ದಿನದ ಅಪರಾಧಗಳ ಪಕ್ಷಿನೋಟ ೦೧ ನೇ ಜುಲ್ಯೆ ೨೦೦೯

June 30, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೧-೦೭-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಶಾಲೆಯಲ್ಲಿ ಸಿಲಿಂಡರ್‍ ಕಳ್ಳತನಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೮-೦೬-೨೦೦೯ ರಂದು ರಾತ್ರಿ ಯಾರೋ ಕಳ್ಳರು ಮುಳಬಾಗಿಲು ತಾಲ್ಲುಕೂ ಕಪ್ಪಲಮೊಡಗು ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಬಾಗಿಲಿನ ಬೀಗವನ್ನು ಮುರಿದು ಒಳಗೆ ಪ್ರವೇಶ ಮಾಡಿ ಬಿಸಿಯೂಟಕ್ಕೆ ಬಳಸುತ್ತಿದ್ದ ೨ ಗ್ಯಾಸ್ ಸಿಲಿಂಡರ್‍ ಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ.  ಈ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾರಾದ ಶ್ರೀ ಸುಬ್ಬರಾಯಪ್ಪ ರವರು ದೂರು ದಾಖಲು ಮಾಡಿರುತ್ತಾರೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಮಹಿಳೆಗೆ ಕಿರುಕುಳ ನೀಡುವ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಮುಳಬಾಗಿಲು ಪಟ್ಟಣದ ಪಳ್ಳಿಗರಪಾಳ್ಯದ ವಾಸಿಯಾದ ದೀಪಾರವರ ವಿವಾಹವು ಒಂದು ವರ್ಷದ ಹಿಂದೆ ನಾರಾಯಣಸ್ವಾಮಿ ಎಂಬುವರೊಂದಿಗೆ ನಡೆದಿತ್ತು.  ಮದುವೆ ಅದಾಗಿನಿಂದಲು ಅತ್ತೆ ಮಂಗಮ್ಮ ಮತ್ತು ಗಂಡ ನಾರಾಯಣಸ್ವಾಮಿ ರವರು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದು ದಿನಾಂಕ: ೨೮-೦೬-೨೦೦೯ ರಂದು ಗಂಡ ಕೈಗಳಿಂದ ಹೊಡೆದಿದ್ದು ಹಿಂಸೆ ತಾಳಲಾರದೆ ದಿನಾಂಕ ೩೦-೦೯-೨೦೦೯ ರಂದು ೧೮೩೦ ಗಂಟೆ ಸಮಯದಲ್ಲಿ ದೀಪಾ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಇಟ್ಟಿಕೊಂಡಿರುತ್ತಾಳೆ.

ರಸ್ತೆ ಅಪಘಾತಗಳು: ೦೩

-ಮಾರಣಾಂತಿಕ: ೦೧

ಮುಳಬಾಗಿಲು  ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೦೬-೨೦೦೯ ರಂದು ೧೬೪೫ ಗಂಟೆ ಸಮಯದಲ್ಲಿ ತಮಿಳುನಾಡಿನ ಕೃಷ್ಣಗಿರಿ ವಾಸಿಯಾದ ತಿಮ್ಮರಾಯ ಮತ್ತು ಅತನು ಸ್ನೇಹಿತ ಚಲಪತಿ ಎಂಬುವರು ತಮ್ಮ ದ್ವಿಚಕ್ರ ಸ್ಟಾರ್‍ ಸಿಟ್ ವಾಹನ ಸಂಖ್ಯೆ ಎಪಿ-೦೩-ಎಡಿ-೭೨೭೦ ರಲ್ಲಿ ರಾಷ್ಟ್ರೀಯ ಹೆದ್ದಾರಿ ೪ ರ ನರಸಿಂಹತೀರ್ಥದ ಬಳಿ ಬರುತ್ತಿದ್ದರು.  ಅ ಸಮಯದಲ್ಲಿ ಮುಳಬಾಗಿಲು ಕಡೆಯಿಂದ ಬಂದ ಕೆ..ಎಸ್.ಆರ್‍.ಟಿ.ಸಿ.  ಬಸ್ ಸಂ. ಕೆಎ-೦೭—೬೮೬ ರ ಚಾಲಕ ತನ್ನ ವಾಹನವನ್ನು  ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿರುತ್ತಾನೆ.  ಇದರ  ಪರಿಣಾಮವಾಗಿ ದ್ವಿಚಕ್ರವಾಹನದ ಸವಾರರಿಬ್ಬರಿಗೂ ಗಾಯಗಳಾಗಿದ್ದು ಚಲಪತಿ ಎಂಬುವರಿಗೆ ತೀವ್ರವಾದ ಗಾಯಗಳಾಗಿ ಆಸ್ಪತ್ರಗೆ ಸಾಗಿಸುವಾಗ ಮೃತಪಟ್ಟಿರುತ್ತಾನೆ.

-ಸಾಧಾರಣ: ೦೨

ಕೋಲಾರ ಗ್ರಾಮಾಂತರ  ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೦೬-೨೦೦೯ ರಂದು ೧೮೦೦ ಗಂಟೆ ಸಮಯದಲ್ಲಿ ಕೋಲಾರ ತಾಲ್ಲೂಕು ಕಾಮದೇನಹಳ್ಳಿ ಗ್ರಾಮದ ವಾಸಿಯಾದ ಶ್ರೀನಿವಾಸ ಎಂಬುವುರ ತಮ್ಮ  ಸ್ಕೂಟಿ  ಸಂಖ್ಯೆ ಕೆಎ-೦೭-ಜೆ-೨೦೫ ದ್ವಿಚಕ್ರವಾಹನದಲ್ಲಿ ರಾಷ್ಟ್ರೀಯ ಹೆದ್ದಾರಿ ೪ ರ ನೆರ್ನಹಳ್ಳಿ  ಬಳಿ   ಬರುತ್ತಿದ್ದರು. ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಇನೋವಾ ಕಾರ್‍ ಸಂಖ್ಯೆ ಕೆಎ-೦೩-ಎಂಎಫ್-೯೬೭  ರ ಚಾಲಕ   ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ.  ಇದರ ಪರಿಣಾಮವಾಗಿ ಶ್ರೀನಿವಾಸ ರವರಿಗೆ ತೀವ್ರವಾದ ಗಾಯಗಳಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು:  ‌ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:

-ಸ್ಥಳ ದಂಡ ಮೊತ್ತ: ರೂ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೩೦ ನೇ ಜೂನ್ ೨೦೦೯

June 29, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೦-೦೬-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಅರಹಳ್ಳಿ ಗ್ರಾಮದ ಬಳಿ ಬೆಸ್ಕಾಂ ಇಲಾಖೆಗೆ ಸೇರಿದ ೯೬೦ ಮೀಟರ್‍ ರಾಬಿಟ್ ವೈರ್‍ ಕಳುವಾಗಿರುತ್ತದೆ. ದಿನಾಂಕ ೨೮-೦೬-೨೦೦೯ ರಂದು ರಾತ್ರಿ ಯಾರೋ ಕಳ್ಳರು ಸಿಮೆಂಟ್ ಕಂಬವನ್ನು ಮುರಿದುಹಾಕಿ ವೈರನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ವೈರಿನ ಬೆಲೆ ರೂ. ೨೦,೦೦೦/ ಆಗಿರುತ್ತದೆ.

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೩

-ಮಾರಣಾಂತಿಕ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಲಾರಿ ಚಾಲಕನ ಅಜಾಗರೂಕತೆಯಿಂದ ಉಂಟಾದ ಅಪಘಾತದಲ್ಲಿ ಲಾರಿಯ ಕ್ಲೀನರ್‍ ಮೃತಪಟ್ಟಿರುತ್ತಾನೆ. ದಿನಾಂಕ ೨೯-೦೬-೨೦೦೯ ರಂದು ಮದ್ಯರಾತ್ರಿ ೦೦೦೦ ಗಂಟೆ ಸಮಯದಲ್ಲಿ ಕೆಎ-೦೫-ಎಎ-೯೩೪೪ ಸಂಖ್ಯೆ ಲಾರಿ ಚಾಲಕ ವಸಂತ್ ಎಂಬುವರು ಎನ್.ಹೆಚ್ ೪ ರಸ್ತೆಯ ಮಡೇರಹಳ್ಳಿ ಗ್ರಾಮದ ಬಳಿ ತನ್ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿ ನಿಂತಿದ್ದ ಟಿಪ್ಪರ್‍ ಲಾರಿಗೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು ವಸಂತ್ ರವರ ಲಾರಿಯಲ್ಲಿದ್ದ ಕ್ಲೀನರ್‍ ತಮ್ಮಯ್ಯ ಎಂಬುವರಿಗೆ ತೀವ್ರವಾದ ಗಾಯಗಳಾಗಿದ್ದು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ.

-ಸಾಧಾರಣ: ೦೨

ನಂಗಲಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೬-೨೦೦೯ ರಂದು ೧೧೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಪಿಂಡಿಗನಗರ ಗ್ರಾಮದ ವಾಸಿ ಮಂಜುನಾಥ್ ಎಂಬುವರು ತಮ್ಮ ಸಂಬಂಧಿ ಮಂಜುನಾತ ಎಂಬುವರೊಡನೆ ಬೈನಹಳ್ಳಿ ಗ್ರಾಮದ ಸಮೀಪ ನಡೆದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ ಹಿಂದಿನಿಂದ ಬಂದ ಹೀರೋಹೋಂಡಾ ದ್ವಿಚಕ್ರವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಮಂಜುನಾಥರವರಿಗೆ ತೀವ್ರವಾದ ಗಾಯಗಳಾಗಿರುತ್ತದೆ.

ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೬-೨೦೦೯ ರಂದು ೨೧೪೦ ಗಂಟೆ ಸಮಯದಲ್ಲಿ ಕೋಲಾರ ಕಠಾರಿಪಾಳ್ಯದ ವಾಸಿ ರವಿಕುಮಾರ್‍ ಎಂಬುವರು ತಮ್ಮ ಹೀರೋಹೋಂಡಾ ಸ್ಪ್ಲೆಂಡರ್‍ ಸಂಖ್ಯೆ ಕೆಎ-೦೧-ಜೆ-೯೧೭೧ ದ್ವಿಚಕ್ರವಾಹನದಲ್ಲಿ ಕೋಲಾರ ಎಂ.ಜಿ ರಸ್ತೆಯ ಕೆನರಾಬ್ಯಾಂಕ್ ಎ.ಟಿ.ಎಂ ಬಳಿ ಬರುತ್ತಿದ್ದರು. ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಹೀರೋಹೋಂಡಾ ದ್ವಿಚಕ್ರವಾಹನ ಸಂಖ್ಯೆ ಕೆಎ-೦೭-ಎಲ್-೫೭೨೫ ರ  ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ರವಿಕುಮಾರ್‍ರವರಿಗೆ ತೀವ್ರವಾದ ಗಾಯಗಳಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಕಾರಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೯-೦೬-೨೦೦೯ ರಂದು ೧೧೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಶ್ಯಾನುಬೋಗನಹಳ್ಳಿ ಗ್ರಾಮದ ವಾಸಿ ದಿನೇಶ್ (೪೬) ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ ಶ್ರೀರಾಮ ಮತ್ತು ಕೃಷ್ಣ ಎಂಬುವರು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಮತ್ತು ದೊಣ್ಣೆಗಳಿಂದ ಹೊಡೆದು ಗಾಯಪಡಿಸಿರುತ್ತಾರೆ. ಜಮೀನಿನ ವಿವಾದದ ಹಿನ್ನಲೆ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು:  ‌ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೧

ವೇಮಗಲ್ ಪೊಲೀಸ್ ಠಾಣೆಯಲ್ಲಿ ಹುಡುಗ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಅಬ್ದುಲ್ ಖಾದರ್‍ ಎಂಬುವರ ೧೫ ವರ್ಷದ ಮಗ ಯಾರಬ್ ಕಾಣೆಯಾಗಿರುತ್ತಾನೆ. ದಿನಾಂಕ ೨೫-೦೬-೨೦೦೯ ರಂದು ತನ್ನ ಮನೆಯಿಂದ ಹೊರಟ ಯಾರಬ್ ಹಿಂತಿರುಗಿ ಬಾರದೇ ಕಾಣೆಯಾಗಿರುತ್ತಾನೆ. ಈ ಬಗ್ಗೆ  ಅಬ್ದುಲ್ ಖಾದರ್‍ ರವರು ದೂರು ನೀಡಿರುತ್ತಾರೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:

-ಸ್ಥಳ ದಂಡ ಮೊತ್ತ: ರೂ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೯ ನೇ ಜೂನ್ ೨೦೦೯

June 28, 2009

ಕೋಲಾರ  ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೨೯-೦೬-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ೦೨

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ಕಠಾರಿಪಾಳ್ಯದ ವಾಸಿ ರಿಯಾಜ್ ಅಹ್ಮದ್ ಎಂಬುವರಿಗೆ ಸೇರಿದ ಹೀರೋಹೋಂಡಾ ಸ್ಪ್ಲೆಂಡರ್‍ ಸಂಖ್ಯೆ ಕೆಎ-೦೭-ಕ್ಯೂ-೭೦೦೬ ದ್ವಿಚಕ್ರವಾಹನ ಕಳುವಾಗಿರುತ್ತದೆ. ದಿನಾಂಕ ೨೧-೦೬-೨೦೦೯ ರಂದು ೧೪೦೦ ಗಂಟೆ ಸಮಯದಲ್ಲಿ ರಿಯಾಜ್ ರವರು ದ್ವಿಚಕ್ರವಾಹನವನ್ನು ತಮ್ಮ ವಾಸದ ಮನೆಯ ಮುಂದೆ ನಿಲ್ಲಿಸಿದ್ದ ಸಮಯದಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆ. ಕಳುವಾದ ವಾಹನದ ಬೆಲೆ ರೂ. ೪೦,೦೦೦/ ಆಗಿರುತ್ತದೆ.

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಮತ್ತೊಂದು ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ಕೀಲುಕೋಟೆ ವಾಸಿ ಕೆ.ಅರುಣ್ ಕುಮಾರ್‍ ಎಂಬುವರಿಗೆ ಸೇರಿದ ಹೀರೋಹೋಂಡಾ ಪ್ಯಾಷನ್ ಸಂಖ್ಯೆ ಕೆಎ-೦೭-ಕ್ಯೂ-೮೯೧ ದ್ವಿಚಕ್ರವಾಹನ ಕಳುವಾಗಿರುತ್ತದೆ. ದಿನಾಂಕ ೨೩-೦೬-೨೦೦೯ ರಂದು ರಾತ್ರಿ  ಕೆ.ಅರುಣ್ ಕುಮಾರ್‍ ರವರು ತನ್ನ ದ್ವಿಚಕ್ರವಾಹನವನ್ನು ತಮ್ಮ ವಾಸದ ಮನೆಯ ಮುಂದೆ ನಿಲ್ಲಿಸಿದ್ದ ಸಮಯದಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆ. ಕಳುವಾದ ವಾಹನದ ಬೆಲೆ ರೂ. ೩೧,೦೦೦/ ಆಗಿರುತ್ತದೆ.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು:  ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ   

ಮೋಸ / ವಂಚನೆ ಪ್ರಕರಣಗಳು: ೦೧

ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಮೋಸ/ವಂಚನೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಜನವರಿ ೨೦೦೯ ನೇ ಸಾಲಿನಲ್ಲಿ ಶ್ರೀ ದೇವರಾಜ ಅರಸ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಒ.ಬಿ.ಜಿ ಪರೀಕ್ಷೆಯಲ್ಲಿ ಕೆ.ಆರ್‍.ಮಾಘಲಕ್ಷ್ಮಿ, ಜಿ.ಬಿ.ಶ್ರೀಧರ್‍, ವಾಸನ್ ಮತ್ತು ಸತೀಶ್ ಎಂಬುವರು ತಮ್ಮ ಉತ್ತರ ಪತ್ರಿಕೆಯ ಹೊಲಿಗೆ ದಾರವನ್ನು ಕಿತ್ತು ನಕಲು ಮಾಡಿಸಿ ನಂತರ ಅದನ್ನು ಪುನಃ ಉತ್ತರ ಪತ್ರಿಕೆಗೆ ಜೋಡಿಸಿ ವಂಚನೆ ಎಸಗಿರುತ್ತಾರೆ. ಈ ವಿಷಯ ಮೌಲ್ಯಮಾಪದ ವೇಳೆ ಬೆಳಕಿಗೆ ಬಂದಿದ್ದು ಈ ಬಗ್ಗೆ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ ಯ ರಿಜಿಸ್ಟರ್‍ (ವ್ಯಾಲುವೇಷನ್) ರವರಾದ ಡಾ.ಸಚ್ಚಿದಾನಂದ ರವರು ದೂರು ನೀಡಿರುತ್ತಾರೆ.

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು:  ‌ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ  

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:

-ಸ್ಥಳ ದಂಡ ಮೊತ್ತ: ರೂ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ


ದಿನದ ಅಪರಾಧಗಳ ಪಕ್ಷಿನೋಟ ೨೮ ನೇ ಜೂನ್ ೨೦೦೯

June 27, 2009

ಕೋಲಾರ  ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೨೮-೦೬-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲೂಕು ನೀಲಟೂರು ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೬-೦೬-೨೦೦೯ ರಂದು ರಾತ್ರಿ ನೀಲಟೂರು ಗ್ರಾಮದ ಸರ್ಕಾರಿ ಶಾಲೆಯೊಳಗೆ ಪ್ರವೇಶಿಸಿದ ಯಾರೋ ಕಳ್ಳರು ಶಾಲೆಯಲ್ಲಿದ್ದ ರೂ. ೨೩೦೦/ ಬೆಲೆ ಬಾಳುವ ೨ ಸಿಲಿಂಡರ್‍ ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕೋದಂಡರಾಮಯ್ಯ ರವರು ದೂರು ನೀಡಿರುತ್ತಾರೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು:  ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ   

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೨

ನಂಗಲಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲೂಕು ಚಿಕ್ಕನಗರಲು ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೬-೦೬-೨೦೦೯ ರಂದು ೧೩೦೦ ಗಂಟೆ ಸಮಯದಲ್ಲಿ ಚಿಕ್ಕನಗರಲು ಗ್ರಾಮದ ವಾಸಿ ಸಿ.ಎ.ಬಾಸ್ಕರ್‍ ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಯಾದ ಚಂಗಪ್ಪ ಎಂಬುವರು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಮತ್ತು ದೊಣ್ಣೆಯಿಂದ ಹೊಡೆದು ಹಲ್ಲೆ ನಡೆಸಿರುತ್ತಾರೆ.

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಚುಂಚದೇನಹಳ್ಳಿ  ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೬-೦೬-೨೦೦೯ ರಂದು ೧೮೩೦ ಗಂಟೆ ಸಮಯದಲ್ಲಿ ಚುಂಚದೇನಹಳ್ಳಿ ಗ್ರಾಮದ ವಾಸಿ ನಾಗರಾಜ್ ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಯಾದ ಮುನಿರಾಮಪ್ಪ ಎಂಬುವರು ಕೈಗಳಿಂದ ಮತ್ತು ದೊಣ್ಣೆಯಿಂದ ಹೊಡೆದು ಹಲ್ಲೆ ನಡೆಸಿರುತ್ತಾರೆ.

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು:  ‌ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ  

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೧೫

-ಸ್ಥಳ ದಂಡ ಮೊತ್ತ: ರೂ. ೧೭೦೦/

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೭ ನೇ ಜೂನ್ ೨೦೦೯

June 26, 2009

ಕೋಲಾರ  ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೨೭-೦೬-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ಟೌನ್ ಸಂಗಮ್ ಚಿತ್ರಮಂದಿರ ರಸ್ತೆಯ ಗುರುಶಂಕರ್‍ ವೈನ್ಸ್ ನಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೫-೦೬-೨೦೦೯ ರಾತ್ರಿ ೧೦೦೦ ಗಂಟೆಗೆ ಜನಾರ್ಧನ್ ಎಂಬುವರು ತಮ್ಮ ವೈನ್ಸ್ ಅಂಗಡಿಗೆ ಬೀಗಹಾಕಿಕೊಂಡು ಹೋಗಿದ್ದ ಸಮಯದಲ್ಲಿ ಅಂಗಡಿಯ ಶೆಲ್ಟರನ್ನು ಹೊಡೆದುಹಾಕಿ ಒಳ ಪ್ರವೇಶಿಸಿದ ಯಾರೋ ಕಳ್ಳರು ಅಂಗಡಿಯಲ್ಲಿದ್ದ ಒಂದು ಫೋರ್ಟಬಲ್ ಕಲರ್‍ ಟಿವಿ, ರೂ ೨೦೦೦/ ನಗದು ಸೇರಿದಂತೆ ಒಟ್ಟು ೨೫೦೦/ ಬೆಲೆಯ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ವಾಹನಕಳ್ಳನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ಟೌನ್ ಮುತ್ಯಾಲಪೇಟೆ ವಾಸಿ ನಾಗಭೂಷಣ್ ಎಂಬುವರಿಗೆ ಸೇರಿದ ಕೆಎ-೦೭-ಕ್ಯೂ-೯೪೨ ಸಂಖ್ಯೆಯ ಟಿ.ವಿ.ಎಸ್ ಹೆವಿ ಡ್ಯೂಟಿ ದ್ವಿಚಕ್ರವಾಹನ ಕಳುವಾಗಿರುತ್ತದೆ. ದಿನಾಂಕ ೨೨-೦೬-೨೦೦೯ ರಂದು ೧೮೦೦ ಗಂಟೆ ಸಮಯದಲ್ಲಿ ನಾಗಭೂಷಣ್ ರವರು ತಮ್ಮ ವಾಸದ ಮನೆಯ ಮುಂದೆ ವಾಹನವನ್ನು ನಿಲ್ಲಿಸಿದ್ದ ಸಮಯದಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ವಾಹನದ ಬೆಲೆ ರೂ. ೨೨,೦೦೦/ ಆಗಿರುತ್ತದೆ.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು:  ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೬-೨೦೦೯ ರಂದು ೧೯೩೦ ಗಂಟೆ ಸಮಯದಲ್ಲಿ ಕೋಲಾರ ನಗರ ಮಾಸ್ತಿ ಬಡಾವಣೆಯ ವಾಸಿ ಪವನ್ ಕುಮಾರ್‍ ಎಂಬುವರು ತಮ್ಮ ಹೀರೋಹೋಂಡಾ ದ್ವಿಚಕ್ರವಾಹನ ಸಂಖ್ಯೆ ಕೆಎ-೦೭-ಕ್ಯೂ-೩೮೭೮ ಅನ್ನು ಚಾಲನೆ ಮಾಡಿಕೊಂಡು ಮುಳಬಾಗಿಲುನಿಂದ ಕೋಲಾರಕ್ಕೆ ಬರುವ ಸಲುವಾಗಿ ಎನ್.ಹೆಚ್ ೪ ರಸ್ತೆಯ ಕಾಮನೂರು ಗೇಟ್ ಬಳಿ ಬರುತ್ತಿದ್ದರು. ಆ ಸಮದಯಲ್ಲಿ ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ಕೆ.ರಾಮ್ ಪ್ರಸಾದ್ ತಮ್ಮ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದು ಇದರ ಪರಿಣಾಮ ವಾಹನ ರಸ್ತೆ ಬದಿಯ ಹಳ್ಳಕ್ಕೆ ಬಿದ್ದಿರುತ್ತದೆ. ಇದರ ಪರಿಣಾಮ ಪವನ್ ಕುಮಾರ್‍ ರವರ ಎಡಗೈ ಮೂಳೆ ಮುರಿದಿದ್ದು ಚಾಲಕನಿಗೂ ಸಹಾ ಗಾಯಗಳಾಗಿರುತ್ತದೆ.   

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ೦೧

ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿ ಹಾಗೂ ಅತ್ಯಾಚಾರ ಯತ್ನಕ್ಕೆ ಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ರಹಮತ್ ನಗರದ ಜ್ಯೋತಿ ವೇಬ್ರಿಡ್ಜ್ ಬಳಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೭-೦೬-೨೦೦೯ ರಂದು ೧೦೦೦ ಗಂಟೆ ಸಮಯದಲ್ಲಿ ಶ್ರೀಮತಿ ಇಷರತ್ತುನ್ನೀಸಾ ಎಂಬುವರ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿದ ಮಹಬೂಬ್, ಸನ್ನಾ, ಮುಕ್ತಿಯಾರ್‍, ಫರ್‍ಜಾನ್, ರಿಜ್ವಾನ್, ಶಬೀನಾ ಎಂಬುವರುಗಳು ಅಕ್ರಮಗುಂಪು ಕಟ್ಟಿಕೊಂಡು ಇಷರತ್ತುನ್ನೀಸಾ ರವರ ಹೆಣ್ಣುಮಕ್ಕಳ ಮೇಳೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಹೊಡೆದು ಎಳೆದಾಡಿ ಅತ್ಯಾಚಾರಕ್ಕೆ ಪ್ರಯತ್ನಿಸಿರುತ್ತಾರೆ.

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು:  ‌ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ  

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:

-ಸ್ಥಳ ದಂಡ ಮೊತ್ತ:

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೬ ನೇ ಜೂನ್ ೨೦೦೯

June 25, 2009

ಕೋಲಾರ  ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೨೬-೦೬-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ೦೨

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ವರದಕ್ಷಿಣೆ ಕಾರಣಕ್ಕಾಗಿ ಮಹಿಳೆಯೊಬ್ಬರ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿ ಕೊಲೆಗೈದ ಘಟನೆ ಮುಳಬಾಗಿಲು ಟೌನ್ ಪಳ್ಳಿಗರಪಾಳ್ಯದಲ್ಲಿ ಸಂಭವಿಸಿರುತ್ತದೆ. ಶ್ರೀಮತಿ ಮುನಿರತ್ನಮ್ಮ (೨೫) ಎಂಬುವರು ಕೊಲೆಗೀಡಾದವರು. ಮುನಿರತ್ನಮ್ಮ ರವರು ಸುಮಾರು ೬-೭ ವರ್ಷಗಳ ಹಿಂದೆ ಪಳ್ಳಿಗರಪಾಳ್ಯದ ವಾಸಿ ಕೃಷ್ಣಪ್ಪ ಎಂಬುವರೊಡನೆ ವಿವಾಹವಾಗಿದ್ದು ಈಗ್ಗೆ ಒಂದು ವರ್ಷದಿಂದ ಕೃಷ್ಣಪ್ಪ ವರದಕ್ಷಿಣೆ ತರುವಂತೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಇದೇ ಕಾರಣಕ್ಕೆ ದಿನಾಂಕ ೨೫-೦೬-೨೦೦೯ ರಂದು ೨೨೦೦ ಗಂಟೆ ಸಮಯದಲ್ಲಿ ತನ್ನ ಹೆಂಡತಿ ಮೇಲೆ ಜಗಳ ತೆಗೆದು ಆಕೆಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿರುತ್ತಾನೆ. ಇದರ ದೆಸೆಯಿಂದ ಮುನಿರತ್ನಮ್ಮ ಸುಟ್ಟಗಾಯಗಳಾಗಿ ಮೃತಪಟ್ಟಿದ್ದು ಕೃಷ್ಣಪ್ಪನಿಗೂ ಸಹಾ ಸುಟ್ಟ ಗಾಯಗಳುಂಟಾಗಿರುತ್ತದೆ.

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಸುಮಾರು ೨೫ ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬ ಕೊಲೆಗೀಡಾಗಿರುತ್ತಾನೆ. ದಿನಾಂಕ ೨೪-೦೬-೨೦೦೯ ರಂದು ರಾತ್ರಿವೇಳೆ ಯಾರೋ ಅಪರಿಚಿತ ವ್ಯಕ್ತಿಗಳು ವ್ಯಕ್ತಿಯನ್ನು ಕೊಲೆ ಮಾಡಿ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಮೃತದೇಹಕ್ಕೆ ಬೆಂಕಿ ಹಚ್ಚಿರುತ್ತಾರೆ. ವಿವರಗಳು ತಿಳಿಯಬೇಕಾಗಿರುತ್ತದೆ.

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ:  ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು:  ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ 

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ೦೧

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೬-೨೦೦೯ ರಂದು ೧೧೪೫ ಗಂಟೆ ಸಮಯದಲ್ಲಿ ಶಿಕ್ಷಕ ಪದಾಧಿಕಾರಿಗಳ ಚುನಾವಣೆ ಪ್ರಯುಕ್ತ ಕೋಲಾರನಗರ ಠಾಣೆಯ ಸಿಬ್ಬಂದಿಯವರಾದ ಪೇದೆ ೩೮೫ ಮುನಿಸ್ವಾಮಿ ಎಂಬುವರು  ಡಿ.ಡಿ.ಪಿ.ಐ ಕಛೇರಿಯ ಪ್ರವೇಶದ್ವಾರದ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಛೇರಿ ಆವರಣಕ್ಕೆ ಶಿಕ್ಷಕ ಮತದಾರರಿಗೆ ಮಾತ್ರ ಪ್ರವೇಶವಿದ್ದು ಆ ಸಮಯದಲ್ಲಿ ತನ್ನ ಖಾಸಗಿ ವಾಹನದೊಂದಿಗೆ ಅಲ್ಲಿಗೆ ಬಂದ ಗಾಂಧಿನಗರದ ವಾಸಿ ಶ್ರೀನಿವಾಸ ಎಂಬುವರನ್ನು ಒಳ ಪ್ರವೇಶಿಸದಂತೆ ಮುನಿಸ್ವಾಮಿ ರವರು ತಡೆದಿರುತ್ತಾರೆ. ಇದರಿಂದ ಕುಪಿತಗೊಂಡ ಶ್ರೀನಿವಾಸ ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿ ಪಡಿಸಿ ಪ್ರಾಣಬೆದರಿಕೆ ಹಾಕಿರುತ್ತಾರೆ.

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು:  ‌ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ  

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೧೭

-ಸ್ಥಳ ದಂಡ ಮೊತ್ತ: ರೂ. ೨೧೦೦/

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೫ ನೇ ಜೂನ್ ೨೦೦೯

June 25, 2009

ಕೋಲಾರ  ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೨೫-೦೬-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ:  ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು:  ಇಲ್ಲ

ರಸ್ತೆ ಅಪಘಾತಗಳು:  ೦೩

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೩

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೦೬-೨೦೦೯ ರಂದು ೧೭೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಸೂರಕುಂಟೆ ಗ್ರಾಮದ ವಾಸಿ ಈಶ್ವರ್‍ ರವರು ಕಪ್ಪಲಮಡುಗು ಗೇಟ್ ಬಳಿ ನಿಂತಿದ್ದರು. ಆ ಸಮಯದಲ್ಲಿ ಬಂದ ಗೂಡ್ಸ್ ಟೆಂಪೋ ಸಂಖ್ಯೆ ಎಪಿ-೦೪-ಯು-೬೧೫೮ ರ ಚಾಲಕ ತನ್ನ ವಾಹನವನ್ನ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಈಶ್ವರ್‌ರವರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಬಲಕಾಲಿಗೆ ತೀವ್ರತರವಾಗಿ ಗಾಯಗಳಾಗಿ ಮುಳಬಾಗಿಲು ಪೂರ್ಣಿಮಾ ನರ್ಸಿಂಗ್‌ ಹೋಂಗೆ ದಾಖಾಗಿರುತ್ತಾರೆ. 

ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೦೬-೨೦೦೯ ರಂದು ೨೨೪೫ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ನರಸಾಪುರ ಗ್ರಾಮದ ವಾಸಿಗಳಾದ ಚಂದ್ರಶೇಖರ್‍ ಮತ್ತು ನಾರಾಯಣಸ್ವಾಮಿ ಎಂಬುವರು ಈಚರ್‍ ಗೂಡ್ಸ್ ವಾಹನ ಸಂಖ್ಯೆ ಕೆಎ-೪೨-೨೨೮ ರಲ್ಲಿ ಕೋಲಾರ ತಾಲೂಕು ಕುರುಗಲ್ ಗೇಟ್ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಈಚರ್‍ ವಾಹನ ಚಾಲಕ ತನ್ನ ವಾಹನವನ್ನ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ಬದಿಯ ಮರಕ್ಕೆ  ಡಿಕ್ಕಿ ಹೊಡೆಸಿದ ಪರಿಣಾಮ ಚಂದ್ರಶೇಖರ್‍ ಮತ್ತು ನಾರಾಯಣಸ್ವಾಮಿ ಎಂಬುವರಿಗೆ   ತೀವ್ರತರವಾಗಿ ಗಾಯಗಳಾಗಿ ಚಿಕಿತ್ಸೆಗಾಗಿ ಕೋಲಾರ ಎಸ್‌ಎನ್‌ಆರ್‍ ಆಸ್ಪತ್ರೆಗೆ  ದಾಖಾಗಿರುತ್ತಾರೆ. 

ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೦೬-೨೦೦೯ ರಂದು ೦೯೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ನರಸಾಪುರ ಗ್ರಾಮದ ವಾಸಿಯಾದ ಅನಿತ ಎಂಬುವರು  ಆಟೋ   ಸಂಖ್ಯೆ ಕೆಎ-೦೭-೭೧೩೫ ರಲ್ಲಿ ಕೋಲಾರ ತಾಲೂಕು ಅಚ್ಚಟ್ನಹಳ್ಳಿ ಗೇಟ್ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಎದರುಗಡೆಯಿಂದ ಬಂದ ಕ್ಯಾಂಟರ್‍ ವಾಹನ ಸಂಖ್ಯೆ ಕೆಎ-೪೦-೪೧೪೦ರ ಚಾಲಕ ತನ್ನ ವಾಹನವನ್ನ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಆಟೋಗೆ  ಡಿಕ್ಕಿ ಹೊಡೆಸಿದ ಪರಿಣಾಮ ಅನಿತ ಎಂಬುವರಿಗೆ   ತೀವ್ರತರವಾಗಿ ಗಾಯಗಳಾಗಿ ಚಿಕಿತ್ಸೆಗಾಗಿ ಕೋಲಾರ  ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ  ದಾಖಾಗಿರುತ್ತಾರೆ. 

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು:  ‌ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ  

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೧೮

-ಸ್ಥಳ ದಂಡ ಮೊತ್ತ: ೨,೦೦೦/-

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೪ ನೇ ಜೂನ್ ೨೦೦೯

June 23, 2009

ಕೋಲಾರ  ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೨೪-೦೬-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ:  ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು:  ಇಲ್ಲ

ರಸ್ತೆ ಅಪಘಾತಗಳು:  ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ 

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು:  ‌ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೧

ಮಾಲೂರು ಪೊಲೀಸ್ ಠಾಣೆಯಲ್ಲಿ ಹುಡುಗ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೫-೦೪-೨೦೦೯ ರಂದು ಬೆಳಿಗ್ಗೆ ಮಾಲೂರು ಪಟ್ಟಣದ ನಂಜಪ್ಪ ಲೇ-ಔಟ್ ವಾಸಿ ಎಸ್.ಟಿ.ವೆಂಕಟೇಶಪ್ಪ ಎಂಬುವರ ಮಗನಾದ ಮಂಜುನಾಥ(೨೪) ಎಂಬುವನು ಬೆಂಗಳೂರಿಗೆ ತೋಟದ ಕೆಲಸಕ್ಕೆಂದು ಹೋದವನು ಇದುವರೆವಿಗೂ ಮನೆಗೆ ಬಾರದೆ ಕಾಣೆಯಾಗಿರುತ್ತಾನೆ.    

ಮುಂಜಾಗ್ರತೆ ಕ್ರಮಗಳು: ಇಲ್ಲ  

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೧೮

-ಸ್ಥಳ ದಂಡ ಮೊತ್ತ: ೨,೦೦೦/-

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೩ ನೇ ಜೂನ್ ೨೦೦೯

June 22, 2009

ಕೋಲಾರ  ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೨೩-೦೬-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ:  ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು:  ಇಲ್ಲ

ರಸ್ತೆ ಅಪಘಾತಗಳು:  ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ 

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೬-೨೦೦೯ ರಂದು ೧೭೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು  ದೊಡ್ಡಗಾನಹಳ್ಳಿ ಗ್ರಾಮದ ವಾಸಿ ಮಂಜುನಾಥ ಎಂಬುವರು ತನ್ನ ಜಮೀನಿನಲ್ಲಿ ಬೇಲಿ ಹಾಕುತ್ತಿದ್ದರು. ಆ ಸಮಯದಲ್ಲಿ ಆದೇ ಗ್ರಾಮದ ವಾಸಿಯಾದ ಕೃಷ್ಣಪ್ಪ ಎಂಬುವರು ಬೇಲಿ ಹಾಕಬಾರದೆಂತ ಜಗಳ ತೆಗೆದು  ಅವಾಚ್ಚಶಬ್ದಗಳಿಂದ ಬೈದು ಮಚ್ಚಿನಿಂದ ಬಲಗೈನ ಬೆರಳು ಮತ್ತು ಮುಂಗೈಗೆ  ಹೊಡೆದು  ರಕ್ತ ಗಾಯಪಡಿಸಿ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾನೆ.

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು:  ೦೧

ಮಾಲೂರು ಪೊಲೀಸ್ ಠಾಣೆಯಲ್ಲಿ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೬-೨೦೦೯ ರಂದು ೧೧೦೦ ಗಂಟೆ ಸಮಯದಲ್ಲಿ ಬಾಬು ಬಿನ್ ಮಾದೇಶ, ಮಂಗಳೂರ ಟೌನ್, ಧರ್ಮಸ್ಥಳ, ಹಾಸನ ಜಿಲ್ಲೆ ಎಂಬ ವಿಳಾಸವನ್ನು ನೀಡಿ ಮಾಲೂರು ಪಟ್ಟಣದ ಕೋಲಾರ – ಮಾಲೂರು ರಸ್ತೆಯಲ್ಲಿರುವ ಶ್ರೀ ನಂಜುಂಡೇಶ್ವರಿ ಲಾಡ್ಜ್‌ನಲ್ಲಿ ರೂಂ ಅನ್ನು ಬಾಡಿಗೆಗೆ ಪಡೆದು ವಿಷ ಸೇವನೆ ಮಾಡಿ ಮೃತ ಪಟ್ಟಿರುತ್ತಾನೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ  

ಮುಂಜಾಗ್ರತೆ ಕ್ರಮಗಳು: ಇಲ್ಲ  

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೧೮

-ಸ್ಥಳ ದಂಡ ಮೊತ್ತ: ೨,೦೦೦/-

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೨೨ ನೇ ಜೂನ್ ೨೦೦೯

June 21, 2009

ಕೋಲಾರ  ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೨೨-೦೬-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ:  ೦೧

ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೇವಸ್ಥಾನದಲ್ಲಿ ಹುಂಡಿ ಕಳ್ಳತನಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೦೬-೨೦೦೯ ರಂದು ರಾತ್ರಿ ಯಾರೋ ಕಳ್ಳರು ಕೋಲಾರ ನಗರದಲ್ಲಿರುವ ಕೋಲಾರಮ್ಮ ದೇವಾಲಯದ ಬೀಗವನ್ನು ಮುರಿದು ಒಳಗೆ ಪ್ರವೇಶ ಮಾಡಿ ದೇವಸ್ಥಾನದ ಹುಂಡಿಯಲ್ಲಿದ್ದ ರೂ. ೧೦,೦೦೦/-ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ದೇವಸ್ಥಾನದ ಅರ್ಚಕರಾದ ಚಂದ್ರಶೇಖರ ದೀಕ್ಷಿತ್ ರವರು ದೂರನ್ನು ದಾಖಲಿಸಿರುತ್ತಾರೆ.

ಸಾಧಾರಣ ಕಳ್ಳತನ:  ೦೪

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಎಸಿಎಸ್‌ಆರ್‍ ವೈರ್‍ ಕಳ್ಳತನಕ್ಕೆ ಸಂಬಂಧಿಸಿದಂತೆ ೪ ಪ್ರತ್ಯೇಕ ಪ್ರಕರಣಗಳು ದಾಖಲಾಗಿರುತ್ತದೆ.

೧. ದಿನಾಂಕ ೦೬-೦೬-೨೦೦೯ ರ ರಾತ್ರಿ ಯಾರೋ ಕಳ್ಳರು ಮುಳಬಾಗಿಲು ತಾಲೂಕು ಬೀಮಾಪುರ ಗ್ರಾಮದ ಬಳಿ ರಾಮಯ್ಯ ಎಂಬುವರ ಪಂಪ್‌ಸೆಟ್‌ಗೆ ಅಳವಡಿಸಿದ್ದ ೭೨೦ ಮೀಟರ್‍ ಉದ್ದದ ಎಸಿಎಸ್‌ಆರ್‍ ವೈರ್‍ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ವೈರ್‌ನ ಬೆಲೆ ರೂ ೨೦,೮೮೮/- ಗಳಾಗಿರುತ್ತದೆ. ಈ ಬಗ್ಗೆ ಮಲ್ಲಯ್ಯ, ಕಿರಿಯ ಅಭಿಯಂತರರು, ಬೆಸ್ಕಾಂ, ಮುಳಬಾಗಿಲು ರವರು ದೂರನ್ನು ದಾಖಲಿಸಿರುತ್ತಾರೆ.

೨. ದಿನಾಂಕ ೧೨-೦೬-೨೦೦೯ ರ ರಾತ್ರಿ ಯಾರೋ ಕಳ್ಳರು ಮುಳಬಾಗಿಲು ತಾಲೂಕು ಎಸ್‌.ಐ.ಅನಂತಪುರ ಗ್ರಾಮದ ಬಳಿ ಸುರೇಂದ್ರ ಜಿ ಎಂಬುವರ ಪಂಪ್‌ಸೆಟ್‌ಗೆ ಅಳವಡಿಸಿದ್ದ ೬೬೬ ಮೀಟರ್‍ ಉದ್ದದ ಎಸಿಎಸ್‌ಆರ್‍ ವೈರ್‍ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ವೈರ್‌ನ ಬೆಲೆ ರೂ ೧೫,೦೮೬/- ಗಳಾಗಿರುತ್ತದೆ. ಈ ಬಗ್ಗೆ ಶಿವಶಂಕರ್‍, ಕಿರಿಯ ಅಭಿಯಂತರರು, ಆವಣಿ ಬೆಸ್ಕಾಂ ಶಾಖೆ, ಮುಳಬಾಗಿಲು ಉಪ-ವಿಭಾಗ ರವರು ದೂರನ್ನು ದಾಖಲಿಸಿರುತ್ತಾರೆ.

೩. ದಿನಾಂಕ ೧೭-೦೬-೨೦೦೯ ರ ರಾತ್ರಿ ಯಾರೋ ಕಳ್ಳರು ಮುಳಬಾಗಿಲು ತಾಲೂಕು ಜಮ್ಮುನಹಳ್ಳಿ ಗ್ರಾಮದ ಬಳಿ ವೆಂಕಟರಾಮಪ್ಪ ಎಂಬುವರ ಪಂಪ್‌ಸೆಟ್‌ಗೆ ಅಳವಡಿಸಿದ್ದ ೮೪೦ ಮೀಟರ್‍ ಉದ್ದದ ಎಸಿಎಸ್‌ಆರ್‍ ವೈರ್‍ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ವೈರ್‌ನ ಬೆಲೆ ರೂ ೨೭,೨೦೨/- ಗಳಾಗಿರುತ್ತದೆ. ಈ ಬಗ್ಗೆ ಮಲ್ಲಯ್ಯ, ಕಿರಿಯ ಅಭಿಯಂತರರು, ಬೆಸ್ಕಾಂ, ಮುಳಬಾಗಿಲು ರವರು ದೂರನ್ನು ದಾಖಲಿಸಿರುತ್ತಾರೆ.

೦೪. ದಿನಾಂಕ ೨೦-೦೬-೨೦೦೯ ರ ರಾತ್ರಿ ಯಾರೋ ಕಳ್ಳರು ಮುಳಬಾಗಿಲು ತಾಲೂಕು ಭಟ್ರಹಳ್ಳಿ ರಸ್ತೆ ಕಪ್ಪಲಮಡುಗು ಸಮೀಪ ಬೆಸ್ಕಾಂ ಇಲಾಖೆಯಿಂದ  ಅಳವಡಿಸಿದ್ದ ರಾಬಿಟ್ ವೈರ್‍, ಎಸಿಎಸ್‌ಆರ್‍ ವೈರ್‍  ಮತ್ತು ಕಂಬಗಳಲ್ಲಿ ಅಳವಡಿಸಿದ್ದ ಇತರೆ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ವೈರ್‌ನ ಬೆಲೆ ರೂ ೪೬,೪೩೨/- ಗಳಾಗಿರುತ್ತದೆ. ಈ ಬಗ್ಗೆ ಸುಬ್ರಮಣ್ಯಂ, ಕಿರಿಯ ಅಭಿಯಂತರರು, (ಓ & ಎಂ) ಬೆಸ್ಕಾಂ, ಮುಳಬಾಗಿಲು ರವರು ದೂರನ್ನು ದಾಖಲಿಸಿರುತ್ತಾರೆ.

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು:  ಇಲ್ಲ

ರಸ್ತೆ ಅಪಘಾತಗಳು:  ೦೫

-ಮಾರಣಾಂತಿಕ: ೦೧

ಮಾಲೂರು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೧೮-೦೬-೨೦೦೯ ರಂದು ಸಂಜೆ ಮಾಲೂರು ತಾಲೂಕು ಚಳಗನಹಳ್ಳಿ ಗ್ರಾಮದ ವಾಸಿ ಗಿಡ್ಡಪ್ಪ ಎಂಬುವರು ತನ್ನ ಟಿವಿಎಸ್‌ ಹೆವಿಡ್ಯೂಟಿ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೭-ಕೆ-೭೩೩೩ರಲ್ಲಿ ಮೈಲಾಂಡಹಳ್ಳಿ ಸಮೀಪ ಹೋಗುತ್ತಿದ್ದರು. ಆ ಸಮಯದಲ್ಲಿ ಎದುರುಗಡೆಯಿಂದ ಬಂದ ನೊಂದಣಿ ಸಂಖ್ಯೆ ಗೊತ್ತಿಲ್ಲದ ಟಾಟಾ ಸುಮೋ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ತಲೆಗೆ ಎದೆಗೆ ಗಾಯಗಳಾಗಿ ಚಿಕಿತ್ಸೆಗಾಗಿ ಬೆಂಗಳೂರು ನಿಮಾನ್ಸ್‌ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ ೨೧-೦೬-೨೦೦೯ ರಂದು ೧೭೩೦ ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾನೆ.

-ಸಾಧಾರಣ:  ೦೪

ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೦-೦೬-೨೦೦೯ ರಂದು ೦೭೦೦ ಗಂಟೆ ಸಮಯದಲ್ಲಿ ಲಾರಿ ಸಂಖ್ಯೆ ಎಪಿ-೦೨-ಟಿ-೩೬೭೭ ರ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ರಾಷ್ಟ್ರೀಯ ಹೆದ್ದಾರಿ-೪ ಟಮಕ ಬೈಪಾಸ್ ಬಳಿ ಉರುಳಿಸಿರುತ್ತಾನೆ. ಪರಿಣಾಮ ಲಾರಿ ಚಾಲಕನಿಗೆ ಗಾಯಗಳಾಗಿ ಲಾರಿಯಲ್ಲಿದ್ದ ಗ್ರಾನೈಟ್ ಕಲ್ಲುಗಳು ಡ್ಯಾಮೇಜ್ ಆಗಿರುತ್ತದೆ.

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೦೬-೨೦೦೯ ರಂದು ೧೮೪೫ ಗಂಟೆ ಸಮಯದಲ್ಲಿ  ಶ್ರೀನಿವಾಸಪುರ ತಾಲೂಕು ಎನಮರೇಪಲ್ಲಿ ಗ್ರಾಮದ ವಾಸಿ ಶ್ರೀರಾಮಪ್ಪ ಮತ್ತು ಅತನ ಪತ್ನಿ ಲಕ್ಷ್ಮೀದೇವಮ್ಮ ಎಂಬುವರು ಪುಂಗನೂರು ಕ್ರಾಸ್ – ಎನಮರೇಪಲ್ಲಿ ಕ್ರಾಸ್ ಮಧ್ಯೆ ನಡೆದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ ಬಂದ ನೊಂದಣಿ ಸಂಖ್ಯೆ ಗೊತ್ತಿಲ್ಲದ ದ್ವಿಚಕ್ರ ವಾಹನ ಸವಾರ ತನ್ನ ವಾಹನವನ್ನು  ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು  ಲಕ್ಷ್ಮೀದೇವಮ್ಮ ರವರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಗಾಯಗಳಾಗಿರುತ್ತದೆ,  

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೦-೦೬-೨೦೦೯ ರಂದು ೨೧೦೦ ಗಂಟೆ ಸಮಯದಲ್ಲಿ  ಕೋಲಾರ ತಾಲೂಕು ಅರಾಭಿಕೊತ್ತನೂರು ಗ್ರಾಮದ ವಾಸಿ ವೆಂಕಟೇಶಪ್ಪ  ಎಂಬುವರು ನಡೆದುಕೊಂಡು ಮನೆಗೆ ಹೋಗುತ್ತಿದ್ದರು. ಆ ಸಮಯದಲ್ಲಿ ಬಂದ  ಲ್ಯಾನ್‌ಕೋ ಇಟಾಚೀ ಜೆ.ಸಿ.ಬಿ. ವಾಹನ ಚಾಲಕ ತನ್ನ ವಾಹನವನ್ನು  ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು  ವೆಂಕಟೇಶಪ್ಪ ರವರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಎದೆಗೆ ಗಾಯಗಳಾಗಿ ಚಿಕಿತ್ಸೆಗಾಗಿ ಆರ್‌.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾರೆ,  

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೦೬-೨೦೦೯ ರಂದು ೨೧೩೦ ಗಂಟೆ ಸಮಯದಲ್ಲಿ  ಬೆಂಗಳೂರು ನಗರದ  ವಾಸಿ ಕೆ.ಎನ್.ಅಶ್ವಿನ್ ಎಂಬುವರು ತನ್ನ ಕಾರು ಸಂಖ್ಯೆ ಕೆಎ-೦೫-ಎಂಸಿ-೬೦೭ ರಲ್ಲಿ ರಾಷ್ಟ್ರೀಯ ಹೆದ್ದಾರಿ-೪ ಮಡೇರಹಳ್ಳಿ ಬಳಿ ಹೋಗುತ್ತಿದ್ದರು.  ಆ ಸಮಯದಲ್ಲಿ ಬೆಂಗಳೂರು ಕಡೆಯಿಂಧ ಬಂದ  ಕಾರು ಸಂಖ್ಯೆ ಕೆಎಲ್‌-೦೧-ಎಎಫ್-೭೩೯೧ರ ಕಾರು ಚಾಲಕ ತನ್ನ ವಾಹನವನ್ನು  ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು    ಡಿಕ್ಕಿ ಹೊಡೆಸಿದ ಪರಿಣಾಮ ಎರಡು ಕಾರಿನಲ್ಲಿದ್ದವರಿಗೆ ಗಾಯಗಳಾಗಿದ್ದು ಎರೆಡು ವಾಹನಗಳು ಜಖಂ ಗೊಂಡಿರುತ್ತದೆ. 

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೩

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೯-೦೬-೨೦೦೯ ರಂದು ೧೧೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ನರಸಾಪುರ ಗ್ರಾಮದ ವಾಸಿ ನಾಗರಾಜ ಎಂಬುವರು ತನ್ನ ತಾಯಿಯೊಂದಿಗೆ ಕೋಲಾರ ತಾಲೂಕು ಗಟ್ಟಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮದುವೆಗೆ ಹೋಗಿದ್ದರು. ಆ ಸಮಯದಲ್ಲಿ ಅವರ ತಾಯಿ ಪಕ್ಕದ ಮಾವಿನ ತೋಪಿಗೆ ಮೂತ್ರವಿಸರ್ಜನೆಗಾಗಿ ಹೋಗಿದ್ದರು. ಕಾವಲುಗಾರನಾದ ಶ್ರೀರಾಮಪ್ಪ ವಿನಾಕಾರಣ ಜನಗಳ ತೆಗೆದು ನಾಗರಾಜ ರವರ ತಾಯಿಗೆ ಹೊಡೆಯುತ್ತಿದ್ದ, ಕೇಳಿದ್ದಕ್ಕೆ ಮಚ್ಚನಿಂದ ಬೀಸಿ ನಾಗರಾಜ ರವರ ಕೈಗೆ ಹೊಡೆದು ಗಾಯಪಡಿಸಿರುತ್ತಾನೆ.  ಚಿಕಿತ್ಸೆಗಾಗಿ ಕೋಲಾರದ ಎಸ್‌ಎನ್‌ಆರ್‌ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ವೇಮಗಲ್ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೦-೦೬-೨೦೦೯ ರಂದು ೧೯೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಕ್ಯಾಲನೂರು ಗ್ರಾಮದ ವಾಸಿ ರಾಘವೇಂದ್ರ ಎಂಬುವರು ಕುಡಿದ ಅಮಲಿನಲ್ಲಿ ಕೈಯಲ್ಲಿ ಚಾಕು ಹಿಡಿದುಕೊಂಡು ಗಲಾಟೆ ಮಾಡುತ್ತಿದ್ದನು. ಇದನ್ನು ಕೇಳಿದ ಆನಂದ ಎಂಬವರಿಗೆ ಚಾಕುವಿನಿಂದ ಇರಿದು ರಕ್ತಗಾಯಪಡಿಸಿ ಅವಾಚ್ಚಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಚಿಕಿತ್ಸೆಗಾಗಿ ಕೋಲಾರದ ಎಸ್‌ಎನ್‌ಆರ್‌ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೦-೦೬-೨೦೦೯ ರಂದು   ಕೋಲಾರ ತಾಲೂಕು ಶೆಟ್ಟಿಕೊತ್ತನೂರು ಗ್ರಾಮದ ವಾಸಿ ಮುನಿಯಪ್ಪ  ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಮಾವಿನ ಗಿಡಗಳಲ್ಲಿನ ಫಸಲನ್ನು ಅದೇ ಗ್ರಾಮದ ವಾಸಿಗಳಾದ ಈಶ್ವರಪ್ಪ ಮತ್ತು ಇತರೆ ೫ ಜನರು ಕೀಳುತ್ತಿದ್ದು ಕೇಳಿದ್ದಕ್ಕೆ ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ. 

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು:  ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ  

ಮುಂಜಾಗ್ರತೆ ಕ್ರಮಗಳು: ಇಲ್ಲ  

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೧೮

-ಸ್ಥಳ ದಂಡ ಮೊತ್ತ: ೨,೦೦೦/-

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.