ಹೊಸ ಆಶಯಯೊಂದಿಗೆ ಹೊಸ ವರುಷದ ಶುಭಾಷಯ

December 31, 2008

 

ಕೋಲಾರ ಜಿಲ್ಲಾ ಪೊಲೀಸರ ಪರವಾಗಿ ಸಮಸ್ತರಿಗೂ ಹೊಸ ವರುಷದ ಹಾರ್ಧಿಕ ಶುಭಾಷಯಗಳು

Wish you all a Happy New Year


ದಿನದ ಅಪರಾಧಗಳ ಪಕ್ಷಿನೋಟ ೦೧ ನೇ ಜನವರಿ ೨೦೦೯

December 31, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೧-೦೧-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಮನೆಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ನಗರ ಕಠಾರಿಪಾಳ್ಯದ ವಾಸಿ ಎಸ್.ಜಯಲಕ್ಷ್ಮಿ ಎಂಬುವರು ದಿನಾಂಕ ೨೮-೧೨-೨೦೦೮ ರಂದು ೧೦೦೦ ಗಂಟೆ ಸಮಯದಲ್ಲಿ ಸೀಮಂತ ಕಾರ್ಯಕ್ರಮಕ್ಕಾಗಿ ತಮ್ಮ ಮನೆಗೆ ಬೀಗ ಹಾಕಿಕೊಂಡು ಬಂಡೊಹೊಳೆ ಗ್ರಾಮಕ್ಕೆ ಹೋಗಿದ್ದರು.  ಮನೆಯಲ್ಲಿ ಯಾರೂ ಇಲ್ಲದ ಈ ಸಮಯದಲ್ಲಿ ಮನೆಯ ಡೋರ್‍ ಲಾಕ್ ಮುರಿದು ಮನೆಯೊಳಗೆ ಪ್ರವೇಶಿಸಿದ ಯಾರೋ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣಗಳು ಹಾಗು ನಗದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಜಯಲಕ್ಷ್ಮಿ ರವರು ದಿನಾಂಕ ೩೦-೧೨-೨೦೦೮ ರಂದು ೨೧೩೦ ಗಂಟೆಗೆ ವಾಪಸ್ಸು ಮನೆಗೆ ಬಂದು ನೋಡಿದಾಗ ಕೃತ್ಯ ಬಯಲಿಗೆ ಬಂದಿರುತ್ತದೆ.  ಕಳುವಾದ ಮಾಲಿನ ನಿಖರವಾದ ಬೆಲೆ ತಿಳಿಯಬೇಕಾಗಿರುತ್ತದೆ.

ಸಾಧಾರಣ ಕಳ್ಳತನ: ಇಲ್ಲ  

ವಾಹನ ಕಳ್ಳತನ : ಇಲ್ಲ   

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೦೧-೦೧-೨೦೦೯ ರಂದು ೧೧೪೫ ಗಂಟೆ ಸಮಯದಲ್ಲಿ ಶ್ರೀನಿವಾಸ ಮತ್ತು ನಾಗರಾಜ ಎಂಬುವರು ಹೀರೋಹೋಂಡಾ ಸ್ಪ್ಲೆಂಡರ್‍ ಸಂಖ್ಯೆ ಕೆಎ-೫೧-ಹೆಚ್-೩೪೮೨ ದ್ವಿಚಕ್ರವಾಹನದಲ್ಲಿ ಮುಳಬಾಗಿಲು ಎನ್.ಹೆಚ್ ೪ ರಸ್ತೆಯ ವಿರೂಪಾಕ್ಷ ಗೇಟ್ ಬಳಿ ಬರುತ್ತಿದ್ದರು. ಆ ಸಮಯದಲ್ಲಿ ಕೋಲಾರ ಕಡೆಯಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದ ಕೆ.ಎಸ್.ಆರ್‍.ಟಿ.ಸಿ ಬಸ್ ಸಂಖ್ಯೆ ಕೆಎ-೪೨-ಎಫ್-೮೨ ರ ಚಾಲಕ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿರುತ್ತಾನೆ.  ಇದರ ಪರಿಣಾಮ ದ್ವಿಚಕ್ರವಾಹನ ಸವಾರರಿಗೆ ಗಾಯಗಳಾಗಿದ್ದು ಪ್ರಸ್ತುತ ಕೋಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುತ್ತಾರೆ.                                                                                               

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು: ಇಲ್ಲ 

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:

-ಸ್ಥಳ ದಂಡ ಮೊತ್ತ:

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೩೧ ನೇ ಡಿಸೆಂಬರ್ ೦೮

December 30, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೧-೧೨-೨೦೦೮ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ೦೧

ಮಾಲೂರು ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಗಂಡನೇ ಹೆಂಡತಿಯನ್ನು ಮಚ್ಚಿನಿಂದ ಹೊಡೆದು ಕೊಲೆಗೈದಿರುವ ಘಟನೆ ಮಾಲೂರು ತಾಲೂಕು ಜಗದೇನಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ಜಗದೇನಹಳ್ಳಿ ಗ್ರಾಮದ ವಾಸಿ ಮಂಜುಳಾ (೩೨) ಎಂಬುವರು ಕೊಲೆಗೀಡಾದವರು.  ಮಂಜುಳಾ ರವರಿಗೆ ಜಗದೇನಹಳ್ಳಿಯ ವಾಸಿ ಕಲ್ಲಪ್ಪ (೪೫) ಎಂಬುವರೊಡನೆ ವಿವಾಹವಾಗಿದ್ದು ಕಲ್ಲಪ್ಪ ರವರಿಗೆ ಕುಡಿತದ ಚಟ ಇದ್ದು ಆಸ್ತಿ ಹಾಗೂ ಹಣದ ವಿಚಾರಚಾಗಿ ತನ್ನ ಹೆಂಡತಿಯೊಡನೆ ಆಗಾಗ್ಗೆ ಜಗಳ ಮಾಡಿ ಹೊಡೆಯುತ್ತಿದ್ದು ಈ ವಿಷಯವಾಗಿ ದಿನಾಂಕ ೩೧-೧೨-೨೦೦೮ ರಂದು ೨೨೦೦ ಗಂಟೆ ಸಮಯದಲ್ಲಿ ಮಂಜುಳ ರವರ ಮೇಳೆ ಜಗಳ ತೆಗೆದ ಕಲ್ಲಪ್ಪ ಮಚ್ಚಿನಿಂದ ಹೊಡೆದು ಕೊಲೆ ಮಾಡಿರುತ್ತಾನೆ.  ಆರೋಪಿ ಕಲ್ಲಪ್ಪನನ್ನು ಬಂಧಿಸಲಾಗಿದ್ದು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿರುತ್ತದೆ.

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ  

ವಾಹನ ಕಳ್ಳತನ : ಇಲ್ಲ   

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೪

-ಮಾರಣಾಂತಿಕ: ೦೩

ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೧-೧೨-೨೦೦೮ ರಂದು ೦೭೨೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಶ್ಯಾನಬೋಗನಹಳ್ಳಿ ಗ್ರಾಮದ ವಾಸಿ ಮಧು (೨೭) ಎಂಬುವರು ತನ್ನ ಬಾಬ್ತು ಬಜಾಜ್ ಸಿ.ಟಿ ೧೦೦ ದ್ವಿಚಕ್ರವಾಹನದಲ್ಲಿ ಕೋಡಿಕಣ್ಣೂರು ಕಡೆಯಿಂದ ಬೇತಮಂಗಲ ಜಿಗ್ ಜಾಗ್ ಬಳಿ ಹೋಗುವ ಸಲುವಾಗಿ ಕೋಲಾರ  ಗಾಂಧಿನಗರದ ಬಳಿ ಇರುವ ಪರುಶುರಾಮ ದೇವಾಲಯದ ಮುಂದೆ ಹೋಗುತ್ತಿದ್ದರು. ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಕೆ.ಎಸ್.ಆರ್‍.ಟಿ.ಸಿ ಬಸ್ ಸಂಖ್ಯೆ ಕೆಎ-೪೦-ಎಫ್-೨೪೫ ರ ಚಾಲಕ ನಾರಾಯಣಸ್ವಾಮಿ ಎಂಬುವರು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿರುತ್ತಾನೆ.  ಇದರ ಪರಿಣಾಮ ದ್ವಿಚಕ್ರವಾಹನ ಸವಾರ ಮಧುರವರಿಗೆ ತೀವ್ರವಾದ ಗಾಯಗಳಾಗದ್ದು ಕೋಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೩೧-೧೨-೨೦೦೮ ರಂದು ೦೫೦೦ ಗಂಟೆ ಸಮಯದಲ್ಲಿ ಆಂದ್ರಪ್ರದೇಶ ಚಿತ್ತೂರಿನ ವಾಸಿ ಸಿ.ರಾಜಬಾಬು ಎಂಬುವರು ತಮ್ಮ ಸಹೋದರ ರವಿ (೩೨) ಎಂಬುವರೊಡನೆ ಚಿತ್ತೂರಿನಿಂದ ಬೆಂಗಳೂರಿಗೆ ಹೋಗುವ ಸಲುವಾಗಿ ಎನ್.ಹೆಚ್ ೪ ರಸ್ತೆಯ ಮೆಟ್ಟುಬಂಡೆ ಹಾಗೂ ಕೆಂದಟ್ಟಿ ಗೇಟ್ ನಡುವೆ ಬಜಾಜ್ ಸಿಟಿ ೧೦೦ ಸಂಖ್ಯೆ ಎಪಿ-೦೩-ಎಎ-೦೬೪೨ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದರು. ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಯಾವುದೋ ಒಂದು ಕಾರಿನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿರುತ್ತಾನೆ.  ಇದರ ಪರಿಣಾಮ ದ್ವಿಚಕ್ರವಾಹನ ಸವಾರರಿಗೆ ಗಾಯಗಳಾಗಿದ್ದು ಇವರ ಪೈಕಿ ಹಿಂದಿಯಲ್ಲಿ ಕುಳಿತಿದ್ದ ರವಿರವರು ತೀವ್ರಗಾಯಗಳಾದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಆರೋಪಿ ತನ್ನ ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಿರುತ್ತಾನೆ.

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೩೦-೧೨-೨೦೦೮ ರಂದು ೧೮೪೫ ಗಂಟೆ ಸಮಯದಲ್ಲಿ ಬೆಂಗಳೂರು ವೀರಭದ್ರ ನಗರದ ವಾಸಿ ಟಿ.ಹೆಚ್.ರಾಮಮೂರ್ತಿ ಎಂಬುವರು ಮುಳಬಾಗಿಲು ತಾಲೂಕು ನರಸಿಂಹತೀರ್ಥದ ಎನ್.ಹೆಚ್ ೪ ರಸ್ತೆಯ ಬಳಿ ನಡೆದಿಕೊಂಡು ಹೋಗುತ್ತಿದ್ದರು.  ಆ ಸಮಯದಲ್ಲಿ ಹಿಂಭಾಗದಿಂದ ಬಂದ ಲಾರಿ ಸಂಖ್ಯೆ ಟಿ.ಎನ್-೨೩-ಎಸ್-೭೭೪೯ ರ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ.  ಇದರ ಪರಿಣಾಮ ಟಿ.ಹೆಚ್.ರಾಮಮೂರ್ತಿ ರವರಿಗೆ ತೀವ್ರವಾದ ಗಾಯಗಳಾಗಿದ್ದು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.  ಲಾರಿ ಚಾಲಕ ಪರಾರಿಯಾಗಿದ್ದು ಲಾರಿಯನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

-ಸಾಧಾರಣ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೧೨-೨೦೦೮ ರಂದು ೧೫೦೦ ಗಂಟೆ ಸಮಯದಲ್ಲಿ ಕೋಲಾರ ಮಿಲ್ಲತ್ ನಗರದ ವಾಸಿ ಇಂತಿಯಾಜ್ (೩೭) ಎಂಬುವರು ತಮ್ಮ ಆಟೋ ಸಂಖ್ಯೆ ಕೆಎ-೦೭-ಎಫ್-೬೮೪ ಅನ್ನು ಚಾಲನೆ ಮಾಡಿಕೊಂಡು ಕೋಲಾರದಿಂದ ಕಲ್ವಮಂಜಲಿ ಗ್ರಾಮಕ್ಕೆ ಹೋಗುವ ಸಲುವಾಗಿ ಕೋಲಾರ-ಚಿಕ್ಕಬಳ್ಳಾಪುರ ರಸ್ತೆಯ ಹೊಗರಿ ಗೇಟ್ ಬಳಿ ಹೋಗುತ್ತಿದ್ದರು.  ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಕೆ.ಎಸ್.ಆರ್‍.ಟಿ.ಸಿ ಬಸ್ ಸಂಖ್ಯೆ ಕೆಎ-೦೭-ಎಫ್-೬೮೪ ರ ಚಾಲಕ ತನ್ನ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ.  ಇದರ ಪರಿಣಾಮ ಆಟೋ ಚಾಲಕ ಇಂತಿಯಾಜ್ ಹಾಗೂ ಆಟೋವಿನಲ್ಲಿದ್ದ ಗೋಪಾಲ ಎಂಬುವರಿಗೆ ಗಾಯಗಳುಂಟಾಗಿದ್ದು ಪ್ರಸ್ತುತ ಕೋಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. 

                                                                                                             

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು: ಇಲ್ಲ 

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:

-ಸ್ಥಳ ದಂಡ ಮೊತ್ತ:

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೩೦ ನೇ ಡಿಸೆಂಬರ್ ೦೮

December 30, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೦-೧೨-೨೦೦೮ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೨

