ದಿನದ ಅಪರಾಧಗಳ ಪಕ್ಷಿನೋಟ ೧೨ ನೇ ಮೇ ೦೮

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೨-೦೫-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ೦೨

ಮಾಲೂರು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮಾಲೂರು-ಹೊಸೂರು ರಸ್ತೆಯಲ್ಲಿರುವ ಗ್ರೀನ್ ಸಿಟಿ ಇಂಟರ್ ನ್ಯಾಷನಲ್ ಶಾಲೆಯ ಬಳಿ ಸಂಭವಿಸಿದ ಅಪಘಾತದಲ್ಲಿ ಗಂಡ, ಹೆಂಡತಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಅಸುನೀಗಿರುತ್ತಾರೆ. ದಿನಾಂಕ ೧೧-೦೫-೨೦೦೮ ರಂದು ೧೭೪೫ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ಕೊಂಡ್ರಹಳ್ಳಿ ಗ್ರಾಮದ ವಾಸಿಗಳಾದ ಕೆ.ಬಿ.ಶಿವರಾಜ್ (೩೫) ಎಂಬುವರು ತಮ್ಮ ಹೀರೋಹೋಂಡಾ ಸ್ಪ್ಲೆಂಡರ್ ದ್ವಿಚಕ್ರವಾಹನದಲ್ಲಿ ತನ್ನ ಹೆಂಡತಿ ಶೋಭಾ (೨೫) ಮಕ್ಕಳಾದ ರುತು (೫) ಅನುಷಾ (೮) ಎಂಬುವರೊಡನೆ ಅನೇಕಲ್ ತಾಲೂಕು ಸರ್ಜಾಪುರದಿಂದ ಮಾಲೂರಿಗೆ ಬರುವ ಸಲುವಾಗಿ ಮಾಲೂರು-ಹೊಸೂರು ರಸ್ತೆಯ ಮೇಲ್ಕಂಡ ಶಾಲೆಯ ಬಳಿ ಬರುತ್ತಿದ್ದರು. ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಲಾರಿ ಸಂಖ್ಯೆ ಟಿ.ಎನ್.-೩೯-ಹೆಚ್.ಸಿ-೩೨೯೯ ರ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಲಾರಿಯು ಡಿಕ್ಕಿ ಹೊಡೆದ ಬಳಿಕ ದ್ವಿಚಕ್ರವಾಹನದ ಮೇಲೆ ಹರಿದಿದ್ದು ಇದರ ಪರಿಣಾಮ ದ್ವಿಚಕ್ರವಾಹನದಲ್ಲಿದ್ದ ಎಲ್ಲರೂ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.

ವೇಮಗಲ್ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೨-೦೫-೨೦೦೮ ರಂದು ೨೧೦೦ ಗಂಟೆ ಸಮಯದಲ್ಲಿ ಚಿಂತಾಮಣಿ ತಾಲೂಕು ಕಾಚಹಳ್ಳಿ ಗ್ರಾಮದ ವಾಸಿ ಸಮೂವುಲ್ಲಾ ಎಂಬುವರ ಸಹೋದರ ಜಿಯಾವುಲ್ಲಾ ಎಂಬುವರು ಕ್ಯಾಲನೂರು ಗ್ರಾಮದ ವಾಸಿಯಾದ ಜುಬೇರ್ ಅಹ್ಮದ್ ಎಂಬುವರೊಡನೆ ಬಜಾಜ್ ಚೇತಕ್ ಸಂಖ್ಯೆ ಕೆಎ-೦೨-ಎಲ್-೫೭೪೦ ದ್ವಿಚಕ್ರವಾಹನದಲ್ಲಿ ಕೃಷ್ಣಾಪುರ ಗ್ರಾಮದ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ಜುಬೇರ್ ಅಹ್ಮದ್ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗು ರಸ್ತೆ ಬದಿಯ ಮೋರಿಯೊಂದಕ್ಕೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ದ್ವಿಚಕ್ರವಾಹನದ ಹಿಂಬದಿಯಲ್ಲಿ ಕುಳಿತಿದ್ದ ಜಿಯಾವುಲ್ಲಾ ರವರ ತಲೆಗೆ ಗಾಯಗಳಾಗಿದ್ದು ಅಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟಿರುತ್ತಾನೆ.

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೨

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲೂಕು ರೋಣೂರು ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೧-೦೫-೨೦೦೮ ರಂದು ೧೨೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ದಿಂಬಾಲ ಗ್ರಾಮದ ವಾಸಿ ಡಿ.ವಿ.ಬೈರಾರೆಡ್ಡಿ ಎಂಬುವರು ರೋಣೂರು ಗ್ರಾಮದ ತಮ್ಮ ಗೊಬ್ಬರದ ಅಂಗಡಿಯಲ್ಲಿದ್ದರು. ಆ ಸಮಯದಲ್ಲಿ ಅಲ್ಲಿಗೆ ಬಂದ ರೋಣೂರು ಗ್ರಾಮದ ವಾಸಿ ನಂಜಮ್ಮ ಮತ್ತು ಇತರೇ ೨೨ ಜನರು ಡಿ.ವಿ.ಬೈರಾರೆಡ್ಡಿ ರವರಿಗೆ ಹೊಡೆದು ಗಾಯಪಡಿಸಿರುತ್ತಾರೆ. ಪರಸ್ಪರರ ನಡುವೆ ಇದ್ದ ವೈಷಮ್ಯ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಮತ್ತೊಂದು ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲೂಕು ರೋಣೂರು ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೧-೦೫-೨೦೦೮ ರಂದು ೧೧೩೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ರೋಣೂರು ಗ್ರಾಮದ ಶಾಲಾ ಶಿಕ್ಷಕರಾದ ಹೆಚ್.ಆರ್.ರಮೇಶ್ ರೆಡ್ಡಿ ಎಂಬುವರ ಮನೆಯ ಬಳಿಗೆ ಬಂದ ಅದೇ ಗ್ರಾಮದ ವಾಸಿಗಳಾದ ಶ್ರೀದೇವಿ ಮತ್ತು ಇತರೇ ೫ ಜನರು ಹೆಚ್.ಆರ್.ರಮೇಶ್ ರೆಡ್ಡಿ ಎಂಬುವರ ಮೇಲೆ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ಗಾಯಪಡಿಸಿರುತ್ತಾರೆ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರಲು ಹೆಚ್.ಆರ್.ರಮೇಶ್ ರೆಡ್ಡಿ ರವರು ಕಾರಣ ಎಂಬುದಾಗಿ ಆರೋಪಿಗಳು ಈ ಕೃತ್ಯ ಎಸಗಿರುತ್ತಾರೆ.

ಹಲ್ಲೆ: ೦೩

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲೂಕು ದಾಸರಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೧-೦೫-೨೦೦೮ ರಂದು ಎಲಗುಳಿ ಗ್ರಾಮದ ವಾಸಿ ಸಂಪತ್ (೩೨) ಎಂಬುವರ ಮೇಲೆ ಜಗಳ ಮಾಡಿದ ದಾಸರಹಳ್ಳಿ ಗ್ರಾಮದ ವಾಸಿಗಳಾದ ತಿಪ್ಪಯ್ಯ, ಶಾಮಣ್ಣ, ಕೃಷ್ಣಪ್ಪ ಎಂಬುವರು ಕೈಗಳಿಂದ ಮತ್ತು ದೊಣ್ಣೆಗಳಿಂದ ಹೊಡೆದು ಗಾಯಪಡಿಸಿರುತ್ತಾರೆ. ಆರೋಪಿಗಳು ಜಯರಾಮ ಎಂಬುವರ ಮೇಲೆ ಜಗಳ ಮಾಡಿ ಹಲ್ಲೆ ನಡೆಸಿದ್ದು ಅಡ್ಡ ಹೋದ ಸಂಪತ್ ರವರ ಮೇಲೂ ಸಹಾ ಹಲ್ಲೆ ನಡೆಸಿರುತ್ತಾರೆ.

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಮತ್ತೊಂದು ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲೂಕು ಕೊಮ್ಮನಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೧-೦೫-೨೦೦೮ ರಂದು ಕೊಮ್ಮನಹಳ್ಳಿ ಗ್ರಾಮದ ವಾಸಿ ಮುನಿವೆಂಕಟಪ್ಪ ಎಂಬುವರ ಮೇಲೆ ಜಗಳ ಮಾಡಿದ ಅದೇ ಗ್ರಾಮದ ವಾಸಿ ಈರಪ್ಪ ಎಂಬುವರು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಮತ್ತು ದೊಣ್ಣೆಗಳಿಂದ ಹೊಡೆದು ಗಾಯಪಡಿಸಿರುತ್ತಾರೆ. ರಾಜಕೀಯ ದ್ವೇಷ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಸ್ತಿ ಗ್ರಾಮದ ಕೆ.ಸಿ.ಹಳ್ಳಿ ವೃತ್ತದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೧-೦೫-೨೦೦೮ ರಂದು ೧೩೦೦ ಗಂಟೆ ಸಮಯದಲ್ಲಿ ಕೊಮ್ಮನಹಳ್ಳಿ ಗ್ರಾಮದ ವಾಸಿ ವೆಂಕಟೇಶಪ್ಪ ಎಂಬುವರ ಮೇಲೆ ಜಗಳ ಮಾಡಿದ ಅದೇ ಗ್ರಾಮದ ವಾಸಿ ವೆಂಕಟೇಶ ಎಂಬುವರು ಕೈಗಳಿಂದ ಮತ್ತು ದೊಣ್ಣೆಗಳಿಂದ ಹೊಡೆದು ಗಾಯಪಡಿಸಿರುತ್ತಾರೆ. ರಾಜಕೀಯ ದ್ವೇಷ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಠ ಜಾತಿ / ಪರಿಶಿಷ್ಠ ಪಂಗಡ (ದೌರ್ಜನ್ಯತಡೆ) ಕಾಯ್ದೆ ಅಡಿಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲೂಕು ನಾರಾಯಣಪುರ ಮಜರಾ ಶೇಷಾಪುರ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೦-೦೫-೨೦೦೮ ರಂದು ೨೨೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ನಾರಾಯಣಪುರ ಮಜರಾ ಶೇಷಾಪುರ ಗ್ರಾಮದ ವಾಸಿ ನಾಗರಾಜ ಎಂಬುವರು ತಮ್ಮ ವಾಸದಮನೆಯಲ್ಲಿದ್ದರು. ಆ ಸಮಯದಲ್ಲಿ ಅಲ್ಲಿಗೆ ಬಂದ ಅದೇ ಗ್ರಾಮದ ವಾಸಿಗಳಾದ ಜಿ.ವಿ.ಗೋವಿಂದರಾಜು ಮತ್ತು ಇತರೇ ೦೩ ಜನರು ನಾಗರಾಜರವರ ಮೇಲೆ ಜಗಳ ತೆಗೆದು ಅಚಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿ ದೊಣ್ಣೆಯಿಂದ ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಪರಸ್ಪರರ ನಡುವೆ ಇದ್ದ ವೈಷಮ್ಯ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೦೮

-ಸ್ಥಳ ದಂಡ ಮೊತ್ತ: ರೂ. ೮೦೦/

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply