ದಿನದ ಅಪರಾಧಗಳ ಪಕ್ಷಿನೋಟ ೦೫ ನೇ ಜುಲ್ಯೆ ೨೦೦೯

July 4, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೫-೦೭-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಮಾವಿನ ಕಾಯಿ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲೂಕು  ಚಾಂಪಲ್ಲಿ  ಗ್ರಾಮದ ಬಳಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೦೧-೦೭-೨೦೦೯ ರಂದು ರಾತ್ರಿ ಚಾಂಪಲ್ಲಿ ಗ್ರಾಮದ ಬಳಿ ಎಸ್‌.ಎನ್.ರಾಮರೆಡ್ಡಿ ರವರ ಮಾವಿನ ತೋಟದಲ್ಲಿ ಬೆಳೆದಿದ್ದ ೫ ಟನ್ ಮಾವಿನ ಕಾಯಿಯನ್ನು ಅದೇ ಗ್ರಾಮದ ವಾಸಿಗಳಾದ ಸಿ.ವಿ.ಶಿವಣ್ಣ ಮತ್ತು ಇತರರು ಸೇರಿಕೊಂಡು ಕಳವು ಮಾಡಿಕೊಂಡು ಹೋಗಿರುತ್ತಾರೆ.

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: 01

ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಾಯ್ದೆ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣವು ಕೋಲಾರ ಅಮ್ಮವಾರಿಪೇಟೆ ಬಳಿ ವಾಸವಾಗಿರುವ ಶ್ರೀಮತಿ ಆಯಿಷಾ ಸಲ್ಮಾ ಎಂಬುವರ ದೂರಿನ ಆಧಾರದ ಮೇರೆಗೆ ದಾಖಲಾಗಿರುತ್ತದೆ. ಆಯಿಷಾ  ಸಲ್ಮಾ ರವರು ಇಮ್ತಿಯಾಜ್ ಖಾನ್ ರವರನ್ನು ನವೆಂಬರ್‍ ೨೦೦೮ ರಂದು ವಿವಾಹವಾಗಿರುತ್ತಾರೆ. ವಿವಾಹ ಕಾಲದಲ್ಲಿ ರೂ. ೨ ಲಕ್ಷ ನಗದು ಹಾಗೂ ಚಿನ್ನಾಭರಣಗಳನ್ನು ವರದಕ್ಷಿಣೆಯಾಗಿ ನೀಡಿದ್ದು ನಂತರವೂ ಇನ್ನೂ ಹೆಚ್ಚಿನ ವರದಕ್ಷಿಣೆ ತರುವಂತೆ ಇಮ್ತಿಯಾಜ್ ಖಾನ್ ತನ್ನ ಹೆಂಡತಿ ಆಯಿಷಾ ಸಲ್ಮಾ ರವರಿಗೆ ಒತ್ತಾಯಿಸಿ ಹೊಡೆದು ಗಾಯಪಡಿಸಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿರುವುದಾಗಿ ಅಲ್ಲದೇ ಪ್ರಾಣಬೆದರಿಕೆ ಹಾಕಿರುವುದಗಿ ಆಯಿಷಾ ಸಲ್ಮಾ ರವರು ತನ್ನ ದೂರಿನಲ್ಲಿ ತಿಳಿಸಿರುತ್ತಾರೆ.

