ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೧-೧೦-೨೦೦೮ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ೦೩
ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ಟೌನ್ ಸರ್ಕಾರಿ ಉರ್ದು ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೯-೧೦-೨೦೦೮ ರಂದು ರಾತ್ರಿ ಶಾಲೆಯೊಳಗೆ ಪ್ರವೇಶಿಸಿದ ಯಾರೋ ಕಳ್ಳರು ಶಾಲೆಯಲ್ಲಿದ್ದ ಅಕ್ಕಿ, ಬೇಳೆ ಮತ್ತು ಪುಸ್ತಕಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀಮತಿ ಗೌಸ್ ಉನ್ನೀಸಾ ರವರು ದೂರು ನೀಡಿದ್ದು ಕಳುವಾದ ವಸ್ತುಗಳ ಒಟ್ಟು ಬೆಲೆ ರೂ. ೩೩೭೫-೦೦ ಆಗಿರುತ್ತದೆ.
ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಕಳವು ಯತ್ನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಅಂಗಡಿಯ ಗೋಡೆಯನ್ನು ಕೊರೆದು ಒಳ ನುಗ್ಗಿ ಕಳ್ಳತನ ಮಾಡುವ ಉದ್ದೇಶದಿಂದ ಗೋಡೆಯನ್ನು ಕೊರೆಯುತ್ತಿದ್ದ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿರುತ್ತಾನೆ. ಕೋಲಾರ ನಗರ ಪೊಲೀಸ್ ಠಾಣೆಯ ಪೇದೆಗಳಾದ ವೆಂಕಟರಾಮೇಗೌಡ ಪೇದೆ ೪೫೦ ಮತ್ತು ನಾರಾಯಣಪ್ಪ ಪೇದೆ ೫೨೬ ರವರುಗಳು ದಿನಾಂಕ ೨೮-೧೦-೨೦೦೮ ರಂದು ರಾತ್ರಿ ಗಸ್ತಿನಲ್ಲಿ ಇದ್ದರು. ಆ ಸಮಯದಲ್ಲಿ ವ್ಯಕ್ತಿಯೊಬ್ಬ ದೊಡ್ಡ ಪೇಟೆಯ ಅಮೃತಾ ಜ್ಯೂವೆಲರ್ ಅಂಗಡಿಯ ಗೋಡೆಯನ್ನು ಸುತ್ತಿ ಮತ್ತು ಕಬ್ಬಿಣದ ರಾಡಿಸ ಸಹಾಯದಿಂದ ಕೊರೆಯುತ್ತಿದ್ದು ಈತನನ್ನು ಕಂಡ ಪೊಲೀಸ್ ಸಿಬ್ಬಂದಿ ಕೂಡಲೇ ಹಿಡಿದುಕೊಂಡಿರುತ್ತಾರೆ. ಆರೋಪಿ ಕೋಲಾರ ಕಾರಂಜಿಕಟ್ಟೆಯ ವಾಸಿ ಚಂದ್ರಪ್ಪ ಎಂಬುದಾಗಿ ತಿಳಿದುಬಂದಿದ್ದು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ಟೌನ್ ತ್ಯಾಗರಾಜನಗರದಲ್ಲಿ ಕೃತ್ಯ ಸಂಭವಿಸಿರುತ್ತದೆ. ತ್ಯಾಗರಾಜನಗರದ ವಾಸಿ ಮುನಿಯಪ್ಪ (೪೫) ಎಂಬುವರು ದಿನಾಂಕ ೨೯-೧೦-೨೦೦೮ ರಂದು ತಮ್ಮ ವಾಸದ ಮನೆಗೆ ಬೀಗ ಹಾಕಿಕೊಂಡು ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಹೋಗಿದ್ದರು. ಆ ಸಮಯದಲ್ಲಿ ಇವರ ಮನೆಯ ಬಾಗಿಲನ್ನು ಹೊಡೆದು ಮನೆಯ ಒಳಗೆ ಪ್ರವೇಶಿಸಿದ ಯಾರೋ ಕಳ್ಳರು ಮನೆಯಲ್ಲಿದ್ದ ಒಂದು ಕಲರ್ ಟಿವಿ, ಡಿ.ವಿ.ಡಿ ಇನ್ನಿತರ ಗೃಹಬಳಕೆ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ವಸ್ತುಗಳ ಒಟ್ಟು ಮೌಲ್ಯ ರೂ. ೮,೭೦೦/ ಆಗಿರುತ್ತದೆ.
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ನುಕ್ಕನಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೩೦-೧೦-೨೦೦೮ ರಂದು ೦೫೩೦ ಗಂಟೆ ಸಮಯದಲ್ಲಿ ನುಕ್ಕನಹಳ್ಳಿ ಗ್ರಾಮದ ವಾಸಿ ವಿ.ಎನ್.ಭಾಸ್ಕರ್ ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ ಶ್ರೀನಿವಾಸ, ಪ್ರಕಾಶ ಮತ್ತು ಮುರಳಿ ಎಂಬುವರು ಕೈಗಳಿಂದ, ಮಚ್ಚಿನಿಂದ ಮತ್ತು ದೊಣ್ಣೆಗಳಿಂದ ಹೊಡೆದು ಗಾಯಪಡಿಸಿರುತ್ತಾರೆ. ಅದೇ ದಿನ ಬೆಳಗ್ಗೆ ಸೀಮೆಎಣ್ಣೆ ಕೊಡುವ ವಿಚಾರದಲ್ಲಿ ಪರಸ್ಪರರ ನಡುವೆ ಮಾತುಕತೆಗಳು ನಡೆದಿದ್ದು ಈ ವಿವಾದದ ಹಿನ್ನೆಲೆಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ.
ಇತರೆ: ೦೧
ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಹುಡುಗಿಯ ಅಪಹರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲೂಕು ಚಿಲೇಪಲ್ಲಿ ಗ್ರಾಮದಲ್ಲಿ ವಾಸವಾಗಿರುವ ಹುಡುಗಿ ಅಪಹರಣಕ್ಕೀಡಾಗಿರುತ್ತಾಳೆ. ದಿನಾಂಕ ೨೯-೧೦-೨೦೦೮ ರಂದು ೨೧೩೦ ಗಂಟೆ ಸಮಯದಲ್ಲಿ ಅಪಹರಣಕ್ಕೀಡಾದ ಹುಡುಗಿ ತನ್ನ ತಂದೆಯೊಡನೆ ಚಿಲೇಪಲ್ಲಿ ಗ್ರಾಮದ ಗೇಟ್ ಬಳಿ ಬಸ್ ಇಳಿದು ಬರುತ್ತಿರುವಾಗ ಕೆಎ-೦೭-ಎಂ-೨೨೯೧ ಸಂಖ್ಯೆಯ ವಾಹನದಲ್ಲಿ ಬಂದ ಅದೇ ಗ್ರಾಮದ ವಾಸಿ ವೆಂಕಟರಾಮಪ್ಪ ಹಾಗೂ ಇತರೇ ಮೂರು ಜನರು ಹುಡುಗಿಯನ್ನು ಬಲವಂತವಾಗಿ ವಾಹನದಲ್ಲಿ ಕುಳ್ಳರಿಸಿಕೊಂಡು ಅಪಹರಿಸಿರುತ್ತಾರೆ. ಈ ಬಗ್ಗೆ ಅಪಹರಣಕ್ಕೀಡಾದ ಹುಡುಗಿಯ ತಂದೆ ದೂರು ನೀಡಿದ್ದು ಪ್ರಕರಣ ದಾಖಲಾಗಿರುತ್ತದೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ೪೧
-ಸ್ಥಳ ದಂಡ ಮೊತ್ತ: ರೂ. ೫೫೦೦/
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Posted by kolarpolice
Posted by kolarpolice
Posted by kolarpolice 




