ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೯-೦೪-೨೦೦೮ ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ೦೧
ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ವೇಮಗಲ್ ಗ್ರಾಮದ ವಾಸಿ ವಿ.ಎಲ್.ಅಮರ್ ಎಂಬುವರ ಸರ್ವೆ ನಂ. ೧೧೨/೧ ರ ಕೊಳವೆಬಾವಿಗೆ ಅಳವಡಿಸಿದ್ದ ಪ್ಯಾನಲ್ ಬೋರ್ಡ್ ಕಳುವಾಗಿರುತ್ತದೆ. ದಿನಾಂಕ ೧೯-೦೪-೨೦೦೮ ರಂದು ಜಮೀನೊಳಗೆ ನುಗ್ಗಿದ ಯಾರೋ ಕಳ್ಳರು ಪ್ಯಾನಲ್ ಬೋರ್ಡನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ
ರಸ್ತೆ ಅಪಘಾತಗಳು: ೦೪
-ಮಾರಣಾಂತಿಕ: ೦೧
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೪-೨೦೦೮ ರಂದು ೧೩೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಯನಾದಹಳ್ಳಿ ಗ್ರಾಮದ ವಾಸಿ ಸಂಜೀವಗೌಡ ಎಂಬುವರು ತಮ್ಮ ಬಜಾಜ್ ಪಲ್ಸರ್ ಸಂಖ್ಯೆ ಕೆಎ-೦೭-ಕ್ಯೂ-೧೮೫೯ ದ್ವಿಚಕ್ರವಾಹನದಲ್ಲಿ ತಮ್ಮ ಗ್ರಾಮದ ವಾಸಿ ಯಶೋದಮ್ಮ ಎಂಬುವರೊಡನೆ ಕೋಲಾರ-ಚಿಕ್ಕಬಳ್ಳಾಪುರ ರಸ್ತೆಯ ಈಲಂ ಗ್ರಾಮದ ಬಳಿ ಬರುತ್ತಿದ್ದರು. ಆ ಸಮಯದಲ್ಲಿ ಸಂಜೀವಗೌಡ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಹಂಪ್ಸ್ ಮೇಲೆ ಹತ್ತಿಸಿದ್ದು ವಾಹನದ ಹಿಂಬಾಗದಲ್ಲಿ ಕುಳಿತಿದ್ದ ಯಶೋದಮ್ಮ ರವರು ಕೆಳಗೆ ಬಿದ್ದಿರುತ್ತಾರೆ. ಇದರ ಪರಿಣಾಮ ಯಶೋದಮ್ಮ ರವರ ತಲೆಗೆ ಗಾಯಗಳಾಗಿದ್ದು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟಿರುತ್ತಾರೆ.
-ಸಾಧಾರಣ: ೦೩
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೪-೨೦೦೮ ರಂದು ೧೭೨೦ ಗಂಟೆ ಸಮಯದಲ್ಲಿ ಕೋಲಾರ ನಗರ ವಾಸಿ ಸಿ.ಬಿ.ಜಯರಾಮ್ ಎಂಬುವರು ತಮ್ಮ ಮಾರುತಿ ಕಾರ್ ಸಂಖ್ಯೆ ಕೆಎ-೦೭-ಎನ್-೭೩೩ ರಲ್ಲಿ ಜನ್ನಘಟ್ಟ ಗ್ರಾಮದಿಂದ ಕೋಲಾರಕ್ಕೆ ಬರುವ ಸಲುವಾಗಿ ಕೋಡಿಕಣ್ಣೂರು ಗೇಟ್ ಬಳಿ ಬರುತ್ತಿದ್ದರು. ಆ ಸಮಯದಲ್ಲಿ ಕಾರಿನ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆಯ ಬಲಬದಿಯಲ್ಲಿದ್ದ ಕಲ್ಲಿಗೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಜಯರಾಮ್ ರವರಿಗೆ ಗಾಯಗಳುಂಟಾಗಿದ್ದು ಚಿಕಿತ್ಸೆಗಾಗಿ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೦೩-೨೦೦೮ ರಂದು ೧೧೦೦ ಗಂಟೆ ಸಮಯದಲ್ಲಿ ಬೆಂಗಳೂರು ನಗರದ ವಾಸಿಗಳಾದ ರಾಜಶೇಖರ್ ಮತ್ತು ಯಶೋದಾದೇವಿ ಎಂಬುವರು ತಮ್ಮ ಸ್ಕೂಟರ್ ಸಂಖ್ಯೆ ಸಿಕೆಡ್ಬ್ಲ್ಯೂ ೪೫೫೮ ರಲ್ಲಿ ಎನ್-ಹೆಚ್ ೪ ರಸ್ತೆಯ ಚಲುವನಹಳ್ಳಿ ಪಾರಿಸ್ಟ್ ಬಳಿ ಬರುತ್ತಿದ್ದರು. ಆ ಸಮಯದಲ್ಲಿ ಹಿಂಬಾಘದಿಂದ ಬಂದ ೪೦೭ ಟೆಂಪೋವಿನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಸ್ಕೂಟರ್ ಸವಾರರಾದ ರಾಜಶೇಖರ್ ಮತ್ತು ಯಶೋದಾದೇವಿರವರಿಗೆ ಗಾಯಗಳುಂಟಾಗಿದ್ದು ಚಿಕಿತ್ಸೆಗಾಗಿ ಬೆಂಗಳೂರಿನ ಹಾಸ್ ಮಟ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೪-೨೦೦೮ ರಂದು ೧೦೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಜಿಂಗಮಶಿಗೇನಹಳ್ಳಿ ಗ್ರಾಮದ ವಾಸಿ ನಾರಾಯಣಪ್ಪ ಎಂಬುವರು ಚಲ್ಡಿಗಾಲಹಳ್ಳಿ ಗ್ರಾಮದ ಬಳಿ ಬರುತ್ತಿದ್ದರು. ಆ ಸಮಯದಲ್ಲಿ ಎದುರುಗಡೆಯಿಂದ ಬಂದ ದ್ವಿಚಕ್ರವಾಹನ ಸಂಖ್ಯೆ ಕೆಎ-೦೭-೯೪೫೪ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ನಾರಾಯಣಮ್ಮ ರವರಿಗೆ ಗಾಯಗಳುಂಟಾಗಿರುತ್ತದೆ.
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ೦೧
ವೇಮಗಲ್ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೪-೨೦೦೮ ರಂದು ೧೭೦೦ ಗಂಟೆ ಸಮಯದಲ್ಲಿ ವೇಮಗಲ್ ಪೊಲೀಸ್ ಠಾಣೆಯ ಮುಂದೆ ಕೃತ್ಯ ಸಂಭವಿಸಿರುತ್ತದೆ. ವೇಮಗಲ್ ಪೊಲೀಸ್ ಠಾಣೆಯಲ್ಲಿ ದಾಖಲಾಧ ಕೇಬಲ್ ವೈರ್ ಕಳವು ಪ್ರಕರಣಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಮಂಜುನಾಥ್, ನಾರಾಯಣಮೂರ್ತಿ ರವರ ಮುಂದಾಳತ್ವದಲ್ಲಿ ಸುಮಾರು ೧೨೦ ಜನರು ಠಾಣೆಯ ಮುಂದೆ ಅನಧಕೃತವಾಗಿ ಗುಂಪು ಸೇರಿ ರಸ್ತೆ ತಡೆ ನಡೆಸಿ ಸಾರ್ವಜನಿಕ ಸಂಚಾರಕ್ಕ ಅಡಚಣೆ ಮಾಡಿರುತ್ತಾರೆ.
ಹಲ್ಲೆ: ೦೨
ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರ ಬೋವಿಕಾಲೋನಿ ಯಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೦-೦೪-೨೦೦೮ ರಂದು ೧೬೦೦ ಗಂಟೆ ಸಮಯದಲ್ಲಿ ಮುನೇಶ್ವರ ನಗರ ವಾಸಿಗಳಾದ ರಾಮಚಂದ್ರಪ್ಪ ಮತ್ತು ನವೀನ್ ಎಂಬುವರು ಬೋವಿನಗರದ ವಾಸಿ ವೆಂಕಟೇಶ್ (೪೮) ಎಂಬುವರ ಮೇಲೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಇಟ್ಟಿಗೆಯಿಂದ ಹೊಡೆದು ಗಾಯಪಡಿಸಿರುತ್ತಾರೆ.
