ದಿನದ ಅಪರಾಧಗಳ ಪಕ್ಷಿನೋಟ ೩೦ ನೇ ನವೆಂಬರ್ ೦೭

November 30, 2007

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೦-೧೧-೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ೦೧

  •   ಮಾಲೂರು ಪೊಲೀಸ್ ಠಾಣೆಯಲ್ಲಿ ಸುಲಿಗೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೧೧-೨೦೦೭ ರಂದು ೨೨೦೦ ಗಂಟೆ ಸಮಯದಲ್ಲಿ ಮಾಲುರು ಪುರ ಗಾಂಧಿನಗರದ ವಾಸಿ ನರಸಮ್ಮ (೨೫) ಎಂಬುವರು ತಮ್ಮ ಮನೆಯಲ್ಲಿದ್ದರು. ಆ ಸಮಯದಲ್ಲಿ ಯಾರೋ ಹೊರಗಿನಿಂದ ಅಕ್ಕ ಎಂದು ಕೂಗಿ ಬಾಗಿಲುತಟ್ಟಿದ ಶಬ್ದ ಕೇಳಿಸಿದ್ದು ಪರಿಚಯಸ್ಥರಿರಬಹುದೆಂದು ತಿಳಿದ ನರಸಮ್ಮ ರವರು ಬಾಗಿಲು ತೆರೆದಿರುತ್ತಾರೆ. ಆಗ ಹೊರಗಿನಿಂದ ಬಂದ ಇಬ್ಬರು ಅಪರಿಚಿತರು ಬಾಗಿಲು ಮುಚ್ಚಿ ನರಸಮ್ಮರವರ ಬಾಯಿ ಮತ್ತು ಕೈಗಳನ್ನು ಕಟ್ಟಿಹಾಕಿ, ಚಾಕುವಿನಿಂದ ಬೆದರಿಸಿ ಮನೆಯ ಬೀರುವಿನಲ್ಲಿಟ್ಟಿದ್ದ ಸುಮಾರು ರೂ. ೬೦,೦೦೦/ ಬೆಲೆ ಬಾಳುವ ಬಂಗಾರದ ಒಡವೆಗಳನ್ನು ದೋಚಿಕೊಂಡು ಹೋಗಿರುತ್ತಾರೆ.

ಮನೆಗಳ್ಳತನ: ೦೧

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮನೆಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ವರದಿಯಾಗಿರುತ್ತದೆ. ಮನೆಕಳವು ಪ್ರಕರಣದಲ್ಲಿ ಆರೋಪಿಗಳಾದ ಕೋಲಾರ ತಾಲೂಕು ಬೆಳ್ಳೂರು ಗ್ರಾಮ ವಾಸಿ ಚಿನ್ನಪ್ಪ (೨೩) ಮತ್ತು ಕೋಲಾರ ಪುರ ನಿಸಾರ್ ನಗರದ ವಾಸಿ ನಾಗರಾಜ (೨೩) ಎಂಬುವರು ಕಳವು ಮಾಲಿನೊಂದಿಗೆ ಸಿಕ್ಕಿಬಿದ್ದಿರುತ್ತಾರೆ. ಆರೋಪಿಗಳು ಈಗ್ಗೆ ೧೦ ದಿನಗಳ ಹಿಂದೆ ಕೋಲಾರದ ರಹಮತ್ ನಗರದ ಒಂದು ಮನೆಯ ಡೋರ್ ಲಾಕ್ ಹೊಡೆದು ಒಳಗೆ ಪ್ರವೇಶಿಸಿ ಮನೆಯಲ್ಲಿದ್ದ ನಗದು, ಬೆಳ್ಳಿ ಹಾಗೂ ಬಂಗಾರದ ಒಡವೆಗಳನ್ನು ಕಳುವು ಮಾಡಿರುತ್ತಾರೆ. ದಿನಾಂಕ ೩೦-೧೧-೨೦೦೭ ರಂದು ೦೭೦೦ ಗಂಟೆ ಸಮಯದಲ್ಲಿ ಆರೋಪಿಗಳು ಕೋಲಾರ-ಚಿಕ್ಕಬಳ್ಳಾಪುರ ರಸ್ತೆಯ ಸಂಗೊಂಡಹಳ್ಳಿ ಬಳಿ ಕಳವುಮಾಲಿನೊಂದಿಗೆ ಅನುಮಾನಸ್ಪದವಾಗಿ ನಿಂತಿದ್ದು ಇವರನ್ನು ನೋಡಿದ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಆರಕ್ಷಕ ಉಪನಿರೀಕ್ಷಕರಾದ ಶ್ರೀ ಎಂ.ಎಸ್ ಸರ್ದಾರ್ ರವರು ವಿಚಾರ ಮಾಡಿದಾಗ ಆರೋಪಿಗಳು ಕಳ್ಳತನ ಮಾಡಿರುವ ವಿಚಾರ ಬೆಳಕಿಗೆ ಬಂದಿರುತ್ತದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿರುತ್ತೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೨

  •   ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೧೧-೨೦೦೭ ರಂದು ೧೪೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಗೋಪಸಂದ್ರ ಗ್ರಾಮದ ವಾಸಿ ನಾಗರಾಜ (೨೮) ಎಂಬುವರು ಹೀರೋಹೋಂಡಾ ಸಂಖ್ಯೆ ಕೆಎ-೦೭-ಎಲ್-೪೦೯೧ ದ್ವಿಚಕ್ರ ವಾಹನದಲ್ಲಿ ಸುಬ್ರಮಣಿ ಎಂಬುವರೊಂದಿಗೆ ಕೋಲಾರ ಹೊರವಲಯದ ಎನ್.ಹೆಚ್-೦೪ ರಸ್ತೆಯ ಸಾಯಿ ಕಲ್ಯಾಣ ಮಂಟಪದ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಎದರುಗಡೆಯಿಂದ ಬಂದ ಟೆಂಪೋ ಸಂಖ್ಯೆ ಎಪಿ-೦೩-ಯು-೨೩೯೯ ರ ಚಾಲಕ ಆಂದ್ರಪ್ರದೇಶದ ವಾಸಿ ಮುರುಗಯ್ಯ ಎಂಬುವರು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ನಾಗರಾಜ ಮತ್ತು ಸುಬ್ರಮಣಿ ರವರಿಗೆ ಗಾಯಗಳುಂಟಾಗಿರುತ್ತದೆ.

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೧೧-೨೦೦೭ ರಂದು ೦೭೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ವೇಗಮಡಗು ಗ್ರಾಮದ ವಾಸಿ ಕಿರಣ್ ಕುಮಾರ್ (೧೮) ಎಂಬುವರು ಮರಕಡಿಯುವ ಕೂಲಿ ಕೆಲಸಕ್ಕಾಗಿ ಹೋಗಿದ್ದು ಮುಳಬಾಗಿಲು ತಾಲೂಕಿನ ತಿರುಮನಹಳ್ಳಿ ಗ್ರಾಮದ ಬಳಿ ರಸ್ತೆಯ ಹುಣಸೇಮರದ ಕೆಳಗೆ ನಿಂತಿದ್ದರು. ಆ ಸಮಯದಲ್ಲಿ ಮುಳಬಾಗಿಲು ಕಡೆಯಿಂದ ಬಂದ ಟೆಂಪೋ ಸಂಖ್ಯೆ ಕೆಎ-೩೪-೨೯೬೯ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಕಿರಣ್ ಕುಮಾರ್ ರವರಿಗೆ ಗಾಯಗಳುಂಟಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೧೧-೨೦೦೭ ರಂದು ೦೯೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ತಾತಘಟ್ಟ ಗ್ರಾಮದ ವಾಸಿ ಚೆಲುವರಾಜು ಎಂಬುವರು ತಮ್ಮ ಗ್ರಾಮದಿಂದ ಮುಳಬಾಗಿಲಿಗೆ ಬಂದು ಬಸ್ ಸ್ಟಾಂಡ್ ಸಮೀಪ ನಡೆದುಕೊಂಡು ಹೋಗುತ್ತಿದ್ದರು. ಸಮಯದಲ್ಲಿ ಅಲ್ಲಿಗೆ ಬಂದ ಸಂಗಸಂದ್ರ ಗ್ರಾಮದ ವಾಸಿ ವಿಜಯಕುಮಾರ್, ಮಾರಂಡಹಳ್ಳಿ ವಾಸಿ ಚಲಪತಿ, ತಾತಘಟ್ಟ ಗ್ರಾಮದ ವಾಸಿಗಳಾದ ಆನಂದ, ದೇವರಾಜ್, ರಾಜಪ್ಪ ಇತರರು ಅಕ್ರಮಗುಂಪು ಕಟ್ಟಿಕೊಂಡು ದೊಣ್ಣೆ ಮತ್ತು ಕೈಗಳಿಂದ ಚೆಲುವರಾಜು ರವರಿಗೆ ಹೊಡೆದು ಗಾಯಪಡಿಸಿ, ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಟಿ.ನಡುಮಪಲ್ಲಿ ಅರಣ್ಯದಲ್ಲಿ ಮರ ಕಡಿದಿರುವ ಬಗ್ಗೆ ಆರೋಪಿಗಳ ವಿರುದ್ದ ಚಲುವರಾಜು ರವರು ಅರಣ್ಯ ಇಲಾಖೆಗೆ ದೂರು ನೀಡಿದ್ದು ಈ ಸಂಬಂಧ ದ್ವೇಷದಿಂದ ಆರೋಪಿಗಳು ಈ ಕೃತ್ಯ ಎಸಗಿರುತ್ತಾರೆ.

  •   ವೇಮಗಲ್ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿರುತ್ತದೆ. ದಿನಾಂಕ ೨೯-೧೧-೨೦೦೭ ರಂದು ಕೋಲಾರ ತಾಲೂಕು, ವೇಮಗಲ್ ಹೋಬಳಿ ಬೆಟ್ಟಹೊಸಪುರ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ಎರಡು ಗುಂಪುಗಳ ಜನರು ಅಕ್ರಮಗುಂಪು ಕಟ್ಟಿಕೊಂಡು ಪರಸ್ಪರ ದೊಣ್ಣೆಗಳಿಂದ, ಕೈಗಳಿಂದ ಹೊಡೆದಾಡಿಕೊಂಡು, ಅವಾಚ್ಯ ಶಬ್ದಗಳಿಂದ ಬೈದು. ಪ್ರಾಣ ಬೆದರಿಕೆ ಹಾಕಿಕೊಂಡಿರುತ್ತಾರೆ. ಇದರ ಪರಿಣಾಮ ಎರಡೂ ಗುಂಪಿನವರಿಗೂ ಗಾಯಗಳುಂಟಾಗಿರುತ್ತದೆ. ಈ ಸಂಬಂಧವಾಗಿ ದೂರುಗಳು ಮತ್ತು ಪ್ರತಿದೂರುಗಳ ದಾಖಲಾಗಿರುತ್ತದೆ. ಎರಡು ಗುಂಪಿನವರ ನಡುವೆ ಇದ್ದಂತಹ ವೈಷಮ್ಯವೇ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೯ ನೇ ನವೆಂಬರ್ ೦೭

November 29, 2007

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ -೧೧-೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೩

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೩

  •   ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೧೧-೨೦೦೭ ರಂದು ೦೯೪೫ ಗಂಟೆ ಸಮಯದಲ್ಲಿ ಕೋಲಾರ ನಗರ ಕೆ.ಪಿ.ಟಿ.ಸಿ.ಎಲ್ ಕಾಲೋನಿಯ ವಾಸಿ ಶ್ರೀಮತಿ ಶ್ಯಾಮಲಾ ರವರು ತಮ್ಮ ಗಂಡ ನಿಜಗುಣ ಆರಾಧ್ಯ ರವರೊಂದಿಗೆ ತಮ್ಮ ಟಿ.ವಿ.ಎಸ್ ಹೆವಿಡ್ಯೂಟಿ ಸಂಖ್ಯೆ ಕೆಎ-೦೬-ವಿ-೪೨೬೫ ವಾಹನದಲ್ಲಿ ಎನ್.ಹೆಚ್-೦೪ ರಸ್ತೆಯ ಹಾರೋಹಳ್ಳಿ ಗೇಟ್ ಸಮೀಪ ಬರುತ್ತಿದ್ದರು. ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಕಾರ್ ಸಂಖ್ಯೆ ಎಪಿ-೦೩-ಪಿ-೦೦೧೧ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ನಿಜಗುಣ ಆರಾದ್ಯರವರು ಕೆಳಗೆ ಬಿದ್ದಿದ್ದು ತಲೆಗೆ ಗಾಯಗಳುಂಟಾಗಿರುತ್ತದೆ.

  •   ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೩-೧೧-೨೦೦೭ ರಂದು ಬಂಗಾರಪೇಟೆ ತಾಲೂಕು ವಾಸಿ ಹರೀಶ ಎಂಬುವರು ತಮ್ಮ ಬಜಾಜ್ ಪಲ್ಸರ್ ಸಂಖ್ಯೆ ಕೆಎ-೦೭-ಎಲ್-೮೯೯೪ ವಾಹನದಲ್ಲಿ ಕೋಲಾರ ನಗರದ ಬಾಪೂಜಿ ಶಾಲೆ ಬಳಿ ಬರುತ್ತಿದ್ದರು. ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಆಟೋ ಸಂಖ್ಯೆ ಕೆಎ-೦೭-೬೯೬೮ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಹರೀಶ ರವರಿಗೆ ಗಾಯಗಳುಂಟಾಗಿದ್ದು ಕೋಲಾರದ ನೂಕಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ.

  •   ನಂಗಲಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೧೧-೨೦೦೭ ರಂದು ೧೩೪೫ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಕಸುವುಗನಹಳ್ಳಿ ಗ್ರಾಮದ ವಾಸಿ ರತ್ನಪ್ಪ ಮತ್ತು ಶ್ರೀನಿವಾಸರೆಡ್ಡಿ ರವರು ಮುಳಬಾಗಿಲಿನಿಂದ ನಂಗಲಿ ಕಡೆಗೆ ತಮ್ಮ ಟ್ರಾಕ್ಟರ್ ನಲ್ಲಿ ಹೋಗುತ್ತಿದ್ದು ಟ್ರಾಕ್ಟರ್ ಕೆಟ್ಟುಹೋದ ಪರಿಣಾಮ ಎನ್.ವಡ್ಡಹಳ್ಳಿ ಬಳಿ ನಿಲ್ಲಸಿ ಟ್ರಾಕ್ಟರ್ ನ ಟ್ರಾಲಿಯಲ್ಲಿ ಕುಳಿತಿದ್ದರು. ಆ ಸಮಯದಲ್ಲಿ ಮುಳಬಾಗಿಲು ಕಡೆಯಿಂದ ಬಂದ ಒಂದು ಖಾಸಗಿ ಬಸ್ ಸಂಖ್ಯೆ ಎಪಿ-೦೩-ಯು-೧೬೮೪ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಟ್ರಾಕ್ಟರ್ ನ ಟ್ರಾಲಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಟ್ರಾಲಿಯಲ್ಲಿ ಕುಳಿತಿದ್ದ ರತ್ನಪ್ಪ ಮತ್ತು ಶ್ರೀನಿವಾಸರೆಡ್ಡಿ ರವರಿಗೆ ಗಾಯಗಳುಂಟಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ೦೧

  •   ವೇಮಗಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೧೧-೨೦೦೭ ರಂದು ೨೩೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಬೆಟ್ಟಹೊಸಪುರ ಗ್ರಾಮದ ವಾಸಿ ರೆಡ್ಡಪ್ಪ ಎಂಬುವರ ಮೇಲೆ ಅದೇ ಗ್ರಾಮದ ವಾಸಿಗಳಾದ ಶ್ರೀನಿವಾಸ, ರಾಜೇಶ ಮತ್ತು ಶಿವ ಎಂಬುವರು ಜಗಳ ತೆಗೆದು ದೊಣ್ಣೆಗಳಿಂದ, ಕಲ್ಲಿನಿಂದ ಹಾಗೂ ಕೈಗಳಿಂದ ಹೊಡೆದು ತೀವ್ರ ಗಾಯಗಳನ್ನುಂಟು ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ. ಪರಸ್ಪರರ ಮದ್ಯೆ ಇದ್ದಂತಹ ವೈಯಕ್ತಿಕ ದ್ವೇಷವೆ ಈ ಕೃತ್ಯಕ್ಕೆ ಕಾರಣವಾಗಿರುವುದಾಗಿ ತಿಳಿದು ಬಂದಿರುತ್ತದೆ.

ದೊಂಬಿ: ೦೨

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೧೧-೨೦೦೭ ರಂದು ೨೦೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಗರುಡಪಾಳ್ಯ ಗ್ರಾಮದ ವಾಸಿ ಮುನಿಸ್ವಾಮಿ (೪೬) ಎಂಬುವರು ತಮ್ಮ ವಾಸದ ಮನೆಯಲ್ಲಿದ್ದರು. ಆ ಸಮಯದಲ್ಲಿ ಅಲ್ಲಿಗೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಸಬ್ ಇನ್ಸ್ ಪೆಕ್ಟರ್ ಕರೆಯುತ್ತಿರುವುದಾಗಿ ಸುಳ್ಳು ಹೇಳಿ ಮುನಿಸ್ವಾಮಿ ರವರನ್ನು ತಮ್ಮ ಕಾರಿನಲ್ಲಿ ಹತ್ತಿಸಿಕೊಂಡು ಕೈಗಳಿಂದ ಹೊಡೆದು ಕಾಲುಗಳಿಂದ ಒದ್ದಿರುತ್ತಾರೆ. ಕಾರಿನಲ್ಲಿದ್ದವರಲ್ಲಿ ದೊಡ್ಡ ಹಸಾಳ ಗ್ರಾಮದ ಚಲಪತಿ ಮತ್ತು ಚಿಕ್ಕಹಸಾಳದ ಬಾಬು ಎಂಬುವರನ್ನು ಗುರ್ತಿಸಿರುವುದಾಗಿ ಮುನಿಸ್ವಾಮಿ ರವರು ತಮ್ಮ ದೂರಿನಲ್ಲಿ ತಿಳಿಸಿರುತ್ತಾರೆ. ಮುನಿಸ್ವಾಮಿರವರಿಗೂ ಮತ್ತು ಅದೇ ಗ್ರಾಮದ ಯಳ್ಳಮ್ಮ ಎಂಬುವರಿಗೆ ಹಳೇಮನೆಯೊಂದಕ್ಕೆ ಸಂಬಂಧಿಸಿದಂತೆ ತಕರಾರುಗಳಿದ್ದು ಈ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರುವುದಾಗಿ ತಿಳಿದು ಬಂದಿರುತ್ತದೆ.

