ದಿನದ ಅಪರಾಧಗಳ ಪಕ್ಷಿನೋಟ ೦೨ ನೇ ಜುಲ್ಯೆ ೨೦೦೯

July 2, 2009

ಕೋಲಾರ  ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೦೨-೦೭-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸುಲಿಗೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೦೨-೦೬-೨೦೦೯ ರಂದು ೧೧೦೫ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಎಸ್.ಚದುಮನಹಳ್ಳಿ ಗ್ರಾಮದ ವಾಸಿ ಕೃಷ್ಣಪ್ಪ ಎಂಬುವರು ಕಾಶೀಪುರ ಪ್ರಗತಿ ಗ್ರಾಮೀಣ ಬ್ಯಾಂಕಿನಿಂದ ರೂ. ೭೮,೩೫೦/- ಗಳನ್ನು ಡ್ರಾ ಮಾಡಿಕೊಂಡು ಟಿವಿಎಸ್ ೫೦ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೭-ಹೆಚ್-೮೬೫೬ರಲ್ಲಿ ತನ್ನ ಸ್ನೇಹಿತ ಮುನಿಶಾಮಿ ಜೊತೆಯಲ್ಲಿ ಕೆ.ಜಿ.ಎಫ್ – ಮುಳಬಾಗಿಲು ರಸ್ತೆಯ ಅಸಲಿ ಅತ್ತಿಕುಂಟೆ ಗ್ರಾಮದ ಬಳಿ ಬರುತ್ತಿದ್ದರು. ಆ ಸಮಯದಲ್ಲಿ ಹಿಂದುಗಡೆಯಿಂದ ಬಂದ ಕಪ್ಪು ಬಣ್ಣದ ಬಜಾಜ್ ಪಲ್ಸರ್‌ ದ್ವಿಚಕ್ರ ವಾಹನದಲ್ಲಿ ಬಂದ ೩ ಅಪರಿಚಿತರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸುವಂತೆ ನುಗ್ಗಿಸಿದಾಗ ಕೃಷ್ಣಪ್ಪ ಮತ್ತು ಮುನಿಶಾಮಿ ರವರು ಕೆಳಗೆ ಬಿದ್ದ ತಕ್ಷಣ ಹಣವಿದ್ದ ಬ್ಯಾಗನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆ.

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೪

-ಮಾರಣಾಂತಿಕ: ೦೧

ಮುಳಬಾಗಿಲು  ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೧-೦೭-೨೦೦೯ ರಂದು ೦೨೩೦ ಗಂಟೆ ಸಮಯದಲ್ಲಿ ಬೆಂಗಳೂರು ನಗರದ ತ್ಯಾಗರಾಜ ಕಾಲೋನಿ ವಾಸಿಯಾದ  ನವೀನ್ ಮತ್ತು ಆತನ ೩ ಜನ ಸ್ನೇಹಿತರು ಸ್ಯಾಂಟ್ರೋ  ಕಾರು ಸಂಖ್ಯೆ ಕೆಎ-೦೨-ಎಡಿ-೫೯೦೯ ರಲ್ಲಿ ರಾಷ್ಟ್ರೀಯ ಹೆದ್ದಾರಿ ೪ ರ ವಿಗುಟ್ಟಹಳ್ಳಿ ಗೇಟ್ ಬಳಿ ಬರುತ್ತಿದ್ದರು.  ಅ ಸಮಯದಲ್ಲಿ ಕಾರಿನ ಚಾಲಕನಾದ ಮೋಹನ್ ಕುಮಾರ್‍  ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕೆರೆಯ ಪಕ್ಕದ ಹಳ್ಳದಲ್ಲಿ ಉರುಳಿಸಿರುತ್ತಾನೆ.  ಇದರ  ಪರಿಣಾಮವಾಗಿ ಕಾರಿನಲ್ಲಿದ್ದ ರಾಕೇಶ್, ರಾಜ, ಮೊಹನ್ ಕುಮಾರ್‍ @ ದಿಲೀಪ್ ಮತ್ತು ಮಂಜುನಾಥ್ ರವರಿಗೆ  ಗಾಯಗಳಾಗಿದ್ದು ರಾಕೇಶ್ ಎಂಬುವರಿಗೆ ತೀವ್ರವಾದ ಗಾಯಗಳಾಗಿ ಆಸ್ಪತ್ರಗೆ ಸಾಗಿಸುವಾಗ ಮೃತಪಟ್ಟಿರುತ್ತಾನೆ.

