ದಿನದ ಅಪರಾಧಗಳ ಪಕ್ಷಿನೋಟ ೩೧ನೇ ಆಗಸ್ಟ್ ೦೮

August 31, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೧-೦೮-೨೦೦೮ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೦೮-೨೦೦೮ ರಂದು ೧೩೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಮುದುವತ್ತಿ ಗ್ರಾಮದ ವಾಸಿ ನಾರಾಯಣಸ್ವಾಮಿ ಎಂಬುವರು ಕೋಲಾರ ಗಾಂಧಿನಗರದ ಸಮೀಪ ಇರುವ ಕೆರೆಯ ಕಟ್ಟೆ ಬಳಿ ತನ್ನ ದ್ವಿಚಕ್ರವಾಹನ ಸಂಖ್ಯೆ ಕೆಎ-೦೭-ಕೆ-೬೮೨೯ ರಲ್ಲಿ ಹೋಗುತ್ತಿದ್ದರು. ಆ ಸಮಯದಲ್ಲಿ ಮುಳಬಾಗಿಲು ಕಡೆಯಿಂದ ಬಂದ ಕೆಎ-೦೫-ಎ.ಎಂ-೧೧೩೯ ಇಂಡಿಕಾ ಕಾರ್‍ ನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ನಾರಯಣಸ್ವಾಮಿ ಮತ್ತು ಅವರ ಜೊತೆಯಲ್ಲಿದ್ದ ನಾಗಾರಜುರವರಿಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಕೋಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೩

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕರ್ತವ್ಯ ನಿರತ ಸರ್ಕಾರಿ ನೌಕರನ ಮೇಲೆ ಹಲ್ಲೆ ನಡೆಸಿರುವ ಘಟನೆ ಮುಳಬಾಗಿಲು ಟೌನ್ ಸರ್ಕಾರಿ ಆಸ್ಪತ್ರೆಯಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೩೦-೦೮-೨೦೦೮ ರಂದು ೨೨೦೦ ಗಂಟೆ ಸಮಯದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಮನು ಎಂಬುವರು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆ ಸಮಯದಲ್ಲಿ ಅಲ್ಲಿಗೆ ಬಂದ ಮುಳಬಾಗಿಲು ಟೌನ್ ತಾತಿಪಾಳ್ಯದ ವಾಸಿ ಸುನೀಲ್ ಎಂಬುವರು ಡಾ.ಮನು ರವರ ಮೇಲೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಪ್ರಾಣಬೆದರಿಕೆ ಹಾಕಿರುತ್ತಾರೆ.

ವೇಮಗಲ್ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿರುತ್ತವೆ. ಕೋಲಾರ ತಾಲೂಕು ಅಂದಾರಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೩೦-೦೮-೨೦೦೮ ರಂದು ೧೭೩೦ ಗಂಟೆ ಸಮಯದಲ್ಲಿ ಅಂದಾರಹಳ್ಳಿ ಗ್ರಾಮದ ವಾಸಿಗಳಾದ ಕೆ.ನಾರಾಯಣಪ್ಪ ಎಂಬುವರು ಹಾಗೂ ಅದೇ ಗ್ರಾಮದ ವಾಸಿಗಳಾದ ಶ್ರೀರಾಮ, ರಾಮಕ್ಕ ಎಂಬುವರು ಪರಸ್ಪರ ಜಗಳ ಮಾಡಿಕೊಂಡು ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು ಹೊಡೆದಾಡಿಕೊಂಡಿರುತ್ತಾರೆ. ಜಮೀನಿನ ಬಗ್ಗೆ ಪರಸ್ಪರರ ನಡುವೆ ಇದ್ದ ವಿವಾದ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

ವೇಮಗಲ್ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಠ ಜಾತಿ / ಪರಿಶಿಷ್ಠ ಪಂಗಡ (ದೌರ್ಜನ್ಯತಡೆ) ಕಾಯ್ದೆ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ವಿಶ್ವನಾಥಪುರ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೩೦-೦೮-೨೦೦೮ ರಂದು ೧೭೩೦ ಗಂಟೆ ಸಮಯದಲ್ಲಿ ವಿಶ್ವನಾತಪುರ ಗ್ರಾಮದ ವಾಸಿ ಮುನಿರಾಜು ಮತ್ತು ಇತರೇ ೪ ಜನರು ಕೋಲಾರ ತಾಲೂಕು ಬೆಳಮಾರಹಳ್ಳಿ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಮರಳನ್ನು ತುಂಬುತ್ತಿದ್ದರು. ಆ ಸಮಯದಲ್ಲಿ ಅಲ್ಲಿಗೆ ಕಾರೊಂದರಲ್ಲಿ ಬಂದ ಬೆಳಮಾರನಹಳ್ಳಿ ಗ್ರಾಮದ ವಾಸಿಗಳಾದ ಜಯಣ್ಣ ಮತ್ತು ಇತರರು ಅಕ್ರಮಗುಂಪು ಕಟ್ಟಿಕೊಂಡು ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಮುನಿರಾಜು ರವರ ಮೇಲೆ ಜಗಳ ತೆಗೆದು ಸರ್ಕಾರಿ ಜಮೀನಿನಲ್ಲಿ ಮರಳನ್ನು ತೆಗೆಯುತ್ತೀರಾ ಎಂದು ಕಾಲಿನಿಂದ ಒದ್ದು ಗಾಯಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣಬೆದರಿಕೆ ಹಾಕಿ ಜಾತಿನಿಂದನೆ ಮಾಡಿರುತ್ತಾರೆ. ಮತ್ತು ಟ್ರಾಕ್ಟರನ್ನು ಜಖಂಗೊಳಿಸಿರುತ್ತಾರೆ.

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲ ಹೆಂಗಸು ಕಾಣೆಯಾಗಿರುವುದರ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ದಿಂಬ ಚಾಮನಹಳ್ಳಿ ಗ್ರಾಮದ ವಾಸಿ ವೆಂಕಟೇಶಪ್ಪ ಎಂಬುವರ ಮಗಳಾದ ಕುಮಾರು ಜ್ಯೋತಿ (೧೬) ಎಂಬುವರು ಕಾಣೆಯಾದವರು. ದಿನಾಂಕ ೧೯-೦೮-೨೦೦೮ ರಂದು ಕೆಂಚಾಪುರ ಇಟ್ಟಿಗೆ ಕಾರ್ಖಾನೆಯಲ್ಲಿ ಕೂಲಿಕೆಲಸಕ್ಕಾಗಿ ಹೋಗುವುದಾಗಿ ಹೇಳೆ ಹೊರಟ ಜ್ಯೋತಿ ಹಿಂತಿರುಗಿ ಬಾರದೇ ಕಾಣೆಯಾಗಿರುತ್ತಾರೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:

-ಸ್ಥಳ ದಂಡ ಮೊತ್ತ: ರೂ.

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೩೦ನೇ ಆಗಸ್ಟ್ ೦೮

August 30, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೦-೦೮-೨೦೦೮ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

ವೇಮಗಲ್ ಪೊಲೀಸ್ ಠಾಣೆಯಲ್ಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೮-೨೦೦೮ ರಂದು ರಾತ್ರಿ ಕೋಲಾರ ತಾಲೂಕು ಧನಮಟ್ನಹಳ್ಳಿ ಗ್ರಾಮದ ವಾಸಿ ಶ್ರೀ ವೆಂಕಟೇಶಪ್ಪ ಎಂಬುವರ ಪಂಪ್ ರೂಂನ ಬಾಗಿಲನ್ನು ಹೊಡೆದು ಒಳಗೆ ಪ್ರವೇಶ ಮಾಡಿ ಅಲ್ಲಿದ್ದ ಪಿ.ಹೆಚ್.ಪಿ ಮೋನೋ ಬ್ಲಾಕ್ ಮೋಟಾರ್‍ ಪಂಪ್ ಮತ್ತು ನಾಲ್ಕು ವಿದ್ಯುತ್ ಕಂಬಗಳನ್ನು ಜಖಂಗೊಳಿಸಿ ಅದರಲ್ಲಿ ಅಳವಡಿಸಿದ್ದ ಎ.ಸಿ.ಎಸ್.ಆರ್‍ ವೈರ್‍ ಮತ್ತು ವಿದ್ಯುತ್ ಪರಿವರ್ತಕ ಯಂತ್ರವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಮಾಲಿನ ಬೆಲೆ ತಿಳಿಯಬೇಕಾಗಿರುತ್ತದೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೨

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೬-೦೭-೨೦೦೮ ರಂದು ೦೬೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ದಾಸೇನಹಳ್ಳಿ ಗ್ರಾಮದ ವಾಸಿ ಮುನೇಶಪ್ಪ ಎಂಬುವರು ಮುಳಬಾಗಿಲು ಟೌನ್ ಅಂಬೇಡ್ಕರ್‍ ವೃತ್ತದ ಬಳಿ ನಡೆದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ ಬಸ್ ನಿಲ್ದಾಣದ ಕಡೆಯಿಂದ ಬಂದ ಟ್ಯಾಂಕರ್‍ ಲಾರಿ ಸಂಖ್ಯೆ ಕೆಎ-೦೩-ಸಿ-೬೬೫೫ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮುನೇಶಪ್ಪ ರವರಿಗೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಮುನೇಶಪ್ಪ ರವರ ಕೈಕಾಲುಗಳಿಗೆ ಗಾಯಗಳಾಗಿದ್ದು ಹಲ್ಲುಗಳು ಮುರಿದುರುತ್ತದೆ. ಲಾರಿ ಚಾಲನ ತನ್ನ ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಿರುತ್ತಾನೆ.