  •   ವೇಮಗಲ್ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೧೧-೨೦೦೭ ರಂದು ೦೭೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಬೆಟ್ಟ ಹೊಸಪುರ ಗ್ರಾಮದಲ್ಲಿ ಪ್ರಕರಣ ಸಂಭವಿಸಿರುತ್ತೆ. ಬೆಟ್ಟಹೊಸಪುರ ಗ್ರಾಮದ ವಾಸಿ ಪರಮೇಶ ಎಂಬುವರ ಮೇಲೆ ಆರೋಪಿಗಳಾದ ಅದೇ ಗ್ರಾಮದಲ್ಲಿ ವಾಸವಾಗಿರುವ ಸತೀಶ, ಅದಾನಂದ, ರಾಜೇಶ, ರಾಜಣ್ಣ, ಶಿವಕುಮಾರ, ಕೆಪ್ಪಾರೆಡ್ಡಿ ಮತ್ತು ಬೈರಾರೆಡ್ಡಿ ಎಂಬುವರು ಜಗಳ ತೆಗೆದು ದೊಣ್ಣೆಗಳಿಂದ ಕಲ್ಲುಗಳಿಂದ ಹೊಡೆದು ಗಾಯ ಪಡಿಸಿ, ಅವಾಚ್ಯ ಶಬ್ದಗಳಿಂದ ಬೈದು, ಪ್ರಾಣ ಬೆದರಿಕೆ ಹಾಕಿರುತ್ತಾರೆ. ಪರಸ್ಪರ ಮದ್ಯೆ ಇದ್ದಂತಹ ವೈಯಕ್ತಿಕ ದ್ವೇಷ ಕೃತ್ಯಕ್ಕೆ ಕಾರಣವಾಗಿರುವುದಾಗಿ ತಿಳಿದು ಬಂದಿರುತ್ತದೆ.

ಹಲ್ಲೆ: ೦೧

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೧೧-೨೦೦೭ ರಂದು ೧೬೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಗರುಡಹಳ್ಳಿ ಗ್ರಾಮದ ವಾಸಿ ಶ್ರೀಮತಿ ಯಳ್ಳಮ್ಮ ಎಂಬುವರು ತಮ್ಮ ಮನೆಯಲ್ಲಿದ್ದರು. ಆ ಸಮಯದಲ್ಲಿ ಅಲ್ಲಿಗೆ ಬಂದ ಮುನಿಸ್ವಾಮಿ ಹಾಗೂ ಅವರ ಮಗ ಅಂಬರೀಶ್ ಎಂಬುವರು ಯಲ್ಲಮ್ಮ ಮನೆಯ ಮುಂದೆ ಇದ್ದ ಕಲ್ಲುಗಳನ್ನು ತೆಗೆಯಲು ಪ್ರಯತ್ನಿಸುತ್ತಿದ್ದರು. ಇದರ ಬಗ್ಗೆ ಪ್ರಶ್ನಿಸಿದ ಯಲ್ಲಮ್ಮ ರವರ ಮೇಲೆ ಮುನಿಸ್ವಾಮಿ ಮತ್ತು ಅಂಬರೀಶ್ ರವರು ಜಗಳ ತೆಗೆದು ಕೈಗಳಿಂದ ಮತ್ತು ದೊಣ್ಣೆಯಿಂದ ಹೊಡೆದು ಗಾಯಪಡಿಸಿರುತ್ತಾರೆ. ಯಲ್ಲಮ್ಮ ರವರಿಗೂ ಮತ್ತು ಮುನಿಸ್ವಾಮಿ ಎಂಬುವರಿಗೆ ಹಳೇಮನೆಯೊಂದಕ್ಕೆ ಸಂಬಂಧಿಸಿದಂತೆ ತಕರಾರುಗಳಿದ್ದು ಹಿನ್ನೆಲೆಯಲ್ಲಿ ಕೃತ್ಯ ನಡೆದಿರುವುದಾಗಿ ತಿಳಿದು ಬಂದಿರುತ್ತದೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಞಿನೋಟ ೨೮ ನೇ ನವೆಂಬರ್ ೦೭

November 28, 2007

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮-೧೧-೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ೦೧

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೧೧-೨೦೦೭ ರಂದು ೧೫೩೦ ಗಂಟೆ ಸಮಯದಲ್ಲಿ ಬೆಂಗಳೂರಿನ ಉಳ್ಳಾಲ ಉಪನಗರದ ವಾಸಿ ಶಿವಾರೆಡ್ಡಿ (೪೪) ಎಂಬುವರು ತಮ್ಮ ಕುಟುಂಬದೊಡನೆ ಮಾರುತಿ ಓಮನಿ ಕಾರ್ ಸಂಖ್ಯೆ ಕೆಎ-೦೪-ಎಂಬಿ-೨೬೮೪ ವಾಹನದಲ್ಲಿ ಕೋಲಾರದಿಂದ ಬೆಂಗಳೂರಿಗೆ ಹೋಗುವ ಸಲುವಾಗಿ ಎನ್.ಹೆಚ್-೦೪ ರಸ್ತೆಯ ಮಡೇರಹಳ್ಳಿ ಬಳಿ ಹೋಗುತ್ತಿದ್ದರು. ಸಮಯದಲ್ಲಿ ಎದುರುಗಡೆಯಿಂದ ಬಂದ ಒಂದು ಕೆ.ಎಸ್.ಆರ್.ಟಿ.ಸಿ ಬಸ್ ಸಂಖ್ಯೆ ಕೆಎ-೦೭-ಎಫ್-೧೨೨೦ ಚಾಲಕ ಸಹೂರಾವ್ ಎಂಬುವರು ತನ್ನ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಶಿವಾರೆಡ್ಡಿ ರವರು ಹೋಗುತ್ತಿದ್ದ ಕಾರ್ ಗೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಶಿವಾರೆಡ್ಡಿ, ಅವರ ಮಕ್ಕಳಾದ ಬ್ರಹ್ಮಿಣಿ ಹಾಗೂ ಪೃತ್ವಿ ಎಂಬುವರಿಗೆ ಗಾಯಗಳಾಗಿದ್ದು ಶಿವಾರೆಡ್ಡಿ ರವರ ಹೆಂಡತಿ ಅಮರಾವತಿ ಎಂಬುವರಿಗೆ ತೀವ್ರ ಗಾಯಗಳಾಗಿದ್ದು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.

-ಸಾಧಾರಣ: ೦೧

  •   ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೧೧-೨೦೦೭ ರಂದು ೦೯೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಪಾಣಕಲ್ಲಹಳ್ಳಿ ಗ್ರಾಮದ ವಾಸಿ ಕೆ.ಎಲ್.ಪಿಳ್ಳಪ್ಪ (೪೦) ಎಂಬುವರು ತಮ್ಮ ಆಟೋ ಸಂಖ್ಯೆ ಕೆಎ-೦೧-೭೧೬೦ ವಾಹನವನ್ನು ಚಾಲನೆ ಮಾಡಿಕೊಂಡು ಎನ್.ಹೆಚ್-೦೪ ರಸ್ತೆಯ ಪಾಣಕಲ್ಲಹಳ್ಳಿ ಕ್ರಾಸ್ ಬಳಿ ಹೋಗುತ್ತಿದ್ದರು. ಸಮಯದಲ್ಲಿ ಎದುರುಗಡೆಯಿಂದ ಬಂದ ಒಂದು ಕಾರ್ ಸಂಖ್ಯೆ ಕೆಎ-೦೪-ಎಂಬಿ-೯೫೬೧ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಪಿಳ್ಳಪ್ಪ ರವರಿಗೆ ಗಾಯಗಳುಂಟಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ೦೧