-ಸಾಧಾರಣ: ೦೩

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೧-೦೭-೨೦೦೯ ರಂದು ೧೨೪೫ ಗಂಟೆ ಸಮಯದಲ್ಲಿ ಬೆಂಗಳೂರು ಪಟ್ಟಣದ ಕತ್ರಿಗುಪ್ಪೇ ವಾಸಿಯಾದ ಮುರುಗಯ್ಯ ವಿ.ಎಸ್ ಎಂಬುವರು ತಮ್ಮ ಕುಟುಂಬ ಸಮೇತ ತಿರುಪತಿಗೆ ಹೋಗಲು ಕಾರು  ಸಂಖ್ಯೆ ಕೆಎ-೫೨-ಎಂ-೯೦೯ರಲ್ಲಿ  ರಾಷ್ಟ್ರೀಯ ಹೆದ್ದಾರಿ ೪ ರ ವಿಗುಟ್ಟಹಳ್ಳಿ ಗೇಟ್ ಬಳಿ ಬರುತ್ತಿದ್ದರು.  ಅ ಸಮಯದಲ್ಲಿ ಕಾರಿನ ಚಾಲಕನಾದ  ಅನಿಲ್ ಕುಮಾರ್‍ ವಿ,ಎಸ್ ಎಂಬುವರು  ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ಬದಿಯ ಕಲ್ಲಿಗೆ ಡಿಕ್ಕಿ ಹೊಡೆಸಿ ಪಕ್ಕದ ಹಳ್ಳದಲ್ಲಿ ಉರುಳಿಸಿರುತ್ತಾನೆ.  ಇದರ  ಪರಿಣಾಮವಾಗಿ ಕಾರಿನಲ್ಲಿದ್ದ  ಮುರುಗಯ್ಯ ರವರ ಮಗಳಾದ ಇಂಧುಮತಿ ರವರಿಗೆ  ಗಾಯಗಳಾಗಿರುತ್ತದೆ.

ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೧-೦೭-೨೦೦೯ ರಂದು ೧೮೧೫ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ನೂಕಲಬಂಡೆ ಗ್ರಾಮದ ವಾಸಿಯಾದ ಸೈಯದ್ ಶಮೀರ್‍  ಎಂಬುವರು ತಮ್ಮ  ದ್ವಿಚಕ್ರ ವಾಹನ  ಸಂಖ್ಯೆ ಕೆಎ-೦೨-ಇಜಿ-೭೪೭೧ರಲ್ಲಿ ರಾಷ್ಟ್ರೀಯ ಹೆದ್ದಾರಿ ೪ ರ ವುಡ್ದೀಸ್ ಹೋಟಲ್ ಮುಂಬಾದಲ್ಲಿ  ಕೋಲಾರ ಕಡೆಯಿಂದ ಮುಳಬಾಗಿಲು ಕಡೆಯಿಂದಗೆ ಹೋಗುತ್ತಿದ್ದರು .  ಅ ಸಮಯದಲ್ಲಿ  ಇಚರ್‍ ರೋಡ್ ರೋಲರ್‍ ವಾಹನ ಸಂಖ್ಯೆ  ಇಸಿ-೫೨೫೦ರ  ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿರುತ್ತಾನೆ.  ಇದರ  ಪರಿಣಾಮವಾಗಿ ಸೈಯದ್ ಸಮೀರ್‍ ರವರಿಗೆ  ಗಾಯಗಳಾಗಿ ಚಿಕಿತ್ಸೆಗಾಗಿ ಆರ್‌.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೦೬-೨೦೦೯ ರಂದು ೧೫೩೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ನಿದರಮಂಗಲ ಗ್ರಾಮದ ವಾಸಿಯಾದ ಗೋವಿಂದಮ್ಮ ಎಂಬುವರು  ನಿದರಮಂಗಲ ಗೇಟ್ ಬಳಿ ನಿಂತಿದ್ದರು .  ಅ ಸಮಯದಲ್ಲಿ  ಟೇಕಲ್ ಕಡೆಯಿಂದ ಬಂದ ಟಿಪ್ಪರ್‍ ವಾಹನ ಸಂಖ್ಯೆ  ಕೆಎ-೦೮-೨೮೭೭ರ  ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಗೋವಿಂದಮ್ಮ ರವರಿಗೆ ಡಿಕ್ಕಿ ಹೊಡೆಸಿರುತ್ತಾನೆ.  ಇದರ  ಪರಿಣಾಮವಾಗಿ ಎರೆಡು ಕಾಲುಗಳ ಮೂಳೆ ಮುರಿತ ಗಾಯಗಳಾಗಿ ಚಿಕಿತ್ಸೆಗಾಗಿ ಕೋಲಾರದ ಎಸ್‌.ಎನ್.ಆರ್. ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ೦೨

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೨೩-೦೬-೨೦೦೯ ರಂದು ೧೫೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ದಿನ್ನೂರು ಗ್ರಾಮದ ವಾಸಿ ನಾರಾಯಣಸ್ವಾಮಿ ಡಿ.ವಿ. ಮತ್ತು ಅದೇ ಗ್ರಾಮದ ವಾಸಿ ರಮೇಶ ಎಂಬುವರಿಗೆ ಜಮೀನು ವಿಚಾರದಲ್ಲಿ ತಕರಾರು ಇದ್ದು ಈ ಹಿನ್ನೇಲೆಯಲ್ಲಿ ರಮೇಶ ಮತ್ತು ಇತರೆ ೫ ಜನರು ಅಕ್ರಮ ಗುಂಪು ಕಟ್ಟಿಕೊಂಡು ಕೈಯಲ್ಲಿ ದೂಣ್ಣೆ ಮತ್ತು ಚಾಕುವನ್ನು ಹಿಡಿದುಕೊಂಡು ಬಂದು ಚಾಕುವಿನಿಂದ ಮತ್ತು ದೊಣ್ಣೆಯಿಂದ ವೆಂಕಟಲಕ್ಷ್ಮಮ್ಮ, ಚಂದ್ರಮ್ಮ, ವೆಂಕಟೇಶಮ್ಮ, ರಾಜಪ್ಪ ಮತ್ತು ನಾನಮ್ಮ ರವರನ್ನು ಹೊಡೆದು ಗಾಯಪಡಿಸಿರುತ್ತಾರೆ.  

ವೇಮಗಲ್ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೧೨-೦೬-೨೦೦೯ ರಂದು ೧೪೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಬೆಳಮಾರನಹಳ್ಳಿ ಗ್ರಾಮದ ವಾಸಿ ಆಂಜಿನಮ್ಮ  ಮತ್ತು ಅದೇ ಗ್ರಾಮದ ವಾಸಿ ಮುನೇಶಪ್ಪ ಎಂಬುವರಿಗೆ ಜಮೀನು ವಿಚಾರದಲ್ಲಿ ತಕರಾರು ಇದ್ದು ಈ ಹಿನ್ನೇಲೆಯಲ್ಲಿ ಮುನೇಶಪ್ಪ ಮತ್ತು ಇತರೆ ೧೫ ಜನರು ಅಕ್ರಮ ಗುಂಪು ಕಟ್ಟಿಕೊಂಡು ಕೈಯಲ್ಲಿ ದೂಣ್ಣೆಯನ್ನು ಹಿಡಿದುಕೊಂಡು ಬಂದು   ದೊಣ್ಣೆಯಿಂದ  ಆಂಜಿನಮ್ಮ ರವರನ್ನು ಹೊಡೆದು ಗಾಯಪಡಿಸಿರುತ್ತಾರೆ. ಚಿಕಿತ್ಸೆಗಾಗಿ ಕೋಲಾರ ಎಸ್‌,ಎನ್‌,ಆರ್‍.ಆಸ್ಪತ್ರೆಗೆ ದಾಖಲಾಗಿ ತಡವಾಗಿ ದೂರು ನೀಡಿರುತ್ತಾರೆ.  

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ೦೧

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೦೬-೨೦೦೯ ರಂದು ೧೯೩೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಎನ್‌.ವಡ್ಡಹಳ್ಳಿ ಗ್ರಾಮದ ವಾಸಿ ಶ್ರೀಮತಿ ಕೃಷ್ಣಮ್ಮ ರವರ ಖಾಲಿ ನಿವೇಶನದಲ್ಲಿ ಅದೇ ಗ್ರಾಮದ ವಾಸಿಯಾದ ವೆಂಕಟೇಶಪ್ಪ ಎಂಬುವರು ಕಲ್ಲುಗಳನ್ನು ನೆಡುತ್ತಿದ್ದರು. ಇದನ್ನು ಪ್ರಶ್ನಿಸಿದ ಕೃಷ್ಣಮ್ಮ ರವರಿಗೆ ವೆಂಕಟೇಶಪ್ಪ, ಈರಪ್ಪ, ವರಲಕ್ಷ್ಮಮ್ಮ ರವರು ಸೇರಿಕೊಂಡು ಕೈಗಳಿಂದ ಹೊಡೆದು ಗಾಯಪಡಿಸಿ ಅಡ್ಡ ಬಂದ ಕೃಷ್ಣಮ್ಮ ರವರ ಗಂಡ ಈರಪ್ಪ ರವರನ್ನು ಹೊಡೆದು ಜಾತಿನಿಂದನೆ ಮಾಡಿರುತ್ತಾರೆ.  ಈ ಬಗ್ಗೆ ದೂರು ಮತ್ತು ಪ್ರತಿದೂರುಗಳು ದಾಖಲಾಗಿರುತ್ತದೆ.

ಅಸ್ವಾಭಾವಿಕ  ಮರಣದ  ಪ್ರಕರಣಗಳು:  ‌ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ  

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:

-ಸ್ಥಳ ದಂಡ ಮೊತ್ತ: ರೂ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.