ್ರೀನಿವಾಸಪುರ ತಾಲೂಕು ಹೊದಲಿ ಗ್ರಾಮದ ವಾಸಿಯಾದ ಆಂಜಿನಪ್ಪ ಎಂಬುವರ ಪತ್ನಿಯಾದ ಶ್ರೀಮತಿ ರಾಜೇಶ್ವರಿ (೨೬) ರವರನ್ನು ವರದಕ್ಷಿಣೆ ಸಂಬಂಧವಾಗಿ ಚಿತ್ರಹಿಂಸೆ ನೀಡಿ ಹೊಡೆದು ಸಾಯಿಸಿ, ಮನೆಯ ಮುಂದೆ ಇರುವ ಬಾವಿಗೆ ಹಾಕಿರುತ್ತಾರೆ.  ಈ ಸಂಬಂಧವಾಗಿ ರಾಜೇಶ್ವರಿಯವರ ತಂದೆ ಮುನಿವೆಂಕಟಪ್ಪ ರವರು  ದೂರು ನೀಡಿ ತನ್ನ ಮಗಳ ಗಂಡನಾದ ಆಂಜಿನಪ್ಪ, ಮಾವ ನಾರಾಯಣಸ್ವಾಮಿ ಮತ್ತು ಅತ್ತೆ ಸೀತಮ್ಮರವರು  ವರದಕ್ಷಿಣೆ ಕಿರುಕುಳ ನೀಡಿ ತನ್ನ ಮಗಳನ್ನು ಸಾಯಿಸಿರುತ್ತಾರೆಂದು ದೂರು ನೀಡಿರುತ್ತಾರೆ.      

ರಸ್ತೆ ಅಪಘಾತಗಳು:  ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ:   ಇಲ್ಲ

ಮೋಸ / ವಂಚನೆ ಪ್ರಕರಣಗಳು:  ಇಲ್ಲ

ಕೊಲೆಗೆ ಪ್ರಯತ್ನ:  ಇಲ್ಲ

ದೊಂಬಿ:  ಇಲ್ಲ 

ಹಲ್ಲೆ: ಇಲ್ಲ

ಇತರೆ: ೦೧ 

  •   ಮಾಸ್ತಿ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿರುವ ಬಗ್ಗೆ   ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ   ೩೧-೧೦-೨೦೦೭ ರಂದು ೧೫೧೫ ಗಂಟೆ ಸಮಯದಲ್ಲಿ ರವಿನ್ಯೂ ಕಾರ್ಯದರ್ಶಿಗಳಾದ  ಎಂ.ಬೀರಪ್ಪ ಎಂಬುವರು ಮಾಸ್ತಿ ಗ್ರಾಮದ ನಾಡ ಕಛೇರಿ ಬಳಿ    ನಿಂತಿದ್ದರು.  ಅ ಸಮಯದಲ್ಲಿ ಮಾಲೂರು ತಾಲೂಕು ನಿಡುಮಾಕಲಹಳ್ಳಿ ಗ್ರಾಮದ ವಾಸಿಯಾದ ತಿಮ್ಮರಾಯಪ್ಪ ಎಂಬುವರು ಅಲ್ಲಿಗೆ ಬಂದು ಖಾತೆ ಮಾಡಿಕೊಡುವ ವಿಚಾರದಲ್ಲಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು:  ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು:  ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು:  ೦೧ 

  •   ಮಾಸ್ತಿ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.  ಸುಮಾರು ೪೫ ದಿನಗಳ ಹಿಂದೆ  ಮಾಲೂರು ತಾಲೂಕು ಬಂಡೂರು ಗ್ರಾಮದ ವಾಸಿಯಾದ ಮುನಿಯಪ್ಪ(೭೦) ಎಂಬುವರು ಮನೆಯಿ೦ದ ಹೊರೆಗೆ ಹೋದವರು ಇದುವರೆವಿಗೂ ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ.  ಈ ಸಂಬಂಧ ಅವರ ಮಗನಾದ ನಾರಾಯಣಸ್ವಾಮಿ ಎಂಬುವರು ಕೊಟ್ಟ ದೂರಿನ ಮೇರೆಗೆ ದಿನಾಂಕ ೩೦-೧೦-೨೦೦೭ ರಂದು ಪ್ರಕರಣ ದಾಖಲು ಮಾಡಿರುತ್ತೆ.  ಕಾಣೆಯಾದ ಮನುಷ್ಯನ ಚಹರೆ ಈ ರೀತಿ ಇರುತ್ತದೆ.   ಎತ್ತರ ೫.೬ ಅಡಿ, ತೆಳ್ಳನೆಯ ಮೈಕಟ್ಟು, ಬಿಳಿ ಬಣ್ಣದ ಅಂಗಿ ಮತ್ತು ಪಂಜೆ ಧರಿಸಿರುತ್ತಾರೆ.  ಕನ್ನಡ, ತೆಲಗು ಮತ್ತು ತಮಿಳು ಭಾಷೆ ಮಾತನಾಡುತ್ತಾರೆ.

ಮುಂಜಾಗ್ರತೆ ಕ್ರಮಗಳು:  ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ:  ತಿಳಿದು ಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ರೂ.೪೫೫೦/ ಬೆಲೆಯ ೩೫೦ ಪ್ಯಾಕೇಟ್ ಅಕ್ರಮ ಸಾರಾಯಿ ವಶ, ಒಬ್ಬನ ಬಂಧನ

October 31, 2007

 

ದಿನಾಂಕ ೩೧-೧೦-೨೦೦೭ ರಂದು ೨೦೦೦ ಗಂಟೆ ಸಮಯದಲ್ಲಿ ಕೋಲಾರ ನಗರ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರಾದ ಶ್ರೀ ಎಸ್.ಆರ್‌.ಜಗದೀಶ್ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ನಗರದ ಟೇಕಲ್ ರಸ್ತೆಯ ಅಗ್ರೋ ಕಛೇರಿಯ ಹಿಂಭಾಗದಲ್ಲಿರುವ   ಹಳೇ ಸಾರಾಯಿ ಅಂಗಡಿಯ ಮೇಲೆ ದಾಳಿ ಮಾಡಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ರೂ.೪೫೫೦/ ಬೆಲೆ ಬಾಳುವ ೩೫೦ ಸಾರಾಯಿ ಪ್ಯಾಕೇಟ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.   ಈ ಸಂಬಂಧವಾಗಿ ನಗರದ ಕುರಬರಪೇಟೆಯ ವಾಸಿ  ಬಾಲಕ್ರಿಷ್ಣ(೩೬) ತಂದೆ ನಂಜಪ್ಪ ಎಂಬುವರನ್ನು ಬಂಧಿಸಿ  ಅವನ ಬಳಿ ಇದ್ದ  ನಗದು ಹಣ ರೂ.೫೦೦/ ಗಳನ್ನು  ವಶಪಡಿಸಿಕೊಳ್ಳಲಾಗಿದೆ.   

ಈ ಸಂಬಂಧ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ಅರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ. 


ದಿನದ ಅಪರಾಧಗಳ ಪಕ್ಷಿನೋಟ ೩೦ನೇ ಅಕ್ಟೋಬರ್‍ ೦೭

October 30, 2007

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೦-೧೦-೦೭ ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ:  ಇಲ್ಲ 

ಡಕಾಯತಿ:  ಇಲ್ಲ

ಸುಲಿಗೆ:  ಇಲ್ಲ

ಮನೆಗಳ್ಳತನ:  ಇಲ್ಲ

ಸಾಧಾರಣ ಕಳ್ಳತನ:  ಇಲ್ಲ

ವಾಹನ ಕಳ್ಳತನ : ಇಲ್ಲ  

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು:  ಇಲ್ಲ

ರಸ್ತೆ ಅಪಘಾತಗಳು:  ೦೨

-ಮಾರಣಾಂತಿಕ: 01

  •    ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಅಪಘಾತಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೩೦-೧೦-೨೦೦೭ ರಂದು ೦೨೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಹರಟಿ ಗ್ರಾಮದ ವಾಸಿಯಾದ ಹರ್ಷ ಮತ್ತು ಸ್ನೇಹಿತನಾದ ಶ್ರೀನಿವಾಸ ರವರು ತಮ್ಮ ಹೀರೋಹೋಂಡಾ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೭-ಕೆ-೫೪೩೦ ರಲ್ಲಿ ಎ.ಪಿ.ಎಂ.ಸಿ. ಮಾರುಕಟ್ಟೆಯಿಂದ ಎನ್.ಹೆಚ್-೪ ರಸ್ತೆಯ ಹಾರೋಹಳ್ಳಿ ಕ್ರಾಸ್ ಬಳಿ  ಹೋಗುತ್ತಿದ್ದರು.  ಅ ಸಮಯದಲ್ಲಿ ಎದುರುಗಡೆಯಿಂದ ಬಂದ ಲಾರಿ ಸಂಖ್ಯೆ ಎಪಿ-೦೬-ಇ-೪೬೮೦ ರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಹರ್ಷರವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರಿಗೂ ತಲೆ ಮತ್ತು ಇತರೆ ಕಡೆ ತೀವ್ರತರಹದ ಗಾಯಗಳಾಗಿ ಹರ್ಷರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.   ತೀವ್ರ ಗಾಯಗೊಂಡಿರುವ ಶ್ರೀನಿವಾಸರವರನ್ನು ಎಸ್.ಎನ್.ಆರ್‍.   ಆಸ್ಪತ್ರೆಗೆ ದಾಖಲು ಮಾಡಿದ್ದು,  ಲಾರಿ ಚಾಲಕನನ್ನು ಬಂಧಿಸಿ, ವಾಹನ ವಶಪಡಿಸಿಕೊಳ್ಳಲಾಗಿದೆ.