  •   ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ನಿರ್ಲಕ್ಷ್ಯತೆಯಿಂದ ಮರಣವನ್ನುಂಟು ಮಾಡಿರುವುದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಪ್ರಕರಣವು ದಿನಾಂಕ ೨೮-೧೧-೨೦೦೭ ರಂದು ಕೋಲಾರ ನಗರ ಕ್ಲಾಕ್ ಟವರ್ ಬಳಿ ವಾಸವಾಗಿರುವ ಕಲಿಂಉಲ್ಲಾಖಾನ್ ರವರ ದೂರಿನ ಆಧಾರದ ಮೇಲೆ ದಾಖಲಾಗಿರುತ್ತದೆ. ಕಲೀಂಉಲ್ಲಾಖಾನ್ ರವರ ಪತ್ನಿ ಪರ್ವೇಜ್ ಫಾತಿಮಾ ರವರು ದಿನಾಂಕ ೩೦-೧೦-೨೦೦೭ ರಂದು ಹೊಟ್ಟೆನೋವಿನ ಸಲುವಾಗಿ ಕೋಲಾರದ ಹೋಪ್ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಯಶವಂತ್ ವಿಟ್ಲೆ ರವರು ಅದೇ ದಿನ ಪರ್ವೇಜ್ ಫಾತಿಮಾ ರವರಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದು ಮುಂದಿನ ಚಿಕಿತ್ಸೆಗಾಗಿ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪರ್ವೇಜ್ ಫಾತಿಮಾ ರವರು ದಿನಾಂಕ ೦೫-೧೧-೨೦೦೭ ರಂದು ೧೩೦೫ ಗಂಟೆಗೆ ಮೃತಪಟ್ಟಿರುತ್ತಾರೆ. ಸಂಬಂಧ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ಕಲೀಂಉಲ್ಲಾ ಖಾನ್ ರವರು ದಿನಾಂಕ ೨೮-೧೧-೨೦೦೭ ರಂದು ನೀಡಿದ ತಮ್ಮ ದೂರಿನಲ್ಲಿ ಫರ್ವೇಜ್ ಫಾತಿಮಾ ರವರ ಸಾವಿಗೆ ಹೋಪ್ ಹೆಲ್ತ್ ಕೇರ್ ಆಸ್ಪತ್ರೆಯ ವೈದ್ಯರಾದ ಡಾ.ಯಶವಂತ್ ವಿಟ್ಲೆ ರವರ ನಿರ್ಲಕ್ಷ್ಯತೆಯೇ ಕಾರಣವಾಗಿರುವುದಾಗಿ ಆಪಾದಿಸಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

  •   ಮಾಲೂರು ಪೊಲೀಸ್ ಠಾಣೆಯಲ್ಲಿ ಅಕ್ರಮ ಮರಳು ಸಾಗಾಣಿಕೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೧೧-೨೦೦೭ ರಂದು ೨೦೨೦ ಗಂಟೆ ಸಮಯದಲ್ಲಿ ಕೆಎ-೦೫-ಸಿ-೯೭೫೮ ಸಂಖ್ಯೆ ಲಾರಿಯಲ್ಲಿ ಲಾರಿಯ ಚಾಲಕ ಸೋಮಶೇಖರ್ (೩೭) ಎಂಬುವರು ಮಾಲೂರು ನಗರ ಬಲಾಜಿ ವೃತ್ತದ ಬಳಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದರು. ಸಮಯದಲ್ಲಿ ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿಯಾದ ಕೋಲಾರ ನಗರ ವಾಸಿ ನಾಗೇಂದ್ರಪ್ಪ ಎಂಬುವರು ಲಾರಿಯನ್ನು ವಶಪಡಿಸಿಕೊಂಡು ಆರೋಪಿ ಸಮೇತ ಪೊಲೀಸ್ ಠಾಣೆಯಲ್ಲಿ ಹಾಜರು ಪಡಿಸಿರುತ್ತಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದು ನ್ಯಾಯಾಲಯ ಆರೋಪಿಯನ್ನು ದಿನಾಂಕ ೦೩-೧೨-೨೦೦೭ ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ಜೂಜಾಟ ದಾಳಿ: ೧೫ ಜನರ ಬಂಧನ, ರೂ ೭೧೦ ವಶ.

November 28, 2007

ದಿನಾಂಕ ೨೭-೧೧-೨೦೦೭ ರಂದು ೧೧೩೦ ಗಂಟೆಗೆ ಮಾಸ್ತಿ ಪೊಲೀಸ್ ಠಾಣೆಯ  ಆರಕ್ಷಕ ಉಪನಿರೀಕ್ಷಕರಾದ ಶ್ರೀ ರಾಘವೇಂದ್ರನ್ ರವರು ತಮಗೆ ದೊರೆತ ಖಚಿತ ವರ್ತಮಾನದ ಮೇಲೆ ತಮ್ಮ ಸಿಬ್ಬಂದಿಯೊಡನೆ ಮಾಸ್ತಿ ಹೋಬಳಿಯ ರಾಜೇನಹಳ್ಳಿ ಕೆರೆ ಬಳಿ ದಾಳಿ ನಡೆಸಿ ಕೋಳಿ ಪಂದ್ಯದ  ಜೂಜಾಟದಲ್ಲಿ ನಿರತರಾಗಿದ್ದ ೧೫ ಜನ ಆರೋಪಿಗಳನ್ನು ಸ್ಳಳದಲ್ಲಿಯೇ ಬಂಧಿಸಿರುತ್ತಾರೆ. ಕಾರ್ಯಾರಚರಣೆ ವೇಳೆ ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ ರೂ ೭೧೦/ ನಗದು, ೫ ದ್ವಿಚಕ್ರವಾಹನಗಳು ಹಾಗೂ ೪ ಹುಂಜಗಳನ್ನು ವಶಪಡಿಸಿಕೊಂಡಿರುತ್ತಾರೆ. 

ಬಂಧಿತ ಆರೋಪಿಗಳ ವಿವರ

  1. ಶ್ರೀನಿವಾಸ (೩೫)
  2. ಮುನಿಯಪ್ಪ (೩೫), ನೆಲ್ಲಹಳ್ಳಿ, ಮಾಲೂರು ತಾಲೂಕು.
  3. ನಾಗೇಶ (೨೨), ಅಸಂಬಳ್ಳಿ,  ಮಾಲೂರು ತಾಲೂಕು.
  4. ಗೋವಿಂದಪ್ಪ (೩೦), ಮುಪ್ಪರಹಳ್ಳಿ,  ಮಾಲೂರು ತಾಲೂಕು.
  5. ಪೂಜಾರಪ್ಪ (೪೩), ರಾಜೇನಹಳ್ಳಿ,  ಮಾಲೂರು ತಾಲೂಕು.
  6. ಆನಂದ (೩೫), ನಲ್ಲಾಂಡಹಳ್ಳಿ, ಮಾಲೂರು ತಾಲೂಕು.
  7. ರಾಮಕೃಷ್ಣಪ್ಪ (೪೫), ದೊಡ್ಡ ಕಲ್ಲಹಳ್ಳಿ, ಮಾಲೂರು ತಾಲೂಕು.
  8. ಉತ್ತಪ್ಪ (೩೫), ರಾಜೇನಹಳ್ಳಿ,  ಮಾಲೂರು ತಾಲೂಕು.
  9. ಶ್ರೀಕಂಠಪ್ಪ (೬೦), ಮಾರಂಗಪುರ,  ಮಾಲೂರು ತಾಲೂಕು.
  10. ಮುನಿಯಪ್ಪ (೬೫), ಜನಗತಿಮ್ಮನಹಳ್ಳಿ, ಮಾಲೂರು ತಾಲೂಕು.
  11. ರಾಜಪ್ಪ (೪೫), ಅದಿಕಾರಹಟ್ಟಿ, ಮಾಲೂರು ತಾಲೂಕು.
  12. ಮುನಿಯಪ್ಪ (೬೫), ಬೂಧಿಕೋಟೆ.
  13. ಮಾರಪ್ಪ (೬೫), ಗೊಲ್ಲಹಳ್ಳಿ, ಮಾಲೂರು ತಾಲೂಕು.
  14. ಮಂಜು (೨೪), ಮುಪ್ಪರಹಳ್ಳಿ, ಮಾಲೂರು ತಾಲೂಕು.
  15. ನಾರಾಯಣಸ್ವಾಮಿ (೩೬), ದೊಡ್ಡಕಲ್ಲಹಳ್ಳಿ, ಮಾಲೂರು ತಾಲೂಕು. 

ಈ ಸಂಬಂಧವಾಗಿ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಬಂಧಿತ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. 


ನಾಗರೀಕ / ಮಹಿಳಾ ಪೊಲೀಸ್ ಪೇದೆ ಹುದ್ದೆಗಳ ನೇರ ನೇಮಕಾತಿ ಸಲುವಾಗಿ ದೇಹದಾರ್ಡ್ಯತೆ / ದೈಹಿಕ ಸಾಮರ್ಥ್ಯ ಪರೀಕ್ಷೆ

November 28, 2007

ಕೋಲಾರ ಜಿಲ್ಲಾ ಪೊಲೀಸ್ ಘಟಕದಲ್ಲಿ ಖಾಲಿ ಇರುವ ನಾಗರೀಕ ಪೊಲೀಸ್ ಪೇದೆ ಹಾಗೂ ಮಹಿಳಾ ಪೊಲೀಸ್ ಪೇದೆ ಹುದ್ದೆಗಳ ನೇರ ನೇಮಕಾತಿ ಸಂಬಂಧವಾಗಿ ಕೋಲಾರ ಪೊಲೀಸ್ ಕವಾಯತು ಮೈದಾನದಲ್ಲಿ ದೇಹದಾರ್ಡ್ಯತೆ / ದೈಹಿಕ ಸಾಮರ್ಥ್ಯ ಪರೀಕ್ಷೆಗಳನ್ನು ಏರ್ಪಡಿಸಲಾಗಿರುತ್ತದೆ.