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಮುಳ್ಳಹಳ್ಳಿ ಗ್ರಾಮದ ಕೆರೆಯ ಸಮೀಪ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೮-೦೪-೨೦೦೮ ರಂದು ೧೫೦೦ ಗಂಟೆ ಸಮಯದಲ್ಲಿ ಮುಳ್ಳಹಳ್ಳಿ ಗ್ರಾಮದ ವಾಸಿ ವೆಂಕಟೇಶರೆಡ್ಡಿ ಎಂಬುವರ ಮೇಲೆ ಅದೇ ಗ್ರಾಮದ ವಾಸಿಯಾದ ಮಂಜುನಾಥರೆಡ್ಡಿ ಎಂಬುವರು ಜಗಳ ತೆಗೆದು ಏಕಾಏಕಿ ಚಾಕುವಿನಿಂದ ಬೆನ್ನಿಗೆ ಹೊಡೆದು ಗಾಯಪಡಿಸಿರುತ್ತಾರೆ. ಪರಸ್ಪರರ ನಡುವೆ ಇದ್ದ ವೈಷಮ್ಯ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ಟೌನ್ ಹೈದರೀನಗರದ ವಾಸಿ ಗುಲ್ ಜಾರ್ ಎಂಬುವರ ಮಗನಾದ ಇಮ್ರಾನ್ ದಸ್ತಗೀರ್ (೨೪) ಎಂಬರು ಮೃತಪಟ್ಟವರು. ದಿನಾಂಕ ೨೪-೦೪-೨೦೦೮ ರಂದು ೧೯೦೦ ಗಂಟೆ ಸಮಯದಲ್ಲಿ ಮೃತ ಇಮ್ರಾನ್ ದಸ್ತಗೀರ್ ರವರು ವಿದ್ಯುತ್ ಇಲ್ಲದ ಕಾರಣ ತನ್ನ ಮನೆಯಲ್ಲಿ ಸೀಮೆಎಣ್ಣೆ ದೀಪ ಹತ್ತಿಸುವಾಗ ಆಕಸ್ಮಿಕವಾಗಿ ದೀಪ ಮೈಮೇಲೆ ಬಿದ್ದು ಸುಟ್ಟಗಾಯಗಳಾಗಿರುತ್ತದೆ. ಚಿಕಿತ್ಸೆಗಾಗಿ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ ೨೮-೦೪-೨೦೦೮ ರಂದು ೧೩೧೫ ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ೨೦
ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಚುನಾವಣಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೌಡಿಆಸಾಮಿಗಳನ್ನು ಬಂಧಿಸಿರುವ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ. ಮುಳಬಾಗಿಲು ಟೌನ್ ವಾಸಿ ನಾಗೇಶ್, ಎಂಬ ರೌಡಿ ಆಸಾಮಿಯನ್ನು ಬಂಧಿಸಲಾಗಿರುತ್ತದೆ. ಮೇಲ್ಕಂಡವರು ಈ ಹಿಂದೆ ಸಮಾಜಘಾತಕ ಕೃತ್ಯಗಳನ್ನು ಎಸಗಿದ್ದು ಇವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ, ಚುನಾವಣಾ ದೃಷ್ಣಿಯಿಂದ ರಾಜಕೀಯ ಹಿನ್ನೆಲೆಯಲ್ಲಿ ಇವರಿಂದ ಪ್ರಾಣಹಾನಿ, ಆಸ್ತಿಹಾನಿ ಹಾಗೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳು ಇದ್ದ ಮೇರೆಗೆ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.
ನಂಗಲಿ ಪೊಲೀಸ್ ಠಾಣೆಯಲ್ಲಿ ಚುನಾವಣಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೌಡಿಆಸಾಮಿಗಳನ್ನು ಬಂಧಿಸಿರುವ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ. ನಂಗಲಿ ಗ್ರಾಮದ ವಾಸಿಗಳಾದ ಎನ್.ವಿ.ಸುಬ್ರಮಣಿ, ಜಿ.ಚಂದ್ರಶೇಖರ್ @ ಲಾಯರ್ ಚಂದ್ರಶೇಖರ್, ಎಲ್.ನಾರಾಯಣಸ್ವಾಮಿ, ವಿಶ್ವನಾಥ @ ವಿಶ್ವನಾಥರೆಡ್ಡಿ, ಸುಬ್ರಮಣಿ @ ಮಣಿ, ಎಸ್.ಗೋಪಾಲಕೃಷ್ಣ @ ಗೋಪಾಲ್ @ ಬಿಜೆಪಿ ಗೋಪಾಲ್, ರಿಯಾಜ್ ಬೇಗ್, ಅಹ್ಮದ್ ಬೇಗ್, ಚಿನ್ನಹಳ್ಳಿ ಗ್ರಾಮದ ವಾಸಿ ಸಿ.ಗೋಪಾಲ್ @ ಚಿನ್ನಹಳ್ಳಿ ಗೋಪಾಲ್, ಮಾಕಲಹಳ್ಳಿ ಗ್ರಾಮದ ವಾಸಿ ಎಲ್.ಚಂದ್ರಪ್ಪ @ ಚಂದ್ರ, ಮಲ್ಲೇಕುಪ್ಪ ಗ್ರಾಮದ ವಾಸಿ ಎಂ.ವಿ.ಸುಬ್ರಮಣಿ ಎಂಬ ರೌಡಿ ಆಸಾಮಿಗಳನ್ನು ಬಂಧಿಸಲಾಗಿರುತ್ತದೆ. ಮೇಲ್ಕಂಡವರು ಈ ಹಿಂದೆ ಸಮಾಜಘಾತಕ ಕೃತ್ಯಗಳನ್ನು ಎಸಗಿದ್ದು ಇವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ, ಚುನಾವಣಾ ದೃಷ್ಣಿಯಿಂದ ರಾಜಕೀಯ ಹಿನ್ನೆಲೆಯಲ್ಲಿ ಇವರಿಂದ ಪ್ರಾಣಹಾನಿ, ಆಸ್ತಿಹಾನಿ ಹಾಗೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳು ಇದ್ದ ಮೇರೆಗೆ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.
ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಚುನಾವಣಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೌಡಿಆಸಾಮಿಗಳನ್ನು ಬಂಧಿಸಿರುವ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲೂಕು ಕನಿಗಾನಹಳ್ಳಿ ಗ್ರಾಮದ ವಾಸಿ ರವಣಪ್ಪ (೩೦), ದಾಸರತಿಮ್ಮನಹಳ್ಳಿ ಗ್ರಾಮದ ವಾಸಿ ನಾರಾಯಣಸ್ವಾಮಿ ಕೊರ್‍ನಹಳ್ಳಿ ಗ್ರಾಮದ ವಾಸಿ ಆಂಪ್ಪ @ ಕೊರ್‍ನಹಳ್ಳಿ ಆಂಜಿ ಎಂಬ ರೌಡಿ ಆಸಾಮಿಗಳನ್ನು ಬಂಧಿಸಲಾಗಿರುತ್ತದೆ. ಮೇಲ್ಕಂಡವರು ಈ ಹಿಂದೆ ಸಮಾಜಘಾತಕ ಕೃತ್ಯಗಳನ್ನು ಎಸಗಿದ್ದು ಇವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ, ಚುನಾವಣಾ ದೃಷ್ಣಿಯಿಂದ ರಾಜಕೀಯ ಹಿನ್ನೆಲೆಯಲ್ಲಿ ಇವರಿಂದ ಪ್ರಾಣಹಾನಿ, ಆಸ್ತಿಹಾನಿ ಹಾಗೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳು ಇದ್ದ ಮೇರೆಗೆ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.
ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಚುನಾವಣಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರೌಡಿಆಸಾಮಿಗಳನ್ನು ಬಂಧಿಸಿರುವ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತದೆ. ಕೋಲಾರ ನಗರ ಕುರುಬರಪೇಟೆ ವಾಸಿಗಳಾಧ ರಮೇಶ (೪೩), ನಾರಾಯಣಸ್ವಾಮಿ (೪೦), ಕಠಾರಿಪಾಳ್ಯದ ವಾಸಿ ವೇಣುಗೋಪಾಲ್ (೩೫), ಗೌರಿಪೇಟೆ ವಾಸಿಗಳಾದ ನೌಷಾದ್ ಪಾಷ ಮತ್ತು ಅಬೀಬ್ ಪಾಷ ಎಂಬ ರೌಡಿ ಆಸಾಮಿಗಳನ್ನು ಬಂಧಿಸಲಾಗಿರುತ್ತದೆ. ಮೇಲ್ಕಂಡವರು ಈ ಹಿಂದೆ ಸಮಾಜಘಾತಕ ಕೃತ್ಯಗಳನ್ನು ಎಸಗಿದ್ದು ಇವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ, ಚುನಾವಣಾ ದೃಷ್ಣಿಯಿಂದ ರಾಜಕೀಯ ಹಿನ್ನೆಲೆಯಲ್ಲಿ ಇವರಿಂದ ಪ್ರಾಣಹಾನಿ, ಆಸ್ತಿಹಾನಿ ಹಾಗೂ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳು ಇದ್ದ ಮೇರೆಗೆ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ೧೫
-ಸ್ಥಳ ದಂಡ ಮೊತ್ತ: ರೂ. ೧೫೦೦/
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.