ದಿನದ ಅಪರಾಧಗಳ ಪಕ್ಷಿನೋಟ ೩೧ ನೇ ಜುಲೈ ೦೮

July 31, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೧-೦೭-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ   

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೧

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ      ೩೦-೦೭-೨೦೦೮ ರಮದು ೧೫೦೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ತ್ಯಾಗನದೊಡ್ಡಿ ಗ್ರಾಮದ ವಾಸಿ ಕಾಂತಮ್ಮ ಎಂಬುವರು ತಮ್ಮ ತೋಟದ ಬಳಿ ಸೌದೆ ತೆಗೆದುಕೊಂಡು ಬರುತ್ತಿದ್ದರು.  ಅ ಸಮಯದಲ್ಲಿ ಮಾಲೂರು ತಾಲೂಕು ಮಲಕನಹಳ್ಳಿ ಗ್ರಾಮದ ವಾಸಿ ಮಂಜುನಾಥ ಎಂಬುವರನು ಏಕಾಏಕಿ ಕಾಂತಮ್ಮರವರ ಕತ್ತನ್ನು ಹಿಡಿದುಕೊಂಡು ತಳ್ಳಿ ತಲೆ ಕೂದಲು ಹಿಡಿದು ಎಳದಾಡಿ ತೋರುಬೆರಳುಗಳಿಂದ ಉಗುರುಗಳಿಂದ ಪರೀಚಿ ಕೆಳಕ್ಕೆ ತಳ್ಳಿ ಮಾನ ಭಂಗ ಮಾಡಲು ಪ್ರಯತ್ನಿಸಿ ಪ್ರಾಣ ತೆಗೆಯುವುದಾಗಿ ಬೆದರಿಕೆ ಹಾಕಿರುತ್ತಾರೆ.  

 

ರಸ್ತೆ ಅಪಘಾತಗಳು: ೦೩

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೩

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೩೦-೦೭-೨೦೦೮ ರಂದು ೧೫೩೦ ಗಂಟೆ ಸಮಯದಲ್ಲಿ ಅಂದ್ರ ಪ್ರದೇಶದ ಪಲಮನೇರು ನಗರದ ವಾಸಿ ಭಾಸ್ಕರ್‍ ಎಂಬುವರು ತನ್ನ ಹೋಂಡಾ ಕಾರು ಸಂಖ್ಯೆ ಕೆಎ-೦೫-ಎಂಎ-೫೩೯೦ ರಲ್ಲಿ ಬೆಂಗಳೂರಿನಿಂದ ಚಿತ್ತೂರಿಗೆ ಹೋಗಲು ರಾಷ್ಟ್ರೀಯ ಹೆದ್ದಾರಿ ೪ ರ ಮುಳಬಾಗಿಲು ಪಟ್ಟಣದ ಮದರಸ ಬಳಿ ಹೋಗುತ್ತಿದ್ದರು.  ಅ ಸಮಯದಲ್ಲಿ ತಮ್ಮ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಹತೋಟಿ ತಪ್ಪಿ ಕಾರು ಪಲ್ಟಿ ಹೊಡೆದು ಜಖಂಗೊಂಡಿರುತ್ತದೆ. 

 

ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೩೦-೦೭-೨೦೦೮ ರಂದು ೦೭೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ರಾಯಲ್ಪಾಡು ಗ್ರಾಮದ ವಾಸಿ ರಫಿಕ್ ಎಂಬುವರು ತನ್ನ ಜೀಪ್ ಸಂಖ್ಯೆ ಎಪಿ-೦೩-ಯು-೬೧೯೭ ರಲ್ಲಿ ನರಸಿಂಹ ರೆಡ್ಡಿ  ಮತ್ತು ಜ್ಯೋತಿ ಎಂಬುವರನ್ನು ಕುಳ್ಳರಿಸಿಕೊಂಡು ಶ್ರೀನಿವಾಸಪುರಕ್ಕೆ ಬರಲು ಬಿ.ಸಿ. ರಸ್ತೆಯ ಟೂಪಲ್ಲಿ ಕೆರೆಯ ತೀರುವಿನಲ್ಲಿ ಹೋಗುತ್ತಿದ್ದರು ಅ ಸಮಯದಲ್ಲಿ  ಮದನಪಲ್ಲಿ ಕಡೆ ಹೋಗಲು ಬಂದ ಹಾಲಿನ ವಾಹನದ ಸಂಖ್ಯೆ. ಕೆಎ-೦೩-ಸಿ-೯೨೪೪ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಜೀಪ್ ಗೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮವಾಗಿ ಚಾಲಕ ರಫೀಕ್, ನರಸಿಂಹರೆಡ್ಡಿ ಮತ್ತು ಜ್ಯೋತಿ ರವರಿಗೆ ರಕ್ತಗಾಯಗಳಾಗಿದ್ದು, ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುತ್ತದೆ. 

 

ಮಾಲೂರು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೩೦-೦೭-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ಮಾಲೂರು  ತಾಲೂಕು ಕುಡಿಯನೂರು ಗ್ರಾಮದ ವಾಸಿ ನಾಗರಾಜ ಮತ್ತು ಇತರರು ಆಟೋ ರಿಕ್ಷಾ ಸಂಕ್ಯೆ ಕೆಎ-೦೮-೩೭೫೪ ರಲ್ಲಿ ಕುಡಿಯನೂರಿನಿಂದ ಮಾಲೂರುಗೆ ಬರಲು ಚನ್ನಕಲ್ಲು ಗೇಟ್ ಬಳಿ ಬರುತ್ತಿದ್ದರು.  ಅ ಸಮಯದಲ್ಲಿ   ಎದರುಕಡೆಯಿಂದ ಬಂದ ಟೆಂಪೋ ಸಂಖ್ಯೆ ೨೧೬೮ ರ ಚಾಲಕ ತನ್ನ  ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಆಟೋಗೆ ಡಿಕ್ಕಿ ಹೊಡೆಸಿ ಟೆಂಪೋವನ್ನು ನಿಲ್ಲಿಸದೆ ಹೊರಡು ಹೋಗಿರುತ್ತಾನೆ.  ಇದರ ಪರಿಣಾಮವಾಗಿ ಆಟೋದಲ್ಲಿದ್ದ ಮುನಿರಾಜು ಮತ್ತು ಪೆರುಮಾಳ್ ಎಂಬುವರಿಗೆ ಗಾಯಗಳಾಗಿರುತ್ತದೆ. 

 

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

 ಮಾಸ್ತಿ ಪೊಲೀಸ್ ಠಾಣೆಯಲ್ಲಿ ಕೆ.ಎಸ್.ಆರ್‍.ಟಿ.ಸಿ. ನಿರ್ವಾಹಕನ ಮೇಲೆ  ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೩೦-೦೭-೨೦೦೮ ರಂದು ೦೯೩೦ ಗಂಟೆ ಸಮಯದಲ್ಲಿ ಮಾಲೂರು ಕೆ.ಎಸ್.ಆರ್‍.ಟಿ.ಸಿ. ಘಟಕದ ನಿರ್ವಾಹಕನಾದ ಎಸ್.ಜಿ.ಮಂಜುನಾಥ ಎಂಬುವರು ಹುಲದೇನಹಳ್ಳಿ ಗ್ರಾಮದಲ್ಲಿ ಪ್ರಯಾಣಿಕರನ್ನು ಬಸ್ಸಿಗೆ ಹತ್ತಿಸಿಕೊಳ್ಳುತ್ತಿದ್ದನು.   ಅ ಸಮಯದಲ್ಲಿ ಅದೇ ಗ್ರಾಮದ ವಾಸಿಯಾದ ರಮೇಶ, ಕೃಷ್ಣ ಮತ್ತು ಇತರರು ಏಕಾಎಕಿ ಬಂದು ಬಸ್ ಚಾಲಕನಾದ ಶ್ರೀನಿವಾಸರವರನ್ನು ಕೆಳಗೆ ಇಳಿಸಿಕೊಂಡು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ಸಮವಸ್ತ್ರವನ್ನು ಹರಿದು ಹಾಕುತ್ತಿದ್ದರು ಅದನ್ನು ಬಿಡಿಸಲು ಹೋದ ನಿರ್ವಾಹಕ ಮಂಜುನಾಥ ಎಂಬುವನಿಗೂ ಸಹ ಹೊಡೆದು ಸಮವಸ್ತ್ರವನ್ನು ಹರಿದು ಹಾಕಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಉಂಟು ಮಾಡಿರುತ್ತಾರೆ.

 

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಎ.ಪಿ.ಎಸ್.ಆರ್‍.ಟಿ.ಸಿ. ನಿರ್ವಾಹಕನ ಮೇಲೆ  ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೩೧-೦೭-೨೦೦೮ ರಂದು ೦೨೧೫  ಗಂಟೆ ಸಮಯದಲ್ಲಿ ಎ.ಪಿ.ಎಸ್.ಆರ್‍.ಟಿ.ಸಿ. ಬಸ್ ಚಾಲಕನಾದ ಹಾಲಪ್ಪ ಶೆಟ್ಟಿ ಎಂಬುವರು ತನ್ನ ಬಸ್ಸನ್ನು ಚಾಲನೆ ಮಾಡಿಕೊಂಡು ಚಿತ್ತೂರಿನಿಂದ ಬೆಂಗಳೂರಿಗೆ ಹೋಗಲು ಕೋಲಾರ ಹೊರಹೊಲಯದ ಬೈಪಾಸ್ ಬಳಿ ಹೋಗುತ್ತಿದ್ದರು. ಅ ಸಮಯದಲ್ಲಿ ಬೆಂಗಳೂರು ಕಡೆಯಿಂದ ಬಂದ ಕ್ವಾಲಿಸ್ ಕಾರ್‍ ಸಂಖ್ಯೆ ಕೆಎ-೧೧-ಎಂ-೭೧೭೧ ರ ಚಾಲಕ ತನ್ನ ಕಾರನ್ನು ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದು ಇದನ್ನು ಕಂಡ ಬಸ್ ಚಾಲಕ ರಸ್ತೆಯ ಎಡಭಾಗಕ್ಕೆ ನಿಲ್ಲಿಸುವಷ್ಟರಲ್ಲಿ ಕಾರಿನ ಚಾಲಕನಾದ ನರಸಪ್ಪ ಎಂಬುವರು ತನ್ನ ಕಾರನ್ನು ಬಸ್ಸಿಗೆ ಅಡ್ಡವಾಗಿ ನಿಲ್ಲಿಸಿ ಕಲ್ಲನ್ನು ಎತ್ತಿಕೊಂಡು ಬಸ್ಸಿಗೆ ಹೊಡೆಯಲು ಬರುತ್ತಿದ್ದನು.  ಅದನ್ನು ಪ್ರಶ್ನಿಸಿದ ಬಸ್ ಚಾಲಕನಿಗೆ ಹಣೆಯ ಎಡಭಾಗಕ್ಕೆ ಕಲ್ಲಿನಿಂದ ಹೊಡೆದು ರಕ್ತಗಾಯ ಪಡಿಸಿರುತ್ತಾನೆ.  

ಇತರೆ: ಇಲ್ಲ   

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು:  ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೦೬

-ಸ್ಥಳ ದಂಡ ಮೊತ್ತ:  ರೂ.೭೦೦/

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೩೦ ನೇ ಜುಲೈ ೦೮

July 30, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೦-೦೭-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ   

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೨

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೯-೦೭-೨೦೦೮ ರಂದು ೧೭೩೦ ಗಂಟೆ ಸಮಯದಲ್ಲಿ ಬೆಂಗಳೂರು ನಗರದ ವಾಸಿ ಗಜೇಂದ್ರ ಶರ್ಮ ಎಂಬುವರು ತಮ್ಮ ಟಾಟಾ ಕಾರ್‍ ಸಂಖ್ಯೆ ಕೆಎ-೦೩-ಸಿ.೮೪೪೧ ಅನ್ನು ರಾಷ್ಟ್ರೀಯ ಹೆದ್ದಾರಿ-೪ ರ ಮಡೇರಹಳ್ಳಿ ಗೇಟ್ ಬಳಿ ಪುಟ್ ಪಾತ್ ನಲ್ಲಿ ನಿಲ್ಲಿಸಿದ್ದರು.  ಅ ಸಮಯದಲ್ಲಿ ಹಿಂದುಗಡೆಯಿಂದ ಬಂದ ಹಿಂದಿನಿಂದ ಬಂದ ಕಾರ್‍ ಸಂ. ಕೆಎ-೦೨-ಸಿ.೭೬೭೭ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಗಜೇಂದ್ರರವರ ಕಾರಿಗೆ ಡಿಕ್ಕಿ ಹೊಡೆಸಿರುತ್ತಾನೆ.   ಇದರಿಂದಾಗಿ ಎರಡು ಕಾರುಗಳು ಜಖಂ ಆಗಿದ್ದು ಗಜೇಂದ್ರರವರಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ. 

 

ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ    ೨೯-೦೭-೨೦೦೮ ರಂದು ೦೯೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಕುಂದಿಟಿವಾರಿಪಲ್ಲಿ ಗ್ರಾಮದ ವಾಸಿಯಾದ ರವೀಂದ್ರ ರೆಡ್ಡಿ ಎಂಬುವರು ತಮ್ಮ ಟೆಂಪೋ ಸಂಖ್ಯೆ ಕೆಎ-೦೫-೬೮೫೭ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸೀತಿಗುಟ್ಟಹಳ್ಳಿ ಗ್ರಾಮದ ಬಳಿ ರಸ್ತೆಯ ಬದಿಗೆ ತನ್ನ ವಾಹನವನ್ನು ಹೊರಳಿಸಿರುತ್ತಾರೆ.   ಇದರ ಪರಿಣಾಮವಾಗಿ  ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ ೭ ಜನರಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ. 

 

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೫

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಾಣ ಬೆದರಿಕೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ  ೨೮-೦೭-೦೮ ರಂದು ೧೨೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಮಡೇರಹಳ್ಳಿ ಗ್ರಾಮದ ವಾಸಿಯಾದ ಶ್ರೀಮತಿ ರತ್ನಮ್ಮ ಎಂಬುವರು  ತಮ್ಮ ಭಾಗಕ್ಕೆ ಬಂದಿದ್ದ ಮನೆಯ ಗೋಡೆಯನ್ನು ಹೊಡೆಯುತ್ತಿದ್ದರು.   ಅ ಸಮಯದಲ್ಲಿ ಅದೇ ಗ್ರಾಮದ ವಾಸಿಗಳಾದ ಮಾರ್ಕೊಂಡಪ್ಪ ಮತ್ತು ಇತರೆ ೩ ಜನರು  ಜಗಳ ಮಾಡಿ  ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

 

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಾಣ ಬೆದರಿಕೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ  ೨೮-೦೭-೦೮ ರಂದು ೧೨೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಶಿಳ್ಳೆಂಗೆರೆ ಗ್ರಾಮದ ವಾಸಿಯಾದ ಪದ್ಮ ಎಂಬುವರು  ತಮ್ಮ ಮನೆಯಲ್ಲಿದ್ದರು.  ಅ ಸಮಯದಲ್ಲಿ ಅದೇ ಗ್ರಾಮದ ವಾಸಿಯಾದ ಶ್ರೀಮತಿ ಗೀತಾ ಎಂಬುವರು  ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ಸ್ತ್ರೀ ಸಂಘದ ವಿಷಯದಲ್ಲಿ ಜಗಳ ಮಾಡಿ  ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

 

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೮-೦೭-೨೦೦೮ ರಂದು ೧೨೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಮಾದವಗುರ್ಜೇನಹಳ್ಳಿ ಗ್ರಾಮದ ವಾಸಿಯಾದ ವೆಂಕಟೇಶಪ್ಪ ಎಂಬವರು ತಮ್ಮ ಮನೆಯ ಬಳಿ ಇದ್ದರು.  ಅ ಸಮಯದಲ್ಲಿ ಅಲ್ಲಿಗೆ ಬಂದ ಅದೇ ಗ್ರಾಮದ ವಾಸಿಗಳಾದ ಮುನಿಶಾಮಿ ಮತ್ತು ಇತರೆ ೫ ಜನರು ಅಲ್ಲಿಗೆ ಬಂದು ವಿದ್ಯುತ್ ತಂತಿ ಎಳೆಯುವ ವಿಚಾರದಲ್ಲಿ ಜಗಳ ಮಾಡಿ ವೆಂಕಟೇಶಪ್ಪ ಮತ್ತು ಅವರ ಮಗ ಮತ್ತು ಮಗಳಿಗೆ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ. 

 

ನಂಗಲಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ  ೨೮-೦೭-೨೦೦೮ ರಂದು ೧೬೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಮರವೆ ಮನೆ ವಾಸಿ ರಾಮಕ್ಕ ಎಂಬುವರು ತಮ್ಮ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದರು.  ಅ ಸಮಯದಲ್ಲಿ ಅದೇ ಗ್ರಾಮದ ವಾಸಿಯಾದ ರಾಜಮ್ಮ ಎಂಬುವರು ಬಂದು ಏಕಾಏಕಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ಎಡ ಕಿವಿಯನ್ನು ಕಚ್ಚಿ ಗಾಯಪಡಿಸಿರುತ್ತಾಳೆ.

 

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೯-೦೭-೦೮ ರಂದು ೧೦೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಮಂಡಿಕಲ್ಲು ಗ್ರಾಮದ ವಾಸಿಯಾದ ರೆಡ್ಡೆಪ್ಪ ಎಂಬುವರ ತಂದೆ ತಮ್ಮ ಜಮೀನಿನಲ್ಲಿ ಕಲ್ಲುಗಳನ್ನು ಹಾಕುತ್ತಿದ್ದರು.  ಅ ಸಮಯದಲ್ಲಿ ಅದೇ ಗ್ರಾಮದ ವಾಸಿಗಳಾದ ನಾಗರಾಜ ಮತ್ತು ಇತರೆ ೪ ಜನರು ಬಂದು ಈ ಜಮೀನು ನಮ್ಮದು ಇದರಲ್ಲಿ ಕಲ್ಲುಗಳನ್ನು ಹಾಕಬೇಡಿ ಎಂದು ಜಗಳ ತೆಗೆದು ರೆಡ್ಡಪ್ಪ ಮತ್ತು ಅವರ ತಂದೆಯವರಿಗೆ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ.  ಈ ಬಗ್ಗೆ ಎರಡೂ ಗುಂಪಿನವರೂ ಪರಸ್ಪರ ಗಲಾಟೆ ಮಾಡಿಕೊಂಡು ಹೊಡೆದಾಡಿಕೊಂಡಿದ್ದು ಕೇಸು ಮತ್ತು ಪ್ರತಿಕೇಸು ದಾಖಲಾಗಿರುತ್ತದೆ.