ಪುರುಷ ಅಭ್ಯರ್ಥಿಗಳಿಗೆ ದಿನಾಂಕ ೦೩-೧೨-೨೦೦೭  ರಿಂದ ದಿನಾಂಕ ೦೭-೧೨-೨೦೦೭ ರವರೆಗೆ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ದಿನಾಂಕ ೦೮-೧೨-೨೦೦೭ ರಂದು ದೇಹದಾರ್ಡ್ಯತೆ / ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯುತ್ತದೆ.  ಪರೀಕ್ಷೆ ಮೇಲ್ಕಂಡ ದಿನಾಂಕಗಳಂದು ಬೆಳಗ್ಗೆ ೦೮೦೦ ಗಂಟೆಗೆ ಪ್ರಾರಂಭವಾಗಲಿದ್ದು ಈಗಾಗಲೇ : ಅನುಪಾತದಂತೆ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ಹಾಜರಾತಿ ಹಾಳೆಗಳನ್ನು ಕಳುಹಿಸಿಕೊಡಲಾಗಿರುತ್ತದೆ.

ದಿನಾಂಕ

ರೋಲ್ ನಂಬರ್

ಅರ್ಹ ಅಭ್ಯರ್ಥಿಗಳು

ಇಂದ

ವರೆಗೆ

೦೩-೧೭-೦೭

೬೧೧೦೦೮

೬೧೧೮೧೧

೧೧೫ ಜನ ಅರ್ಹ ಪುರುಷ ಅಭ್ಯರ್ಥಿಗಳು

೦೪-೧೨-೦೭

೬೧೧೮೧೭

೬೧೨೫೭೨

೧೧೫ ಜನ ಅರ್ಹ ಪುರುಷ ಅಭ್ಯರ್ಥಿಗಳು

೦೫-೧೨-೦೭

೬೧೨೫೭೪

೬೧೩೬೦೨

೧೧೫ ಜನ ಅರ್ಹ ಪುರುಷ ಅಭ್ಯರ್ಥಿಗಳು

೦೬-೧೨-೦೭

೬೧೩೬೦೭

೬೧೪೫೭೫

೧೧೫ ಜನ ಅರ್ಹ ಪುರುಷ ಅಭ್ಯರ್ಥಿಗಳು

೦೭-೧೨-೦೭

೬೧೪೫೮೨

೬೧೫೬೭೦

೧೧೫ ಜನ ಅರ್ಹ ಪುರುಷ ಅಭ್ಯರ್ಥಿಗಳು

೦೮-೧೨-೦೭

೬೧೧೦೧೦

೬೧೫೬೬೬

೧೪೧ ಜನ ಅರ್ಹ ಮಹಿಳಾ ಅಭ್ಯರ್ಥಿಗಳು


ದಿನದ ಅಪರಾಧಗಳ ಪಕ್ಷಿನೋಟ ೨೭ ನೇ ನವೆಂಬರ್ ೦೭

November 27, 2007

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ -೧೧-೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೧೧-೨೦೦೭ ರಂದು ರಾತ್ರಿ ಮುಳಬಾಗಿಲು ತಾಲೂಕಿನ ಬಲ್ಲ ಗ್ರಾಮದಲ್ಲಿರುವ ಶ್ರೀಮತಿ ಮುನಿವೆಂಕಟಮ್ಮ ರವರ ಜಮೀನಿನ ಬಳಿ ಕೃತ್ಯ ಸಂಭವಿಸಿರುತ್ತದೆ. .ವೈ.ಟಿ ಐ.ಐ ಸ್ಥಾವರಕ್ಕೆ ವಿದ್ಯುತ್ ಸರಬರಾಜು ಆಗುತ್ತಿರುವ ೧೫ ಕೆ.ವಿ ವಿದ್ಯುತ್ ಪರಿವರ್ತಕದ ೩ ತಾಮ್ರದ ಕಾಯಿಲ್ ಗಳನ್ನು ಕೆಡವಿ ಅವುಗಳಲ್ಲಿದ್ದ ತಾಮ್ರದ ತಂತಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ತಾಮ್ರದ ತಂತಿಗಳ ಒಟ್ಟು ಮೌಲ್ಯ ರೂ. ೪೩,೮೬೨/ ಆಗಿರುತ್ತದೆ.

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೧

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ನಿಷೇದ ಕಾಯ್ದೆ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣವು ದಿನಾಂಕ ೨೬-೧೧-೨೦೦೭ ರಂದು ಬೆಂಗಳೂರು ನಗರದ ವಾಸಿ ಶ್ರೀಮತಿ ಶಾಂತಲಕ್ಷ್ಮಿ ರವರ ದೂರಿನ ಆಧಾರದ ಮೇರೆಗೆ ದಾಖಲಾಗಿರುತ್ತದೆ. ಶಾಂತಲಕ್ಷ್ಮಿ ರವರು ದಿನಾಂಕ ೦೪-೦೫-೨೦೦೭ ರಂದು ಮುಳಬಾಗಿಲು ನಗರದ ವಾಸಿ ಬದ್ರಿನಾಥ್ ಎಂಬುವರೊಂದಿಗೆ ವಿವಾಹವಾಗಿರುತ್ತಾರೆ. ವಿವಾಹವಾದ ಎರಡು ತಿಂಗಳ ನಂತರ ಬದ್ರಿನಾಥ್ ರವರು ತನ್ನ ತಂದೆ ತಾಯಿ ಹಾಗೂ ತಂಗಿಯೊಂದಿಗೆ ಸೇರಿಕೊಂಡು ಶಾಂತಲಕ್ಷ್ಮಿರವರಿಗೆ ಮನೆಯಿಂದ ಪಾತ್ರೆ ಸಾಮಗ್ರಿಗಳನ್ನು ತರುವಂತೆ ಒತ್ತಾಯಿಸಿರುವುದಾಗಿ ಹಾಗೂ ಪಾತ್ರೆ ಸಮಾನುಗಳನ್ನು ತಂದು ನೀಡಿದ್ದರೂ ಸಹಾ ಸೀಮೆಎಣ್ಣೆ ಸುರಿದು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆಂದು ಶಾಂತಲಕ್ಷ್ಮಿರವರು ತನ್ನ ದೂರಿನಲ್ಲಿ ಆಪಾದಿಸಿರುತ್ತಾರೆ.

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ೦೧

  •   ವೇಮಗಲ್ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೯-೧೧-೨೦೦೭ ರಂದು ೦೯೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಬೆಳ್ಳೂರು ಗ್ರಾಮದ ವಾಸಿ ಮುನಿಯಪ್ಪ ಎಂಬುವರು ಎನ್.ಹೆಚ್-೪ ರಸ್ತೆಯ ಆಲ್ಪಿನ್ ಫ್ಯಾಕ್ಟರಿ ಬಳಿ ನಡೆದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಕೆಎ-೦೭-ಜೆಡ್-೧೫೭೭ ಸಂಖ್ಯೆಯ ಟಿ.ವಿ.ಎಸ್ ವಿಕ್ಟರ್ ದ್ವಿಚಕ್ರ ವಾಹನದ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಡಿಕ್ಕಿ ಹೊಡೆದ ಪರಿಣಾಮ ಮುನಿಯಪ್ಪ ರವರ ತಲೆಗೆ ಗಾಯಗಳುಂಟಾಗಿದ್ದು ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಸಂಬಂಧ ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ದಿನಾಂಕ ೨೬-೧೧-೨೦೦೭ ರಂದು ೧೮೦೦ ಗಂಟೆ ಸಮಯದಲ್ಲಿ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುನಿಯಪ್ಪರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.

-ಸಾಧಾರಣ: ೦೧

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೧೧-೨೦೦೭ ರಂದು ೧೩೩೦ ಗಂಟೆ ಸಮಯದಲ್ಲಿ ಬೆಂಗಳೂರು ಕೋರಮಂಗಲದ ವಾಸಿ ಅರ್ಜುನ್ ಎಂಬುವರು ತಮ್ಮ ಕುಟುಂಬದೊಂದಿಗೆ ತಿರುಪತಿಗೆ ಹೋಗುವ ಸಲುವಾಗಿ ತಮ್ಮ ಕಾರ್ ಸಂಖ್ಯೆ ಕೆಎ-೦೧-ಜೆಡ್-೭೧೯೨ ರಲ್ಲಿ ಮುಳಬಾಗಿಲು ಹೊರವಲಯ ಎನ್.ಹೆಚ್-೦೪ ರಸ್ತೆಯ ಕೆ.ಬೈಪಲ್ಲಿ ಕ್ರಾಸ್ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಪಕ್ಕದ ತಿರುವಿನಿಂದ ಮುಳಬಾಗಿಲು ಕಡೆಗೆ ಬಂದ ಒಂದು ಟೆಂಪೋ ಸಂಖ್ಯೆ ಎಪಿ-೦೩-ಯು-೫೧೭೪ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಕಾರಿನಲ್ಲಿದ್ದ ಅರ್ಜುನ್, ಅವರ ತಾಯಿ, ಹೆಂಡತಿ ಮತ್ತು ಮಗನಿಗೆ ಗಾಯಗಳುಂಟಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

