ದಿನದ ಅಪರಾಧಗಳ ಪಕ್ಷಿನೋಟ ೦೬ ನೇ ಜುಲ್ಯೆ ೨೦೦೯

July 5, 2009

ಕೋಲಾರ  ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೦೬-೦೭-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೪

-ಮಾರಣಾಂತಿಕ: ೦೨

ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೫-೦೭-೨೦೦೯ ರಂದು ೧೩೪೫ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಗೌನಿಪಲ್ಲಿ ಗ್ರಾಮದ ವಾಸಿಗಳಾದ ರವಿಕುಮಾರ್‍  ಮತ್ತು ಅವರ ಪತ್ನಿ ಶ್ರೀಮತಿ ವೆಂಕಟಲಕ್ಷ್ಮಮ್ಮ ಎಂಬುವರು ಟಿವಿಎಸ್‌ ವಿಕ್ಟರ್‍ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೭-ಜೆ-೫೯೦೪ರಲ್ಲಿ ಕೊಂಡಾಮರಿ ಗೇಟ್‌ನ ತಿರುವಿನಲ್ಲಿ ಹೋಗುತ್ತಿದ್ದರು. ಆ ಸಮಯದಲ್ಲಿ  ಬಂದ  ಟಾಟಾ ಸುಮೋ ಸಂಖ್ಯೆ ಎಪಿ-೦೪-ಬಿ-೬೧೬೧ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು   ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ರವಿಕುಮಾರ್‍  ರವರಿಗೆ ತೀವ್ರತರವಾದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಗಾಯಾಳು ವೆಂಕಟಲಕ್ಷ್ಮಮ್ಮ ರವರನ್ನು ಚಿಕಿತ್ಸೆಗಾಗಿ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ.

ಮಾಲೂರು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೪-೦೭-೨೦೦೯ ರಂದು ೨೦೦೦ ಗಂಟೆ ಸಮಯದಲ್ಲಿ ಆನೇಕಲ್  ತಾಲೂಕು ತಿಮ್ಮಸಂದ್ರ  ಗ್ರಾಮದ ವಾಸಿಗಳಾದ ಮುನಿಶಾಮಿ ಮತ್ತು ಆನಂದ ಎಂಬುವರು ಬಜಾಜ್ ಪಲ್ಸ್‌ರ್‌ ದ್ವಿಚಕ್ರ ವಾಹನ ಸಂಖ್ಯೆ ಕೆಎ-೫೧-ಜೆ-೮೯೯ರಲ್ಲಿ   ಮಾಲೂರು ತಾಲೂಕು ನಿರಗಟ್ಟ ಕೆರೆಯ ತಿರುವುನಲ್ಲಿ ಹೋಗುತ್ತಿದ್ದರು. ಆ ಸಮಯದಲ್ಲಿ  ದ್ವಿಚಕ್ರ ವಾಹನ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು   ಕೆರೆಯ ಹಳ್ಳದಲ್ಲಿ ಉರುಳಿಸಿರುತ್ತಾನೆ.  ಪರಿಣಾಮ ಮುನಿಶಾಮಿ ಮತ್ತು ಆನಂದ್  ರವರಿಗೆ ತೀವ್ರತರವಾದ ಗಾಯಗಳಾಗಿ ಚಿಕಿತ್ಸೆಗಾಗಿ ಸಾಗಿಸುವ ಮಾರ್ಗಮಧ್ಯೆ ಮುನಿಶಾಮಿ ಮೃತಪಟ್ಟಿದ್ದು ಆನಂದ್ ರವರು ಚಿಕಿತ್ಸೆಗಾಗಿ ಕೋಲಾರದ ಎಸ್‌‌ಎನ್‌ಆರ್‌ ಆಸ್ಪತ್ರೆಗ ದಾಖಲಾಗಿರುತ್ತಾರೆ.

-ಸಾಧಾರಣ: ೦೨

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೫-೦೬-೨೦೦೯ ರಂದು ೧೨೩೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಕೀಲಾಗಾಣಿ ಗ್ರಾಮದ ವಾಸಿ ಹುಸೇನ್‌ ಪಾಷ   ಎಂಬುವರು ತನ್ನ ಟಿವಿಎಸ್ ಚಾಂಪ್ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೭-ಹೆಚ್‌-೩೨೧೦ರಲ್ಲಿ ರಾಷ್ಟ್ರೀಯ ಹೆದ್ದಾರಿ–೪ ಮಲ್ಲನಾಯಕನಹಳ್ಳಿ ಗೇಟ್  ಹೋಗುತ್ತಿದ್ದರು. ಆ ಸಮಯದಲ್ಲಿ  ಬಂದ  ಟಾಟಾ ಸುಮೋ ಸಂಖ್ಯೆ ಕೆಎ-೦೨-೧೨೭೯ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ಹುಸೇನ್‌ ಪಾಷ ರವರಿಗೆ ಗಾಯಗಳಾಗಿರುತ್ತದೆ.

ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೬-೦೭-೨೦೦೯ ರಂದು ೧೦೧೫ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಛತ್ರಕೋಡಿಹಳ್ಳಿ ಗ್ರಾಮದ ವಾಸಿಗಳಾದ ಗೋವಿಂದಪ್ಪ ಮತ್ತು ಕೃಷ್ಣಮೂರ್ತಿ ಎಂಬುವರು ತನ್ನ ಟಿವಿಎಸ್ ಹೆವಿಡ್ಯೂಟಿ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೩-ಇಡಿ-೬೬೮೧ರಲ್ಲಿ ಕೋಲಾರ ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಹಿಂದುಗಡೆಯಿಂದ ಬಂದ  ಕೆಎಸ್‌ಆರ್‌ಟಿಸಿ ಬಸ್ ಸಂಖ್ಯೆ ಕೆಎ-೦೭-ಎಫ್-೧೦೩೨ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ಗೋವಿಂದಪ್ಪ ಮತ್ತು ಕೃಷ್ಣಪ್ಪ ರವರಿಗೆ ಗಾಯಗಳಾಗಿ ಚಿಕಿತ್ಸೆಗಾಗಿ ಕೋಲಾರದ ಎಸ್‌‌ಎನ್‌ಆರ್‌ ಆಸ್ಪತ್ರೆಗ ದಾಖಲಾಗಿರುತ್ತಾರೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ‌ ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೪-೦೭-೨೦೦೯ ರಂದು ೧೯೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಹೊಲ್ಲಂಬಳ್ಳಿ ಗ್ರಾಮದ ವಾಸಿ ಗುರಪ್ಪರೆಡ್ಡಿ ಎಂಬುವರು   ಮನೆಯ ಬಳಿ ಅದೇ ಗ್ರಾಮದ  ವಾಸಿಗಳಾದಆರ್‍.ಆಂಜನೇಯಶಟ್ಟಿ ಮತ್ತು ಇತರೆ ೨ ಇಬ್ಬರು  ಅವಾಚ್ಚಶಬ್ದಗಳಿಂದ ಬೈದಾಡಿಕೊಳ್ಳುತ್ತಿದ್ದರು. ಇದನ್ನು ಪ್ರಶ್ನಿಸಿದ ಗುರಪ್ಪರೆಡ್ಡಿ ರವರಿಗೆ ಅವಾಚ್ಚಶಬ್ದಗಳಿಂದ ಬೈದು ಚಾಕು ಮತ್ತು ದೊಣ್ಣೆಯಿಂದ ಹೊಡೆದು ಗಾಯಗೊಳಿಸಿ ಪ್ರಾಣಬೆದರಿಕೆ ಹಾಕಿರುತ್ತಾರೆ.  ಗಾಯಾಳು ಗುರಪ್ಪರೆಡ್ಡಿ ಚಿಕಿತ್ಸೆಗಾಗಿ ಕೋಲಾರದ ಎಸ್‌,ಎನ್.ಆರ್‍.ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು:  ‌ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು:  ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ  

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:  ೧೫

-ಸ್ಥಳ ದಂಡ ಮೊತ್ತ: ರೂ. ೧,೭೦೦/-   

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.