 

ಇತರೆ: ಇಲ್ಲ   

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು:  ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ:  ಇಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ಅಕ್ರಮ ಮದ್ಯ ಮಾರಾಟ: ರೂ. ೬೫೦೦/ ಬೆಲೆ ಬಾಳುವ ಮದ್ಯ ವಶ, ಒಬ್ಬನ ಬಂಧನ

July 30, 2008

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆಲಾಟರಿ ಮತ್ತು ಸಾರಾಯಿ ನಿಷೇಧ ದಳದ ಆರಕ್ಷಕ ನಿರೀಕ್ಷಕರಾದ ಶ್ರೀ ತಿಪ್ಪೇಸ್ವಾಮಿ ರವರ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಾಗಿರುತ್ತದೆದಿನಾಂಕ ೨೮-೦೭-೨೦೦೮ ರಂದು ೨೨೧೫ ಗಂಟೆ ಸಮಯದಲ್ಲಿ ತಿಪ್ಪೇಸ್ವಾಮಿ ರವರು ತಮಗೆ ಬಂದ ಖಚಿತ ವರ್ತಮಾನದ ಮೇರೆಗೆ ಕೋಲಾರ ತಾಲೂಕು ವಾನರಾಶಿ ಗ್ರಾಮದ ವಾಸಿ ಶ್ರೀನಿವಾಸಪ್ಪ ಎಂಬುವರ ಮನೆಯಲ್ಲಿ  ದಾಳಿ ನಡೆಸಿ ಪರವಾನಗಿ ಇಲ್ಲದೇ ಅಕ್ರಮವಾಗಿ ಮಾರಾಟ ಮಾಡಲುದಾಸ್ತಾನು ಇಟ್ಟಿದ್ದ ಸುಮಾರು ರೂ. ೬೫೦೦/ ಬೆಲೆ ಬಾಳುವ ಮದ್ಯದ ಬಾಟಲುಗಳನ್ನು ವಶಪಡಿಸಿಕೊಂಡಿರುತ್ತಾರೆ.  ಕಾರ್ಯಾಚರಣೆ ವೇಳೆ ಆರೋಪಿ ಶ್ರೀನಿವಾಸಪ್ಪ ಎಂಬುವನನ್ನು ಬಂಧಿಸಲಾಗಿರುತ್ತದೆ.  ಮತ್ತೊಬ್ಬ ಆರೋಪಿ ರಾಮ ಎಂಬುವನು ಪರಾರಿಯಾಗಿರುತ್ತಾನೆ.  ಹಾಜರು ಪಡಿಸಿದ ಮಾಲು ಮತ್ತು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಪ್ರಕರಣವನ್ನು ದಾಖಲಿಸಲಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೯ ನೇ ಜುಲೈ ೦೮

July 29, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೯-೦೭-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೧

ಮಾಲೂರು ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೧-೦೮ ರಂದು ೧೦೩೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ರಾಜಕೃಷ್ಣಾಪುರ ಗ್ರಾಮದ ವಾಸಿ ಶ್ರೀಮತಿ ನೀಲಮ್ಮ ಎಂಬುವರಿಗೆ ಗಂಡ ಪೆದ್ದನ್ನ ಮತ್ತು ಅತನ ಮನೆಯವರು ಜಮೀನು ವಿಚಾರದಲ್ಲಿ ಜಗಳ ತೆಗೆದು ಮಾನಸಿಕವಾಗಿ ಮತ್ತು ದೈಹಿಕವಾಗಿ ಜಗಳ ತೆಗೆದು ಅವಾಚ್ಚಶಬ್ದಗಳಿಂದ ಬೈದು ಹಿಂಸೆ ನೀಡಿದ್ದರಿಂದ ಮನನೊಂದ ನೀಲಮ್ಮ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿರುತ್ತಾರೆ.

ರಸ್ತೆ ಅಪಘಾತಗಳು: ೦೩

-ಮಾರಣಾಂತಿಕ: ೦೨

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೭-೨೦೦೮ ರಂದು ೧೬೧೫ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ದೇವರಾಯಸಮುದ್ರ ಬಳಿ ಇರುವ ಹಾಟ ವಿಕ್ಸ್ ಪ್ಲಾಟ್ ಬಳಿ ಕೆಲಸ ಮಾಡುತ್ತಿದ್ದ ರಾಜೇಶ್ ಕುಮಾರ್‍ ಸಿಂಹ ಎಂಬುವರು ಕೆಲಸ ಮಾಡುತ್ತಿದ್ದರು ಅ ಸಮಯದಲ್ಲಿ ಟಿಪ್ಪರು ಲಾರಿ ಸಂ.ಕೆಎ-೦೭-೭೬೬೮ ರ ಚಾಲಕ ತನ್ನ ವಾಹನವನ್ನು ಹಿಮ್ಮುಕವಾಗಿ ಚಲಾಯಿಸಿ ರಾಜೇಶ ಕುಮಾರ್‍ ಸಿಂಹ ರವರಿಗೆ ಡಿಕ್ಕಿ ಹೊಡೆಸಿರುತ್ತಾನೆ. ಇದರ ಪರಿಣಾಮವಾಗಿ ತೀವ್ರ ರೂಪದ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆರ್‍.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ೧೭೦೦ ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾನೆ.

ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೭-೨೦೦೮ ರಂದು ೧೪೩೦ ಗಂಟೆ ಸಮಯದಲ್ಲಿ ಹೊಸೂರು ತಾಲೂಕು ನರಸಿಂಹ ಫಾರಂ ವಾಸಿ ಲಕ್ಷ್ಮೀದೇವಮ್ಮ ಎಂಬುವರು ಆಟೋ ಸಂಖ್ಯೆ ಕೆಎ-೨೫-೨೫೦೯ ರಲ್ಲಿ ಎಂ.ಬಿ.ರಸ್ತೆಯ ಶಾಂತಮ್ಮ ರಾಮೇಗೌಡ ಕಲ್ಯಾಣ ಮಂಟಪದ ಮುಂದೆ ಬಸ್ಸು ನಿಲ್ದಾಣದ ಕಡೆಗೆ ಹೋಗುತ್ತಿದ್ದರು. ಅ ಸಮಯದಲ್ಲಿ ಹಿಂದುಗಡೆಯಿಂದ ಬಂದ ಟ್ರಾಕ್ಟರ್‌ ಸಂಖ್ಯೆ ಎಪಿ-೧೧೫-ಟಿ-೭೦೫೦-೫೧ ರ ಚಾಲಕ ತನ್ನ ಟ್ರಾಕ್ಟರ್‌ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಆಟೋಗೆ ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮವಾಗಿ ಲಕ್ಷ್ಮೀದೇವಮ್ಮ ರವರಿಗೆ ತೀವ್ರತರದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ.

-ಸಾಧಾರಣ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೭-೨೦೦೮ ರಂದು ೨೦೩೦ ಗಂಟೆ ಸಮಯದಲ್ಲಿ ಬೆಂಗಳೂರು ನಗರದ ವಾಸಿ ರಾಮಾಂಜಿನಪ್ಪ ಮತ್ತು ಇತರೆ ೩ ಜನರು ಟಾಟಾ ಇಂಡಿಕಾ ಕಾರು ಸಂಖ್ಯೆ ಕೆಎ-೦೫-ಎಎ-೨೨೨೬ ರಲ್ಲಿ ಬೆಂಗಳೂರಿಗೆ ಹೋಗಲು ಎನ್.ಹೆಚ್.೪ ರ ಹನುಮನಹಳ್ಳಿ ಗೇಟ್ ಬಳಿ ಬರುತ್ತಿದ್ದರು ಅ ಸಮಯದಲ್ಲಿ ಎದುರುಗಡೆಯಿಂದ ಬಂದ ಖಾಸಗಿ ಬಸ್ ಸಂ.ಕೆಎ-೦೭-೭೨೫೨ ರ ಚಾಲಕ ತನ್ನ ಬಸ್ಸನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕಾರಿಗೆ ಡಿಕ್ಕಿ ಹೊಡೆಸಿರುತ್ತಾನೆ. ಇದರ ಪರಿಣಾಮವಾಗಿ ಕಾರಿನಲ್ಲಿದ್ದ ಹರೀಶ್ ಮತ್ತು ನಾಗರಾಜು ಎಂಬುವರಿಗೆ ರಕ್ತ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆರ್‍.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೨

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೭-೨೦೦೮ ರಂದು ಕೋಲಾರ ತಾಲೂಕು ಕುರಬರಹಳ್ಳಿ ಗ್ರಾಮದ ವಾಸಿ ಅನಂದ್ ಸಿಂಗ್ ಎಂಬುವರು ಮುಳಬಾಗಿಲು ತಾಲೂಕು ಹೊಸಕೆರೆ ಗ್ರಾಮದ ಕೆರೆಯಲ್ಲಿ ನೀರು ಕೋಳಿಗಳನ್ನು ಹಿಡಿಯಲು ಹೋಗಿ ಆಕಸ್ಮಿಕವಾಗಿ ನೀರಿನಲ್ಲಿ ಮುಳಗಿ ಸಾವನ್ನು ಅಪ್ಪಿರುತ್ತಾರೆ.

ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೭-೨೦೦೮ ರಂದು ೧೧೧೫ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಅವಗಾನಪಲ್ಲಿ ಗ್ರಾಮದ ವಾಸಿ ಚೌಡರೆಡ್ಡಿ ಎಂಬುವರಿಗೆ ಹಾವು ಕಡಿದಿದ್ದು ಗೌನಿಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:

-ಸ್ಥಳ ದಂಡ ಮೊತ್ತ:

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೮ ನೇ ಜುಲೈ ೦೮

July 28, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮-೦೭-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲ ಸಾಧಾರಣ ಕಳ್ಳತನಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೬-೦೭-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಜಮ್ಮುನಹಳ್ಳಿ ಗ್ರಾಮದ ವಾಸಿ ಕೃಷ್ಣಪ್ಪ ಎಂಬುವರು ರಾಷ್ಟ್ರೀಯ ಹೆದ್ದಾರಿ-೪ ರ ಕಾಂತರಾಜ ವೃತ್ತದ ಬಳಿ ಇರವ ಜಗನ್ ಮೋಹನರೆಡ್ಡಿರವರ ಜಮೀನಿಗೆ ಕಾವಲಿದ್ದರು.  ಅ ಸಮಯದಲ್ಲಿ ಕೃಷ್ಣಪ್ಪ ರವರಿಗೆ ಪರಿಚಯಸ್ಥರಾದ ಕೋಲಾರ ತಾಲೂಕು ಸಂಗೋಡಹಳ್ಳಿ ಗ್ರಾಮದ ವಾಸಗಳಾದ ವೆಂಕಟೇಶ್ ಮತ್ತು ಇತರೆ ಇಬ್ಬರು ಊಟ ಮಾಡುವ ಸಲುವಾಗಿ ಆಟೋದಲ್ಲಿ ಬಂದಿದ್ದರು.  ಅ ಸಮಯದಲ್ಲಿ ತೋಟದ ಮನೆಯಲ್ಲಿದ್ದ ೨೦,೦೦೦/- ರೂ ಬೆಲೆ ಬಾಳುವ ಟೆಕ್ಸಮೋ ಮೋಟಾರ್‍ ಮತ್ತು ರೂ.೩,೦೦೦/- ಬೆಲೆ ಬಾಳುವ ಎರಡು ಕುರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. 

ವಾಹನ ಕಳ್ಳತನ : ಇಲ್ಲ   

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೨

ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೭-೦೭-೨೦೦೮ ರಂದು ೧೩೩೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಸೊಣ್ಣವಾಡಿ ಗ್ರಾಮದ ವಾಸಿಯಾದ ರಹಮತುಲ್ಲಾ ಎಂಬವರು ಆಟೋ ಸಂಖ್ಯೆ ಕೆಎ-೦೩-ಸಿ-೮೭೨೧ ರಲ್ಲಿ ಕೋಲಾರ ಕಡೆಯಿಂದ ಟಮಕ ಕಡೆ ಹೋಗುತ್ತಿದ್ದರು.  ಅ ಸಮಯದಲ್ಲಿ ಆಟೋ ಚಾಲಕ ನಯಾಜ್ ಪಾಷಾ ರವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕೋಲಾರ ಕೆರೆಕೋಡಿ ಬಳಿ ಉರಳಿ ಬೀಳಿಸಿರುತ್ತಾನೆ.   ಇದರ ಪರಿಣಾಮವಾಗಿ  ಆಟೋದಲ್ಲಿ ಪ್ರಯಾಣಿಸುತ್ತಿದ್ದ ರಹಮತುಲ್ಲಾ ಮತ್ತು ಚಾಲಕ ನಯಾಜ್ ಪಾಷಾ ರವರಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ.

 

ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೮-೦೭-೨೦೦೮ ರಂದು ೦೮೩೦ ಗಂಟೆ ಸಮಯದಲ್ಲಿ ಚಿಂತಾಮಣಿ ತಾಲೂಕು ಮಾಳಪಲ್ಲಿ ಗ್ರಾಮದ ವಾಸಿ ನಾರಾಯಣಸ್ವಾಮಿ ತಮ್ಮ ಮಾರೂತಿ ಕಾರ್‍ ಸಂ. ಕೆಎ-೦೯-ಎಂ-೫೭೮೪ ರಲ್ಲಿ ಬೆಂಗಳೂರಿನಿಂದ ತಮ್ಮ ಗ್ರಾಮಕ್ಕೆ ಹೋಗಲು ಕೋಲಾರ ತಾಲೂಕು ಬೀಚಗೊಂಡನಹಳ್ಳಿ ಕ್ರಾಸ್ ಬಳಿ ಹೋಗುತ್ತಿದ್ದರು.  ಅ ಸಮಯದಲ್ಲಿ ಚಿಂತಾಮಣಿ ಕಡೆಯಿಂದ ಬಂದ ಕೆ.ಎಸ್.ಆರ್‍.ಟಿ.ಸಿ. ಬಸ್ ಸಂ. ಕೆಎ-೦೭-ಎಫ್-೧೧೬೧ ರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕಾರಿಗೆ ಡಿಕ್ಕಿ ಹೊಡೆಸಿರುತ್ತಾನೆ. ಇದರ ಪರಿಣಾಮವಾಗಿ ಕಾರಿನಲ್ಲಿದ್ದ ಭಾರತಿ ಮತ್ತು ದೇವರಾಜನಿಗೆ ಗಾಯಗಳಾಗಿದ್ದು ಚಿಕಿತ್ಸೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

ವೇಮಗಲ್ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೭-೦೭-೨೦೦೮ ರಂದು ೨೧೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಪಾಟಲೀಪುರ ಗ್ರಾಮದ ವಾಸಿ ಕದಿರಪ್ಪ ಎಂಬುವರು ಅದೇ ಗ್ರಾಮದ ವಾಸಿ ಶ್ರೀನಿವಾಸ ಎಂಬುವರ ಮನೆಯ ಬಳಿ ಹೋಗಿ ಮದುವೆ ವಿಚಾರವಾಗಿ ಮಾತನಾಡುತ್ತಿದ್ದರು ಈ ವಿಷಯಕ್ಕೆ ಸಂಬಂಧಿಸಿದಂತೆ ಶ್ರೀನಿವಾಸ ಮತ್ತು ಇತರೆ ೩ ಜನರು ಜಗಳ ತೆಗೆದು ತಲೆಗೆ ಹೊಡೆದು ಪ್ರಾಣ  ಬೆದರಿಕೆ ಹಾಕಿರುತ್ತಾರೆ.

ಇತರೆ: ಇಲ್ಲ   

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

ಮಾಲೂರು ಪೊಲೀಸ್ ಠಾಣೆಯಲ್ಲಿ ದೊಂಬಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೭-೦೭-೨೦೦೮ ರಂದು ಬೆಳಿಗ್ಗೆ ಮಾಲೂರು ಪಟ್ಟಣದ ಆದರ್ಶ ನಗರದ ವಾಸಿ  ಜಯಲಕ್ಷ್ಮೀ ಜಯರಾಮ್ ಎಂಬುವವರಿಗೆ ಸೇರಿದ ಇಟ್ಟಿಗೆ ಪ್ಯಾಕ್ಟರಿ ಮಾಲೂರು ತಾಲೂಕು ಮಿಟ್ಟಗಾನಹಳ್ಳಿ ಗ್ರಾಮದಲ್ಲಿದ್ದು ಅದರ ಪಕ್ಕದಲ್ಲಿ ಒಂದು  ಮಣ್ಣಗುಡ್ಡೆ ಇರುತ್ತದೆ.  ಈ ಮಣ್ಣು ಗುಡ್ಡೆಯನ್ನು ಹೋಸಕೋಟೆ ತಾಲೂಕು ಕೋಡಿಹಳ್ಳಿ ಗ್ರಾಮದ ವಾಸಿಗಳಾದ ಸೊಣ್ಣಪ್ಪ ಮತ್ತು ಇತರೆ ೫೦೦-೬೦೦ ಜನರು ಅಕ್ರಮ ಗುಂಪುಕಟ್ಟಿಕೊಂಡು ಬಂದು ೪ ಜೆ.ಸಿ.ಬಿ. ಯಂತ್ರಗಳ ಸಹಾಯದಿಂದ ಮಣ್ಣುಗುಡ್ಡೆಯನ್ನು ನೆಲಸಮ ಮಾಡಲು ಪ್ರಯತ್ನ ಮಾಡಿರುತ್ತಾರೆ.  ಇದನ್ನು ತಡೆಯಲು ಬಂದ ಜಯಲಕ್ಷ್ಮೀ ಮತ್ತು ಅವರ ಗಂಡ ಮತ್ತು ಮಗನಿಗೆ ಮೈಮೇಲೆ ಹೊಡೆದು ಜಾತಿ ನಿಂದನೆ ಮಾಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. 

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೧೦

-ಸ್ಥಳ ದಂಡ ಮೊತ್ತ: ರೂ. ೧೩೦೦/

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೭ ನೇ ಜುಲೈ ೦೮

July 27, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೭-೦೭-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ 

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ   

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೨

ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೧೯-೦೬-೨೦೦೮ ರಂದು ೧೮೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಕುರುಗಲ್ ಗ್ರಾಮದ ವಾಸಿ ಅನುಸೂಯಮ್ಮ (೩೬) ಎಂಬುವರು ತನ್ನ ಗಂಡನೊಂದಿಗೆ ವೇಮಗಲ್ ಗ್ರಾಮದ ಬಸ್ ನಿಲ್ದಾಣದ ಶೌಚಾಲಯದ ಬಳಿ ನಿಂತಿದ್ದರು.  ಆ ಸಮಯದಲ್ಲಿ ಆಟೋ ಸಂಖ್ಯೆ ಕೆಎ-೦೭-೬೨೩೪ ರ ಚಾಲಕ ಶಕೀಲ್ ಅಹ್ಮದ್ ಎಂಬುವನು ತನ್ನ ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ.  ಆಟೋವಿನ ಚಕ್ರವು ಅನುಸೂಯಮ್ಮ ರವರ ಸೊಂಟದ ಮೇಲೆ ಹರಿದ ಪರಿಣಾಮ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಕೋಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.  

ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೧೯-೦೬-೨೦೦೮ ರಂದು ೦೯೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಚೌಡದೇನಹಳ್ಳಿ ಗ್ರಾಮದ ವಾಸಿ ಪಾದಿರಪ್ಪ  ಎಂಬುವರು ತನ್ನ ೫ ವರ್ಷದ ಮಗನಾದ ಸೋಮಶೇಖರ್‍ ಎಂಬುವನನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು.  ಆ ಸಮಯದಲ್ಲಿ  ಟಿ.ವಿ.ಎಸ್ ಸಂಖ್ಯೆ ಕೆಎ-೦೭-ಇ-೪೨೧೯ ರ ಚಾಲಕ ಮುನಿವೀರಪ್ಪ ಎಂಬುವನು ತನ್ನ ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ.  ಇದರ ಪರಿಣಾಮ ಸೋಮಶೇಖರ್‍ ಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಕೋಲಾರದ ಎಸ್.ಎನ್.ಆರ್‍ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿರುತ್ತದೆ. 

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ   

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:

-ಸ್ಥಳ ದಂಡ ಮೊತ್ತ: ರೂ.

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೬ ನೇ ಜುಲೈ ೦೮

July 26, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೦೭-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯಿತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ತಾಲೂಕು ಹೊಲೇರಹಳ್ಳಿ ಗ್ರಾಮದ ಬಳಿ ವಿದ್ಯುತ್ ಕಂಬಗಳಿಗೆ ಅಳವಿಡಿಸಿದ್ದ ಎ.ಸಿ.ಎಸ್.ಆರ್‍ ವೈರ್‍ ಕಳುವಾಗಿರುತ್ತದೆ.  ದಿನಾಂಕ ೨೪-೦೭-೨೦೦೯ ರಂದು ರಾತ್ರಿ ಯಾರೋಕಳ್ಳರು ವಿದ್ಯುತ್ ಕಂಬಕ್ಕೆ ೩೦ ಕಿ.ಮೀ ಉದ್ದದಷ್ಟು ಅಲ್ಯೂಮಿನಿಯಂ ತಂತಿಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.  ಈ ಬಗ್ಗೆ ಶ್ರೀ ಎಸ್.ಹರೀಶ್ ಕುಮಾರ್‍ ಶಾಖಾಧಿಕಾರಿಗಳು ಬೆಸ್ಕಾಂ ವೇಮಗಲ್ ರವರು ದೂರನ್ನು ನೀಡಿದ್ದು ಪ್ರಕರಣ ದಾಖಲಾಗಿರುತ್ತದೆ.  ಕಳುವಾದ ತಂತಿಯ ಬೆಲೆ ರೂ. ೪೯,೦೦೦/ ಆಗಿರುತ್ತದೆ.

ವಾಹನ ಕಳ್ಳತನ: ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ   

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ ಪ್ರಕರಣಗಳ ವಿವರ

-ದಾಖಲಾದ ಒಟ್ಟು ಪ್ರಕರಣಗಳು: ೨೦

-ಸ್ಥಳದಂಡ ಮೊತ್ತ:  ರೂ. ೨೭೦೦/   

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೫ನೇ ಜುಲೈ ೦೮

July 25, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೫-೦೭-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ:ಇಲ್ಲ

ಡಕಾಯಿತಿ:ಇಲ್ಲ

ಸುಲಿಗೆ:ಇಲ್ಲ

ಮನೆಗಳ್ಳತನ:ಇಲ್ಲ

ಸಾಧಾರಣ ಕಳ್ಳತನ:ಇಲ್ಲ

ವಾಹನ ಕಳ್ಳತನ:ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು:ಇಲ್ಲ

ರಸ್ತೆ ಅಪಘಾತಗಳು:ಇಲ್ಲ

-ಮಾರಣಾಂತಿಕ:ಇಲ್ಲ

-ಸಾಧಾರಣ:ಇಲ್ಲ

ಮೋಸ / ವಂಚನೆ ಪ್ರಕರಣಗಳು:ಇಲ್ಲ

ಕೊಲೆಗೆ ಪ್ರಯತ್ನ:ಇಲ್ಲ

ದೊಂಬಿ:ಇಲ್ಲ

ಹಲ್ಲೆ:೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೪-೦೭-೨೦೦೮ ರಂದು ೧೮೧೫ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಕುಪ್ಪಂಪಾಳ್ಯ ಗ್ರಾಮದ ಆನಂದ ಕುಮಾರ್ (ಖಾಸಗಿ ಬಸ್ಸು ನಿರ್ವಾಹಕ) ಎಂಬುವರು ಮುಳಬಾಗಿಲು ಬಸ್ಸು ನಿಲ್ದಾಣದಲ್ಲಿ ಬೆಂಗಳೂರು ಕಡೆಗೆ ಹೋಗಲು ಬಸ್ಸಿಗೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದರು. ಸಮಯದಲ್ಲಿ ಮುಳಬಾಗಿಲು ಪಟ್ಟಣದ ವಾಸಿಗಳಾದ ಜಿಯಾವುಲ್ಲಾ ಮತ್ತು ಇತರೆ ಜನರು ರೌಡಿ ಮಾಮೂಲು ಕೊಡು ಎಂದು ಆನಂದ ಕುಮಾರ್ ರವರ ಬಳಿ ಜಗಳ ತೆಗೆದು ಕೈಗಳಿಂದ ಹೊಡೆದು ಚಾಕುವಿನಿಂದ ಎಡಕೆನ್ನೆಗೆ ಹೊಡೆದು ಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.   

ಇತರೆ:ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು:ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು:ಇಲ್ಲ

ವ್ಯಕ್ತಿಕಾಣೆ ಪ್ರಕರಣಗಳು:ಇಲ್ಲ

ಮುಂಜಾಗ್ರತೆ ಕ್ರಮಗಳು:ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ ಪ್ರಕರಣಗಳ ವಿವರ

-ದಾಖಲಾದ ಒಟ್ಟು ಪ್ರಕರಣಗಳು:೨೦

-ಸ್ಥಳದಂಡ ಮೊತ್ತ:ರೂ. ೨೪೦೦

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

 


ಕೋಲಾರ ಜಿಲ್ಲೆಯ ನೂತನ ಎಸ್.ಪಿ ಯಾಗಿ ಶ್ರೀ ವಿಫುಲ್ ಕುಮಾರ್‍, ಐ.ಪಿ.ಎಸ್ ಅಧಿಕಾರ ಸ್ವೀಕಾರ

July 25, 2008

ಕೋಲಾರ ಜಿಲ್ಲೆಯ ನೂತನ ಆರಕ್ಷಕ ಅಧೀಕ್ಷಕರಾಗಿ ಮಾನ್ಯ ಶ್ರೀ ವಿಫುಲ್ ಕುಮಾರ್‍, .ಪಿ.ಎಸ್ ರವರು ಅಧಿಕಾರ ಸ್ವೀಕಾರ ಮಾಡಿಕೊಂಡಿರುತ್ತಾರೆ. ಮಾನ್ಯ ಶ್ರೀ ವಿಫುಲ್ ಕುಮಾರ್‍, .ಪಿ.ಎಸ್ ರವರು ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಆರಕ್ಷಕ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದು ದಿನಾಂಕ ೨೫-೦೭-೨೦೦೮ ರಂದು ಬೆಳಗ್ಗೆ ಕೋಲಾರ ಜಿಲ್ಲೆಯ ಹೆಚ್ಚುವರಿ ಆರಕ್ಷಕ ಅಧೀಕ್ಷಕರಾದ ಶ್ರೀ ಯಲ್ಲಪ್ಪ ರವರಿಂದ ಪ್ರಭಾರವನ್ನು ವಹಿಸಿಕೊಂಡಿರುತ್ತಾರೆ


ದಿನದ ಅಪರಾಧಗಳ ಪಕ್ಷಿನೋಟ ೨೪ ನೇ ಜುಲೈ ೦೮

July 24, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೪-೦೭-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ:೦೧

ಮಾಲೂರು ಪೊಲೀಸ್ ಠಾಣೆಯಲ್ಲಿ ಮನೆಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಮಾಲೂರು ಪುರ ಸಿ.ಪಿ ರಸ್ತೆಯಲ್ಲಿ ವಾಸವಾಗಿರುವ ನಾರಾಯಣಪ್ಪ ಎಂಬುವರ ವಾಸದ ಮನೆಯಲ್ಲಿ ಕಳವು ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೧೯-೦೭-೨೦೦೮ ರಿಂದ ೨೩-೦೭-೨೦೦೮ ರವರೆಗೆ ಮನೆಯಲ್ಲಿ ಯಾರೂ ಇಲ್ಲದೇ ಬೀಗಹಾಕಿದ್ದು ಈ ಅವಧಿಯಲ್ಲಿ ಮನೆಯ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿದ ಯಾರೋಕಳ್ಳರು ಮನೆಯಲ್ಲಿದ್ದ ಬಂಗಾರದ, ಬೆಳ್ಳಿಯ ಒಡವೆಗಳು ಹಾಗೂ ನಗದು ರೂ. ೩೫೦೦/ ಗಳನ್ನು ಗಳವು ಮಾಡಿಕೊಂಡು ಹೋಗಿರುತ್ತಾರೆ. ನಾರಾಯಣಪ್ಪ ರವರು ೨೩-೦೭-೨೦೦೮ ರಂದು ೦೯೩೦ ಗಂಟೆ ಸಮಯದಲ್ಲಿ ಮನೆಯಬಳಿ ಹೋಗಿ ನೋಡಿದಾಗ ಕೃತ್ಯ ಬೆಳಕಿಗೆ ಬಂದಿರುತ್ತದೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ೦೧

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ಕೆ.ಜಿ.ಮೊಹಲ್ಲಾದ ವಾಸಿ ಸೈಯದ್ ಅಲೀಂ (೨೧) ಎಂಬುವರಿಗೆ ಸೇರಿದ ಕೆಎ-೦೭-ಕ್ಯೂ-೪೫೩೪ ಸಂಖ್ಯೆಯ ಟಿ.ವಿ.ಎಸ್ ಹೆವಿಡ್ಯೂಟಿ ದ್ವಿಚಕ್ರವಾಹನ ಕಳುವಾಗಿರುತ್ತದೆ.  ದಿನಾಂಕ ೨೨-೦೭-೨೦೦೮ ರಂದು ೨೨೩೦ ಗಂಟೆ ಸಮಯದಲ್ಲಿ ಸೈಯದ್ ಅಲೀಂ (೨೧) ರವರು ತಮ್ಮ ದ್ವಿಚಕ್ರವಾಹನವನ್ನು ವಾಸದಮನೆಯ ಮುಂದೆ ನಿಲ್ಲಿಸಿದ್ದ ಸಮಯದಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.  ಕಳುವಾದ ವಾಹನದ ಬೆಲೆ ರೂ. ೨೧,೭೦೦/ ಆಗಿರುತ್ತದೆ.   

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

ವೇಮಗಲ್ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ತಾಲೂಕು ರಾಜಕಲ್ಲಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೧-೦೭-೨೦೦೮ ರಂದು ೧೩೪೦ ಗಂಟೆ ಸಮಯದಲ್ಲಿ ಶಿಡ್ಲಘಟ್ಟ ತಾಲೂಕು ಅರಕೆರೆ ಗ್ರಾಮದ ವಾಸಿ ಅಮರಾವತಿ ಎಂಬುವರ ಮೇಲೆ ಜಗಳ ತೆಗೆದ ಎ.ಕೃಷ್ಣಪ್ಪ ಮತ್ತು ಇತರೇ ೩ ಜನರು ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಹೊಡೆದು ಗಾಯಪಡಿಸಿ ಪ್ರಾಣಬೆದರಿಕೆ ಹಾಕಿರುತ್ತಾರೆ.  ಜಮೀನಿನ ವಿವಾದದ ಹಿನ್ನೆಲೆಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ.

ಇತರೆ೦೧

ಮಾಲೂರು ಪೊಲೀಸ್ ಠಾಣೆಯಲ್ಲಿ ಅಪಹರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಮಾಲೂರು ತಾಲೂಕು ತೊರ್‍ನಹಳ್ಳಿ ಗ್ರಾಮದ ವಾಸಿ ವಿ.ನಾಗರಾಜ್ ರವರ ೭ ವರ್ಷದ ಮಗ ಅನಿಲ್ ಕುಮಾರ್‍ ಎಂಬ ಬಾಲಕ ಅಪಹರಣಕ್ಕೀಡಾಗಿರುತ್ತಾನೆ.  ದಿನಾಂಕ ೨೩-೦೭-೨೦೦೮ ರಂದು ೨೨೦೦ ಗಂಟೆ ಸಮಯದಲ್ಲಿ ವಿ.ನಾಗರಾಜ್ ರವರ ಮೊಬೈಲ್ ದೂರವಾಣಿಗೆ ಕರೆ ಮಾಡಿದ ಅಪರಿಚಿತ ಅಪಹರಣಕಾರರು ೧೦ ಲಕ್ಷ ರೂಗಳನ್ನು ನೀಡಿದರೆ ಮಗುವನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಒಡ್ಡಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:

-ಸ್ಥಳ ದಂಡ ಮೊತ್ತ: ರೂ.

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.