  •   ನಂಗಲಿ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲೂಕು ಕಿರುಮಣಿ ಗ್ರಾಮದ ವಾಸಿ ಶ್ರೀಮತಿ ಕೃಷ್ಣವೇಣಿ ಮತ್ತು ಅದೇ ಗ್ರಾಮದ ವಾಸಿ ಲಕ್ಷ್ಮಯ್ಯ ಎಂಬುವರಿಗೆ ಮುಳಬಾಗಿಲು ತಾಲೂಕು ನಾಗನಹಳ್ಳಿ ಗ್ರಾಮದ ಸರ್ವೆ ನಂಬರ್ ೧೧ ಜಮೀನಿಗೆ ಸಂಬಂಧಿಸಿದಂತೆ ತಕರಾರುಗಳಿದ್ದು ದಿನಾಂಕ ೨೬-೧೧-೨೦೦೭ ರಂದು ೧೦೦೦ ಗಂಟೆ ಸಮಯದಲ್ಲಿ ಸರ್ವೆ ನಂಬರ್ ೧೧ ರ ಜಮೀನಿನಲ್ಲಿ ಎರಡೂ ಗುಂಪಿನವರು ಅಕ್ರಮ ಗುಂಪು ಕಟ್ಟಿಕೊಂಡು ಒಬ್ಬರಿಗೊಬ್ಬರು ದೊಣ್ಣೆಗಳಿಂದ, ಕೈಗಳಿಂದ ಹೊಡೆದಾಡಿಕೊಂಡು ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿಕೊಂಡಿರುತ್ತಾರೆ. ಇದರ ಪರಿಣಾಮ ಶ್ರೀಮತಿ ಕೃಷ್ಣವೇಣಿ, ಲಕ್ಷ್ಮಯ್ಯ ಮತ್ತು ರಾಮಕೃಷ್ಣಪ್ಪ ರವರಿಗೆ ಗಾಯಗಳುಂಟಾಗಿರುತ್ತದೆ. ಈ ಸಂಬಂಧ ದೂರು ಮತ್ತು ಪ್ರತಿ ದೂರು ದಾಖಲಾಗಿರುತ್ತದೆ.

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು:ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೬ ನೇ ನವೆಂಬರ್ ೦೭

November 26, 2007

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ -೧೧-೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ೦೧

  •   ಮಾಸ್ತಿ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲೂಕು ಮರಕನಹಳ್ಳಿ ಗ್ರಾಮದ ವಾಸಿ ನೀಲಮ್ಮ (೪೫) ಎಂಬುವರು ಕೊಲೆಯಾಗಿರುತ್ತಾರೆ. ದಿನಾಂಕ ೨೪-೧೧-೨೦೦೭ ರಂದು ೨೩೦೦ ಗಂಟೆಯಿಂದ ೦೦೦೦ ಗಂಟೆ ನಡುವಿನ ಸಮಯದಲ್ಲಿ ನೀಲಮ್ಮರವರ ಗಂಡ ವೆಂಕಟರಾಮಪ್ಪ (೫೦) ಇವರ ತಮ್ಮಂದಿರಾದ ಮುನಿಯಪ್ಪ ಮತ್ತು ಮುನಿರಾಜು ಎಂಬುವರು ಸೇರಿಕೊಂಡು ನೀಲಮ್ಮರವರ ಮೇಲೆ ಜಗಳ ತೆಗೆದು ಹೊಡೆದು ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ ಬಲವಂತವಾಗಿ ವಿಷಪ್ರಾಶನ ಮಾಡಿಸಿರುತ್ತಾರೆ. ವಿಷ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡ ನೀಲಮ್ಮರವರು ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಮೃತಪಟ್ಟಿರುತ್ತಾರೆ. ಗಂಡ ಮತ್ತು ಹೆಂಡತಿ ನಡುವೆ ಮನಃಸ್ತಾಪಗಳಿದ್ದುದರಿಂದ ಆರೋಪಿಗಳು ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದಿರುತ್ತದೆ.

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

  •   ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರ ವೀರಾಂಜನೇಯ ನಗರದ ವಾಸಿ ಪೆದ್ದಾಯಮ್ಮ ಎಂಬುವರ ಮನೆಯ ಮುಂದೆ ಇಟ್ಟದ್ದ ಎಲೆಕ್ಟ್ರಿಕ್ ಗೈ ವೈರ್ ಕಳುವಾಗಿರುತ್ತದೆ. ಪೆದ್ದಾಯಮ್ಮರವರ ಮಗ ವಿದ್ಯುತ್ ಗುತ್ತಿಗೆದಾರನಾಗಿದ್ದು ಇವರ ಮನೆಯ ಮುಂದೆ ಇಟ್ಟ ಎಲೆಕ್ಟ್ರಿಕ್ ಗೈ ವೈರನ್ನು ದಿನಾಂಕ ೨೪-೧೧-೨೦೦೭ ರಂದು ರಾತ್ರಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ವೈರ್ ನ ಒಟ್ಟು ಬೆಲೆ ಸುಮಾರು ರೂ. ೨೫,೦೦೦/ ಆಗಿರುತ್ತದೆ.

ವಾಹನ ಕಳ್ಳತನ : ೦೧

  •   ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರ ಮುನೇಶ್ವರ ನಗರದ ವಾಸಿ ಶ್ರೀ ಎನ್.ಮುನಿರತ್ನಯ್ಯ ಎಂಬುವರ ಸೈಕಲ್ ಕಳುವಾಗಿರುತ್ತದೆ. ದಿನಾಂಕ ೨೫-೧೧-೨೦೦೭ ರಂದು ೧೭೩೦ ಗಂಟೆ ಸಮಯದಲ್ಲಿ ಮುನಿರತ್ನಯ್ಯ ರವರ ಮಗ ಪ್ರದೀಪ್ ಕುಮಾರ್ ರವರು ಡೂಮ್ ಲೈಟ್ ವೃತ್ತದಬಳಿ ಇರುವ ಎಸ್..ಸಿ..ಟಿ.ಎಸ್ ಟ್ಯೂಷನ್ ರೂಂ ಬಳಿ ನಿಲ್ಲಿಸಿದ್ದ ಅಟ್ಲಾಸ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಸೈಕಲ್ ಬೆಲೆ ರೂ. ,೪೫೯/ ಆಗಿರುತ್ತದೆ.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ೦೧

  •   ಮಾಲೂರು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೧೧-೨೦೦೭ ರಂದು ೧೮೪೫ ಗಂಟೆಗೆ ಕೋಲಾರ ತಾಲೂಕು ಮಟ್ನಹಳ್ಳಿ ಗ್ರಾಮದ ಸುಬ್ರಮಣಿ ಎಂಬುವರು ಮಾಲೂರಿನಿಂದ ಕೋಲಾರಕ್ಕೆ ಹೋಗುವ ಸಲುವಾಗಿ ತಮ್ಮ ಟಿ.ವಿ.ಎಸ್ ಸ್ಟಾರ್ ಸಿಟಿ ದ್ವಿಚಕ್ರ ವಾಹನದಲ್ಲಿ ಮಾಲೂರಿನ ಜೆ.ಎಸ್.ಎಸ್ ಶಾಲೆಯ ಮುಂಬಾಗ ಹೋಗುತ್ತಿದ್ದರು. ಆ ಸಮಯದಲ್ಲಿ ಕೋಲಾರ ಕಡೆಯಿಂದ ಬಂದ ಹೀರೋಹೋಂಡಾ ಪ್ಯಾಷನ್ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೮-ಜೆ-೩೬೪ ರ ಚಾಲಕ ಮೋಹನ್ ಎಂಬುವರು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮುಖಾಮುಖಿ ಡಿಕ್ಕಿ ಹೊಡೆದಿರುತ್ತಾರೆ. ಇದರ ಪರಿಣಾಮ ಸುಬ್ರಮಣಿರವರ ತಲೆ, ಕಿವಿ ಹಾಗೂ ಮೂಗಿಗೆ ತೀವ್ರ ಗಾಯಗಳಾಗಿದ್ದು ಆಸ್ಪತ್ರೆಗೆ ಸಾಗಿಸುವಾಗಿ ಮಾರ್ಗ ಮದ್ಯದಲ್ಲಿ ಮೃತಪಟ್ಟಿರುತ್ತಾನೆ.

-ಸಾಧಾರಣ: ೦೧

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೬-೧೧-೨೦೦೭ ರಂದು ೧೯೩೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಮಿಟ್ನಹಳ್ಳಿ ಗ್ರಾಮದ ವಾಸಿ ಲಕ್ಷ್ಮಿನಾರಾಯಣಪ್ಪ ಎಂಬುವರು ಹೀರೋಹೋಂಡಾ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೭-ಎಲ್-೮೩೪೪ ರಲ್ಲಿ ಮುಳಬಾಗಿಲಿನಿಂದ ತಮ್ಮ ಗ್ರಾಮಕ್ಕೆ ಹೋಗುವ ಸಲುವಾಗಿ ಕೆ.ಬೈಪಲ್ಲಿ ರಸ್ತೆಯಲ್ಲಿರುವ ಸಾಯಿ ಗಾರ್ಡನ್ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಮುಳಬಾಗಿಲು ಕಡೆಯಿಂದ ಬರುತ್ತಿದ್ದ ಕೆಎ-೦೭-೪೬೪೪ ಸಂಖ್ಯೆಯ ಇಚರ್ ಟೆಂಪೋವಿನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಲಕ್ಷ್ಮಿನಾರಾಯಣಪ್ಪ ರವರಿಗೆ ಗಾಯಗಳುಂಟಾಗಿದ್ದು ಮುಳಬಾಗಿಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ.

ಮೋಸ / ವಂಚನೆ ಪ್ರಕರಣಗಳು: ೦೧

  •   ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಮೋಸ / ವಂಚನೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ಜಯನಗರದ ಡೈಮಂಡ್ ಫ್ಯಾಕ್ಟರಿಯ ಮಾಲೀಕರಾದ ಸಿ.ಜಿ.ರೆಡ್ಡಿ ಮತ್ತು ಜ್ಞಾನಪಂಡಿತನ್ ಎಂಬುವರು ನಿರುದ್ಯೋಗಿ ಯುವಕರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿರುತ್ತಾರೆ. ದಿನಾಂಕ ೧೪-೧೧-೨೦೦೭ ರಿಂದ ೨೫-೧೧-೨೦೦೭ ರ ಅವಧಿಯಲ್ಲಿ ಕೇವಲ ೩೦ ಜನ ಕೆಲಸ ಮಾಡಲು ಸಾಧ್ಯವಿರುವ ತಮ್ಮ ಫ್ಯಾಕ್ಟರಿಯಲ್ಲಿ ೧೨೦ ಜನರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಅವರಿಂದ ತಲಾ ರೂ ೩೦,೦೦೦/ ರಿಂದ ೩೫,೦೦೦/ ದಂತೆ ಸುಮಾರು ೪೦ ಲಕ್ಷ ರೂಗಳನ್ನು ಪಡೆದು ವಂಚನೆ ಮಾಡಿರುತ್ತಾರೆ.

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

  •   ಮಾಲೂರು ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣದ ದಾಖಲಾಗಿರುತ್ತದೆ. ದಿನಾಂಕ ೨೫-೧೧-೨೦೦೭ ರಂದು ೦೯೦೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ತಾಳಕುಂಟೆ ಗ್ರಾಮದ ಸರ್ವೆ ನಂಬರ್ ೯೧ ರ ಜಮೀನಿನಲ್ಲಿ ರಾಂಪುರ ಗ್ರಾಮದ ವಾಸಿಗಳಾದ ನಾಗರೆಡ್ಡಿ, ನಾರಾಯಣಪ್ಪ, ಸೀನಪ್ಪ, ಮುನಿರೆಡ್ಡಿ ಎಂಬುವರು ಹಾಗೂ ತಾಳಕುಂಟೆ ಗ್ರಾಮದ ವಾಸಿಗಳಾದ ನಾಗರಾಜು, ರಾಜಪ್ಪ, ಮುನಿಯಪ್ಪ, ರುದ್ರೇಶ್, ಚಿನ್ನಪ್ಪ, ಮುನಿರಾಜ, ನಾರಾಯಣಪ್ಪ ಮುಂತಾದವರು ಒಬ್ಬರಿಗೊಬ್ಬರು ದೊಣ್ಣೆ ಮತ್ತು ಕೈಗಳಿಂದ ಹಲ್ಲೆ ನಡೆಸಿಕೊಂಡು, ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡಿರುತ್ತಾರೆ. ಇದರ ಪರಿಣಾಮ ಎರಡೂ ಗುಂಪಿನವರಿಗೂ ಗಾಯಗಳುಂಟಾಗಿರುತ್ತದೆ. ಸರ್ವೆ ನಂಬರ್ ೯೧ ರ ಜಮೀನಿನಲ್ಲಿದ್ದ ನೀಲಗಿರಿ ಮರಗಳನ್ನು ಕತ್ತರಿಸುವ ವಿಚಾರದಲ್ಲಿ ಪರಸ್ಪರರ ನಡುವೆ ಇದ್ದ ದ್ವೇಷವೇ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ. ಈ ಬಗ್ಗೆ ದೂರು ಮತ್ತು ಪ್ರತಿದೂರುಗಳು ದಾಖಲಾಗಿರುತ್ತದೆ.

ಹಲ್ಲೆ: ಇಲ್ಲ

ಇತರೆ: ಇಲ್ಲ ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೫ ನೇ ನವೆಂಬರ್‌ ೦೭

November 25, 2007

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೫-೧೧-೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹಸು ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೪-೧೧-೨೦೦೭ ರಂದು ೧೦೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಕಸಿವಿರೆಡ್ಡಿಹಳ್ಳಿ ಗ್ರಾಮದ ವಾಸಿಗಳಾದ ನಾರಾಯಣಸ್ವಾಮಿ ಮತ್ತು ಆನಂದ ಎಂಬುವರು ಮುಳಬಾಗಿಲು ಹೊರವಲಯದ ತಾಯಲೂರು ಬೈಪಾಸ್ ಬಳಿ ಒಂದು ಸೀಮೆಹಸುವನ್ನು ಹಿಡಿದುಕೊಂಡು ಬರುತ್ತಿದ್ದರು. ಅದೇ ಸಮಯದಲ್ಲಿ ಗಸ್ತಿನಲ್ಲಿದ್ದ ಪೇದೆಗಳಾದ ಮೋಹನ್ ಮತ್ತು ಚಂದ್ರು ರವರು ಅನುಮಾನಾಸ್ಪದವಾಗಿ ಬರುತ್ತಿದ್ದವರನ್ನು ಹಿಡುದುಕೊಂಡು ವಿಚಾರಿಸಲಾಗಿ ಸರಿಯಾದ ಉತ್ತರ ನೀಡದ ಕಾರಣ ಹೆಚ್ಚಿನ ವಿಚಾರಣೆಗಾಗಿ ಠಾಣೆಗೆ ಕರೆದುಕೊಂಡು ಬಂದಿರುತ್ತಾರೆ. ವಿಚಾರಣೆ ವೇಳೆಯಲ್ಲಿ ಅಪರಾಧಿಗಳು ಸೀಮೆ ಹಸುವನ್ನು ಮುಳಬಾಗಿಲು ತಾಲೂಕು ಮಡಿವಾಳ ಗ್ರಾಮದ ಜಯರಾಮಪ್ಪ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಹಸುವಿನ ಬೆಲೆ ರೂ ೧೫,೦೦೦/ ಗಳಾಗಿರುತ್ತದೆ.

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು:

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೨

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಅಪಘಾತವು ದಿನಾಂಕ ೨೪-೧೧-೨೦೦೭ ರಂದು ೧೪೧೫ ಗಂಟೆ ಸಮಯದಲ್ಲಿ ಬೆಂಗಳೂರು ನಗರ ವಾಸಿ ರಾಮಕ್ರಿಷ್ಣಪ್ಪ ಎಂಬುವರು ತಮ್ಮ ಕ್ವಾಲೀಸ್ ಕಾರ್ ಸಂಖ್ಯೆ ಕೆಎ-೦೩-ಝಡ್-೮೭೧೬ ರಲ್ಲಿ ತಿರುಪತಿಗೆ ಹೋಗಲು ರಾಷ್ಟ್ರೀಯ ಹೆದ್ದಾರಿ-೪ ರ ಮುಳಬಾಗಿಲು ಹೊರವಲಯದ ಕೆ.ಜಿ.ಎಫ್ ಬೈಪಾಸ್ ಬಳಿ ಹೋಗುತ್ತಿದ್ದರು. ಅ ಸಮಯದಲ್ಲಿ ಕೆ.ಜಿ.ಎಫ್ ಕಡೆಯಿಂದ ಬಂದ ಕಾರ್ ಸಂಖ್ಯೆ ಕೆಎ-೦೮-೧೩೦೩ ರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕ್ವಾಲೀಸ್ ಕಾರ್ ಗೆ ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ಎರಡು ವಾಹನಗಳು ಜಖಂಗೊಂಡಿರುತ್ತವೆ.

