ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೧-೦೨-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ೦೧
ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಆರೋಪಿಗಳಾದ ಆಂದ್ರಪ್ರದೇಶದ ವಾಸಿ ರಮಣಾರೆಡ್ಡಿ, ಮುಳಬಾಗಿಲು ಕಳಸಾಪಲ್ಲಿ ಗ್ರಾಮದ ವಾಸಿಗಳಾದ ನಾರಾಯಣಸ್ವಾಮಿ, ಕೃಷ್ಣಮೂರ್ತಿ ಮತ್ತು ನಾಗಾರ್ಜುನ ಎಂಬುವರು ತಮ್ಮ ಬಳಿ ಕಳುವ ಮಾಡಲಾದ ೩ ರೋಲ್ ಅಲ್ಯಮಿನಿಯಂ ವೈರನ್ನು ಇಟ್ಟುಕೊಂಡಿದ್ದು ಮಾಲಿನೊಂದಿಗೆ ಸಿಕ್ಕಿ ಬಿದ್ದಿರುತ್ತಾರೆ. ಆರೋಪಿಗಳು ದಿನಾಂಕ ೩೧೦೧-೨೦೦೯ ರಂದು ೦೯೩೦ ಗಂಟೆ ಸಮಯದಲ್ಲಿ ಕಳವು ಮಾಲಿನೊಂದಿಗೆ ಮುಳಬಾಗಿಲು ವೇಣು ವಿಧ್ಯಾಸಂಸ್ಥೆ ಬಳಿ ಹೋಗುತ್ತಿದ್ದು ಶ್ರೀನಿವಾಸಪುರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಆರಕ್ಷಕ ಉಪನಿರೀಕ್ಷಕರಾದ ಸಲೀಂ ಸಿ ನಥಾಫ್ ರರು ತಮ್ಮ ಸಿಬ್ಬಂದಿಯೊಡನೆ ಅನುಮಾನದ ಮೇರೆಗೆ ಆರೋಪಿಗಳನ್ನು ಹಿಡಿದು ವಿಚಾರಣೆ ಮಾಡಿದಾಗ ಕೃತ್ಯ ಬೆಳಕಿಗೆ ಬಂದಿರುತ್ತದೆ. ಆರೋಪಿಗಳನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಗಿರುತ್ತದೆ.
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ
ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
ಮಾಲೂರು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೪-೧೨-೦೮ ರಂದು ಮಾಲೂರು ತಾಲೂಕು ಬಾಳಿಗಾನಹಳ್ಳಿ ಗ್ರಾಮದ ವಾಸಿಯಾದ ಕೃಷ್ಣಪ್ಪ ಎಂಬುವರು ತಮ್ಮ ಗ್ರಾಮದಿಂದ ಮಾಲೂರಿಗೆ ತಮ್ಮ ಹೀರೋಹೋಂಡಾ ಫ್ಯಾಷನ್ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೭-ಜೆಡ್-೪೩೦೪ ರಲ್ಲಿ ಸಂತೆಹಳ್ಳಿ ಕ್ರಾಸ್ ಬಳಿ ಬರುತ್ತಿದ್ದರು. ಅ ಸಮಯದಲ್ಲಿ ಎದುರುಗಡೆಯಿಂದ ಬಂದ ಟ್ರಾಕ್ಟರ್ ಸಂ. ಕೆಎ-೦೭-ಟಿ-೩೨೮೨ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡಿಸಿರುತ್ತಾನೆ. ಇದರ ಪರಿಣಾಮವಾಗಿ ಕೃಷ್ಣಪ್ಪ ರವರ ಎಡಭಾಗದ ಭುಜದ ಮೇಲೆ ಟ್ರಾಕ್ಟರ್ ಹರಿದು ಮೂಳೆಗೆ ತೀವ್ರವಾದ ಗಾಯವಾಗಿರುತ್ತದೆ. ನಂತರ ಈ ಬಗ್ಗೆ ಬೆಂಗಳೂರಿನ ಅಭಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ವಾಪಸ್ಸು ಬಂದು ತಡವಾಗಿ ಅಂದರೆ ದಿನಾಂಕ ೩೧-೦೧-೨೦೦೮ ರಂದು ೧೭೩೦ ಗಂಟೆ ಸಮಯದಲ್ಲಿ ದೂರು ದಾಖಲು ಮಾಡಿರುತ್ತಾರೆ.
ಮೋಸ / ವಂಚನೆ ಪ್ರಕರಣಗಳು: ೦೧
ವೇಮಗಲ್ ಪೊಲೀಸ್ ಠಾಣೆಯಲ್ಲಿ ಮೋಸ/ವಂಚನೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ನರಸಾಪುರ ಬಳಿ ಎನ್ ಹೆಚ್ ೪ ರಸ್ತೆಯಲ್ಲಿರುವ ಕೆಫೆ ಕಾಫಿ ಡೇ ಯಲ್ಲಿ ವಂಚನೆ ಕೃತ್ಯ ಬೆಳಕಿಗೆ ಬಂದಿರುತ್ತದೆ. ಪಿ.ಮೋಹನ್ ಮತ್ತು ಆಂಥೋನಿ ದಾಸ್ ಎಂಬುವರು ಮೇಲ್ಕಂಡ ಕಾಫಿ ಡೇಯಲ್ಲಿ ಮ್ಯಾನೇಜರ್ ಆಗಿ ಈಗ್ಗೆ ೪ ತಿಂಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು ರೂ. ೧೩,೬೬೬/ ನಗದು ಹಾಗೂ ರೂ. ೬,೩೯೨/ ಬೆಲೆಯ ಕೂಫನ್ ಗಳು ಸೇರಿದಂತೆ ಒಟ್ಟು ರೂ. ೧೯,೫೫೮/ ಬೆಲೆಬಾಳುವುದನ್ನು ತೆಗದುಕೊಂಡು ಯಾರಿಗೂ ಹೇಳದೇ ಪರಾರಯಾಗಿರುತ್ತಾರೆ.
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು:
-ಸ್ಥಳ ದಂಡ ಮೊತ್ತ:
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Posted by kolarpolice
Posted by kolarpolice
Posted by kolarpolice



