ದಿನದ ಅಪರಾಧಗಳ ಪಕ್ಷಿನೋಟ ೩೦ ನೇ ಏಪ್ರಿಲ್ ೨೦೦೯

April 29, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೩೦-೦೪-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ತನ್ನ ಗಂಡ ಅನೈತಿಕ ಸಂಬಂಧ ಹೊಂದಿದ್ದಾನೆಂಬ ಕಾರಣಕ್ಕೆ ಹೆಂಡತಿಯೇ ತನ್ನ ಮಗಳೊಡನೆ ಸೇರಿಕೊಂಡು ಗಂಡನನ್ನು ಕೊಲೆಗೈದ ಘಟನೆ ಕೋಲಾರ ತಾಲೂಕು ಅಮ್ಮೇರಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ಗುರುಮೂರ್ತಪ್ಪ (೫೦) ಎಂಬುವರು ಕೊಲೆಗೀಡಾದ ವ್ಯಕ್ತಿ. ದಿನಾಂಕ ೨೯-೦೪-೨೦೦೯ ರಂದು ೨೧೦೦ ಗಂಟೆ ಸಮಯದಲ್ಲಿ ತಮ್ಮ ವಾಸದಮನೆಯಲ್ಲಿ ಯಾವುದೋ ಒಂದು ಆಯುಧದಿಂದ ಗುರುಮೂರ್ತಪ್ಪ ರವರ ಕುತ್ತಿಗೆ, ಎಡಭುಜ ಮತ್ತು ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಲಾಗಿರುತ್ತದೆ. ಗುರುಮೂರ್ತಪ್ಪ ಹೊಂದಿದ್ದ ಅನೈತಿಕ ಸಂಬಂಧವೇ ಕೊಲೆಗೆ ಕಾರಣವಾಗಿರುವುದಾಗಿ ತಿಳಿದು ಬಂದಿರುತ್ತದೆ.

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ  

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ  

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲೂಕು ಮುದ್ದೇರಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೮-೦೪-೨೦೦೯ ರಂದು ೧೨00 ಗಂಟೆ ಸಮಯದಲ್ಲಿ ಮುದ್ದೇರಿ ಗ್ರಾಮದ ವಾಸಿ ಮುನಿಯಪ್ಪ.ಟಿ.ಎಂ ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ ರಾಮಚಂದ್ರಪ್ಪ, ಸುಬ್ರಮಣಿ, ನಾರಾಯಣಸ್ವಾಮಿ, ಗಂಗಾಧರ, ಬಾಬು, ನಾರಾಯಣಪ್ಪ ಮತ್ತು ಅಬ್ಬಯ್ಯಪ್ಪ ಎಂಬುವರು ಅಕ್ರಮಗುಂಪು ಕೈಗಳಿಂದ ಮತ್ತು ದೊಣ್ಣೆಯಿಂದ ಹೊಡೆದು ಗಾಯಪಡಿಸಿರುತ್ತಾರೆ. ಪರಸ್ಪರರ ನಡವೆ ಇದ್ದ ಹಳೇ ವೈಷಮ್ಯ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.   

ಹಲ್ಲೆ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಅಜ್ಜಪ್ಪನಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೮-೦೪-೨೦೦೯ ರಂದು ೧೯೦೦ ಗಂಟೆ ಸಮಯದಲ್ಲಿ ಬೆಂಗಳೂರಪ್ಪ ಎಂಬುವರ ಮೇಲೆ ಜಮೀನು ವಿಚಾರದಲ್ಲಿ ಜಗಳ ತೆಗೆದ ಚಿಕ್ಕಣ್ಣ ಮತ್ತು ಚನ್ನಕೃಷ್ಣಪ್ಪ ಎಂಬುವರು ದೊಣ್ಣೆಯಿಂದ ತಲೆಗೆ ಕಾಲಿಗೆ ಹೊಡೆದು ಗಾಯಪಡಿಸಿರುತ್ತಾರೆ.  ಚಿಕಿತ್ಸೆಗಾಗಿ ಕೋಲಾರದ ಎಸ್‌ಎನ್‌ಆರ್‌ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಬೂಸಾಲಕುಂಟೆ ಗ್ರಾಮದ ಕೆರೆಯ ನೀರಿನಲ್ಲಿ ಸುಮಾರು ೩೫ ರಿಂದ ೪೦ ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿರುತ್ತದೆ. ದಿನಾಂಕ ೨೯-೦೪-೨೦೦೯ ರಂದು ೧೨೦೦ ಗಂಟೆ ಸಮಯದಲ್ಲಿ ಮೃತದೇಹವನ್ನು ಕಂಡ ನಾರಾಯಣಪ್ಪ ಎಂಬುವರು ದೂರು ನೀಡಿದ್ದು ಮೃತವ್ಯಕ್ತಿ ಆಕಸ್ಮಿಕವಾಗಿ ಕಾಲುಜಾರಿ ಕೆರೆಯ ನೀರಲ್ಲಿ ಬಿದ್ದು ಮೃತಪಟ್ಟಿರಬಹುದಾಗಿ ಶಂಕೆ ವ್ಯಕ್ತವಾಗಿರುತ್ತದೆ.

ವ್ಯಕ್ತಿ ಕಾಣೆ ಪ್ರಕರಣಗಳು: ೦೨

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲೂಕು ರೋಣೂರು ಗ್ರಾಮದ ವಾಸಿ ಶೇಷಪ್ಪ ಎಂಬುವರ ಪುತ್ರಿ ಆರ್‍.ಎಸ್.ನಂದಿನಿ (೧೭)  ಕಾಣೆಯಾದ ಹುಡುಗಿ. ದಿನಾಂಕ ೨೬-೦೪-೨೦೦೯ ರಂದು ರಾತ್ರಿ ತನ್ನ ಮನೆಯಿಂದ ಹೊರಟ ಆರ್‍.ಎಸ್.ನಂದಿನಿ ಹಿಂತಿರುಗಿ ಬಾರದೇ ಕಾಣೆಯಾಗಿರುತ್ತಾಳೆ.

ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲೂಕು ಬಚ್ಚಿರೆಡ್ಡಿಗಾರಿಪಲ್ಲಿ ಗ್ರಾಮದ ವಾಸಿ ಲಕ್ಷ್ಮಿದೇವಮ್ಮ ಎಂಬುವರು ಕಾಣೆಯಾದ ಮಹಿಳೆ. ದಿನಾಂಕ ೨೯-೦೪-೦೦೯ ರಂದು ತನ್ನ ಮನೆಯಿಂದ ಹೊರಟ ಲಕ್ಷ್ಮಿದೇವಮ್ಮ ರವರು ಹಿಂತಿರುಗಿ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಲಕ್ಷ್ಮಿದೇವಮ್ಮ ರವರ ಪತಿ ವೇಮನಾರಾಯಣ ಎಂಬುವರು ದೂರು ನೀಡಿದ್ದು ಎದುರು ಮನೆಯ ವಾಸಿ ಸೀನಪ್ಪ ಎಂಬುವರ ಮೇಲೆ ಅನುಮಾನವಿರುವುದಾಗಿ ತಮ್ಮ ದೂರಿನಲ್ಲಿ ತಿಳಿಸಿರುತ್ತಾರೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:

-ಸ್ಥಳ ದಂಡ ಮೊತ್ತ:  ರೂ.

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೯ ನೇ ಏಪ್ರಿಲ್ ೨೦೦೯

April 29, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೨೯-೦೪-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ  

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೨

ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೦೪-೨೦೦೯ ರಂದು ೦೫೦೦ ಗಂಟೆ ಸಮಯದಲ್ಲಿ ಎನ್.ಹೆಚ್ ೪ ರಸ್ತೆಯ ಆರ್‍.ವಿ ಶಾಲೆ ಬಳಿ ಟಿ.ಎನ್-೨೦-ಎವೈ-೯೯೫೯ ಲಾರಿಯ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಮುಂದೆ ಹೋಗುತ್ತಿದ್ದ ಟಿಪ್ಪರ್‍ ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಚಾಲಕ ಕೋಟೇಶ್ವರನ್ ಹಾಗೂ ಕ್ಲೀನರ್‍ ಸೂರ್ಯ ಎಂಬುವರಿಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಕೋಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಅಪಘಾತಕ್ಕೀಡಾದ ಎರಡೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.  

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೯-೦೪-೨೦೦೯ ರಂದು ೧೭೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಶಿಳ್ಳಂಗೆರೆ ಗ್ರಾಮದ ವಾಸಿ ಯಲ್ಲಪ್ಪ (೩೦) ಎಂಬುವರು ತಮ್ಮ ಹೆಮಡತಿ ಗೌರಮ್ಮ ಮತ್ತು ಸಂಬಂಧಿಕರಾದ ಲಕ್ಷ್ಮಮ್ಮ, ಮಂಜುಳಮ್ಮ ಎಂಬುವರೊಡನೆ ಆಟೋ ಸಂಖ್ಯೆ ಕೆಎ-೦೭-೬೬೮೧ ರಲ್ಲಿ ಹೊನ್ನೇಮಹಳ್ಳಿ ಗ್ರಾಮದ ಗೇಟ್ ಬಳಿ ಹೊಗುತ್ತಿದ್ದರು. ಆ ಸಮಯದಲ್ಲಿ ಆಟೋ ಚಾಲಕ ತನ್ನ ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಳನೆ ಮಾಡಿದ್ದು ಆಟೋ ರಸ್ತೆಯ ಪಕ್ಕಕ್ಕೆ ಉರುಳಿ ಬಿದ್ದಿರುತ್ತದೆ. ಇದರ ಪರಿಣಾಮ ಆಟೋವಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಕೋಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಆಟೋ ಚಾಲಕ ತನ್ನ ಆಟೋದೊಂದಿಗೆ ಸ್ಥಳದಿಂದ ಪರಾರಿಯಾಗಿರುತ್ತಾನೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ  

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲೂಕು ಮುದ್ದೇರಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೮-೦೪-೨೦೦೯ ರಂದು ೧೨೩೦ ಗಂಟೆ ಸಮಯದಲ್ಲಿ ಮುದ್ದೇರಿ ಗ್ರಾಮದ ವಾಸಿ ತುಳಸಮ್ಮ ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ ಪ್ರಮೀಳಾ, ವೆಂಕಟಲಕ್ಷ್ಮಮ್ಮ, ಸೌದಾಮಣಿ, ತೋಪನಾರಾಯಣಪ್ಪ, ವೆಂಕಟಪ್ಪ ಮತ್ತು ವೆಂಕಟೇಶಪ್ಪ ಎಂಬುವರು ಅಕ್ರಮಗುಂಪು ಕಟ್ಟಿಕೊಂಡು ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಹೊಡೆದು ಗಾಯಪಡಿಸಿರುತ್ತಾರೆ. ತುಳಸಮ್ಮ ರವರ ತಮ್ಮ ಮನೆಯ ಪಕ್ಕ ಮಳೆ ನೀರು ಮನೆಯೊಳಗೆ ಬರದಂತೆ ಮಣ್ಣಿನಿಂದ ಕಟ್ಟಿದ್ದ ತಡೆಯನ್ನು ಆರೋಪಿಗಳು ಹೊಡೆದು ಹಾಕಲು ಪ್ರಯತ್ನಿಸಿದ್ದು ಈ ಬಗ್ಗೆ ಕೇಳಿದಾಗ ಈ ಕೃತ್ಯ ಎಸಗಿರುತ್ತಾರೆ.  

ಹಲ್ಲೆ: ೦೧

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.ಕೋಲಾರ ನಗರ ಶಾರದಾ ಟಾಕೀಸ್ ಬಳಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೮-೦೪-೨೦೦೯ ರಂದು ೧೦೧೫ ಗಂಟೆ ಸಮಯದಲ್ಲಿ ಕೋಲಾರ ದರ್ಗಾಮೊಹಲ್ಲಾದ ವಾಸಿ ಮಕ್ಸೂದ್ ಅಹ್ಮದ್ ಎಂಬುವರ ಮೇಲೆ ಜಗಳ ತೆಗೆದ ಕೆ.ಜಿ.ಮೊಹಲ್ಲಾದ ವಾಸಿಗಳಾದ ಜುಬೇರ್‍ ಪಾಷ ಮತ್ತಿತರರು ರಾಡಿನಿಂದ ಹೊಡೆದು ಗಾಯಪಡಿಸಿರುತ್ತಾರೆ. ಹಣಕಾಸಿನ ವಿಚಾರದ ಹಿನ್ನಲೆಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ.

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:

-ಸ್ಥಳ ದಂಡ ಮೊತ್ತ:  ರೂ.

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೮ ನೇ ಏಪ್ರಿಲ್ ೨೦೦೯

April 27, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೨೮-೦೪-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕೊಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ವರದಕ್ಷಿಣೆ ತರಲಿಲ್ಲವೆಂಬ ಕಾರಣಕ್ಕೆ ಹೆಂಡತಿಯನ್ನು ಗಂಡ ಹಾಗೂ ಆತನ ಮನೆಯವರು ಕೊಲೆ ಮಾಡಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ  ಘಟನೆ ಕೋಲಾರ ತಾಲೂಕು ವಡ್ಡರಪಾಳ್ಯ ಗ್ರಾಮದಲ್ಲಿ ಸಂಭವಿಸಿರುತ್ತದೆ. ವಡ್ಡರಪಾಳ್ಯ ಗ್ರಾಮದ ವಾಸಿ ಶ್ರೀಮತಿ ಜೆ.ಕಳ ಎಂಬುವರು ಅಸುನೀಗಿದವರು. ಕೋಲಾರ ತಾಲೂಕು ನಾಗನಾಯಕನಹಳ್ಳಿ ವಾಸಿಯಾದ ಜೆ.ಕಳ ರವರು ಒಂದು ವರ್ಷದ ಹಿಂದೆ ವಡ್ಡರಪಾಳ್ಯದ ಸಿ.ಕೃಷ್ಣಯ್ಯ ಎಂಬುವರೊಡನೆ ವಿವಾಗವಾಗಿರುವುದಾಗಿರುತ್ತಾರೆ. ವಿವಾಹವಾದಾಗಿನಿಂದ ಇವರ ಗಂಡ, ಗಂಡನ ತಂದೆ ಚಿಕ್ಕವೆಂಕಟಪ್ಪ ತಾಯಿ ಪೆದ್ದಕ್ಕ, ವೆಂಕಟಸ್ವಾಮಿ, ಪದ್ಮಮ್ಮ ಮತ್ತು ರತ್ನಮ್ಮ ಎಂಬುವರು ಹೆಚ್ಚಿನ ವರದಕ್ಷಿಣೆ ತರುವಂತೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದು  ದಿನಾಂಕ ೨೭-೦೪-೨೦೦೯ ರಂದು ಜೆ.ಕಳ ರವರನ್ನ ಕೊಲೆಮಾಡಿ ದೇಹದ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವುದಾಗಿ ಮೃತರ ತಂದೆ ಜಯಪ್ಪ ರವರು ತಮ್ಮ ದೂರಿನಲ್ಲಿ ತಿಳಿಸಿರುತ್ತಾರೆ.

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ  

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ  

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಅರಹಳ್ಳಿ ಗ್ರಾಮದ ವಾಸಿ ಮುನಿವೆಂಕಟಪ್ಪ ಎಂಬುವರು ಮೃತಪಟ್ಟಿವರು. ಮುನಿವೆಂಕಟಪ್ಪ ರವರಿಗೆ ಆಗಾಗ್ಗ ತೀವ್ರವಾದ ಹೊಟ್ಟೆನೋವು ಬರುತ್ತಿದ್ದು ದಿನಾಂಕ ೨೪-೦೪-೨೦೦೯ ರಂದು ಮುನಿವೆಂಕಟಪ್ಪ ರವರು ಹೊಟ್ಟೆನೋವಿನ ಔಷಧಿಯ ಬದಲಿಗೆ ಆಕಸ್ಮಿಕವಾಗಿ ಕ್ರಿಮಿನಾಷಕವನ್ನು ಸೇವಿಸಿರುತ್ತಾರೆ. ಇದರ ಪರಿಣಾಮ ಅಸ್ವಸ್ಥರಾದ ಇವರನ್ನು ಕೋಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ ೨೮-೦೪-೨೦೦೯ ರಂದು ೦೫೩೦ ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:

-ಸ್ಥಳ ದಂಡ ಮೊತ್ತ:  ರೂ.

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ವಶಪಡಿಸಿಕೊಂಡಿರುವ ಕಳವು ಮಾಲುಗಳ ಪ್ರದರ್ಶನ

April 27, 2009

ದಿನಾಂಕ ೦೨-೦೫-೨೦೦೯ ರಂದು ಬೆಳಿಗ್ಗೆ ೧೧೦೦ ಗಂಟೆ ಸಮಯದಲ್ಲಿ ಇಲಾಖೆಯಿಂದ ವಶಪಡಿಸಿಕೊಂಡಿರುವ ಕಳವು ಮಾಲುಗಳ ಪ್ರದರ್ಶನವನ್ನು ಕೋಲಾರ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಲಾಗಿರುತ್ತದೆ. ಈ ಸಂಬಂಧ ಎಲ್ಲ ಪತ್ರಿಕಾ ಪ್ರತಿನಿಧಿಗಳು / ವರದಿಗಾರರು ಮತ್ತು ಛಾಯಾಚಿತ್ರಗ್ರಾಹಕರಿಗೆ ಪ್ರದರ್ಶನಕ್ಕೆ ಹಾಜರಾಗಲು ಆಹ್ವಾನಿಸಲಾಗಿದೆ. ಈ ಪ್ರದರ್ಶನವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶವನ್ನು ಕಲ್ಪಿಸಲಾಗಿದ್ದು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಕೋರಿದೆ.


ದಿನದ ಅಪರಾಧಗಳ ಪಕ್ಷಿನೋಟ ೨೭ ನೇ ಏಪ್ರಿಲ್ ೨೦೦೯

April 26, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೨೭-೦೪-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ  

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ೦೧

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲೂಕು ಕಲ್ಲೂರು ಗ್ರಾಮದ ವಾಸಿ ಕೆಂಚಪ್ಪ ಎಂಬುವರಿಗೆ ಸೇರಿದ ಟಿ.ವಿ.ಎಸ್ ಹೆವಿಡ್ಯೂಟಿ ಸಂಖ್ಯೆ ಕೆಎ-೦೭-ಕ್ಯೂ-೨೫೭೬ ದ್ವಿಚಕ್ರಚಾಹನ ಕಳುವಾಗಿರುತ್ತದೆ. ದಿನಾಂಕ ೨೬-೦೪-೨೦೦೯ ರಂದು ೧೨೦೦ ಗಂಟೆ ಸಮಯದಲ್ಲಿ ಕೆಂಚಪ್ಪ ರವರು ತಮ್ಮ ದ್ವಿಚಕ್ರವಾಹನವನ್ನು ಶ್ರೀನಿವಾಸಪುರ ಟೌನ್ ರೇಷ್ಮೆ ಮಾರುಕಟ್ಟೆ ಬಳಿ ನಿಲ್ಲಿಸಿದ್ದ ಸಮಯದಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೨

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೩-೦೪-೨೦೦೯ ರಂದು ನಾಗರಾಜ ಎಂಬುವರು ಟ್ರಾಕ್ಟರ್‍ ಒಂದನ್ನು ಚಾಲನೆ ಮಾಡಿಕೊಂಡು ಕಲ್ಲುಕುಂಟೆ ಮತ್ತು ಹೊಗಳಗೆರೆ ಗ್ರಾಮದ ನಡುವೆ ಹೋಗುತ್ತಿದ್ದರು. ಆ ಸಮಯದಲ್ಲಿ ನಾಗರಾಜ ಟ್ರಾಕ್ಟರ್‍ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದು ಇದರ ಪರಿಣಾಮ ಟ್ರಾಕ್ಟರ್‍ ರಸ್ತೆ ಪಕ್ಕದಲ್ಲಿದ್ದ ಕೆರೆಗೆ ಉರುಳಿ ಬಿದ್ದಿರುತ್ತದೆ. ನಾಗರಾಜ ರವರಿಗೆ ಗಾಯಗಳುಂಟಾಗಿರುತ್ತದೆ.  

ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೪-೨೦೦೯ ರಂದು ೦೦೩೦ ಗಂಟೆ ಸಮಯದಲ್ಲಿ ಕಾರವಾರ ಜಿಲ್ಲೆ ಭಟ್ಕಳ ತಾಲೂಕಿನ ಸಬತ್ತಿ ಗ್ರಾಮದ ವಾಸಿ ಗುರು ಎಂಬುವರು ಇನ್ನಿತರರೊಡನೆ ಮ್ಯಾಕ್ಸಿ ಕ್ಯಾಬ್ ಸಂಖ್ಯೆ ಕೆಎ-೪೭-೨೩೫೩ ವಾಹನದಲ್ಲಿ ಎನ್.ಹೆಚ್ ೪ ರಸ್ತೆಯ ನರಸಾಪುರ ಕ್ರಾಸ್ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ವಾಹನದ ಚಾಲಕ ಮಂಜುನಾಥ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದು ವಾಹನ ರಸ್ತೆಯ ಪಕ್ಕದ ಹಳ್ಳಕ್ಕೆ ಉರುಳಿ ಬಿದ್ದಿರುತ್ತದೆ. ಇದರ ಪರಿಣಾಮ ವಾಹನ ಜಖಂಗೊಂಡು ವಾಹನದಲ್ಲಿದ್ದ ಸಿತಂಪಣ್ಣ ಎಂಬ ಹುಡುಗಿಗಿ ಗಾಯಗಳಾಗಿರುತ್ತದೆ. ವಾಹನವನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ  

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೦೪-೨೦೦೯ ರಂದು ೦೯೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಅಮ್ಮೇರಹಳ್ಳಿ ಗ್ರಾಮದ ವಾಸಿ ಕೃಷ್ಣಪ್ಪ ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ ರಮೇಶ, ಕೃಷ್ಣಪ್ಪ ಮತ್ತು ರಾಜಪ್ಪ ಎಂಬುವರು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹೊಡೆದು ಗಾಯಪಡಿಸಿ ಪ್ರಾಣಬೆದರಿಕೆ ಹಾಕಿರುತ್ತಾರೆ. ಜಮೀನಿನ ವಿವಾದದ ಹಿನ್ನಲೆಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ.

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೧

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಬೆಂಗಳೂರು ಕೆ.ಆರ್‍.ಪುರಂ ಬಳಿಯ ದೇವಸಂದ್ರ ಗ್ರಾಮದ ವಾಸಿ ಷೇಕ್ ಮುನಾವರ್‍ ಎಂಬುವರ ೧೯ ವರ್ಷದ ಮಗಳಾದ ಮರಿಯಾ ಸುಲ್ತಾನ ಕಾಣೆಯಾದ ಹಡುಗಿ. ದಿನಾಂಕ ೧೮-೦೪-೨೦೦೯ ರಂದು ತನ್ನ ಗ್ರಾಮಕ್ಕೆ ಹೋಗುವ ಸಲುವಾಗಿ ಶ್ರೀನಿವಾಸಪುರ ಬಸ್ ನಿಲ್ದಾಣದ ಬಳಿ ಹೊರಟ ಮರಿಯಾ ಸುಲ್ತಾನ ಅಲ್ಲಿಮದ ಕಾಣೆಯಾಗಿರುತ್ತಾಳೆ. ಈ ಬಗ್ಗೆ ಷೇಕ್ ಮುನಾವರ್‍ ರವರು ದೂರು ನಿಡಿದ್ದು ಪ್ರಕರಣ ದಾಖಲಾಗಿರುತ್ತದೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:

-ಸ್ಥಳ ದಂಡ ಮೊತ್ತ:  ರೂ.

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೫ ನೇ ಏಪ್ರಿಲ್ ೨೦೦೯

April 25, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೨೫-೦೪-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ  

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಮತ್ತು ಪ್ರಾಣಬೆದರಿಕೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ಟೌನ್ ವಲ್ಲಬಾಯಿ ರಸ್ತೆಯಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೦೫-೦೪-೨೦೦೯ ರಂದು ೨೨೦೦ ಗಂಟೆ ಸಮಯದಲ್ಲಿ ವಲ್ಲಬಾಯಿ ರಸ್ತೆಯಲ್ಲಿ ವಾಸವಾಗಿರುವ ಇ.ಶಿವಣ್ಣ ಎಂಬುವರು ತನ್ನ ಪತ್ನಿಯಾದ ಲಕ್ಷ್ಮಿ ನರಸಮ್ಮ ಎಂಬುವರ ಮೇಲೆ ಜಗಳ ತೆಗೆದು ಅವಾಚ್ಯ ಶ್ಬಬ್ದಗಳಿಂದ ಬೈದು ಪ್ರಾಣಬೆದರಿಕೆ ಹಾಕಿ ಇವರ ಕತ್ತಿನಲ್ಲಿದ್ದ ಬಂಗಾರದ ಚೈನನ್ನು ಕಳವು ಮಾಡಿಕೊಂಡು ಹೋಗಿರುತ್ತಾನೆ. ಗಂಡ ಹೆಂಡತಿ ನಡುವೆ ಹೊಂದಾಣಿಕೆ ಇಲ್ಲದೇ ಇದ್ದು ಈ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಸಹಾ ನಡೆಯುತ್ತಿದ್ದು ಇದರ ಹಿನ್ನೆಲೆಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ.

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೩

ಶ್ರೀನಿವಾಸಪುರ ಪೋಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೪-೨೦೦೯ ರಂದು ೧೩೧೫ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಕೂರಿಗೆಪಲ್ಲಿ ಗ್ರಾಮದ ವಾಸಿ ರಾಮಸುಬ್ಬಯ್ಯ ಎಂಬುವರು ಶ್ರೀನಿವಾಸಪುರ ಬಸ್ಸು ನಿಲ್ದಾಣದಲ್ಲಿ ಇದ್ದರು.  ಆ ಸಮಯದಲ್ಲಿ  ಬಂದ ಕೆಎಸ್‌ಆರ್‌ಟಿಸಿ ಬಸ್ ಸಂಖ್ಯೆ ಕೆಎ-೦೭-ಎಫ್-೯೯೧ ರ ವಾಹನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ರಾಮಸಯಬ್ಬಯ್ಯ ರವರಿಗೆ   ರಕ್ತಗಾಯಗಳಾಗಿರುತ್ತದೆ.

ಶ್ರೀನಿವಾಸಪುರ ಪೋಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೦೪-೨೦೦೯ ರಂದು ೦೯೦೩ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಯಲ್ದೂರು ಗ್ರಾಮದ ವಾಸಿ ನಾಗರತ್ನಮ್ಮ ಮತ್ತು ಅವರ ಮಗನಾದ ರಘು ರವರೊಂದಿಗೆ ಗ್ರಾಮದಲ್ಲಿ ನಡೆದುಕೊಂಡು ಹೋಗುತ್ತಿದ್ದರು.  ಆ ಸಮಯದಲ್ಲಿ ಬಂದ ಹೀರೋ ಹೊಂಡಾ ದ್ವಿಚಕ್ರ ವಾಹನ ಸಂಖ್ಯೆ  ಕೆಎ-೦೫-ಕೆ-೫೧೫೫ ರ ವಾಹನ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಘುಗೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ರಘು ಕಾಲಿಗೆ ರಕ್ತಗಾಯಗಳಾಗಿರುತ್ತದೆ.

ಮಾಲೂರು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೦-೦೪-೨೦೦೯ ರಂದು ೧೮೩೦ ಗಂಟೆ ಸಮಯದಲ್ಲಿ ಮಾಲೂರು ಹನುಮಂತ ನಗರದ ವಾಸಿ ತಿಮ್ಮರಾಯಪ್ಪ ಎಂಬುವರ ಮಗಳಾದ ಮಮತಶ್ರೀ ಎಂಬ ಮಗು ತಮ್ಮ ಬೀದಿಯಲ್ಲಿ ನಿಂತಿದ್ದ ಸಮಯದಲ್ಲಿ ಕೋಲಾರ ಕಡೆಯಿಂದ ಬಂದ ಯಮಹಾ ಸಂಖ್ಯೆ ಕೆಎ-೦೧-ಕೆ-೨೭೫೫ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಮಗುವಿಗೆ ಗಾಯಗಳಾಗಿದ್ದು ಪ್ರಸ್ತುತ ಕೋಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುತ್ತದೆ. ಆರೋಪಿ ದ್ವಿಚಕ್ರವಾಹನ ಚಾಲಕ ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದು ವಾಹನವನ್ನು ಅಮಾನತ್ತು ಪಡಿಸಲಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ  

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ೦೧

ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲೂಕು ಅಸಾಂಡಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೬-೦೪-೨೦೦೯ ರಂದು ೧೮೦೦ ಗಂಟೆ ಸಮಯದಲ್ಲಿ ಅಸಾಂಡಹಳ್ಳಿ ಗ್ರಾಮದ ವಾಸಿ ವೆಂಕಟೇಶಪ್ಪ ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ ಮುನಿಯಪ್ಪ, ಗೋಪಾಲಪ್ಪ, ಕೋದಂಡಪ್ಪ, ಪೆರುಮಾಳ್ ಮತ್ತು ಬೆಳ್ಳಮ್ಮ ಎಂಬುವರು ಅವಾಚ್ಯ ಶಬ್ದಗಳಿಂದ ಬೈದು ಅಕ್ರಮಗುಂಪು ಕಟ್ಟಿಕೊಂಡು ಹಲ್ಲೆ ಮಾಡಿ ಗಾಯಪಡಿಸಿರುತ್ತಾರೆ. ಗಾಯಾಳು ಮತ್ತು ಆರೋಪಿಗಳು ಸಹೋದರರಾಗಿದ್‌ಉದ ಸರ್ವೆ ನಂಬರ್‍ ೭೫ ರ ತೆಂಗಿನತೋಪಿಗೆ ಸಂಬಂಧಿಸಿದಂತೆ ಇದ್ದ ವಿವಾದದ ಹಿನ್ನಲೆಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ.

ಹಲ್ಲೆ: ೦೧

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೦೪-೨೦೦೯ ರಂದು ೧೮೦೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ಚಿಕ್ಕಯಳುವಹಳ್ಳಿ ಗ್ರಾಮದ ವಾಸಿ ಅಪ್ಪೇಗೌಡ ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಯಾದ ಚಂದ್ರಪ್ಪ ಎಂಬುವರು ಅವಾಚ್ಚಶಬ್ದಗಳಿಂದ ಬೈದು ಮಾರಕಾಸ್ತ್ರಗಳಿಂದ ಪ್ರಾಣಬೆದರಿಕೆ ಹಾಕಿ  ಕೈಗಳಿಂದ ಹೊಡೆದು ಮೈಕೈನೋವುಂಟು ಮಾಡಿರುತ್ತಾರೆ.

ಇತರೆ: ೦೨

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೦೪-೨೦೦೯ ರಂದು ೨೧೦೦ ಗಂಟೆ ಸಮಯದಲ್ಲಿ ಶ್ರೀಮತಿ ಅರ್ಚನಾ ಎಂ.ಎಸ್. ಸಹಾಯಕ ಕಮೀಷನರ್‍ ಮತ್ತು ಸಹಾಯಕ ಚುನಾವಣಾಧಿಕಾರಿಗಳು, ಕೋಲಾರ ರವರು  ಕೋಲಾರ ತಾಲೂಕು ಮಡೇರಹಳ್ಳಿ ಬಳಿ ಚುನಾವಣಾ ನೀತಿ ಸಂಹಿತೆ ಪರಿಶೀಲನಾ ಸಮಯದಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಆ ಸಮಯದಲ್ಲಿ ಬಂದ ವಾಹನ ಸಂಖ್ಯೆ ಕೆಎ-೧೭-ಎಂ-೧೦೭೧ ರಲ್ಲಿ ಬಂಗಾರುಪೇಟೆ ತಾಲೂಕು ಶ್ರೀನಿವಾಸಂದ್ರ  ಗ್ರಾಮದ ವಾಸಿಗಳಾದ ಕೆ.ಜಯಶಂಕರ್‍ ಮತ್ತು ಕೆ.ರವೀಂದ್ರ ಎಂಬುವರು ಯಾವುದೇ ಪೂರ್ವಾನುಮತಿ ಮತ್ತು ರಶೀದಿಗಳಿಲ್ಲದೆ ಆಂದ್ರ ಪ್ರದೇಶದ ಪಲಮನೇರು ಅಸೆಂಬ್ಲಿ ಚುನಾವಣೆಗಾಗಿ ಮತದಾರರಿಗೆ ಹಂಚಲು ಮಾದರಿ ಬ್ಯಾಲೆಟ್ ಪೇಪರ್‍ ಬಂಡಲ್, ಮಕ್ಕಳ ಸೈಕಲ್, ೪ ಸಿ.ಡಿ. ಮತ್ತು ಇತರೆ ಕರಪತ್ರಗಳನ್ನು ಸಾಗಿಸಿ  ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುತ್ತಾರೆ.

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೪-೦೪-೨೦೦೯ಕ್ಕೆ ಹಿಂದೆ ಯುವ ವಕ್ಕಲಿಗರ ಹಿತರಕ್ಷಣಾ ವೇದಿಕೆಯ ಹೆಸರಿನಲ್ಲಿ ಯಾರೋ ಅನಾಮಧೇಯ ವ್ಯೆಕ್ತಿಗಳು ಕಾಂಗ್ರೆಸ್ ಪಕ್ಷದ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ವಿರುದ್ದ ಅವಹೇಳನಕಾರಿ ವಿಚಾರವುಳ್ಳ ಕರಪತ್ರಗಳನ್ನು ಹಂಚಿ  ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ಶ್ರೀ ಎನ್,ಎಸ್,ಬಿಸ್ಸೇಗೌಡ, ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ, ಕೋಲಾರ ರವರು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದು, ಈ ಬಗ್ಗೆ ಶ್ರೀಮತಿ ಅರ್ಚನಾ ಎಂ.ಎಸ್. ಸಹಾಯಕ ಕಮೀಷನರ್‍ ಮತ್ತು ಸಹಾಯಕ ಚುನಾವಣಾಧಿಕಾರಿಗಳು, ಕೋಲಾರ ರವರು ದೂರನ್ನು ದಾಖಲಿಸಿರುತ್ತಾರೆ.

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲೆ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೫-೦೪-೨೦೦೯ ರಂದು ಮಾಲೂರು ತಾಲೂಕು ಯಳುವಹಳ್ಳಿ ಗ್ರಾಮದ ವಾಸಿ ಚಂದ್ರಪ್ಪ ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ ಅಮರೇಶ, ಕೊದಂಡಪ್ಪ ಮತ್ತು ರಾಘವೇಂದ್ರ ಎಂಬುವರು ಅವಾಚ್ಚಶಬ್ದಗಳಿಂದ ಬೈದು ಮಾರಕಾಸ್ತ್ರಗಳಿಂದ ಪ್ರಾಣಬೆದರಿಕೆ ಹಾಕಿ ಸೀಮೆ ಎಣ್ಣೆ ಹಾಕಿ ವಾಸದ ಮನೆಗೆ ಬೆಂಕಿ ಇಟ್ಟು ಜಾತಿ ನಿಂದನೆ ಮಾಡಿರುತ್ತಾರೆ.

ಅಸ್ವಾಭಾವಿಕ  ಮರಣದ  ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:

-ಸ್ಥಳ ದಂಡ ಮೊತ್ತ:  ರೂ.

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೫ ನೇ ಏಪ್ರಿಲ್ ೨೦೦೯

April 24, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೨೫-೦೪-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ  

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ೦೧

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೩-೦೪-೨೦೦೯ ರಂದು ೧೯೧೫ ಗಂಟೆ ಸಮಯದಲ್ಲಿ ಕೋಲಾರ ನಗರದ ಸುಧೀರ್‍ ಎಂಬುವರು ತನ್ನ ಬಜಾಜ್ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೭-ಕ್ಯೂ-೪೪೧೭ ನ್ನು ನಗರದ ಶ್ರೀ ರಾಘವೇಂದ್ರಸ್ವಾಮಿ ದೇವಾಲಯದ ಮುಂದೆ ನಿಲ್ಲಿಸಿ ದೇವರ ದರ್ಶನ ಮುಗಿಸಿಕೊಂಡು ಬರುವಷ್ಠರಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ವಾಹನದ ಬೆಲೆ ರೂ ೩೨,೮೦೦/- ಗಳಾಗಿರುತ್ತದೆ.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ೦೧

ಕೋಲಾರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಅಂಬಾಸಿಡರ್‍ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂರು ಜನರು ಸ್ಥಳದಲ್ಲೇ ಮೃತಪಟ್ಟ ಘಟನೆ ಕೋಲಾರ ಸಮೀಪ ತೋಟಗಾರಿಕಾ ಇಲಾಖೆಯ ಹಲಸಿನತೋಪಿನ ಬಳಿ ಎನ್.ಹೆಚ್ ೪ ರಸ್ತೆಯಲ್ಲಿ ಸಂಭವಿಸಿರುತ್ತದೆ. ದಿನಾಂಕ ೨೫-೦೪-೨೦೦೯ ರಂದು ಗಂಗಾಧರ ರೆಡ್ಡಿ ಎಂಬುವರು ತಮ್ಮ ಹೆಂಡತಿ ಪ್ರಮೀಳಮ್ಮ ಹಾಗೂ ಮಗಳಾದ ಮೇಘನಾ ರವರೊಡನೆ ಅಂಬಾಸಿಡರ್‍ ಕಾರ್‍ ಸಂಖ್ಯೆ ಎಪಿ-೦೩-ವಿ-೭೮೬೧ ರಲ್ಲಿ ಚಿತ್ತೂರಿನಿಂದ ಬೆಂಗಳೂರಿಗೆ ಹೋಗುವ ಸಲುವಾಗಿ ಹೋಗುತ್ತಿದ್ದರು. ಮೆಲ್ಕಂಡ ಸ್ಥಳದ ಬಳಿ ೦೭೪೫ ಗಂಟೆಗೆ ಹೋಗುವಷ್ಟರಲ್ಲಿ ಎದುರುಗಡೆಯಿಂದ ಬಂದ ಗ್ಯಾಸ್ ಲಾರಿ ಸಂಖ್ಯೆ ಕೆಎ-೦೪-ಎಬಿ-೯೬೬೯ ರ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕಾರಿಗೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಕಾರಿನ ಚಾಲಕ ಆರೋಗ್ಯಸ್ವಾಮಿ ಕಾರಿನಲ್ಲಿದ್ದ ಗಂಗಾಧರ ರೆಡ್ಡಿ ಹಾಗೂ ಇವರ ಹೆಂಡತಿ ಪ್ರಮೀಳಮ್ಮ ರವರು ತೀವ್ರವಾದ ಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಮೇಘನಾ ರವರಿಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಆರೋಪಿ ಸ್ಥಳದಿಂದ ಪರಾರಿಯಾಗಿದ್ದು ಅಪಘಾತ ಉಂಟು ಮಾಡಿದ ಲಾರಿಯನ್ನು ಮತ್ತು ಅಪಘಾತಕ್ಕೀಡಾದ ಕಾರನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

-ಸಾಧಾರಣ: ೦೧

ಕೋಲಾರ ಸಂಚಾರಿ ಪೋಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೪-೨೦೦೯ ರಂದು ೧೦೪೫ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಗಾಜಲದಿನ್ನೆ ಗ್ರಾಮದ ವಾಸಿ ಲಕ್ಷ್ಮೀದೇವಮ್ಮ ಎಂಬುವರು ಕೋಲಾರ ನಗರದ ಅಂತರಗಂಗೆ ರಸ್ತೆಯ ಜಾಲಪ್ಪ ಆಸ್ಪತ್ರೆ ಮುಂಬಾಗ ನಡೆದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ ನೊಂದಣಿ ಇಲ್ಲದ ಟಿವಿಎಸ್  ಫ್ಲೇಮ್ ದ್ವಿಚಕ್ರ ವಾಹನ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಲಕ್ಷ್ಮೀದೇವಮ್ಮ ರವರಿಗೆ ತಲೆಗೆ ಕೈಕಾಲುಗಳಿಗೆ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಆರ್‌.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ  

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ೦೨

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೦೪-೨೦೦೯ ರಂದು ೨೧೦೦ ಗಂಟೆ ಸಮಯದಲ್ಲಿ ಶ್ರೀಮತಿ ಅರ್ಚನಾ ಎಂ.ಎಸ್. ಸಹಾಯಕ ಕಮೀಷನರ್‍ ಮತ್ತು ಸಹಾಯಕ ಚುನಾವಣಾಧಿಕಾರಿಗಳು, ಕೋಲಾರ ರವರು  ಕೋಲಾರ ತಾಲೂಕು ಮಡೇರಹಳ್ಳಿ ಬಳಿ ಚುನಾವಣಾ ನೀತಿ ಸಂಹಿತೆ ಪರಿಶೀಲನಾ ಸಮಯದಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಆ ಸಮಯದಲ್ಲಿ ಬಂದ ವಾಹನ ಸಂಖ್ಯೆ ಕೆಎ-೧೭-ಎಂ-೧೦೭೧ ರಲ್ಲಿ ಬಂಗಾರುಪೇಟೆ ತಾಲೂಕು ಶ್ರೀನಿವಾಸಂದ್ರ  ಗ್ರಾಮದ ವಾಸಿಗಳಾದ ಕೆ.ಜಯಶಂಕರ್‍ ಮತ್ತು ಕೆ.ರವೀಂದ್ರ ಎಂಬುವರು ಯಾವುದೇ ಪೂರ್ವಾನುಮತಿ ಮತ್ತು ರಶೀದಿಗಳಿಲ್ಲದೆ ಆಂದ್ರ ಪ್ರದೇಶದ ಪಲಮನೇರು ಅಸೆಂಬ್ಲಿ ಚುನಾವಣೆಗಾಗಿ ಮತದಾರರಿಗೆ ಹಂಚಲು ಮಾದರಿ ಬ್ಯಾಲೆಟ್ ಪೇಪರ್‍ ಬಂಡಲ್, ಮಕ್ಕಳ ಸೈಕಲ್, ೪ ಸಿ.ಡಿ. ಮತ್ತು ಇತರೆ ಕರಪತ್ರಗಳನ್ನು ಸಾಗಿಸಿ  ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುತ್ತಾರೆ.

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೪-೦೪-೨೦೦೯ಕ್ಕೆ ಹಿಂದೆ ಯುವ ವಕ್ಕಲಿಗರ ಹಿತರಕ್ಷಣಾ ವೇದಿಕೆಯ ಹೆಸರಿನಲ್ಲಿ ಯಾರೋ ಅನಾಮಧೇಯ ವ್ಯೆಕ್ತಿಗಳು ಕಾಂಗ್ರೆಸ್ ಪಕ್ಷದ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ವಿರುದ್ದ ಅವಹೇಳನಕಾರಿ ವಿಚಾರವುಳ್ಳ ಕರಪತ್ರಗಳನ್ನು ಹಂಚಿ  ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ಶ್ರೀ ಎನ್,ಎಸ್,ಬಿಸ್ಸೇಗೌಡ, ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ, ಕೋಲಾರ ರವರು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದು, ಈ ಬಗ್ಗೆ ಶ್ರೀಮತಿ ಅರ್ಚನಾ ಎಂ.ಎಸ್. ಸಹಾಯಕ ಕಮೀಷನರ್‍ ಮತ್ತು ಸಹಾಯಕ ಚುನಾವಣಾಧಿಕಾರಿಗಳು, ಕೋಲಾರ ರವರು ದೂರನ್ನು ದಾಖಲಿಸಿರುತ್ತಾರೆ.

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲೆ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೫-೦೪-೨೦೦೯ ರಂದು ಮಾಲೂರು ತಾಲೂಕು ಯಳುವಹಳ್ಳಿ ಗ್ರಾಮದ ವಾಸಿ ಚಂದ್ರಪ್ಪ ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ ಅಮರೇಶ, ಕೊದಂಡಪ್ಪ ಮತ್ತು ರಾಘವೇಂದ್ರ ಎಂಬುವರು ಅವಾಚ್ಚಶಬ್ದಗಳಿಂದ ಬೈದು ಮಾರಕಾಸ್ತ್ರಗಳಿಂದ ಪ್ರಾಣಬೆದರಿಕೆ ಹಾಕಿ ಸೀಮೆ ಎಣ್ಣೆ ಹಾಕಿ ವಾಸದ ಮನೆಗೆ ಬೆಂಕಿ ಇಟ್ಟು ಜಾತಿ ನಿಂದನೆ ಮಾಡಿರುತ್ತಾರೆ.

ಅಸ್ವಾಭಾವಿಕ  ಮರಣದ  ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:

-ಸ್ಥಳ ದಂಡ ಮೊತ್ತ:  ರೂ.

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೪ ನೇ ಏಪ್ರಿಲ್ ೨೦೦೯

April 23, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೨೩-೦೪-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ  

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲೂಕು ವಿ.ಗುಟ್ಟಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೩-೦೪-೨೦೦೯ ರಂದು ೧೦೦೦ ರಂದು ವಿ.ಗುಟ್ಟಹಳ್ಳಿ ಗ್ರಾಮದ ವಾಸಿ ಗುರ್‍ರಪ್ಪ  ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ ವೆಂಕಟರಾಮ, ಸೋಮಶೇಖರ್‍, ರವಿ, ಶ್ರೀನಿವಾಸ ಎಂಬುವರು ಅಕ್ರಮಗುಂಪು ಕಟ್ಟಿಕೊಂಡು ಅವಾಚ್ಯ ಶಬ್ದಗಳಿಂದ ಬೈದು ಚಾಕುವಿನಿಂದ ಗಾಯಪಡಿಸಿ ಚಪ್ಪಲಿಯಿಂದ ಹೊಡೆದಿರುತ್ತಾರೆ. ಈ ಬಗ್ಗೆ ಎರಡೂ ಗುಂಪಿನವರು ಹೊಡೆದಾಡಿಕೊಂಡಿದ್ದು ದೂರು ಮತ್ತು ಪ್ರತಿದೂರು ಬಂದ ಹಿನ್ನಲೆಯಲ್ಲಿ  ಹಲ್ಲೆ ಮತ್ತು ದೊಂಬಿಗೆ ಸಂಬಂಧಿಸಿದಂತೆ ಕೇಸು ಮತ್ತು ಪ್ರತಿಕೇಸು ದಾಖಲಾಗಿರುತ್ತದೆ.

ಹಲ್ಲೆ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲೂಕು ವಿ.ಗುಟ್ಟಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೩-೦೪-೨೦೦೯ ರಂದು ೧೦೦೦ ರಂದು ವಿ.ಗುಟ್ಟಹಳ್ಳಿ ಗ್ರಾಮದ ವಾಸಿ ಸೋಮಶೇಖರ್‍ ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ ಟಿ.ವೆಂಕಟರಮಣ, ಕೃಷ್ಣಪ್ಪ ಮತ್ತು ಗುರ್‍ರಪ್ಪ ಎಂಬುವರು ಅವಾಚ್ಯ ಶಬ್ದಗಳಿಂದ ಬೈದು ಮಚ್ಚಿನಿಂದ ಕಾಲು ಮತ್ತು ಕೈಗಳಿಂದ ಹೊಡೆದು  ಗಾಯಪಡಿಸಿರುತ್ತಾರೆ. ಈ ಬಗ್ಗೆ ಎರಡೂ ಗುಂಪಿನವರು ಹೊಡೆದಾಡಿಕೊಂಡಿದ್ದು ದೂರು ಮತ್ತು ಪ್ರತಿದೂರು ಬಂದ ಹಿನ್ನಲೆಯಲ್ಲಿ  ಹಲ್ಲೆ ಮತ್ತು ದೊಂಬಿಗೆ ಸಂಬಂಧಿಸಿದಂತೆ ಕೇಸು ಮತ್ತು ಪ್ರತಿಕೇಸು ದಾಖಲಾಗಿರುತ್ತದೆ.

ಇತರೆ: ೦೧

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೪-೨೦೦೯ ರಂದು ೨೩೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ವಲಯ ಅಬಕಾರಿ ಉಪನಿರೀಕ್ಷಕರಾದ ಶ್ರೀ ಜಿ.ರಾಮಕೃಷ್ಣಪ್ಪ ರವರು ಅಕ್ರಮ ಮದ್ಯ ದಾಸ್ತಾನು ಮಾಡಿರುವ ಬಗ್ಗೆ ತಮಗೆ ಬಂದ ಖಚಿತ ವರ್ತಮಾನದ ಮೇರೆಗೆ ಶ್ರೀನಿವಾಸಪುರ ತಾಲೂಕು ಮೋಗಿಲಹಳ್ಳಿ ಗ್ರಾಮದ ವೆಂಕಟಾಚಲಪತಿ ಎಂಬುವರ ಅಂಗಡಿಯ ಬಳಿ ಹೋಗಿದ್ದರು. ಆ ಸಮಯದಲ್ಲಿ ಅಂಗಡಿಯ ಬಳಿ ಇದ್ದ ಅದೇ ಗ್ರಾಮದ ವಾಸಿಗಳಾದ ಮಂಜುನಾತ ಮತ್ತು ಇನ್ನಿಬ್ಬರು ಅಂಗಡಿಯಲ್ಲಿದ್ದ ಸುಮಾರು ೨೦-೨೫ ಬಾಟಲುಗಳನ್ನು ಹೊಡೆದು ನಾಶಪಡಿಸಿ ಜಿ.ರಾಮಕೃಷ್ಣಪ್ಪ ರವರನ್ನು ಅವಾಚ್ಯ ಶಬ್ದಗಳಿಂದ ಬೈದು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುತ್ತಾರೆ.

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕ್ಯಾಮೆರಾದಲ್ಲಿ ಫೋಟೋ ಹಿಡಿದು ಕಿಟಲೆ ಮಾಡಿದ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಘಟನೆ ಸಂಭವಿಸಿರುತ್ತದೆ. ದಿನಾಂಕ ೨೪-೦೪-೨೦೦೯ ರಂದು ೧೧೨೦ ಆಂಗ್ಲ ಭಾಷೆಯ ಉಪನ್ಯಾಸಕಿಯಾದ ಶ್ರೀಮತಿ ಇಂದು ಈಫನ್ ಎಂಬುವರು ತರಗತಿಯಲ್ಲಿ ಪಾಠ ಮಾಡುತ್ತಿದ್ದರು. ಆ ಸಮಯದಲ್ಲಿ ತಿಮ್ಮರಾವುತನಹಳ್ಳಿ ಗ್ರಾಮದ ವಾಸಿಗಳಾದ ಜಮೀರ್‍ ಅಹ್ಮದ್, ಸುಧಾಕರ್‍, ಶೀನಪ್ಪ  ಮತ್ತು ಇತರರು ಮೊಬೈಲ್ ಕ್ಯಾಮೆರಾದಲ್ಲಿ ಫೋಟೋ ಹಿಡಿದು ಕಿಟಲೆ ಮಾಡಿರುತ್ತಾರೆ.   ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಮೀರ್‍ ಅಹ್ಮದ್ ದೂರನ್ನು ದಾಖಲಿಸಿರುತ್ತಾರೆ. 

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:

-ಸ್ಥಳ ದಂಡ ಮೊತ್ತ:  ರೂ.

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ:

April 23, 2009

ಲೋಕಸಭಾ ಚುನಾವಣೆ ೨೦೦೯ ರ ಸಂಬಂಧ ಈ ದಿನ  ಕೋಲಾರ ಲೋಕಸಭಾ ಕ್ಷೇತ್ರದ  ಕೋಲಾರ ಜಿಲ್ಲಾ ಪೊಲೀಸ್ ವ್ಯಾಪ್ತಿಗೆ ಒಳಪಟ್ಟ ಒಟ್ಟು ೪ ವಿಧಾನಸಭಾ ಕ್ಷೇತ್ರಗಳಲ್ಲ್ಲಿ ನಡೆದ ಮತದಾನ ಸಂಪೂರ್ಣ ಶಾಂತಿಯುತವಾಗಿರುತ್ತದೆಒಟ್ಟು ೧೦೩೫ ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು ಯಾವುದೇ ಅಹಿತಕರ ಘಟನೆಗಳು ವರದಿಯಾಗಿರುವುದಿಲ್ಲ. ಜಿಲ್ಲೆಯಲ್ಲಿ ಒಟ್ಟು ಶೇ ೬೩.೮ % ರಷ್ಟು ಮತದಾನವಾಗಿದ್ದು ಪ್ರತಿ ತಾಲೂಕಿನ ಮತದಾನದ ಶೇಕಡಾವಾರು ಪ್ರಮಾಣ ಕೆಳಕಂಡಂತೆ ಇರುತ್ತದೆ.

ಕ್ಷೇತ್ರ

ಮತದಾನ ಪ್ರಮಾಣ

ಕೋಲಾರ

೬೦ %

ಮಾಲೂರು

೬೩ %

ಶ್ರೀನಿವಾಸಪುರ

೬೭ %

ಮುಳಬಾಗಿಲು

೬೫ %

ಒಟ್ಟು (ಪ್ರತಿಶತ)

೬೩.೮ %


ದಿನದ ಅಪರಾಧಗಳ ಪಕ್ಷಿನೋಟ ೨೩ ನೇ ಏಪ್ರಿಲ್ ೨೦೦೯

April 23, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೨೩-೦೪-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ  

ಮನೆಗಳ್ಳತನ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಸಂಗೊಂಡಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೨-೦೪-೨೦೦೯ ರಂದು ರಾತ್ರಿ ಸಂಗೊಂಡಹಳ್ಳಿ ಗ್ರಾಮದ ವಿನಾಯಕ ದೇವಾಲಯದ ಬಲಗಡೆಯ ಕಿಟಕಿ ಮುರಿದು ಒಳ ಪ್ರವೇಶಿಸಿದ ಯಾರೋ ಕಳ್ಳರು ವಿನಾಯಕ ವಿಗ್ರಹದಲ್ಲಿದ್ದ ಬೆಳ್ಳಿಯ ಕಣ್ಣುಗಳು ಮತ್ತಿತರೇ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ವಸ್ತುಗಳ ಒಟ್ಟು ಬೆಲೆ ರೂ. ೬೦೦೦/ ಆಗಿರುತ್ತದೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

ನಂಗಲಿ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೩-೦೪-೨೦೦೯ ರಂದು ೧೨೪೫ ಗಂಟೆ ಸಮಯದಲ್ಲಿ ಮದಿಗೆರೆ ಗ್ರಾಮದ ಗೇಟ್ ಬಳಿ ನಂಗಲಿ ಕಡೆಯಿಂದ ಬಂದ ಟ್ರಾಕ್ಟರ್‍ ಒಂದರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕೆಎ-೦೧-ಇಟಿ-೮೫೦೨ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ಅಲ್ಲಿಯೇ ರಸ್ತೆ ಬದಿಯಲ್ಲಿ ನಿಂತಿದ್ದ ಮುದಿಗೆರೆ ಗ್ರಾಮದ ವಾಸಿ ನಾಗಪ್ಪ ರವರಿಗೆ ಸಹಾ ಡಿಕ್ಕಿ ಹೊಡೆದಿರುತ್ತಾರೆ. ಇದರ ಪರಿಣಾಮ ದ್ವಿಚಕ್ರವಾಹನದಲ್ಲಿದ್ದ ಮುಷ್ಠೂರು ಗ್ರಾಮದ ವಾಸಿ ಕಲ್ಯಾಣ್ ಕುಮಾರ್‍ (೧೩) ಹಾಗೂ ರಸ್ತೆ ಬಿದಿಯಲ್ಲಿದ್ದ ನಾಗಪ್ಪ ರವರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ದ್ವಿಚಕ್ರವಾಹನ ಸವಾರ ಸುಬ್ರಮಣಿ ಎಂಬುವರಿಗೆ ಗಾಯಗಳುಂಟಾಗಿರುತ್ತದೆ.

-ಸಾಧಾರಣ: ೦೧

ಕೋಲಾರ ಗ್ರಾಮಾಂತರ ಪೊಲಿಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೩-೦೪-೨೦೦೯ ರಂದು ೧೦೦೦ ಗಂಟೆ ಸಮಯದಲ್ಲಿ ಕೋಲಾರ ನಗರದ ವಾಸಿ ಡಿ.ಎನ್.ಕನಕರಾಜು ಎಂಬುವರು ತಮ್ಮ ಕಾರ್‍ ಸಂಖ್ಯೆ ಕೆಎ-೦೫-ಪಿ-೭೮೩೮ ರಲ್ಲಿ ಕೋಲಾರದಿಂದ ಬೆಂಗಳೂರಿಗೆ ಹೋಗುವ ಸಲುವಾಗಿ ಎನ್.ಹೆಚ್ ೪ ರಸ್ತೆಯ ಮೆಟ್ಟುಬಂಡೆ ಕ್ರಾಸ್ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಬಜಾಜ್ ಪಲ್ಸರ್‍ ಸಂಖ್ಯೆ ಕೆಎ-೦೫-ಇಕೆ-೩೯೧೪ ದ್ವಿಚಕ್ರವಾಹನದ ಚಾಲಕ ತನ್ನ  ವಾಹನವನ್ನು ಅತಿವೇಗ ಮತ್ತು ಅಜಾಗರೂತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಎರಡೂ ವಾಹನಗಳು ಜಖಂಗೊಂಡು ದ್ವಿಚಕ್ರವಾಹನ ಸವಾರನಿಗೆ ಗಾಯಗಳುಂಟಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:

-ಸ್ಥಳ ದಂಡ ಮೊತ್ತ:  ರೂ.

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.