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಅಪಘಾತವು ದಿನಾಂಕ ೨೫-೧೧-೨೦೦೭ ರಂದು ೦೧೦೦ ಗಂಟೆ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿ- ಕೆ.ಎಂ.ಎಫ್. ಡೈರಿಯ ಬಳಿ ನಡೆದಿರುತ್ತದೆ. ಬೆಂಗಳೂರು ನಗರ ವಾಸಿ ಅನುಬು ಎಂಬುವರು ತಮ್ಮ ಟೆಂಪೋ ಸಂಖ್ಯೆ ಕೆಎ-೨೭--೪೨೦೧ ರಲ್ಲಿ ಮುಳಬಾಗಿಲು ಕಡೆ ಹೋಗುತ್ತಿದ್ದರು. ಆ ಸಮಯದಲ್ಲಿ ಎದುರುಗಡೆಯಿಂದ ಬಂದ .ಪಿ.ಎಸ್.ಆರ್.ಟಿ.ಸಿ ಬಸ್ ಸಂಖ್ಯೆ ಎಪಿ-೧೧-ಝಡ್-೫೬೦೭ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಟೆಂಪೋಗೆ ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ಟೆಂಪೋ ಚಾಲಕನ ಎರಡೂ ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೪ ನೇ ನವೆಂಬರ್ ೦೭

November 24, 2007

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ -೧೧-೨೦೦೭ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೧

  •   ಮಾಲೂರು ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆಗೆ ಸಂಭಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಪ್ರಕರಣವು ದಿನಾಂಕ ೨೪-೧೧-೨೦೦೭ ರಂದು ಮಾಲೂರು ತಾಲೂಕು ಕೋಡೂರು ಗ್ರಾಮದ ವಾಸಿ ಶ್ರೀಮತಿ ಲಕ್ಷ್ಮಮ್ಮರವರ ದೂರಿನ ಆಧಾರದ ಮೇರೆಗೆ ದಾಖಲಿಸಲ್ಪಟ್ಟಿರುತ್ತದೆ. ಶ್ರೀಮತಿ ಲಕ್ಷ್ಮಮ್ಮ ರವರು ಕೋಡೂರು ಗ್ರಾಮದ ತಿಮ್ಮರಾಯಪ್ಪ ರವರೊಂದಿಗೆ ಈಗ್ಗೆ ೧೪ ವರ್ಷಗಳ ಹಿಂದೆ ವಿವಾಹವಾಗಿದ್ದು ವಿವಾಹ ಸಮಯದಲ್ಲಿ ಬಂಗಾರದ ಒಡವೆಗಳನ್ನು ವರದಕ್ಷಿಣೆಯಾಗಿ ನೀಡಿರುತ್ತಾರೆ. ವಿವಾಹ ನಂತರ ತಿಮ್ಮರಾಯಪ್ಪ ರವರು ಅವರ ತಂದೆ ಕೃಷ್ಣಪ್ಪ ಹಾಗೂ ಮೈದ ಸೀನಪ್ಪ ರವರೊಡನೆ ಸೇರಿಕೊಂಡು ಇನ್ನೂ ಹೆಚ್ಚಿನ ವರದಕ್ಷಿಣೆ ತರುವಂತೆ ಒತ್ತಾಯಿಸಿ ಈಗ್ಗೆ ಒಂದು ತಿಂಗಳಿಂದ ಮನೆಯಿಂದ ಹೊರಗೆ ಹಾಕಿದ್ದು ಪುನಃ ಮನೆಗೆ ಬಂದರೆ ಪ್ರಾಣ ತೆಗೆಯುವುದಾಗಿ ಹೆದರಿಸಿ ಪ್ರಾಣಬೆದರಿಕೆ ಹಾಕಿರುತ್ತಾರೆಂದು ಲಕ್ಷ್ಮಮ್ಮರವರು ತಮ್ಮ ದೂರಿನಲ್ಲಿ ಆಪಾದಿಸಿರುತ್ತಾರೆ.

ರಸ್ತೆ ಅಪಘಾತಗಳು: ೦೩

-ಮಾರಣಾಂತಿಕ: ೦೧

  •   ನಂಗಲಿ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೭-೧೦-೨೦೦೭ ರಂದು ಮುಳಬಾಗಿಲು ಚಿಕ್ಕಗೊಲ್ಲಹಳ್ಳಿ ವಾಸಿ ಶ್ರೀರಾಮಪ್ಪ ಎಂಬುವರು ಎನ್.ವೆಂಕಟಾಪುರದ ಬಳಿ ರಸ್ತೆ ದಾಟುತ್ತಿದ್ದಾಗ ಯಾವುದೋ ಒಂದು ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗಳಾಗಿತ್ತು. ಇವರು ಮುಳಬಾಗಿಲು ಸರ್ಕಾರಿ ಆಸ್ಪತ್ರೆ, ಕೋಲಾರ ಎಸ್.ಎನ್.ಆರ್ ಆಸ್ಪತ್ರೆ, ಇತ್ಯಾದಿ ಕಡೆಗಳಲ್ಲಿ ಚಿಕಿತ್ಸೆ ಪಡೆದಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ ೨೩-೧೧-೨೦೦೭ ರಂದು ೧೭೩೦ ಗಂಟೆಗೆ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.

-ಸಾಧಾರಣ: ೦೨

  •   ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೩-೧೧-೨೦೦೭ ರಂದು ೧೨೩೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರದ ವಾಸಿ ಶ್ರೀನಿವಾಸ ಎಂಬುವರ ಮಗಳಾದ ಐಶ್ವರ್ಯ ಎಂಬುವರು ಶ್ರೀನಿವಾಸಪುರದ ಬಾಲಾಂಜನೇಯ ಸ್ವಾಮಿ ದೇವಾಲಯದ ಹಿಂಭಾಗದಲ್ಲಿ ಆಟವಾಡುತ್ತಿದ್ದಳು. ಆ ಸಮಯದಲ್ಲಿ ಒಂದು ಟಾಟಾ ಸುಮೋ ವಾಹನವನ್ನು ಅದರ ಚಾಲಕ ಜೈಶೀಲಾ ಎಂಬುವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದು ತನ್ನ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟುಹೋಗಿರುತ್ತಾರೆ. ಇದರ ಪರಿಣಾಮ ಐಶ್ವರ್ಯ ಎಂಬ ಹುಡುಗಿಗೆ ಗಾಯಗಳುಂಟಾಗಿರುತ್ತದೆ.

  •   ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೨-೧೧-೨೦೦೭ ರಂದು ೨೨೦೦ ಗಂಟೆಗೆ ಕೋಲಾರ ವೀರಾಂಜನೇಯ ನಗರದ ವಾಸಿ ಲಕ್ಷ್ಮಮ್ಮ ಗಂಡ ನಾರಾಯಣಪ್ಪ ಎಂಬುವರ ಮಗನಾದ ಬಾಬು ಎಂಬುವರು ಕೋಲಾರ ನಗರದ ಬಾಪೂಜಿ ಶಾಲೆ ಬಳಿ ಇದ್ದರು. ಆ ಸಮಯದಲ್ಲಿ ಒಂದು ಪಲ್ಸರ್ ಸಂಖ್ಯೆ ಕೆಎ-೦೧-ಇಇ-೫೯೧೨ ದ್ವಿಚಕ್ರವಾಹನವನ್ನು ಅದರ ಚಾಲಕ ರಾಜೇಂದ್ರ ಎಂಬುವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬಾಬು ರವರಿಗೆ ಡಿಕ್ಕಿ ಹೊಡೆದಿರುತ್ತಾರೆ. ಇದರ ಪರಿಣಾಮ ಬಾಬು ರವರಿಗೆ ಗಾಯಗಳುಂಟಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ಗೌನಿಪಲ್ಲಿ ಪೊಲೀಸರ ಕಾರ್ಯಾಚರಣೆ: ಅಕ್ರಮ ಇಂಧನ ವಶ

November 24, 2007

 

ಗೌನಿಪಲ್ಲಿ ಪೊಲೀಸ್ ಠಾಣೆಯ ಪ್ರಭಾರಿ ಠಾಣಾಧಿಕಾರಿ ಮತ್ತು ತರಭೇತಿಯಲ್ಲಿರುವ ಪ್ರೊಬೆಷನರಿ ಡಿ.ಎಸ್.ಪಿ  ಶ್ರೀ ಹೆಚ್.ಡಿ.ಆನಂದ್ ಕುಮಾರ್ ರವರು  ಕಾರ್ಯಾಚರಣೆ ನಡೆಸಿ ೪೦ ಲೀಟರ್‌ ಕಲಬೆರಿಕೆ  ಪೆಟ್ರೋಲ್‌ ಮತ್ತು ೧೦೦ ಲೀಟರ್  ಕಲಬೆರಿಕೆ  ಡೀಸಲ್‌ನ್ನು ವಶಪಡಿಸಿಕೊಂಡಿರುತ್ತಾರೆ.  ದಿನಾಂಕ ೨೩-೧೧-೨೦೦೭  ರಂದು ೧೫೩೦ ಗಂಟೆ ಸಮಯದಲ್ಲಿ  ಗಸ್ತಿನಲ್ಲಿದ್ದಾಗ ಕೊಂಡಾಮರಿ ಗೇಟ್‌ ಬಳಿ ೭ ಕ್ಯಾನ್ ಗಳನ್ನು ಇಟ್ಟುಕೊಂಡು ಅನುಮಾನಾಸ್ಪದವಾಗಿ ನಿಂತಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಪೊಲೀಸರನ್ನು ಕಂಡು  ಓಡಿಹೋಗಿದ್ದು ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿರುತ್ತದೆ. 

ಸಂಬಂಧವಾಗಿ ಗೌನಪಲ್ಲಿ ಪೊಲೀಸ್ ಠಾಣೆಯಲ್ಲಿ  ಅಗತ್ಯ ವಸ್ತುಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಆರೋಪಿಗಳು ತಲೆ ಮರೆಸಿಕೊಂಡಿರುತ್ತಾರೆ.