ದಿನದ ಅಪರಾಧಗಳ ಪಕ್ಷಿನೋಟ ೩೦ ನೇ ಜೂನ್ ೦೮

June 30, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೦-೦೬-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ  

ಸಾಧಾರಣ ಕಳ್ಳತನ: ೦೨

ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣಗಳು ದಾಖಲಾಗಿರುತ್ತದೆ.  ಕೋಲಾರ ತರ್ಜೇನಹಳ್ಳಿ ಗ್ರಾಮದ ಬಳಿ ಹಾಗೂ ಸೀತಿಹೊಸೂರು ಗ್ರಾಮದ ಬಳಿ ವಿದ್ಯುತ್ ಕಂಬಗಳಿಗೆ ಅಳವಡಿಸಿದ್ದ ಎ.ಸಿ.ಎಸ್.ಆರ್‍ ವೈರ್‍ ಕಳುವಾಗಿರುತ್ತದೆ.  ದಿನಾಂಕ ೨೭-೦೬-೨೦೦೮ ರಂದು ರಾತ್ರಿ ತರ್ಜೇನಹಳ್ಳಿ ಬಳಿ ೪೬೦ ಮೀಟರ್‍ ಉದ್ದದ ಹಾಗೂ ದಿನಾಂಕ ೨೮-೦೬-೨೦೦೮ ರಂದು ರಾತ್ರಿ ಸೀತಿಹೊಸೂರು ಗ್ರಾಮದ ಬಳಿ  ೧೦೦೦ ಮೀಟರ್‍ ಉದ್ದದ ವಿದ್ಯುತ್ ಕಂಬಗಳಿಗೆ ಅಳವಡಿಸಿದ್ದ ಎ.ಸಿ.ಎಸ್.ಆರ್‍ ವೈರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.  ಕಳುವಾದ ವೈರಿನ ಒಟ್ಟು ಬೆಲೆ ರೂ. ೨೨,೭೮೫/ ಆಗಿರುತ್ತದೆ.

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ     

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ    

ಹಲ್ಲೆ: ಇಲ್ಲ

ಇತರೆ: ೦೧

ವೇಮಗಲ್ ಪೊಲೀಸ್ ಠಾಣೆಯಲ್ಲಿ ನಿಧಿಶೋಧನೆ ನಡೆಸಿರುವ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ತಾಲೂಕು ಸುಲದೇನಹಳ್ಳಿ ಗ್ರಾಮದ ಗೌರೀಶ್ವರ ದೇವಾಲಯದಲ್ಲಿ ಕೃತ್ಯ ಸಂಬವಿಸಿರುತ್ತದೆ.  ದಿನಾಂಕ ೨೮/೦೬/೨೦೦೮ ರಂದು ರಾತ್ರಿ  ಯಾರೋ ಅಪರಿಚಿತರು ನಿಧಿ ಶೋಧನೆಯ ಉದ್ದೇಶದಿಂದ ದೇವಾಲಯದಲ್ಲಿದ್ದ ಶಿವಲಿಂಗವನ್ನು ತೆಗೆದು ಅಗೆದು ನಿಧಿ ಶೋಧನೆಯ ಪ್ರಯತ್ನವನ್ನು ನಡೆಸಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು  ಹೊಲ್ಲಂಬಳ್ಳಿ ಗ್ರಾಮದ ವಾಸಿ ಮುನಿಯಪ್ಪ (೫೫)  ಎಂಬುವರು ಕಾಣೆಯಾಗಿರುತ್ತಾರೆ.  ದಿನಾಂಕ ೨೦-೦೬-೨೦೦೮ ರಂದು ೦೯೦೦ ಗಂಟೆ ಸಮಯದಲ್ಲಿ ತೋಟದ ಕಡೆ ಹೋಗುವುದಾಗಿ ಹೇಳಿ ಹೊರಟ ಮುನಿಯಪ್ಪ ರವರು ಹಿಂತಿರುಗಿ ಬಾರದೇ ಕಾಣೆಯಾಗಿರುತ್ತಾರೆ.

ಮುಂಜಾಗ್ರತೆ ಕ್ರಮಗಳು:  ಇಲ್ಲ

ಮೋಟಾರು ವಾಹನ ಕಾಯಿದೆ ಅಡಿ ದಾಖಲಾದ ಪ್ರಕರಣಗಳ ವಿವರ

-ದಾಖಲಾದ ಒಟ್ಟು ಪ್ರಕರಣಗಳು:  

-ಸ್ಥಳ ದಂಡ ಮೊತ್ತ:  ರೂ.

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ. 


ದಿನದ ಅಪರಾಧಗಳ ಪಕ್ಷಿನೋಟ ೨೯ ನೇ ಜೂನ್ ೦೮

June 30, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೯-೦೬-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ  

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೯-೦೬-೨೦೦೮ ರಂದು ೦೭೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ರಾಮಸಂದ್ರ ಗ್ರಾಮದ ವಾಸಿಗಳಾದ ಗೋಪಾಲ ಮತ್ತು ಗಣೇಶ ಎಂಬುವರು ಟ್ರಾಕ್ಟರ್‍ ಸಂಖ್ಯೆ ಕೆಎ-೦೮-ಟಿ-೨೨೪೩/೪೪ ರ ಟ್ರಾಲಿಯಲ್ಲಿ ಕುಳಿತುಕೊಂಡು ಕೋಲಾರ ತಾಲೂಕು ತಂಬಿಹಳ್ಳಿ ಸಂತೇಗೇಟ್ ಕ್ರಾಸ್ ಬಳಿ ಎನ್.ಹೆಚ್ ೪ ರಸ್ತೆಯಲ್ಲಿ ಹೋಗುತ್ತಿದ್ದರು.  ಆ ಸಮಯದಲ್ಲಿ ಮುಳಬಾಗಿಲು ಕಡೆಯಿಂದ ಬಂದ ಕೆಕೆ ಖಾಸಗಿ ಬಸ್ ಸಂಖ್ಯೆ ಕೆಎ-೪೩-೧೦೬೦ ರ ಚಾಲಕ ತನ್ನ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ.  ಇದರ ಪರಿಣಾಮ ಟ್ರಾಕ್ಟರ್‍ ಟ್ರಾಲಿಯಲ್ಲಿ ಕುಳಿತಿದ್ದ ಗೋಪಾಲ ಮತ್ತು ಗಣೇಶ ಎಂಬುವರಿಗೆ ಗಾಯಗಳುಂಟಾಗಿರುತ್ತದೆ.     