-ಸಾಧಾರಣ:   ೦೧

  •   ಮಾಲೂರು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೯-೦೧-೨೦೦೭ ರಂದು ೦೭೩೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು  ಅರಣಿಘಟ್ಟ ಗ್ರಾಮದ ವಾಸಿಯಾದ ಕೆಂಪಣ್ಣ ಎಂಬುವರು ತಮ್ಮ ಹೀರೋ ಹೊಂಡಾ ಸ್ಪ್ಲೆಂಡರ್‍ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೧-ಎಸ್-೩೯೪೪ ರಲ್ಲಿ  ಹುಲಿಮಂಗಲ-ಹೊಸಕೋಟೆ ಗೇಟ್ ಬಳಿ ಹೋಗುತ್ತಿದ್ದರು.   ಆ ಸಮಯದಲ್ಲಿ ಎದುರುಗಡೆಯಿಂದ  ಬಂದ ಗೂಡ್ಸ್ ಟೆಂಪೋ ಸಂಖ್ಯೆ ಟಿಎನ್-೩೧-ಜೆ-೮೯೧೧ ರ  ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕೆಂಪಣ್ಣ ರವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿರುತ್ತಾನೆ.  ಇದರ ಪರಿಣಾಮವಾಗಿ ಕೆಂಪಣ್ಣನ ಎಡ ಕಾಲಿನ ಮೂಳೆ ಮುರಿದಿರುತ್ತದೆ.  ಟೆಂಪೋ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿರುತ್ತಾನೆ.

ಮೋಸ / ವಂಚನೆ ಪ್ರಕರಣಗಳು:  ಇಲ್ಲ

ಕೊಲೆಗೆ ಪ್ರಯತ್ನ:  ಇಲ್ಲ

ದೊಂಬಿ:  ಇಲ್ಲ 

ಹಲ್ಲೆ: ೦೧

  •   ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಪಟ್ಟಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೬-೧೦-೨೦೦೭ ರಂದು ೨೧೦೦ ಗಂಟೆ ಸಮಯದಲ್ಲಿ ಕೋಲಾರ ನಗರದ ಕುರಬರಪೇಟೆ ವಾಸಿಯಾದ ವಸಂತ ಕುಮಾರ್‍ ಎಂಬುವರನ್ನು ಕಾರು ಚಾಲಕರ ಸಂಘದ ಅಧ್ಯಕ್ಷರಾದ ಮಂಜುನಾಥ ಮತ್ತು ಹುಲ್ಲೂರು ಸುರೇಶ್ ಎಂಬುವರು   ನಗರದ ಡಿ.ಸಿ.ಸಿ. ಬ್ಯಾಂಕ್ ಮುಂಭಾಗ ಕರೆದುಕೊಂಡು ಬಂದರು.  ನಂತರ ನಮಗೆ ಪಾರ್ಟಿ ಕೊಡಿಸು ಎಂದು ಕೇಳಿದ್ದು  ವಸಂತ್ ಕುಮಾರ ನಿರಾಕರಿಸಿದಾಗ  ಜಗಳ ತೆಗೆದು ಬಾಟಲ್ ಮತ್ತು ಕೈಗಳಿಂದ ತಲೆಗೆ ಹೊಡೆದು ರಕ್ತಗಾಯವನ್ನುಂಟು ಮಾಡಿರುತ್ತಾರೆ.  

ಇತರೆ: ಇಲ್ಲ  

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು:  ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು:  ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು:  ಇಲ್ಲ  

ಮುಂಜಾಗ್ರತೆ ಕ್ರಮಗಳು:  ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ:  ತಿಳಿದು ಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೯ನೇ ಅಕ್ಟೋಬರ್‍ ೦೭

October 29, 2007

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೯-೧೦-೦೭ ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ:  ಇಲ್ಲ 

ಡಕಾಯತಿ:  ಇಲ್ಲ

ಸುಲಿಗೆ:  ಇಲ್ಲ

ಮನೆಗಳ್ಳತನ:  ಇಲ್ಲ

ಸಾಧಾರಣ ಕಳ್ಳತನ:  ಇಲ್ಲ

ವಾಹನ ಕಳ್ಳತನ : ೦೧

  •   ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಪಟ್ಟಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೭-೧೦-೨೦೦೭ ರಂದು ೨೧೦೦ ಗಂಟೆ ಸಮಯದಲ್ಲಿ ಕೋಲಾರ ನಗರದ ಕಾರಂಜಿಕಟ್ಟೆ ವಾಸಿಯಾದ ಆರ್‍.ಪನ್ನೀರ್‍ ಸೆಲ್ವಂ ಎಂಬುವರು ತಮ್ಮ ಹೀರೋ ಹೊಂಡಾ ಸ್ಪ್ಲೆಂಡರ್‍ ಪ್ಲಸ್ ದ್ಚಿಚಕ್ರ ವಾಹನ ಸಂಖ್ಯೆ ಕೆಎ-೦೭-ಎಲ್-೮೯ ಅನ್ನು ಮನೆಯ ಮುಂದೆ ನಿಲ್ಲಿಸಿ ಮನೆಯ ಒಳಗೆ ಹೋಗಿ ಬಂದು ನೋಡುವಷ್ಟರಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.  ಕಳುವಾದ  ವಾಹನದ ಬೆಲೆ ರೂ.೪೦,೦೦೦/ ಅಗಿರುತ್ತದೆ.  

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು:  ಇಲ್ಲ

ರಸ್ತೆ ಅಪಘಾತಗಳು:  ೦೪

-ಮಾರಣಾಂತಿಕ: ಇಲ್ಲ  

-ಸಾಧಾರಣ:   ೦೪

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೬-೧೦-೨೦೦೭ ರಂದು ೨೦೩೦ ಗಂಟೆ ಸಮಯದಲ್ಲಿ ಮುಳಬಾಗಿಲು ಪಟ್ಟಣದ ವಾಸಿಯಾದ ನಾರಾಯಣಪ್ಪ ಎಂಬುವರು ತನ್ನ ಹೀರೋ ಹೋಂಡಾ  ದ್ವಿಚಕ್ರ  ವಾಹನ  ಸಂಖ್ಯೆ ಕೆಎ-೦೭-ಕೆ-೭೭೬೬ ರಲ್ಲಿ ಮುಳಬಾಗಿಲು ಹೊರವಲಯದ ಅರೇಬಿಕ್ ಶಾಲೆಯ ಮುಂದೆ ಹೋಗುತ್ತಿದ್ದರು.   ಅ ಸಮಯದಲ್ಲಿ ಎದುರುಗಡೆಯಿಂದ ಬಂದ ಮಾರುತಿ ಕಾರ್‍ ಸಂಖ್ಯೆ ಕೆಎ-೫೩-ಎಂ-೭೪೨೦ ರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ನಾರಾಯಣಪ್ಪ ರವರ ವಾಹನಕ್ಕೆ ಡಿಕ್ಕಿ ಹೊಡೆದಿರುತ್ತಾನೆ.   ಪರಿಣಾಮವಾಗಿ ನಾರಾಯಣಪ್ಪ ರವರ ಕಾಲಿಗೆ ಗಾಯವಾಗಿದ್ದು, ಕೋಲಾರದ ಎಸ್.ಎನ್.ಆರ್‍. ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿರುತ್ತಾರೆ.  ಮಾರುತಿ ಕಾರ್‍ ಚಾಲಕನನ್ನು ಬಂಧಿಸಿ ವಾಹನ ವಶಪಡಿಸಿಕೊಂಡಿರುತ್ತದೆ.   

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೬-೧೦-೨೦೦೭ ರಂದು ೧೮೪೫ ಗಂಟೆ ಸಮಯದಲ್ಲಿ ಮುಳಬಾಗಿಲು ಪಟ್ಟಣದ ವಾಸಿ ಅಬ್ದುಲ್ ರಷೀದ್ ಎಂಬುವರು  ತಮ್ಮ ಹೀರೋ ಹೋಂಡಾ ಸ್ಪ್ಲೆಂಡರ್‍  ದ್ವಿಚಕ್ರ ವಾಹನ ‍ ಸಂಖ್ಯೆ ಕೆಎ-೦೭-ಜೆ-೯೫೪೨ ರಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಟ್ಟಣದ ಜೂನಿಯರ್‍ ಕಾಲೇಜ್ ಮುಂಭಾಗದ ಮೋರಿಗೆ ಡಿಕ್ಕಿ ಹೊಡೆದಿರುತ್ತಾನೆ.  ಪರಿಣಾಮವಾಗಿ ಅಬ್ದುಲ್ ರಷೀದ್ ರವರ ತಲೆಗೆ ತೀವ್ರ ತರಹದ ಗಾಯವಾಗಿದ್ದು ಆರ್‍.ಎಲ್. ಜಾಲಪ್ಪ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕತ್ಸೆ ಪಡೆಯುತ್ತಿರುತ್ತಾರೆ. 