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೦೮-೨೦೦೮ ರಂದು ೦೪೦೦ ಗಂಟೆ ಸಮಯದಲ್ಲಿ ಮೂಲತಃ ತಮಿಳುನಾಡು ವಾಸಿ ಸಗುಲಾಅಮೀದ್ ಎಂಬುವರು ತನ್ನ ಕಂಟೈನರ್‍ ಲಾರಿ ಸಂಖ್ಯೆ ಟಿಎನ್-೦೪-ಕ್ಯೂ-೩೫೮೭ ಅನ್ನು ಚಾಲನೆ ಮಾಡಿಕೊಂಡು ಎನ್.ಹೆಚ್ ೪ ರ ಮುಳಬಾಗಿಲು ಸಮೀಪ ಬರುತ್ತಿದ್ದರು. ಆ ಸಮಯದಲ್ಲಿ ಮತ್ತೊಂದು ಕಂಟೈನರ್‍ ಲಾರಿ ಸಂಖ್ಯೆ ಟಿ.ಎನ್-೪೫-ಸಿ-೮೪೨೯ ಅನ್ನು ಬಸ್ ಅದರ ಚಾಲಕ ಕಾರ್ತಿಕ್ ಎಂಬುವನು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಎರಡೂ ವಹನಗಳು ಜಖಂಗೊಂಡಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೨

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೮-೨೦೦೮ ರಂದು ೧೨೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಜೊಡಿ ಚಿಕ್ಕನಹಳ್ಳಿ ಗ್ರಾಮದ ವಾಸಿ ಶ್ರೀಮತಿ ವಿಮಲಮ್ಮ ಎಂಬುವರು ತಮ್ಮ ಮನೆಯ ಬಳಿ ಇದ್ದರು. ಆ ಸಮಯದಲ್ಲಿ ಅಲ್ಲಿಗೆ ಬಂದ ಅದೇ ಗ್ರಾಮದ ವಾಸಿ ಪಾಪಮ್ಮ ಮತ್ತು ಇತರೇ ಮೂರು ಜನರು ಆಸ್ತಿಯ ವಿಚಾರದಲ್ಲಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈಯಲ್ಲಿದ್ದ ದೊಣ್ಣೆಯಿಂದ ಹೊಡೆದಯ ಗಾಯ ಪಡಿಸಿರುತ್ತಾರೆ.

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೦೮-೨೦೦೮ ರಂದು ೧೫೩೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ತಟ್ಟನಕುಂಟೆ ಗ್ರಾಮದ ವಾಸಿ ಚಂದ್ರಪ್ಪ ಎಂಬುವರು ತನ್ನ ಟ್ರಾಕ್ಟರಿನಲ್ಲಿ ತಮ್ಮ ಗ್ರಾಮದ ಕೆರೆಯ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಅದೇ ಗ್ರಾಮದ ವಾಸಿ ಶ್ರೀನಾಥ ಮತ್ತು ಇತರೇ ಇಬ್ಬರು ಚಂದ್ರಪ್ಪ ರವರ ಟ್ರಾಕ್ಟರನ್ನು ಅಡ್ಡಗಟ್ಟಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಪ್ರಾಣಬೆದರಿಕೆ ಹಾಕಿ ಟ್ರಾಕ್ಟರಿನ ಗಾಜನ್ನು ಹೊಡೆದುಹಾಕಿರುತ್ತಾರೆ.

ಇತರೆ: ೦೧

ಮಾಲೂರು ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೮-೨೦೦೮ ರಂದು ೧೦೦೦ ಗಂಟೆ ಸಮಯದಲ್ಲಿ ಮಾಲೂರಿನ ಓವೆವೆಲ್ ಫುಡ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ ಎಂಬುವನು ತನ್ನ ಸಹೋದ್ಯೋಗಿಯಾದ ರಾಮಪ್ರಸಾದ್ ರವರೊಂದಿಗೆ ಜಗಳ ಮಾಡಿಕೊಂಡು ಈ ವಿಷಯವಾಗಿ ಹೆದರಿಕೊಂಡಿದ್ದು ತನ್ನ ಮೈಮೇಲೆ ಡೀಸೆಲ್ ಸುರಿದುಕೊಂಡು ಬೆಂಕಿಇಟ್ಟಿಕೊಳ್ಳಲು ಪ್ರಯತ್ನಿಸಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿರುತ್ತಾನೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:

-ಸ್ಥಳ ದಂಡ ಮೊತ್ತ: ರೂ.

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೯ನೇ ಆಗಸ್ಟ್ ೦೮

August 29, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೭೯-೦೮-೨೦೦೮ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೮-೦೮-೨೦೦೮ ರಂದು ರಾತ್ರಿ ರಾಷ್ಟ್ರೀಯ ಹೆದ್ದಾರಿ-೪ ರ ಕೋಲಾರ ತಾಲೂಕು ಅರಾಭಿಕೊತ್ತನೂರು ಗೇಟ್ ಬಳಿ ಮೋರಿ ದುರಸ್ಥಿಗಾಗಿ ಅಳವಡಿಸಿದ್ದ ೫ ಹೆಚ್‌ಪಿ ಮೊಟಾರ್‍ ಮತ್ತು ಪಂಪ್, ೯ ಸೆಂಟರಿಂಗ್ ಶೀಟ್‌ಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಶ್ರೀ ಜಗನ್ನಾಥ್‌, ಉರಿಗಾಂ, ಕೆ.ಜಿ.ಎಫ್‌ ರವರು ದೂರನ್ನು ನೀಡಿರುತ್ತಾರೆ. ಕಳುವಾದ ಮಾಲಿನ ಬೆಲೆ ೨೫,೦೦೦/- ಗಳಾಗಿರುತ್ತದೆ.

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೨

ನಂಗಲಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೮-೨೦೦೮ ರಂದು ೧೨೧೫ ಗಂಟೆ ಸಮಯದಲ್ಲಿ ಎ.ವಿ.ಅಪ್ಪಾರಾವ್ ಎಂಬುವರು ತನ್ನ ಲಾರಿ ಸಂಖ್ಯೆ ಎಪಿ-೧೬-ಟಿವಿ-೧೫೬೭ನ್ನು ಚಾಲನೆ ಮಾಡಿಕೊಂಡು ರಾಷ್ಟ್ರೀಯ ಹೆದ್ದಾರಿ-೪ ರ ಎನ್‌-ಗಡ್ಡೂರು ಗೇಟ್ ಬಳಿ ಬರುತ್ತಿದ್ದರು. ಅ ಸಮಯದಲ್ಲಿ ಮುಳಬಾಗಿಲು ಕಡೆಯಿಂದ ಬಂದ ಲಾರಿ ಸಂಖ್ಯೆ ಎಪಿ-೨೭—ವಿ-೮೪೫೩ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಜಗನ್ನಾಥ್ ರವರ ಲಾರಿಯ ಮುಂಬಾಗಕ್ಕೆ ಡಿಕ್ಕಿ ಹೊಡೆಸಿರುತ್ತಾನೆ.  ಇದರ ಪರಿಣಾಮವಾಗಿ ಲಾರಿಗಳು ಜಖಂಗೊಂಡಿರುತ್ತದೆ.

ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೮-೨೦೦೮ ರಂದು ೧೬೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಹೊನ್ನೇನಹಳ್ಳಿ ಗ್ರಾಮದ ವಾಸಿ ಚಿನ್ನಪ್ಪ ಎಂಬುವರು ಕೋಲಾರ ತಾಲೂಕು ಧನಮಟ್ನಹಳ್ಳಿ ಗೇಟ್ ಬಳಿ ನಿಂತಿದ್ದರು. ಅ ಸಮಯದಲ್ಲಿ ಕೋಲಾರ ಕಡೆಯಿಂದ ಬಂದ ನೊಂದಣಿ ಸಂಖ್ಯೆ ಇಲ್ಲದ ಹೀರೋ ಹೋಂಡಾ ದ್ವಿಚಕ್ರ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಚಿನ್ನಪ್ಪ ರವರಿಗೆ ಡಿಕ್ಕಿ ಹೊಡೆಸಿರುತ್ತಾನೆ. ಇದರ ಪರಿಣಾಮವಾಗಿ ಚಿನ್ನಪ್ಪ ರವರಿಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಕೋಲಾರದ ಎಸ್‌ಎನ್‌ಆರ್‌ ಆಸ್ಪತ್ರೆಗೆ ದಾಖಲಿಸಿರತ್ತಾರೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೮-೨೦೦೮ ರಂದು ೧೦೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಬೇಟಗೇರನಹಳ್ಳಿ ಗ್ರಾಮದ ವಾಸಿ ವೆಂಕಟೇಶ್ ಎಂಬುವರ ಮಕ್ಕಳು ಅದೇ ಗ್ರಾಮದ ವಾಸಿ ವೆಂಕಟೇಶ್ ರವರ ಖಾಲಿ ನಿವೇಶನದಲ್ಲಿ ಹೇಸಿಗೆ ಮಾಡಿದ ವಿಚಾರದಲ್ಲಿ ಜಗಳ ತೆಗೆದು ಕಲ್ಲಿನಿಂದ ಹೊಡೆದು ಗಾಯಪಡಿಸಿರುತ್ತಾರೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೧೪

-ಸ್ಥಳ ದಂಡ ಮೊತ್ತ: ರೂ. ೨೬೦೦/ ( ದ್ವಿಚಕ್ರವಾಹನದಲ್ಲಿ ಮೂರು ಜನ ಪ್ರಯಾಣಸಿರುವುದರ ಬಗ್ಗೆ ದಾಖಲಾದ ಪ್ರಕರಣಗಳು-೦೫)

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೮ ನೇ ಆಗಸ್ಟ್ ೦೮

August 28, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೭೮-೦೮-೨೦೦೮ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೮-೨೦೦೮ ರಂದು ರಾತ್ರಿ ಶ್ರೀನಿವಾಸಪುರ ತಾಲೂಕು ಯಡಗಾನಪಲ್ಲಿ ಗ್ರಾಮಕ್ಕೆ ಕುಡಿಯುವ ನೀರು ಮತ್ತು ಊರಿಗೆ ವಿಧ್ಯುತ್ ಒದಗಿಸಲು ಅಳವಡಿಸಿದ್ದ ೨೫ ಕೆ.ವಿ. ವಿದ್ಯುತ್ ಪರಿವರ್ತಕದ ಒಳಗಡೆ ಅಳವಡಿಸಿದ್ದ ಅಲ್ಯೂಮಿನಿಯಂ ವೈರ್‍ನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಶ್ರೀ ಮೋಹನ್ ಕುಮಾರ್‍, ಶಾಖಾಧಿಕಾರಿಗಳು, ಬೆಸ್ಕಾಂ, ಗೌನಿಪಲ್ಲಿ ಶಾಖೆರವರು ದೂರನ್ನು ನೀಡಿರುತ್ತಾರೆ. ಕಳುವಾದ ಮಾಲಿನ ಬೆಲೆ ತಿಳಿಯಬೇಕಾಗಿರುತ್ತದೆ.

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೩

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೩

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೮-೨೦೦೮ ರಂದು ೧೪೩೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಬಸವರಾಜಪುರ ಗ್ರಾಮದ ವಾಸಿ ಸುಧಾಕರ್‍ ಎಂಬುವರು ತನ್ನ ಸ್ನೇಹಿತ ಸುಬ್ರಮಣಿ ರವರೊಂದಿಗೆ ಮುಪರುಹಳ್ಳಿಯ ಬಳಿ ನಡೆದುಕೊಂಡು ಹೋಗುತ್ತಿದ್ದರು. ಅ ಸಮಯದಲ್ಲಿ ಮುಳಬಾಗಿಲು ಕಡೆಯಿಂದ ಬಂದ ಗೂಡ್ಸ್ ಆಟೋ ಸಂಖ್ಯೆ ಕೆಎ-೦೭-೭೦೫೦ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸುಬ್ರಮಣಿ ರವರಿಗೆ ಡಿಕ್ಕಿ ಹೊಡೆಸಿ ಪರಾರಿಯಾಗಿರುತ್ತಾನೆ. ಇದರ ಪರಿಣಾಮವಾಗಿ ಸುಬ್ರಮಣಿ ರವರ ತಲೆಗೆ ಮತ್ತು ಸೊಂಟಕ್ಕೆ ತೀವ್ರ ತರಹದ ಗಾಯಗಳಾಗಿದ್ದು ಚಿಕಿತ್ಸೆಗೆ ಮುಳಬಾಗಿಲು ಸರ್ಕಾರಿ ಆಸ್ಪತ್ರೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆರ್‍.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾನೆ. ಆಟೋ ಚಾಲಕ ವಾಹನದೊಂದಿಗೆ ಪರಾರಿಯಾಗಿರುತ್ತಾನೆ.

ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೮-೨೦೦೮ ರಂದು ೨೧೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಬೆಳಮಾರನಹಳ್ಳಿ ಗ್ರಾಮದ ವಾಸಿ ಆಂಜಿನಪ್ಪ ಎಂಬುವರ ಮಗನಾದ ರಮೇಶ್ ಎಂಬುವರು ಅದೇ ಗ್ರಾಮದ ವಾಸಿಯಾದ ಲಕ್ಷ್ಮಣ ಎಂಬುವರ ಆಟೋ ಸಂಖ್ಯೆ ಕೆಎ-೦೭-೭೪೮೨ ರಲ್ಲಿ ತನ್ನ ಗ್ರಾಮಕ್ಕೆ ಹೋಗಲು ಚಾಕರಸನಹಳ್ಳಿ ಗೇಟ್ ಬಳಿ ಇರುವ ಇಟ್ಟಿಗೆ ಫ್ಯಾಕ್ಟರಿ ಬಳಿ ಹೋಗುತ್ತಿದ್ದರು. ಅ ಸಮಯದಲ್ಲಿ ಆಟೋ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಪಕ್ಕದಲ್ಲಿರುವ ಮೋರಿಗೆ ಡಿಕ್ಕಿ ಹೊಡೆಸಿರುತ್ತಾನೆ. ಇದರ ಪರಿಣಾಮವಾಗಿ ಆಟೋದಲ್ಲಿದ್ದ ರಮೇಶ ಮತ್ತು ಮುನಿದಾಸಪ್ಪ ಎಂಬುವರಿಗೆ ಗಾಯಗಳಾಗಿರುತ್ತದೆ. ಆಟೋ ಚಾಲಕ ವಾಹನ ಬಿಟ್ಟು ಪರಾರಿಯಾಗಿರುತ್ತಾನೆ.

ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೮-೨೦೦೮ ರಂದು ೦೭೪೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ದೊಡ್ಡವಲ್ಲಭಿ ಗ್ರಾಮದ ವಾಸಿ ಚನ್ನಕೇಶವ ಎಂಬುವರು ಸೈಕಲ್ ನಲ್ಲಿ ರಾಷ್ಟ್ರೀಯ ಹೆದ್ದಾರಿ – ೪ ರ ಮಾಲೂರು ಜಿಗ್ ಜಾಗ್ ಬಳಿ ಬರುತ್ತಿದ್ದರು. ಅ ಸಮಯದಲ್ಲಿ ಕೋಲಾರ ಕಡೆಯಿಂದ ಬಂದ ಖಾಸಗಿ ಬಸ್ ಸಂಖ್ಯೆ ಕೆಎ-೦೮-೩೧೩೨ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಚನ್ನಕೇಶವ ರವರಿಗೆ ಡಿಕ್ಕಿ ಹೊಡೆಸಿರುತ್ತಾನೆ. ಇದರ ಪರಿಣಾಮವಾಗಿ ಚನ್ನಕೇಶವ ರವರಿಗೆ ಗಾಯಗಳಾಗಿದ್ದು ವಾಹನದ ಚಾಲಕನನ್ನು ಬಂಧಿಸಿ ವಾಹನ ವಶಪಡಿಸಿಕೊಂಡಿರುತ್ತೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

ನಂಗಲಿ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೮-೨೦೦೮ ರಂದು ೦೯೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಎನ್.ಚಮಕಲಹಳ್ಳಿ ಗ್ರಾಮದ ವಾಸಿ ಮೊಹ್ಮದ್ ಫಜಲೂರ್‍ ರೆಹಮಾನ್ ಎಂಬುವರ ಜಮೀನನ್ನು ಅಕ್ಕಪಕ್ಕದ ಜಮೀನುದಾರರಾದ ರಾಮಕೃಷ್ಣರೆಡ್ಡಿ ಮತ್ತು ಇತರೆ ೪ ಜನರು ಒತ್ತುವರಿ ಮಾಡಿಕೊಂಡಿದ್ದು ಅಲ್ಲಿ ರೆಹಮಾನ್ ರವರು ನೀಲಗಿರಿ ಸಸಿಗಳನ್ನು ನಾಟಿ ಮಾಡಿದ್ದು ಅದನ್ನು ಕಿತ್ತು ಹಾಕಿರುತ್ತಾರೆ. ಇದನ್ನು ಪ್ರಶ್ನಿಸಿದಕ್ಕಾಗಿ ರಾಮಕೃಷ್ಣರೆಡ್ಡಿ ಮತ್ತು ಇತರರು ಅಕ್ರಮಗುಂಪು ಕಟ್ಟಿಕೊಂಡು ಕೈಗಳಲ್ಲಿ ದೊಣ್ಣೆಗಳನ್ನು ಹಿಡಿದುಕೊಂಡು ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಗಳಿಂದ ಹೊಡೆದು ಗಾಯಪಡಿಸಿ ಜಮೀನನ ಬಳಿ ಬಂದರೆ ಪ್ರಾಣ ತೆಗೆಯುವುದಾಗಿ ಬೆದರಿಕೆ ಹಾಕಿರುತ್ತಾರೆ.

ಹಲ್ಲೆ: ಇಲ್ಲ

ಇತರೆ: ೦೧

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೮-೨೦೦೮ ರಂದು ೦೯೩೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಓಜಲಹಳ್ಳಿ ಗ್ರಾಮದ ವಾಸಿ ರತ್ನಮ್ಮ ಮತ್ತು ಅದೇ ಗ್ರಾಮದ ವಾಸಿ ಮಂಜುನಾಥ ಎಂಬುವರ ಮಕ್ಕಳ ವಿಚಾರದಲ್ಲಿ ಜಗಳ ಉಂಟಾಗಿದ್ದು ಅದೇ ವಿಚಾರದಲ್ಲಿ ಮಂಜುನಾಥ ಮತ್ತು ಇತರೆ ೪ ಜನರು ಅಕ್ರಮಗುಂಪು ಕಟ್ಟಿಕೊಂಡು ಬಂದು ರತ್ನಮ್ಮರವರನ್ನು ಚಪ್ಪಲಿಯಿಂದ ಹೊಡೆದು ಬಟ್ಟೆಗಳನ್ನು ಹರಿದು ಹಾಕಿ ಮಾನಭಂಗ ಮಾಡಲು ಪ್ರಯತ್ನಪಟ್ಟು ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೧

ನಂಗಲಿ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೬-೦೮-೨೦೦೮ ರಂದು ೦೫೪೫ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಯಲವಹಳ್ಳಿ ಗ್ರಾಮದ ವಾಸಿ ಜಿ.ಕೃಷ್ಣಪ್ಪ ಎಂಬುವರ ಪತ್ನಿಯಾದ ಶ್ರೀಮತಿ ವಿಜಯಲಕ್ಷ್ಮೀ ಎಂಬುವರು ಮನೆಯಿಂದ ಹೊರೆಗೆ ಹೋದವರು ಇದುವರೆವಿಗೂ ವಾಪಸ್ಸು ಬಂದಿರುವುದಿಲ್ಲ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:

-ಸ್ಥಳ ದಂಡ ಮೊತ್ತ: ರೂ.

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ನಂಗಲಿ ಪೊಲೀಸ್ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರ ಜಂಟಿ ಕಾರ್ಯಾಚರಣೆ: ೬ ಲಾರಿಗಳ ವಶ, ೫ ಜನರ ಬಂಧನ.

August 28, 2008

ದಿನಾಂಕ ೨೭-೦೮-೨೦೦೮ ರಂದು ೨೦೦೦ ಗಂಟೆ ಸಮಯದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಶ್ರೀ ಎಸ್.ಆರ್‍. ನಾಗರಾಜ ರವರಿಗೆ ಅನಧಿಕೃತ ಮರಳು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಬಂದ ಖಚಿತ ವರ್ತಮಾನದ ಮೇರೆಗೆ ನಂಗಲಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್‍ ಶ್ರೀ ನಂಜಪ್ಪ ಹಾಗೂ ಅವರ ಸಿಬ್ಬಂದಿಯವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮರಳು ತುಂಬಿಕೊಂಡು ಹೋಗುತ್ತಿದ್ದ  ೬ ಲಾರಿಗಳನ್ನು ವಶಪಡಿಸಿಕೊಂಡು ೫ ಜನ ಚಾಲಕರನ್ನು ಬಂಧಿಸಿರುತ್ತಾರೆ.  


ದಿನದ ಅಪರಾಧಗಳ ಪಕ್ಷಿನೋಟ ೨೭ ನೇ ಆಗಸ್ಟ್ ೦೮

August 28, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೭-೦೮-೨೦೦೮ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ೦೧

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ವಾಹನಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ವಿನೋಭನಗರದ ವಾಸಿ ರಾಘವೇಂದ್ರ ಕುಮಾರ್‍ ಎಂಬುವರಿಗೆ ಸೇರಿದ ಕೆಎ-೩೭-ಹೆಚ್-೮೮೬೦ ಸಂಖ್ಯೆಯ ಆರ್‍.ಎಕ್ಸ್ ಯಮಹಾ ದ್ವಿಚಕ್ರವಾಹನ ಕಳುವಾಗಿರುತ್ತದೆ. ದಿನಾಂಕ ೨೫-೦೮-೨೦೦೮ ರಂದು ೧೮೩೦ ಗಂಟೆ ಸಮಯದಲ್ಲಿ ರಾಘವೇಂದ್ರ ಕುಮಾರ್‍ ರವರು ತಮ್ಮ ವಾಹನವನ್ನು ಸುಗುಣ ನರ್ಸಿಂಗ್ ಹೋಂ ಬಳಿ ನಿಲ್ಲಿಸಿದ್ದಾಗ ಯಾರೋಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ವಾಹನ ಬೆಲೆ ರೂ. ೨೫,೦೦೦/ ಆಗಿರುತ್ತದೆ.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೧

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಅಪಹರಣ ಮತ್ತು ಮಾನಭಂಗ ಪ್ರಯತ್ನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೮-೨೦೦೮ ರಂದು ೧೮೩೦ ಗಂಟೆ ಸಮಯದಲ್ಲಿ ಕೋಲಾರ ನಗರದ ಕಾರಂಜಿಕಟ್ಟೆ ವಾಸಿ ಕುಮಾರಿ ಗಾಯತ್ರಿ ಎಂಬುವರನ್ನು ಅವರ ಚಿಕ್ಕಮ್ಮಳಾದ ವಸಂತಮ್ಮ ಮತ್ತು ಇತರೆ ಇಬ್ಬರು ಸೇರಿಕೊಂಡು ಗಾಯತ್ರಿ ರವರನ್ನು ಒಂದು ಬಿಳಿ ಬಣ್ಣದ ಕಾರಿನಲ್ಲಿ ಅಪಹರಣ ಮಾಡಿಕೊಂಡು ಟೇಕಲ್ ರಸ್ತೆಯ ಕುಂಟನಹಳ್ಳಿ ಗ್ರಾಮದ ಬಳಿ ಇರುವ ನೀಲಿಗಿರಿ ತೋಪಿನಲ್ಲಿ ಕರೆದುಕೊಂಡು ಹೋಗಿ ರಾಜಣ್ಣ ರವರು ತಮ್ಮನ್ನು ಎಳೆದಾಡಿ ಮಾನಭಂಗಕ್ಕೆ ಪ್ರಯತ್ನ ಪಟ್ಟಿದ್ದು ಉಳಿದಿಬ್ಬರು ಸಾಯಿಸುವುದಾಗಿ ಪ್ರಾಣಬೆದರಿಕೆ ಮಾಡಿರುತ್ತಾರೆ ಎಂದು ತಮ್ಮ ದೂರಿನಲ್ಲಿ ಕುಮಾರಿ ಗಾಯತ್ರಿ ಹೇಳಿರುತ್ತಾರೆ.

ರಸ್ತೆ ಅಪಘಾತಗಳು: ೦೩

-ಮಾರಣಾಂತಿಕ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೭-೦೮-೨೦೦೮ ರಂದು ೨೧೩೦ ಗಂಟೆ ಸಮಯದಲ್ಲಿ ಮುಳಬಾಗಿಲು ಸೋಮೇಶ್ವರ ಪಾಳ್ಯದ ವಾಸಿ ಸತೀಶ್ ಎಂಬುವರು ಕೆ.ಬೈಪಲ್ಲಿ ರಸ್ತೆಯಲ್ಲಿ ತಮ್ಮ ಹೀರೋಹೋಂಡಾ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೫-ಇಬಿ-೭೭೬೬ ಅನ್ನು ಚಾಲನೆ ಮಾಡಿಕೊಂಡು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಆಯತಪ್ಪಿ ಕೆಳಗೆ ಬಿದ್ದಿರುತ್ತಾರೆ. ಇದರ ಪರಿಣಾಮ ಸತೀಶ್ ರವರ ತಲೆಗೆ ತೀವ್ರವಾದ ಗಾಯಗಳಾಗಿದ್ದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದಿನಾಂಕ ೧೯-೦೮-೨೦೦೮ ರಂದು ೧೨೧೫ ಗಂಟೆ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸತೀಶ್ ರವರು ಮೃತಪಟ್ಟಿರುತ್ತಾರೆ.

-ಸಾಧಾರಣ: ೦೨

ಮಾಲೂರು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೮-೨೦೦೮ ರಂದು ೧೯೦೦ ಗಂಟೆ ಸಮಯದಲ್ಲಿ ಹೊಸಕೋಟೆ ತಾಲೂಕು ನಾರಾಯಣಕೆರೆ ಗ್ರಾಮದ ವಾಸಿ ವೆಂಕಟರವಣಪ್ಪ ಎಂಬುವರು ಮಾಲೂರು ತಾಲೂಕು ಲಕ್ಕೂರು ಗ್ರಾಮದಿಂದ ತನ್ನ ಸ್ಕೂಟರ್‍ ಸಂಖ್ಯೆ ಕೆಎ-೦೫-ಎಕ್ಸ್-೧೦೦೧ ರಲ್ಲಿ ಲಕ್ಕೂರಿನಿಂದ ಮಾಲೂರು ಕಡೆ ಬರಲು ಲಕ್ಕೂರು ಗ್ರಾಮದ ವಿಧ್ಯುತ್ ಶಕ್ತಿ ಕಚೇರಿ ಮುಂಭಾಗ ಬರುತ್ತಿದ್ದರು. ಅ ಸಮಯದಲ್ಲಿ ಎದರುಗಡೆಯಿಂದ ಯಾವುದೋ ಅಪರಿಚಿತ ಟ್ರಾಕ್ಟರ್‍ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಪರಾರಿಯಾಗಿರುತ್ತಾನೆ. ಇದರ ಪರಿಣಾಮವಾಗಿ ವೆಂಕಟರರವಣಪ್ಪ ಮತ್ತು ಅವರೊಂದಿಗೆ ಬರುತ್ತಿದ್ದ ನಾಗರಾಜಪ್ಪ ರವರಿಗೆ ತೀವ್ರ ತರಹದ ರಕ್ತಗಾಯಗಳಾಗಿರುತ್ತದೆ.

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೮-೨೦೦೮ ರಂದು ೧೯೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಕೊತ್ತಮಂಗಲ ಗ್ರಾಮದ ವಾಸಿ ನಾರಾಯಣಚಾರಿ ಎಂಬುವರು ತನ್ನ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೮-ಜೆ-೯೯೨೦ ರಲ್ಲಿ ರಾಷ್ಟ್ರೀಯ ಹೆದ್ದಾರಿ -೪ ರ ಎ.ಎಸ್.ಎಸ್.ಆರ್‍.ಪೆಟ್ರೋಲ್ ಬಂಕ್ ಬಳಿ ಹೋಗುತ್ತಿದ್ದರು. ಅ ಸಮಯದಲ್ಲಿ ಯಾವುದೋ ಒಂದು ಅಪರಿಚಿತ ಲಾರಿ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾರಾಯಣಚಾರಿ ರವರಿಗೆ ಡಿಕ್ಕಿ ಹೊಡೆಸಿ ಪರಾರಿಯಾಗಿರುತ್ತಾನೆ. ಇದರ ಪರಿಣಾಮವಾಗಿ ನಾರಾಯಣಚಾರಿ ರವರ ತೆಲೆಗೆ ಮತ್ತು ಕೈಕಾಲುಗಳಿಗೆ ಗಾಯಗಳಾಗಿದ್ದು ಚಿಕತ್ಸೆಗಾಗಿ ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಮೋಸ / ವಂಚನೆ ಪ್ರಕರಣಗಳು: ೦೧

ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಮೋಸ/ವಂಚನೆ ಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೧೦-೨೦೦೨ ರಂದು ಬಂಗಾರಪೇಟೆ ತಾಲೂಕು ಬೇಂತಮಂಗಲ ಹೋಬಳಿ ದೊಡ್ಡಕಾರಿ ಗ್ರಾಮದ ವಾಸಿ ನಾರಾಯಣಸ್ವಾಮಿ (೩೫) ಎಂಬುವರು ಕೋಲಾರ ಜಿಲ್ಲಾ ೨ ನೇ ಸತ್ರ ತ್ವರಿತ ವಿಲೇವಾರಿ ನ್ಯಾಯಾಲಯದಲ್ಲಿ ಎಸ್.ಸಿ ನಂ. ೨೬೬/೦೧ ರಲ್ಲಿ ಆರೋಪಿಯಾದ ಮುತ್ತುವೇಲು ಎಂಬುವರಿಗೆ ಜಾಮೀನು ನೀಡುವ ಸಂದರ್ಭದಲ್ಲಿ ತಾನು ಬಂಗಾರಪೇಟೆ ತಾಲೂಕು ಬೇತಮಂಗಲ ಹೋಬಳಿ ಕಂಬಪಲ್ಲಿ ಗ್ರಾಮದ ವಾಸಿ ಎಸ್.ಮುನಿಯಪ್ಪ ಎಂಬುದಾಗಿ ಸುಳ್ಳು ಹೇಳಿ ಪ್ರಮಾಣ ಮಾಡಿ ಮುಚ್ಚಳಿಕೆ ಬರೆದುಕೊಟ್ಟು ವಂಚನೆ ಎಸಗಿರುತ್ತಾರೆ. ಈ ಬಗ್ಗೆ ಕೋಲಾರ ಜಿಲ್ಲಾ ಸತ್ರ ನ್ಯಾಯಾಲಯದ ಪ್ರಭಾರ ಆಡಳಿತಾಧಿಕಾರಿಗಳಾದ ಹೆಚ್.ಎಂ.ನಾರಾಯಣಸ್ವಾಮಿರವರು ದೂರು ನೀಡಿದ್ದು ಪ್ರಕರಣ ದಾಖಲಾಗಿರುತ್ತದೆ.

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೮-೨೦೦೮ ರಂದು ೧೯೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಅವಣಿ ಗ್ರಾಮದ ವಾಸಿ ಧನಲಕ್ಷ್ಮಿ ಮತ್ತು ಅವರ ಪತಿ ವಿಶ್ವನಾಥ್ ಎಂಬುವರು ಚಿಕ್ಕನ್ ಕಬಾಬ್ ವ್ಯಾಪಾರ ಮಾಡುತ್ತಿದ್ದರು. ಅ ಸಮಯದಲ್ಲಿ ಅದೇ ಗ್ರಾಮದ ವಾಸಿ ಶ್ರೀರಾಮಪ್ಪ ಎಂಬುವರು ಹಣದ ವಿಚಾರದಲ್ಲಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಅಂಗಡಿ ಸಾಮಾನುಗಳನ್ನು ಚಲ್ಲಾಪಿಲ್ಲಿ ಮಾಡಿ ಕೈಗಳಿಂದ ಹೊಡೆದು ಸಣ್ಣಪುಟ್ಟ ಗಾಯಗಳನ್ನುಂಟು ಮಾಡಿ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೦೮-೨೦೦೮ ರಂದು ೧೭೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಗವಿಪುರ ಗುಟ್ಟಹಳ್ಳಿ ಗ್ರಾಮದ ವಾಸಿ ಹೇಮಗಿರಿ ಎಂಬುವರು ಮುಳಬಾಗಿಲು ತಾಲೂಕು ಯಳಗೊಂಡಹಳ್ಳಿ ಗ್ರಾಮದ ಶ್ರೀನಾಥ ರವರಿಗೆ ಸೇರಿದ ಬಾವಿಯಲ್ಲಿ ಅಕಸ್ಮಿಕವಾಗಿ ಜಾರಿ ಬಿದ್ದು ಮೃತಪಟ್ಟಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೨೫

-ಸ್ಥಳ ದಂಡ ಮೊತ್ತ: ರೂ. ೪೭೦೦/ (೭ ಪ್ರಕರಣಗಳು ದ್ವಿಚಕ್ರವಾಹನದಲ್ಲಿ ಮೂರುಜನ ಪ್ರಯಾಣಿಸಿರುವುದರ ಬಗ್ಗೆ ದಾಖಲಾಗಿರುತ್ತದೆ)

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೬ ನೇ ಆಗಸ್ಟ್ ೦೮

August 26, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೦೮-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

ಮಾಲೂರು ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.   ಮಾಲೂರು ಪುರ ಬೆಂಗಳೂರು ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್  ಬಳಿ ನಿಲ್ಲಿಸಿದ್ದ ಮೂರು ಲಾರಿಗಳಲ್ಲಿದ್ದ ಡೀಸೆಲ್, ಜಾಕ್, ಜಾಕ್ ರಾಡ್, ಗ್ರಿಸ್ ಗನ್ ಮತ್ತು ಸ್ಪಾನರ್‍ ಇತ್ಯಾದಿ ಕಳುವಾಗಿರುತ್ತದೆ. ದಿನಾಂಕ ೨೫-೦೮-೨೦೦೮ ರಂದು ರಾತ್ರಿ ಮೂರು ಲಾರಿಗಳನ್ನು ಮೇಲ್ಕಂಡ ಸ್ಥಳದಲ್ಲಿ ನಿಲ್ಲಿಸಿದ್ದಾಗ ಯಾರೋಕಳ್ಳರು ಲಾರಿಗಳಲ್ಲಿದ್ದ ಒಟ್ಟು ೧೮೦ ಲೀಟರ್‍ ಡೀಸೆಲ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಕಳವು ಮಾಡಿಕೊಂಡು ಹೊಗಿರುತ್ತಾರೆ.  ಕಳುವಾದ ವಸ್ತುಗಳ ಒಟ್ಟು ಬೆಲೆ ರೂ. ೯,೦೦೦/ ಆಗಿರುತ್ತದೆ.

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು:ಇಲ್ಲ

 ರಸ್ತೆ ಅಪಘಾತಗಳು: ೦೪

-ಮಾರಣಾಂತಿಕ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೫-೦೮-೨೦೦೮ ರಂದು ೨೪೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ಪಟ್ಟಣದ ನ್ಯೈಟೌನ್ ವಾಸಿ ಎ.ಧೀರೇಶ್ ಎಂಬುವರು ಉಮೇಶ್, ಶೋಭಾ ಮತ್ತು ಮಂಜುಳಾ ಎಂಬುವರೊಡನೆ ತಮ್ಮ ಕಾರ್‍ ಸಂಖ್ಯೆ ಕೆಎ-೦೨-ಎಂಬಿ-೨೨೫೪ ವಾಹನದಲ್ಲಿ ಬೆಂಗಳೂರಿನಿಂದ ಬಂಗಾರಪೇಟೆಗೆ ಬರುವ ಸಲುವಾಗಿ ಎನ್.ಹೆಚ್ ೦೪ ಕೆಂದಟ್ಟಿ ಗ್ರಾಮದ ಗೇಟ್ ಬಳಿ ಬರುತ್ತಿದ್ದರು ದಾವೂದ್ ಎಂಬುವರು ಕಾರನ್ನು ಚಾಲನೆ ಮಾಡುತ್ತಿದ್ದರು.   ಆ ಸಮಯದಲ್ಲಿ ಎದುರುಗಡೆ ಹೋಗುತ್ತಿದ್ದ ಲಾರಿ ಸಂಖ್ಯೆ ಎಪಿ-೦೩-ಯು-೫೦೪೧ ರ ಚಾಲಕ ತನ್ನ ಲಾರಿಗೆ ಅಜಾಗರೂಕತೆಯಿಂದ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ ಪರಿಣಾಮ ಕಾರು ಲಾರಿಗೆ ಡಿಕ್ಕಿ ಹೊಡೆದಿರುತ್ತದೆ. ಇದರ ಪರಿಣಾಮ ಕಾರಿನ ಚಾಲಕ ದಾವೂದ್ ಮತ್ತು ಕಾರಿನಲ್ಲಿದ್ದ ಇತರರಿಗೆ ತೀವ್ರಗಾಯಗಳಾಗಿದ್ದು ಚಿಕಿತ್ಸೆಗಾಗಿ ಕೋಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿದ್ದು ಈ ಪೈಕಿ ಚಾಲಕ ದಾವೂದ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. 

-ಸಾಧಾರಣ: ೦೩

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೫-೦೮-೨೦೦೮ ರಂದು ೧೩೦೦ ಗಂಟೆ ಸಮಯದಲ್ಲಿ ಕೋಲಾರ  ತಾಲೂಕು ತೊಟ್ಲಿ ಗ್ರಾಮದ ವಾಸಿಯಾದ ಸಂಪತ್ ಕುಮಾರ್‍ ಎಂಬುವರು ತಮ್ಮ ಹೀರೋ ಹೋಂಡಾ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೭-೮೧೭೮ ರಲ್ಲಿ ಕೋಲಾರ – ಚಿಂತಾಮಣಿ ರಸ್ತೆಯ ಮೂಂರಾಡಹಳ್ಳಿ ಗೇಟ್ ಬಳಿ ಬರುತ್ತಿದ್ದರು.  ಅ ಸಮಯದಲ್ಲಿ ಬಂದ ಕ್ಷಷರ್‍ ವಾಹನ  ಸಂಖ್ಯೆ ಎಪಿ-೦೩-ಹೆಚ್-೭೫೬೫  ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ  ಡಿಕ್ಕಿ ಹೊಡೆಸಿರುತ್ತಾನೆ.  ಇದರ ಪರಿಣಾಮವಾಗಿ ಸಂಪತ್ ಕುಮಾರ್‍ ರವರಿಗೆ ತೀವ್ರವಾದ ಗಾಯಗಳಾಗಿರುತ್ತವೆ.  

 

ಮಾಲೂರು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ      ೨೫-೦೮-೨೦೦೮ ರಂದು ೧೦೧೫ ಗಂಟೆ ಸಮಯದಲ್ಲಿ ಹೊಸಕೋಟೆ ತಾಲೂಕು ಶೀಗಹಳ್ಳಿ ದಿನ್ನೂರು ಗ್ರಾಮದ ವಾಸಿಯಾದ ನಾಗರಾಜ ರವರು ತಮ್ಮ ಪತ್ನಿಯೊಂದಿಗೆ ಮಾಲೂರು ತಾಲೂಕು ಚಿಕ್ಕತಿರುಪತಿ ದೇವಸ್ಥಾನದ ಮುಂದೆ ತಮ್ಮ ಸ್ಕೂಟರ್‍ ಸಂಖ್ಯೆ ಕೆಎ-೦೩-ಇಡಿ-೮೬೯೭ ರಲ್ಲಿ  ಹೋಗುತ್ತಿದ್ದರು.     ಅ ಸಮಯದಲ್ಲಿ ಎದರುಗಡೆಯಿಂದ ಬಂದ ಟ್ರಾಕ್ಟರ್‍  ಸಂಖ್ಯೆ ಕೆಎ-೦೭-ಟಿ-೬೨೮೮ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸ್ಕೂಟರ್‍ಗೆ ಡಿಕ್ಕಿ ಹೊಡೆಸಿರುತ್ತಾನೆ.  ಇದರ ಪರಿಣಾಮವಾಗಿ ನಾಗರಾಜ್ ರವರಿಗೆ ಎಡಕಾಲು, ಎಡಗೈ ಮತ್ತು ಸೊಂಟಕ್ಕೆ ಗಾಯಗಳಾಗಿರುತ್ತವೆ. 

 

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೧೯-೦೮-೨೦೦೮ ರಂದು ೧೧೩೦ ಕ್ಕೆ  ಮುಳಬಾಗಿಲು ಪಟ್ಟಣದ ವಾಸಿಯಾದ ನೂರ್‍ ಪಾಷಾ ಎಂಬುವರು ಕೆ.ಎಸ್.ಆರ್‍.ಟಿ.ಸಿ. ಬಸ್ ಸಂಖ್ಯೆ ಕೆಎ-೦೭-ಎಫ್-೧೦೩೦ ರಲ್ಲಿ ಮುಳಬಾಗಿಲು ಕಡೆಯಿಂದ ಹೊರಟು ಲಕ್ಷ್ಮೀಸಾಗರ ಗೇಟ್ ಬಳಿ ಬಸ್ ನಿಂದ ಇಳಿಯುತ್ತಿದ್ದರು. ಅ ಸಮಯದಲ್ಲಿ ಬಸ್ ಚಾಲಕ ಬಸ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮವಾಗಿ ಬಸ್ ನ ಹಿಂಬದಿಯ ಚಕ್ರ ನೂರ್‍ ಪಾಷಾ ರವರ ಎಡಕಾಲಿನ ಮೇಲೆ ಹರಿದು ರಕ್ತಗಾಯವಾಗಿರುತ್ತದೆ.  ಬಸ್ ಚಾಲಕ ಬಸ್ ನ್ನು ಸ್ಥಳದಲ್ಲಿ ನಿಲ್ಲಿಸದೆ ಹೊರಟು ಹೋಗಿರುತ್ತಾನೆ.

 

ಮೋಸ / ವಂಚನೆ ಪ್ರಕರಣಗಳು: ೦೧

 

ನಂಗಲಿ ಪೊಲೀಸ್ ಠಾಣೆಯಲ್ಲಿ ಹಣ ವಂಚನೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೩-೦೬-೨೦೦೮ ರಿಂದ ೨೧-೦೮-೨೦೦೮ ರ ಅವಧಿಯಲ್ಲಿ ನಂಗಲಿ ಎಸ್.ಬಿ.ಎಂ. ಶಾಖೆಯಲ್ಲಿ ಜವಾನನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಾಧಿಕ್ ಖಾನ್ ಎಂಬುವರು ಮುಳಬಾಗಿಲು ಪಟ್ಟಣದ ವಾಸಿ ಮಸೂದ್ ಅಹ್ಮದ್ ರವರ ಖಾತೆ ಸಂಖ್ಯೆ ೫೪೦೩೪೨೮೩೯೪೨ ಕ್ಕೆ ಅಧಿಕಾರಿಗಳು ಇಲ್ಲದೆ ಇದ್ದ ಸಮಯದಲ್ಲಿ ವಿವಿಧ ಖಾತೆಗಳಿಂದ ಒಟ್ಟು ೨,೬೫,೦೦೦/- ರೂಗಳನ್ನು ವರ್ಗಾವಣೆ ಮಾಡಿ ಭ್ಯಾಂಕಿಗೆ ಮೋಸ ಮಾಡಿರುತ್ತಾನೆ.  ಈ ಬಗ್ಗೆ ನಂಗಲಿ ಶಾಖೆಯ ಎಸ್.ಬಿ.ಎಂ. ಭ್ಯಾಂಕಿನ ವ್ಯವಸ್ಥಾಪಕರಾದ  ಶ್ರೀ ಅಶೋಕ್ ಕುಮಾರ್‍ ರವರು ದೂರು ದಾಖಲಿಸಿರುತ್ತಾರೆ.

 

ಕೊಲೆಗೆ ಪ್ರಯತ್ನ:  ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಮುಳಬಾಗಿಲು ಟೌನ್ ಬಸ್ ನಿಲ್ದಾಣದ ಬಳಿ ಕೃತ್ಯ ನಡೆದಿರುತ್ತದೆ.  ದಿನಾಂಕ ೨೫-೦೮-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ಮುಳಬಾಗಿಲು ವಿವೇಕಾನಂದ ನಗರದ ವಾಸಿ ಅಶೋಕ್ ಎಂಬುವರು ಬಸ್ ನಿಲ್ದಾಣದ ಬಳಿ ನಿಂತಿದ್ದರು.  ಆ ಸಮಯದಲ್ಲಿ ಅಲ್ಲಿಗೆ ಬಂದ ಅಂಬರೀಶ್ ಮತ್ತು ಕೆಂಬೋಡಿ ಗ್ರಾಮದ ವಾಸಿ ವೆಂಕಟೇಶ್ ಎಂಬುವರು ಅಶೋಕ್ ಎಂಬುವರ ಮೇಲೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ರೇಜರ್‍ ನಿಂದ ಹೊಡೆದು ಗಾಯಪಡಿಸಿ ಪ್ರಾಣಬೆದರಿಕೆ ಹಾಕಿರುತ್ತಾರೆ.  ಹಳೇವೈಷಮ್ಯ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.

ಇತರೆ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಪ್ರಾಣಬೆದರಿಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೫-೦೮-೨೦೦೮ ರಂದು ಮುಳಬಾಗಿಲು ಪಟ್ಟಣದ ವಾಸಿಯಾದ ಆಶ್ವಥ ಎಂಬುವರು ತಮ್ಮ ಆಟೋ ದಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಪಟ್ಟಣದ ಗುಣಿಗುಂಟಿಪಾಳ್ಯದ ಬಳಿ ಹೋಗುತ್ತಿದ್ದರು. ಅ ಸಮಯದಲ್ಲಿ ಬಂದ ಆಟೋ ಸಂಖ್ಯೆ ಕೆಎ-೧೬-೪೫೭೩ ರ ಚಾಲಕನಾದ ತಬರೇಜ್ ಪಾಷಾ ಎಂಬುವನು  ತನ್ನ ವಾಹನವನ್ನು ವೇಗವಾಗಿ ಚಲಿಸಿ ರಸ್ತೆಯಲ್ಲಿದ್ದ ನೀರನ್ನು ಚಲ್ಲಿದ್ದು ಇದನ್ನು ಪ್ರಶ್ನಿಸಿದ  ಆಶ್ವಥ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು  ಆಟೋ ಅಡಗಟ್ಟಿ ಪ್ರಾಣ ಬೆದರಿಕೆ ಹಾಕಿರುತ್ತಾನೆ.

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು: ಇಲ್ಲ     

ವ್ಯಕ್ತಿ ಕಾಣೆ ಪ್ರಕರಣಗಳು: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ಟೌನ್ ಗುಡಿಗುಂಟೆಪಾಳ್ಯದ ವಾಸಿ ತನುಜಾ (೨೮) ಎಂಬುವರು ತಮ್ಮ ಮೂರು ವರ್ಷದ ಮಗ ಶ್ರೀಮಂತ್ ಎಂಬುವರೊಂದಿಗೆ ಕಾಣೆಯಾಗಿರುತ್ತಾರೆ. ದಿನಾಂಕ ೨೧-೦೮-೨೦೦೮ ರಂದು ಆಂದ್ರಪ್ರದೇಶದ ಕದಿರಿಗೆ ತಮ್ಮ ಅಕ್ಕನ ಮನೆಗೆ ಹೋಗುವ ಸಲುವಾಗಿ ಹೊರಟ ಇವರು ಹಿಂತಿರುಗಿ ಬಾರದೇ ಅವರ ಅಕ್ಕನ ಮನೆಗೂ ಸಹಾ ಹೋಗದೇ ಕಾಣೆಯಾಗಿರುತ್ತಾರೆ. 

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:   ಇಲ್ಲ

-ಸ್ಥಳ ದಂಡ ಮೊತ್ತ:  ಇಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

 

 

 

 

 


ದಿನದ ಅಪರಾಧಗಳ ಪಕ್ಷಿನೋಟ ೨೫ ನೇ ಆಗಸ್ಟ್ ೦೮

August 25, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೫-೦೮-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಟೆಲಿಪೋನ್ ತಂತಿ ಕಳುವಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೮-೨೦೦೮ ರಂದು ಬೆಳಿಗ್ಗೆ ೧೦೦೦ ಗಂಟೆ ಸಮಯದಲ್ಲಿ ಟಮಕ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ-೪ ರ ೨೬೧ ನೇ ಬ್ರಿಡ್ಜ್ ಬಳಿ ಅಳವಡಿಸಿದ್ದ ರೂ. ೨,೮೦೦/- ಬೆಲೆ ಬಾಳುವ ೨೦೦ ಜೊತೆ ೧೦ ಮೀಟರ್‍ ಕೇಬಲ್ ವೈರನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಬಿ.ಎಸ್.ಎನ್.ಎಲ್. ಕೋಲಾರ ವಿಭಾಗದ ಎಸ್.ಡಿ.ಎ.ರವರಾದ ಶ್ರೀ ದತ್ತಾತ್ರೇಯಡು ರವರು ದೂರು ದಾಖಲಿಸಿರುತ್ತಾರೆ.

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು:ಇಲ್ಲ

ರಸ್ತೆ ಅಪಘಾತಗಳು: ೦೩

-ಮಾರಣಾಂತಿಕ: ೦೧

ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೮-೨೦೦೮ ರಂದು ಕೋಲಾರ ನಗರದ ವಾಸಿ ಜಾವಿದ್ ಪಾಷಾ ಮತ್ತು ಅವರ ಮಗ ೫ ವರ್ಷದ ಮೊಹ್ಮದ್ ಖಯುಬ್ ಎಂಬುವರು ಕೋಲಾರ ನಗರದ ಷಾಹೀದ್ ನಗರ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅ ಸಮಯದಲ್ಲಿ ಎದರುಗಡೆಯಿಂದ ಬಂದ ಕೆಎ-೦೭-೩೬೮೪ ರ ನೀರಿನ ಟ್ಯಾಂಕರ್‍ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮೊಹ್ಮದ್ ಖಯುಬ್ ರವರ ಮೇಲೆ ಎಡಗಡೆ ಚಕ್ರವನ್ನು ಹರಿಸಿದ ಪರಿಣಾಮವಾಗಿ ತಲೆಗೆ ತೀವ್ರವಾದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಟ್ಯಾಂಕರ್‍ ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿರುತ್ತಾನೆ.

-ಸಾಧಾರಣ: ೦೨

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೮-೨೦೦೮ ರಂದು ೧೧೩೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಎಮ್ಮೆನತ್ತ ಗ್ರಾಮದ ವಾಸಿಯಾದ ವಿಶ್ವನಾಥಗೌಡ ಎಂಬುವರು ತಮ್ಮ ದ್ವಿಚಕ್ರ ವಾಹನ ಸಂಖ್ಯೆ ಕೆಎ-೨೭-ಇ-೩೨೯೬ ರಲ್ಲಿ ಮುಳಬಾಗಿಲು ಪಟ್ಟಣದ ಗುನಿಗುಂಟಿಪಾಳ್ಯ ವೃತ್ತದ ಬಳಿ ಬರುತ್ತಿದ್ದರು. ಅ ಸಮಯದಲ್ಲಿ ಬಂದ ಟಾಟ ಸುಮೋ ವಾಹನ ಸಂಖ್ಯೆ ಕೆಎ-೧೩-ಎಂ-೨೦೪೫ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ವಿಶ್ವನಾಥಗೌಡ ರವರಿಗೆ ಡಿಕ್ಕಿ ಹೊಡೆಸಿರುತ್ತಾನೆ. ಇದರ ಪರಿಣಾಮವಾಗಿ ಅವರ ಬಲಬುಜ ಮತ್ತು ಮೊಣಕೈಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ. ಟಾಟ ಸುಮೋ ಚಾಲಕ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಹೊರಟು ಹೋಗಿರುತ್ತಾನೆ.

ನಂಗಲಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೦೮-೨೦೦೮ ರಂದು ೦೮೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ತೊಂಡಹಳ್ಳಿ ಗ್ರಾಮದ ವಾಸಿಯಾದ ತಿಪ್ಪರಾಜು ಮತ್ತು ಅವರ ತಂದೆ ಹನುಮರಾಜು ರವರು ರಾಷ್ಟ್ರೀಯ ಹೆದ್ದಾರಿ ೪ ಹಳೇಕುಪ್ಪ ಗ್ರಾಮದ ಬಸ್ ಸ್ಟಾಂಪ್ ಬಳಿ ಕಡೆ ಹೋಗುತ್ತಿದ್ದರು. ಅ ಸಮಯದಲ್ಲಿ ಮುಳಬಾಗಿಲು ಕಡೆಯಿಂದ ಬಂದ ಕ್ಡಾಲೀಸ್ ವಾಹನ ಸಂಖ್ಯೆ ಕೆಎ-೦೨-ಪಿ.೨೧೩೭ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹನುಮರಾಜು ರವರಿಗೆ ಡಿಕ್ಕಿ ಹೊಡೆಸಿರುತ್ತಾನೆ. ಇದರ ಪರಿಣಾಮವಾಗಿ ಅವರ ತಲೆ ಮತ್ತು ಸೊಂಟಕ್ಕೆ ಗಾಯಗಳಾಗಿರುತ್ತವೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

ವೇಮಗಲ್ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೦೮-೨೦೦೮ ರಂದು ೧೭೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಕೆ.ಡಿ.ಹೊಸಹಳ್ಳಿ ಗ್ರಾಮದ ವಾಸಿಯಾದ ನಾರಾಯಣಸ್ವಾಮಿ ಎಂಬುವರು ತಮ್ಮ ಮನೆಯ ಮುಂದೆ ಚಂದ್ರಂಕಿಗಳನ್ನು ಗಾಡಿಗೆ ತುಂಬುತ್ತಿದ್ದರು. ಅ ಸಮಯದಲ್ಲಿ ಅದೇ ಗ್ರಾಮದ ವಾಸಿಯಾದ ಮಂಜುನಾಥ ಎಂಬುವರ ಟ್ರಾಕ್ಟರ್‍ ನಾರಾಯಣಸ್ವಾಮಿರವರ ವಾಹನಕ್ಕೆ ತಗಲಿದ್ದು ಇದನ್ನು ಪ್ರಶ್ನಿಸಿದಕ್ಕಾಗಿ ಮಂಜುನಾಥ ಮತ್ತು ಇತರೆ ೬ ಜನರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಗಲಾಟೆ ಮಾಡಿ ಕಲ್ಲು ಮತ್ತು ದೊಣ್ಣೆಗಳಿಂದ ಹೊಡೆದು ಗಾಯಪಡಿಸಿರುತ್ತಾರೆ.

ಹಲ್ಲೆ: ಇಲ್ಲ

ಇತರೆ: ೦೧

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪೋನ್ ಮೂಲಕ ಪ್ರಾಣ ಬೆದರಿಕೆ ಹಾಕಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೦೮-೨೦೦೮ ಕ್ಕೆ ಒಂದು ತಿಂಗಳ ಹಿಂದಿನಿಂದ ಯಾರೋ ಮೊಬೈಲ್ ಸಂಖ್ಯೆಗಳಾದ ೯೯೧೬೪೦೯೭೪೮, ೯೪೪೪೩೨೩೨೨೮ ಮತ್ತು ೯೪೪೯೮೮೧೫೭೩ ಗಳ ಮೂಲಕ ಮಾಲೂರು ತಾಲೂಕು ಎಂ.ಹೊಸಹಳ್ಳಿ ಗ್ರಾಮದ ವಾಸಿಯಾದ ನಾಗರಾಜ್ ಎಂಬುವರ ಮನೆಯ ದೂರವಾಣಿಗೆ ಕರೆ ಮಾಡಿ ಅವರ ಹೆಂಡತಿ ಯೊಂದಿಗೆ ಅಶ್ಲೀಲವಾಗಿ ಮಾತನಾಡಿ ಮಾನಸಿಕವಾಗಿ ನೋವನ್ನುಂಟು ಮಾಡಿ ಪ್ರಾಣಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ನಾಗರಾಜ್ ರವರು ದೂರು ದಾಖಲಿಸಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹುಡಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಕೋಡಿರಾಮಸಂದ್ರ ಗ್ರಾಮದ ವಾಸಿಯಾದ ಅಶ್ವಥಪ್ಪ ಎಂಬುವರ ಮಗಳಾದ ಕುಮಾರಿ ಸಂಧ್ಯಾ (೧೮) ಎಂಬವರು ದಿನಾಂಕ ೨೪-೦೮-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ನೀರು ತರುವುದಾಗಿ ಮನೆಯಿಂದ ಹೊರಗೆ ಹೋದವಳು ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾಳೆ. ಈ ಬಗ್ಗೆ ಅಶ್ವಥಪ್ಪರವರು ದಿನಾಂಕ ೨೫-೦೮-೨೦೦೮ ರಂದು ದೂರು ದಾಖಲಿಸಿರುತ್ತಾರೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೧೨

-ಸ್ಥಳ ದಂಡ ಮೊತ್ತ: ರೂ.೧,೫೦೦/-

-ದ್ವಿಚಕ್ರವಾಹನದಲ್ಲಿ ಮೂರು ಜನ ಪ್ರಯಾಣಿಸಿರುವುದರ ಬಗ್ಗೆ ದಾಖಲಾದ ಒಟ್ಟು ಪ್ರಕರಣಗಳು: ೦೬  ದಂಡ ಮೊತ್ತ: ರೂ. ೬೦೦/

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ಜೂಜು ಕೇಂದ್ರದ ಮೇಲೆ ದಾಳಿ: ೭ಜನರ ಬಂಧನ, ೧೨೫೦/- ರೂ ವಶ

August 25, 2008

ಶ್ರೀ.ದಾಸಪ್ಪ, ಸಿ.ಪಿ.ಐ. ಶ್ರೀನಿವಾಸಪುರ ವೃತ್ತ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ರಾಯಲ್ಪಾಡು ಪೊಲೀಸ್ ಠಾಣೆಯ ಪಿ.ಎಸ್.ಐ. ಶ್ರೀ ವೆಂಕಟೇಗೌಡ ಮತ್ತು ಸಿಬ್ಬಂದಿಯವರೊಂದಿಗೆ ಶ್ರೀನಿವಾಸಪುರ ತಾಲೂಕು ಬಲ್ತಮರಿ ಗ್ರಾಮದ ಅಂಗಳದಲ್ಲಿ ದಾಳಿ ನಡೆಸಿ ಅಲ್ಲಿ ೭ ಹುಣಸೇ ಬೀಜಗಳ ಸಹಾಯದಿಂದ ಹಣವನ್ನು ಪಣವಾಗಿ ಇಟ್ಟು ಒಂಟಿ ಜೋಡಿ ಜೂಜಾಟದಲ್ಲಿ ನಿರತ ವಾಗಿದ್ದ ೭ ಜನರನ್ನು ಬಂಧಿಸಿ ಅವರಿಂದ ಪಣವಾಗಿ ಇಟ್ಟಿದ್ದ ಹಣ ರೂ.೧೨೫೦/- ಗಳನ್ನು ವಶಪಡಿಸಿಕೊಂಡು ೭ ಜನರನ್ನು ಬಂಧಿಸಿರುತ್ತಾರೆ.

 

ಬಂಧಿತ ವ್ಯಕ್ತಿಗಳ ವಿವರ ಈ ಕೆಳಕಂಡಂತೆ ಇರುತ್ತದೆ.

 

೧) ಶಂಕರಪ್ಪ ತಂದೆ ಮುನಿಸ್ವಾಮಿ, ೨೮ ವರ್ಷ, ಜೋಡಿಕೊತ್ತಪಲ್ಲಿ, ಶ್ರೀನಿವಾಸಪುರ ತಾಲೂಕು.

೨) ಶ್ರೀನಿವಾಸ ತಂದೆ ಮುನಿಸ್ವಾಮಿರೆಡ್ಡಿ, ಕುರುಮಾಕಲಪಲ್ಲಿ, ಶ್ರೀನಿವಾಸಪುರ ತಾಲೂಕು

೩) ನಾರಾಯಣಸ್ವಾಮಿ ತಂದೆ ರಾಮಪ್ಪ, ತಿಮ್ಮಸಂದ್ರ, ಶ್ರೀನಿವಾಸಪುರ ತಾಲೂಕು

೪) ವೆಂಕಟರೆಡ್ಡಿ ತಂದೆ ಲೇಟ್ ಚೌಡಪ್ಪ, ಶೆಟ್ಟಿಹಳ್ಳಿ, ಶ್ರೀನಿವಾಸಪುರ ತಾಲೂಕು

೫) ಸೈಯದ್ ಅಜೀಂ ತಂದೆ ಅಬ್ದುಲ್ ರಹಿಂ, ತಾಡಗಲ್ ಕ್ರಾಸ್, ಶ್ರೀನಿವಾಸಪುರ ತಾಲೂಕು

೬) ಉತ್ತಣ್ಣ ತಂದೆ ವೆಂಕಟಪ್ಪ, ಕಪ್ಪಳ್ಳಿ, ,ಶ್ರೀನಿವಾಸಪುರ ತಾಲೂಕು

೭) ಕೃಷ್ಣಾರೆಡ್ಡಿ ತಂದೆ ಚೌಡಪ್ಪ, ನೀಲಟೂರು, ಶ್ರೀನಿವಾಸಪುರ ತಾಲೂಕು.

 

 

 


ದಿನದ ಅಪರಾಧಗಳ ಪಕ್ಷಿನೋಟ ೨೪ ನೇ ಆಗಸ್ಟ್ ೦೮

August 24, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೪-೦೮-೨೦೦೮ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೇವಸ್ಥಾನದಲ್ಲಿ ಹುಂಡಿ ಕಳುವಿಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.      ದಿನಾಂಕ ೨೩-೦೮-೨೦೦೮ ರಂದು ರಾತ್ರಿ ಯಾರೋ ಕಳ್ಳರು ಕೋಲಾರ ತಾಲೂಕು ವಕ್ಕಲೇರಿ ಮಾರ್ಕೊಂಡೇಶ್ವರ ಬೆಟ್ಟದ ಮೇಲಿರುವ ದೇವಸ್ಥಾನದ ಬೀಗವನ್ನು ಹೊಡೆದು ಒಳಗೆ ಪ್ರವೇಶ ಮಾಡಿ ಹುಂಡಿಯಲ್ಲಿದ್ದ ಸುಮಾರು ರೂ.೧೦೦೦/- ವನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ.  ಈ ಬಗ್ಗೆ ದೇವಸ್ಥಾನದ ಅರ್ಚಕರಾದ ಶ್ರೀ ರವಿಶಂಕರ್‍ ದೀಕ್ಷೀತ್ ರವರು ದೂರು ದಾಖಲು ಮಾಡಿರುತ್ತಾರೆ.

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು:ಇಲ್ಲ

 ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೨

ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೩-೦೮-೨೦೦೮ ರಂದು ೧೦೪೫ ಗಂಟೆ ಸಮಯದಲ್ಲಿ ಕೋಲಾರ ನಗರದ ಪೇಟೇಚಾಮನಹಳ್ಳಿ ವಾಸಿ ಮುನಿಕೃಷ್ಣಪ್ಪ  ಎಂಬುವರು ತನ್ನ ಟಿವಿಎಸ್ ಸೂಪರ್‍ ಎಕ್ಸೆಲ್ ಮೊಪೆಡ್ ಸಂಖ್ಯೆ ಕೆಎ-೦೭-ಜೆ-೨೨೮ ರಲ್ಲಿ ರಾಷ್ಟ್ರೀಯ ಹೆದ್ದಾರಿ ೪ ಪೇಟೇಚಾಮನಹಳ್ಳಿ ಕ್ರಾಸ್ ಬಳಿ ಹೋಗುತ್ತಿದ್ದರು.  ಆ ಸಮಯದಲ್ಲಿ ಸ್ಯಾಂಟ್ರೋ ಕಾರು ಸಂಖ್ಯೆ ಕೆಎ-೦೫-ಎಂಜೆ-೨೨೫೯ ಚಾಲಕ ವಿನಯ್ ಎಂಬುವನು ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮುನಿಕೃಷ್ಣಪ್ಪ ರವರಿಗೆ ಡಿಕ್ಕಿ ಹೊಡೆಸಿರುತ್ತಾನೆ . ಇದರ ಪರಿಣಾಮ ಮುನಿಕೃಷ್ಣಪ್ಪ ರವರಿಗೆ ತಲೆಗೆ ಗಾಯಗಳುಂಟಾಗಿ ಚಿಕಿತ್ಸೆಗಾಗಿ ಕೋಲಾರದ ನವರತ್ನ ನರ್ಸಿಂಗ್‌ ಹೋಂಗೆ ದಾಖಲಾಗಿರುತ್ತಾರೆ.

 

 ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೩-೦೮-೨೦೦೮ ರಂದು ೧೮೪೫ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಕೋಡಿರಾಮಸಂದ್ರ ಗ್ರಾಮದ ಸುಬ್ರಮಣಿ  ಎಂಬುವರು ತನ್ನ ಹೀರೋ ಹೋಂಡಾ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೭-ಕೆ-೨೯೧೬ ರಲ್ಲಿ ರಾಷ್ಟ್ರೀಯ ಹೆದ್ದಾರಿ ೪ ಬೇತಮಂಗಲ ಕ್ರಾಸ್ ಬಳಿ ಹೋಗುತ್ತಿದ್ದರು.  ಆ ಸಮಯದಲ್ಲಿ ಮಾರುತಿ ಕಾರು ಸಂಖ್ಯೆ ಕೆಎ-೦೫-ಎಲ್-೭೦೩೧ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸುಬ್ರಮಣಿ ರವರಿಗೆ ಡಿಕ್ಕಿ ಹೊಡೆಸಿರುತ್ತಾನೆ . ಇದರ ಪರಿಣಾಮ ಸುಬ್ರಮಣಿ ರವರಿಗೆ ತಲೆಗೆ ಗಾಯಗಳುಂಟಾಗಿ ಚಿಕಿತ್ಸೆಗಾಗಿ ಕೋಲಾರದ ಆರ್‌.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ೦೧

ಮಾಲೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಈ ಕೃತ್ಯವು ಮಾಲೂರು ತಾಲುಕು ಮಿಂಡಹಳ್ಳ ಗ್ರಾಮದಲ್ಲಿ ನಡೆದಿರುತ್ತದೆ.  ಮಾಲೂರು ನಗರ ವಾಸಿ ಸೈಯದ್ ಇಸ್ಮಾಯಿಲ್ ಎಂಬುವರು ದಿನಾಂಕ ೨೩-೦೮-೨೦೦೮ ರಂದು ೧೪೦೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ಮಿಂಡಹಳ್ಳಿ ಗ್ರಾಮದ ಬಳಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಅ ಸಮಯದಲ್ಲಿ ಮಿಂಡಹಳ್ಳಿ ಗ್ರಾಮದ ವಾಸಿಯಾದ ಜಬೀ ಎಂಬುವನು ಅಲ್ಲಿಗೆ ಬಂದು ಹಳೇದ್ವೇಷದ ಹಿನ್ನಲೆಯಲ್ಲಿ ಸೈಯದ್ ಇಸ್ಮಾಯಿಲ್ ನೊಂದಿಗೆ ಜಗಳ ತೆಗೆದು ತನ್ನ ಬಳಿ ಇದ್ದ ಲಾಂಗನಿಂದ ಬಲಮೊಣಕಾಲಿಗೆ ಹೊಡೆದು ನಂತರ ಹೊಟ್ಟೆಯ ಭಾಗಕ್ಕೆ ತಿವಿದು ಕರುಳು ಹೊರಗಡೆ ಬರುವ ಹಾಗೆ ತೀವ್ರ ಗಾಯ ಮಾಡಿರುತ್ತಾನೆ.  ಈ ಕೃತ್ಯವು ಅದೇ ಗ್ರಾಮದ ವಾಸಿಗಳಾದ ಶಫೀ ಮತ್ತು ಇತರೆ ೩ ಜನರ ಕುಮ್ಮಕಿನಿಂದ ನಡೆದಿರುವುದಾಗಿ ತಮ್ಮ ದೂರಿನಲ್ಲಿ ಸೈಯದ್ ಇಸ್ಮಾಯಿಲ್ ತಿಳಿಸಿರುತ್ತಾರೆ.

ದೊಂಬಿ: ೦೧

ವೇಮಗಲ್ ಪೊಲೀಸ್ ದೊಂಬಿಗೆ ಸಂಬಂಧಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೩-೦೮-೨೦೦೮ ರಂದು ೧೭೦೦ ಗಂಟೆ ಸಮಯದಲ್ಲಿ ಬೆಳಮಾರನಹಳ್ಳಿ ಮತ್ತು ಬೆಳ್ಳೂರು ಗ್ರಾಮಸ್ಥರು ವೇಮಗಲ್ ಗ್ರಾಮಪಂಚಾಯ್ತಿ ಮುಂಬಾಗದಲ್ಲಿ ಕುಳಿತು ಆಟೋ ಗಳ ವಿಚಾರದಲ್ಲಿ ಮಾತನಾಡುತ್ತಿದ್ದರು. ಆ ಸಮಯಲ್ಲಿ ಅಟೋ ಚಾಲಕನಾದ ಅಮರನಾಥ ಮತ್ತು ಇತರೆ ೩೦ ಜನರು ಅಕ್ರಮ ಕೂಟ ಕಟ್ಟಿಕೊಂಡು ಬಂದು ಕಲ್ಲು ಮತ್ತು ಇಟ್ಟಿಗೆಗಳಿಂದ ಮುನಿರುದ್ರಪ್ಪ ಮತ್ತು ಇತರರಿಗೆ ಹೊಡೆದು ಗಾಯ ಪಡಿಸಿರುತ್ತಾರೆ.

ಹಲ್ಲೆ: ೦೨

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಮುಳಬಾಗಿಲು ತಾಲೂಕು ನಾಚಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೨೩-೦೮-೨೦೦೮ ರಂದು ೧೭೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ನಾಚಹಳ್ಳಿ ಗ್ರಾಮದ ವಾಸಿ ಪಾಪಲಮ್ಮ ಎಂಬುವರು ತಮ್ಮ ಮನೆಯ ಬಳಿ ಕಸ ಗುಡಿಸುತ್ತಿದ್ದರು. ಆ ಸಮಯದಲ್ಲಿ ಅದೇ ಗ್ರಾಮದ ವಾಸಿ ದಂಡೋರ ಕೃಷ್ಣಪ್ಪ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಮುಖಕ್ಕೆ ಹೊಡೆದಿರುತ್ತಾನೆ. ಇದರ ಪರಿಣಾಮ ಪಾಪಲಮ್ಮ ರವರ ಹಲ್ಲು ಮುರಿದು   ಗಾಯವಾಗಿದ್ದು ಚಿಕಿತ್ಸೆಗಾಗಿ ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಶ್ರೀನಿವಾಸಪುರ ತಾಲೂಕು ಪುರ್‍ನಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೨೨-೦೮-೨೦೦೮ ರಂದು ೧೦೧೫ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಳೂಕು ಪುರ್‍ನಹಳ್ಳಿ ಗ್ರಾಮದ ವಾಸಿ ಅಪ್ಪರೆಡ್ಡಿ ಎಂಬುವರಿಗೆ ಅದೇ ಗ್ರಾಮದ ವಾಸಿಗಳಾದ ನಾಗರಾಜ ಮತ್ತು ಇತರೇ ಇಬ್ಬರು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ತಲೆಗೆ ಹೊಡೆದು ಗಾಯಪಡಿಸಿರುತ್ತಾರೆ.  ರೇಷ್ಮೆ ಎಲೆ ಕತ್ತರಿಸುವ ಯಂತ್ರದ ಹಣದ ವಿಚಾರವೇ ಈ ಕೃತ್ಯಕ್ಕೆ ಕಾರಣವಾಗಿರುತ್ತಾರೆ.

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು: ಇಲ್ಲ     

ವ್ಯಕ್ತಿ ಕಾಣೆ ಪ್ರಕರಣಗಳು: ೦೧

ನಂಗಲಿ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.   ದಿನಾಂಕ ೧೭-೦೮-೨೦೦೮ ರಂದು ೦೮೩೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಹೆಚ್.ಬೈಯಪ್ಪನಹಳ್ಳಿ ಗ್ರಾಮದ ವಾಸಿ ಸುಧಾಕರ್‍ ಎಂಬುವರ ಅಕ್ಕನ ಮಗಳಾದ ಕುಮಾರಿ ಬಿ.ಎಸ್.ಅರ್ಚನಾ ಎಂಬುವರು ಮನೆ ಬಿಟ್ಟು ಹೊರಗೆ ಹೋದವರು ಇದುವರೆವಿಗೂ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:   ೧೬

-ಸ್ಥಳ ದಂಡ ಮೊತ್ತ:  ರೂ.೨೧೦೦/-

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.