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ರಾಮಸಂದ್ರ ಗ್ರಾಮದ ಗೇಟ್ ಬಳಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೨೯-೦೬-೨೦೦೮ ರಂದು ೧೭೧೫ ಗಂಟೆ ಸಮಯದಲ್ಲಿ ಪಲಮನೇರು ವಿವೇಕಾನಂದ ಟ್ರಾನ್ಸ್ ಪೋರ್ಟ್ ಕಂಪನಿಯ ಬಸ್ ಸಂಖ್ಯೆ ಎಪಿ-೦೩-ಯು-೮೫೧೦ ಕೋಲಾರ ದಿಂದ ಪಲಮನೇರಿಗೆ ಹೋಗುವ ಸಲುವಾಗಿ ಎನ್ ಹೆಚ್ ೪ ರಸ್ತೆಯ ರಾಮಸಂದ್ರ ಗ್ರಾಮದ ಗೇಟ್ ಬಳಿ ಬರುತ್ತಿತ್ತು.  ಆ ಸಮಯದಲ್ಲಿ ಬಸ್ಸಿಗೆ ಅಡ್ಡಹಾಕಿದ ಸುಮಾರು ೧೦ ಜನ ಅಪರಿಚಿತರು ಬಸ್ಸಿನ ಕಂಡಕ್ಟರ್‍ ರಾಮನಾಥ್, ಚೆಕ್ಕಿಂಗ್ ರಘು ಮತ್ತು ಚಾಲಕ ಭಾಸ್ಕರ್‍ ಎಂಬುವರನ್ನು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ಪ್ರಾಣಬೆದರಿಕೆ ಹಾಕಿರುತ್ತಾರೆ,    

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು:  ಇಲ್ಲ

ಮೋಟಾರು ವಾಹನ ಕಾಯಿದೆ ಅಡಿ ದಾಖಲಾದ ಪ್ರಕರಣಗಳ ವಿವರ

-ದಾಖಲಾದ ಒಟ್ಟು ಪ್ರಕರಣಗಳು:  

-ಸ್ಥಳ ದಂಡ ಮೊತ್ತ:  ರೂ.

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ. 


ದಿನದ ಅಪರಾಧಗಳ ಪಕ್ಷಿನೋಟ ೨೮ ನೇ ಜೂನ್ ೦೮

June 28, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮-೦೬-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ  

ಸಾಧಾರಣ ಕಳ್ಳತನ: ೦೧

ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ತಾಲೂಕು ಚೌಡದೇನಹಳ್ಳಿ ಗ್ರಾಮದ ಬಳಿ ವಿದ್ಯುತ್ ಕಂಬಕ್ಕೆ ಅಳವಡಿಸಿದ್ದ ಎ.ಸಿ.ಎಸ್.ಆರ್‍ ವೈರ್‍ ಕಳುವಾಗಿರುತ್ತದೆ.  ದಿನಾಂಕ ೨೫-೦೬-೨೦೦೮ ರಂದು ರಾತ್ರಿ ಯಾರೋಕಳ್ಳರು ಒಂದು ಪಿ.ಸಿ.ಸಿ ಕಂಬವನ್ನು ನಾಷಪಡಿಸಿ ೧೧೯೨ ಮೀಟರ್‍ ಉದ್ದದ ಎರಡು ಎ.ಸಿ.ಎಸ್.ಆರ್‍ ವೈರ್‍ ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.  ಕಳುವಾದ ವೈರಿನ ಒಟ್ಟು ಬೆಲೆ ರೂ. ೧೯,೯೦೬/ ಅಗಿರುತ್ತದೆ.

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ   

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೨

ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣಗಳು ದಾಖಲಾಗಿರುತ್ತದೆ.  ಕೋಲಾರ ನಗರ ಕಿಲಾರಿಪೇಟೆಯಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೭-೦೬-೨೦೦೮ ರಂದು ೨೩೦೦ ಗಂಟೆ ಸಮಯದಲ್ಲಿ ಕಿಲಾರಿ ಪೇಟೆ ವಾಸಿಗಳಾದ ಈರಪ್ಪ, ನ್ಯಾತಪ್ಪ, ಅಪ್ಪು, ಚಿನ್ನಪ್ಪ ಮತ್ತಿತರರು ಹಾಗೂ  ಅಲ್ಲಿಯವಾಸಿಗಳೇ ಆದ ಚಂದ್ರ, ಕೃಷ್ಣ, ಮುನಿಕೃಷ್ಣ, ಈಶ್ವರ ಮತ್ತಿತರರ ಎರಡೂ ಗುಂಪುಗಳು ಪರಸ್ಪರ ಜಗಳ ಮಾಡಿಕೊಂಡು ಕಲ್ಲು, ದೊಣ್ಣೆ, ರಾಡುಗಳಿಂದ ಹೊಡೆದಾಡಿಕೊಂಡಿರುತ್ತಾರೆ.  ಪರಸ್ಪರರ ನಡುವೆ ಇದ್ದ ಹಳೇ ವೈಷಮ್ಯ ಕೃತ್ಯಕ್ಕೆ ಕಾರಣವಾಗಿದ್ದು ಈ ಬಗ್ಗೆ ಕೇಸು ಮತ್ತು ಪ್ರತಿಕೇಸು ದಾಖಲಾಗಿರುತ್ತದೆ.   

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು:  ಇಲ್ಲ

ಮೋಟಾರು ವಾಹನ ಕಾಯಿದೆ ಅಡಿ ದಾಖಲಾದ ಪ್ರಕರಣಗಳ ವಿವರ

-ದಾಖಲಾದ ಒಟ್ಟು ಪ್ರಕರಣಗಳು:  ೦೨

-ಸ್ಥಳ ದಂಡ ಮೊತ್ತ:  ರೂ. ೨೦೦/

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ. 


ದಿನದ ಅಪರಾಧಗಳ ಪಕ್ಷಿನೋಟ ೨೭ ನೇ ಜೂನ್ ೦೮

June 27, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೭-೦೬-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ  

ಸಾಧಾರಣ ಕಳ್ಳತನ: ಇಲ್ಲ 

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೬-೦೬-೨೦೦೮ ರಂದು ೦೯೧೦ ಗಂಟೆ ಸಮಯದಲ್ಲಿ ಬೆಂಗಳೂರು ಶಿವಾಜಿನಗರದ ವಾಸಿ ವಿ.ರವಿ ಎಂಬುವರು ತಮ್ಮ ಸ್ಕಾರ್ಪಿಯೋ ವಾಹನ ಸಂಖ್ಯೆ ಕೆಎ-೦೩-ಎಂಜೆ-೧೮೬೧ ರಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಹೋಗುವ ಸಲುವಾಗಿ ಮುಳಬಾಗಿಲು ಸದಾ ಫುಡ್ ಫ್ಯಾಕ್ಟರಿ ಬಳಿ ಹೋಗುತ್ತಿದ್ದರು.  ಆ ಸಮಯದಲ್ಲಿ ಹಿಂದಿನಿಂದ ಬಂದ ಇನೋವಾ ಕಾರ್‍ ಸಂಖ್ಯೆ ಕೆಎ-೦೨-ಡಿ-೩೯೪೯ ರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ.  ಇದರ ಪರಿಣಾಮ ಎರಡೂ ವಾಹನಗಳೂ ಜಖಂಗೊಂಡಿದ್ದು ಇನೋವಾ ಕಾರಿನಲ್ಲಿದ್ದವರಿಗೆ ಗಾಯಗಳುಂಟಾಗಿರುತ್ತದೆ.   

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೨

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ತಾಲೂಕು ಮಣಿಘಟ್ಟ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೬-೦೬-೨೦೦೮ ರಂದು ೦೮೩೦ ಗಂಟೆ ಸಮಯದಲ್ಲಿ ಮಣಿಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘಧ ಅಧ್ಯಕ್ಷರಾದ ಆರ್‍.ರಘುನಾಥರೆಡ್ಡಿ ರವರು ಸಹಕಾರ ಸಂಘದ ಕಛೇರಿಯಲ್ಲಿದ್ದರು.  ಆ ಸಮಯದಲ್ಲಿ ಅಲ್ಲಿಗೆ ಬಂದ ಮಣಿಘಟ್ಟ ಗ್ರಾಮದ ವಾಸಿಗಳಾದ ರಮೇಶ, ಶಿವಣ್ಣ, ರಾಮಕೃಷ್ಣಪ್ಪ, ಚಂದ್ರಪ್ಪ ಮತ್ತು ರಾಮೇಗೌಡ ಎಂಬುವರು ತಮ್ಮ ಬಳಿ ಅಪಾಯಕರವಾಧ ಆಯುಧಗಳನ್ನು ಹಿಡಿದುಕೊಂಡು ಅಕ್ರಮಗುಂಪು ಕಟ್ಟಿಕೊಂಡು ಆರ್‍.ರಘುನಾಥರೆಡ್ಡಿರವರ ಮೇಲೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಅಧ್ಯಕ್ಷಗಿರಿಗೆ ರಾಜೀನಾಮೆ ಕೊಡುವಂತೆ ಒತ್ತಾಯಿಸಿ ಪ್ರಾಣಬೆದರಿಕೆ ಹಾಕಿರುತ್ತಾರೆ.  

ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಶ್ರೀನಿವಾಸಪುರ ತಾಲೂಕು ಮುಡಿವಾರಿಪಲ್ಲಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೨೬-೦೬-೨೦೦೮ ರಂದು ೨೦೩೦ ಗಂಟ ಸಮಯದಲ್ಲಿ ರಾಯಲ್ಪಾಡು ಗ್ರಾಮದ ವಾಸಿ ಶ್ರೀರಾಮಕೃಷ್ಣ ಎಂಬುವರು ತಮ್ಮ ಮಾರುತಿ ಓಮಿನಿ ಕಾರಿನಲ್ಲಿ ಮುಡಿವಾರಿಪಲ್ಲಿ ಗ್ರಾಮದ ವಾಸಿ ನರಸಿಂಹಮೂರ್ತಿ ಮತ್ತು ಬಾಬು ಹಾಗೂ ಇತರರೊಡನೆ ಶ್ರೀನಿವಾಸಪುದಿಂದ ಹೊರಟು ಮುಡಿವಾರಿಪಲ್ಲಿ ಗ್ರಾಮದಲ್ಲಿ ಬಂದಿದ್ದರು.  ಆ ಸಮಯದಲ್ಲಿ ಅಲ್ಲಿಗೆ ಬಂದ ಅದೇ ಗ್ರಾಮದ ವಾಸಿಗಳಾದ ಭದ್ರಾಚಲಪತಿ, ಆದಿನಾರಾಯಣ, ರಾಮು ಮತ್ತಿತರೇ ೪-೫ ಜನರು ಅವಾಚ್ಯ ಶಬ್ದಗಳಿಂದ ಬೈದು  ಕಾರಿನ ಗಾಜುಗಳನ್ನು ಜಖಂಗೊಳಿಸಿ ಶ್ರೀರಾಮಕೃಷ್ಣ  ರವರ ತಲೆಗೆ ಕಲ್ಲಿನಿಂದ ಹೊಡೆದು ಗಾಯಪಡಿಸಿರುತ್ತಾರೆ.  ಪರಸ್ಪರರ ನಡುವೆ ಇದ್ದ ರಾಜಕೀಯ ವೈಷಮ್ಯ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.

ಹಲ್ಲೆ: ೦೧

ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಶ್ರೀನಿವಾಸಪುರ ತಾಲೂಕು ಎಂ.ತುಮುಲಪಲ್ಲಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೨೨-೦೬-೨೦೦೮ ರಂದು ೨೦೦೦ ಗಂಟೆ ಸಮಯದಲ್ಲಿ ತುಮುಲಪಲ್ಲಿ ಗ್ರಾಮದ ವಾಸಿ ರಮಾದೇವಿ ರವರು ತಮ್ಮ ಪತಿಯೊಡನೆ ತಮ್ಮ ವಾಸದಮನೆಯಲ್ಲಿದ್ದರು.   ಆ ಸಮಯದಲ್ಲಿ ಅಲ್ಲಿಗೆ ಬಂದ ಅದೇ ಗ್ರಾಮದ ವಾಸಿಗಳಾದ ನಾರಾಯಣಸ್ವಾಮಿ, ಭೂಚಕ್ರ ಮತ್ತು ರಾಜಾರೆಡ್ಡಿ ಎಂಬುವರು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಮಚ್ಚಿನಿಂದ, ಕಾಲು ಮತ್ತು ಕೈಗಳಿಂದ ಹೊಡೆದು ಗಾಯಪಡಿಸಿರುತ್ತಾರೆ.  ಹಳೇ ವೈಷಮ್ಯ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.

ಇತರೆ: ೦೨

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಸ್ವತ್ತುಹಾನಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ನಗರ ಪಿ.ಸಿ ಹಳ್ಳಿಯಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೨೫-೦೬-೨೦೦೮ ರಂದು ೦೦೩೦ ಗಂಟೆ ಸಮಯದಲ್ಲಿ ಪಿ.ಸಿ ಹಳ್ಳಿ ವಾಸಿ ಶ್ರೀನಿವಾಸ ಎಂಬುವರ ವಾಸದ ಮನೆಗೆ ಯಾರೋ ಅಪರಿಚಿತರು ಬೆಂಕಿ ಹಚ್ಚಿರುತ್ತಾರೆ.  ಇದರ ಪರಿಣಾಮ ಮನೆಯಲ್ಲಿದ್ದ ಬಟ್ಟೆಗಲೂ ಸೇರಿದಂತೆ ಟಿ.ವಿ ಇತರೇ ಗೃಹೋಪಯೋಗಿ ವಸ್ತುಗಳು ಸುಟ್ಟುಹೋಗಿದ್ದು ರೂ. ೩ ಲಕ್ಷ ನಷ್ಠ ಉಂಟಾಗಿರುತ್ತದೆ.  ಕೋಲಾರ ನಗರ ಪಿ.ಸಿ ಹಳ್ಳಿ ವಾಸಿಗಳಾದ ರಾಮು ಮತ್ತು ಶ್ರೀನಿವಾಸ ಎಂಬುವರ ಮೇಲೆ ಅನುಮಾನವಿರುವುದಾಗಿ ಶ್ರೀನಿವಾಸ ರವರು ತಮ್ಮ ದೂರಿನಲ್ಲಿ ತಿಳಿಸಿರುತ್ತಾರೆ.

ಮಾಲೂರು ಪೊಲೀಸ್ ಠಾಣೆಯಲ್ಲಿ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಮತ್ತು ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಮಾಲೂರು ಪುರ ತಾಲೂಕು ಕಛೇರಿಯ ಬಳಿಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೨೬-೦೬-೨೦೦೮ ರಂದು ಕರ್ನಾಟಕ ವಿಧಾನ ಪರಿಷತ್ ಆಗ್ನೇಯ ಕ್ಷೇತ್ರದ ಪದವೀದರ ಚುನಾವಣಾ ಪ್ರಯುಕ್ತ ಮಾಲೂರು ಪೊಲೀಸ್ ಠಾಣೆ ಅಪರಾಧ ವಿಭಾಗದ ಆರಕ್ಷಕ ಉಪನಿರೀಕ್ಷಕರಾದ ವಿ.ಎಸ್.ಶಿವಕುಮಾರ್‍ ರವರು ತಾಲೂಕು ಕಛೇರಿಯ ಮತಗಟ್ಟೆಯ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು.  ಆ ಸಮದಯಲ್ಲಿ ಜೆ.ಡಿ.ಎಸ್ ಮತ್ತು ಬಿ.ಜೆ.ಪಿ ಪಕ್ಷದ ಕಾರ್ಯಕರ್ತರು ೧೦೦ ಮೀಟರ್‍ ಅಂತರದ ಒಳಗೆ ಶಾಮಿಯಾನ ಮತ್ತು ಕಟೌಟುಗಳನ್ನು ಹಾಕಿಕೊಂಡು ಪ್ರಚಾರ ಮಾಡಿ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಮಾಡಿರುತ್ತಾರೆ.  ಇದನ್ನು ವಿ.ಎಸ್.ಶಿವಕುಮಾರ್‍ ರವರು ಅಡ್ಡಿಪಡಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೨

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಠ ಜಾತಿ / ಪರಿಶಿಷ್ಠ ಪಂಗಡ (ದೌರ್ಜನ್ಯತಡೆ) ಕಾಯ್ದೆ ಅಡಿಯಲ್ಲಿ ಮತ್ತು ಸ್ವತ್ತು ಹಾನಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ತಾಲೂಕು ಗಟ್ಟಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೨೬-೦೬-೨೦೦೮ ರಂದು ೨೩೦೦ ಗಂಟೆ ಸಮಯದಲ್ಲಿ ಗಟ್ಟಹಳ್ಳಿ ಗ್ರಾಮದ ವಾಸಿ  ಪರಿಶಿಷ್ಠ ಜಾತಿಗೆ ಸೇರಿದ ನಾರಾಯಣಸ್ವಾಮಿ ಎಂಬುವರ ಮನೆಗೆ ಯಾರೋ ಅಪರಿಚಿತರು ಬೆಂಕಿ ಹಚ್ಚಿರುತ್ತಾರೆ.  ಇದರ ಪರಿಣಾಮ ಮನೆಯಲ್ಲಿದ್ದ ರೂ. ೧೦,೦೦೦/ ನಗದು ಸೇರಿದಂತೆ ಚಿನ್ನ ಇತರೇ ಗೃಹೋಪಯೋಗಿ ವಸ್ತುಗಳು ಸುಟ್ಟುಹೋಗಿದ್ದು ನಷ್ಠ ಉಂಟಾಗಿರುತ್ತದೆ.

ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಪರಿಶಿಷ್ಠ ಜಾತಿ / ಪರಿಶಿಷ್ಠ ಪಂಗಡ (ದೌರ್ಜನ್ಯತಡೆ) ಕಾಯ್ದೆ ಅಡಿಯಲ್ಲಿ ಹಾಗೂ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಶ್ರೀನಿವಾಸಪುರ ತಾಲೂಕು ಎಂ.ತುಮ್ಮಲಪಲ್ಲಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೨೨-೦೬-೨೦೦೮ ರಂದು ೨೦೦೦ ಗಂಟೆ ಸಮಯದಲ್ಲಿ ಎಂ.ತುಮ್ಮಲಪಲ್ಲಿ ಗ್ರಾಮದ ವಾಸಿ ನಾರಾಯಣಸ್ವಾಮಿ ಇವರ ತಂದೆ ತಿರುಮಳಪ್ಪ, ತಂಗಿ ರಾಮಕ್ಕ, ಹೆಂಡತಿ ಮುನಿರತ್ನಮ್ಮ ರವರುಗಳು ತಮ್ಮ ವಾಸದಮನೆಯಲ್ಲಿದ್ದರು.  ಆ ಸಮಯದಲ್ಲಿ ಅಲ್ಲಿಗೆ ಬಂದ ಅದೇ ಗ್ರಾಮದ ವಾಸಿಗಳಾದ ದೋಬಿ ಕೃಷ್ಣಪ್ಪ, ದೋಬಿ ವೆಂಕಟರಮಣಪ್ಪ, ರವಣಪ್ಪ, ರಮಾದೇವಿ, ಇತರೇ ೪ ಜನರು ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿ ಕಲ್ಲುಗಳಿಂದ, ದೊಣ್ಣೆಗಳಿಂದ, ಕೈ ಕಾಲುಗಳಿಂದ ಹೊಡೆದು ಗಾಯಪಡಿಸಿರುತ್ತಾರೆ.

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು:  ಇಲ್ಲ

ಮೋಟಾರು ವಾಹನ ಕಾಯಿದೆ ಅಡಿ ದಾಖಲಾದ ಪ್ರಕರಣಗಳ ವಿವರ

-ದಾಖಲಾದ ಒಟ್ಟು ಪ್ರಕರಣಗಳು:  ೦೪

-ಸ್ಥಳ ದಂಡ ಮೊತ್ತ: ರೂ. ೫೦೦/

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೬ ನೇ ಜೂನ್ ೦೮

June 26, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೦೬-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ  

ಸಾಧಾರಣ ಕಳ್ಳತನ: ೦೨

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಒಂದು ಲೋಡ್ ಟ್ರಾಕ್ಟರ್‍ ಜಲ್ಲಿ ಕಳುವಾಗಿರು ಘಟನೆ ಕೋಲಾರ-ಮುಳಬಾಗಿಲು ಎನ್.ಹೆಚ್ ೪ ರಸ್ತೆಯ ಚಿಕೋರಿ ಫ್ಯಾಕ್ಟರಿ ಹತ್ತಿರ ಸಂಭವಿಸಿರುತ್ತದೆ.  ದಿನಾಂಕ ೨೫-೦೬-೨೦೦೮ ರಂದು ೧೯೦೦ ಗಂಟೆ ಸಮಯದಲ್ಲಿ ದಾಸ್ತಾನು ಮಾಡಿದ್ದ ಜಲ್ಲಿಯನ್ನು  ಕೆಎ-೦೭-ಟಿ-೪೮೩೪ ಸಂಖ್ಯೆ ಟ್ರಾಕ್ಟರಿನ ಚಾಲಕ ಮತ್ತಿತರು ಟ್ರಾಕ್ಟರಿನಲ್ಲಿ ತುಂಬಿಸಿಕೊಂಡು ಪರಾರಿಯಾಗಿ ಲೋಡ್ ಸಮೇತ ಲಾರಿಯನ್ನು ಚದುಮನಹಳ್ಳಿ ಗ್ರಾಮದಲ್ಲಿ ಬಿಟ್ಟು ಹೋಗಿರುತ್ತಾರೆ.  ಕಳುವಾಗಿ ಪತ್ತೆಯಾದ ಮಾಲಿನ ಬೆಲೆ ರೂ. ೨೦೦೦/ ಆಗಿರುತ್ತದೆ.

ಮಾಲೂರು ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಕೊಳವೆಬಾವಿಗೆ ಅಳವಡಿಸಿದ್ದ ಕೇಬಲ್ ವೈರ್‍ ಕಳುವಾಗಿರುವ ಘಟನೆ ಮಾಲೂರು ತಾಲೂಕು ಚಿಕ್ಕಕುಂತೂರು ಗ್ರಾಮದಲ್ಲಿ ಸಂಭವಿಸಿರುತ್ತದೆ.  ದಿನಾಂಕ ೨೪-೦೬-೨೦೦೮ ರಂದು ರಾತ್ರಿ ಚಿಕ್ಕಕುಂತೂರು ಗ್ರಾಮದ ವಾಸಿ ಕೆ.ಎಂ.ಆನಂದರೆಡ್ಡಿ ಎಂಬುವರ ಕೊಳವೆ ಬಾವಿಗೆ ಅಳವಡಿಸಿದ್ದ ೨೦೦ ಮೀಟರ್‍ ಕೇಬಲ್ ವೈರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. 

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೩

-ಮಾರಣಾಂತಿಕ: ೦೧

ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೫-೦೬-೨೦೦೮ ರಂದು ೨೧೩೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ದಿಂಬಾಲ ಗ್ರಾಮದ ವಾಸಿ ಲಕ್ಷ್ಮಿನಾರಾಯಣ ರವರ ಅಣ್ಣನ ಮಗನಾದ ಮಲ್ಲಿಕಾರ್ಜುನ ಎಂಬುವರು ಶ್ರೀನಿವಾಸಪುರ ತಾಲೂಕು ತಾಡಿಗೊಳ್ ಕ್ರಾಸಿನಿಂದ ಮದನಪಲ್ಲಿಗೆ ಕಡೆಗೆ ಹೋಗುತ್ತಿದ್ದ ಹಾಲಿನ ಟೆಂಪೋ ಸಂಖ್ಯೆ ಎಪಿ-೦೩-ಯು-೫೧೭೪ ರ ಹಿಂಬದಿ ಕುಳಿತುಕೊಂಡಿದ್ದು ಟೆಂಪೋ ಚಾಕಂಪಲ್ಲಿ ಗ್ರಾಮದ ಗೇಟ್ ಬಳಿ ಬರುತ್ತಿತ್ತು.  ಆ ಸಮಯದಲ್ಲಿ ಟೆಂಪೋವಿನ ಚಾಲಕ ಭಾಸ್ಕರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದು ಟೆಂಪೋವಿನ ಹಿಂಬದಿ ಕುಳಿತಿದ್ದ ಮಲ್ಲಿಕಾರ್ಜುನ ಹಾಗೂ ಮತ್ತೊಬ್ಬ ಹೆಂಗಸು ಕೆಳಗೆ ಬಿದ್ದಿರುತ್ತಾರೆ.  ಇದರ ಪರಿಣಾಮ ಮಲ್ಲಿಕಾರ್ಜುನ ರವರಿಗೆ ತೀವ್ರವಾದ ಗಾಯಗಳಾಗಿದ್ದು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.  ಮತ್ತೊಬ್ಬ ಹೆಂಗಸನ್ನು ಚಿಕಿತ್ಸೆಗಾಗಿ ಶ್ರೀನಿವಾಸಪುರ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ.

-ಸಾಧಾರಣ: ೦೨

ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೫-೦೬-೨೦೦೮ ರಂದು ೦೮೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ರಾಮಸಂದ್ರ ಗ್ರಾಮದ ವಾಸಿ ಗೌರಮ್ಮ ಎಂಬುವರು ಮಲ್ಲಸಂದ್ರ ಗ್ರಾಮದ ವಾಸಿ ಮುನಿಯಪ್ಪ ಎಂಬುವರಿಗೆ ಸೇರಿದ ಟ್ರಾಕ್ಟರಿನಲ್ಲಿ ಚಾಲಕನ ಪಕ್ಕದಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿದ್ದರು.  ರಾಮಸಂದ್ರ ಗ್ರಾಮದ ಅಂಚಿನ ನಾರಾಯಣಸ್ವಾಮಿ ರವರ ಜಮೀನಿನ ಬಳಿ ಟ್ರಾಕ್ಟರ್‍ ಬರುತ್ತದ್ದಾಗ ಅದರ ಚಾಲಕ ಟ್ರಾಕ್ಟರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದು ಟ್ರಾಕ್ಟರಿನಲ್ಲಿ ಕುಳಿತಿದ್ದ ಗೌರಮ್ಮ ಕೆಳಗೆಬಿದ್ದಿರುತ್ತಾರೆ. ಟ್ರಾಕ್ಟರಿನ ಹಿಂಬದಿಯ ಚಕ್ರ ಹರಿದ ಪರಿಣಾಮ ಗೌರಮ್ಮ ರವರಿಗೆ ತೀವ್ರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಕೋಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೫-೦೬-೨೦೦೮ ರಂದು ೧೭೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಗುಟ್ಟಹಳ್ಳಿ ಗ್ರಾಮದ ವಾಸಿ ತಿಮ್ಮರಾಯಪ್ಪ ಎಂಬುವರು ತಮ್ಮ ಟಿ.ವಿ.ಎಸ್ ಸಂಖ್ಯೆ ಕೆಎ-೦೩-ಎಕ್ಸ್-೯೦೨೭ ದ್ವಿಚಕ್ರವಾಹನವನ್ನು ತಳ್ಳಿಕೊಂಡು ತಮ್ಮ ಗ್ರಾಮದ ಸಮೀಪ ವಕ್ಕಲೇರಿ-ನರಸಾಪುರ ರಸ್ತೆಯಲ್ಲಿ ಹೋಗುತ್ತಿದ್ದರು.  ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಹಾಲಿನ ಟೆಂಪೋ ಸಂಖ್ಯೆ ಎಂ.ಹೆಚ್-೦೨-೪೪೫೫ ರ ಚಾಲಕ ಶ್ರೀರಾಮಪ್ಪ ಎಂಬುವರು ತನ್ನ ಟೆಂಪೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾರೆ.  ಇದರ ಪರಿಣಾಮ ತಿಮ್ಮರಾಯಪ್ಪ ರವರಿಗೆ ಗಾಯಗಳುಂಟಾಗಿರುತ್ತದೆ. 

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ೦೧

ಮಾಲೂರು ಪೊಲೀಸ್ ಠಾಣೆಯಲ್ಲಿ ದೊಂಬಿ ಮತ್ತು ಸ್ವತ್ತುಹಾನಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಮಾಲೂರು ತಾಲೂಕು ಚಿಕ್ಕತಿರುಪತಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ.  ಬೆಂಗಳೂರು ಜಿಲ್ಲೆ ಚಂದಾಪುರ ಗ್ರಾಮದ ವಾಸಿ ಎನ್.ಎಸ್.ರಾಮಕೃಷ್ಣ ಎಂಬುವರಿಗೆ ಸೇರಿದ ಬಸ್ಸಿಗೆ ಸುಮಾರು ೧೦ ರಿಂದ ೧೫ ಜನರು ಅಕ್ರಮಗುಂಪು ಕಟ್ಟಿಕೊಂಡು ಬೆಂಕಿ ಹಚ್ಚಿ ಸುಟ್ಟಿದ್ದು ರೂ. ೬ ಲಕ್ಷ ನಷ್ಠ ಉಂಟುಮಾಡಿರುತ್ತಾರೆ.  ದಿನಾಂಕ ೨೪-೦೬-೨೦೦೮ ರಂದು ಬಸ್ಸಿನ ಚಾಲಕ ತನ್ನ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮದುವೆ ದಿಬ್ಬಣದ ಮೇಲೆ ಹತ್ತಿಸಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೨

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.  ಬಂಗಾರಪೇಟೆ ತಾಲೂಕು ಬೆನ್ನಾವರ ಗ್ರಾಮದ ವಾಸಿ ಸತ್ಯನಾರಾಯಣ ರವರ ಮಗಳಾದ ರೂಪಶ್ರೀ ಎಂಬ ಹುಡುಗಿ ಕಾಣೆಯಾದವಳು.  ದಿನಾಂಕ ೨೨-೦೬-೨೦೦೮ ರಂದು ೦೮೦೦ ಗಂಟೆ ಸಮಯದಲ್ಲಿ ಮುಳಬಾಗಿಲುನ ಮುತ್ಯಾಲಪೇಟೆಯಿಂದ ಎಸ್.ಡಿ.ಎ ಪರೀಕ್ಷೆ ಬರೆಯುವ ಸಲುವಾಗ ಕೋಲಾರಕ್ಕೆ ಹೊರಟ ರೂಪಶ್ರೀ ಹಿಂತಿರುಗಿ ಬಾರದೇ ಕಾಣೆಯಾಗಿರುತ್ತಾಳೆ.  ಮುಳಬಾಗಿಲು ಮುತ್ಯಾಲಪೇಟೆ ವಾಸಿಗಳಾದ ಕಿಟ್ಟಿ @ ಕೃಷ್ಣಮೂರ್ತಿ, ಶಕುಂತಲಮ್ಮ ಮತ್ತು ಮಧುಸೂಧನ ಎಂಬುವರ ಮೇಲೆ ಅನುಮಾನ ಇರುವುದಾಗಿ ಕಾಣೆಯಾದ ಹುಡುಗಿಯ ತಂದೆ ಸತ್ಯನಾರಾಯಣ ರವರು ತಮ್ಮ ದೂರಿನಲ್ಲಿ ತಿಳಿಸಿರುತ್ತಾರೆ.

ವೇಮಗಲ್ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ತಾಲೂಕು ನರಸಾಪುರ ಗ್ರಾಮದ ವಾಸಿ ರಾಜೇಶ್ವರಿ (೨೭) ಎಂಬುವರು ಕಾಣೆಯಾದ ಹೆಂಗಸು.  ದಿನಾಂಕ ೨೨-೦೬-೨೦೦೮ ರಂದು ತನ್ನ ಸ್ನೇಹಿತರ ಮದುವೆ ಕಾರ್ಯಕ್ರಮಕ್ಕೆಂದು ಬಂಗಾರಪೇಟೆಗೆ ಹೊರಟ ರಾಜೇಶ್ವರಿ ಹಿಂತಿರುಗಿ ಬಾರದೇ ಕಾಣೆಯಾಗಿರುತ್ತಾರೆ.

ಮುಂಜಾಗ್ರತೆ ಕ್ರಮಗಳು:  ಇಲ್ಲ

ಮೋಟಾರು ವಾಹನ ಕಾಯಿದೆ ಅಡಿ ದಾಖಲಾದ ಪ್ರಕರಣಗಳ ವಿವರ

-ದಾಖಲಾದ ಒಟ್ಟು ಪ್ರಕರಣಗಳು:  ೦೮

-ಸ್ಥಳ ದಂಡ ಮೊತ್ತ:.ರೂ. ೧೨೦೦/

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ. 


ದಿನದ ಅಪರಾಧಗಳ ಪಕ್ಷಿನೋಟ ೨೫ ನೇ ಜೂನ್ ೦೮

June 25, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೫-೦೬-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ  

ಸಾಧಾರಣ ಕಳ್ಳತನ: ೦೧

ನಂಗಲಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಮುಳಬಾಗಿಲು ತಾಲೂಕು ತಾತಿಕಲ್ಲು ಗ್ರಾಮದ ಬಳಿ ವಿದ್ಯುತ್ ಕಂಬಗಳಿಗೆ ಅಳವಡಿಸಿದ್ದ ಎ.ಸಿ.ಎಸ್.ಆರ್‍ ವೈರ್‍ ಕಳುವಾಗಿರುತ್ತದೆ.  ದಿನಾಂಕ ೨೨-೦೫-೨೦೦೮ ಕ್ಕೆ ಹಿಂದೆ ಯಾರೋಕಳ್ಳರು ವಿದ್ಯುತ್ ಕಂಬಗಳಿಗೆ  ಅಳವಡಿಸಿದ್ದ ಸುಮಾರು ರೂ. ೪೬,೦೦೦/ ಬೆಲೆ ಬಾಳುವ ಎ.ಸಿ.ಎಸ್.ಆರ್‍ ವೈರ್‍ ಕಳವು ಮಾಡಿಕೊಂಡು ಹೋಗಿದ್ದು ಎರಡು ಕಂಬಗಳನ್ನು ಹೊಡೆದು ಹಾಕಿರುತ್ತಾರೆ.

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

ಮಾಲೂರು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೪-೦೬-೨೦೦೮ ರಂದು ಬೆಂಗಳೂರು ಹೊಸಕೋಟೆ ತಾಲೂಕು ಗುಂಡೂರು ಗ್ರಾಮದ ವಾಸಿ ಕೃಷ್ಣಪ್ಪ ಎಂಬುವರ ಮಗಳಾದ ಭಾಗ್ಯ ಎಂಬುವರ ವಿವಾಹ ಮಾಲೂರು ತಾಲೂಕು ಚಿಕ್ಕತಿರುಪತಿ ಗ್ರಾಮದ ವೆಂಕಟೇಶ್ವರ ಕಲ್ಯಾಣಮಂಟಪದಲ್ಲಿ ನಿಶ್ಚಯವಾಗಿತ್ತು.  ಅದರಂತೆ ೨೩೩೦ ಗಂಟೆ ಸಮಯದಲ್ಲಿ ದೇವಲಯದ ಮುಂಬಾಗ ಮದುವೆ ದಿಬ್ಬಣ ಹೊರಟಿತ್ತು.  ಆ ಸಮಯದಲ್ಲಿ ಹೊಸಕೋಟೆ ಕಡೆಯಿಂದ ಬಂದ ಸಂಖ್ಯೆ ಕೆಎ-೧೬-೮೭೫೭ ಬಸ್ಸಿನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ದಿಬ್ಬಣದ ಮೇಲೆ ಹರಿಸಿದ ಪರಿಣಾಮ ಮದುವೆ ದಿಬ್ಬಣದಲ್ಲಿದ್ದ ಲಕ್ಷ್ಮಮ್ಮ ಮತ್ತು ಶಿಲ್ಪಾರವರು ಸ್ಥಳದಲ್ಲೇ ಮೃತಪಟ್ಟಿದ್ದು ೧೦ ರಿಂದ ೧೫ ಜನರಿಗೆ ಗಾಯಗಳುಂಟಾಗಿರುತ್ತದೆ.  ಆರೋಪಿ ಸ್ಥಳದಿಂದ ಪರಾರಿಯಾಗಿರುತ್ತಾನೆ. 

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ೦೧

ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ೪ ವರ್ಷದ ಮಗುವಿನ ಅಪಹರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೨-೦೬-೨೦೦೮ ರಂದು ೧೨೩೦ ಗಂಟೆ ಸಮಯದಲ್ಲಿ ಕೋಲಾರ ಪೂಲ್ ಷಾ ಮೊಹಲ್ಲಾದ ವಾಸಿ ನಜಿಯಾಸುಲ್ತಾನ ಎಂಬುವರ ೪ ವರ್ಷದ ಮಗಳಾದ ಬೇಬಿಆಯಿಷಾ ಇತರೇ ಮಕ್ಕಳೊಡನೆ ಆಟವಾಡುತ್ತಿದ್ದಾಗ ಅಲ್ಲಿಗೆ ಬಂದ ಕೋಲಾರ ನಗರ ವಾಸಿ ಸೈಯದ್ ರಹೀಮ್ ಪರಂಗಿಹಣ್ಣು ಕೊಡುವುದಾಗಿ ನಂಬಿಸಿ ಮಗುವನ್ನು ಅಪಹರಿಸಿಕೊಂಡು ಹೋಗಿರುತ್ತಾನೆ.  ಈ ಬಗ್ಗೆ ಮಗುವಿನ ತಾಯಿ ನಜಿಯಾಸುಲ್ತಾನಾ ದೂರು ನೀಡಿದ್ದು ಪ್ರಕರಣ ದಾಖಲಾಗಿರುತ್ತದೆ.  

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು:  ಇಲ್ಲ

ಮೋಟಾರು ವಾಹನ ಕಾಯಿದೆ ಅಡಿ ದಾಖಲಾದ ಪ್ರಕರಣಗಳ ವಿವರ

-ದಾಖಲಾದ ಒಟ್ಟು ಪ್ರಕರಣಗಳು:  

-ಸ್ಥಳ ದಂಡ ಮೊತ್ತ:. 

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ. 


ದಿನದ ಅಪರಾಧಗಳ ಪಕ್ಷಿನೋಟ ೨೪ ನೇ ಜೂನ್ ೦೮

June 24, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೪-೦೬-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ  

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೨

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೩-೦೬-೨೦೦೮ ರಂದು ೧೫೦೦ ಗಂಟೆ ಸಮಯದಲ್ಲಿ ನಿದಿರಮಂಗಲ ಗ್ರಾಮದ ವಾಸಿ ಮುನಿರಾಜು (೨೫) ಎಂಬುವರು ತಮ್ಮ ಬಜಾಜ್ ಪಲ್ಸರ್‍ ದ್ವಿಚಕ್ರವಾಹನ ಸಂಖ್ಯೆ ಕೆಎ-೦೪-ಇಎಫ್-೫೬೦೯ ರಲ್ಲಿ ಮಾಲೂರಿನಿಂದ ಕೋಲಾರಕ್ಕೆ ಹೋಗುವ ಸಲುವಾಗಿ ಬೆಗ್ಲಿಬಿಣಜೇನಹಳ್ಳಿ ಗ್ರಾಮದ ಗೇಟ್ ಬಳಿ ಹೋಗುತ್ತಿದ್ದರು.  ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಲಾರಿ ಸಂಖ್ಯೆ ಕೆಎ-೦೨-ಎ-೩೬೨೯ ರ ಚಾಲಕ ರಫೀಕ್ ಖಾನ್ ಎಂಬುವರು ತಮ್ಮ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾರೆ.  ಇದರ ಪರಿಣಾಮ ಮುನಿರಾಜು ರವರಿಗೆ ತೀವ್ರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಕೋಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೩-೦೬-೨೦೦೮ ರಂದು ೨೦೦೦ ಗಂಟೆ ಸಮಯದಲ್ಲಿ ಟಿ.ವಿ.ಎಸ್ ವಿಕ್ಟರ್‍ ಸಂಖ್ಯೆ ಕೆಎ-೦೩-ಇಹೆಚ್-೫೭೩೮ ದ್ವಿಚಕ್ರವಾಹನದಲ್ಲಿ ಅಪರಿಚಿತ ವ್ಯಕ್ತಿ ಕೋಲಾರದಿಂದ ಬೆಂಗಳೂರಿಗೆ ಹೋಗುತ್ತಿದ್ದರು.  ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಟಾಟಾ ಸುಮೋ ಸಂಖ್ಯೆ ಕೆಎ-೩೧-೧೯೭೭ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರವಾಹನದಕ್ಕೆ ಡಿಕ್ಕಿ ಹೊಡೆದಿರುತ್ತಾನೆ.  ಇದರ ಪರಿಣಾಮ ದ್ವಿಚಕ್ರವಾಹನ ಸವಾರನಿಗೆ ತೀವ್ರವಾದ ಗಾಯಗಳಾಗಿದ್ದು ಪ್ರಜ್ಙಾಹೀನನಾಗಿದ್ದು ಚಿಕಿತ್ಸೆಗಾಗಿ ಕೋಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾನೆ.  ಆರೋಪಿ ತನ್ನ ವಾಹನವನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿರುತ್ತಾನೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೧

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.  ಶ್ರೀನಿವಾಸಪುರ ಟೌನ್ ಸುಭಾಷ್ ರಸ್ತೆಯ ವಾಸಿ ಕೃಷ್ಣಮೂರ್ತಿ ಎಂಬುವರ ೧೮ ವರ್ಷದ ಮಗಳಾದ ಸವಿತಾ ಎಂಬುವರು ಕಾಣೆಯಾಗಿರುತ್ತಾರೆ.  ದಿನಾಂಕ ೧೯-೦೬-೨೦೦೮ ರಂದು ತನ್ನ ಮನೆಯಿಂದ ಹೊರಟ ಸವಿತಾ ಹಿಂತಿರುಗಿ ಬಾರದೇ ಕಾಣೆಯಾಗಿರುತ್ತಾಳೆ.

ಮುಂಜಾಗ್ರತೆ ಕ್ರಮಗಳು:  ಇಲ್ಲ

ಮೋಟಾರು ವಾಹನ ಕಾಯಿದೆ ಅಡಿ ದಾಖಲಾದ ಪ್ರಕರಣಗಳ ವಿವರ

-ದಾಖಲಾದ ಒಟ್ಟು ಪ್ರಕರಣಗಳು:  

-ಸ್ಥಳ ದಂಡ ಮೊತ್ತ:. 

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ. 


ದಿನದ ಅಪರಾಧಗಳ ಪಕ್ಷಿನೋಟ ೨೩ ನೇ ಜೂನ್ ೦೮

June 23, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೩-೦೬-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ  

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೨-೦೬-೨೦೦೮ ರಂದು ೨೩೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ವೀರಾಪುರ ಗ್ರಾಮದ ಬಳಿ ಇರುವ ಗಾಯಿತ್ರಿ ಕಾಂಕ್ರೀಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಬೀಮ್ ಸೇ ಎಂಬುವರು ಕೋಲಾರ ತಾಲೂಕು ಟಮಕ ಗ್ರಾಮದ ವಾಸಿ ಎಸ್.ಎನ್.ಮೂರ್ತಿ ರವರೊಂದಿಗೆ ತಮ್ಮ ದ್ವಿಚಕ್ರ ವಾಹನ ಕೆಎ-೨೭-ಎಲ್-೫೭೪೯ ರಲ್ಲಿ ಕೋಲಾರ-ಶ್ರೀನಿವಾಸಪುರ ರಸ್ತೆಯ ವೀರಾಪುರ ಗ್ರಾಮದ ಗೇಟ್ ಬಳಿ ಹೋಗುತ್ತಿದ್ದರು.  ಆ ಸಮಯದಲ್ಲಿ ಶ್ರೀನಿವಾಸಪುರ ಕಡೆಯಿಂದ ಬಂದ ಟೆಂಪೋ ಕೆಎ-೦೩-ಸಿ-೭೩೦ ರ ಚಾಲಕ ತನ್ನ ಟೆಂಪೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ.  ಇದರ ಪರಿಣಾಮ ಬೀಮ್ ಸೇ ರವರಿಗೆ ತೀವ್ರಸ್ವರೂಪದ ಗಾಯಗಳಾಗಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟಿರುತ್ತಾನೆ.

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಮುಳಬಾಗಿಲು ತಾಲೂಕು ಕೀಲುಹೊಳಲಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೨೧-೦೬-೨೦೦೮ ರಂದು ಕೀಲುಹೊಳಲಿ ಗ್ರಾಮದ ವಾಸಿಗಳಾದ ಪಾಪ ಮತ್ತು ಇತರೇ ಮೂರು ಜನ ಅದೇ ಗ್ರಾಮದ ವಾಸಿಯಾದ ಗಣೇಶ್ ಎಂಬುವರ ನಾದಿನಿ ಲಕ್ಷ್ಮಿದೇವಮ್ಮ ರವರ ಮೇಲೆ ಜಗಳ ತೆಗೆದು ಕೈಗಳಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು.  ಆ ಸಮಯದಲ್ಲಿ ಗಣೇಶ್ ಬಿಡಿಸಲು ಹೋದಾಗ ಆರೋಪಿಗಳು ಇವರಿಗೆ ಕಲ್ಲಿನಿಂದ ಬಲಗಣ್ಣಿಗೆ ಹೊಡೆದು ಗಾಯಪಡಿಸಿರುತ್ತಾರೆ.  ವೈಯಕ್ತಿಕ ದ್ವೇಷ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

ಮಾಲೂರು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಮಾಲೂರು ರೈಲ್ವೇನಿಲ್ದಾಣ ಬಡಾವಣೆಯಲ್ಲಿ ವಾಸವಾಗಿರುವ ಜಯಮ್ಮ ಎಂಬುವರು ಮೃತಪಟ್ಟವರು.  ದಿನಾಂಕ ೨೨-೦೬-೨೦೦೮ ರಂದು ೨೦೦೦ ಗಂಟೆ ಸಮಯದಲ್ಲಿ ಜಯಮ್ಮ ರವರು ತಮ್ಮ ಮನೆಯಲ್ಲಿ ಸೀಮೆಎಣ್ಣೆ ಸ್ಟವ್ ಹಚ್ಚುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ತಾಕಿ ಬಟ್ಟೆಗಳು ಅಂಟಿಕೊಂಡು ತೀವ್ರವಾದ ಸುಟ್ಟಗಾಯಗಳಾಗಿದ್ದು ಇದರ ದೆಸೆಯಿಂದ ಮೃತಪಟ್ಟಿರುತ್ತಾರೆ.  ಇವರ ಪತಿ ತಿಮ್ಮರಾಯಪ್ಪ ರವರಿಗೂ ತೀವ್ರವಾದ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಬೆಮಗಳೂರಿನ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು:  ಇಲ್ಲ

ಮೋಟಾರು ವಾಹನ ಕಾಯಿದೆ ಅಡಿ ದಾಖಲಾದ ಪ್ರಕರಣಗಳ ವಿವರ

-ದಾಖಲಾದ ಒಟ್ಟು ಪ್ರಕರಣಗಳು:  

-ಸ್ಥಳ ದಂಡ ಮೊತ್ತ:. 

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ. 


ಜೂಜಾಟ ದಾಳಿ: ೮ ಜನರ ಬಂಧನ, ರೂ. ೩೩೪೮/ ವಶ

June 23, 2008

ದಿನಾಂಕ ೨೨-೦೬-೨೦೦೮ ರಂದು ೧೩೦೦ ಗಂಟೆ ಸಮಯದಲ್ಲಿ ನಂಗಲಿ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ನಂಜಪ್ಪ ರವರು ತಮಗೆ ಬಂದ ಖಚಿತ ವರ್ತಮಾನದ ಮೇರೆಗೆ ತಮ್ಮ ಸಿಬ್ಬಂದಿಯೊಡೆನೆ ನಂಗಲಿ ಗ್ರಾಮದ ಕೆರೆ ಅಂಗಳದ ಹೊಂಗೇ ಮರದ ಕೆಳಗೆ ದಾಳಿ ನಡೆಸಿ ಅಂದರ್‍ ಬಾಹರ್‍ ಎಂಬ ಜೂಜಾಟದಲ್ಲಿ ನಿರತರಾಗಿದ್ದ ೮ ಜನ ಆರೋಪಿಗಳನ್ನು ಸ್ಥಳದಲ್ಲಿಯೇ ಬಂಧಿಸಿರುತ್ತಾರೆ. ಕಾರ್ಯಾಚರಣೆ ವೇಳೆ ಜೂಜಾಟಕ್ಕೆ ಪಣವಾಗಿಟ್ಟಿದ್ದ ರೂ. ೩೩೪೫/ ರೂಗಳನ್ನು ಮತ್ತು ಜೂಜಾಟಕ್ಕೆ ಬಳಸಿದ್ದ ೫೨ ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿರುತ್ತಾರೆ. 

ಬಂಧಿತ ಆರೋಪಿಗಳ ವಿವರ:

  • ನಾಗರಾಜಪ್ಪ@ ಶಿವಣ್ಣ
  • ಪದ್ಮನಾಭ
  • ಮಹೇಶ್
  • ಲಕ್ಷ್ಮಿನಾರಾಯಣ
  • ಮಹೇಂದ್ರ
  • ಶಂಕರ
  • ಹೆಚ್.ಸುರೇಶ್ ಬಾಬು
  • ಸುಬ್ರಮಣಿ ಎಲ್ಲರೂ ನಂಗಲಿ ಗ್ರಾಮದ ವಾಸಿಗಳು.

ಈ ಬಗ್ಗೆ ನಂಗಲಿ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಬಂಧಿತ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿರುತ್ತದೆ.


ಅಕ್ರಮ ಕಳ್ಳಬಟ್ಟಿ ದಾಸ್ತಾನು: ೧೫ ಲೀಟರ್‍ ಕಳ್ಳಬಟ್ಟಿ ವಶ, ಒಬ್ಬನ ಬಂಧನ

June 23, 2008

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆಲಾಟರಿ ಮತ್ತು ಸಾರಾಯಿ ನಿಷೇಧ ದಳದ ಆರಕ್ಷಕ ನಿರೀಕ್ಷಕರಾದ ಶ್ರೀ ಹೆಚ್.ಕೆ.ಜಗದೀಶ್ ರವರ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಾಗಿರುತ್ತದೆದಿನಾಂಕ ೨೨-೦೬-೨೦೦೮ ರಂದು ೧೨೩೦ ಗಂಟೆ ಸಮಯದಲ್ಲಿ ಹೆಚ್.ಕೆ.ಜಗದೀಶ್ ರವರು ತಮಗೆ ಬಂದ ಖಚಿತ ವರ್ತಮಾನದ ಮೇರೆಗೆ ಮಾಲೂರು ತಾಲೂಕು ನಲ್ಲದಿಮ್ಮನಹಳ್ಳಿ ಗ್ರಾಮದಲ್ಲಿ ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ೧೫ ಲೀಟರ್‍ ಅಕ್ರಮ ಕಳ್ಳಬಟ್ಟಿಯನ್ನು ವಶಪಡಿಸಿಕೊಂಡಿರುತ್ತಾರೆ.  ಕಾರ್ಯಾಚರಣೆ ವೇಳೆ ಆರೋಪಿ ತಿಮ್ಮರಾಯಪ್ಪ (೪೫) ಎಂಬುವನನ್ನು ಬಂಧಿಸಲಾಗಿರುತ್ತದೆ.  ಹಾಜರು ಪಡಿಸಿದ ಮಾಲು ಮತ್ತು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣವನ್ನು ದಾಖಲಿಸಲಾಗಿರುತ್ತದೆ.