ದಿನದ ಅಪರಾದಗಳ ಪಕ್ಷಿನೋಟ ೧೩ ನೇ ಮೇ ೦೮

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೩-೦೫-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ೦೧

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಮಾಲೂರು ತಾಲೂಕು ದೊಡ್ಡದಾನವಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ.  ದೊಡ್ಡದಾನವಹಳ್ಳಿ ಗ್ರಾಮದ ವಾಸಿ ಕೆ.ರಮೇಶ (೨೮) ಎಂಬುವರು ಕೊಲೆಗೀಡಾಗಿರುತ್ತಾರೆ.  ಈ ಪ್ರಕರಣವು ಕೆ.ರಮೇಶ ರವರ ಅಣ್ಣನಾದ ಕೆ.ನಾರಾಯಣಸ್ವಾಮಿ ರವರ ದೂರಿನ ಆಧಾರದ ಮೇಲೆ ದಾಖಲಾಗಿರುತ್ತದೆ.  ಮೃತ ಕೆ.ರಮೇಶ್ ರವರಿಗೆ ಅದೇ ಗ್ರಾಮದ ವಾಸಿ ಷಂಷಾದ್ ಎಂಬುವರೊಡನೆ ಅಕ್ರಮ ಸಂಬಂಧ ಇದ್ದುದಾಗಿಯೂ ದಿನಾಂಕ ೧೨-೦೫-೨೦೦೮ ರಂದು ರಾತ್ರಿ ಷಂಷಾದ್ ರವರ ಮನೆಯಲ್ಲಿಯೇ ಮಲಗಲು ಹೋಗಿದ್ದ ಕೆ.ರಮೇಶ ಮರುದಿನ ಕೊಲೆಗೀಡಾಗಿದ್ದು ಇವರ ಸಾವಿಗೆ ಬಗ್ಗೆ ಷಂಷಾದ್, ಶೇಕುಸಾಬ್ ಮತ್ತು ರಮೀಜಾ ಎಂಬುವರು ಕಾರಣರಾಗಿರುವುದಾಗಿ ನಾರಾಯಣಸ್ವಾಮಿರವರು ತಮ್ಮ ದೂರಿನಲ್ಲಿ ತಿಳಿಸಿರುತ್ತಾರೆ.

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೨

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೧೧-೦೫-೨೦೦೮ ರಂದು  ೧೮೩೦ ಗಂಟೆ ಸಮಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ವರ್ತೂರಿನ ವಾಸಿ ನಯಾಜ್ (೪೦) ಎಂಬುವರು ತನ್ನ ತಾಯಿ ಸೈದಾಬಿ, ಹೆಂಡತಿ ಮಹರಾಜ್ ಮತ್ತು ತಮ್ಮ ಮಹಮದ್ ಸುಬಾನ್ ಎಂಬುವರೊಡನೆ ಕೆಎ-೦೧-ಎಂಎ-೮೬೮೬ ಸಂಖ್ಯೆಯ ಬೊಲೆರೋ ಜೀಪಿನಲ್ಲಿ ಕೋಲಾರ-ಬೆಂಗಳೂರು ರಸ್ತೆಯ ಮೆಟ್ಟುಬಂಡೆ ಬಳಿ ಹೋಗುತ್ತಿದ್ದರು.   ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಮಾರುತಿ ಸುಜುಕಿ ಕಾರ್‍ ಸಂಖ್ಯೆ ಕೆಎ-೦೩-ಎಂಜೆ-೫೩೨೪ ರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ.  ಇದರ ಪರಿಣಾಮ ಬೊಲೇರೋ ವಾಹನದಲ್ಲಿದ್ದ ಎಲ್ಲರಿಗೂ ಗಾಯಗಳುಂಟಾಗಿರುತ್ತದೆ.

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಮತ್ತೊಂದು ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಹಾವೇರಿ ಜಿಲ್ಲೆ ಮುಗಳಿ ಗ್ರಾಮದ ವಾಸಿ ಅಣ್ಣಪ್ಪ ಎಂಬುವರು ಕೋಲಾರ ತಾಲೂಕು ಬೆಳಗಾನಹಳ್ಳಿ ಗ್ರಾಮದ ಹಾಲು ಡೈರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಂಕ ೦೮-೦೫-೨೦೦೮ ರಂದು ೧೦೪೫ ಗಂಟೆ ಸಮಯದಲ್ಲಿ ಎಂದಿನಂತೆ ಡೈರಿಯ ಮೈನ್ ಗೇಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು.  ಆ ಸಮಯದಲ್ಲಿ ಡೈರಿಯ ವಾಹನ ಸಂಖ್ಯೆ ಕೆಎ-೨೫-೭೮೭೧ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕರ್ತವ್ಯದಲ್ಲಿದ್ದ ಅಣ್ಣಪ್ಪರವರಿಗೆ ಡಿಕ್ಕಿ ಹೊಡೆದಿರುತ್ತಾರೆ.  ಇದರ ಪರಿಣಾಮ ಅಣ್ಣಪ್ಪರವರಿಗೆ ಗಾಯಗಳುಂಟಾಗಿದ್ದು ಚಿಕಿತ್ಸೆಗಾಗಿ ಕೋಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೪

ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಮಾಲೂರು ತಾಲೂಕು ದಾಸರಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೧೧-೦೫-೨೦೦೮ ರಂದು ರಾತ್ರಿ ೨೨೩೦ ಗಂಟೆ ಸಮಯದಲ್ಲಿ ದಾಸರಹಳ್ಳಿ ಗ್ರಾಮದ ವಾಸಿ ತಿಪ್ಪಣ್ಣ ಎಂಬುವರ ಮೇಲೆ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿದ ಅದೇ ಗ್ರಾಮದ ವಾಸಿಗಳಾದ ಜಯಣ್ಣ ಮತ್ತು ಇತರೇ ೬ ಜನರು ತಿಪ್ಪಣ್ಣರವರ ಮೇಲೆ ಹಲ್ಲೆ ನಡೆಸಿ ಕಲ್ಲಿನಿಂದ ಹೊಡೆದು ಅವರ ಹೆಂಡತಿ ಮತ್ತು ಮಗುವಿನ ಮೇಲೆ ಕಾರದ ಪುಡಿ ಎರಚಿ ಪ್ರಾಣ ಬೆದರಿಕೆ ಹಾಕಿ ಮನೆಯ ಕಿಟಕಿ ಬಾಗಿಲುಗಳಿಗೆ ಪೆಟ್ರೋಲ್ ಎರಚಿ ಬೆಂಕಿ ಇಟ್ಟಿರುತ್ತಾರೆ.  ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ.

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ನಗರ ಕ್ಲಾಕ್ ಟವರ್‍ ಬಳಿ ಕೆ.ಜಿ ಮೊಹಲ್ಲಾದಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೧೦-೦೫-೨೦೦೮ ರಂದು ೧೬೩೦ ಗಂಟೆ ಸಮಯದಲ್ಲಿ ಮತ್ತು ದಿನಾಂಕ ೧೨-೦೫-೨೦೦೮ ರಂದು ೧೨೫೦ ಗಂಟೆ ಸಮಯದಲ್ಲಿ ಕೆ.ಜಿ.ಮೊಹಲ್ಲಾದ ವಾಸಿ ಅಜೀಂಪಾಷ ಎಂಬುವರ ಮೇಲೆ ಜಗಳ ತೆಗೆದು ಎಜಾಜ್, ಪೀರ್‍, ಯೂನಿಸ್ ಮತ್ತತರೇ ೪ ಜನರು ಕೈಗಳಿಂದ, ಕಾಲುಗಳಿಂದ ಹೊಡೆದು ಸ್ಕ್ರೂ ಡ್ರೈವರ್‍ನಿಂದ ಚುಚ್ಚಿ ಗಾಯ ಪಡಿಸಿರುತ್ತಾರೆ. ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ.

ಮಾಲೂರು ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಮಾಲೂರು ಪುರ ಮಾರುತಿ ಬಡಾವಣೆಯಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೧೨-೦೫-೨೦೦೮ ರಂದು ೨೩೩೫ ಗಂಟೆ ಸಮಯದಲ್ಲಿ ಮಾರುತಿಬಡಾವಣೆಯ ರೇಣುಕಾ ನಿಲಯದ ವಾಸಿ ಅಶ್ವತ್ಥರೆಡ್ಡಿ ಎಂಬುವರ ಮನೆಯ ಮೇಲೆ ದಾಳಿ ನಡೆಸಿದ ಮಂಜುನಾಥ, ನಾರಾಯಣಸ್ವಾಮಿ ಮತ್ತು ಇತರೇ ೮ ಜನರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಮನೆಯ ಕಿಟಕಿಗಳಿಗೆ ಅಳವಡಿಸಿದ್ದ ಗಾಜುಗಳನ್ನು ಹೊಡೆದುಹಾಕಿ ಅವಾಚ್ಯ ಶಬ್ದಗಳಿಂದ ಬೈದು, ರೂ. ೫೦,೦೦೦/ ನಷ್ಟವನ್ನು ಉಂಟುಮಾಡಿ ಪ್ರಾಣಬೆದರಿಕೆ ಹಾಕಿರುತ್ತಾರೆ.  ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. 

ಮಾಲೂರು ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಮತ್ತೊಂದು ಅಪರಾಧ ಪ್ರಕರಣ ಸಂಬವಿಸಿರುತ್ತದೆ.  ಮಾಲುರು ತಾಲೂಕು ಒಪ್ಪಚ್ಚಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೧೨-೦೫-೨೦೦೮ ರಂದು ೧೨೩೦ ಗಂಟೆ ಸಮಯದಲ್ಲಿ ಒಪ್ಪಚ್ಚಹಳ್ಳಿ ಗ್ರಾಮದ ವಾಸಿಯಾದ ದಿನ್ನಕೃಷ್ಣಪ್ಪ ಎಂಬುವರ ಮೇಲೆ ಅದೇ ಗ್ರಾಮದ ವಾಸಿಗಳಾದ ಯಲ್ಲಪ್ಪ ಮತ್ತಿತರೇ ೮ ಜನರು ಜಗಳ ತೆಗೆದು ಅಚಾಚ್ಯ ಶಬ್ದಗಳಿಂದ ಬೈದು  ಪ್ರಾಣಬೆದರಿಕೆ ಒಡ್ಡಿರುತ್ತಾರೆ.  ವೈಯಕ್ತಿಕ ವೈಷಮ್ಯ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.

ಹಲ್ಲೆ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಮುಳಬಾಗಿಲು ಪುರ ಸುಲ್ತಾನ್ ಬಜಾರ್‍ನಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೧೨-೦೫-೨೦೦೮ ರಂದು ೧೯೦೦ ಗಂಟೆ ಸಮಯದಲ್ಲಿ ಮುಳಬಾಗಿಲು ಮುಜಾವರ್‍ ಮೊಹಲ್ಲಾದ ವಾಸಿ ಮಹಬೂಬ್ ಪಾಷ ಎಂಬುವರ ಮೇಲೆ ಜಗಳ ತೆಗೆದ ಸೊನ್ನವಾಡಿ ಗ್ರಾಮದ ವಾಸಿಗಳಾದ ಫಾರೂಕ್ ಮತ್ತು ಚಾನ್ ಎಂಬುವರು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ಗಾಯಪಡಿಸಿರುತ್ತಾರೆ.  ವೈಯಕ್ತಿಕ ದ್ವೇಷ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೨

ಮಾಲೂರು ಪೊಲೀಸ್ ಠಾಣೆಯಲ್ಲಿ ಪರಿಶಿಷ್ಠ ಜಾತಿ / ಪಂಗಡ (ದೌರ್ಜನ್ಯತಡೆ) ಕಾಯ್ದೆ ಅಡಿಯಲ್ಲಿ ಹಾಗೂ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಮಾಲೂರು ತಾಲೂಕು ಚಿಕ್ಕತಿರುಪತಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೧೧-೦೫-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ಚಿಕ್ಕತಿರುಪತಿ ಗ್ರಾಮದ ವಾಸಿ ರಾಘವೇಂದ್ರ ಎಂಬುವರ ಮೇಲೆ ಅದೇ ಗ್ರಾಮದ ವಾಸಿಗಳಾದ ಕೃಷ್ಣಾರೆಡ್ಡಿ ಮತ್ತಿತರೇ ೬ ಜನರು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು, ಜಾತಿನಿಂದನೆ ಮಾಡಿ ದೊಣ್ಣೆ ಮತ್ತು ಬಾಟಲಿಗಳಿಂದ ಹೊಡೆದು ಗಾಯ ಪಡಿಸಿರುತ್ತಾರೆ.  ವೈಕಕ್ತಿಕ ದ್ವೇಷ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.

ಮಾಲೂರು ಪೊಲೀಸ್ ಠಾಣೆಯಲ್ಲಿ ಪರಿಶಿಷ್ಠ ಜಾತಿ / ಪಂಗಡ (ದೌರ್ಜನ್ಯತಡೆ) ಕಾಯ್ದೆ ಅಡಿಯಲ್ಲಿ ಹಾಗೂ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಮಾಲೂರು ತಾಲೂಕು ಚಿಕ್ಕತಿರುಪತಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೧೧-೦೫-೨೦೦೮ ರಂದು ೧೭೦೦ ಗಂಟೆ ಸಮಯದಲ್ಲಿ ಚಿಕ್ಕತಿರುಪತಿ ಗ್ರಾಮದ ವಾಸಿ ಕೃಷ್ಣಪ್ಪ (೩೫) ಎಂಬುವರ ಮೇಲೆ ಅದೇ ಗ್ರಾಮದ ವಾಸಿಗಳಾದ ಮಂಜುನಾಥ ಮತ್ತಿತರೇ ೩ ಜನರು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು, ಜಾತಿನಿಂದನೆ ಮಾಡಿ ದೊಣ್ಣೆ ಮತ್ತು ಬಾಟಲಿಗಳಿಂದ ಹೊಡೆದು ಗಾಯ ಪಡಿಸಿರುತ್ತಾರೆ.  ರಾಜಕೀಯ ದ್ವೇಷ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೧೨

-ಸ್ಥಳ ದಂಡ ಮೊತ್ತ: ರೂ. ೧೨೦೦/

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply