ದಿನದ ಅಪರಾಧಗಳ ಪಕ್ಷಿನೋಟ ೨೯ ನೇ ಫ್ರಬ್ರವರಿ ೦೮

February 29, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ -೦೨-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೧

  •   ವೇಮಗಲ್ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈಗ್ಗೆ ೧೩ ವರ್ಷಗಳ ಹಿಂದೆ ಕೋಲಾರ ತಾಲೂಕು ವೇಮಗಲ್ ಗ್ರಾಮದ ವಾಸಿಯಾದ ಶ್ರೀಮತಿ ಹೇಮಾವತಿ ಎಂಬುವರ ವಿವಾಹ ಸಿಂಗಹಳ್ಳಿ ಗ್ರಾಮದ ವಾಸಿಯಾದ ವೆಂಕಟರಾಮಾಚಾರಿ ಎಂಬುವರೊಂದಿಗೆ ನಡೆದಿತ್ತು. ಮದುವೆ ಆದಾಗಿನಿಂದ ಗಂಡ ಮತ್ತು ಅತ್ತೆ ಸರಸ್ವತಮ್ಮ ಎಂಬುವರು ಹೇಮಾವತಿರವರಿಗೆ ಕಿರುಕುಳ ನೀಡುತ್ತಿದ್ದು ವರದಕ್ಷಣೆ ತರುವಂತೆ ತವರು ಮನೆಗೆ ಕಳುಹಿಸಿದ್ದರು. ದಿನಾಂಕ ೨೮-೦೨-೨೦೦೮ ರಂದು ವೆಂಕಟರಾಮಾಚಾರಿ ಮತ್ತೊಂದು ಮದುವೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು ಈ ಬಗ್ಗೆ ಹೇಮಾವತಿ ರವರು ದೂರು ದಾಖಲಿಸಿರುತ್ತಾರೆ.

ರಸ್ತೆ ಅಪಘಾತಗಳು: ೦೩

-ಮಾರಣಾಂತಿಕ: ೦೧

  •   ವೇಮಗಲ್ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೨-೨೦೦೮ ರಂದು ೨೪೦೦ ಗಂಟೆ ಸಮಯದಲ್ಲಿ ಚಿಂತಾಮಣಿ ನಗರ ಅಗ್ರಹಾರದ ವಾಸಿಯಾದ ಸೈಯದ್ ಮುನೀರ್‍ ಪಾಷಾ ಎಂಬುವರು ಟೆಂಪೋ ಸಂಖ್ಯೆ ಕೆಎ-೦೭-೪೯೭೯ ರಲ್ಲಿ ಹೆಚ್.ಕ್ರಾಸ್ ಕಡೆಯಿಂದ ಚಿಂತಾಮಣಿ ಕಡೆ ಪ್ರಯಾಣಿಸುತ್ತಿದ್ದರು. ಟೆಂಪೋ ಉರಟಿ ಅಗ್ರಹಾರ ಗ್ರಾಮದ ಬಳಿ ಬಂದಾಗ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿ ಪಕ್ಕದ ಹಳ್ಳಕ್ಕೆ ಉರುಳಿ ಬಿದ್ದಿರುತ್ತದೆ. ಇದರಿಂದಾಗಿ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ ಮುಜಬಿಲ್ ಎಂಬುವರಿಗೆ ತೀವ್ರವಾದ ಗಾಯಗಳಾಗಿದ್ದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಅಲ್ಲಿ ಮೃತಪಟ್ಟಿರುತ್ತಾನೆ.

-ಸಾಧಾರಣ: ೦೨

  •   ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೨-೨೦೦೮ ರಂದು ೨೨೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ – ಮುಳಬಾಗಿಲು ರಸ್ತೆಯ ಎದರೂರು ಗ್ರಾಮದ ಬಳಿ ಕೆಎ-೫೩-೪೯೩೦ ಟೆಂಪೋ ಚಾಲಕನಾದ ಪ್ರದೀಪ್ ಕುಮಾರ್‍ ಎಂಬುವರು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಹಳ್ಳಕ್ಕೆ ಉರಳಿಸಿರುತ್ತಾನೆ. ಇದರ ಪರಿಣಾಮವಾಗಿ ಟೆಂಪೋ ಜಖಂಗೊಂಡಿರುತ್ತದೆ.
  •   ನಂಗಲಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೨-೨೦೦೮ ರಂದು ೨೦೦೦ ಗಂಟೆ ಸಮಯದಲ್ಲಿ ತಾತಿಕಲ್ಲಿ ಗ್ರಾಮದ ವಾಸಿಯಾದ ಮುನಿವೆಂಕಟಪ್ಪ ಮತ್ತು ಅವರ ಸ್ನೇಹಿತರಾದ ವೆಂಕಟರವಣಪ್ಪ ಎಂಬುವರು ತಮ್ಮ ಟಿ.ವಿ.ಎಸ್. ದ್ವಿಚಕ್ರ ವಾಹನದಲ್ಲಿ ರಾಷ್ಟ್ರೀಯ ಹೆದ್ದಾರಿ-೪ ರ ತಾತಿಕಲ್ಲು ಗ್ರಾಮದ ಬಳಿ ಹೋಗುತ್ತಿದ್ದರು. ಅ ಸಮಯದಲ್ಲಿ ಬೆಂಗಳೂರು ಕಡೆಯಿಂದ ಬಂದ ಯಾವುದೋ ಕಾರಿನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಟಿ.ವಿ.ಎಸ್.ಗೆ ಡಿಕ್ಕಿ ಹೊಡೆದ ಪರಾರಿಯಾಗಿರುತ್ತಾನೆ. ಇದರ ಪರಿಣಾಮವಾಗಿ ಇಬ್ಬರಿಗೂ ಗಾಯಗಳಾಗಿದ್ದು ಕೋಲಾರದ ಎಸ್.ಎನ್.ಆರ್‍. ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿರುತ್ತಾರೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೨-೦೨-೨೦೦೮ ರಂದು ಮುಳಬಾಗಿಲು ತಾಲೂಕು ಚೆನ್ನಾಪುರ ಗ್ರಾಮದ ವಾಸಿಯಾದ ಕೃಷ್ಣೆಗೌಡ ಎಂಬುವರು ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದರು. ಅ ಸಮಯದಲ್ಲಿ ಅಲ್ಲಿಗೆ ಬಂದ ಅದೇ ಗ್ರಾಮದ ವಾಸಿಗಳಾದ ಮುನಿರತ್ನಪ್ಪ ಮತ್ತು ಇತರೆ ೫ ಜನರು ಅಕ್ರಮ ಗುಂಪುಕಟ್ಟಿಕೊಂಡು ಬಂದು ಕೃಷ್ನೆಗೌಡ ರವರಿಗೆ ಕೈ ಮತ್ತು ದೊಣ್ಣೆಗಳಿಂದ ಹೊಡೆದು ರಕ್ತಗಾಯಪಡಿಸಿ, ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಹಲ್ಲೆ: ಇಲ್ಲ

ಇತರೆ: ೦೧

  •   ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಅಕಸ್ಮಿಕ ಅಪಘಾತಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೨-೨೦೦೮ ರಂದು ೧೦೦೦ ಗಂಟೆ ಸಮಯದಲ್ಲಿ ಕೋಲಾರದ ಟಮಕ ಕೈಗಾರಿಕ ಪ್ರದೇಶದಲ್ಲಿರುವ ಕೋಲಾರ್ಅಲ್ಯೂಮೀನಿಯಂ ಪ್ಯಾಕ್ಟರಿಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ಪ್ಯಾಕ್ಟರಿಯಲ್ಲಿ ಮೇಸ್ತ್ರಿ ರಾಜಣ್ಣರವರು ಹೇಳಿದ ರೀತಿಯಲ್ಲಿ ಪ್ಯಾಕ್ಟರಿಯ ಕಾರ್ಮಿಕರಾದ ಚಲಪತಿ, ಮುನಿರಾಜು ಮತ್ತು ಮಂಜುನಾಥ ಎಂಬುವರು ಕಲ್ಲುಗಳನ್ನು ಎತ್ತುವ ಮಿಷನ್ ನಿಂದ ಕಬ್ಬಿಣದ ಗರಾಂಡಗಳನ್ನು ಚೈನುಗಳಿಗೆ ಕಟ್ಟಿ ಮೇಲಕ್ಕೆ ಎತ್ತುವಾಗ ಗೋಡೆಯ ಮೇಲೆ ಇದ್ದ ಸರ್ಜಾ ಕುಸಿದು ಬಿದ್ದು ಕಾರ್ಮಿಕರಿಗೆ ತೀವ್ರವಾದ ಗಾಯಗಳಾಗಿರುತ್ತವೆ. ಈ ಪೈಕಿ ಮುನಿರಾಜು ಎಂಬುವರ ತಲೆಗೆ ತೀವ್ರವಾದ ಗಾಯಗಳಾಗಿದ್ದು ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಪ್ಯಾಕ್ಟರಿಯ ಮಾಲೀಕರಾದ ಪೂವಲಿಂಗಂ ಮತ್ತು ಮೇಸ್ತ್ರಿ ರಾಜಣ್ಣ ರವರ ನಿರ್ಲಕ್ಷತೆ ಮತ್ತು ಬೇಜಾಬ್ದಾರಿಯಿಂದ ಈ ಕೃತ್ಯ ನಡೆದಿರುತ್ತದೆ ಎಂದು ಚಲಪತಿ ರವರು ದೂರು ದಾಖಲಿಸಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

 ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೧೧

-ಸ್ಥಳ ದಂಡ ಮೊತ್ತ: ರೂ. ೧೬೦೦

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

 


ದಿನದ ಅಪರಾಧಗಳ ಪಕ್ಷಿನೋಟ ೨೮ ನೇ ಫೆಬ್ರವರಿ ೦೮

February 28, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ -೦೨-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

  •   ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರುಪೇಟೆಯ ವಾಸಿ ಚಂದ್ರಶೇಖರ್ಎಂಬುವರು ತಮ್ಮ ಸಂಬಂಧಿಕರ ಮದುವೆಯ ಸಲುವಾಗಿ ತಮ್ಮ ಪತ್ನಿ ಪುಷ್ಪಾವತಿ ಅವರೊಂದಿಗೆ ಕೋಲಾರ ಹೊರವಲಯದ ಶಾಂತಿ ಸಾಗರ್ಲಾಡ್ಜ್ ನ ಕೊಠಡಿ ಸಂಖ್ಯೆ ೩೦೮ ರಲ್ಲಿ ದಿನಾಂಕ ೨೩-೦೨-೨೦೦೮ ರ ರಾತ್ರಿಯಿಂದ ೨೪-೦೨-೨೦೦೮ ರಂದು ೧೫೦೦ ಗಂಟೆಯ ವರೆವಿಗೆ ತಂಗಿದ್ದರು. ಅ ಸಮಯದಲ್ಲಿ ಯಾರೋ ಕಳ್ಳರು ಕೊಠಡಿಯಲ್ಲಿ ಇಟ್ಟುದ್ದ ವಿ..ಪಿ. ಸೂಟ್ ಕೇಸಿನ ಬೀಗನ್ನು ನಕಲಿ ಬೀಗದಿಂದ ತೆಗೆದು ಸೂಟ್ ಕೇಸಿನಲ್ಲಿ ಇಟ್ಟಿದ್ದ ರೂ. ೪೦,೦೦೦/ ಬೆಲೆ ಬಾಳುವ ವಡವೆಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಚಂದ್ರಶೇಖರ್ರವರು ಸಂಜೆ ೬ ಗಂಟೆಗೆ ಬಂಗಾರಪೇಟೆಯ ತಮ್ಮ ಮನೆಗೆ ಹೋಗಿ ನೋಡಿಕೊಂಡಾಗ ಈ ಕೃತ್ಯ ಬೆಳಕಿಗೆ ಬಂದಿರುತ್ತದೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೪

-ಮಾರಣಾಂತಿಕ: ೦೧

  •   ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಅಪಘಾತಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೨-೨೦೦೮ ರಂದು ರಾತ್ರಿ ಮುಳಬಾಗಿಲು ತಾಲೂಕು ಬಿ.ಹೊಸಹಳ್ಳಿ ಗ್ರಾಮದ ವಾಸಿಯಾದ ಚಂದ್ರಶೇಖರ್‍ ಮತ್ತು ಮುನಿರಾಜು ಎಂಬುವರು ತಮ್ಮ ದ್ವಿಚಕ್ರ ವಾಹನ ಸಂಖ್ಯೆ ಕೆಎ-೫೧-ಎಲ್-೧೮೬೪ ರಲ್ಲಿ ಬೆಂಗಳೂರು ಕಡೆಯಿಂದ ಕೋಲಾರಕ್ಕೆ ಬರುತ್ತಿದ್ದರು. ಅ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿ ೪ ರ ಗಾಜಲದಿನ್ನೆ ಸಮೀಪ ದ್ಚಿಚಕ್ರ ವಾಹನದ ಸವಾರ ಚಂದ್ರಶೇಖರ್‍ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಪಕ್ಕದಲ್ಲಿರುವ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಚಂದ್ರಶೇಖರ್ ಸ್ಥಳದಲ್ಲಿಯೇ ಮೃತಪಟ್ಟಿದ್ದು ಮುನಿರಾಜು ರವರ ತಲೆಗೆ ತೀವ್ರವಾದ ಗಾಯಗಳಾಗಿದ್ದು ಕೋಲಾರದ ಎಸ್.ಎನ್.ಆರ್‍ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾನೆ.

-ಸಾಧಾರಣ: -೦೩

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೩-೦೨-೨೦೦೮ ರಂದು ೧೯೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಶೆಟ್ಟಿಗಾನಹಳ್ಳಿ ಗ್ರಾಮದ ವಾಸಿಯಾದ ರಾಜಣ್ಣ ಮತ್ತು ಅವರ ಸ್ನೇಹಿತ ಮುನಿರಾಜು ಎಂಬುವರು ಕೋಲಾರ – ಬಂಗಾರಪೇಟೆ ರಸ್ತೆಯ ಪಾರ್ಶ್ವಗಾನಹಳ್ಳಿ ಗೇಟ್ ಬಳಿ ರಸ್ತೆ ಬದಿಯಲ್ಲಿ ನಿಂತು ಮಾತನಾಡುತ್ತಿದ್ದರು. ಅ ಸಮಯದಲ್ಲಿ ಕೋಲಾರ ಕಡೆಯಿಂದ ಬಂದ ಕೆಎ-೦೭-ಕೆ-೯೬೮ ಟಿವಿಎಸ್ ದ್ಚಿಚಕ್ರವಾಹನದ ಸವಾರ ಮಾಗೇರಿ ಗ್ರಾಮದ ವಾಸಿ ಆಶ್ವಥಪ್ಪ ಎಂಬುವರು ತಮ್ಮ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂದು ಬಂದು ರಾಜಣ್ಣ ಮತ್ತು ಮುನಿರಾಜು ರವರಿಗೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮವಾಗಿ ಇಬ್ಬರಿಗೂ ರಕ್ತಗಾಯಗಳಾಗಿದ್ದು ಕೋಲಾರದ ಎಸ್.ಎನ್.ಆರ್‍. ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿರುತ್ತಾರೆ.
  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೬-೧೨-೨೦೦೭ ರಂದು ೨೦೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಹೊನ್ನೇನಹಳ್ಳಿ ಗ್ರಾಮದ ವಾಸಿಯಾದ ಅಮರ್‍ ಎಂಬುವರು ಕೋಲಾರ – ಬೇತಮಂಗಳ ರಸ್ತೆಯ ಹೊನ್ನೇನಹಳ್ಳಿ ಗ್ರಾಮದ ಬಳಿ ಹೋಗುತ್ತಿದ್ದ್ರು. ಅ ಸಮಯದಲ್ಲಿ ಕೋಲಾರ ಕಡೆಯಿಂದ ಬಂದ ಕೆಎ-೦೭-ಎಲ್-೭೧೭೩ ದ್ಚಿಚಕ್ರವಾಹನದ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂದು ಬಂದು ಅಮರ್‍ ರವರಿಗೆ ಡಿಕ್ಕಿ ಹೊಡೆದಿದ್ದು ರಕ್ತಗಾಯಗಳಾಗಿರುತ್ತವೆ.
  •   ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೨-೨೦೦೮ ರಂದು ೦೭೪೫ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಟಮಕ ಗ್ರಾಮದ ವಾಸಿಯಾದ ಲಕ್ಷಮಯ್ಯ ಎಂಬುವರು ತಮ್ಮ ದ್ಚಿಚಕ್ರ ವಾಹನ ಸಂಖ್ಯೆ ಕೆಎ-೧೧-ಜೆ-೪೬೨೮ ರಲ್ಲಿ ಆರ್‍.ಎಲ್. ಜಾಲಪ್ಪ ಆಸ್ಪತ್ರೆಯ ಸಮೀಪ ಹೋಗುತ್ತಿದ್ದರು. ಅ ಸಮಯದಲ್ಲಿ ಬೆಂಗಳೂರು ಕಡೆಯಿಂದ ಬಂದ ಕೆಎ-೦೨-ಎಂಎ-೭೧೪೨ ರ ಸ್ಯಾಂಟ್ರೋ ಕಾರಿನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಲಕ್ಷ್ಮಯ್ಯ ರವರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿರುತ್ತಾನೆ. ಇದರ ಪರಿಣಾಮವಾಗಿ ವಾಹನದ ಸವಾರನಿಗೆ ರಕ್ತಗಾಯಗಳಾಗಿರುತ್ತವೆ.

ಮೋಸ / ವಂಚನೆ ಪ್ರಕರಣಗಳು: ೦೧

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೋಸ ಮತ್ತು ವಂಚನೆಗೆ ಸಂಬಂಧಪಟ್ಟಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೦-೧೦-೨೦೦೬ ರಂದು ಕೋಲಾರ ತಾಲೂಕು ಕಲ್ಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾದ ಮುನೇಗೌಡ ಎಂಬುವರು ಯಶಸ್ವಿನಿ ಯೋಜನೆ ಅಡಿಯಲ್ಲಿ ಫಲಾನುಭವಿಗಳಲ್ಲದ ಅದೇ ಗ್ರಾಮದ ಡಿ.ಗೋಪಾಲಪ್ಪ ಎಂಬುವರಿಗೆ ಗುರುತಿನ ಚೀಟಿ ನೀಡಿದ್ದು ಅವರು ಕೋಲಾರದ ಮಂಜುನಾಥ ಹೆಲ್ತ್ ಕೇರ್ನಲ್ಲಿ ಹಾಜರುಪಡಿಸಿ ಚಿಕತ್ಸೆ ಪಡೆದಿರುತ್ತಾರೆ. ಇದರಿಂದಾಗಿ ಸಹಕಾರ ಸಂಘಕ್ಕೆ ರೂ. ೯೦೦೦/- ಹಣವನ್ನು ಮೋಸ ಮಾಡಿರುತ್ತಾರೆ. ಈ ಬಗ್ಗೆ ಕೋಲಾರದ ಸಹಕಾರ ಸಂಘಗಳ ಸಹಾಯಕ ನಿಭಂಧಕರಾದ ಜಿ.ಪ್ರಕಾಶ್ ರವರು ದಿನಾಂಕ ೨೮-೦೨-೨೦೦೮ ರಂದು ೧೨೩೦ ಗಂಟೆಗೆ ದೂರು ದಾಖಲಿಸಿರುತ್ತಾರೆ.

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ೦೧

  •   ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಭೂ ಒತ್ತುವರಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೨-೨೦೦೮ ಕ್ಕೆ ಹಿಂದೆ ಸ್ವಾಮಿ ವಿವೇಕಾನಂದ ಅಕಾಡೆಮಿ ಪ್ರಾಂಶುಪಾಲರಾದ ಡಾ. ರವೀಂದ್ರನಾಥ್ ಎಂಬುವರು ಕೋಲಾರದ ಅಮಾನಿಕೆರೆ ಸರ್ವೇ ನಂಬರ್೭೧ ರಲ್ಲಿ ಸರ್ಕಾರದ ಯಾವುದೇ ಅದೇಶವಿಲ್ಲದೆ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿರುತ್ತಾರೆ. ಈ ಬಗ್ಗೆ ಕೋಲಾರ ತಾಲೂಕು ತಹಸೀಲ್ದಾರರಾದ ಶ್ರೀ ನವೀನ್ ಕುಮಾರ್‍ ರವರು ದಿನಾಂಕ ೨೭-೦೨-೨೦೦೮ ರಂದು ೧೯೦೦ ಗಂಟೆಗೆ ದೂರನ್ನು  ದಾಖಲಿಸಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೧೧

-ಸ್ಥಳ ದಂಡ ಮೊತ್ತ: ರೂ.೨೧೦೦

  ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

 


ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ ೨೭ನೇ ಫೆಬ್ರವರಿ ೨೦೦೮

February 27, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ -೦೨-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಕಳ್ಳತನಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೨-೨೦೦೮ ಕ್ಕೆ ಹಿಂದೆ ಮಾಲೂರು ತಾಲೂಕು ಟೇಕಲ್ ಗ್ರಾಮದ ಬಳಿ ಸಾರ್ವಜನಿಕರಿಗೆ ನೀರು ಸರಬರಾಜು ಮಾಡುಲು ಅಳವಡಿಸಿದ್ದ ೨೫ ಕೆ.ವಿ. ಟ್ರಾನ್ಸಪಾರ್ಮರ್ನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಟ್ರಾನ್ಸ್ ಪಾರ್ಮರ್ಬೆಲೆ ತಿಳಿಯಬೇಕಾಗಿರುತ್ತದೆ. ಈ ಸಂಬಂಧವಾಗಿ ಶ್ರೀ ಗುರಪ್ಪ, ಶಾಖಾಧೀಕ್ಷಕರು, ಬೆಸ್ಕಾಂ, ಟೇಕಲ್ ರವರ ದೂರು ದಾಖಲಿಸಿರುತ್ತಾರೆ.

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೫

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೫

ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೨-೨೦೦೮ ರಂದು ೦೭೫೦ ಗಂಟೆ ಸಮಯದಲ್ಲಿ ಕೆ.ಎಸ್.ಆರ್‍.ಟಿ.ಸಿ. ಬಸ್ ಸಂಖ್ಯೆ ಕೆಎ-೦೭-ಎಫ್-೧೨೪೧ ರ ಚಾಲಕನಾದ ನರೇಂದ್ರ ಎಂಬುವರು ಕೋಲಾರದ ಅಮ್ಮವಾರಿಪೇಟೆ ವೃತ್ತದ ಬಳಿ ಬಸ್ ನಿಲ್ದಾಣದ ಕಡೆ ಹೋಗುತ್ತಿದ್ದರು. ಅ ಸಮಯದಲ್ಲಿ ಎದುರಗಡೆಯಿಂದ ಬಂದ ಆಟೋ ಸಂಖ್ಯೆ ಕೆಎ-೦೨-೭೯೪೯ ರ ಚಾಲಕ ನಾರಾಯಣಸ್ವಾಮಿ ಎಂಬುವರು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕೆ.ಎಸ್.ಆರ್‍.ಟಿ.ಸಿ. ಬಸ್ ಗೆ ಡಿಕ್ಕಿ ಹೊಡೆಸಿರುತ್ತಾನೆ. ಇದರ ಪರಿಣಾಮವಾಗಿ ಆಟೋ ಜಖಂಗೊಂಡಿರುತ್ತದೆ.

ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕ ಸಂಬಂದಿಸಿದಂತೆ ಮತ್ತೊಂದು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೨-೨೦೦೮ ರಂದು ೧೯೧೫ ಗಂಟೆ ಸಮಯದಲ್ಲಿ ಕೆ.ಎಸ್.ಆರ್‍.ಟಿ.ಸಿ. ಬಸ್ ಸಂಖ್ಯೆ ಕೆಎ-೦೭-ಎಫ್-೭೬೩ ರ ಚಾಲಕರಾದ ನವೀನ್ ಕುಮಾರ್‍ ಎಂಬುವರು ಎಂ.ಬಿ.ರಸ್ತೆಯ ಅಮಾನಿಕೆರೆ ಬಳಿ ಕೋಟಿಗಾನಹಳ್ಳಿ ಕಡೆ ಹೋಗುತ್ತಿದ್ದರು. ಅ ಸಮಯದಲ್ಲಿ ಎದರುಗಡೆಯಿಂದ ಬಂದ ಆಟೋ ಸಂಖ್ಯೆ ಕೆಎ-೦೭-೫೮೦೦ ರ ಚಾಲಕನಾದ ಮೊಹಮದ್ ರಪೀಕ್ ಎಂಬುವನು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಮೊಹಮದ್ ರಫೀಕ್ ಮತ್ತು ಮೊದಾಸೀರ್‍ ಎಂಬುವರಿಗೆ ಗಾಯಗಳಾಗಿದ್ದು ಆರ್‍.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

ನಂಗಲಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕ ಸಂಬಂದಿಸಿದಂತೆ ಮತ್ತೊಂದು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೨-೨೦೦೮ ರಂದು ೧೮೦೦ ಗಂಟೆ ಸಮಯದಲ್ಲಿ ನಂಗಲಿ ಪೊಲೀಸ್ ಠಾಣೆಯ ಪೇದೆ ಎಸ್. ಅನಂದ ಕುಮಾರ್‍ ಮತ್ತು ಕೋದಂಡರಾಮಯ್ಯ ಎಂಬುವರು ಎನ್.ವಡ್ಡಹಳ್ಳಿ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಅ ಸಮಯದಲ್ಲಿ ಮುಳುಬಾಗಿಲು ಕಡೆಯಿಂದ ಬಂದ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೭-ಕ್ಯೂ-೨೩೫೬ ರ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅನಂದ್ ಕುಮಾರ್‍ ಮತ್ತು ಕೋದಂಡರಾಮಯ್ಯ ರವರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿರುತ್ತವೆ. ದ್ವಿಚಕ್ರ ವಾಹನದ ಸವಾರ ವಾಹನವನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿರುತ್ತಾನೆ.

ಮಾಲೂರು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೨-೨೦೦೮ ರಂದು ೦೮೦೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ನಕ್ಕನಹಳ್ಳಿ ಗ್ರಾಮದ ವಾಸಿಯಾದ ಈರಪ್ಪ ಎಂಬುವರು ತಮ್ಮ ಗ್ರಾಮದಿಂದ ಮಾಲೂರಿಗೆ ಕೆ.ಎಸ್.ಆರ್‍.ಟಿ.ಸಿ. ಬಸ್ ಸಂಖ್ಯೆ ಕೆಎ-೦೭-ಎಫ್-೭೯೨ ರಲ್ಲಿ ಪ್ರಯಾಣಿಸುತ್ತಿದ್ದರು. ಅ ಸಮಯದಲ್ಲಿ ಬಸ್ಸಿನ ಚಾಲಕನಾದ ನಾರಾಯಣಸ್ವಾಮಿ ಎಂಬುವನು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕೋಲಾರ – ಮಾಲೂರ ರಸ್ತೆಯಲ್ಲಿರುವ ಎಸ್.ಎಫ್.ಎಸ್. ಶಾಲೆಯ ಬಳಿ ನಿಂತಿದ್ದು ಕೆ.ಎಸ್.ಆರ್‍.ಟಿ.ಸಿ. ಬಸ್ ಸಂಖ್ಯೆ ಕೆಎ-೦೭-ಎಫ್-೮೪೦ ಕ್ಕೆ ಡಿಕ್ಕಿ ಹೊಡಿಸಿರುತ್ತಾನೆ. ಇದರ ಪರಿಣಾಮವಾಗಿ ಈರಪ್ಪ ರವರಿಗೆ ಎರಡು ಮೊಣಕಾಲುಗಳಿಗೆ ರಕ್ತಗಾಯಗಳಾಗಿದ್ದು ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ೨೮ ರಿಂದ ೩೦ ಜನರಿಗೆ ಸಣ್ಣ-ಪುಟ್ಟ ಗಾಯಗಳಾಗಿರುತ್ತವೆ.

ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೨-೨೦೦೮ ರಂದು ೦೭೩೦ ಗಂಟೆ ಸಮಯದಲ್ಲಿ ಬೆಂಗಳೂರು ನಗರದ ವಾಸಿಯಾದ ರಘುತಿಲಕ್ ಮತ್ತು ಅವರ ಕುಟುಂಬದವರು ತಮ್ಮ ಸ್ಯಾಂಟ್ರೋ ಕಾರ್‍ ಸಂಖ್ಯೆ ಕೆಎ-೦೨-ಎಂಬಿ-೧೦೪೯ ರಲ್ಲಿ ಬೆಂಗಳೂರು ಕಡೆಯಿಂದ ತಿರುಪತಿಗೆ ಹೋಗುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ-೪ ರ ರಾಮಸಂದ್ರ ಬಾರ್ಡರ್‍ ಬಳಿ ಬರುತ್ತಿದ್ದರು. ಅ ಸಮಯದಲ್ಲಿ ಕೋಲಾರ ಕಡೆಯಿಂದ ಬಂದ ಎಟಿಎಸ್ ಬಸ್ ಸಂಖ್ಯೆ ಕೆಎ-೦೭-೫೬೦೦ ರ ಚಾಲಕ ಶೇಕ್ ಅಲ್ತಾಪ್ ಎಂಬುವನು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕಾರಿಗೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮವಾಗಿ ಕಾರಿನ ಮುಂದಿನ ಭಾಗ ಜಖಂ ಆಗಿದ್ದು ಕಾರಿನಲ್ಲಿದ್ದ ರಘುತಿಲಕ್ ಮತ್ತು ಇತರೆಯವರಿಗೆ ರಕ್ತಗಾಯಗಳಾಗಿರುತ್ತವೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೦೨-೨೦೦೮ ರಂದು ೨೩೦೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ಮಿಟ್ಟಗಾನಹಳ್ಳಿ ಗ್ರಾಮದ ವಾಸಿಯಾದ ಶ್ರೀರಾಮಪ್ಪ ಎಂಬುವರು ಟೇಕಲ್ ಬಳಿ ಇರುವ ಗಜಗುಂಡ್ಲಹಳ್ಳಿ ಗ್ರಾಮದ ಬಳಿ ನಡೆದುಕೊಂಡು ಬರುತ್ತಿದ್ದರು. ಅ ಸಮಯದಲ್ಲಿ ಮಿಟ್ಟಗಾನಹಳ್ಳಿ ಗ್ರಾಮದ ವಾಸಿಗಳಾದ ಚಲುವರಾಜು & ಇತರೆ ೩ ಜನರು ಸೇರಿಕೊಂಡು ಶ್ರೀರಾಮಪ್ಪನನ್ನು ಅಡ್ಡಗಟ್ಟಿ ದೊಣ್ಣೆಯಿಂದ ಎಡಕಾಲಿಗೆ ಹೊಡೆದು ರಕ್ತಗಾಯವನ್ನುಂಟು ಮಾಡಿ ಪ್ರಾಣಬೆದರಿಕೆ ಹಾಕಿರುತ್ತಾರೆ. ಈ ಕೃತ್ಯವು ಹಳೇ ವೈಷಮ್ಯದ ಹಿನ್ನಲೆಯಲ್ಲಿ ನಡೆದಿರುತ್ತದೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೦೫

-ಸ್ಥಳ ದಂಡ ಮೊತ್ತ: ರೂ. ೫೦೦

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

 


ದಿನದ ಅಪರಾಧಗಳ ಪಕ್ಷಿನೋಟ ೨೬ ನೇ ಫೆಬ್ರವರಿ ೨೦೦೮

February 26, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ -೦೨-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೩

-ಮಾರಣಾಂತಿಕ: ೦೧

  •   ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೨-೨೦೦೮ ರಂದು ೧೦೩೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ನೆಲವಂಕಿ ಗ್ರಾಮದ ವಾಸಿಯಾದ ಶಿವಣ್ಣ ಎಂಬುವರು ತಮ್ಮ ಅಣ್ಣನ ಮಗನಾದ ರಾಜೇಶ್ ರವರನ್ನು ಶಾಲೆಗೆ ಕರೆದುಕೊಂಡು ಲಕ್ಷ್ಮೀಪುರ ಕ್ರಾಸ್ ಬಳಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅ ಸಮಯದಲ್ಲಿ ಬೆಂಗಳೂರಿನಿಂದ ಮದನಪಲ್ಲಿ ಕಡೆ ಹೋಗುತ್ತಿದ್ದ ಟಾಟೋ ಸುಮೋ ವಾಹನ ಸಂಖ್ಯೆ ಕೆಎ-೩೫-ಎಂಸಿ-೯೭೮೬ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಾಜೇಶ್ ರವರಿಗೆ ಡಿಕ್ಕಿ ಹೊಡೆದು ನಂತರ ರಸ್ತೆ ಪಕ್ಕದಲ್ಲಿ ನಿಂತಿದ್ದು ಎಪಿ-೦೨-೫೬೭೩ ಗೂಡ್ಸ್ ಟೆಂಪೋಗೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮವಾಗಿ ರಾಜೇಶ್ ನಿಗೆ ತೀವ್ರವಾದ ರಕ್ತಗಾಯಗಳಾಗಿದ್ದು ಲಕ್ಷ್ಮೀಪುರ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿರುತ್ತಾನೆ.

-ಸಾಧಾರಣ: ೦೨

  •   ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೨-೨೦೦೮ ರಂದು ೦೮೦೦ ಗಂಟೆ ಸಮಯದಲ್ಲಿ ನಜೀರೀಯ ಬಸ್ ಸಂ. ಕೆಎ-೦೭-೫೪೭೨ ರ ಚಾಲಕ ತನ್ನ ಬಸ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಮುಂದುಗಡೆ ಹೋಗುತ್ತಿದ್ದ ಬಸ್ ಸಂ. ಟಿಎನ್-೩೨-ಎನ್-೦೩೯೩ ಕ್ಕೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮವಾಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ೫-೬ ಜನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ.
  •   ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೨-೨೦೦೮ ರಂದು ೧೨೧೦ ಗಂಟೆ ಸಮಯದಲ್ಲಿ ಮದನಪಲ್ಲಿ ತಾಲೂಕಿನ ಬೊಚೆಪಲ್ಲಿ ಗ್ರಾಮದ ವಾಸಿಯಾದ ಕೃಷ್ಣಪ್ಪ ಎಂಬುವರು ತಮ್ಮ ಬಜಾಜ್ ಪ್ಲಾಟಿನಂ ದ್ಚಿಚಕ್ರ ವಾಹನ ಸಂ. ಎಪಿ-೦೩-ಕ್ಯೂ-೮೨೧೬ ರಲ್ಲಿ ಬೀಚುಗುಂಡಹಳ್ಳಿ ರೇಷ್ಮೆ ಮಾರುಕಟ್ಟೆ ಬಳಿ ಬರುತ್ತಿದ್ದಾಗ ತನ್ನ ವಾಹನ ಸ್ಕಿಡ್ ಆಗಿ ಬಿದ್ದು ಬಲಮೊಣಕೈ, ಮೊಣಕಾಲಿಗೆ ಗಾಯವಾಗಿದ್ದು ಬೆಂಗಳೂರಿನ ಎಂ.ವಿ.ಜಿ. ಆಸ್ಪತ್ರೆಯಲ್ಲಿ ದಾಖಲಾಗಿ ಚಿಕತ್ಸೆ ಪಡೆಯುತ್ತಿರುತ್ತಾರೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ೦೨

  •   ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಮತ್ತು ಮಹಿಳೆಯ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲೂಕು ಮಲಗೂರುಕೋಟೆ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೫-೦೨-೨೦೦೮ ರಂದು ೧೦೧೫ ಗಂಟೆ ಸಮಯದಲ್ಲಿ ಮಲಗೂರುಕೋಟೆಯ ವಾಸಿಗಳಾದ ನಿಸಾರ್ಅಹಮದ್ ಮತ್ತು ಖಾದರ್ಸಾಬ್ ಎಂಬುವರು ತಮ್ಮ ಗ್ರಾಮದ ಸರ್ಕಾರಿ ಶಾಲೆಯ ಪಕ್ಕದಲ್ಲಿ ಅಂಗಡಿ ಮಳಿಗೆಗಳಿಗೆ ಪಾಯ ಹಾಕಲು ಹೋಗಿ ಶಾಲೆಗೆ ಸೇರಿದ್ದ ಕಾಪೌಂಡಿನ ಕಲ್ಲು ಚಪ್ಪಡಿಗಳನ್ನು ಹೊಡೆದು ಕುವೆಂಪು ಮತ್ತು ಅನಂತಮೂರ್ತಿ ರವರ ಭಾವಚಿತ್ರಗಳನ್ನು ಹೊಡೆದು ದ್ವಂಸ ಮಾಡಿರುತ್ತಾರೆ. ಇದನ್ನು ಶಾಲೆಯ ಎಸ್.ಡಿ.ಎಂ.ಸಿ. ಸದಸ್ಯೆಯಾದ ಮತ್ತು ಅದೇ ಗ್ರಾಮದ ವಾಸಿಯಾದ ಶ್ರೀಮತಿ ಪಾರ್ವತಮ್ಮ ರವರು ಪ್ರಶ್ನಿಸಿದಾಗ ಸಾರ್ವಜನಿಕರ ಮುಂದೆ ಜಾತಿ ನಿಂದನೆ ಮಾಡಿ ಕೂದಲನ್ನು ಹಿಡಿದು ಎಳೆದಾಡಿ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ. 
  •    ನಂಗಲಿ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಮತ್ತು ಹುಡುಗಿ ಅಪಹರಣಕ್ಕೆ ಸಂಬಂಧಪಟ್ಟಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೨-೨೦೦೮ ಕ್ಕೆ ೩ ತಿಂಗಳ ಹಿಂದೆ ಮುಳಬಾಗಿಲು ತಾಲೂಕು ಕಸುವುಗಾನಹಳ್ಳಿ ಗ್ರಾಮದ ವಾಸಿಯಾದ ಗುರುಪ್ಪ ಎಂಬುವರು ಅದೇ ಗ್ರಾಮದ ವಾಸಿಯಾದ ಶ್ರೀಮತಿ ಲಕ್ಷಮ್ಮ ರವರ ಅಪ್ರಾಪ್ತ ವಯಸ್ಸಿನ ಮಗಳನ್ನು ಮದುವೆ ಮಾಡಿಕೊಳ್ಳುವುದಾಗಿ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೨

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಅಬ್ಬಣಿ ಗ್ರಾಮದ ವಾಸಿಯಾದ ರಾಜಪ್ಪ ಎಂಬುವರು ದಿನಾಂಕ ೨೫-೦೨-೨೦೦೮ ರಂದು ಸಂಜೆ ತಮ್ಮ ಮನೆಯ ಮುಂದು ಬರುತ್ತಿದ್ದಾಗ ರಸ್ತೆಯ ಪಕ್ಕದಲ್ಲಿದ್ದ ವಿದ್ಯುತ್ಕಂಬದಿಂದ ತಂತಿ ಮುರಿದ್ದು ಬಲಕೈಗೆ ತಗುಲು ಮೃತಪಟ್ಟರುತ್ತಾನೆ.
  •   ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೨-೨೦೦೮ ರಂದು ಯಾರೋ ಅಪರಿಚಿತ ವ್ಯಕ್ತಿ ಕೋಲಾರ ನಗರದ ಕ್ಲಾಕ್ ಟವರ್ಬಳಿ ಅಸ್ವಸ್ಥನಾಗಿ ಬಿದಿದ್ದು ಆಸ್ಪತ್ರೆಗೆ ದಾಖಲಿಸಿದ್ದು ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಮರಣ ಹೊಂದಿರುವ ವ್ಯಕ್ತಿಯ ವಿವರ ತಿಳಿಯಬೇಕಾಗಿರುತ್ತದೆ.   

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ಇಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾದಗಳ ಪಕ್ಷಿನೋಟ ದಿನಾಂಕ ೨೫ನೇ ಫೆಬ್ರವರಿ ೨೦೦೮

February 25, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೫-೦೨-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೧

ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತು ಹಲ್ಲೆಗೆ ಸಂಬಂದಪಟ್ಟಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಶ್ರೀನಿವಾಸಪುರ ತಾಲೂಕು ಕೊಪ್ಪವಾರಿಪಲ್ಲಿ ಗ್ರಾಮದಲ್ಲಿ ನಡೆದಿರುತ್ತದೆ. ಶ್ರೀಮತಿ ಅಂಬಿಕ ಎಂಬುವರು ವಿವಾಹ ದಿನಾಂಕ ೨೩-೦೧-೨೦೦೭ ರಂದು ಕೊಪ್ಪವಾರಿಪಲ್ಲಿ ಗ್ರಾಮದ ವಾಸಿಯಾದ ಅಂಜನಪ್ಪ ಎಂಬುವರೊಂದಿಗೆ ನಡೆದಿತ್ತು. ಮದುವೆಯಾದ ಎರಡು ತಿಂಗಳಿನಿಂದ ಅಂಜಪ್ಪ ಮತ್ತು ಅವರ ಕುಟುಂಬದವರು ಅಂಬಿಕ ರವರಿಗೆ ವಿನಾಕಾರಣ ಜಗಳ ತೆಗೆದು ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ನಿಮ್ಮ ತವರು ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಹಿಂಸೆ ನೀಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆಂದು ಅಂಬಿಕರವರು ತಮ್ಮ ದೂರಿನಲ್ಲಿ ಆರೋಪಿಸಿರುತ್ತಾರೆ.

ರಸ್ತೆ ಅಪಘಾತಗಳು: ೦೩

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೩

ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೩-೦೨-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ಹುಲದೇನಹಳ್ಳಿ ಗ್ರಾಮದ ವಾಸಿಯಾದ ಶ್ರೀನಿವಾಸ ಎಂಬುವರು ತಮ್ಮ ಹೀರೋಹೋಂಡಾ ಫ್ಯಾಷನ್ ದ್ಚಿಚಕ್ರವಾಹನ ಸಂ. ಕೆಎ-೦೮-ಹೆಚ್-೪೦೬೪ ರಲ್ಲಿ ರಾಷ್ಟ್ರೀಯ ಹೆದ್ದಾರಿ-೪ ರ ಟೇಕಲ್ ಜಿಗ್ ಜಾಗ್ ನಲ್ಲಿ ಹೋಗುತ್ತಿದ್ದರು. ಅ ಸಮಯದಲ್ಲಿ ಹಿಂದುಗಡೆಯಿಂದ ಬಂದು ಹೀರೋ ಹೋಂಡಾ ಸ್ಪ್ಲೆಂಡರ್ದ್ಚಿಚಕ್ರ ವಾಹನ ಸಂ. ಕೆಎ-೦೮-೪೭೭೬ ರ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಶ್ರೀನಿವಾಸ ರವರ ಬಲ ಭುಜ ಮತ್ತು ಮೊಣಕಾಲಿಗೆ ರಕ್ತ ಗಾಯಗಳಾಗಿದ್ದು ಕೋಲಾರದ ಶ್ರೀನಿವಾಸ ನರ್ಸಿಂಗ್ ಹೋಂ ನಲ್ಲಿ ದಾಖಲಾಗಿರುತ್ತಾರೆ.

ನಂಗಲಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೩-೦೨-೨೦೦೮ ರಂದು ೨೩೦೦ ಗಂಟೆ ಸಮಯದಲ್ಲಿ ಪಲಮನೇರು ತಾಲೂಕು ಮಾರಡಿಪಲ್ಲಿ ಗ್ರಾಮದ ವಾಸಿಯಾದ ವೆಂಕಟೇಶ್ ಎಂಬುವರು ಅಂದ್ರ ಸಾರಿಗೆ ಸಂಸ್ಠೆಯ ಬಸ್ ಸಂಖ್ಯೆ ಎಪಿ-೧೧-ಜೆಡ್-೩೮೬೫ ರಲ್ಲಿ ಬೆಂಗಳೂರಿನಿಂದ ಪಲಮನೇರಿಗೆ ಹೋಗುತ್ತಿದ್ದರು. ಅ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿ-೪ ರ ಶ್ರೀರಂಗಪುರ ಗೇಟ್ ತಿರುವಿನ ಬಳಿ ಬಸ್ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಬಸ್ ನ್ನು ರಭಸವಾಗಿ ತಿರುಗಿಸಿದ್ದರಿಂದ ಬಾಗಿಲಲ್ಲಿ ನಿಂತಿದ್ದ ವೆಂಕಟೇಶ್ ರವರು ಕೆಳಕ್ಕೆ ಬಿದ್ದು ತಲೆಗೆ ಮತ್ತು ಕೈಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿರುತ್ತಾರೆ.

ಮುಳಬಾಗಿಲು   ಪೊಲೀಸ್   ಠಾಣೆಯಲ್ಲಿ     ಸಾಮಾನ್ಯ   ಸ್ವರೂಪದ  ರಸ್ತೆ   ಅಪಘಾತಕ್ಕೆ   ಸಂಬಂದಿಸಿದಂತೆ    ಪ್ರಕರಣ ದಾಖಲಾಗಿರುತ್ತದೆದಿನಾಂಕ ೨೨-೦೨-೨೦೦೮ ರಂದು ೧೧೦೦  ಗಂಟೆ ಸಮಯದಲ್ಲಿ  ಮುಳಬಾಗಿಲು ತಾಲೂಕು ಕಲ್ಕರೆ ಗ್ರಾಮದ ವಾಸಿಯಾದ  ಮುನಿರೆಡ್ಡಿ  ಮತ್ತು  ಅವರ  ಸ್ನೇಹಿತರಾದ  ಕೃಷ್ಣಪ್ಪ  ಎಂಬುವರು  ಮಂಡಿಕಲ್ ಜಾತ್ರೆಗೆ  ಹೋಗುವ ಸಲುವಾಗಿ ಅರಪನಾಯಕನಹಳ್ಳಿ ಗೇಟ್ ಬಳಿ ನಡೆದುಕೊಂಡು ಹೋಗುತ್ತಿದ್ದರು. ಅ ಸಮಯದಲ್ಲಿ ಬಂದ ಟಿವಿಎಸ್  ವಿಕ್ಟರ್ದ್ವಿಚಕ್ರ ವಾಹನದ ಸಂ. ಕೆಎ-೦೮-ಎಲ್-೮೯೨೧ ರ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು  ಅಜಾಗರೂಕತೆಯಿಂದ ಚಾಲನೆ  ಮಾಡಿಕೊಂಡು  ಬಂದು  ಡಿಕ್ಕಿ  ಹೊಡೆದ  ಪರಿಣಾಮವಾಗಿ  ಕೃಷ್ಣಪ್ಪರವರಿಗೆ  ರಕ್ತಗಾಯಗಳಾಗಿದ್ದು   ಕೋಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿರುತ್ತಾರೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೨

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಪಟ್ಟಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೨-೨೦೦೮ ರಂದು ೧೬೦೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ತೃಣಸಿ ಗ್ರಾಮದ ವಾಸಿಯಾದ ಮದುರಾಣಿ ಎಂಬುವರು ತಮ್ಮ ತೋಟದ ಬಳಿ ತಮ್ಮ ತಂಗಿಯರೊಂದಿಗೆ ಕೆಲಸ ಮಾಡುತ್ತಿದ್ದರು. ಅ ಸಮಯದಲ್ಲಿ ಅದೆ ಗ್ರಾಮದ ವಾಸಿಯಾದ ಮುನಿರಾಜ ಎಂಬುವರು ಬಂದು ಮಧುರಾಣಿ ರವರೊಂದಿಗೆ ತೆಂಗಿನ ಗೆರೆಗಳ ವಿಷಯದಲ್ಲಿ ಜಗಳ ತೆಗೆದು ಹಿಡಿದು ಎಳೆದಾಡಿ ಕೈಗಳಿಂದ ಹೊಡೆದು ಬಾಯಿಯಿಂದ ಕಚ್ಚಿ ಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾನೆ.

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಪಟ್ಟಂತೆ ಮತ್ತೊಂದು ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೨-೨೦೦೮ ರಂದು ೧೬೦೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ತೃಣಸಿ ಗ್ರಾಮದ ವಾಸಿಯಾದ ಯಲ್ಲಮ್ಮ ಎಂಬುವರು ತಮ್ಮ ಮನೆ ಬಳಿ ಕುಳಿತ್ತಿದ್ದರು. ಅ ಸಮಯದಲ್ಲಿ ಅದೇ ಗ್ರಾಮದ ವಾಸಿಗಳಾದ ಸುಜಾತ ಮತ್ತು ಮುನಿವೆಂಕಟಮ್ಮ ಎಂಬುವರು ಹಳೇ ದ್ವೇಷದ ಹಿನ್ನಲೆಯಲ್ಲಿ ಯಲ್ಲಮ್ಮ ರವರೊಂದಿಗೆ ಜಗಳ ತೆಗೆದು ಕಲ್ಲಿನಿಂದ ತಲೆಗೆ ಹೊಡೆದು ಗಾಯಪಡಿಸಿರುತ್ತಾರೆ.

ಇತರೆ: ೦೨

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಜಾತಿನಿಂದನೆಗೆ ಸಂಬಂಧಪಟ್ಟ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೨-೨೦೦೮ ರಂದು ೧೫೦೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ಆನೇಮಿಟ್ನಹಳ್ಳಿ ಗ್ರಾಮದ ವಾಸಿಯಾದ ರವೀಂದ್ರ ಎಂಬುವರು ಕೊಮ್ಮನಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಮತದಾರರ ಪರಿಷ್ಕರಣೆ ಪಟ್ಟಿಯಲ್ಲಿ ಜಲ್ಲಿ ಕ್ರಷರ್‍ಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರ ಹೆಸರುಗಳನ್ನು ಸೇರ್ಪಡೆ ಮಾಡಲು ಹೋಗಿದ್ದರು. ಅ ಸಮಯದಲ್ಲಿ ಕೊಮ್ಮನಹಳ್ಳಿ ಗ್ರಾಮದ ವಾಸಿಗಳಾದ ಈರಪ್ಪ ಮತ್ತು ಹರೀಶ್ ಎಂಬವರು ರವೀಂದ್ರರವರೊಂದಿಗೆ ಜಗಳ ತೆಗೆದು ಜಾತಿನಿಂದನೆ ಮಾಡಿ ದೊಣ್ಣೆ ಮತ್ತು ಕಲ್ಲುಗಳಿಂದ ಹೊಡೆದು ಗಾಯಪಡಿಸಿರುತ್ತಾರೆ.

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಜಾತಿನಿಂದನೆಗೆ ಸಂಬಂಧಪಟ್ಟ ಮತ್ತೊಂದು ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೨-೨೦೦೮ ರಂದು ಮಾಲೂರು ತಾಲೂಕು ಕೊಮ್ಮನಹಳ್ಳಿ ಗ್ರಾಮದ ವಾಸಿಯಾದ ಕಿಟ್ಟಪ್ಪ ಎಂಬುವರು ತಮ್ಮ ಗ್ರಾಮದ ಶಾಲೆಯ ಬಳಿ ನಿಂತಿದ್ದರು. ಅ ಸಮಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು ಅದೇ ಗ್ರಾಮದ ವಾಸಿಗಳಾದ ಸುಬ್ರಮಣಿ ಮತ್ತು ಇತರೆ ೩ ಜನರು ಮತದಾರರ ಪಟ್ಟಿ ಪರಿಷ್ಕರಣೆ ವಿಷಯದಲ್ಲಿ ಗಲಾಟೆ ಮಾಡುತ್ತಿದ್ದು ಈ ಬಗ್ಗೆ ಪ್ರಶ್ನಿಸಿದ ಕಿಟ್ಟಪ್ಪ ರವರನ್ನು ಅವಾಚ್ಯ ಶ್ರಬಗಳಿಂದ ಬೈದು ಜಾತಿನಿಂದನೆ ಮಾಡಿ ಚಾಕಿವಿನಿಂದ ತಿವಿದು ಪ್ರಾಣಬೆದರಿಕೆ ಹಾಕಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೧೨

-ಸ್ಥಳ ದಂಡ ಮೊತ್ತ: ರೂ. ೧೯೦೦

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೪ ನೇ ಫೆಬ್ರವರಿ ೦೮

February 24, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ -೦೨-೨೦ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

  •   ಮಾಸ್ತಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೦೨-೨೦೦೮ ರಂದು ೦೭೩೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ದುಡುವನಹಳ್ಳಿ ಗ್ರಾಮದ ವಾಸಿಗಳಾದ ವೆಂಕಟರಮಣಮ್ಮ ಮತ್ತು ಇವರ ತಮ್ಮ ಚಂದ್ರಶೇಖರ್ಎಂಬುವರು ತಮ್ಮ ದ್ವಿಚಕ್ರವಾಹನ ಸಂಖ್ಯೆ ಕೆಎ-೦೮-೯೩೮೭ ರಲ್ಲಿ ದಿನ್ನಹಳ್ಳಿ-ಮಾಸ್ತಿ ರಸ್ತೆಯ ಕಾಂಚಾಳ ಗ್ರಾಮದ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಮಾಸ್ತಿ ಕಡೆಯಿಂದ ಬಂದ ಆಟೋ ಸಂಖ್ಯೆ ಕೆಎ-೦೮-೨೩೭೫ ರ ಚಾಲಕ ಸೈಯದ್ ರಿಜ್ವಾನ್ ಎಂಬುವನು ತನ್ನ ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ದ್ವಿಚಕ್ರವಾಹನದಲ್ಲಿದ್ದ ವೆಂಕಟರಮಣಪ್ಪ ರವರು ಕೆಳಗೆ ಬಿದ್ದಿದ್ದು ಬಲಗಾಲಿನ ಮೂಳೆ ಮುರಿದಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಆಕಸ್ಮಿಕವಾಗಿ ವಿಷಸೇವನೆ ಮಾಡಿ ಮೃತಪಟ್ಟ ಘಟನೆ ಕೋಲಾರ ತಾಲೂಕು ಯಡಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ.  ಯಡಹಳ್ಳಿ ಗ್ರಾಮದ ವಾಸಿ ಸುಬ್ರಮಣಿ ಮತ್ತು ಉಷಾ ಎಂಬ ದಂಪತಿಗಳ ೪ ವರ್ಷದ ಮಕ್ಕಳಾದ ವಿಕಾಸ್ ಮತ್ತು ವಿದ್ಯಾ ಎಂಬುವರು ಮೃತ ಪಟ್ಟಿರುತ್ತಾರೆ.  ದಿನಾಂಕ ೨೩-೦೨-೨೦೦೮ ರಂದು ೧೫೦೦ ಗಂಟೆ ಸಮಯದಲ್ಲಿ ಉಷಾರವರು ತಮ್ಮ ಮಕ್ಕಳಿಗೆ ಹಾಲು ಕಾಯಿಸಿ ಕೊಡುವಾಗ ಆಕಸ್ಮಿಕವಾಗಿ ಸಕ್ಕರೆ ಬದಲಿಗೆ ಇಲಿಔಷಧವನ್ನು ಬರೆಸಿದ್ದು ಇದನ್ನು ಕುಡಿದ ಮಕ್ಕಳು ಅಸ್ವಸ್ಥರಾಗಿರುತ್ತಾರೆ.  ಪರೀಕ್ಷಿಸಲು ಹಾಲನ್ನು ತಾನು ಸಹಾ ಕುಡಿದು ಉಷಾರವರೂ ಸಹಾ ಅಸ್ವಸ್ಥರಾಗಿರುತ್ತಾರೆ.  ಚಿಕಿತ್ಸೆಗಾಗಿ ಕೋಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ವಿಕಾಸ್ ಮತ್ತು ವಿದ್ಯಾರವರು ಮೃತಪಟ್ಟಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೧೬

-ಸ್ಥಳ ದಂಡ ಮೊತ್ತ: ರೂ. ೧೧೦೦/

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

 


ಜೂಜಾಟ ದಾಳಿ: ೨೯ ಜನರ ಬಂಧನ, ರೂ. ೬೪,೦೦೦/ ವಶ

February 23, 2008

ಮುಳಬಾಗಿಲು ಉಪ ವಿಭಾಘದ ಆರಕ್ಷಕ ಉಪಾಧೀಕ್ಷಕರಾದ ಶ್ರೀ ಹೆಚ್.ಆರ್‍.ಧರಣೇಂದ್ರ ರವರು ತಮ್ಮ ಸಿಬ್ಬಂದಿಯೊಡನೆ ಮುಳಬಾಗಿಲು ತಾಲೂಕು ಮಂಡಕಲ್ ಗ್ರಾಮದ ಚೌಡೇಶ್ವರಿ ಜಾತ್ರೆಯಲ್ಲಿ ದಾಳಿ ನಡೆಸಿ ಕೋಳಿ ಪಂದ್ಯ ಜೂಜಾಟದಲ್ಲಿ ನಿರತರಾಗಿದ್ದ ೨೯ ಜನ ಆರೋಪಿಗಳನ್ನು ಬಂಧಿಸಿರುತ್ತಾರೆ. ಕಾರ್ಯಾಚರಣೆ ಸಮಯದಲ್ಲಿ ರೂ. ೬೪,೦೦೦/ ನಗದು, ೩ ಮೊಬೈಲ್ ಫೋನ್, ೪ ಉಂಗುರಗಳು, ಒಂದು ಇಂಡಿಕಾಕಾರ್‍, ಒಂದು ಟಾಟಾ ಸುಮೋ, ಒಂದು ಹೀರೋಹೋಂಡಾ, ಎರಡು ಟಿ.ವಿ.ಎಸ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.

ಬಂಧಿತ ಆರೋಪಿಗಳ ವಿವರ:

ಶ್ರೀರಾಮುಲು (೩೪), ಚಲಪತಿ (೨೪). ಸುಭಾಷ್ (೨೫), ವೆಂಕಟೇಶ್ (೩೫), ವೆಂಕಟೇಶ್ (೩೦), ಸಂಜೀವಪ್ಪ(೩೭), ಸೋಮಪ್ಪ (೩೫), ನಾರಾಯಣಪ್ಪ (೩೫), ಕೃಷ್ಣಪ್ಪ (೩೫), ರಾಮಚಂದ್ರಪ್ಪ (೪೦), ಲಕ್ಷ್ಮಣ (೩೮), ಕಾಳಾಚಾರಿ (೪೦), ಸುಬ್ರಮಣ್ಯಂ (೨೫), ಈಶ್ವರರೆಡ್ಡಿ (೩೩), ವೆಂಕಟರಮಣ (೪೦), ಕೆ.ರಮಣ (೩೨), ಸಿ.ರಮಣ (೩೦), ಭಾಸ್ಕರ್‍ (೩೫). ರಾಮಪ್ಪ (೪೮), ವೆಂಕಟರಮಣ (೫೦), ವೆಂಕಟರಮಣ ರೆಡ್ಡಿ (೪೫), ಸುದರ್ಶನ್ (೪೭), ರಮಣಾರೆಡ್ಡಿ (೨೭), ರಫೀಕ್ (೩೦), ಆನಂದ (೨೫), ರಾಮಪ್ಪ (೪೦), ಹುಸೇನ್ (೪೭), ಬೈರಪ್ಪ (೩೭), ಬಾಬು(೩೫).

ಸಂಬಂಧ ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೩ ನೇ ಫೆಬ್ರವರಿ ೦೮

February 23, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ -೦೨-೨೦ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

  •   ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲೂಕು ಕೊಮ್ಮನಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೨-೦೨-೨೦೦೮ ರಂದು ೧೫೧೫ ಗಂಟೆ ಸಮಯದಲ್ಲಿ ಕೊಮ್ಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ವೆಂಕಟಸ್ವಾಮಿ ಎಂಬುವುರು ಗ್ರಾಮದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು. ಆ ಸಮಯದಲ್ಲಿ ಅಕ್ರಮಗುಂಪು ಕಟ್ಟಿಕೊಂಡು ಅಲ್ಲಿಗೆ ಬಂದ ಅದೇ ಗ್ರಾಮದ ವಾಸಿಗಳಾದ ದೊಡ್ಡಚೌಡಪ್ಪ, ಸುಬ್ರಮಣಿ, ರವೀಂದ್ರ, ನಾರಾಯಣಸ್ವಾಮಿ ಎಂಬುವರು ವೆಂಕಟಸ್ವಾಮಿರವರನ್ನು ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯ ನಿರ್ವಹಣೆಗೆ ಅಡ್ಡಿ ಪಡಿಸಿರುತ್ತಾರೆ.

ಹಲ್ಲೆ: ೦೨

  •   ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲೂಕು ಚೆಲುವನಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೨-೦೨-೨೦೦೮ ರಂದು ೧೯೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ಟೌನ್ ವಾಸಿ ರಫೀಕ್ ಪಾಷ ಎಂಬುವರ ಮೇಲೆ ಚೆಲುವನಹಳ್ಳಿ ಗ್ರಾಮದ ವಾಸಿ ಆಂಜನೇಯರೆಡ್ಡಿ ಎಂಬುವರು ಜಗಳ ಮಾಡಿ ದೊಣ್ಣೆಯಿಂದ ಹೊಡೆದು ಗಾಯಪಡಿಸಿರುತ್ತಾರೆ.

  •   ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಮತ್ತೊಂದು ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ಟೌನ್ ಸಂತೇ ಮೈದಾನದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೨-೦೨-೨೦೦೮ ರಂದು ೧೫೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ಟೌನ್ ವಾಸಿ ನರಸಿಂಹಪ್ಪ ಎಂಬುವರ ಮೇಲೆ ಬಾಲಕೃಷ್ಣಪ್ಪ ಮತ್ತಿತರೇ ೩ ಜನರು ಜಗಳ ಮಾಡಿ ದೊಣ್ಣೆಯಿಂದ ಹಾಗೂ ಕೈಗಳಿಂದ ಹೊಡೆದು ಗಾಯಪಡಿಸಿರುತ್ತಾರೆ. ನರಸಿಂಹಪ್ಪ ರವರು ತಮ್ಮ ಮನೆ ಬಾಡಿಗೆಗೆ ನೀಡಿರುವ ವಿಚಾರದ ಹಿನ್ನೆಲೆಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ.

ಇತರೆ: ೦೧

  •   ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಅಪಹರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರಸಭಾ ಸದಸ್ಯರಾದ ಮೊಹಮದ್ ಅಸ್ಲಾಂ ಎಂಬುವರು ಅಪಹರಣಕ್ಕೀಡಾಗಿರುತ್ತಾರೆ. ದಿನಾಂಕ ೨೨-೦೨-೨೦೦೮ ರಂದು ೧೨೦೦ ಗಂಟೆ ಸಮಯದಲ್ಲಿ ಮೊಹಮದ್ ಅಸ್ಲಾಂರವರು ಕೋಲಾರದ ನೂಕಾಪುರ ಆಸ್ಪತ್ರೆಗೆ ಹೋಗುವ ಸಲುವಾಗಿ ಹೋಗುತ್ತಿದ್ದಾಗ ನಫೀಸ್ ಮತ್ತು ಅಶ್ವತ್ಥ ಎಂಬುವರು ಪುಸಲಾಯಿಸಿಕೊಂಡು ಮೊಹಮದ್ ಅಸ್ಲಾಂರವರನ್ನು ತಮ್ಮೊಡನೆ ಕರೆದುಕೊಂಡು ಹೋಗಿ ಅಪಹರಣ ಮಾಡಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೦೫

-ಸ್ಥಳ ದಂಡ ಮೊತ್ತ: ರೂ. ೫೦೦/

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ಜೂಜಾಟ ದಾಳಿ: ಇಬ್ಬರ ಬಂಧನ

February 22, 2008

ರಾಯಲ್ಪಾಡು ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ಶ್ರೀ ವೆಂಕಟೇಗೌಡರವರು ತಮ್ಮ ಸಿಬ್ಬಂದಿಯೊಡನೆ ಶ್ರೀನಿವಾಸಪುರ ತಾಲೂಕು ಕೊತ್ತಪೇಟೆ ಗ್ರಾಮದ ಗೇಟ್ ಬಳಿ ದಾಳಿ ನಡೆಸಿ ಕೋಳಿ ಪಂದ್ಯ ಜೂಜಾಟದಲ್ಲಿ ನಿರತರಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುತ್ತಾರೆ. ದಿನಾಂಕ ೨೧-೦೨-೨೦೦೮ ರಂದು ೧೫೪೫ ಗಂಟೆ ಸಮಯದಲ್ಲಿ ತಮಗೆ ಬಂದ ಖಚಿತ ವರ್ತಮಾನದಂತೆ ದಾಳಿ ನಡೆಸಿದ ಪೊಲೀಸರು ಕೋಳಿಪಂದ್ಯ ಜೂಜಾಟದಲ್ಲಿ ನಿರತರಾಗಿದ್ದ ಕೊತ್ತಪೇಟೆ ಗ್ರಾಮದ ವಾಸಿಗಳಾದ ವೆಂಕಟರಮಣ ಮತ್ತು ನರಸಿಂಹಪ್ಪ ಎಂಬುವರನ್ನು ಬಂಧಿಸಿ ರೂ. ೧೦೦/ ನಗದು ಹಾಗೂ ೨ ಹುಂಜಗಳನ್ನು ವಶಪಡಿಸಿಕೊಂಡಿರುತ್ತಾರೆ.

ಈ ಸಂಬಂಧ ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಬಂಧಿತ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೨ ನೇ ಫೆಬ್ರವರಿ ೦೮

February 22, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ -೦೨-೨೦ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ೦೧

  •   ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ವಾಹನಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ಬೈರೇಗೌಡ ನಗರದ ವಾಸಿ ಎನ್.ರಂಗಯ್ಯ ಎಂಬುವರಿಗೆ ಸೇರಿದ ಹೀರೋಹೋಂಡಾ ಪ್ಯಾಷನ್ ಪ್ಲಸ್ ಸಂಖ್ಯೆ ಕೆಎ-೦೭-ಎಲ್-೫೧೬೬ ದ್ವಿಚಕ್ರವಾಹನ ಕಳುವಾಗಿರುತ್ತದೆ. ದಿನಾಂಕ ೧೯-೦೨-೨೦೦೮ ರಂದು ೧೩೩೦ ಗಂಟೆ ಸಮಯದಲ್ಲಿ ಎನ್.ರಂಗಯ್ಯ ರವರು ಕೋಲಾರ ಕೆ.ಎಸ್.ಆರ್‍.ಟಿ.ಸಿ ಬಸ್ ನಿಲ್ದಾಣದ ಬಳಿ ಇರುವ ಕುವೆಂಪುನಗರದ ತನ್ನ ಸ್ನೇಹತನ ಮನೆಗೆ ಹೋಗಿದ್ದು ಮನೆಯ ಮುಂದೆ ತನ್ ದ್ವಿಚಕ್ರವಾಹನವನ್ನು ನಿಲ್ಲಿಸಿದ್ದಾಗ ಯಾರೋಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ವಾಹನದ ಬೆಲೆ ರೂ. ೪೭,೦೦೦/ ಆಗಿರುತ್ತದೆ.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೧

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಹುತ್ತೂರು ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೦-೦೨-೨೦೦೮ ರಂದು ೨೨೦೦ ಗಂಟೆ ಸಮಯದಲ್ಲಿ ಹುತ್ತೂರು ಗ್ರಾಮದ ವಾಸಿ ಮಂಜುಳಾ ಎಂಬುವರು ತಮ್ಮ ಗ್ರಾಮದ ತೋಟವೊಂದರ ಬೇವಿನ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ. ಮಂಜುಳಾ ರವರಿಗೆ ಈಗ್ಗೆ ಒಂದು ವರ್ಷದ ಹಿಂದೆ ಹುತ್ತೂರು ಗ್ರಾಮದ ವಾಸಿ ಶ್ರೀಕಂಠ ಎಂಬುವರೊಂದಿಗೆ ವಿವಾಹವಾಗಿದ್ದು ವಿವಾಹ ಸಮಯದಲ್ಲಿ ಹಣ ಮತ್ತು ಒಡವೆಗಳನ್ನು ವರದಕ್ಷಿಣೆ ರೂಪದಲ್ಲಿ ನೀಡಿರುತ್ತಾರೆ. ವಿವಾಹ ನಂತರ ಶ್ರೀಕಂಠ ರವರು ತನ್ನ ತಂದೆ ಮೂರ್ತಿ ಮತ್ತು ತಾಯಿ ಪದ್ಮಮ್ಮ ರವರೊಡನೆ ಸೇರಿಕೊಂಡು ಹೆಚ್ಚಿನ ವರದಕ್ಷಿಣೆ ತರುವಂತೆ ಮಂಜುಳಾರವರಿಗೆ ಕಿರುಕುಳ ನೀಡಿದ್ದು ಈ ಹಿಂಸೆಯನ್ನು ತಾಳಲಾರದೇ ನೇಣು ಹಾಕಿಕೊಂಡಿರುವುದಾಗಿ ಮಂಜುಳಾರವರ ತಂದೆ ನಂಜುಡಪ್ಪ ರವರು ತಮ್ಮ ದೂರಿನಲ್ಲಿ ತಿಳಿಸಿರುತ್ತಾರೆ.

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೨

  •   ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೮-೦೨-೨೦೦೮ ರಂದು ೧೪೧೫ ಗಂಟೆ ಸಮಯದಲ್ಲಿ ಕೋಲಾರ ಕುರುಬರ ಪೇಟೆ ವಾಸಿ ಶ್ರೀಕಾಂತ್ ಎಂಬುವರು ವಿಜಯಕುಮಾರ್ಎಂಬುವರೊಡನೆ ತಮ್ಮ ಹೀರೋಹೋಂಡಾ ಸಂಖ್ಯೆ ಕೆಎ-೦೨-ಇಡಿ-೯೧೬೮ ದ್ವಿಚಕ್ರವಾಹನದಲ್ಲಿ ಕೋಲಾರ ಎಂ.ಜಿ. ವೃತ್ತದ ಕಡೆ ಬರುತ್ತಿದ್ದರು. ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಟಿ.ವಿ.ಎಸ್ ವಿಕ್ಟರ್ಸಂಖ್ಯೆ ಕೆಎ-೦೭-ಎಲ್-೭೭೫೯ ದ್ವಿಚಕ್ರವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಹೀರೋಹೋಂಡಾ ದ್ವಿಚಕ್ರವಾಹನದಲ್ಲಿ ಕುಳಿತಿದ್ದ ವಿಜಯಕುಮಾರ್ರವರಿಗೆ ಗಾಯಗಳುಂಟಾಗಿದ್ದು ಚಿಕಿತ್ಸೆಗಾಗಿ ಬೆಂಗಳೂರು ಮಲ್ಲಿಗೆ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

  •   ಮಾಲೂರು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೨-೨೦೦೮ ರಂದು ೧೦೦೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ಮಿನಸಂದ್ರ ಗ್ರಾಮದ ವಾಸಿ ರಂಗನಾಥ ಎಂಬುವರು ತಮ್ಮ ಗ್ರಾಮದಿಂದ ಮಾಲೂರಿಗೆ ಹೋಗುವ ಸಲುವಾಗಿ ಆಲದಮರದ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಎದುರುಗಡೆಯಿಂದ ಬಂದ ದ್ವಿಚಕ್ರವಾಹನದ ಚಾಲಕ ಶ್ರೀನಿವಾಸ್ ಎಂಬುವರು ತನ್ನ ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ರಂಗನಾಥರವರಿಗೆ ಗಾಯಗಳುಂಟಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

  •   ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲೂಕು ನಾಗದೇನಹಳ್ಳೀ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೩-೦೨-೨೦೦೮ ರಂದು ೧೦೩೦ ಗಂಟೆ ಸಮಯದಲ್ಲಿ ನಾಗದೇನಹಳ್ಳಿ ಗ್ರಾಮದ ವಾಸಿ ಮುನಿಯಪ್ಪ (೨೫) ಎಂಬುವರ ಮೇಲೆ ಅದೇ ‌ಗ್ರಾಮದ ವಾಸಿಗಳಾದ ವೆಂಕಟೇಶ್, ಮುನಿರಾಜು ಮತ್ತತರೇ ೧೦ ಜನರು ಜಗಳ ತೆಗೆದು ದೊಣ್ಣೆಗಳಿಂದ ಹೊಡೆದು ಗಾಯಪಡಿಸಿರುತ್ತಾರೆ. ಮುನಿಯಪ್ಪ ರವರ ಎತ್ತಿನಗಾಡಿ ತಾಕಿದ ಪರಿಣಾಮ ಸಿಮೆಂಟ್ ಶೀಟ್ ಒಂದು ಮುರಿದಿದ್ದು ಈ ವಿಷಯದ ಹಿನ್ನೆಲೆಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ.

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

  •   ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಬೆಗ್ಲಿಹೊಸಹಳ್ಳಿ ಗ್ರಾಮದ ವಾಸಿ ಶಾಂತಕುಮಾರ್ಎಂಬುವರು ಮೃತಪಟ್ಟಿರುತ್ತಾರೆ. ಶಾಂತಕುಮಾರ್ರವರಿಗೆ ಆಗಾಗ್ಗ ವಿಪರೀತವಾದ ತಲೆನೋವು ಬರುತ್ತಿದ್ದು ಹಲವಾರು ಕಡೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಸಹಾ ವಾಸಿಯಾಗಿರಲಿಲ್ಲ. ತಲೆನೋವಿನ ಬಾದೆಯನ್ನು ತಾಳಲಾರದೇ ಶಾಂತಕುಮಾರ್ರವರು ದಿನಾಂಕ ೨೧-೦೨-೨೦೦೮ ರಂದು ೦೬೦೦ ಗಂಟೆಯಿಂದ ೦೯೦೦ ಗಂಟೆ ನಡುವಿನ ಸಮಯದಲ್ಲಿ ತನ್ನ ವಾಸದ ಮನೆಯಲ್ಲಿ ಪ್ಲಾಸ್ಟಿಕ್ ಹಗ್ಗದಿಂದ ಫ್ಯಾನ್ ಗೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೦೬

-ಸ್ಥಳ ದಂಡ ಮೊತ್ತ: ರೂ. ೧,೨೦೦/

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.