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೪-೦೭-೨೦೦೯ ರಂದು ೨೦೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಹರಿಕೆರೆ ಗ್ರಾಮದ ವಾಸಿಗಳಾದ ನಾಗರಾಜ ಮತ್ತು ಶಂಕರಪ್ಪ ಎಂಬುವರ ಹೀರೋ ಹೋಂಡಾ ಸಿಡಿ-೧೦೦ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೭-ಇ-೧೧೩೪ರಲ್ಲಿ ಶ್ರೀನಿವಾಸಪುರ – ಮುಳಬಾಗಿಲು ರಸ್ತೆಯ ಅರಿಕೆರೆ – ಮೀಸಗಾನಹಳ್ಳಿ ಮದ್ಯ ವಾಹನವನ್ನು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಆ ಸಮಯದಲ್ಲಿ ಶ್ರೀನಿವಾಸಪುರ ಕಡೆಯಿಂದ ಬಂದ ಹೆಚ್‌-ಜಿ.ಹೊಸೂರು ಗ್ರಾಮದ ವಾಸಿ ನರಸಿಂಹಪ್ಪ ರವರು ತನ್ನ ಹೀರೋ ಹೋಂಡಾ ಸಿಡಿ-೧೦೦ ದ್ವಿಚಕ್ರ ವಾಹನ ಸಂಖ್ಯೆ ಸಿಕೆಪಿ-೮೮೪೮ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಿಲ್ಲಿಸಿದ್ದ ವಾಹನಕ್ಕೆ ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ನಾಗರಾಜ ರವರಿಗೆ ತೀವ್ರತರವಾದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೊಂಬಿ ಮತ್ತು ಕೊಲೆಗೆ ಪ್ರಯತ್ನದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೨-೦೭-೨೦೦೯ ರಂದು             ೧೨೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಮಜರಾ ದಿನ್ನೂರು ಗ್ರಾಮದ ವಾಸಿ ಎಂ.ಡಿ.ರಮೇಶ ಎಂಬುವರು ತಮ್ಮ ಮನೆಯ ಬಳಿ ಇದ್ದರು. ಆ ಸಮಯದಲ್ಲಿ ಅದೇ ಗ್ರಾಮದ ವಾಸಿಗಳಾದ ಶ್ರೀನಿವಾಸ ಮತ್ತು ಇತರರು ಅಕ್ರಮ ಗುಂಪು ಕಟ್ಟಿಕೊಂಡು ಕೈಗಳಲ್ಲಿ ಗಡಾರಿ ಮತ್ತು ಸುತ್ತಿಗೆಗಳನ್ನು ಹಿಡಿದುಕೊಂಡು ಬಂದು ರಮೇಶ ರವರ ಮನೆಯ ಕಾಂಪೌಂಡ್‌ನಲ್ಲಿ ಅಕ್ರಮ ಪ್ರವೇಶ ಮಾಡಿ ಕಲ್ಲು ಚಪ್ಪಡಿಗಳನ್ನು ಹೊಡೆದು ಹಾಕಿ ರೂ. ೧೦,೦೦೦/- ಗಳಷ್ಟು ನಷ್ಟಮಾಡಿ, ಗಡಾರಿಯಿಂದ ಹೊಡೆದು ಕೊಲೆ ಮಾಡಲು ಪ್ರಯತ್ನ ಪಟ್ಟು, ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ,

ಹಲ್ಲೆ: ‌ಇಲ್ಲ

ಇತರೆ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೦೩-೦೭-೨೦೦೯ ರಂದು ಮುಳಬಾಗಿಲು ತಾಲೂಕು ಹೆಚ್.ಗೊಲ್ಲಹಳ್ಳಿ ಗ್ರಾಮದ ವಾಸಿ ವೆಂಕಟಸ್ವಾಮಿಯನ್ನು ಅದೇ ಗ್ರಾಮದ ವಾಸಿಗಳಾದ ಸೀತಪ್ಪ ಮತ್ತು ಮುನಿವೆಂಕಟಮ್ಮ ರವರು ಜಮೀನಿ ವಿಚಾರದಲ್ಲಿ ಜಗಳ ತೆಗೆದು ಎಲ್ಲಿಯಾದರು ಹೋಗಿ ಸತ್ತರೆ ನಾವು ತಣ್ಣಗೆ ಇರುತ್ತೇವೆ ಎಂದು ಪ್ರಚೋದನೆಯ ಮಾತುಗಳನ್ನಾಡಿದ್ದರಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು:  ‌ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು:  ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:

-ಸ್ಥಳ ದಂಡ ಮೊತ್ತ: ರೂ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.