  •   ಮಾಲೂರು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೮-೧೦-೨೦೦೭ ರಂದು ೦೭೩೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ಸೊಣ್ಣಪ್ಪನಹಟ್ಟಿ ಗ್ರಾಮದ ವಾಸಿಯಾದ ನಿರಂಜನ್ ಎಂಬುವರು ಮಾಲೂರು ಬಸ್ ನಿಲ್ದಾಣದಲ್ಲಿ   ಕೆ.ಎಸ್.ಆರ್‍.ಟಿ.ಸಿ. ಬಸ್ ಸಂಖ್ಯೆ ಕೆಎ-೦೭-ಎಫ್-೯೮೨ ರಿಂದ ಇಳಿಯುತ್ತಿದ್ದರು.  ಅ ಸಮಯದಲ್ಲಿ ಬಸ್  ಚಾಲಕನು ಬಸ್ಸನ್ನು  ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಿರಂಜನ್ ರವರ ಕಾಲಿನ ಮೇಲೆ ಹರಿಸಿದ್ದು ಕಾಲಿನ ಮೂಳೆ ಮುರಿದಿರುತ್ತದೆ.  

  •   ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೮-೧೦-೨೦೦೭ ರಂದು ೧೭೦೦ ಗಂಟೆ ಸಮಯದಲ್ಲಿ ಚಿಂತಾಮಣಿ ತಾಲೂಕು ಕಲ್ಲಹಳ್ಳಿ ಗ್ರಾಮದ ವಾಸಿ ಮಂಜುನಾಥ ಎಂಬುವರು ತನ್ನ  ಹೀರೋ ಹೋಂಡಾ ಫ್ಯಾಷನ್ ದ್ವಿಚಕ್ರ ವಾಹನ ಸಂಖ್ಯೆ ಕೆಎ-೫೧-ಎಲ್-೧೮೮೩ ರಲ್ಲಿ ದೊಡ್ಡಮಲದೊಡ್ಡಿ ಗ್ರಾಮದ ಬಳಿ ಚಿಂತಾಮಣಿ ಕಡೆಗೆ ಹೋಗುತ್ತಿದ್ದರು.  ಅ ಸಮಯದಲ್ಲಿ ಎದುರಗಡೆಯಿಂದ ಬಂದ ಹಾಲಿನ ಟೆಂಪೋ  ಸಂಖ್ಯೆ ಕೆಎ-೦೭-೨೭೪೭ ರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮಂಜುನಾಥ ರವರ ವಾಹನಕ್ಕೆ ಡಿಕ್ಕಿ ಹೊಡೆದಿರುತ್ತಾನೆ.  ಪರಿಣಾಮ ಮಂಜುನಾಥ ಮತ್ತು ಹಿಂಬದಿಯ ಸವಾರನಿಗೆ ಗಾಯಗಳಾಗಿರುತ್ತದೆ.  ಟೆಂಪೋ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿರುತ್ತಾನೆ.

ಮೋಸ / ವಂಚನೆ ಪ್ರಕರಣಗಳು:  ಇಲ್ಲ

ಕೊಲೆಗೆ ಪ್ರಯತ್ನ:  ಇಲ್ಲ

ದೊಂಬಿ:  ೦೨

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಪಟ್ಟಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೭-೧೦-೨೦೦೭ ರಂದು ೧೯೪೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ತಾವರೆಕೆರೆಯ ವಾಸಿ ಸುಬ್ರಮಣಿ ಎಂಬುವರು ತಮ್ಮ ದ್ವಿಚಕ್ರ ವಾಹನದಲ್ಲಿ  ಪಟ್ಟಣದ ಸರ್ದಾರ ಸಾಮಿಲ್ ಬಳಿ ತಮ್ಮ ಗ್ರಾಮಕ್ಕೆ ಹೋಗುತ್ತಿದ್ದರು.  ಅ ಸಮಯದಲ್ಲಿ ಅದೇ ಗ್ರಾಮದ ವಾಸಿಗಳಾದ ವೆಂಕಟರಮಣಪ್ಪ ಮತ್ತು ಇತರೆ ೪ ಜನರು ಅಕ್ರಮ ಗುಂಪು ಕಟ್ಟಿಕೊಂಡು  ಸುಬ್ರಮಣಿ ರವರನ್ನು ಅಡ್ಡಗಟ್ಟಿ ರಾಡ್ ಮತ್ತು ಕಲ್ಲಿನಿಂದ ಮುಖಕ್ಕೆ ಹೊಡೆದು ಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.    ಈ ಕೃತ್ಯವು ಹಳೇ ದ್ವೇಷದ ಹಿನ್ನಲೆಯಲ್ಲಿ ನಡೆದಿರುತ್ತದೆ.

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ದೊಂಬಿಗೆ  ಸಂಬಂಧಿಸಿದಂತೆ  ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಈ ಕೃತ್ಯವು ದಿನಾಂಕ ೨೮-೧೦-೨೦೦೭ ರಂದು ೨೧೧೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಕೊತ್ತೂರು ಗ್ರಾಮದ ವಾಸಿ ವೆಂಕಟೇಶಪ್ಪ ಎಂಬುವರ ಮನೆಯಲ್ಲಿ ನಡೆದಿರುತ್ತದೆ.  ವೆಂಕಟೇಶಪ್ಪನವರ ಅಳಿಯನಾದ ಅದೇ ಗ್ರಾಮದ ವೆಂಕಟರವಣಪ್ಪ ಮತ್ತು ೪ ಜನರು ಅಕ್ರಮ ಗುಂಪುಕಟ್ಟಿಕೊಂಡು ಬಂದು ವೆಂಕಟೇಶಪ್ಪನವರ ಮನೆಗೆ ಅಕ್ರಮ ಪ್ರವೇಶ ಮಾಡಿ ಹಳೇ ದ್ವೇಷದ ಹಿನ್ನಲೆಯಲ್ಲಿ ಬೈದು ಪ್ರಾಣಬೆದರಿಕೆ ಹಾಕಿರುತ್ತಾರೆ. 

ಹಲ್ಲೆ: ೦೧

  •   ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಪಟ್ಟಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೧-೧೦-೨೦೦೭ ರಂದು ೨೦೩೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಎದರೂರು ಗ್ರಾಮದ ವಾಸಿ ಫಾತಿಮಾ ಎಂಬುವರು ತಮ್ಮ ಮನೆಯಲ್ಲಿ ಇದ್ದರು.  ಅ ಸಮಯದಲ್ಲಿ ಅವರ  ತಮ್ಮ ಮುಸ್ತಾಕ್ ಮತ್ತು ಅತನ ಹೆಂಡತಿ ಮುಬೀನ್ ಎಂಬುವರು ವಿನಾಕಾರಣ  ಜಗಳ ಮಾಡಿ ಹೊಡೆದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ.

ಇತರೆ: ಇಲ್ಲ  

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು:  ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು:  ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು:  ಇಲ್ಲ  

ಮುಂಜಾಗ್ರತೆ ಕ್ರಮಗಳು:  ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ:  ತಿಳಿದು ಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೮ನೇ ಅಕ್ಟೋಬರ್‍ ೦೭

October 28, 2007

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮-೧೦-೦೭ ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ:  ಇಲ್ಲ 

ಡಕಾಯತಿ:  ಇಲ್ಲ

ಸುಲಿಗೆ:  ಇಲ್ಲ

ಮನೆಗಳ್ಳತನ:  ಇಲ್ಲ

ಸಾಧಾರಣ ಕಳ್ಳತನ:  ೦೧

  •   ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಎ.ಸಿ.ಎಸ್.ಆರ್‌. ವೈರ್‌ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ದಿನಾಂಕ ೦೯-೦೯-೨೦೦೭ ರಂದು ೨೩೩೦ ಗಂಟೆ ಸಮಯಲ್ಲಿ ಶ್ರೀನಿವಾಸಪುರ ತಾಲೂಕು ಜಿ.ರೆಡ್ಡಿವಾರಿಪಲ್ಲಿ ಗ್ರಾಮದಲ್ಲಿ ನಡೆದಿರುತ್ತದೆ.  ಶ್ರೀಮತಿ ಅನುಸೂಯಮ್ಮರವರ ಕೊಳವೆ ಬಾವಿಗೆ ಆಳವಡಿಸಿದ್ದ ಸುಮಾರು ರೂ. ೬,೦೦೦/ ಬೆಲೆ ಬಾಳುವ ೪೦೦ ಮೀಟರ್‌ ಎ.ಸಿ.ಎಸ್.ಆರ್‌. ವೈರ್‌ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ   ಮೋಹನ್‌ ಕುಮಾರ್‌, ಶಾಖಾಧೀಕ್ಷಕರು, ಬೆಸ್ಕಾಂ, ಗೌನಿಪಲ್ಲಿ ರವರು  ದೂರನ್ನು ನೀಡಿರುತ್ತಾರೆ.

ವಾಹನ ಕಳ್ಳತನ : ಇಲ್ಲ  

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು:  ಇಲ್ಲ

ರಸ್ತೆ ಅಪಘಾತಗಳು:  ೦೩

-ಮಾರಣಾಂತಿಕ: ೦೧

  •   ವೇಮಗಲ್ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಪಟ್ಟಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೮-೧೦-೨೦೦೭ ರಂದು ೦೪೦೦ ಗಂಟೆ ಸಮಯದಲ್ಲಿ ಬೆಂಗಳೂರಿನ ವಾಸಿಗಳಾದ ಸತೀಶ್ ಮತ್ತು ದಾಮೋದರ್‍ ಎಂಬುವರು ತಮ್ಮ ಜಿನ್ ಕಾರ್‍ ಸಂಖ್ಯೆ ಕೆಎ-೦೪-ಎಂಸಿ-೮೮೫೧ ರಲ್ಲಿ ಬೆಂಗಳೂರು ನಿಂದ ಚಿತ್ತೂರು  ಕಡೆಗೆ ಹೋಗಲು ರಾಷ್ಠ್ರೀಯ ಹೆದ್ದಾರಿ-೪ ರ  ಕುರ್ಕಿ ಕೆರೆಯ ಕೋಡಿ ಬಳಿ ಹೋಗುತ್ತಿದ್ದರು.    ಅ ಸಮಯದಲ್ಲಿ ಎದುರುಗಡೆಯಿಂದ ಬಂದ ಗೂಡ್ಸ್ ಟೆಂಪೋ ಸಂಖ್ಯೆ ಕೆಎ-೦೪-ಬಿ-೫೪೭೨ ರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿರುತ್ತಾನೆ.  ಪರಿಣಾಮವಾಗಿ ಜಿನ್ ಕಾರಿನಲ್ಲಿದ್ದ ಸತೀಶ್ ಮತ್ತು ದಾಮೋದರ್‍ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.  ಟೆಂಪೋ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿರುತ್ತಾನೆ.

-ಸಾಧಾರಣ:   ೦೨

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೭-೧೦-೨೦೦೭ ರಂದು ೧೨೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ವರದಗಾನಹಳ್ಳಿ ಗ್ರಾಮದ ವಾಸಿಯಾದ ಹನುಮಂತಪ್ಪ ಎಂಬುವರು ರಾಷ್ಟ್ರೀಯ ಹೆದ್ದಾರಿ-೪ ರ ಕಾಂತರಾಜ್ ವೃತ್ತದ ಬಳಿ ನಿಂತಿದ್ದರು.  ಅ ಸಮಯದಲ್ಲಿ ಮುಳಬಾಗಿಲು ಕಡೆಯಿಂದ ಬಂದ ಕಾರ್‍ ಸಂಖ್ಯೆ ಕೆಎ-೫೩-ಎಂ-೨೩೬೭ ರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹನುಮಂತಪ್ಪ ರವರಿಗೆ ಡಿಕ್ಕಿ ಹೊಡೆದಿರುತ್ತಾನೆ.  ಪರಿಣಾಮ ಹನುಮಂತಪ್ಪನವರಿಗೆ ತೀವ್ರ ಗಾಯಗಳಾಗಿದ್ದು, ಮುಳಬಾಗಿಲು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.  ಕಾರ್‍ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿರುತ್ತಾನೆ. 

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೧-೧೦-೨೦೦೭ ರಂದು ೧೬೩೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಪಿಚ್ಚಗುಂಡ್ಲಹಳ್ಳಿ ಗ್ರಾಮದ ವಾಸಿಯಾದ ಅನುಸೂಯಮ್ಮ ಮತ್ತು ಅವರ ಗಂಡ ರಘುನಾಥ್ ರೆಡ್ಡಿ ಎಂಬುವರು ತಮ್ಮ ಹೀರೋ ಹೋಂಡಾ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೫-ಇಡಿ-೭೫೪೧ ರಲ್ಲಿ  ಕೆ.ಬೈಯಪಲ್ಲಿ ಗ್ರಾಮದ ಬಳಿ ಹೋಗುತ್ತಿದ್ದರು.  ಅ ಸಮಯದಲ್ಲಿ ಎದರುಗಡೆ ಯಿಂದ ಬಂದ ಹೀರೋ ಹೋಂಡಾ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೧-ಇಎಫ್-೦೨ ರ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ.   ಪರಿಣಾಮ ರಘುನಾಥ್ ರೆಡ್ಡಿ ರವರಿಗೆ ಗಾಯಗಳಾಗಿದ್ದು ಕೋಲಾರದ ಎಸ್.ಎನ್.ಆರ್‍. ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾನೆ. 

ಮೋಸ / ವಂಚನೆ ಪ್ರಕರಣಗಳು:  ಇಲ್ಲ

ಕೊಲೆಗೆ ಪ್ರಯತ್ನ:  ಇಲ್ಲ

ದೊಂಬಿ:  ಇಲ್ಲ

ಹಲ್ಲೆ:   ೦೧

  •      ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಪಟ್ಟಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೧-೧೦-೦೭ ರಂದು ೧೭೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಅಜ್ಜಪ್ಪನಹಳ್ಳಿ ಗ್ರಾಮದ ವಾಸಿಯಾದ ಶ್ರೀಮತಿ ಈಶ್ವರಮ್ಮ ಎಂಬುವರು ತಮ್ಮ ಜಮೀನಿನಲ್ಲಿ ಜೋಳದ ಕಡ್ಡಿಯನ್ನು ಕೊಯ್ಯುತ್ತಿದ್ದರು.  ಆಗ ಅಲ್ಲಿಗೆ ಬಂದ ಅದೆ ಗ್ರಾಮದ ವಿ.ರಮೇಶ ಮತ್ತು ಇತರರು ಏಕೆ ನಮ್ಮ ಜಮೀನಿನಲ್ಲಿ ಜೋಳದ ಕಡ್ಡಿಯನ್ನು ಕೊಯ್ಯುತ್ತಿದ್ದಿಯಾ ಎಂದು ಕೇಳಿ ಏಕಾ ಏಕಿ ಜಗಳ ತೆಗೆದು ದೊಣ್ಣೆಯಿಂದ ಮತ್ತು ಮಚ್ಚಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ. ಇದನ್ನು ನೋಡಿ ಬಿಡಿಸಲು ಬಂದ ಈಶ್ವರಮ್ಮನವರ  ತಾಯಿ ಪಾಪಮ್ಮ ಮತ್ತು  ಕಣ್ಣಿಲ್ಲದ ಅಕೆಯ  ಗಂಡನನ್ನು ಸಹ ದೊಣ್ಣೆಯಿಂದ ಹೊಡೆದು ಗಾಯಪಡಿಸಿರುತ್ತಾರೆ.  ಗಾಯಾಳುಗಳು ಚಿಕಿತ್ಸೆಗಾಗಿ ಎಸ್.ಎನ್‌.ಆರ್‍. ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಇತರೆ: ೦೧

  •   ನಂಗಲಿ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕೆಲಸಕ್ಕೆ ಅಡಚಣೆ ಮಾಡಿರುವ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಈ ಕೃತ್ಯವು ದಿನಾಂಕ ೨೭-೧೦-೨೦೦೭ ರಂದು ಸಂಜೆ ೧೮೦೦ ಗಂಟೆ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿ-೪ ರ ಎನ್‌.ಕುರುಬರಹಳ್ಳಿ ಗೇಟ್‌ ಬಳಿ   ನಡೆದಿರುತ್ತದೆ.   ಕೆ.ಎಸ್.ಆರ್‌.ಟಿ.ಸಿ. ಬಸ್‌ ಸಂಖ್ಯೆ ಕೆಎ-೦೧-ಎಫ್-೭೯೭೯ ರ ಚಾಲಕ ಕಾಂತಯ್ಯ ರವರು ಬಸ್ ನ್ನು  ಚಾಲನೆ ಮಾಡಿಕೊಂಡು ಬೆಂಗಳೂರಿನಿಂದ ತಿರುಪತಿಗೆ ಹೋಗುತ್ತಿದ್ದರು.   ಇವರ ಮುಂದೆ ಹೋಗುತ್ತಿದ್ದ ಗೂಡ್ಸ್‌ ಟೆಂಪೋ ಚಾಲಕನಾದ ಇಮ್ರಾನ್ ತಂದೆ ಗಫಾರ್‌ ಖಾನ್, ನಂಗಲಿ ಗ್ರಾಮ, ಮುಳಬಾಗಿಲು ತಾಲೂಕು ರವರು  ತನ್ನ ಟೆಂಪೋವನ್ನು ರಸ್ತೆಯಲ್ಲಿ ಅಡ್ಡದಿಡ್ಡಿಯಾಗಿ ಚಲಿಸುತ್ತಿದ್ದನ್ನು ಕೇಳಿದ್ದಕ್ಕೆ ಏಕಾಏಕಿಯಾಗಿ ಬಲ ಕಣ್ಣಿನ ಉಬ್ಬಿನ ಮೇಲೆ ಹೊಡೆದು ರಕ್ತ ಗಾಯಪಡಿಸಿ  ಸರ್ಕಾರಿ ಕೆಲಸ ನಿರ್ವಹಿಸಲು ಅಡಚಣೆ ಉಂಟುಮಾಡಿರುತ್ತಾನೆ.  ಟೆಂಪೋ ಚಾಲಕ ಇಮ್ರಾನ್ ನನ್ನು ದಸ್ತಗಿರಿ ಮಾಡಿರುತ್ತೆ.  

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು:  ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು:  ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು:  ೦೩

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.    ದಿನಾಂಕ ೨೧-೧೦-೨೦೦೭ ರಂದು ೦೮೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಕುರಬರಹಳ್ಳಿ ಗ್ರಾಮದ ವಾಸಿಯಾದ ಮಂಜುನಾಥ ರವರ ತಂಗಿ ನೀಲಮ್ಮ (೧೮) ಎಂಬುವರು ಕೋಲಾರಕ್ಕೆ ಮದುವೆಗೆ ಹೋಗಿ ಬರುತ್ತೇನೆ ಎಂದು ಹೋದವರು ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾಳೆ.   ಕಾಣೆಯಾದ ಹುಡುಗಿಯ ಚಹರೆ ಈ ರೀತಿ ಇರುತ್ತದೆ.   ಎತ್ತರ ಸುಮಾರು ೫ ಅಡಿ, ಗುಂಡುಮುಖ, ತಿಳಿ ಬಿಳಿ ಬಣ್ಣ, ಬಿಳಿ ಚೂಡಿದಾರ್‍ ಮತ್ತು ಕೆಂಪು ಬಣ್ಣದ ವೇಲ್ ಧರಿಸಿರುತ್ತಾಳೆ.  ಕನ್ನಡ ಮತ್ತು ತೆಲಗು ಭಾಷೆ ಮಾತನಾಡುತ್ತಾಳೆ. 

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೫-೧೦-೨೦೦೭ ರಂದು ೧೬೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಬಲ್ಲ ಗ್ರಾಮದ ವಾಸಿಯಾದ ಬಾಸ್ಕರ್‍ ರವರ ತಮ್ಮ ನವೀನ್ ಕುಮಾರ್‍ (೨೬) ಎಂಬುವರು ತನ್ನ ಕಾರ್‍ ಸಂಖ್ಯೆ ಕೆಎ-೦೭-೬೦೩೫ ನಲ್ಲಿ ಮುಳಬಾಗಿಲಿಗೆ ಹೋಗಿ ಬರುವುದಾಗಿ ಹೋದವರು ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ.   ಕಾಣೆಯಾದ ನವೀನ್ ಕುಮಾರ್‍ ರವರ ಚಹರೆ ಈ ರೀತಿ ಇರುತ್ತದೆ.  ಎತ್ತರ ಸುಮಾರು ೫ ಅಡಿ, ಗೋದಿಮೈಬಣ್ಣ, ನೇರಳೆ ಬಣ್ಣದ ಪ್ಯಾಂಟ್ ಧರಿಸಿದ್ದು ಕನ್ನಡ ಮತ್ತು ತೆಲಗು ಮಾತನಾಡುತ್ತಾನೆ. 

  •   ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಮನುಷ್ಯ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೦೯-೧೦-೨೦೦೭ ರಂದು ಕೋಲಾರ ನಗರದ ಗೌರಿಪೇಟೆಯ ವಾಸಿಯಾದ ಶ್ರೀಮತಿ ಸುನಿತಾ ಎಂಬುವರ ಗಂಡ ಎಂ.ಪಿ. ಕೃಷ್ಣಾ (೩೭) ಎಂಬುವರು ಮನೆ ಬಿಟ್ಟು ಹೋದವರು ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ.   ಕಾಣೆಯಾದ ವ್ಯಕ್ತಿಯ ಚಹರೆ ಈ ರೀತಿ ಇರುತ್ತದೆ.  ಎತ್ತರ ೫.೬ ಅಡಿ, ಕೋಲು ಮುಖ, ಗೋದಿ ಬಣ್ಣ, ಸಾಧಾರಣ ಮೈಕಟ್ಟು, ನೀಲಿ ಬಣ್ಣದ ಶರ್ಟ್ ಧರಿಸಿರುತ್ತಾನೆ, ಕನ್ನಡ ಮತ್ತು ಮರಾಠಿ ಭಾಷೆ ಮಾತನಾಡುತ್ತಾನೆ.  

ಮುಂಜಾಗ್ರತೆ ಕ್ರಮಗಳು:  ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ:  ತಿಳಿದು ಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ


ಮೊಬೈಲ್ ಚೋರನ ಬಂಧನ, ೧೫ ಮೊಬೈಲ್ ವಶ

October 28, 2007

ದಿನಾಂಕ ೨೬-೧೦-೨೦೦೭ ರಂದು ೧೯೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ಪೊಲೀಸ್ ಠಾಣೆಯ ಪೊಲೀಸರಿಗೆ  ದೊರೆತ ಸುಳುವಿನ  ಮೇಲೆ ಶ್ರೀನಿವಾಸಪುರ ಪಟ್ಟಣ     ವಿನೋಭನಗರದ ವಾಸಿ ಹರೀಶ್(೧೯) ತಂದೆ ನಾರಾಯಣಸ್ವಾಮಿ,  ಎಂಬುವನನ್ನು ಬಂಧಿಸಿರುತ್ತಾರೆ.   ಬಂಧಿತನಿಂದ ೧೫ ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಂಡಿರುತ್ತಾರೆ. ಇವುಗಳ ಬೆಲೆ ಸುಮಾರು ರೂ ೨೩,೦೦೦/ ಗಳಾಗಿರುತ್ತದೆ.  ಈ ಬಗ್ಗೆ ಆರೋಪಿಯ ಹೆಚ್ಚಿನ ವಿಚಾರಣೆ ನಡೆಸಲಾಗಿ, ಆತ ಈ ಎಲ್ಲ ಮೊಬೈಲ್‌ ಫೋನ್‌ಗಳನ್ನು ಕಳ್ಳತನ ಮಾಡಿದ್ದು,  ಶ್ರೀನಿವಾಸಪುರದ ಕೆಲವು ಮೊಬೈಲ್‌ ಅಂಗಡಿಗಳಲ್ಲಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. 

ಸಂಬಂಧವಾಗಿ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ  ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 


ದಿನದ ಅಪರಾಧಗಳ ಪಕ್ಷಿನೋಟ ೨೭ನೇ ಅಕ್ಟೋಬರ್‍ ೦೭

October 27, 2007

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೭-೧೦-೦೭ ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ:  ಇಲ್ಲ 

ಡಕಾಯತಿ:  ಇಲ್ಲ

ಸುಲಿಗೆ:  ಇಲ್ಲ

ಮನೆಗಳ್ಳತನ:  ಇಲ್ಲ

ಸಾಧಾರಣ ಕಳ್ಳತನ:  ಇಲ್ಲ

ವಾಹನ ಕಳ್ಳತನ : ಇಲ್ಲ  

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು:  ಇಲ್ಲ

ರಸ್ತೆ ಅಪಘಾತಗಳು:  ೦೪

-ಮಾರಣಾಂತಿಕ: ಇಲ್ಲ  

-ಸಾಧಾರಣ:   ೦೪

  •   ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ  ೨೪-೧೦-೨೦೦೭ ರಂದು ೧೬೧೫ ಗಂಟೆ ಸಮಯದಲ್ಲಿ ಕೋಲಾರ ನಗರದ ಮಹಾಲಕ್ಷ್ಮಿ ಲೇಔಟ್ ಹೌಸ್ ನ ವಾಸಿ ಶ್ರೀಮತಿ ಅನುಸೂಯ ಎಂಬುವರು ತಮ್ಮ ಮನೆಯ ಮುಂದೆ ನಿಂತಿದ್ದಾಗ ಯಾವುದೋ ಅಪರಿಚಿತ ನೀರಿನ ಟ್ರಾಕ್ಟರ್‍ ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅನುಸೂಯಮ್ಮ ರವರಿಗೆ ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ಅಕೆಯ ಕಾಲಿಗೆ ರಕ್ತಗಾಯವಾಗಿರುತ್ತದೆ.  ಟ್ರಾಕ್ಟರ್‍ ಚಾಲಕ ವಾಹನವನ್ನು ನಿಲ್ಲಿಸದೆ ಹೊರಟು ಹೋಗಿರುತ್ತಾನೆ.

  •   ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ  ೨೫-೧೦-೨೦೦೭ ರಂದು ೧೮೩೦ ಗಂಟೆ ಸಮಯದಲ್ಲಿ ಕೋಲಾರ ನಗರದ ಕುರಬರಪೇಟೆ ವಾಸಿ ಕೆ.ಪಿ. ಸುರೇಶ್   ಮತ್ತು ಅತ್ತೆ ಮಾವ ಅಂಬಾಸಿಡರ್‍ ಕಾರ್‍ ಸಂಖ್ಯೆ ಕೆಎ-೦೭-೪೪೪೯ ರಲ್ಲಿ ಕೋಲಾರದಿಂದ ಅರ್‍.ಎಲ್.ಜಾಲಪ್ಪ ಆಸ್ಪತ್ರೆಗೆ  ಬರುತ್ತಿದ್ದರು.    ಕಾರಿನ ಚಾಲಕನಾದ ವೆಂಕಟೇಶ್ ಎಂಬುವನು   ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಕೊಂಡು ಬಂದು ಟಮಕ ಬಳಿ ಮುಂದೆ ಹೋಗುತ್ತಿದ್ದ ಟ್ರಾಕ್ಟರ್‍ ಸಂಖ್ಯೆ ಕೆಎ-೦೭-ಟಿ-೮೪೭೪ ಗೆ ಹಿಂದುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಪುಟ್ಟ ತಾಯಮ್ಮ ಮತ್ತು ಸೋಮಪ್ಪ ರವರಿಗೆ ಗಾಯಗಳಾಗಿರುತ್ತದೆ.   

  •   ಮಾಲೂರು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ  ೨೫-೧೦-೨೦೦೭ ರಂದು ೧೭೩೦ ಗಂಟೆ ಸಮಯದಲ್ಲಿ ಮಾಲೂರು ಪಟ್ಟಣದ ವಾಸಿ ವಿಶ್ವನಾಥ್ ಎಂಬುವರು ಮಾಲೂರು ಮಾಸ್ತಿ ರಸ್ತೆಯಲ್ಲಿರುವ ರಾಮ್ ಪ್ರಕಾಶ್ ಇಟ್ಟಿಗೆ ಪ್ಯಾಕ್ಟರಿಯ ಮುಂಭಾಗ ನಡೆದುಕೊಂಡು ಬರುತ್ತಿದ್ದರು.  ಅ ಸಮಯದಲ್ಲಿ  ಮಾಸ್ತಿ ಕಡೆಯಿಂದ ಬಂದ ಮ್ಯಾಕ್ಸಿ ಕ್ಯಾಬ್ ಸಂಖ್ಯೆ ಕೆಎ-೦೫-ಎ-೫೬೮ ಅನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿರುತ್ತಾನೆ.   ಇದರ ಪರಿಣಾಮ ವಿಶ್ವನಾಥ್ ರವರಿಗೆ ಎದೆ, ಕಾಲು ಮತ್ತು ತಲೆಗೆ ರಕ್ತ ಗಾಯಗಳಾಗಿರುತ್ತದೆ.  ಚಿಕತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.   ಮ್ಯಾಕ್ಸಿಕ್ಯಾಬ್ ನ ಚಾಲಕನನ್ನ ಬಂಧಿಸಿ  ವಾಹನವನ್ನು ವಶಪಡಿಸಿಕೊಂಡಿರುತ್ತದೆ.  

  •   ಮಾಸ್ತಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೬-೧೦-೨೦೦೭ ರಂದು ೦೮೨೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ಪಿಚ್ಚಗುಂಡ್ಲಹಳ್ಳಿ ವಾಸಿ ಗಂಗಪ್ಪ ಎಂಬುವರು  ಮಾಸ್ತಿ ಗ್ರಾಮದ ಗೋಪಾಲಪ್ಪ ವಿವಾಹ ಮಂಟಪದ ಬಳಿ ನಿಂತಿದ್ದರು.  ಅ ಸಮಯದಲ್ಲಿ ಲಾರಿ ಸಂಖ್ಯೆ ಟಿಎನ್-೨೩-ಎಜೆ-೧೪೧೦  ರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಿಂದುಗಡೆಯಿಂದ ಡಿಕ್ಕಿ ಹೊಡೆದಿರುತ್ತಾನೆ.  ಪರಿಣಾಮ  ಗಂಗಪ್ಪರವರ ಕಾಲಿಗೆ ತೀವ್ರ ಗಾಯವಾಗಿದ್ದು ಚಿಕಿತ್ಸೆಗಾಗಿ ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾನೆ.  ಲಾರಿ ಚಾಲಕನನ್ನು ಬಂಧಿಸಿ ಲಾರಿ ವಶಪಡಿಸಿಕೊಂಡಿರುತ್ತೆ.  

ಮೋಸ / ವಂಚನೆ ಪ್ರಕರಣಗಳು:  ಇಲ್ಲ

ಕೊಲೆಗೆ ಪ್ರಯತ್ನ:  ಇಲ್ಲ

ದೊಂಬಿ:  ೦೧

  •   ವೇಮಗಲ್ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಪಟ್ಟಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೫-೧೦-೦೭ ರಂದು ೧೫೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಧನಮಟ್ನಹಳ್ಳಿ ಗ್ರಾಮದ ವಾಸಿಯಾದ ಡಿ.ಎಂ.ಕೃಷ್ಣಪ್ಪ ಎಂಬುವರು ಸರ್ಕಾರಿ ಕರಾಬು ಜಮೀನಿನಲ್ಲಿ ಮನೆಯನ್ನು ಕಟ್ಟುತ್ತಿದ್ದರು.  ಇದನ್ನು ಗ್ರಾಮದ ಹನುಮಂತಪ್ಪ ಮತ್ತು ಇತರೆಯವರು ಪ್ರಶ್ನಿಸಿದಾಗ ಕೃಷ್ಣಪ್ಪ ಮತ್ತು ಇತರೆಯವರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿರುತ್ತಾರೆ.

ಹಲ್ಲೆ:   ೦೧

  •   ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಪಟ್ಟಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೭-೧೦-೨೦೦೭ ರಂದು ೧೯೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ವಕ್ಕಲೇರಿ ಗ್ರಾಮದ ವಾಸಿ ಮಂಜುನಾಥ ತಂದೆ ಅಂಜಿನಪ್ಪ ಎಂಬುವರು ಕೋಲಾರ ನಗರದ ಅರಳೇಪೇಟೆಯಲ್ಲಿರುವ ಹೊನ್ನುಡಿ ಕಛೇರಿ ಮುಂಭಾಗ ಹೋಗುತ್ತಿದ್ದರು.  ಅ ಸಮಯದಲ್ಲಿ ಕೋಲಾರ ನಗರದ ಶ್ವೇತ ಬೋರ್‍ ವೆಲ್ ಮಾಲೀಕನಾದ ಪ್ರಕಾಶ್ ಮತ್ತು ಇತರೆ ಇಬ್ಬರು ಅಪರಿಚಿತ ವ್ಯಕ್ತಿಗಳು ಹಳೆಯ ದ್ವೇಷದಿಂದ ಮಂಜುನಾಥ್ ರವರನ್ನು ಕಬ್ಬಿಣದ ರಾಡ್ ನಿಂದ ತೆಲೆಗೆ ಹೊಡೆದು ರಕ್ತಗಾಯ ಮಾಡಿ, ಕಾಲಿನಿಂದ ಒದ್ದು ಹಲ್ಲೆ ಮಾಡಿರುತ್ತಾರೆ.     

ಇತರೆ: ೦೨

  •   ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕೆಲಸಕ್ಕೆ ಅಡಚಣೆ ಮಾಡಿರುವ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಈ ಕೃತ್ಯವು ದಿನಾಂಕ ೨೪-೧೦-೨೦೦೭ ರಂದು ಸಂಜೆ ಕೋಲಾರ ನಗರದ ಅರಳೇಪೇಟೆಯಲ್ಲಿರುವ ಡಾ.ಬಿ.ಅರ್‍.ಅಂಬೇಡ್ಕರ್‍ ಅಭಿವೃದ್ದಿ ನಿಗಮ ನಿಯಮಿತಿ ಕಛೇರಿಯಲ್ಲಿ ನಡೆದಿರುತ್ತದೆ.  ಕೋಲಾರ ತಾಲೂಕು ವಕ್ಕಲೇರಿ ಗ್ರಾಮದ ವಾಸಿಯಾದ ಮಂಜುನಾಥ ತಂದೆ ಅಂಜಿನಪ್ಪ ಎಂಬುವರು ಕಛೇರಿಯ ಜಿಲ್ಲಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಕಛೇರಿಯ ಕೆಲಸ ನಿರ್ವಹಿಸಲು ಅಡಚಣೆ ಉಂಟುಮಾಡಿರುತ್ತಾನೆ.   ನಂತರ ಕಛೇರಿಯ ಗೋಡೆಗೆ ಸ್ವಂತ: ತನ್ನ ತಲೆ ಬಡಿದುಕೊಂಡು ರಕ್ತಗಾಯ ಮಾಡಿಕೊಂಡು ಜಿಲ್ಲಾ ವ್ಯವಸ್ಥಾಪಕರೆ ಹೊಡೆಸಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡುವುದಾಗಿ ಬೆದರಿಕೆ ಹಾಕಿರುತ್ತಾನೆ.   ಈ ಸಂಬಂಧವಾಗಿ ಶ್ರೀ ಅಂಜಿನಪ್ಪ, ಜಿಲ್ಲಾ ವ್ಯವಸ್ಥಾಪಕರು, ಡಾ. ಬಿ.ಆರ್‍. ಅಂಬೇಡ್ಕರ್‍ ಅಭಿವೃದ್ದಿ ನಿಗಮ ನಿಯಮಿತ, ಕೋಲಾರ ರವರು ದೂರು ದಾಖಲಿಸಿರುತ್ತಾರೆ.

  •   ವೇಮಗಲ್ ಪೊಲೀಸ್ ಠಾಣೆಯಲ್ಲಿ ಡಾ. ಬಿ.ಅರ್‍.ಅಂಬೇಡ್ಕರ್‍ ರವರ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೫-೧೦-೨೦೦೭ ರಂದು ರಾತ್ರಿ ಕೋಲಾರ ತಾಲೂಕು ಚನ್ನಸಂದ್ರ ಗ್ರಾಮದಲ್ಲಿ ಗೋಡೆಯ ಮೇಲೆ ಬರೆದಿರುವ ಡಾ. ಬಿ.ಅರ್‍.ಅಂಬೇಡ್ಕರ್‍ ರವರ ಭಾವಚಿತ್ರಕ್ಕೆ ಯಾರೋ ಕಿಡಿಗೇಡಿಗಳು ಸಗಣಿ ಎರಚಿ ಅವಮಾನ ಮಾಡಿರುತ್ತಾರೆ.  ಈ ಬಗ್ಗೆ ಚನ್ನಸಂದ್ರ ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಂದ್ರಶೇಖರ್‍ ರವರು ದೂರ ದಾಖಲು ಮಾಡಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು:  ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು:  ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು:  ೦೧

  •   ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೨-೧೦-೨೦೦೭ ರಂದು ಕೋಲಾರ ನಗರದ ಖಾದ್ರಿಪುರದ ವಾಸಿ ಶ್ರೀಮತಿ ನಾರಾಯಣಮ್ಮ ರವರ ಮಗನಾದ ಅರುಣ್ ಕುಮಾರ್‍ (೧೫) ಎಂಬುವನು ಮನೆಯಿಂದ ಹೊರಗೆ ಹೋದವನು ಇದುವರೆವಿಗೂ ವಾಪಸ್ಸು ಬಾರದೆ ಕಾಣೆಯಾಗಿರುತ್ತಾನೆ.  ಕಾಣೆಯಾದ ಹುಡುಗನ ಚಹರೆ ಈ ಕೆಳಕಂಡಂತೆ ಇರುತ್ತದೆ.  ಕಾಣೆಯಾದ ಹುಡುಗನ ಚಹರೆ    ೫.೫ ಅಡಿ ಎತ್ತರ, ಗುಂಡು ಮುಖ, ಎಣ್ಣೆಗೆಂಪು ಮೈ ಬಣ್ಣ, ಕನ್ನಡ ಮತ್ತು ತಮಿಳು   ಮಾತನಾಡುತ್ತಾನೆ. ಹಣೆಯ ಮೇಲೆ ಹಳೇ ಗಾಯದ ಗುರುತು ಇರುತ್ತದೆ.  

ಮುಂಜಾಗ್ರತೆ ಕ್ರಮಗಳು:  ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ:  ತಿಳಿದು ಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ


ದಿನದ ಅಪರಾಧಗಳ ಪಕ್ಷಿನೋಟ ೨೬ನೇ ಆಕ್ಟೋಬರ್ ೦೭

October 27, 2007

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೧೦-೦೭ ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ:  ಇಲ್ಲ 

ಡಕಾಯತಿ:  ಇಲ್ಲ

ಸುಲಿಗೆ:  ಇಲ್ಲ

ಮನೆಗಳ್ಳತನ:  ೦೧

  •   ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳ್ಳತನಕ್ಕೆ ಸಂಬಂಧಪಟ್ಟಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೩-೧೦-೨೦೦೭ ರಂದು ೦೮೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ಪಟ್ಟಣದಲ್ಲಿರುವ ಶ್ರೀನಿವಾಸ ನರ್ಸಿಂಗ್ ಹೋಂ ನಲ್ಲಿ ಈ ಕೃತ್ಯ ನಡೆದಿರುತ್ತದೆ.   ನರ್ಸಿಂಗ್ ಹೋಂನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನರಸಮ್ಮ ಎಂಬುವರು ತನ್ನ ಮೊಬೈಲ್ ಚಾರ್ಚ್‌ಗೆ ಹಾಕಿದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.   ಈ ಸಂಬಂಧವಾಗಿ ಶ್ರೀನಿವಾಸಪುರ ಪಟ್ಟಣದ ವಾಸಿಗಳಾದ ಹರೀಶ್ ಮತ್ತು ವಿಶ್ವನಾಥ್ ಎಂಬುವರ ಮೇಲೆ ಅನುಮಾನ ವ್ಯಕ್ತಪಡಿಸಿರುತ್ತಾರೆ.  ಕಳುವಾದ ಮೊಬೈಲ್ ಬೆಲೆ ತಿಳಿಯಬೇಕಾಗಿರುತ್ತದೆ. 

ಸಾಧಾರಣ ಕಳ್ಳತನ:  ಇಲ್ಲ

ವಾಹನ ಕಳ್ಳತನ : ೦೧ 

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳ್ಳತನಕ್ಕೆ ಸಂಬಂಧಪಟ್ಟಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.   ಈ ಕೃತ್ಯವು ದಿನಾಂಕ ೨೪-೦೯-೨೦೦೭ರ ರಂದು ೨೦೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಗಡ್ಡೂರು ಗ್ರಾಮದ ಗೇಟ್ ಬಳಿ ಸಂಭವಿಸಿರುತ್ತದೆ.   ಮುಳಬಾಗಿಲು ಪಟ್ಟಣದ ವಾಸಿ ವೆಂಕಟಸ್ವಾಮಿ ಎಂಬುವರು ತನ್ನ ದ್ವಿಚಕ್ರ ವಾಹನ ಸೂಪರ್‍ ಸ್ಪೆಂಡರ್‍ ಸಂಖ್ಯೆ ಕೆಎ-೫೧-ಕೆ-೭೪೯ ಅನ್ನು ಗಡ್ಡೂರು ಗೇಟ್ ಬಳಿ ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.  ಕಳುವಾದ ವಾಹನ ಬೆಲೆ ರೂ. ೪೫,೦೦೦/ ಅಗಿರುತ್ತದೆ. 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು:  ಇಲ್ಲ

ರಸ್ತೆ ಅಪಘಾತಗಳು:  ೦೪

-ಮಾರಣಾಂತಿಕ: ೦೧

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೫-೧೦-೨೦೦೭ ರಂದು ೨೩೦೦ ಗಂಟೆ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿ -೪ ರ ಕಾಂತರಾಜ ವೃತ್ತದ ಬಳಿ ಸುಮಾರು ೩೫ ವರ್ಷದ ಅಪರಿಚಿತ ಮಹಿಳೆಗೆ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದಿರುತ್ತದೆ.  ಪರಿಣಾಮವಾಗಿ ಅಪರಿಚಿತ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ.   ಅಪರಿಚಿತ ಹೆಂಗಸು ಕೆಂಪು ಬಣ್ಣದ ಲಂಗ, ಸೀರೆ ಮತ್ತು ಜಾಕೆಟ್ ಧರಿಸಿರುತ್ತಾಳೆ.  

-ಸಾಧಾರಣ:   ೦೩

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೪-೧೦-೨೦೦೭ ರಂದು ೧೩೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಜನ್ನಘಟ್ಟ ಗ್ರಾಮದ ವಾಸಿ ನಾರಾಯಣಸ್ವಾಮಿ ಮತ್ತು ಇತರೆ ೩ ಜನರು ಮಾರುತಿ ವ್ಯಾನ್ ಸಂಖ್ಯೆ ಕೆಎ-೦೫-ಎಂಸಿ-೯೫೧೦ ರಲ್ಲಿ ತಮ್ಮ ಗ್ರಾಮದಿಂದ ಕೋಲಾರಕ್ಕೆ ಬರುತ್ತಿದ್ದರು.   ಅ ಸಮಯದಲ್ಲಿ ಎದುರುಗಡೆಯಿಂದ ಬಂದ ಖಾಸಗಿ ಬಸ್ ಸಂಖ್ಯೆ ಕೆಎ-೦೪-ಡಿ-೯೧೮೯ ರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಮಾರುತಿ ವ್ಯಾನ್ ಗೆ  ಡಿಕ್ಕಿ ಹೊಡೆಸಿರುತ್ತಾನೆ.  ಪರಿಣಾಮ ಮಾರುತಿ ವ್ಯಾನ್ ನಲ್ಲಿದ್ದ ೩ ಜನರಿಗೆ ಗಾಯಗಳಾಗಿದ್ದು ವ್ಯಾನ್ ಜಖಂಗೊಂಡಿರುತ್ತದೆ.   ಬಸ್ ಚಾಲಕನನ್ನು ಬಂಧಿಸಿ, ವಾಹನವನ್ನು ವಶಪಡಿಸಿಕೊಂಡಿರುತ್ತೆ.

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೫-೧೦-೨೦೦೭ ರಂದು ೧೭೦೦ ಗಂಟೆ ಸಮಯದಲ್ಲಿ ಬೆಂಗಳೂರು ಜಿಲ್ಲೆ ಭಟ್ರಹಳ್ಳಿ ಗ್ರಾಮದ  ವಾಸಿ ಕೃಷ್ಣಾರೆಡ್ಡಿ ಎಂಬುವರು ಟೆಂಪೋ ಸಂಖ್ಯೆ ಕೆಎ-೦೩-ಎ-೨೬೦೯ ರಲ್ಲಿ ಬಂಗಾರುಪೇಟೆಯಿಂದ ಬೆಂಗಳೂರಿಗೆ ಹೋಗಲು ದಿಂಬಾ ಗೇಟ್ ಬಳಿ ಬರುತ್ತಿದ್ದರು.      ಅ ಸಮಯದಲ್ಲಿ ಕೋಲಾರ ಕಡೆಯಿಂದ ಬಂದ ಮಿನಿ ಟೆಂಪೋ ಸಂಖ್ಯೆ ಕೆಎ-೦೮-೨೭೫೬ ರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಟೆಂಪೋಗೆ ಡಿಕ್ಕಿ ಹೊಡೆಸಿರುತ್ತಾನೆ.  ಇದರ ಪರಿಣಾಮ ಇಬ್ಬರಿಗೆ ಗಾಯಗಳಾಗಿದ್ದು, ಎಸ್.ಎನ್.ಆರ್‍. ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿರುತ್ತಾರೆ.     ಮಿನಿ ಟೆಂಪೂ  ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದು, ವಾಹನ ವಶಪಡಿಸಿಕೊಂಡಿರುತ್ತೆ.

  •   ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ  ೨೪-೧೦-೨೦೦೭ ರಂದು ೧೧೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಅರಹಳ್ಳಿ ಗ್ರಾಮದ ವಾಸಿ ಮಂಜುನಾಥಗೌಡ ಎಂಬುವರು ತಮ್ಮ ಆಲ್ಟ್ರಾ  ಕಾರ್‍ ಸಂಖ್ಯೆ ಕೆಎ-೦೫-ಎಂಡಿ-೭೬೪೪ ಅನ್ನು ರಾಷ್ಟ್ರೀಯ ಹೆದ್ದಾರಿ-೪ ರ ಟಮಕ ಗ್ರಾಮದ ಬಳಿ ನಿಲ್ಲಿಸಿದ್ದರು.  ಆ ಸಮಯದಲ್ಲಿ ಯಾವುದೋ ಒಂದು ಅಪರಿಚಿತ ವಾಹನವು ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆಸಿ ಪರಾರಿಯಾಗಿರುತ್ತದೆ.  ಇದರ ಪರಿಣಾಮ ಕಾರು ಜಖಂಗೊಂಡಿರುತ್ತದೆ. 

ಮೋಸ / ವಂಚನೆ ಪ್ರಕರಣಗಳು:  ಇಲ್ಲ

ಕೊಲೆಗೆ ಪ್ರಯತ್ನ:  ಇಲ್ಲ

ದೊಂಬಿ:  ಇಲ್ಲ

ಹಲ್ಲೆ:  ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು:  ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು:  ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು:  ಇಲ್ಲ

ಮುಂಜಾಗ್ರತೆ ಕ್ರಮಗಳು:  ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ:  ತಿಳಿದು ಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ


ದಿನದ ಅಪರಾಧಗಳ ಪಕ್ಷಿನೋಟ ೨೫ ನೇ ಅಕ್ಟೋಬರ್ ೦೭

October 25, 2007

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೫-೧೦-೦೭ ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ:  ಇಲ್ಲ 

ಡಕಾಯತಿ:  ಇಲ್ಲ

ಸುಲಿಗೆ:  ಇಲ್ಲ

ಮನೆಗಳ್ಳತನ:  ಇಲ್ಲ

ಸಾಧಾರಣ ಕಳ್ಳತನ:  ಇಲ್ಲ

ವಾಹನ ಕಳ್ಳತನ : ಇಲ್ಲ 

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು:  ಇಲ್ಲ

ರಸ್ತೆ ಅಪಘಾತಗಳು:  ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ:   ೦೧

  •   ಮಾಲೂರು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೪-೧೦-೨೦೦೭ ರಂದು ೧೭೩೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ಮಾಸ್ತಿ ರಸ್ತೆಯ ಮೈಲಾಂಡಹಳ್ಳಿ ಗ್ರಾಮದ ಕೆರೆಯ ಕಟ್ಟೆಯ ಬಳಿ ಲಾರಿ ಸಂಖ್ಯೆ ಕೆಎ-೦೧-ಬಿ-೮೨೬೫ ರ ಚಾಲಕ  ತಮಿಳ್ ಸೆಲ್ವನ್  ಎಂಬುವನು  ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಪಕ್ಕದ ಹಳ್ಳಕ್ಕೆ ಲಾರಿಯನ್ನು ಉರಳಿಸಿರುತ್ತಾನೆ.    ಪರಿಣಾಮ  ಲಾರಿ ಜಖಂ ಗೊಂಡಿರುತ್ತದೆ.    

ಮೋಸ / ವಂಚನೆ ಪ್ರಕರಣಗಳು:  ಇಲ್ಲ

ಕೊಲೆಗೆ ಪ್ರಯತ್ನ:  ಇಲ್ಲ

ದೊಂಬಿ:  ಇಲ್ಲ

ಹಲ್ಲೆ:  ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು:  ೦೧

  •   ಪರಿಶಿಷ್ಟ ಜಾತಿ/ಪಂಗಡ (ದೌರ್ಜನ್ಯತಡೆ) ಕಾಯ್ದೆ ೧೯೮೬ ರ ಅಡಿಯಲ್ಲಿ ಹಾಗೂ ಹಲ್ಲೆಗೆ ಸಂಬಂಧಿಸಿದಂತೆ ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೧೦-೨೦೦೭ ರಂದು ೧೯೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಅರಹಳ್ಳಿ ಗ್ರಾಮದ ವಾಸಿ ಎಂ.ಶಿವಪ್ಪ(೩೪) ತಂದೆ ಮುನಿವೆಂಕಟಪ್ಪ  ಎಂಬುವರು ಮುಳಬಾಗಿಲಿನಿಂದ ತಮ್ಮ ಗ್ರಾಮಕ್ಕೆ  ಬಸ್ಸಿನಿಂದ ಇಳಿದು ನಡೆದುಕೊಂಡು ಹೋಗುತ್ತಿದ್ದರು.  ಆ ಸಮಯದಲ್ಲಿ ಅದೆ ಗ್ರಾಮದ ವಾಸಿ  ಎ.ವಿ.ಶ್ರೀನಿವಾಸಗೌಡ ಮತ್ತು ಇತರೆ ೩ ಜನರು ದ್ವಿಚಕ್ರವಾಹನದಲ್ಲಿ ಬಂದು ನೀನು ಜಾತಿ ನಿಂದನೆ ಕೇಸು ಹಾಕಿಕೊಂಡು ಏನು ಮಾಡಿತ್ತೀಯ ಎಂದು ಅವಾಚ್ಚ ಶಬ್ದಗಳಿಂದ ಬೈದು, ಕೈಗಳಿಂದ ಮತ್ತು ದೊಣ್ಣೆಗಳಿಂದ ಹೊಡೆದು  ಜಾತಿ ನಿಂದನೆ ಮಾಡಿರುತ್ತಾರೆ.   ಆರೋಪಿಗಳು ತಲೆಮರೆಸಿಕೊಂಡಿರುತ್ತಾರೆ.

ಅಸ್ವಾಭಾವಿಕ ಮರಣದ ಪ್ರಕರಣಗಳು:  ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು:  ಇಲ್ಲ

ಮುಂಜಾಗ್ರತೆ ಕ್ರಮಗಳು:  ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ:  ತಿಳಿದು ಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ರೂ.೬೫,೦೦೦/- ಮೌಲ್ಯದ ಅಕ್ರಮ ಮದ್ಯ ವಶ, ಇಬ್ಬರ ಬಂಧನ, ಮಾರುತಿ ವ್ಯಾನ್ ‍ ವಶ

October 25, 2007

 

ದಿನಾಂಕ ೨೪-೧೦-೨೦೦೭ ರಂದು ೦೮೧೫ ಗಂಟೆ ಸಮಯದಲ್ಲಿ ಗೌನಿಪಲ್ಲಿ ಪೊಲೀಸ್ ಠಾಣೆಯ ಪ್ರೋಬೇಷನರಿ ಡಿ.ಎಸ್.ಪಿ. ಶ್ರೀ ಅನಂದ್ ಕುಮಾರ್‍  ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯೊಂದಿಗೆ ಚಿಂತಾಮಣಿ – ಕಡಪ ರಸ್ತೆಯ ತಾಡಗೋಳ್ ಕ್ರಾಸ್ ಬಳಿ ದಾಳಿ ಮಾಡಿ ಅಕ್ರಮವಾಗಿ ಸಾಗಿಸುತ್ತಿದ್ದ  ರೂ.೬೫,೦೦೦/ ಮೌಲ್ಯದ ಮದ್ಯ ಮತ್ತು ಒಂದು ಮಾರುತಿ ವ್ಯಾನನ್ನು ವಶಪಡಿಸಿಕೊಂಡು  ಇಬ್ಬರನ್ನು ಬಂಧಿಸಿರುತ್ತಾರೆ.     ಈ ಸಂಬಂಧವಾಗಿ ಚಿಂತಾಮಣಿ ತಾಲೂಕು ಇರಲಹಳ್ಳಿ ಗ್ರಾಮದ ವಾಸಿ ಮಂಜುನಾಥ್ ಮತ್ತು  ಶ್ರೀನಿವಾಸಪುರ ತಾಲೂಕು ಗೌನಿಪಲ್ಲಿಯ ವಾಸಿ ಕೃಷ್ಣಪ್ಪ ಎಂಬುವರನ್ನು ಬಂಧಿಸಿ   ಮಾರುತಿ ವ್ಯಾನ್ ಸಂಖ್ಯೆ ಕೆಎ-೦೩-ಎನ್-೬೧೭೨ ಅನ್ನು ವಶಪಡಿಸಿಕೊಂಡಿರುತ್ತಾರೆ. 

ಈ ಸಂಬಂಧ ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ಅರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ.