ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨6-೦೫-೨೦೦೮ ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ೦೧
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೫-೨೦೦೮ ರಂದು ೧೫೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಎಸ್.ಅಗ್ರಹಾರ ಗ್ರಾಮದ ವಾಸಿಯಾದ ನಾರಾಯಣಸ್ವಾಮಿ ಮತ್ತು ಅವರ ಪತ್ನಿ ಲಕ್ಷ್ಮಮ್ಮ ಎಂಬುವರು ತಮ್ಮ ಮನೆಯಲ್ಲಿ ಇದ್ದರು. ಆ ಸಮಯದಲ್ಲಿ ಚುನಾವಣೆಯಲ್ಲಿ ಜೆ.ಡಿ.ಎಸ್ ಆಬ್ಯರ್ಥಿ ಜಯಗಳಿಸಿದ ಪರಿಣಾಮವಾಗಿ ಆದೇ ಗ್ರಾಮದ ವಾಸಿಗಳಾದ ಗೋವಿಂದಪ್ಪ ಮತ್ತು ಇತರೆ ೧೯ ಜನರು ಅಕ್ರಮವಾಗಿ ಗುಂಪು ಕಟ್ಟುಕೊಂಡು ರಸ್ತೆಗಳಲ್ಲಿ ಪಟಾಕಿಗಳನ್ನು ಸಿಡಿಸುತ್ತಿದ್ದರು. ಈ ಪೈಕಿ ರಾಜಪ್ಪ ಮತ್ತು ಗೋವಿಂದಪ್ಪ ಎಂಬುವರು ನಾರಾಯಣಸ್ವಾಮಿ ರವರ ಮನೆಯ ಕಿಟಕಿಯ ಬಳಿ ಪಟಾಕಿಗಳನ್ನು ಸಿಡಿಸುತ್ತಿದ್ದರು. ಇದನ್ನು ನಾರಾಯಣಸ್ವಾಮಿ ಮತ್ತು ಇತರರು ಕೇಳಿದ್ದಕ್ಕೆ ಅಕ್ರಮ ಗುಂಪು ಕಟ್ಟಿಕೊಂಡು ಬಂದಿದ್ದ ಗೋವಿಂದಪ್ಪ ಮತ್ತು ಇತರರು ಪೆರುಮಾಳಪ್ಪ ಮತ್ತು ಇತರರನ್ನು ಮಾರಕಾಯುಧಗಳಿಂದ ಹಲ್ಲೆ ಮಾಡಿರುತ್ತಾರೆ. ಗಾಯಾಳುಗಳು ಚಿಕಿತ್ಸೆಗಾಗಿ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದು ಆ ಪೈಕಿ ಪೆರುಮಾಳಪ್ಪ ಎಂಬುವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ.
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ
ರಸ್ತೆ ಅಪಘಾತಗಳು: ೦೫
-ಮಾರಣಾಂತಿಕ: ೦೩
ವೇಮಗಲ್ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೫-೨೦೦೮ ರಂದು ೧೩೦೦ ಗಂಟೆ ಸಮಯದಲ್ಲಿ ಶಿಡ್ಲಘಟ್ಟ ತಾಲೂಕು ಅಮರಾವತಿ ಗ್ರಾಮದ ವಾಸಿಯಾದ ರವಿ ಕುಮಾರ್ (೨೪) ಎಂಬುವರು ಕೋಲಾರ ತಾಲೂಕು ಚೋಳಘಟ್ಟ ಗ್ರಾಮದ ಕೆರೆಯ ದುರಸ್ಥಿ ಕೆಲಸಕ್ಕೆ ಹೋಗಿದ್ದರು. ಆ ಸಮಯದಲ್ಲಿ ಮಣ್ಣು ತುಂಬಿಕೊಂಡು ಬಂದ ಟ್ರಾಕ್ಟರ್ ಸಂಖ್ಯೆ ಕೆಎ-೦೭-ಟಿ-೬೭೦೦ ರ ಚಾಲಕ ತನ್ನ ಟ್ರಾಕ್ಟರ್‌ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೋಂಡು ಬಂದು ರವಿ ಕುಮಾರ್ ರವರಿಗೆ ಡಿಕ್ಕಿ ಹೊಡೆಸಿರುತ್ತಾನೆ. ಇದರ ಪರಿಣಾಮವಾಗಿ ತಲೆಗೆ ಮತ್ತು ಇತರೆ ಕಡೆ ರಕ್ತ ಗಾಯಗಳಾಗಿದ್ದು ಇಲಾಜಿಗಾಗಿ ಹೆಚ್-ಕ್ರಾಸ್ ನ ಖಾಸಗಿ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರಕ್ಕೆ ಕರೆದುಕೊಂಡು ಬರುವಾಗ ಮಾರ್ಗ ಮಧ್ಯೆ ಮೃತಪಟ್ಟಿರುತ್ತಾರೆ.
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೫-೨೦೦೮ ರಂದು ೧೬೩೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ವಾಸಿಗಳಾದ ಜೆ.ಕಾರ್ತಿಕೇಯನ್ ಮತ್ತು ಆತನ ಸ್ನೇಹಿತ ಕೆ.ಸಂತೋಷ್ ಎಂಬುವರ ತನ್ನ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೮-ಜೆ-೫೬೧೮ ರಲ್ಲಿ ಕೋಲಾರ ದಿಂದ ಬಂಗಾರುಪೇಟೆ ಕಡೆಗೆ ಹೋಗುತ್ತಿದ್ದರು. ಆಸಮಯದಲ್ಲಿ ಬಂಗಾರುಪೇಟೆ ಕಡೆಯಿಂದ ಬಂದ ಮಾರುತಿ ಕಾರು ಸಂಖ್ಯೆ ಕೆಎ-೦೭-ಎಂ-೧೮೮ ರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿ ಜೆ.ಕಾರ್ತಿಕೇಯನ್ ರವರ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿರುತ್ತಾನೆ. ಇದರ ಪರಿಣಾಮ ಕಾರಿನಲ್ಲಿದ್ದ ವೆಂಕಟೇಶ್ ಮತ್ತು ದ್ವಿಚಕ್ರವಾಹನದ ಹಿಂಬಂದಿ ಸವಾರನಿಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಪೈಕಿ ಕೋಲಾರ ನಗರದ ಖಾದ್ರಿಪುರದ ವಾಸಿ ವೆಂಕಟೇಶ್ ಎಂಬವರು ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟರುತ್ತಾರೆ.
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೫-೨೦೦೮ ರಂದು ೧೩೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಲಕ್ಷ್ಮೀಸಾಗರ ಗ್ರಾಮದ ವಾಸಿಯಾದ ಶಂಕರಪ್ಪ ತನ್ನ ಪತ್ನಿಯೊಂದಿಗೆ ತನ್ನ ಹೀರೋ ಹೋಂಡಾ ದ್ವಿಚಕ್ರವಾಹನ ಸಂಖ್ಯೆ ಕೆಎ-೦೭-ಜೆ-೬೨೦೪ರಲ್ಲಿ ಕೋಲಾರ – ಶ್ರೀನಿವಾಸಪುರ ರಸ್ತೆಯ ವೀರಾಪುರ ಗೇಟ್ ಬಳಿ ಹೋಗುತ್ತಿದ್ದರು. ಅ ಸಮಯದಲ್ಲಿ ಎದುರುಗಡೆಯಿಂದ ಬಂದ ಯಾವುದೋ ಒಂದು ಅಪರಿಚಿತ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಶಂಕರಪ್ಪ ರವರ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿ ಹೊರಟು ಹೋಗಿರುತ್ತಾನೆ. ಇದರ ಪರಿಣಾಮವಾಗಿ ಶಂಕರಪ್ಪ ಕೆಳಗೆ ಬಿದ್ದು ತೀವ್ರತರವಾದ ಗಾಯಗಳಾಗಿ ಚಿಕಿತ್ಸೆಗಾಗಿ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ೨೬-೦೫-೦೮ ರಂದು ಬೆಳಗಿನ ಜಾವ ಮೃತಪಟ್ಟಿರುತ್ತಾನೆ.
-ಸಾಧಾರಣ: ೦೨
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೫-೨೦೦೮ ರಂದು ೧೮೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಸೂಲೂರು ಗ್ರಾಮದ ವಾಸಿಯಾದ ಮುಳಬಾಗಲಪ್ಪ ಎಂಬುವರ ತನ್ನ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೭-ಕ್ಯೂ-೨೬೮೭ ರಲ್ಲಿ ರಾಷ್ಟ್ರೀಯ ಹೆದ್ದಾರಿ-೪ ರ ಚುಂಚದೇನಹಳ್ಳಿ ಗೇಟ್ ಬಳಿ ಹೋಗುತ್ತಿದ್ದರು. ಆಸಮಯದಲ್ಲಿ ಎದುರಗಡೆಯಿಂದ ಬಂದ ಮಾರುತಿ ಸುಜುಕಿ ಕಾರು ಸಂಖ್ಯೆ ಕೆಎ-೦೫-ಝಡ್-೨೨೪೪ ರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿರುತ್ತಾನೆ. ಇದರ ಪರಿಣಾಮವಾಗಿ ಎರಡು ವಾಹನಗಳು ಜಖಂಗೊಂಡಿದ್ದು ದ್ವಿಚಕ್ರವಾಹನದ ಸವಾರನಿಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೫-೨೦೦೮ ರಂದು ೦೯೦೦ ಗಂಟೆ ಸಮಯದಲ್ಲಿ ಕೋಲಾರ ನಗರದ ಟೇಕಲ್ ರಸ್ತೆಯ ನವರತ್ನ ನರ್ಸಿಂಗ್ ಹೋಂ ಹತ್ತಿರ ಸರೋಜಮ್ಮ ಮತ್ತು ಅವರ ಮಗಳಾದ ಮೀನಾ ಎಂಬುವರು ನಿಂತಿದ್ದರು. ಆಸಮಯದಲ್ಲಿ ಯಾವುದೋ ಒಂದು ಅಪರಿಚಿತ ದ್ವಿಚಕ್ರ ವಾಹನದ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮೀನಾ ರವರಿಗೆ ಡಿಕ್ಕಿ ಹೊಡೆಸಿರುತ್ತಾನೆ. ಇದರ ಪರಿಣಾಮ ಎಡಕಾಲಿಗೆ ರಕ್ತಗಾಯವಾಗಿರುತ್ತದೆ. ಚಿಕಿತ್ಸೆಗಾಗಿ ಎಸ್.ಎನ್.ಆರ್. ಆಸ್ಪತ್ರೆಗೆ ದಾಖಲಾಗಿರುತ್ತಾರೆ.
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ೦೧
ವೇಮಗಲ್ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೫-೨೦೦೮ ರಂದು ೧೪೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಬೆಳ್ಳೂರು ಗ್ರಾಮದ ವಾಸಿಗಳಾದ ಮುನಿಯಪ್ಪ ಮತ್ತು ಇತರೆ ೪ ಜನರು ಅಕ್ರಮ ಗುಂಪು ಕಟ್ಟಿಕೊಂಡು ಗ್ರಾಮದ ಶ್ರೀ ಗಂಗಮ್ಮ ದೇವಾಲಯದ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಚಪ್ಪಡಿ ಕಲ್ಲುಗಳನ್ನು ನೆಟ್ಟುವ ಸಲುವಾಗಿ ನೆಲವನ್ನು ಅಗೆಯುತ್ತಿದ್ದರು. ಆ ಸಮಯದಲ್ಲಿ ಅದೇ ಗ್ರಾಮದ ವಾಸಿಯಾದ ಚಿನ್ನಪ್ಪ ಎಂಬುವರು ಕೇಳಿದ್ದಕ್ಕೆ ದೊಣ್ಣೆ ಮತ್ತು ಕೈಗಳಿಂದ ಹೊಡೆಯುತ್ತಿದ್ದನ್ನು ಬಿಡಿಸಲು ಬಂದ ಚಿನ್ನಪ್ಪ ರವರ ತಮ್ಮ ಶ್ರೀನಿವಾಸ ಬಂದಾಗ ಅವನಿಗೂ ಸಹ ಹೊಡೆದು ಗಾಯಪಡಿಸಿರುತ್ತಾರೆ.
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ೦೫
-ಸ್ಥಳ ದಂಡ ಮೊತ್ತ: ೯೦೦
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.