ದಿನದ ಅಪರಾಧಗಳ ಪಕ್ಷಿನೋಟ ೩೧ ನೇ ಜನವರಿ ೦೮

January 31, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೧-೦೧-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ೦೧

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಹಿಳೆಗೆ ಕಿರುಕುಳ ಮತ್ತು ಕೊಲೆಗೆ ಸಂಬಂಧಪಟ್ಟಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೧-೨೦೦೮ ರಂದು ೨೦೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಬೊಮ್ಮಡಿನಗರದ ವಾಸಿಯಾದ ಮಹೇಶ್ ಎಂಬವನು ತನ್ನ ಹೆಂಡತಿಯಾದ ಶ್ರೀಮತಿ ಯಶೋಧಮ್ಮ ರವರ ಮೇಲೆ ವಿನಾಕಾರಣ ಜಗಳ ತೆಗೆದು ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುತ್ತಾನೆ. ಇದರ ಪರಿಣಾಮ ಯಶೋಧಮ್ಮರವರಿಗೆ ತೀವ್ರತರಹದ ಸುಟ್ಟಗಾಯಗಳಾಗಿ ಚಿಕತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಅಸ್ಪತ್ರೆಗೆ ದಾಖಲಿಸಿದ್ದರು. ಚಿಕತ್ಸೆ ಫಲಕಾರಿಯಾದೆ ದಿನಾಂಕ ೩೦-೦೧-೨೦೦೮ ರಂದು ಮೃತಪಟ್ಟಿರುತ್ತಾರೆ.

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

  •   ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನಕ್ಕೆ ಸಂಬಂಧಪಟ್ಟಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೧-೦೧-೨೦೦೮ ಕ್ಕೆ ೧೦ ದಿನಗಳ ಹಿಂದೆ ಶ್ರೀನಿವಾಸಪುರ ತಾಲೂಕು ಪುಂಗನೂರು ಗ್ರಾಮದ ವಾಸಿಗಳಾದ ಮಂಜುನಾಥ ಮತ್ತು ಸರಸ್ವತಮ್ಮ ರವರು ನಾಗದೇನಹಳ್ಳಿ ಗ್ರಾಮದ ವಾಶಿ ಶಂಕರಮ್ಮ ರವರ ಮನೆಗೆ ಪ್ರವೇಶ ಮಾಡಿ ಮನೆಯಲ್ಲಿದ್ದ ಗ್ಯಾಸ್ ಸ್ಟವ್ ಮತ್ತು ಸಿಲಿಂಡರ್, ಹಿತ್ತಾಳೆ ಕೊಳಗ ೧೫ ಸೀರೆಗಳು ಮತ್ತು ಇತರೆ ಗೃಹಪಯೋಗಿ ವಸ್ತುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಇದನ್ನು ಕೇಳಲು ಹೋದ ಶಂಕರಮ್ಮ ರವರಿಗೆ ಮಂಜುನಾಥ ಮತ್ತು ಸರಸ್ವತಮ್ಮ ರವರು ಹೊಡೆದು ಸಣ್ಣಪುಟ್ಟ ಗಾಯಗಳಾಗಿರುತ್ತವೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೨

  •   ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೧-೦೧-೨೦೦೮ ರಂದು ೧೧೩೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಚೊಕ್ಕರೆಡ್ಡಿಹಳ್ಳಿ ಗ್ರಾಮದ ವಾಸಿ ರವಿಚಂದ್ರ ಎಂಬುವರು ಆಟೋ ಸಂ. ಕೆಎ-೦೭-೩೫೫೧ ರಲ್ಲಿ ಶ್ರೀನಿವಾಸಪುರಕ್ಕೆ ಬರಲು ರೋಣೂರು ಕ್ರಾಸ್ ಬಳಿ ಬರುತ್ತಿದ್ದರು ಸಮಯದಲ್ಲಿ ಆಟೋ ಚಾಲಕ ತನ್ನ ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆ ಪಕ್ಕದ ಕಲ್ಲಿಗೆ ಡಿಕ್ಕಿ ಹೊಡೆಸಿರುತ್ತಾನೆ. ಇದರ ಪರಿಣಾಮ ಆಟೋ ಪಕ್ಕಕ್ಕೆ ಉರುಳಿ ಆಟೋದಲ್ಲಿದ್ದ ರವಿಚಂದ್ರ ಇತರೆ ಜನರಿಗೆ ರಕ್ತಗಾಯಗಳಾಗಿ ಚಿಕತ್ಸೆಗಾಗಿ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೧-೨೦೦೮ ರಂದು ೧೬೦೦ ಗಂಟೆ ಸಮಯದಲ್ಲಿ ಕೋಲಾರ ನಗರದ ಗಾರಂಜಿಕಟ್ಟೆ ವಾಸಿ ರಮೇಶ ಎಂಬವರು ಬೇತಮಂಗಲ ಕೋಲಾರ ರಸ್ತೆಯ ಚಾಮರಹಳ್ಳಿ ಗೇಟ್ ಬಳಿ ತನ್ನ ಹೀರೋಹೋಂಡಾ ದ್ವಿಚಕ್ರ ವಾಹನ ಸಂ. ಕೆಎ೦೮-ಕೆ-೨೭೧೦ ರಲ್ಲಿ ಕೋಲಾರ ಕಡೆ ಬರುತ್ತಿದ್ದರು ಕೋಲಾರ ಕಡೆಯಿಂದ ಬಂದ ಕೆಎ-೦೮-ಹೆಚ್-೫೮೭೬ ಸುಜುಕಿ ಸಮುರಾಯ್ ದ್ಚಿಚಕ್ರವಾಹನ ಸವಾರ ತನ್ನ ವಾಹನ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಮೇಶ್ ರವರ ವಾಹನಕ್ಕೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ರಮೇಶ್ ರವರಿಗೆ ತೀವ್ರ ತರಹದ ಗಾಯಗಳಾಗಿ ಚಿಕತ್ಸೆಗಾಗಿ ಎಸ್.ಎನ್.ಆರ್. ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

  •   ನಂಗಲಿ ಪೊಲೀಸ್ ಠಾಣೆಯಲ್ಲಿ ದೊಂಬಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ವಿರುದ್ದ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಘಟನೆಯು ದಿನಾಂಕ ೩೦-೦೧-೨೦೦೮ ರಂದು ೦೬೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಎಂ.ಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿರುತ್ತದೆ. ಸುಬ್ರಮಣಿ ಎಂಬುವರು ತಮ್ಮ ಗ್ರಾಮದಲ್ಲಿ ಇದ್ದಾಗ ಅದೆ ಗ್ರಾಮದ ಜಿ.ವಿ.ಶ್ರೀನಿವಾಸ ಮತ್ತು ಇತರೆ ಜನರು ಅಕ್ರಮ ಗುಂಪುಕಟ್ಟಿಕೊಂಡು ಸುಬ್ರಮಣಿ ರವರ ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಹೊಡೆದು ಮನೆಯಲ್ಲಿದ್ದ ಟಿ.ವಿ. ಚೇರ್ ಗಳನ್ನು ಹೊಡೆದು ಹಾಕಿ ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿರುತ್ತಾರೆ.

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೧-೨೦೦೮ ರಂದು ೧೨೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಪಾರ್ಶ್ವಗಾನಹಳ್ಳಿ ಗ್ರಾಮದ ವಾಸಿಯಾದ ಪುರುಷೋತ್ತಮ ಎಂಬುವರ ತಂದೆಯಾದ ಗೋವಿಂದಪ್ಪ (೫೫) ಎಂಬವರು ಮನೆಯಿಂದ ಹೋದವರು ಇದುವರೆವಿಗೂ ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ. ಇವರು ಮಾನಸಿಕ ಆಸ್ವಸ್ಥರಾಗಿರುತ್ತಾರೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೩೦ ನೇ ಜನವರಿ ೦೮

January 30, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೦-೦೧-೨೦ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ  

ಸುಲಿಗೆ: ೦೧

  •   ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ಷಹೀನ್ ಷಾ ನಗರದ ಜಗದೀಶ್ ಷೋಪಟಿಲಾಲ್ ರವರ ವಾಸದ ಮನೆಯಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೯-೦೧-೨೦೦೮ ರಂದು ರಾತ್ರಿ ೨೩೩೦ ಗಂಟೆ ಸಮಯದಲ್ಲಿ ಜಗದೀಶ್ ಷೋಪಟಿಲಾಲ್ ರವರು ತಮ್ಮ ಮನೆಯಲ್ಲಿ ಮಲಗಿದ್ದರು. ಆ ಸಮಯದಲ್ಲಿ ಮನೆಯ ಬಾಗಿಲನ್ನು ತಟ್ಟಿದ ಸುಮಾರು ೨೦ ರಿಂದ ೨೫ ವರ್ಷ ವಯಸ್ಸಿನ ಮೂರು ಜನ ಅಪರಿಚಿತರು ಬಾಗಿಲು ತೆಗೆದ ನಂತರ ಒಳಗೆ ಪ್ರವೇಶಿಸಿ ಜಗದೀಶ್ ಷೋಪಟಿಲಾಲ್ ರವರನ್ನು ಕಟ್ಟಿಹಾಕಿ ದೊಣ್ಣೆಯಿಂದ ಹೊಡೆದು ಬೆಡ್ ರೂಂನಲ್ಲಿದ್ದ ಸ್ಟೀರ್ಳ ಅಲ್ಮೇರಾವನ್ನು ಹೊಡೆದು ಅದರಲ್ಲಿದ್ದ ನಗದು ಹಾಗೂ ಬಂಗಾರದ ಒಡವೆಗಳೂ ಸೇರಿದಂತೆ ಒಟ್ಟು ರೂ. ,೦೬,೦೦೦/ ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಮನೆಗಳ್ಳತನ: ೦೧

  •   ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರ ನ್ಯಾಮತ್ ಬಿ ದರ್ಗಾ ಬಳಿ ವಾಸವಾಗಿರುವ ಮಹಮದ್ ಇಲಿಯಾಜ್ ಎಂಬುವರ ವಾಸದ ಮನೆಯಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೩೦-೦೧-೨೦೦೮ ರಂದು ೦೧೦೦ ಗಂಟೆ ಸಮಯದಲ್ಲಿ ಮಹಮದ್ ಇಲಿಯಾಜ್ ರವರು ತಮ್ಮ ವಾಸದ ಮನೆಯಲ್ಲಿ ಮಲಗಿದ್ದರು. ಆ ಸಮಯದಲ್ಲಿ ಮನೆಯ ಕಿಟಕಿ ಬಾಗಿಲನ್ನು ಹೊಡೆದು ಮನೆಯ ಒಳಗೆ ಪ್ರವೇಶಿಸಿದ ಯಾರೋ ಕಳ್ಳರು ಮನೆಯ ಕೋಣೆಯಲ್ಲಿದ್ದ ೨ ಮೊಬೈಲ್ ಪೋನ್ ಗಳು ಹಾಗೂ ನಗದು ಸೇರಿದಂತೆ ಒಟ್ಟು ರೂ. ೧೨,೦೦೦/ ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ೦೧

  •   ಮಾಸ್ತಿ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲೂಕು ವೆಂಕಟರಾಜನಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೯-೦೧-೨೦೦೮ ರಂದು ವೆಂಕಟರಾಜನಹಳ್ಳಿ ಗ್ರಾಮದಲ್ಲಿ ಮತಗಟ್ಟೆ ಅಧಿಕಾರಿ ಟಿ..ರಾಮಪ್ಪ ಎಂಬುವರು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿದ್ದರು. ಆ ಸಮಯದಲ್ಲಿ ಮಾಲೂರು ತಾಲೂಕು ಕೆ.ಜಿ.ಹಳ್ಳಿ ಗ್ರಾಮದ ವಾಸಿ ಪೆರುಮಾಳ್ ಎಂಬುವರು ಮೊಬೈಲ್ ನಂ. ೯೪೪೮೫೭೪೦೩೬ ರಿಂದ ಕರೆಮಾಡಿ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿ ಕರ್ತವ್ಯ ನಿರ್ವಹಣೆಗೆ ಅಡ್ಡಿ ಪಡಿಸಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

  •   ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಠ ಜಾತಿ / ಪರಿಶಿಷ್ಠ ಪಂಗಡ (ದೌರ್ಜನ್ಯತಡೆ) ಕಾಯ್ದೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ಟೌನ್ ತಾಲೂಕು ಕಛೇರಿಯ ಬಳಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೩೦-೦೧-೨೦೦೮ ರಂದು ೧೨೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ದೊಡಮಲದೊಡ್ಡಿ ಗ್ರಾಮದ ವಾಸಿ ಎನ್.ವೆಂಕಟರಮಣ ಎಂಬುವರು ತಮ್ಮ ಕೆಲಸದ ನಿಮಿತ್ತ ಶ್ರೀನಿವಾಸಪುರದ ತಾಲೂಕು ಕಛೇರಿ ಬಳಿಗೆ ಹೋಗಿದ್ದರು. ಆ ಸಮಯದಲ್ಲಿ ಅಲ್ಲಿಯೇ ಇದ್ದ ನಂಜೇಗೌಡ ಮತ್ತು ಇವರ ಹೆಂಡತಿ ರತ್ನಮ್ಮ ರವರು ವೆಂಕಟರಮಣರವರ ಮೇಳೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಜಾತಿನಿಂದನೆ ಮಾಡಿರುತ್ತಾರೆ. ಆರೋಪಿಗಳ ವಿರುದ್ದ ಎನ್.ವೆಂಕಟರಮಣ ರವರು ಮಾಹಿತಿ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಿದ್ದು ಈ ಹಿನ್ನೆಲೆಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ 

  •   ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಠ ಜಾತಿ / ಪರಿಶಿಷ್ಠ ಪಂಗಡ (ದೌರ್ಜನ್ಯತಡೆ) ಕಾಯ್ದೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲೂಕು ಕಂಬಾಲಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೦೪-೦೧-೨೦೦೮ ರಂದು ೧೧೩೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಕಂಬಾಲಹಳ್ಳಿ ಗ್ರಾಮದ ವಾಸಿ ನರಸಿಂಹಪ್ಪ ಎಂಬುವರ ಮೇಲೆ ಶ್ರೀನಿವಾಸಪುರ ತಾಲೂಕು ಮಣಿಗಾನಹಳ್ಳಿ ಗ್ರಾಮದ ವಾಸಿ ಶ್ರೀನಿವಾಸರೆಡ್ಡಿ ಎಂಬುವರು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ನಡೆಸಿ ಜಾತಿನಿಂದನೆ ಮಾಡಿ ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಹಲ್ಲೆ ನಡೆಸಿರುತ್ತಾರೆ. ಆರೋಪಿ ಶ್ರೀನಿವಾಸರೆಡ್ಡಿ ಎರಡು ಗ್ರಾಮಗಳ ಮತಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸಿದ್ದು ಇದನ್ನು ಪ್ರಶ್ನಿಸಿದಾಗ ಈ ಕೃತ್ಯ ಸಂಭವಿಸಿರುತ್ತದೆ.

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲೂಕು ವರದಗಾನಹಳ್ಳಿ ಗ್ರಾಮದ ಚಂದ್ರಪ್ರಭ ಎಂಬುವರು ಮೃತಪಟ್ಟವರು. ಚಂದ್ರಪ್ರಭರವರು ಮೊದಲಿನಿಂದಲೂ ಹೊಟ್ಟೆನೋವಿನಿಂದ ನರಳುತ್ತಿದ್ದು ಚಿಕಿತ್ಸೆ ಕೊಡಿಸಿದರೂ ಸಹಾ ಫಲಕಾರಿಯಾಗಿರಲಿಲ್ಲ. ಇದರಿಂದ ನೊಂದ ಚಂದ್ರಪ್ರಭರವರು ದಿನಾಂಕ ೨೯-೦೧-೨೦೦೮ ರಂದು ೦೮೩೦ ಗಂಟೆ ಸಮಯದಲ್ಲಿ ಯಾವುದೋ ಕ್ರಿಮಿನಾಷಕವನ್ನು ಸೇವಿಸಿ ಅಸ್ವಸ್ಥರಾಗಿದ್ದು ಚಿಕಿತ್ಸೆಗಾಗಿ ಮುಳಬಾಗಿಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾಗ ೧೦೩೦ ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನರ ಕುರುಬರ ಪೇಟೆ ವಾಸಿ ವೆಂಕಟೇಶಪ್ಪ ಎಂಬುವರ ೧೭ ವರ್ಷದ ಮಗಳಾದ ಬಿ.ವಿ ವರಲಕ್ಷ್ಮಿ ಎಂಬುವರು ಕಾಣೆಯಾದವರು. ದಿನಾಂಕ ೨೮-೦೧-೨೦೦೮ ರಂದು ೧೨೦೦ ಗಂಟೆ ಸಮಯದಲ್ಲಿ ಸೋಮೇಶ್ವರ ದೇವಾಲಯಕ್ಕೆ ಹೋಗಿಬರುವುದಾಗಿ ಹೇಳಿ ಮನೆಯಿಂದ ಹೊರಟ ವರಲಕ್ಷ್ಮಿರವರು ಮನೆಗೆ ಹಿಂತಿರುಗದೇ ಕಾಣೆಯಾಗಿರುತ್ತಾರೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೯ ನೇ ಜನವರಿ ೦೮

January 29, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ -೦೧-೨೦ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೨

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೧-೨೦೦೮ ರಂದು ೧೫೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಚೋಳಘಟ್ಟ ಗ್ರಾಮದ ವಾಸಿ ರವಿಕುಮಾರ್ (೩೨) ಎಂಬುವರು ತಮ್ಮ ಟಾಟಾ ಸುಮೋ ಸಂಖ್ಯೆ ಕೆಎ-೦೪-ಬಿ-೪೭೧೭ ವಾಹನದಲ್ಲಿ ಬೆಂಗಳೂರಿನಿಂದ ಕೋಲಾರಕ್ಕೆ ಬರುವ ಸಲುವಾಗಿ ಅರಬಿಕೊತ್ತನೂರು ಗ್ರಾಮದ ಗೇಟ್ ಬಳಿ ಬರುತ್ತಿದ್ದರು. ಆ ಸಮಯದಲ್ಲಿ ಟಾಟಾ ಸುಮೋ ಚಾಲಕ ಲೋಕೇಶರವರು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆ ಬದಿಯ ಕಲ್ಲುಗಳಿಗೆ ಡಿಕ್ಕಿ ಹೊಡೆಸಿರುತ್ತಾರೆ. ಇದರ ಪರಿಣಾಮ ಟಾಟಾ ಸುಮೋ ವಾಹನ ಜಖಂಗೊಂಡಿರುತ್ತದೆ.

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೧-೨೦೦೮ ರಂದು ೨೧೦೦ ಗಂಟೆ ಸಮಯದಲ್ಲಿ ಮುಳಬಾಗಿಲು ಮಂಜುನಾಥ ಕಾಲೋನಿಯ ವಾಸಿ ಶ್ರೀನಿವಾಸಯ್ಯ ಎಂಬುವರು ತನ್ನ ಸ್ನೇಹಿತ ರೆಡ್ಡಪ್ಪರವರೊಡನೆ ತಮ್ಮ ಟಿ.ವಿ.ಎಸ್ ಸ್ಟಾರ್ ಸಿಟಿ ಸಂಖ್ಯೆ ಕೆಎ-೦೩-ಸಿವಿ-೧೪೧೪ ದ್ವಿಚಕ್ರವಾಹನದಲ್ಲಿ ಕೋಲಾರದಿಂದ ಮುಳಬಾಗಿಲಿಗೆ ಹೋಗುವ ಸಲುವಾಗಿ ಮುಳಬಾಗಿಲು ತಾಲೂಕು ಕುರುಬರಹಳ್ಳಿ ಗೇಟ್ ಸಮೀಪ ಹೋಗುತ್ತಿದ್ದರು. ಆ ಸಮಯದಲ್ಲಿ ಹಿಂಭಾಗದಿಂದ ಬಂದ ಯಾವುದೋ ಒಂದು ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಶ್ರೀನಿವಾಸಯ್ಯ ಮತ್ತು ರೆಡ್ಡಪ್ಪ ರವರಿಗೆ ಗಾಯಗಳುಂಟಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೨

  •   ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಹಾಗೂ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೧-೨೦೦೮ ರಂದು ೧೪೦೦ ಗಂಟೆ ಸಮಯದಲ್ಲಿ ಕೋಲಾರ ನಗರ ಪೊಲೀಸ್ ಠಾಣೆಯ ಜೀಪ್ ಚಾಲಕ ಎ.ಪಿ.ಸಿ ೨೦೦ ರಹಮತ್ತುಲ್ಲಾ ಎಂಬುವರು ಜೀಪನ್ನು ಚಾಲನೆ ಮಾಡಿಕೊಂಡು ಕೋಲಾರ ನಗರ ಶಾರದಾ ಟಾಕೀಸ್ ರಸ್ತೆಯ ಗಂಗೋತ್ರಿ ಲಾಡ್ಜ್ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಮುಳಬಾಗಿಲು ಉತ್ತನೂರು ಗ್ರಾಮದ ವಾಸಿ ರಾಮರೆಡ್ಡಿ ಮತ್ತು ಬಂಗಾರಪೇಟೆ ತಾಲೂಕು ಯರನಾಗನಹಳ್ಳಿ ಗ್ರಾಮದ ವಾಸಿ ರಾಜೇಂದ್ರ ಎಂಬುವರು ಜೀಪ್ ಗೆ ಅಡ್ಡ ಬಂದಿದ್ದು ದಾರಿ ಬಿಡುವಂತೆ ಹಾರ್ನ್ ಮಾಡಿದಾಗ ದಾರಿಬಿಡದೇ ಚಾಲಕ ರಹಮತುಲ್ಲಾ ರವರ ಮೇಲೆ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ಸಮವಸ್ತ್ರವನ್ನು ಹರಿದುಹಾಕಿ ಪ್ರಾಣಬೆದರಿಕೆ ಹಾಕಿರುತ್ತಾರೆ. ಸರ್ಕಾರಿ ಕರ್ತವ್ಯ ನಿರ್ವಹಣೆಗೆ ಅಡ್ಡಿ ಪಡಿಸಿರುತ್ತಾರೆ.

  •   ನಂಗಲಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೧-೨೦೦೮ ರಂದು ರಾತ್ರಿ ಮಾಲೂರು ಟೌನ್ ಕುಂಬಾರಪೇಟೆ ವಾಸಿ ರಮೇಶ್ ಎಂಬುವರು ತಿರುಪತಿಗೆ ಹೋಗುವ ಸಲುವಾಗಿ ತಮ್ಮ ದ್ವಿಚಕ್ರವಾಹನದಲ್ಲಿ ನಂಗಲಿ ಬಳಿಯ ಕರ್ನಾಟಕ ರಾಜ್ಯದ ಗಡಿ ಪ್ರದೇಶದ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ದ್ವಿಚಕ್ರವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿದ ಯಾರೋ ನಾಲ್ಕು ಜನ ಅಪರಿಚಿತರು ರಮೇಶ್ ರವರಿಗೆ ಚಾಕುವಿನಿಂದ ತಿವಿದು ಹಲ್ಲೆ ನಡೆಸಿರುತ್ತಾರೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •   ಮಾಸ್ತಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲೂಕು ಗೋಣೂರು ಕೊಪ್ಪ ಗ್ರಾಮದ ವಾಸಿ ಕಮಲಮ್ಮ (೩೫) ಎಂಬುವರು ಮೃತಪಟ್ಟವರು. ಕಮಲಮ್ಮ ರವರು ದಿನಾಂಕ ೨೮-೦೧-೨೦೦೮ ರಂದು ೦೮೦೦ ಗಂಟೆ ಸಮಯದಲ್ಲಿ ವಿಷಸೇವನೆ ಮಾಡಿ ಅಸ್ವಸ್ಥಗೊಂಡಿದ್ದು ಚಿಕಿತ್ಸೆಗಾಗಿ ಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾಗ ಮೃತಪಟ್ಟಿರುತ್ತಾರೆ. ಬಾಲ್ಯದಿಂದಲೂ ಮೂರ್ಚೆರೋಗದಿಂದ ನರಳುತ್ತಿದ್ದ ಕಮಲಮ್ಮರವರು ಇದರಿಂದ ಜಿಗುಪ್ಸೆಗೊಂಡು ಈ ಕೃತ್ಯ ಎಸಗಿಕೊಂಡಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೮ ನೇ ಜನವರಿ ೦೮

January 28, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮-೦೧-೨೦ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ೦೧

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೧-೨೦೦೮ ರಂದು  ೧೬೦೦ ಗಂಟೆ ಸಮಯದಲ್ಲಿ ಪಳನಿ ಎಂಬುವರು ತಮ್ಮ ಬಜಾಜ್ ಪ್ಲಾಟೀನಮ್ ಸಂಖ್ಯೆ ಕೆಎ-೦೮-ಜೆ-೮೯೦೧ ವಾಹನದಲ್ಲಿ ಸಮಾರು ೧೮ ವರ್ಷ ವಯಸ್ಸಿನ ಹುಡುಗನ್ನು ಕುಳ್ಳರಿಸಿಕೊಂಡು ಕೋಲಾರದಿಂದ ಚಿಂತಾಮಣಿಗೆ ಹೋಗುವ ಸಲುವಾಗಿ ಮದನಹಳ್ಳಿ ಕ್ರಾಸ್ ಬಳಿ ಹೋಗುತ್ತಿದ್ದರು. ಸಮಯದಲ್ಲಿ ಪಳನಿ ರವರು ತಮ್ಮ ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದು ಎದುರುಗಡೆಯಿಂದ ಬರುತ್ತಿದ್ದ ಟಿ.ವಿ.ಎಸ್ ಸಂಖ್ಯೆ ಕೆಎ-೦೩-ಎಸ್-೩೭೫೪ ವಾಹನಕ್ಕೆ ಡಿಕ್ಕಿ ಹೊಡೆದಿರುತ್ತಾರೆ. ಇದರ ಪರಿಣಾಮ ಬಜಾಜ್ ಪ್ಲಾಟೀನಮ್ ದ್ವಿಚಕ್ರವಾಹನದಲ್ಲಿ ಕುಳಿತಿದ್ದ ೧೮ ವರ್ಷದ ಬಾಲಕನ ತಲೆಗೆ ತೀವ್ರ ಸ್ವರೂಪದ ಗಾಯಗಳುಂಟಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಟಿ.ವಿ.ಎಸ್ ವಾಹನದಲ್ಲಿದ್ದ ಸವಾರರಿಗೆ ಹಾಗೂ ಪಳನಿರವರಿಗೂ ಸಹಾ ಗಾಯಗಳುಂಟಾಗಿದ್ದು ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

-ಸಾಧಾರಣ: ೦೧

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೧-೨೦೦೮ ರಂದು ೦೯೦೦ ಗಂಟೆ ಸಮಯದಲ್ಲಿ ಬೆಂಗಳೂರು ಮತ್ತೀಕೆರೆ ವಾಸಿ ಆಂಜಪ್ಪ (೨೫) ಎಂಬುವರು ಯಲ್ಲಪ್ಪ ಎಂಬುವರೊಡನೆ ತಮ್ಮ ಬಜಾಜ್ ಪ್ಲಾಟೀನಾ ಸಂಖ್ಯೆ ಕೆಎ-೦೪-ಇಆರ್-೯೧೮೪ ದ್ವಿಚಕ್ರವಾಹನದಲ್ಲಿ ನರಸಾಪುರ-ಕೋಲಾರ ರಸ್ತೆಯ ಮೆಟ್ಟುಬಂಡೆ ಕ್ರಾಸ್ ಬಳಿ ಹೋಗುತ್ತಿದ್ದರು. ಸಮಯದಲ್ಲಿ ಎದುರುಗಡೆಯಿಂದ ಬಂದ ಕಾರ್ ಸಂಖ್ಯೆ ಕೆಎ-೦೩-ಎಂಇ-೪೮೬೨ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾರೆ. ಇದರ ಪರಿಣಾಮ ಆಂಜಪ್ಪ ಮತ್ತು ಯಲ್ಲಪ್ಪ ರವರಿಗೆ ಗಾಯಗಳುಂಟಾಗಿದ್ದು ಚಿಕಿತ್ಸೆಗಾಗಿ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ೦೧

  •   ಮಾಲೂರು ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೧-೨೦೦೮ ರಂದು ಕಿರಿಯ ಮತದಾನ ಅಧಿಕಾರಿಗಳಾದ ಕೆ.ಮುನಿರಾಜು ರವರು ಮತದಾರರ ಪಟ್ಟಿ ಪರಿಷ್ಕರಣೆ ಕರ್ತವ್ಯದ ಸಲುವಾಗಿ ಮಾಲೂರು ತಾಲೂಕು ರಾಜಕೃಷ್ಣಾಪುರ ಗ್ರಾಮಕ್ಕೆ ಹೋಗಿದ್ದರು. ಸಮಯದಲ್ಲಿ ರಾಜಕೃಷ್ಣಾಪುರ ಗ್ರಾಮದ ವಾಸಿ ಚಿಕ್ಕಬಾಬಯ್ಯ ಎಂಬುವರು ಕೆ.ಮುನಿರಾಜು ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯ ನಿರ್ವಹಣೆಗೆ ಅಡ್ಡಿ ಪಡಿಸಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ಸಶಸ್ತ್ರ ಪೊಲೀಸ್ ಪೇದೆಗಳ ನೇಮಕಾತಿ ಸಲುವಾಗಿ ಸಿ.ಇ.ಟಿ ಪರೀಕ್ಷೆ

January 28, 2008

ಕೋಲಾರ ಜಿಲ್ಲಾ ಪೊಲೀಸ್ ಘಟಕದಲ್ಲಿ ಖಾಲಿ ಇರುವ ಸಶಸ್ತ್ರ ಪೊಲೀಸ್ ಪೇದೆ ಹುದ್ದೆಗಳ ನೇರ ನೇಮಕಾತಿ ಸಂಬಂಧವಾಗಿ ದಿನಾಂಕ ೦೩-೦೨-೨೦೦೮ ರಂದು ಸಿ..ಟಿ ಪರೀಕ್ಷೆಯನ್ನು ಆಯೋಜಿಸಲಾಗಿರುತ್ತದೆ. ಪರೀಕ್ಷೆಯು ಬೆಳಗ್ಗೆ ೧೦೦೦ ಗಂಟೆಯಿಂದ ೧೧೩೦ ಗಂಟೆಯವರೆಗೆ ನಡೆಯಲಿದ್ದು ಈ ಸಂಬಂಧ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ಹಾಜರಾತಿ ಪತ್ರವನ್ನು ಅಂಚೆ ಮೂಲಕ ಕಳುಹಿಸಲಾಗಿರುತ್ತದೆ. ಹಾಜರಾತಿ ಪತ್ರ ತಲುಪದೇ ಇದ್ದಂತಹ ಅಭ್ಯರ್ಥಿಗಳು ಜಿಲ್ಲಾ ಪೊಲೀಸ್ ಕಛೇರಿ, ಟಮಕ, ಕೋಲಾರ ಇಲ್ಲಿ ಸಂಪರ್ಕಿಸಬಹುದಾಗಿದೆ. ಸಿ..ಟಿ ಪರೀಕ್ಷೆಗೆ ಈ ಕೆಳಕಂಡ ಶಾಲಾಕಾಲೇಜುಗಳಲ್ಲಿ ಸೀಟು ಹಂಚಿಕೆ ಮಾಡಲಾಗಿರುತ್ತದೆ.

ಮಹಿಳಾ ಸಮಾಜ, ಕೋಲಾರ ರೋಲ್ ನಂ. ೩೭೭೦೦೧ ರಿಂದ ೩೭೭೬೮೦

೩೮೦

ಮಹಿಳಾ ಕಾಲೇಜು, ಕೋಲಾರರೋಲ್ ನಂ. ೩೭೭೬೮೧ ರಿಂದ ೩೭೮೦೮೦

೪೦೦

ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಕೋಲಾರರೋಲ್ ನಂ. ೩೭೮೦೮೧ ರಿಂದ ೩೭೮೪೦೦

೩೨೦

ಸರ್ಕಾರಿ ಬಾಲಕರ ಕಾಲೇಜು, ಕೋಲಾರ.ರೋಲ್ ನಂ. ೩೭೮೪೦೧ ರಿಂದ ೩೭೯೧೨೦

೭೨೦

ಕಾನೂನು ಕಾಲೇಜು, ಕೋಲಾರ.ರೋಲ್ ನಂ. ೩೭೯೧೨೧ ರಿಂದ ೩೭೯೨೮೦

೧೬೦

ಮೆಥೋಡಿಸ್ಟ್ ಜೂನಿಯರ್ ಕಾಲೇಜು, ಕೋಲಾರ.ರೋಲ್ ನಂ. ೩೭೯೨೮೧ ರಿಂದ ೩೭೯೮೦೦

೫೨೦

ಗೋಕುಲ್ ಕಾಲೇಜು, ಕೋಲಾರರೋಲ್ ನಂ. ೩೭೯೮೦೧ ರಿಂದ ೩೮೦೧೪೮

೩೪೮


ದಿನದ ಅಪರಾಧಗಳ ಪಕ್ಷಿನೋಟ ೨೭ ನೇ ಜನವರಿ ೦೮

January 27, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ -೦೧-೨೦ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ೦೧

  •   ನಂಗಲಿ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲೂಕು ಬೂಡದೇರು ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ಬೂಡದೇರು ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ರಾಧಮ್ಮ ಎಂಬುವರಿಗೂ ಹಾಗೂ ಇವರ ಗಂಡ ಶ್ರೀನಿವಾಸರೆಡ್ಡಿಗೆ ಸಾಂಸಾರಿಕ ವಿಷಯವಾಗಿ ಆಗಾಗ್ಗೆ ಜಗಳ ಸಂಭವಿಸುತ್ತಿತ್ತು. ದಿನಾಂಕ ೨೩-೦೧-೨೦೦೮ ರಂದು ರಾಧಮ್ಮ ರವರ ಮೃತದೇಹ ಗ್ರಾಮದ ಬಾವಿಯೊಂದರಲ್ಲಿ ದೊರೆತಿರುತ್ತದೆ. ದಿನಾಂಕ ೨೩-೦೧-೨೦೦೮ ರಂದು ೧೨೦೦ ಗಂಟೆಯ ಸಮಯದಲ್ಲಿ ತನ್ನ ಪತ್ನಿಯನ್ನು ಬೂಡದೇರು ಗ್ರಾಮದ ಬಾವಿಯ ಬಳಿ ಕರೆದುಕೊಂಡು ಹೋದ ಶ್ರೀನಿವಾಸರೆಡ್ಡಿ ನಿದ್ರೆಯ ಮಾತ್ರೆಗಳನ್ನು ನೀಡಿ ಬಾವಿಯೊಳಗೆ ತಳ್ಳಿ ರಾಧಮ್ಮರವರನ್ನು ಕೊಲೆ ಮಾಡಿರುವುದಾಗಿ ರಾಧಮ್ಮ ರವರ ತಾಯಿ ಆಧಿಲಕ್ಷ್ಮಮ್ಮ ರವರು ತಮ್ಮ ದೂರಿನಲ್ಲಿ ತಿಳಿಸಿರುತ್ತಾರೆ.

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

  •   ಮಾಲೂರು ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಆಂದ್ರಪ್ರದೇಶ ಕುಪ್ಪಂ ಜಿಲ್ಲೆಯ ವಾಸಿಗಳಾದ ಮಲ್ಲಪ್ಪ ಮತ್ತು ವೆಂಕಟೇಶ್ ಎಂಬುವರು ಕಳವು ಮಾಡಲು ಯತ್ನಿಸಿ ಸಿಕ್ಕಿಬಿದ್ದ ಘಟನೆ ಮಾಲೂರು ತಾಲೂಕು ಯಶವಂತಪುರ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ ೨೭-೦೧-೨೦೦೮ ರಂದು ೦೫೧೫ ಗಂಟೆ ಸಮಯದಲ್ಲಿ ಆರೋಪಿಗಳು ಗ್ರಾಮದ ರಾಘವೇಂದ್ರ ಎಂಬುವರ ಜಮೀನಿನ ಕೊಳವೆಬಾವಿಗೆ ಅಳವಡಿಸಿದ್ದ ಕೇಬಲ್ ವೈರನ್ನು ಕಳವು ಮಾಡಲು ಪ್ರಯತ್ನಿಸುತ್ತಿದ್ದು ಸ್ಥಳಕ್ಕೆ ಬಂದ ರಾಘವೇಂದ್ರ ಮತ್ತು ಬೈರೇಗೌಡ ಎಂಬುವರಿಗೆ ಸಿಕ್ಕಿಬಿದ್ದಿರುತ್ತಾರೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೬ ನೇ ಜನವರಿ ೦೮

January 26, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೦೧-೨೦ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ತೊರದೇವಂಡಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೦-೦೧-೨೦೦೮ ರಂದು ರಾತ್ರಿ ಕೋಲಾರ ತಾಲೂಕು ಮಲ್ಲಸಂದ್ರ ಗ್ರಾಮದಿಂದ ತೊರದೇವಂಡಹಳ್ಳಿ ಗ್ರಾಮಕ್ಕೆ ಹೊಸದಾಗಿ ಎಳೆದಿರುವ ೧೧ ಕೆ.ವಿ ತಂತಿಯ ರಾಬಿಟ್ ವಾಹಕ ತಂತಿಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ತಂತಿಯ ಬೆಲೆ ರೂ. ೪೯,೦೧೫/ ಆಗಿರುತ್ತದೆ.

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೬

-ಮಾರಣಾಂತಿಕ: ೦೨

  •   ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೧-೨೦೦೮ ರಂದು ೦೫೦೦ ಗಂಟೆ ಸಮಯದಲ್ಲಿ ಆಂದ್ರಪ್ರದೇಶ ಪ್ರಕಾಶಂ ಜಿಲ್ಲೆಯ ವಾಸಿ ಶೇಖ್ ಅಹಮದ್ ಪಾಷ ಎಂಬುವರು ತಮ್ಮ ಇನೋವಾ ಸಂಖ್ಯೆ ಎಪಿ-೦೨-ಎಲ್-೯೧೮೯ ಕಾರಿನಲ್ಲಿ ಬೆಂಗಳೂರಿಗೆ ಹೋಗುವ ಸಲುವಾಗಿ ಶ್ರೀನಿವಾಸಪುರ ತಾಲೂಕು ಜೊಡಿಕೊತ್ತಪಲ್ಲಿ ಕ್ರಾಸ್ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಕಾರಿನ ಚಾಲಕ ಬ್ರಹ್ಮಯ್ಯ ಕಾರನ್ನು ಅತಿವೇಗ ಮತ್ತು ಅಜಾರೂಕತೆಯಿಂದ ಚಾಲನೆ ಮಾಡಿ ರಸ್ತೆ ಬದಿಯಲ್ಲಿದ್ದ ಹುಣಸೇಮರಕ್ಕೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಚಾಲಕ ಬ್ರಹ್ಮಯ್ಯ ಮತ್ತು ಕಾರಿನಲ್ಲಿದ್ದ ನಾಗರಾಜಕುಮಾರಿ @ ಹಸೀನಾ ಎಂಬುವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.

 

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೧-೨೦೦೮ ರಂದು ೦೬೦೦ ಗಂಟೆ ಸಮಯದಲ್ಲಿ ತಮಿಳುನಾಡು ವೆಲ್ಲೂರು ವಾಸಿ ಕೆ.ಭಾಸ್ಕರ್ ಎಂಬುವರು ತಮ್ಮ ಬಜಾಜ್ ಪಲ್ಸರ್ ಸಂಖ್ಯೆ ಕೆಎ-೦೧-ಇಸಿ-೭೯೭೯ ದ್ವಿಚಕ್ರವಾಹನದಲ್ಲಿ ಬೆಂಗಳೂರಿನಿಂದ ಗುಡಿಯಾತಂಗೆ ಹೋಗುವ ಸಲುವಾಗಿ ಕೋಲಾರ-ಮುಳಬಾಗಿಲು ಎನ್ ಹೆಚ್ ೦೪ ರಸ್ತೆಯ ಚದುಮನಹಳ್ಳಿ ಗೇಟ್ ಬಳಿ ಹೋಗುತ್ತಿದ್ದರು. ಸಮಯದಲ್ಲಿ ಯಾವುದೋ ಒಂದು ಅಪರಿಚಿತ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಕೆ.ಭಾಸ್ಕರ್ ರವರ ತಲೆಗೆ ತೀವ್ರವಾದ ಗಾಯಗಳಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ
  • -ಸಾಧಾರಣ: ೦೪

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೭-೦೧-೨೦೦೮ ರಂದು ೨೧೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಬೆಳಗಾನಹಳ್ಳಿ ಗ್ರಾಮದ ವಾಸಿ ಮುನಿಯಪ್ಪ ರವರು ಕೋಲಾರದಿಂದ ಬಸ್ ನಲ್ಲಿ ಬಂದು ಶ್ರೀರಾಂಪುರ ಗೇಟ್ ನಲ್ಲಿ ಇಳಿದು ತಮ್ಮ ಗ್ರಾಮದ ಕಡೆ ಹೋಗುತ್ತಿದ್ದರು. ಸಮಯದಲ್ಲಿ ಕೋಲಾರದ ಕಡೆಯಿಂದ ಬಂದ ಟಾಟಾ ಇಂಡಿಕಾ ಕಾರ್ ಸಂಖ್ಯೆ ಕೆಎ-೦೧-ಎಂಬಿ-೧೩೫ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಮುನಿಯಪ್ಪರವರಿಗೆ ಗಾಯಗಳುಂಟಾಗಿದ್ದು ಚಿಕಿತ್ಸೆಗಾಗಿ ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೦೧-೨೦೦೮ ರಂದು ೧೮೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಯಥೋರಹಳ್ಳಿ ಗ್ರಾಮದ ವಾಸಿ ಗೋಪಾಲಪ್ಪ ಎಂಬುವರು ತನ್ನ ಮಗಳಾದ ಪ್ರೇಮ ಎಂಬುವರೊಡನೆ ತಮ್ಮ ತೋಟದಿಂದ ಮನೆಯ ಕಡೆಗೆ ಹೋಗುವ ಸಲುವಾಗಿ ನಡೆದುಕೊಂಡು ಹೋಗುತ್ತಿದ್ದರು. ಸಮಯದಲ್ಲಿ ಮುಳಬಾಗಿಲು ಕಡೆಯಿಂದ ಬಂದ ಸ್ವರಾಜ್ ಮಜ್ದಾ ಜೀಪ್ ಸಂಖ್ಯೆ ಟಿಎನ್-೨೩-ಎಂ-೧೪೦೬ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಪ್ರೇಮರ ರವರಿಗೆ ಗಾಯಗಳುಂಟಾಗಿರುತ್ತದೆ.

  •   ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೧-೨೦೦೮ ರಂದು ೧೨೪೫ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಸೀಲೇಪಲ್ಲಿ ಗ್ರಾಮದ ವಾಸಿ ಶ್ರೀರಾಮ (೨೭) ಎಂಬುವರು ಕೋಲಾರದಿಂದ ಕೆಎ-೦೩-ಪಿ-೨೭೪ ಸಂಖ್ಯೆಯ ಮಾರುತಿ ವ್ಯಾನ್ ನಲ್ಲಿ ತಮ್ಮ ಗ್ರಾಮಕ್ಕೆ ಹೋಗುತ್ತಿದ್ದರು. ಸಮಯದಲ್ಲಿ ವ್ಯಾನ್ ಚಾಲಕ ಶ್ರೀನಿವಾಸಪುರ ತಾಲೂಕು ಗೌನಪಲ್ಲಿ ಗ್ರಾಮದ ವಾಸಿ ಅಮರನಾರಾಯಣ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದು ನಿಯಂತ್ರಣ ಕಳೆದುಕೊಂಡ ಪರಿಣಾಮ ವಾಹನ ಕೋಡಿಕಣ್ಣೂರು ಕಟ್ಟೆ ಬಳಿ ಕೆರೆಯ ಅಂಗಳಕ್ಕೆ ಬಿದ್ದಿರುತ್ತದೆ. ಇದರ ಪರಿಣಾಮ ಶ್ರೀರಾಮ ಮತ್ತು ಮುನಿಆಂಜನಪ್ಪ ಎಂಬುವರಿಗೆ ಗಾಯಗಳುಂಟಾಗಿರುತ್ತದೆ.

  •   ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೦೧-೨೦೦೮ ರಂದು ೧೯೧೫ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಯಲ್ದೂರು ಗ್ರಾಮದ ವಾಸಿಗಳಾದ ನಜೀರುಲ್ಲಾಖಾನ್ ಮತ್ತು ನೂರ್ ತಾಜ್ ಎಂಬುವರು ಕೋಲಾರದಿಂದ ಕೆಎ-೦೭-ಜೆ-೫೫೮೦ ಸಂಖ್ಯೆಯ ಹೀರೋಹೋಂಡಾ ಸ್ಪ್ಲೆಂಡರ್ ದ್ವಿಚಕ್ರವಾಹನದಲ್ಲಿ ತಮ್ಮ ಗ್ರಾಮಕ್ಕೆ ಹೋಗುವ ಸಲುವಾಗಿ ಚಿಂತಮಾಕನಹಳ್ಳಿ ಗ್ರಾಮದ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಟಾಟಾ ಸುಮೋ ಜೀಪ್ ಸಂಖ್ಯೆ ಕೆಎ-೦೧-ಎಡಿ-೪೩೫೩ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ದ್ವಿಚಕ್ರವಾಹನದ ಸವಾರರಾದ ನಜೀರುಲ್ಲಾಖಾನ್ ಮತ್ತು ನೂರ್ ತಾಜ್ ಎಂಬುವರಿಗೆ ಗಾಯಗಳುಂಟಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •   ನಂಗಲಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲೂಕು ಬೂಡದೇರು ಗ್ರಾಮದ ವಾಸಿ ರಾಧಮ್ಮ ಎಂಬುವರು ಮೃತಪಟ್ಟವರು. ದಿನಾಂಕ ೨೩-೦೧-೨೦೦೮ ರಂದು ರಾಧಮ್ಮ ರವರು ತಮ್ಮ ಗ್ರಾಮದ ಬಾವಿಯೊಂದರಲ್ಲಿ ಬಿದ್ದು ಮೃತಪಟ್ಟಿರುತ್ತಾರೆ. ಮರಣದ ಬಗ್ಗೆ ರಾಧಮ್ಮ ರವರ ಪತಿ ಬಿ.ವಿ.ಸೀನಪ್ಪ ಎಂಬುವರ ಮೇಲೆ ಅನುಮಾನ ಇರುವುದಾಗಿ ಇವರ ಪುತ್ರ ಎಸ್.ನಾಗರಾಜ ಎಂಬುವರು ತಮ್ಮ ದೂರಿನಲ್ಲಿ ತಿಳಿಸಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೫ ನೇ ಜನವರಿ ೦೮

January 25, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೫-೦೧-೨೦ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ :

  •   ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರ ಕುರುಬರ ಪೇಟೆ ವಾಸಿ ನಾರಾಯಣಸ್ವಾಮಿ (೪೫) ರವರಿಗೆ ಸೇರಿದ ಟಿ.ವಿ.ಎಸ್ ಸೂಪರ್ ಎಕ್ಸ್ ಎಲ್ ಹೆವಿಡ್ಯೂಟಿ ಸಂಖ್ಯೆ ಕೆಎ-೦೭-ಎಲ್-೧೪೭೪ ದ್ವಿಚಕ್ರವಾಹನ ಕಳುವಾಗಿರುತ್ತದೆ. ದಿನಾಂಕ ೨೦-೧೨-೨೦೦೭ ರಂದು ರಾತ್ರಿ ನಾರಾಯಣಸ್ವಾಮಿರವರು ತಮ್ಮ ವಾಹನವನ್ನು ಕೋಲಾರ ಶಾಂತಿನಗರದಲ್ಲಿರುವ ತನ್ನ ಸ್ನೇಹಿತನ ಮನೆಯ ಮುಂದೆ ನಿಲ್ಲಿಸಿದ್ದಾಗ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ವಾಹನದ ಬೆಲೆ ರೂ ೨೮,೦೦೦/ ಆಗಿರುತ್ತದೆ.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೨

  •   ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲೂಕು ಗೊಲ್ಲಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೩-೦೧-೨೦೦೮ ರಂದು ರಾತ್ರಿ ಮಾಲೂರು ತಾಲೂಕು ಹುರುದೇನಹಳ್ಳಿ ಗ್ರಾಮದ ವಾಸಿ ಜಗದೀಶ್ ಎಂಬುವರು ಮದುವೆ ಸಮಾರಂಭವೊಂದರ ಪ್ರಯುಕ್ತ ಗೊಲ್ಲಹಳ್ಳಿಗೆ ಹೋಗಿದ್ದರು. ರಾತ್ರಿ ೦೨೦೦ ಗಂಟೆ ಸಮಯದಲ್ಲಿ ಮದುವೆ ಮನೆಯಲ್ಲಿ ಕರೆಂಟ್ ಹೋದ ವಿಚಾರಚಾಗಿ ಹೊಸೂರು ತಾಲೂಕು ಕುಪ್ಪನಹಳ್ಳಿ ಗ್ರಾಮದ ವಾಸಿ ರಾಜಗೋಪಾಲ ಎಂಬುವರ ಮೇಲೆ ಗೊಲ್ಲಹಳ್ಳಿ ಗ್ರಾಮದ ವಾಸಿಗಳಾದ ಕಾರ್ತಿಕ್, ಮಲ್ಲೇಶ್, ಸಂಪತ್ ಕುಮಾರ್, ಸುಬ್ರಮಣಿ, ರವಿ ಮತ್ತು ಮಂಜುನಾಥ ಎಂಬುವರು ಜಗಳ ತೆಗದು ಹೊಡೆಯುತ್ತಿದ್ದು ಅಡ್ಡ ಹೋದ ಜಗದೀಶ್ ರವರಿಗೆ ಆರೋಪಿಗಳು ಸೌದೆಯಿಂದ ಹೊಡೆದು ಗಾಯ ಪಡಿಸಿರುತ್ತಾರೆ.

  •   ಮಾಲೂರು ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲೂಕು ತೋರನಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೨-೦೧-೨೦೦೮ ರಂದು ೨೦೦೦ ಗಂಟೆ ಸಮಯದಲ್ಲಿ ತೋರನಹಳ್ಳಿ ಗ್ರಾಮದ ತಿಮ್ಮರಾಯಪ್ಪ (೩೮) ಎಂಬುವರು ತನ್ನ ವಾಸದಮನೆಯಲ್ಲಿದ್ದರು. ಸಮಯದಲ್ಲಿ ಅಲ್ಲಿಗೆ ಬಂದ ಅದೇ ಗ್ರಾಮದ ವಾಸಿಗಳಾದ ನಾರಾಯಣಪ್ಪ, ಮುನಯ್ಯ, ರಾಮಕೃಷ್ಣ, ನಾರಾಯಣಸ್ವಾಮಿ, ಪ್ರಕಾಶ್, ಮುನಿರಾಜು, ಸೀನಾ, ನಾಗಪ್ಪ ಮತ್ತು ಮಂಜು ಎಂಬುವರು ತಿಮ್ಮರಾಯಪ್ಪ ರವರ ಮೇಲೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಕಾಲಿನಿಂದ ಹೊಡೆದು ಗಾಯ ಪಡಿಸಿರುತ್ತಾರೆ. ಅಡ್ಡಹೋದ ತಿಮ್ಮರಾಯಪ್ಪರವರ ಹೆಂಡತಿಗೂ ಸಹಾ ಆರೋಪಿಗಳು ಹಲ್ಲೆ ನಡೆಸಿ ಅವರ ಕತ್ತಿನಲ್ಲಿದ್ದ ಬಂಗಾರದ ಚೈನನ್ನು ಕಸಿದುಕೊಂಡು ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೩

  •   ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಠ ಪಂಗಡ (ದೌರ್ಜನ್ಯತಡೆ) ಕಾಯ್ದೆ ಹಾಗೂ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಘಟನೆಯು ಶ್ರೀನಿವಾಸಪುರ ತಾಲೂಕು ಬಗಲಹಳ್ಳಿ ಗ್ರಾಮದಲ್ಲಿ ನಡೆದಿರುತ್ತದೆ. ಕೋಲಾರ ತಾಲೂಕು ಮುಳ್ಳಹಳ್ಳಿ ಗ್ರಾಮದ ವಾಸಿ ತಮ್ಮಯ್ಯ ಎಂಬುವರು ಬಗಲಹಳ್ಳಿ ಗ್ರಾಮದಲ್ಲಿರುವ ತಮ್ಮ ಜಮೀನನ್ನು ಅದೇ ಗ್ರಾಮದ ವಾಸಿ ಚನ್ನೇಗೌಡ ಎಂಬುವರಿಗೆ ವರ್ಷಗಳ ಅವಧಿಗೆ ಭೋಗ್ಯಕ್ಕೆ ನೀಡಿದ್ದರು. ಜಮೀನಿನ ಭೋಗ್ಯದ ಅವಧಿ ಮುಗಿದಿದ್ದು ದಿನಾಂಕ ೨೩-೦೧-೨೦೦೮ ರಂದು ೦೮೩೦ ಗಂಟೆ ಸಮಯದಲ್ಲಿ ತಮ್ಮಯ್ಯ ರವರನ್ನು ತನ್ನ ಮನೆಗೆ ಕರೆಸಿಕೊಂಡ ಚನ್ನೇಗೌಡ ಮತ್ತು ಅವರ ಹೆಂಡತಿ ಚನ್ನಮ್ಮರವರು ಕೈಕಾಲುಗಳನ್ನು ಹಿಡಿದುಕೊಂಡು ಬಾಯಿಯೊಳಗೆ ಬಟ್ಟೆಯನ್ನು ತುರುಕಿ ತಮ್ಮಯ್ಯರವರ ಕೈಯಿಂದ ಕಾಗದವೊಂದಕ್ಕೆ ಹೆಬ್ಬೆಟ್ಟನ್ನು ಒತ್ತಿಸಿಕೊಂಡು ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿ ಕೊಲೆ ಹಲ್ಲೆ ನಡೆಸಿ ಪ್ರಯತ್ನ ನಡೆಸಿರುತ್ತಾರೆ.

  •   ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಠ ಪಂಗಡ (ದೌರ್ಜನ್ಯತಡೆ) ಕಾಯ್ದೆ ಹಾಗೂ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಘಟನೆಯು ಶ್ರೀನಿವಾಸಪುರ ತಾಲೂಕು ಕೂರಿಗೆಪಲ್ಲಿ ಗ್ರಾಮದಲ್ಲಿ ನಡೆದಿರುತ್ತದೆ. ದಿನಾಂಕ ೧೯-೦೧-೨೦೦೮ ರಂದು ೧೯೦೦ ಗಂಟೆ ಸಮಯದಲ್ಲಿ ಕೂರಿಗೆಪಲ್ಲಿ ಗ್ರಾಮದ ವಾಸಿ ನರಸಿಂಹಪ್ಪ ಎಂಬುವರು ಹಾಲನ್ನು ಡೈರಿಗೆ ಹಾಕಿ ತನ್ನ ಮನೆಗೆ ವಾಪಸ್ ಬರುತ್ತಿದ್ದರು. ಸಮಯದಲ್ಲಿ ಅಲ್ಲಿಗೆ ಬಂದ ಕೆ.ವಿ.ಶಿವಾರೆಡ್ಡಿ, ಕೆ.ವಿ.ರಾಜಾರೆಡ್ಡಿ, ಶಿವಕುಮಾರ್ ಹಾಗೂ ಮತ್ತಿತರರು ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿ ದೊಣ್ಣೆಗಳಿಂದ ಹಲ್ಲೆ ನಡೆಸಿ ನರಸಿಂಹಪ್ಪರವರ ಹೆಂಡತಿ ಲಲಿತಮ್ಮ ಎಂಬುವರನ್ನು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಹಿಂದೆಯೂ ಸಹಾ ನರಸಿಂಹಪ್ಪ ಮತ್ತು ಆರೋಪಿಗಳಿಗೆ ಜಗಳವಾಗಿದ್ದು ಹಿನ್ನೆಲೆಯಲ್ಲಿ ಕೃತ್ಯ ಸಂಭವಿಸಿರುತ್ತದೆ.

  •   ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಠ ಪಂಗಡ (ದೌರ್ಜನ್ಯತಡೆ) ಕಾಯ್ದೆ ಹಾಗೂ ದೊಂಬಿಗೆ ಸಂಬಂಧಿಸಿದಂತೆ ಮತ್ತೊಂದು ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಘಟನೆಯು ಶ್ರೀನಿವಾಸಪುರ ತಾಲೂಕು ಕೂರಿಗೆಪಲ್ಲಿ ಗ್ರಾಮದಲ್ಲಿ ನಡೆದಿರುತ್ತದೆ. ದಿನಾಂಕ ೧೯-೦೧-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಮುಡಿವಾರಿಪಲ್ಲಿ ಗ್ರಾಮದ ವಾಸಿ ರಾಮಚಂದ್ರಪ್ಪ ಎಂಬುವರು ತನ್ನ ಸ್ನೇಹಿತ ಶಿವಾರೆಡ್ಡಿ ರವರನ್ನು ನೋಡಿಕೊಂಡು ಬರುವ ಸಲುವಾಗಿ ಕೂರಿಗೆಪಲ್ಲಿಗೆ ಹೋಗಿದ್ದರು. ಸಮಯದಲ್ಲಿ ಅಲ್ಲಿಗೆ ಬಂದ ಕೂರಿಗೆಪಲ್ಲಿ ಗ್ರಾಮದ ವಾಸಿಗಳಾದ ಕೆ.ಬಿ.ಮಂಜುನಾಥ, ಕೆ.ಬಿ.ಶ್ರೀನಿವಾಸ್, ಕೆ.ಬಿ.ಮಂಜು, ರಾಮಕೃಷ್ನ, ನರಸಿಂಹಪ್ಪ, ಕೆ..ಸುಧಾಕರ್, ರಾಮಲಿಂಗಾರೆಡ್ಡಿ ಹಾಗೂ ಮತ್ತಿತರರು ಶಿವಾರೆಡ್ಡಿ ರವರ ಮನೆಗೆ ಹೋಗದಂತೆ ರಾಮಚಂದ್ರಪ್ಪ ರವರನ್ನು ತಡೆದು ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿ ರಾಡಿನಿಂದ ಹೊಡೆದು ಗಾಯಪಡಿಸಿರುತ್ತಾರೆ. ಸ್ಥಳಕ್ಕೆ ಬಂದ ಶಿವಾರೆಡ್ಡಿರವರಿಗೂ ಸಹಾ ಆರೋಪಿಗಳು ಕಲ್ಲಿನಿಂದ ಹೊಡೆದು ಗಾಯಪಡಿಸಿರುತ್ತಾರೆ.

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೧

  •   ಮಾಲೂರು ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲೂಕು ಚಿಕ್ಕತಿರುಪತಿ ಗ್ರಾಮದ ವಾಸಿ ಮುನಿರೆಡ್ಡಿ ಎಂಬುವರ ಮಗಳಾದ ವೆನ್ನಲಾ (೨೧) ಎಂಬ ಹುಡುಗಿ ಕಾಣೆಯಾದವಳು. ದಿನಾಂಕ ೧೮-೦೧-೨೦೦೮ ರಂದು ೧೯೦೦ ಗಂಟೆ ಸಮಯದಲ್ಲಿ ತನ್ನ ಮನೆಯಿಂದ ಹೊರಟ ವೆನ್ನಲಾ ಹಿಂತಿರುಗಿ ಬಾರದೇ ಕಾಣೆಯಾಗಿರುತ್ತಾಳೆ. ಬಗ್ಗೆ ತಮ್ಮ ಗ್ರಾಮದ ವಾಸಿಗಳಾದ ರಘು, ಮುರಳಿ ಮತ್ತು ವೆಂಕಟೇಶ್ ಎಂಬುವರ ಮೇಲೆ ಅನುಮಾನ ಇರುವುದಾಗಿ ಮುನಿರೆಡ್ಡಿರವರು ತಮ್ಮ ದೂರಿನಲ್ಲಿ ತಿಳಿಸಿರುತ್ತಾರೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೪ ನೇ ಜನವರಿ ೦೮

January 24, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೪-೦೧-೨೦ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮನೆಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಎನ್ ಹೆಚ್ ೪ ರಸ್ತೆಯ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಬಳಿ ಇರುವ ಶ್ರೀ ಮಾರುತಿ ಸೇವಾ ಮಂದಿರ ದೇವಾಲಯದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೩-೦೧-೨೦೦೮ ರಂದು ರಾತ್ರಿ ದೇವಾಲಯದ ಬಾಗಿಲಿನ ಬೀಗವನ್ನು ಹೊಡದು ಒಳಗೆ ಪ್ರವೇಶಿಸಿದ ಯಾರೋ ಕಳ್ಳರು ದೇವಾಲಯದಲ್ಲಿಟ್ಟಿದ್ದ ಹುಂಡಿಯನ್ನು ಹೊಡೆದು ಅದರಲ್ಲಿದ್ದ ಸುಮಾರು ರೂ ೧೫೦೦/ ನಗದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೩

  •   ಗೌನಪಲ್ಲಿ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೫-೦೧-೨೦೦೮ ರಂದು ೦೬೩೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಬೈಪಲ್ಲಿ ಗ್ರಾಮದ ವಾಸಿ ರಾಜಣ್ಣ ಎಂಬುವರು ಸಂಕ್ರಾಂತಿ ಹಬ್ಬದ ಪ್ರಯುಕ್ತ ತನ್ನ ಎತ್ತುಗಳೊಡನೆ ತಮ್ಮ ಗ್ರಾಮದಲ್ಲಿ ಮೆರವಣಿಗೆ ಹೋಗುತ್ತಿದ್ದರು. ಸಮಯದಲ್ಲಿ ಅಲ್ಲಿಗೆ ಬಂದ ಅದೇ ಗ್ರಾಮದ ವಾಸಿಗಳಾದ ನರಸಿಂಹಲು, ವೆಂಕಟಲಕ್ಷ್ಮಮ್ಮ, ಆದೆಮ್ಮ, ದಿನಕರ್ ಮತ್ತು ದ್ವಾರಕೀಶ್ ಎಂಬುವರು ಅಕ್ರಮ ಗುಂಪು ಕಟ್ಟಿಕೊಂಡು ರಾಜಣ್ಣರವರ ಮೇಲೆ ಜಗಳ ತೆಗೆದು ಕೈಗಳಿಂದ ಮತ್ತು ದೊಣ್ಣೆಯಿಂದ ಹೊಡೆದು ಗಾಯ ಪಡಿಸಿರುತ್ತಾರೆ. ಪರಸ್ಪರರ ನಡುವೆ ಇದ್ದ ಹಳೇ ವೈಷಮ್ಯ ಕೃತ್ಯಕ್ಕೆ ಕಾರಣವಾಗಿರುತ್ತದೆ.

  •   ಗೌನಪಲ್ಲಿ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಮತ್ತೊಂದು ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೦೧-೨೦೦೮ ರಂದು ೧೯೦೦ ಗಂಟೆ ಸಮಯದಲ್ಲಿ ಗೌನಪಲ್ಲಿ ಗ್ರಾಮದ ವಾಸಿ ಮುಜೀಬ್ ಪಾಷ ಎಂಬುವರು ತಮ್ಮ ವಾಸದ ಮನೆಯಲ್ಲಿದ್ದರು. ಸಮಯದಲ್ಲಿ ಅಲ್ಲಿಗೆ ಬಂದ ಅದೇ ಗ್ರಾಮದ ವಾಸಿಗಳಾದ ಅಜಮದ್, ನಯಾಜ್, ಇಂತಿಯಾಜ್, ಪಯಾಜ್, ಮುನೀರ್, ನದೀಮ್ ಮತ್ತಿತರರು ಅಕ್ರಮ ಗುಂಪು ಕಟ್ಟಿಕೊಂಡು ಮುಜೀಬ್ ಪಾಷರವರ ಮೇಲೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಮತ್ತು ದೊಣ್ಣೆಯಿಂದ ಹೊಡೆದು ಗಾಯ ಪಡಿಸಿರುತ್ತಾರೆ. ಪರಸ್ಪರರ ನಡುವೆ ಇದ್ದ ಹಳೇ ವೈಷಮ್ಯ ಕೃತ್ಯಕ್ಕೆ ಕಾರಣವಾಗಿರುತ್ತದೆ.

  •   ಮಾಲೂರು ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೧-೨೦೦೮ ರಂದು ೨೦೦೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ತೊರನಹಳ್ಳಿ ಗ್ರಾಮದ ವಾಸಿ ಶ್ರೀನಿವಾಸ (೩೫) ಮತ್ತು ಮುನಯ್ಯ ಎಂಬುವರು ತಮ್ಮ ತಮ್ಮ ಗ್ರಾಮದ ಮುನಿಯಪ್ಪರವರ ಅಂಗಡಿಯ ಬಳಿ ಕುಳಿತಿದ್ದರು. ಆ ಸಮಯದಲ್ಲಿ ಅಲ್ಲಿಗೆ ಬಂದ ಅದೇ ಗ್ರಾಮದ ವಾಸಿಗಳಾದ ತಿಮ್ಮಪ್ಪ, ದೊನಪ್ಪ, ನಾರಾಯಣಸ್ವಾಮಿ, ಕೃಷ್ಣಪ್ಪ ಮತ್ತಿತರರು ಅಕ್ರಮ ಗುಂಪು ಕಟ್ಟಿಕೊಂಡು ಶ್ರೀನಿವಾಸರವರ ಮೇಲೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಮತ್ತು ದೊಣ್ಣೆಯಿಂದ ಹೊಡೆದು ಗಾಯ ಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಪರಸ್ಪರರ ನಡುವೆ ಇದ್ದ ಹಳೇ ವೈಷಮ್ಯ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.

ಹಲ್ಲೆ: ೦೧

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲೂಕು ಕುರುಡಮಲೆ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೫-೦೧-೨೦೦೮ ರಂದು ೦೯೩೦ ಗಂಟೆ ಸಮಯದಲ್ಲಿ ಕುರುಡಮಲೆ ಗ್ರಾಮದ ವಾಸಿ ವೆಂಕಟರಾಮಪ್ಪ (೪೦) ಎಂಬುವರ ಮೇಲೆ ಅದೇ ಗ್ರಾಮದ ವಾಸಿಗಳಾದ ಮುನೆಪ್ಪ, ಶಿವಪ್ಪ, ನಾಗರಾಜ ಮತ್ತು ಸುಬ್ರಮಣಿ ಎಂಬುವರು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆನಡೆಸಿ ಗಾಯಪಡಿಸಿರುತ್ತಾರೆ. ಪರಸ್ಪರರ ನಡುವೆ ಇದ್ದ ಹಳೇ ವೈಷಮ್ಯ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •   ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರ ಗಲ್ ಪೇಟೆ ವಾಸಿ ವಿಜಯ ಪ್ರಸನ್ನಕುಮಾರ್ (೫೫) ಎಂಬುವರು ಮೃತಪಟ್ಟಿರುತ್ತಾರೆ. ದಿನಾಂಕ ೨೩-೦೧-೨೦೦೮ ರಂದು ೧೦೩೦ ಗಂಟೆ ಸಮಯದಲ್ಲಿ ವಿಜಯಪ್ರಸನ್ನಕುಮಾರ್ ರವರು ಕೋಲಾರ ನಗರ ಕಾಲೇಜು ವೃತ್ತದ ಬಳಿ ಸೈಕಲ್ ನಲ್ಲಿ ಹೋಗುತ್ತಿದ್ದರು. ಸಮಯದಲ್ಲಿ ತಲೆತಿರುಗಿ ಬಿದ್ದು ಗಾಯಗೊಂಡಿರುತ್ತಾರೆ. ಚಿಕಿತ್ಸೆಗಾಗಿ ಎಸ್.ಎನ್.ಆರ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೩ ನೇ ಜನವರಿ ೦೮

January 23, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ -೦೧-೨೦ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೨

  •   ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೧-೨೦೦೮ ರಂದು ೧೧೩೦ ಗಂಟೆ ಸಮಯದಲ್ಲಿ ಬೆಂಗಳೂರು ನಗರದ ವಾಸಿ ಮಹಮ್ಮದ್ ಮುಯೀಂ ತನ್ನ ಮಗ ಸುಲ್ತಾನ್ ಬೇಗ್ ನೊಂದಿಗೆ ತನ್ನ ಬಜಾಜ್ ಪ್ಲಾಟೀನಂ ಸಂಖ್ಯೆ ಕೆಎ-೦೧-ಇಜಿ-೧೫೫೧ ದ್ವಿಚಕ್ರ ವಾಹನದಲ್ಲಿ ಬೆಂಗಳೂರಿನಿಂದ ಕೋಲಾರಕ್ಕೆ ಹೋಗುವ ಸಲುವಾಗಿ ಎನ್ ಹೆಚ್ ೪ ರಸ್ತೆಯ ವ್ಯಾಲಿ ಶಾಲೆಯ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಕೆ.ಎಸ್.ಆರ್.ಟಿ.ಸಿ ಬಸ್ ಸಂಖ್ಯೆ ಕೆಎ-೦೭-೧೦೪೮ ಬಸ್ಸಿನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ಮಹಮ್ಮದ್ ಮುಯೀಂ ಮತ್ತು ಸುಲ್ತಾನ್ ಬೇಗ್ ರವರಿಗೆ ಗಾಯಗಳುಂಟಾಗಿರುತ್ತದೆ.

  •   ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೧-೨೦೦೮ ರಂದು ೨೧೧೫ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಕಾಮದೇನಹಳ್ಳಿ ಗ್ರಾಮದ ವಾಸಿ ಕೆ.ಸಿ.ಜಗನ್ನಾಥ (೨೬) ಎಂಬುವರು ಕೋಲಾರ ನಗರದ ಬೃಂದಾವನ ವೃತ್ತದ ಬಳಿ ನಡೆದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ ಹಿಂಭಾಗದಿಂದ ಬಂದ ಕೆಎ-೦೭-ಎಲ್-೩೬೯೫ ಸಂಖ್ಯೆಯ ದ್ವಿಚಕ್ರವಾಹನದ ಚಾಲಕ ತನ್ನ ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಕೆ.ಸಿ.ಜಗನ್ನಾಥರವರಿಗೆ ಗಾಯಗಳುಂಟಾಗಿದ್ದು ಚಿಕಿತ್ಸೆಗಾಗಿ ಕೋಲಾರದ ಅಮೂಲ್ಯ ನರ್ಸಿಂಗ್ ಹೊಂ ನಲ್ಲಿ ದಾಖಲಾಗಿರುತ್ತಾರೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ೦೧

  •   ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೧-೨೦೦೮ ರಂದು ೦೬೧೦ ಗಂಟೆ ಸಮಯದಲ್ಲಿ ಕೋಲಾರ ನಗರ ಕೆ.ಜಿ ಮೊಹಲ್ಲಾದ ವಾಸಿ ಅಬ್ದುಲ್ ಬಷೀರ್ (೫೫) ಎಂಬುವರು ನಮಾಜ್ ಮುಗಿಸಿಕೊಂಡು ತಮ್ಮ ಮನೆಯ ಬಳಿ ಬರುತ್ತಿದ್ದರು. ಆ ಸಮಯದಲ್ಲಿ ಅಲ್ಲಿಗೆ ಬಂದ ಅಬ್ದುಲ್ ವಾಜೀರ್, ಗುಲ್ಜಾರ್ ಮತ್ತು ಅಬ್ದುಲ್ ನಜೀರ್ ಎಂಬುವರು ಒಂದು ಛಾಪಾಕಾಗದವನ್ನು ತಂದು ಸಹಿಮಾಡುವಂತೆ ಅಬ್ದುಲ್ ಬಷೀರ್ ರವರನ್ನು ಒತ್ತಾಯ ಮಾಡಿರುತ್ತಾರೆ. ಸಹಿ ಮಾಡಲು ನಿರಾಕರಿಸಿದ ಅಬ್ದುಲ್ ಬಷೀರ್ ರವರ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿದ ಮೇಲ್ಕಂಡ ಆರೋಪಿಗಳು ಕೊಠಡಿಯೊಂದರಲ್ಲಿ ಕೂಡುಹಾಕಿ ಬಾಯಿಗೆ ಬಟ್ಟೆ ತುರುಕಿ ಹೊಡೆದು ಕೊಲೆ ಮಾಡಲು ಪ್ರಯತ್ನಸಿ ಛಾಪಾಕಾಗದದ ಮೇಲೆ ಸಹಿ ಮಾಡುವಂತೆ ಒತ್ತಾಯಿಸಿರುತ್ತಾರೆ. ಆರೋಪಿಗಳು ಮತ್ತು ಅಬ್ದುಲ್ ಬಷೀರ್ ಸಹೋದರರಾಗಿದ್ದು ಆಸ್ತಿ ವಿಚಾರದಲ್ಲಿ ಪರಸ್ಪರರ ನಡುವೆ ಇದ್ದ ವೈಷಮ್ಯ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.

ದೊಂಬಿ: ಇಲ್ಲ

ಹಲ್ಲೆ: ೦೨

  •   ಮಾಲೂರು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲೂಕು ಭುವನಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೦-೦೧-೨೦೦೮ ರಂದು ೨೧೦೦ ಗಂಟೆ ಸಮಯದಲ್ಲಿ ಭುವನಹಳ್ಳಿ ಗ್ರಾಮದ ವಾಸಿ ರತನ್ ಸಿಂಗ್ (೫೦) ಎಂಬುವರ ಮೇಲೆ ಅದೇ ಗ್ರಾಮದ ವಾಸಿಗಳಾದ ಅಪ್ಪಿಸಿಂಗ್ ಮತ್ತು ನಾರಾಯಣಸಿಂಗ್ ಎಂಬುವರು ಜಗಳ ತೆಗೆದು ಕೈಗಳಿಂದ ಮತ್ತು ಮಚ್ಚಿನಿಂದ ಹೊಡೆದು ಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ರತನ್ ಸಿಂಗ್ ರವರಿಗೆ ಸೇರಿದ ಖಾಲಿಜಾಗದಲ್ಲಿ ಆರೋಪಿಗಳು ಬೇಲಿ ಹಾಕಿದ್ದು ಈ ವಿಚಾರದ ಹಿನ್ನೆಲೆಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ.

  •   ಮಾಸ್ತಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಮಾನಭಂಗಕ್ಕೆ ಪ್ರಯತ್ನ ಪಟ್ಟ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲೂಕು ದೊಡ್ಡಕಲ್ಲಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೨-೦೧-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ದೊಡ್ಡಕಲ್ಲಹಳ್ಳಿ ಗ್ರಾಮದ ವಾಸಿ ಸಂಪಂಗಿರಾಮಯ್ಯ (೪೫) ಎಂಬುವರು ತಮ್ಮ ಮನೆಯಲ್ಲಿದ್ದರು. ಆ ಸಮಯದಲ್ಲಿ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿದ ದೊಡ್ಡಕಲ್ಲಹಳ್ಳಿ ಗ್ರಾಮದ ವಾಸಿಗಳಾದ ಮುನಿಸ್ವಾಮಿ ಮತ್ತು ಮುನಿಯಪ್ಪ ಎಂಬುವರು ಸಂಪಂಗಿರಾಮಯ್ಯ ರವರ ಮೇಲೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಸಂಪಂಗಿರಾಮಯ್ಯ ರವರ ಹೆಂಡತಿಯನ್ನು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ದೊಣ್ಣೆ ಮತ್ತು ಕೈಗಳಿಂದ ಹೊಡೆದು ಗಾಯ ಪಡಿಸಿರುತ್ತಾರೆ. ಸಂಪಗಿರಾಮಯ್ಯ ರವರು ನ್ಯಾಯಾಲಯದಲ್ಲಿ ಆರೋಪಿಗಳ ವಿರುದ್ದವಾಗಿ ಸಾಕ್ಷಿ ಹೇಳಿದ್ದನ್ನು ಮನಸ್ಸಿನಲ್ಲಿಟ್ಟುಕೊಂಡು ಆರೋಪಿಗಳು ಈ ಕೃತ್ಯ ನಡೆಸಿರುತ್ತಾರೆ.

ಇತರೆ: ೦೧

  •   ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ದುಷ್ಪ್ರೇರಣೆ ನಡೆಸಿರುವ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲೂಕು ಕತ್ತಿಬೆಸಲಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೧-೦೧-೨೦೦೮ ರಂದು ರಾತ್ರಿ ಕತ್ತಿಬೆಸಲಹಳ್ಳಿ ಗ್ರಾಮದ ವಾಸಿ ಆಂಜನಮ್ಮ (೨೬) ಎಂಬುವರು ತಮ್ಮ ವಾಸದಮನೆಯಲ್ಲಿ ವಿಷ ಸೇವನೆ ಮಾಡಿ ಮೃತಪಟ್ಟಿರುತ್ತಾರೆ. ಆಂಜನಮ್ಮರವರಿಗೂ ಮತ್ತು ಇವರ ಗಂಡ ಸೀನಪ್ಪ ಎಂಬುವರಿಗೆ ಸಾಂಸಾರಿಕ ವಿಷಯವಾಗಿ ಜಗಳವಾಗುತ್ತಿದ್ದು ಈ ಹಿನ್ನಲೆಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.