ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೦-೦೭-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ
ರಸ್ತೆ ಅಪಘಾತಗಳು: ೦೩
-ಮಾರಣಾಂತಿಕ: ೦೧
ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೨೯-೦೭-೨೦೦೯ ರಂದು ೦೯೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಕೋಡಿರಾಮಸಂದ್ರ ಗ್ರಾಮದ ವಾಸಿ ವೆಂಕಟೇಶ ಎಂಬುವರು ರಾಷ್ಟ್ರೀಯ ಹೆದ್ದಾರಿ-೪ ಹನುಮಾನ್ ಕಲ್ಯಾಣ ಮಂಟಪದ ಮುಂದೆ ನಡೆದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ ಬಂದ ಟ್ರಾಕ್ಟರ್ ಸಂಖ್ಯೆ ಕೆಎ-೦೭-ಟಿ-೬೭೧೦ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ವೆಂಕಟೇಶ ರವರಿಗೆ ತೀವ್ರತರವಾದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.
-ಸಾಧಾರಣ: ೦೨
ಮಾಲೂರು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೨೩-೦೭-೨೦೦೯ ರಂದು ೧೧೩೦ ಗಂಟೆ ಸಮಯದಲ್ಲಿ ಮಾಲೂರು ಪಟ್ಟಣದ ಪಟಾಲಮ್ಮ ಬಡಾವಣೆ ವಾಸಿ ರಮೇಶ್ ಎಂಬುವರು ತನ್ನ ದ್ವಿಚಕ್ರ ವಾಹನದಲ್ಲಿ ಬಾಲಾಜಿ ವೃತ್ತದ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಬಂದ ಲಾರಿ ಸಂಖ್ಯೆ ಕೆಎ-೦೧-ಎಇ-೨೪೩೬ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ರಮೇಶ್ ರವರಿಗೆ ತೀವ್ರತರವಾದ ಗಾಯಗಳಾಗಿ ಚಿಕಿತ್ಸೆಗಾಗಿ ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
ಮಾಲೂರು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೨೮-೦೭-೨೦೦೯ ರಂದು ೧೭೩೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ಜಯಮಂಗಲ ಗ್ರಾಮದ ವಾಸಿ ಮುನಿರಾಜು ಎಂಬುವರು ತನ್ನ ತನ್ನ ಸೈಕಲ್‌ನಲ್ಲಿ ಕೋಡಿಹಳ್ಳಿ ಗೇಟ್ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಬಂದ ಬಜಾಜ್ ಮ್ಯಾಕ್ಸ್ ೧೦೦ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೩-ಇಇ-೮೬೭೫ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ಮುನಿರಾಜು ರವರಿಗೆ ತೀವ್ರತರವಾದ ಗಾಯಗಳಾಗಿ ಚಿಕಿತ್ಸೆಗಾಗಿ ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ೦೨
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೨೬-೦೭-೨೦೦೯ ರಂದು ೨೧೧೮ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಯಾರಂಘಟ್ಟ ಗ್ರಾಮದ ವಾಸಿಯಾದ ರತ್ನಮ್ಮ ಎಂಬುವರ ಮೇಲೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ಅದೇ ಗ್ರಾಮದ ವಾಸಿಗಳಾದ ಶ್ರೀನಿವಾಸಪ್ಪ ಮತ್ತು ಇತರೆ ೯ ಜನರು ಅಕ್ರಮ ಗುಂಫು ಕಟ್ಟಿಕೊಂಡು ಬಂದು ಜಗಳ ತೆಗೆದು ರತ್ನಮ್ಮ, ವೆಂಕಟಪ್ಪ, ಕೃಷ್ಣಮೂರ್ತಿ ಮತ್ತು ಕೃಷ್ಣ ಎಂಬುವರನ್ನು ಕೈಗಳಿಂದ ಮತ್ತು ಕಾಲಿನಿಂದ ಹೊಡೆದು ರತ್ನಮ್ಮ ರವರ ಕತ್ತಿನಲ್ಲಿದ್ದ ಮಾಂಗಲ್ಯ ಮತ್ತು ಕರಿಮಣಿ ಸರವನ್ನು ಕಿತ್ತುಕೊಂಡು ಹೊರಟುಹೋಗಿರುತ್ತಾರೆ.
ಮಾಲೂರು ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೨೯-೦೭-೨೦೦೯ ರಂದು ೧೧೦೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ಲಕ್ಕೂರು ಗ್ರಾಮದ ವಾಸಿಗಳಾದ ಜೈ ಭಾರತಮ್ಮ ಮತ್ತು ರಾಜೇಂದ್ರರೆಡ್ಡಿ ಎಂಬುವರ ನಡುವೆ ಈ ಹಿಂದೆ ಆಸ್ತಿ ವಿಚಾರದಲ್ಲಿ ಗಲಾಟೆಗಳಾಗಿದ್ದು, ಪ್ರಕರಣಗಳೂ ಸಹ ದಾಖಲಾಗಿರುತ್ತದೆ. ಈ ದ್ವೇಷದ ಹಿನ್ನೆಲೆಯಲ್ಲಿ ರಾಜೇಂದ್ರರೆಡ್ಡಿ ಮತ್ತು ಇತರೆ ೧೬ ಜನರು ಅಕ್ರಮ ಗುಂಫು ಕಟ್ಟಿಕೊಂಡು ಕೈಗಳಲ್ಲಿ ಕಲ್ಲು, ದೊಣ್ಣೆ ಮತ್ತು ಮಚ್ಚುಗಳನ್ನು ಹಿಡಿದುಕೊಂಡು ಭಾರತಮ್ಮ ರವರ ಮನೆಯ ಬಳಿ ಬಂದು ಅವಾಚ್ಚಶಬ್ದಗಳಿಂದ ಬೈದು ಕಲ್ಲು ಮತ್ತು ಮಚ್ಚಿನಿಂದ ಹೊಡೆದು ಪ್ರಕರಣಗಳನ್ನು ವಾಪಸ್ಸು ಪಡೆಯಬೇಕೆಂದು ಇಲ್ಲದ್ದಿದ್ದರೆ ಪ್ರಾಣ ತೆಗೆಯುವುದಾಗಿ ಬೆದರಿಕೆ ಹಾಕಿರುತ್ತಾರೆ. ನಂತರ ಬಿಡಿಸಲು ಬಂದ ಅರುಣಾ ಎಂಬುವರನ್ನು ಹಿಡಿದು ಎಳೆದಾಡಿ ಮಾನಭಂಗಮಾಡಲು ಪ್ರಯತ್ನಪಟ್ಟು ಕತ್ತಿನಲ್ಲಿದ್ದ ೧೧೦ ಗ್ರಾಂ ಚಿನ್ನದ ತಾಳಿ ಮತ್ತು ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೊರಟುಹೋಗಿರುತ್ತಾರೆ. ಗಾಯಾಳುಗಳು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
ಹಲ್ಲೆ: ಹಲ್ಲೆ
ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೨೯-೦೭೨-೦೦೯ ರಂದು ೧೫೩೦ ಗಂಟೆ ಸಮಯದಲ್ಲಿ ಕೋಲಾರ ನಗರದ ಮುನೇಶ್ವರ ನಗರದ ವಾಸಿ ಶ್ರೀನಿವಾಸರಾಜು ಆರ್ ಎಂಬುವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಳಿ ಇರುವ ಸ್ವಾಮಿ ಬೋರ್‌ವೆಲ್ ಮುಂದೆ ಬರುತ್ತಿದ್ದರು. ಆ ಸಮಯದಲ್ಲಿ ಬಂದ ಕಿಲಾರಿಪೇಟೆ ವಾಸಿ ವೆಂಕಟೇಶ್ @ ಮುಕ್ಕಡ್ ವೆಂಕಟೇಶ್ ಎಂಬುವರು ಹಳೇ ದ್ವೇಷದ ಹಿನ್ನೆಲೆಯಲ್ಲಿ ಅವಾಚ್ಚಶಬ್ದಗಳಿಂದ ಬೈದು ಮಚ್ಚಿನಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾನೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೩
ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಮರದಿಂದ ಬಿದ್ದು ಮೃತ ಪಟ್ಟಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೦೫-೦೭-೨೦೦೯ ರಂದು ೧೧೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಮಡಿವಾಳ ಗ್ರಾಮದ ವಾಸಿ ನರಸಿಂಹಪ್ಪ ಎಂಬುವರು ಬೇವಿನ ಸೊಪ್ಪನ್ನು ಕೀಳಲು ಮರ ಹತ್ತಿದ್ದು ಸೊಪ್ಪನ್ನು ಕೀಳುವಾಗ ಕಾಲು ಜಾರಿಬಿದ್ದು ಕತ್ತಿನಿ ಹಿಂಬಾಗಕ್ಕೆ ತೀವ್ರತರವಾದ ಗಾಯವಾಗಿ ಚಿಕಿತ್ಸೆಗಾಗಿ ಕೋಲಾರ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದ ದಿನಾಂಕ ೨೯-೦೭-೨೦೦೯ ರಂದು ೧೨೩೫ ಗಂಟೆ ಸಮಯದಲ್ಲಿ ಮೃತ ಪಟ್ಟಿರುತ್ತಾರೆ.
ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ವಿಧ್ಯುತ್ ಸ್ಪರ್ಶದಿಂದ ಮೃತ ಪಟ್ಟಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೨೯-೦೭-೨೦೦೯ ರಂದು ೧೧೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ವಿರೂಪಾಕ್ಷಿ ಗ್ರಾಮದ ವಾಸಿ ನಾರಾಯಣಪ್ಪ ಎಂಬುವರು ಸುಬ್ರಮಣಿ ದೀಕ್ಷಿತ್ ರವರ ಸಮಾಧಿಯ ಬಳಿ ನಡೆದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ ವಿಧ್ಯುತ್ ತಂತಿ ತುಂಡಾಗಿ ಬಿದ್ದು ನೋಡದೆ ತುಳಿದ ಕಾರಣ ವಿಧ್ಯುತ್ ಪ್ರಸರಣವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ.
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೯-೦೭-೨೦೦೯ ರಂದು ರಾತ್ರಿ ಕೋಲಾರದ ಖಾದ್ರಿಪುರದ ವಾಸಿ ಸೀನಪ್ಪ(೪೫) ಎಂಬುವರು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಆತ್ಮಹತ್ಯೆಗೆ ಹಣದ ಮುಂಗಟ್ಟು ಕಾರಣವಾಗಿರುತ್ತದೆ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು:
-ಸ್ಥಳ ದಂಡ ಮೊತ್ತ: ರೂ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.