ಮಾಲೂರು ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮನೆಕೆಲಸಕ್ಕೆಂದು ಸೇರಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋದ ಘಟನೆ ಮಾಲೂರು ನಗರ ಮಾರುತಿ ಬಡಾವಣೆಯಲ್ಲಿ ಸಂಭವಿಸಿರುತ್ತದೆ.  ಮಾರುತಿ ಬಡಾವಣೆಯ ವಾಸಿ ವೆಂಕಟಸುಬ್ಬಮ್ಮ ಎಂಬುವರ ಮನೆಗೆ ಮಾಲೂರು ಟೌನ್ ಪಟಾಲಮ್ಮ ಬಡಾವಣೆಯ ವಾಸಿ ನಾಗರತ್ನ ಎಂಬುವರು ದಿನಾಂಕ ೨೬-೧೨-೨೦೦೮ ರಂದು ಮನೆಕೆಲಸಕ್ಕಾಗಿ ಸೇರಿಕೊಂಡಿದ್ದರು.  ದಿನಾಂಕ ೨೮-೧೨-೨೦೦೮ ರಂದು ರಂದು ಎಂದಿನಂತೆ ಮನೆಕೆಲಸ ಮುಗಿಸಿಕೊಂಡು ಯಾರಿಗೂ ಹೇಳದೇ ನಾಗರತ್ನರವರು ಹೊರಟುಹೋಗಿರುತ್ತಾರೆ.  ಅನುಮಾನದಿಂದ ವೆಂಕಟಸುಬ್ಬಮ್ಮ ರವರು ತಮ್ಮ ಮನೆಯ ಬೀರುವನ್ನು ತೆಗೆದು ನೋಡಿದಾಗ ಅದರಲ್ಲಿದ್ದ ೬೭ ಗ್ರಾಂ ಚಿನ್ನದ ಒಡವೆಗಳು ಕಳುವಾಗಿರುವ ಸಂಗತಿ ಬಯಲಿಗೆ ಬಂದಿರುತ್ತದೆ.  ಕಳುವಾದ ಆಭರಣಗಳ ಒಟ್ಟು ಮೌಲ್ಯ ರೂ. ೮೦,೦೦೦/ ಆಗಿರುತ್ತದೆ.

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಮನೆಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಮುಳಬಾಗಿಲು ಟೌನ್ ಸರ್ಕಾರಿ ಉರ್ದು ಕಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೨೭-೧೨-೨೦೦೮ ರಂದು ರಾತ್ರಿ ಯಾರೋ ಕಳ್ಳರು ಶಾಲೆಯಲ್ಲಿದ್ದ ಮೂರು ಅಕ್ಕಿ ಮೂಟೆ, ಐದು ಪ್ಯಾಕೆಟ್ ಎಣ್ಣೆ, ೫೦ ಕೆ.ಜಿ ಬೇಳೆ ಮತ್ತು ಒಂದು ಸಿಲಿಂಡರನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ವಸ್ತುಗಳ ಒಟ್ಟು ಮೌಲ್ಯ ರೂ. ೫೦೦೦/ ಆಗಿರುತ್ತದೆ.

ಸಾಧಾರಣ ಕಳ್ಳತನ: ಇಲ್ಲ  

ವಾಹನ ಕಳ್ಳತನ : ಇಲ್ಲ   

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೆ.ಎಸ್.ಆರ್‍.ಟಿ.ಸಿ ಬಸ್ ಮತ್ತು ದ್ವಿಚಕ್ರವಾಹನದ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ದ್ವಿಚಕ್ರವಾಹನ ಸವಾರರು ಸ್ಥಳದಲ್ಲೇ ಮೃತಪಟ್ಟು ಮತ್ತೊಬ್ಬರಿಗೆ ಗಾಯಗಳಾದ ಘಟನೆ ಕೋಲಾರ-ಮುಳಬಾಗಿಲು ಎನ್.ಹೆಚ್ ೪ ರಸ್ತೆಯ ಪಂಚವಟಿ ಫಾರಂ ಸಮೀಪ ಸಂಭವಿಸಿರುತ್ತದೆ. ದಿನಾಂಕ ೩೦-೧೨-೨೦೦೮ ರಂದು ೧೨೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಕೊಂಡರಾಜನಹಳ್ಳಿ ಗ್ರಾಮದ ವಾಸಿಗಳಾದ ಶ್ರೀಧರ (೨೨), ವೆಂಕಟರಾಮ(೨೧) ಮತ್ತು ಶ್ರೀನಿವಾಸ ಎಂಬುವರು ದ್ವಿಚಕ್ರವಾಹನ ಸಂಖ್ಯೆ ಕೆಎ-೦೫-ಇಎಫ್-೮೯೭೮ ರಲ್ಲಿ ಕೋಲಾರದಿಂದ ಮುಳಬಾಗಿಲಿಗೆ ಹೋಗುವ ಸಲುವಾಗಿ ಹೋಗುತ್ತಿದ್ದರು. ಆ ಸಮಯದಲ್ಲಿ ಹಿಂಭಾಗದಿಂದ ಬಂದ ಕೆ,ಎಸ್.ಆರ್‍.ಟಿ.ಸಿ ಬಸ್ ಸಂಖ್ಯೆ ಕೆಎ-೦೭-ಎಫ್-೯೧೨ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ,  ಇದರ ಪರಿಣಾಮ ದ್ವಿಚಕ್ರವಾಹನದಲ್ಲಿದ್ದವರೆಲ್ಲರಿಗೂ ಗಾಯಗಳಾಗಿದ್ದು ಆ ಪೈಕಿ ಶ್ರೀಧರ ಮತ್ತು ವೆಂಕಟರಾಮ ಎಂಬುವರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಮತ್ತೊಬ್ಬ ಸವಾರ ಶ್ರೀನಿವಾಸ ಎಂಬುವರು ಪ್ರಸ್ತುತ ಕೋಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಸ್ಥಳದಲ್ಲೇ ಇದ್ದು ಕೃತ್ಯವನ್ನು ಪ್ರತ್ಯಕ್ಷವಾಗಿ ಕಂಡ ಮುನಿಯಪ್ಪ ಎಂಬುವರು ದೂರು ನೀಡಿರುತ್ತಾರೆ.

-ಸಾಧಾರಣ: ೦೧

ನಂಗಲಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೩೦-೧೨-೨೦೦೮ ರಂದು ೦೯೩೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಸನ್ನಪಕುಂಟೆ ಗ್ರಾಮದ ವಾಸಿ ನರಸಕ್ಕ ಎಂಬುವರು ನಂಗಲಿ ಗ್ರಾಮಕ್ಕೆ ಹೋಗುವ ಸಲುವಾಗಿ ತಮ್ಮ ಗ್ರಾಮದ ಗೇಟ್ ಬಳಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದರು.  ಆ ಸಮಯದಲ್ಲಿ ನಂಗಲಿ ಕಡೆಯಿಂದ ಬಂದ ಕಾರ್‍ ಸಂಖ್ಯೆ ಕೆಎ-೫೩-ಎಂ-೧೨೧೪ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನರಸಕ್ಕ ರವರಿಗೆ ಡಿಕ್ಕಿ ಹೊಡೆದಿರುತ್ತಾನೆ.  ಇದರ ಪರಿಣಾಮ ನರಸಕ್ಕ ರವರಿಗೆ ಗಾಯಗಳುಂಟಾಗಿರುತ್ತದೆ.                                                                                                                                                      

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ತಾಲೂಕು ಸೀಗಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೨೯-೧೨-೨೦೦೮ ರಂದು ೦೮೦೦ ಗಂಟೆ ಸಮಯದಲ್ಲಿ ಸೀಗೇಹಳ್ಳಿ ಗ್ರಾಮದ ವಾಸಿ ಬೈಯಮ್ಮ ಎಂಬುವರು ತನ್ನ ವಾಸದ ಮನೆಯ ಬಳಿ ಇದ್ದರು. ಆ ಸಮಯದಲ್ಲಿ ಅಲ್ಲಿಗೆ  ಅಕ್ರಮಗುಂಪು ಕಟ್ಟಿಕೊಂಡು ಬಂದ ಅದೇ ಗ್ರಾಮದ ವಾಸಿಗಳಾದ ಅಮರಾವತಿ ಹಾಗೂ ಇತರೇ ೫ ಜನರು ಬೈಯಮ್ಮ ರವರ ಮೇಲೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಕೋಲುಗಳಿಂದ ಹೊಡೆದು ಕಾಲುಗಳಿಂದ ಒದ್ದು ಗಾಯಪಡಿಸಿರುತ್ತಾರೆ.  ಪರಸ್ಪರರ ನಡುವೆ ಇದ್ದ ದ್ವೇಷ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು: ಇಲ್ಲ 

ವ್ಯಕ್ತಿ ಕಾಣೆ ಪ್ರಕರಣಗಳು: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಗಾಜಲದಿನ್ನೆ ಗ್ರಾಮದ ವಾಸಿ ನಾಗವೇಣಿ (೨೫) ಎಂಬುವರು ಕಾಣೆಯಾದವರು.  ದಿನಾಂಕ ೨೪-೧೨-೨೦೦೮ ರಂದು ೦೫೩೦ ಗಂಟೆ ಸಮಯದಲ್ಲಿ ತನದನ ಮನೆಯಿಂದ ಹೊರಟ ನಾಗವೇಣಿರವರು ಹಿಂತಿರುಗಿ ಬಾರದೇ ಕಾಣೆಯಾಗಿರುತ್ತಾರೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:

-ಸ್ಥಳ ದಂಡ ಮೊತ್ತ: ರೂ.

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೯ ನೇ ಡಿಸೆಂಬರ್ ೦೮

December 28, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೯-೧೨-೨೦೦೮ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ  

ವಾಹನ ಕಳ್ಳತನ : ಇಲ್ಲ   

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಾಯ್ದೆ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ವರದಕ್ಷಿಣೆಗಾಗಿ ಗಂಡ ನೀಡಿದ ಕಿರುಕುಳವನ್ನು ಸಹಿಸಲಾರದೇ ಹೆಂಡತಿ ತನ್ನ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿಹಚ್ಚಿಕೊಂಡು ಮೃತಪಟ್ಟ ಘಟನೆ ಮುಳಬಾಗಿಲು ಟೌನ್ ಹೈದರೀನಗರದಲ್ಲಿ ಸಂಭವಿಸಿರುತ್ತದೆ.  ಹೈದರೀನಗರದಲ್ಲಿ ವಾಸವಾಗಿದ್ದ ಷಂಷಿಯಾ @ ನೂರಿ (೨೫) ಎಂಬುವರು ಮೃತಪಟ್ಟವರು.  ಷಂಷಿಯಾ ರವರು ದಿನಾಂಕ ೨೪-೧೨-೨೦೦೮ ರಂದು ೧೬೦೦ ಗಂಟೆ ಸಮಯದಲ್ಲಿ ತನ್ನ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿಹಚ್ಚಿಕೊಂಡಿದ್ದರು. ಚಿಕಿತ್ಸೆಗಾಗಿ ಕೋಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದ ಷಂಷಿಯಾ ರವರು ತಾನು ಈಗ್ಗೆ ನಾಲ್ಕು ವರ್ಷಗಳ ಹಿಂದೆ ಹೈದರೀನಗರದ ವಾಸಿ ಅಯಾಜ್ ಅಹ್ಮದ್ ಎಂಬುವರೊಡನೆ ವಿವಾಹವಾಗಿದ್ದು ತನ್ನ ಈ ಕೃತ್ಯಕ್ಕೆ ತನ್ನ ಗಂಡ ಅಯಾಜ್ ಅಹ್ಮದ್ ವರದಕ್ಷಿಣೆಗಾಗಿ ನೀಡಿದ ಮಾನಸಿಕ ಮತ್ತು ದೈಹಿಕ ಕಿರುಕುಳವೇ ಕಾರಣ ಎಂದು ಹೇಳಿಕೆ ನೀಡಿದ್ದರು. ಆಸ್ಪತ್ರೆಯಲ್ಲಿದ್ದ ಷಂಷಿಯಾ ರವರು ಚಿಕಿತ್ಸೆ ಫಲಕಾರಿಯಾಗದ ಕಾರಣ ದಿನಾಂಕ ೨೯-೧೨-೨೦೦೮ ರಂದು ೦೫೩೦ ಗಂಟೆಗೆ ಮೃತಪಟ್ಟಿರುತ್ತಾರೆ.

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವೂರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೯-೧೨-೨೦೦೮ ರಂದು ೦೭೦೦ ಗಂಟೆ ಸಮಯದಲ್ಲಿ ಬೆಂಗಳೂರು ನಗರದ ವಾಸಿ ಮಹಮ್ಮದ್ (೨೯) ಹಾಗೂ ಮತ್ತಿತರರು ಕೆಎ-೦-ಎಂ-೮೦೬೬ ಸಂಖ್ಯೆಯ ಮಾರುತಿ ಓಮಿನಿ ಕಾರಿನಲ್ಲಿ ಮದನಪಲ್ಲಿಯಿಂದ ಬೆಂಗಳೂರಿಗೆ ಹೋಗುವ ಸಲುವಾಗಿ ರಾಯಲ್ಪಾಡು ಸರಹದ್ದಿನ ಗುಂಟಪಲ್ಲಿ ಕ್ರಾಸ್ ಬಳಿ ಹೋಗುತ್ತಿದ್ದರು.  ಆ ಸಮಯದಲ್ಲಿ ಕಾರಿನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿದ್ದು ಕಾರು ರಸ್ತೆಯ ಎಡಭಾಗಕ್ಕೆ ಮುಗುಚಿ ಬಿದ್ದಿರುತ್ತದೆ.  ಇದರ ಪರಿಣಾಮ ಕಾರಿನಲ್ಲಿದ್ದ ಮಹಮ್ಮದ್ ಹಾಗೂ ಇತರರಿಗೆ ಗಾಯಗಳುಂಟಾಗಿರುತ್ತದೆ.                                                                                                                                                           

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ೦೨

ನಂಗಲಿ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲೂಕು ಚಿಕ್ಕನಗವಾರ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೭-೧೨-೨೦೦೮ ರಂದು ೨೦೩೦ ಗಂಟೆ ಸಮಯದಲ್ಲಿ ಚಿಕ್ಕನಗವಾರ ಗ್ರಾಮದ ವಾಸಿ ಲಕ್ಷ್ಮಯ್ಯ ಎಂಬುವರು ತಮ್ಮ ಮಕ್ಕಳೊಡನೆ ತನ್ನ ವಾಸದಮನೆಯಲ್ಲಿದ್ದರು.  ಆ ಸಮಯದಲ್ಲಿ ಮನೆಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿದ ಅದೇ ಗ್ರಾಮದ ವಾಸಿಗಳಾದ ಸೋಮಶೇಖರ್‍, ರೇಣುಕಮ್ಮ ಮತ್ತಿತರೇ ಒಟ್ಟು ೧೩ ಜನರು ಮನೆಕಿಟಕಿಗಳ ಗಾಜುಗಳನ್ನು ಬಾಗಿಲುಗಳನ್ನು ಹೊಡೆದುಹಾಕಿ ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಪ್ರಾಣಬೆದರಿಕೆ ಒಡ್ಡಿರುತ್ತಾರೆ.  ಇದರಿಂದ ಲಕ್ಷ್ಮಯ್ಯ ರವರಿಗೆ ರೂ. ೮೫,೦೦೦/ ಗಳಷ್ಟು ನಷ್ಟ ಉಂಟಾಗಿರುವುದಾಗಿ ಲಕ್ಷ್ಮಯ್ಯ ರವರು ತನ್ನ ದೂರಿನಲ್ಲಿ ತಿಳಿಸಿರುತ್ತಾರೆ.   

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಶ್ರೀನಿವಾಸಪುರ ತಾಲೂಕು ಹೊಸಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೧೮-೧೨-೨೦೦೮ ರಂದು ೧೦೦೦ ಗಂಟೆ ಸಮಯದಲ್ಲಿ ಚಿಂತಾಮಣಿ ತಾಲೂಕು ಕೈವಾರದ ವಾಸಿ ಸಾವಿತ್ರಮ್ಮ ಎಂಬುವರು ಹೊಸಹಳ್ಳಿ ಗ್ರಾಮಕ್ಕೆ ತನ್ನ ತಾಯಿಯವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬಂದಿದ್ದರು. ಆ ಸಮಯದಲ್ಲಿ ಇವರ ಮೇಲೆ ಜಗಳ ತೆಗೆದ ಹೊಸಹಳ್ಳಿ ಗ್ರಾಮದ ವಾಸಿಗಳಾದ ಎನ್.ಕೃಷ್ಣಾರೆಡ್ಡಿ, ವೆಂಕಟಲಕ್ಷ್ಮಮ್ಮ, ಬೈರಾರೆಡ್ಡಿ, ಶಾಮಲಮ್ಮ ಇನ್ನಿತರೇ ಇಬ್ಬರು ಕೈಗಳಿಂದ ಹೊಡೆದು ಗಾಯಪಡಿಸಿ ಪ್ರಾಣಬೆದರಿಕೆ ಹಾಕಿರುತ್ತಾರೆ. ಆಸ್ತಿವಿವಾದದ ಹಿನ್ನೆಲೆಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ.

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು: ಇಲ್ಲ 

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೩೬

-ಸ್ಥಳ ದಂಡ ಮೊತ್ತ: ರೂ. ೪೨೦೦/

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ


ದಿನದ ಅಪರಾಧಗಳ ಪಕ್ಷಿನೋಟ ೨೮ ನೇ ಡಿಸೆಂಬರ್ ೦೮

December 27, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೮-೧೨-೨೦೦೮ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

 ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ತಾಲೂಕು ಮೇಡಿಹಾಳ ಗ್ರಾಮದ ಬಳಿಯ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ಆವರಣದಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೨೭-೧೨-೨೦೦೮ ರಂದು ರಾತ್ರಿ ಶಾಲೆಯ ಆವರಣದಲ್ಲಿರುವ ನಿರ್ಮಾಣಹಂತದಲ್ಲಿರುವ ಸಣ್ಣ ದೇವಾಲಯದ ಬಾಗಿಲಿಗೆ ಹಾಕಿದ್ದ ಬೀಗವನ್ನು ಹೊಡೆದು ಅದರಲ್ಲಿ ಇಟ್ಟಿದ್ದ ಕೊಳವೆಬಾವಿಗೆ ಅಳವಡಿಸುವ ಪ್ಯಾನಲ್ ಬೋರ್ಡ್ ಹಾಗೂ ಸ್ಟಾರ್ಟರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.  ಕಳುವಾದ ವಸ್ತುಗಳ ಒಟ್ಟು ಮೌಲ್ಯ ರೂ. ೬೦೦೦/ ಆಗಿರುತ್ತದೆ.

ವಾಹನ ಕಳ್ಳತನ : ಇಲ್ಲ   

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೧

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಅತ್ಮಹತ್ಯೆಗೆ ಪ್ರೇರೆಪಣೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೧೨-೨೦೦೮ ರಂದು ೨೨೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ನೆರ್ನಹಳ್ಳಿ ಗ್ರಾಮದ ವಾಸಿ ಲಕ್ಷ್ಮಿದೇವಮ್ಮ ಎಂಬುವರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಗ್ಗೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು ಪ್ರಕರಣದ ತನಿಖಾ ಕಾಲದಲ್ಲಿ ಆತ್ಮಹತ್ಯೆಗೆ  ಲಕ್ಷ್ಮಿದೇವಮ್ಮ  ರವರ ಗಂಡ ರವಿಯ ಪ್ರಚೋದನೆಯೇ ಕಾರಣವಾಗಿರುವುದಾಗಿ ತಿಳಿದು ಬಂದಿರುತ್ತದೆ. 

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

 -ಸಾಧಾರಣ: ಇಲ್ಲ                                                                                                                                                                   

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ೦೧

ನಂಗಲಿ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕೆಲಸಕ್ಕೆ ಅಡಚಣೆ ಉಂಟುಮಾಡಿದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೧೨-೨೦೦೮ ರಂದು ೧೯೩೦ ಗಂಟೆ ಸಮಯದಲ್ಲಿ ಶ್ರೀ ಹನುಮಂತಯ್ಯ, ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕೋಲಾರ ರವರು ನಂಗಲಿ ಪೊಲೀಸ್ ಠಾಣೆಯ ಸಿಬ್ಬಂದಿಯೊಂದಿಗೆ ಮುಳಬಾಗಿಲು ತಾಲೂಕು ಚಿಕ್ಕನಗವಾರ ಗ್ರಾಮದ ಬಳಿ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಿಗಿದ್ದ ವಾಹನ ಮತ್ತು ಜನರನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದಾಗ ಚಿಕ್ಕನಗವಾರ ಗ್ರಾಮದ ವಾಸಿಗಳಾದ ಸೋಮಶೇಖರ, ಶಂಕರಪ್ಪ, ಚನ್ನಪ್ಪ, ಮಂಜುನಾಥ, ಶ್ರೀರಾಮ, ರಘು, ಚಂಗಪ್ಪ, ಪಾಪಣ್ಣ, ಅಣುಕಮ್ಮ, ಪದ್ಮಮ್ಮ, ಸೀತಮ್ಮ, ಪಾರ್ವತಮ್ಮ ಎಲ್ಲರೂ ಸೇರಿಕೊಂಡು ಸರ್ಕಾರಿ ಕೆಲಸಕ್ಕೆ ಅಡಚಣೆಯನ್ನುಂಟುಮಾಡಿರುತ್ತಾರೆ. ಪೈಕಿ   ಶಂಕರಪ್ಪ, ಚನ್ನಪ್ಪ ಮತ್ತು ಮಂಜುನಾಥ ಎಂಬುವರನ್ನು ಬಂಧಿಸಿ ಟ್ರಾಕ್ಟರ್ ಸಂಖ್ಯೆ ಕೆಎ-೦೭-ಟಿ-೮೪೯೩ ಮತ್ತು ಜೆಸಿಬಿ ಯಂತ್ರದ ಸಂಖ್ಯೆ  ಕೆಎ-೦೭-ಟಿ-೮೪೯೨ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ.  ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ರಾರೆ.

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:   

-ಸ್ಥಳ ದಂಡ ಮೊತ್ತ:  

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೭ ನೇ ಡಿಸೆಂಬರ್ ೦೮

December 26, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ -೧೨-೨೦೦೮ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

 ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

ಮಾಲೂರು ಪೊಲೀಸ್ ಠಾಣೆಯಲ್ಲಿ ಸೀಮೆ ಹಸು ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೧೨-೨೦೦೮ ರಂದು ಮಾಲೂರು ತಾಲೂಕು ಭಾವನಹಳ್ಳಿ ಗ್ರಾಮದ ವಾಸಿ ನರಸಿಂಹಪ್ಪ ಎಂಬುವರು ತಮ್ಮ ಸೀಮೆ ಹಸುಗಳು ಮತ್ತು  ಮೇಕೆಗಳನ್ನು ಮೇಯಿಸಿಕೊಂಡು ಬರಲು ಭಾವನಹಳ್ಳಿ ಕಾಡಿಗೆ ಹೋಗಿದ್ದರು. ಸಮಯದಲ್ಲಿ ಒಂದು ಸೀಮೆ ಹಸುವನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಹಸುವಿನ ಬೆಲೆ ರೂ. ೪೦,೦೦೦/- ಗಳಾಗಿರುತ್ತದೆ.

ವಾಹನ ಕಳ್ಳತನ : ಇಲ್ಲ   

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

 -ಸಾಧಾರಣ: ಇಲ್ಲ                                                                                                                                                                   

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

ನಂಗಲಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೧೨-೨೦೦೮ ರಂದು ೧೮೩೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಪುಣ್ಯಹಳ್ಳಿ ಗ್ರಾಮದ ವಾಸಿ ಮುನಿಲಕ್ಷ್ಮಮ್ಮ ಎಂಬುವರು ಬಟ್ಟೆಗಳನ್ನು ಕಂಬಿಯ ಮೇಲೆ ಹಾಕುತ್ತಿದ್ದರು. ಆಸಮಯದಲ್ಲಿ ಅದೇ ಗ್ರಾಮದ ವಾಸಿಗಳಾದ ಲಕ್ಷ್ಮಮ್ಮ,  ನಟರಾಜ, ಪಾಪಯ್ಯ ಮತ್ತು  ಚಾಮುಂಡಿ ಎಂಬುವರು ಏಕಾಏಕಿ ಜಗಳ ತೆಗೆದು ಮುನಿಲಕ್ಷ್ಮಮ್ಮ ಸೊಸೆ ರಾಧಮ್ಮ ರವರನ್ನು ಜುಟ್ಟು ಹಿಡಿದುಕೊಂಡು ಎಳೆದಾಡಿ ಕೈಗಳಿಂದ ಮತ್ತು ಚಾಕುವಿನಿಂದ ಹೊಡೆದು ಗಾಯ ಪಡಿಸಿರುತ್ತಾರೆ.

ನಂಗಲಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೧೨-೨೦೦೮ ರಂದು ೧೮೩೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಪುಣ್ಯಹಳ್ಳಿ ಗ್ರಾಮದ ವಾಸಿ  ಚಾಮುಂಡೇಶ್ವರಿ ಎಂಬುವರು ತನ್ನ ಮನೆಯಲ್ಲಿದ್ದರು. ಆಸಮಯದಲ್ಲಿ ಅದೇ ಗ್ರಾಮದ ವಾಸಿಗಳಾದ ಏಕಾಂಬರಂ, ಕೃಷ್ಣಪ್ಪ ಮತ್ತು ನಾರಾಯಣಪ್ಪ ಎಂಬುವರು   ಏಕಾಏಕಿ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಜಗಳ ತೆಗೆದು ಚಾಕುವಿನಿಂದ ಹೊಡೆದು ರಕ್ತಗಾಯ ಪಡಿಸಿರುತ್ತಾರೆ.

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:   ೨೩

-ಸ್ಥಳ ದಂಡ ಮೊತ್ತ:  ರೂ. ೩,೧೦೦/- 

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೬ ನೇ ಡಿಸೆಂಬರ್ ೦೮

December 25, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೧೨-೨೦೦೮ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ೦೧

ವೇಮಗಲ್  ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಪತ್ನಿಯ ಶೀಲವನ್ನು ಶಂಕಿಸಿ ಪತಿಯೇ ಪತ್ನಿಯನ್ನು ಕೊಂದಿರುವ ಘಟನೆ ಕೋಲಾರ ತಾಲೂಕು ದಾನಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ.  ದಾನಹಳ್ಳಿ ಗ್ರಾಮದ ವಾಸಿ  ನಾಗರತ್ನಮ್ಮ ಎಂಬುವರು  ಕೊಲೆಗೆ ಈಡಾದವರು.  ನಾಗರತ್ನಮ್ಮ ರವರ ಪತಿ ದೇವರಾಜ್ ಎಂಬುವರು ತನ್ನ ಪತ್ನಿಯ ಶೀಲವನ್ನು ಶಂಕಿಸಿ ಆಗಾಗ್ಗ ಜಗಳ ಮಾಡುತ್ತಿದ್ದು ದಿನಾಂಕ ೨೬-೧೨-೨೦೦೮ ರಂದು ೦೧೦೦ ಗಂಟೆ ಸಮಯದಲ್ಲಿ ಮನೆಯ ಮಹಡಿಯ ಮೇಲೆ ತನ್ನ ಪತ್ನಿ ನಾಗರತ್ನಮ್ಮ ರವರೊಂದಿಗೆ ಮಲಗಿದ್ದ ದೇವರಾಜ್ ವೇಲ್ ನಿಂದ ನಾಗರತ್ನಮ್ಮ ರವರ ಕುತ್ತಿಗೆಗೆ ಬಿಗಿದು ಕೊಲೆ ಮಾಡಿರುತ್ತಾನೆ.  ಮನೆಯ ಕೆಳಗಡೆ ಮಲಗಿದ್ದ ನಾಗರತ್ನಮ್ಮ ರವರ ತಂದೆ ತಾಯಿ ಮತ್ತು ತಮ್ಮ ಕಿರುಚಾಟವನ್ನು ಕೇಳಿ ಮೇಲೆ ಬಂದು ನೋಡುವಷ್ಠರಲ್ಲಿ ನಾಗರತ್ನಮ್ಮ ರವರು ಮೃತಪಟ್ಟಿರುತ್ತಾರೆ. ಆರೋಪಿ ದೇವರಾಜ್ ರವರನ್ನು ಹಿಡಿದು ಒಂದು ಕೋಣೆಯಲ್ಲಿ ಕೂಡಿಹಾಕಿದದ್ದು  ಇವರುಗಳ ಕಿರುಚಾಟವನ್ನು ಕೇಳಿ ಅಲ್ಲಿಗೆ ಬಂದ ಅದೇ ಗ್ರಾಮದ ವಾಸಿಗಳಾದ ನಂಜಪ್ಪ, ಗಂಗಣ್ಣ, ಅಪ್ಪೋಡು, ವೆಂಕಟೇಶ, ಆನಂದ್ ಮತ್ತಿತರರು ಆರೋಪಿ ದೇವರಾಜನನ್ನು ಕೋಣೆಯಿಂದ ಹೊರಗಡೆ ಬಿಟ್ಟಿದ್ದು ದೇವರಾಜ ಪರಾರಿಯಾಗಿರುತ್ತಾನೆ. ಬಗ್ಗೆ ಮೃತ ನಾಗರತ್ನಮ್ಮ ರವರ ತಂದೆ ರಾಮನ್ನ ಭೋವಿ ರವರು ದೂರು ನೀಡಿದ್ದು ದೇವರಾಜ ಹಾಗೂ ಆರೋಪಿ ಪರಾರಿಯಾಗಲು ಸಹಾಯ ಮಾಡಿದವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ.

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

 ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ   

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

ಮಾಲೂರು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೬-೧೨-೨೦೦೮ ರಂದು ೦೦೩೦ ಗಂಟೆ ಸಮಯದಲ್ಲಿ ಮಾಲೂರು ನಗರದ ಅಗ್ರಹಾರ ಬೀದಿಯ ವಾಸಿ ಪ್ರಭು (೨೪) ಎಂಬುವರು ಮಾಲೂರು ನಗರದ ಮಾಲೂರು-ಹೊಸಕೋಟೆ ರಸ್ತೆಯ ಬಾಬು ಬಾರ್ ಬಳಿ ರಸ್ತೆ ದಾಟುತ್ತಿದ್ದರು.  ಸಮಯದಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದ ಟಿಪ್ಪರ್ ಲಾರಿ ಸಂಖ್ಯೆ ಕೆಎ-೦೮-ಬಿ-೨೨೭೭ ಚಾಲಕ ಪ್ರಭು ರವರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲಿ ನಿಲ್ಲಿಸದೇ ಹೊರಟುಹೋಗಿರುತ್ತಾನೆ.  ಇದರ ಪರಿಣಾಮ ಪ್ರಭುರವರ ತಲೆಗೆ ತೀವ್ರವಾದ ಗಾಯಗಳಾಗಿದ್ದು ಸ್ಥಳದಲ್ಲೇ ಮೃತಪಟ್ಟಿರುತ್ತಾನೆ.

 -ಸಾಧಾರಣ: ಇಲ್ಲ                                                                                                                                                                   

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

ವೇಮಗಲ್ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆರ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಹುಲ್ಲಂಕಲ್ಲು ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ.  ದಿನಾಂಕ ೧೭-೧೨-೨೦೦೮ ರಂದು ೨೧೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಹುಲ್ಲಂಕಲ್ಲು ಗ್ರಾಮದ ವಾಸಿಯಾದ ಬೀರಪ್ಪ ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಯಾದ ಶ್ರೀನಿವಾಸ ಎಂಬುವರು ಕೈಗಳಿಂದ ಹೊಡೆದು ಗಾಯ ಪಡಿಸಿರುತ್ತಾರೆ. ಪರಸ್ಪರರ ನಡುವೆ ಇದ್ದ ಹಳೇ ವೈಷಮ್ಯ ಕೃತ್ಯಕ್ಕೆ ಕಾರಣವಾಗಿರುತ್ತದೆ.

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:  ೧೬

-ಸ್ಥಳ ದಂಡ ಮೊತ್ತ:  ರೂ ,೦೦೦/-

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೫ ನೇ ಡಿಸೆಂಬರ್ ೦೮

December 24, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ -೧೨-೨೦೦೮ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

 ಮನೆಗಳ್ಳತನ: ೦೧

ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ  ವಕೀಲರ ಸಂಘದ ಕಛೇರಿ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರರಕಣ ದಾಖಲಾಗಿರುತ್ತದೆ.   ದಿನಾಂಕ ೨೪-೧೨-೨೦೦೮ ರಂದು ರಾತ್ರಿ ಯಾರೋ ಕಳ್ಳರು  ಕೋಲಾರದ ನ್ಯಾಯಾಲಯಗಳ ಆವರಣದಲ್ಲಿರುವ ವಕೀಲರ ಸಂಘದ ಕಛೇರಿಯ ಹಿಂಬಾಗಿಲನ್ನು  ಮುರಿದು ಹಾಕಿ ಒಳಗಡೆ ಪ್ರವೇಶ ಮಾಡಿ ಅಲ್ಲಿದ್ದ ೧೨ ಕುರ್ಚಿಗಳು, ಟೇಬಲ್ ಫ್ಯಾನ್, ಸ್ಕ್ರೀನ್ ಬಟ್ಟಿ ಮತ್ತು ಕಬ್ಬಿಣದ ಸಲಾಕೆಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.  ಬಗ್ಗೆ  ವಕೀಲರ ಸಂಘದ  ಅದ್ಯಕ್ಷರಾದ .ಲಕ್ಷ್ಮೀನಾರಾಯಣ ರವರು ದೂರು ನೀಡಿದ್ದು ಕಳುವಾದ  ವಸ್ತುಗಳ ಒಟ್ಟು ಬೆಲೆ ತಿಳಿಯಬೇಕಾಗಿರುತ್ತದೆ.  

ಸಾಧಾರಣ ಕಳ್ಳತನ:  ೦೧

ಮುಳಬಾಗಿಲು ಪೊಲೀಸ್ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರರಕಣ ದಾಖಲಾಗಿರುತ್ತದೆ.   ದಿನಾಂಕ ೨೩-೧೨-೨೦೦೮ ರಂದು ರಾತ್ರಿ ಯಾರೋ ಕಳ್ಳರು ಮುಳಬಾಗಿಲು ಪಟ್ಟಣದ ಗುಣಗಂಟಿಪಾಳ್ಯದ ವಾಸಿ ಅಚ್ಯುತ್ ರಾವ್ ರವರ ಮನೆಯ ಮುಂದೆ ನಿಲ್ಲಿಸಿದ್ದ ರೂ. ,೦೦,೦೦/- ಬೆಲೆ ಬಾಳುವ ಟಾಟಾ ಸುಮೋ ಸಂಖ್ಯೆ ಎಪಿ-೧೦-ಯು-೮೭೨೨ ಮತ್ತು ಅದರಲ್ಲಿ ಅಲಿಸ್ಟರ್ಟೆಲಿ ಸರ್ವೀಸಸ್ಕೆಲವು ಬಿಡಿ ಬಾಗಗಳು ತುಂಬಿದ್ದ  ವಾಹನವನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಬಗ್ಗೆ   ಎಸ್‌.ಎನ್‌.ವಿ.ಎಸ್.ಪ್ರಸಾದ್, ಟೆಕ್ನಿಷಿಯನ್, ಅಲಿಸ್ಟರ್ಟೆಲಿ ಸರ್ವೀಸಸ್‌, ಕುಕ್ಕಡಪಲ್ಲಿ, ಹೈದರಾಬಾದ್ ರವರು ದೂರನ್ನು ದಾಖಲಿಸಿರುತ್ತಾರೆ.

ವಾಹನ ಕಳ್ಳತನ : ಇಲ್ಲ   

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಪ್ರಕರಣದ ದಾಖಲಾಗಿರುತ್ತದೆ. ಮುಳಬಾಗಿಲು ಪಟ್ಟಣದ ವಾಸಿಯಾದ ಷಂಷೀಯಾ ನೂರಿ ಎಂಬುವರ ವಿವಾಹ ಈಗ್ಗೆ  ವರ್ಷಗಳ ಹಿಂದೆ ಮುಳಬಾಗಿಲು ಪಟ್ಟಣ ವಾಸಿ ಅಯಾಜ್ ಅಹಮದ್ ಎಂಬುವರೊಂದಿಗೆ ನಡೆದಿತ್ತು. ಅಂದಿನಿಂದ ಗಂಡ ವರದಕ್ಷಿಣೆ ತರುವಂತೆ ಪ್ರತಿದಿನ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದು ಇದರಿಂದ ಮನ ನೊಂದ ಷಂಷೀಯಾ ನೂರಿ  ದಿನಾಂಕ ೨೪-೧೨-೨೦೦೮ ರಂದು ೧೬೦೦ ಗಂಟೆ ಸಮಯದಲ್ಲಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನ ಪಟ್ಟಿರುತ್ತಾರೆ.

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಗುಲ್ಬರ್ಗಾ ಜಿಲ್ಲೆ ಯಾದಗಿರಿ ತಾಲೂಕು ಹೊಂಗೇರಿ ಗ್ರಾಮದ ವಾಸಿ ಮಲ್ಲಿಕಾರ್ಜುನ (೨೦) ಎಂಬುವರು ಮಡೇರಿಹಳ್ಳಿ ಗ್ರಾಮದ ಕಡೆಯಿಂದ ಬೆಂಗಳೂರು-ಕೋಲಾರ ಎನ್.ಹೆಚ್ ರಸ್ತೆಯ ನಂದಿನಿ ಡಾಬಾ ಸಮೀಪ ತನ್ನ ದ್ವಿಚಕ್ರವಾಹನ ಸಂಖ್ಯೆ ಕೆಎ-೦೭-ಜೆ-೭೪೫೯ ಅನ್ನ ಚಾಲನೆ ಮಾಡಿಕೊಂಡು ಬರುತ್ತಿದ್ದರು.  ಸಮಯದಲ್ಲಿ  ಕೋಲಾರದ ಕಡೆಯಿಂದ ಬಂದ ಹಾಲಿನ ಟೆಂಪೋ ಸಂಖ್ಯೆ ಕೆಎ-೦೭-೫೭೨೦ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ದ್ವಿಚಕ್ರವಾಹನದ ಚಾಲಕ ಮಲ್ಲಿಕಾರ್ಜುನ ರವರ ತಲೆಗೆ ತೀವ್ರವಾದ ಗಾಯಗಳಾಗಿದ್ದು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.  ಸ್ಥಳದಲ್ಲೇ ಇದ್ದು ಕೃತ್ಯವನ್ನು ಕಂಡ ಕೋಲಾರ ಕಠಾರಿಪಾಳ್ಯದ ವಾಸಿ ಡಿ.ಸಿ.ಜಗದೀಶ್ ಎಂಬುವರು ದೂರು ನೀಡಿದ್ದು ಪ್ರಕರಣ ದಾಖಲಾಗಿರುತ್ತದೆ.

-ಸಾಧಾರಣ: ಇಲ್ಲ                                                                                                                                                                    

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ೦೧

ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಮಾಲೂರು ತಾಲೂಕು  ಅಗರ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೩-೧೨-೨೦೦೮ ರಂದು ೦೮೦೦ ಗಂಟೆ ಸಮಯದಲ್ಲಿ ಅಗರ ಗ್ರಾಮದ ವಾಸಿಯಾದ ಸತೀಶ್  ಎಂಬುವರ ಮೇಲೆ ಅದೇ ಗ್ರಾಮದ ವಾಸಿಗಳಾದ  ಮುನಿವೆಂಕಟಪ್ಪ ಮತ್ತು ಇತರೆ ಜನರು ಹಳೇ ವೈಷಮ್ಯದ ಹಿನ್ನೆಲೆಯಲ್ಲಿ  ಅಕ್ರಮಗುಂಪು ಕಟ್ಟಿಕೊಂಡು ಬಂದು  ವಿನಾಕಾರಣ ಜಗಳ ತೆಗೆದು ಬಾಟಲ್ ಮತ್ತು ದೊಣ್ಣೆಗಳಿಂದ  ಹೊಡೆದ ಪ್ರಾಣಬೆದರಿಕೆ ಹಾಕಿರುತ್ತಾರೆ.  ಜಮೀನಿನ ವಿವಾದದ ಹಿನ್ನೆಲೆಯಲ್ಲಿ ಕೃತ್ಯ ಸಂಭವಿಸಿರುತ್ತದೆ. 

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು: ೦೧

ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೩-೧೨-೨೦೦೮ ರಂದು ೧೦೩೦ ಗಂಟೆ ಸಮಯದಲ್ಲಿ ಒರಿಸ್ಸಾ ರಾಜ್ಯದ ರಾಮಚಂದ್ರಪುರ ಗ್ರಾಮದ ವಾಸಿ ಬಲರಾಮ್ ಬೆಹರ, ೨೪ ವರ್ಷ ಎಂಬುವರು ಕೋಲಾರ ಹೊರ ವಲಯದ ಟಮಕ ಕೈಗಾರಿಕಾ ವಲಯದಲ್ಲಿರುವ ವಿಶ್ವಕರ್ಮ ಕಾರ್ಖಾನೆಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಸಮಯದಲ್ಲಿ ಕಾರ್ಖಾನೆಯ ಗೋಡೆ ಕುಸಿದು ಬಿದ್ದು ಬಲರಾಮ್ ಬೆಹರ ರವರಿಗೆ ತೀವ್ರತರವಾದ ಗಾಯಗಳಾಗಿ ಚಿಕಿತ್ಸೆಗಾಗಿ ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: 

-ಸ್ಥಳ ದಂಡ ಮೊತ್ತ 

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ಕೋಲಾರ ಪೊಲೀಸರ ಕಾರ್ಯಾಚರಣೆ, ರೂ. ೧೩,೦೦೦/ ಬೆಲೆ ಸಾರಾಯಿ ಪಾಕೇಟ್ ವಶ.

December 24, 2008

ದಿನಾಂಕ ೨೪-೧೨-೨೦೦೮ ರಂದು ೧೦೪೦ ಗಂಟೆ ಸಮಯದಲ್ಲಿ ಕೋಲಾರ ನಗರ ಠಾಣೆಯ ಆರಕ್ಷಕ ಉಪ-ನಿರೀಕ್ಷಕರಾದ ಶ್ರೀ ಎಸ್.ವೈ.ಮೊಹನ್ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಕೋಲಾರ ನಗರ ವೃತ್ತ ನಿರೀಕ್ಷಕರಾದ ಶ್ರೀ ಸತ್ಯನಾರಾಯಣ ಕುದೂರ್ರವರ ಮಾರ್ಗದರ್ಶನದಲ್ಲಿ ತಮ್ಮ ಸಿಬ್ಬಂದಿಯೊಂದಿಗೆ ಕೋಲಾರ ನಗರದ ಸುಲ್ತಾನ್ ತಿಪ್ಪಸಂದ್ರ ವಾಸಿ ಸೈಯದ್ ಸಜಾದ್ ಪಾಷ ಎಂಬುವರ ಮನೆಯ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ರೂ. ೧೩,೦೦೦/- ಬೆಲೆ ಬಾಳುವ ಸಾರಾಯಿ ಪಾಕೇಟ್ ಗಳನ್ನು ವಶ ಪಡಿಸಿಕೊಂಡಿರುತ್ತಾರೆ. ಆರೋಪಿ ಸೈಯದ್ ಸಜಾದ್ ಪಾಷ ಪರಾರಿಯಾಗಿರುತ್ತಾನೆ.