ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೭-೦೭-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ೦೧
ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ವಾಹನಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ಟೌನ್ ಜಹಗೀರ್ ಮೊಹಲ್ಲಾದ ವಾಸಿ ಅಸ್ಲಂ ಪಾಷ ಎಂಬುವರಿಗೆ ಸೇರಿದ ಟಿ.ವಿ.ಎಸ್ ಎಕ್ಸ್.ಎಲ್ ಸಂಖ್ಯೆ ಕೆಎ-೦೭-ಕ್ಯೂ-೫೯೯೬ ದ್ವಿಚಕ್ರವಾಹನ ಕಳುವಾಗಿರುತ್ತದೆ. ದಿನಾಂಕ ೦೬-೦೭-೨೦೦೯ ರಂದು ೨೨೩೦ ಗಂಟೆ ಸಮಯದಲ್ಲಿ ಅಸ್ಲಂಪಾಷಾ ರವರು ತಮ್ಮ ದ್ವಿಚಕ್ರವಾಹನವನ್ನು ಮುಳಬಾಗಿಲು ಟೌನ್ ಹೈದರ್‍ವಲ್ಲಿ ದರ್ಗಾದ ಮುಂಭಾಗ ನಿಲ್ಲಿಸಿದ್ದ ಸಮಯದಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ದ್ವಿಚಕ್ರವಾಹನದ ಬೆಲೆ ರೂ. ೨೨,೦೦೦/ ಆಗಿರುತ್ತದೆ.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ
ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಮಾರಣಾಂತಿ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಆಂದ್ರಪ್ರದೇಶ ವಾಸಿಗಳಾದ ಕೇಶವ, ರವಣ ಮತ್ತು ಚಂದ್ರ ಎಂಬುವರು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ ೦೬-೦೭-೨೦೦೯ ರಂದು ೧೬೩೦ ಗಂಟೆ ಸಮಯದಲ್ಲಿ ತಮ್ಮ ಗ್ರಾಮಕ್ಕೆ ಹೋಗಲು ಮೂವರೂ ಬಜಾಜ್ ಪಲ್ಸರ್ ದ್ವಿಚಕ್ರವಾಹನ ಸಂಖ್ಯೆ ಎಪಿ-೦೩-ಹೆಚ್-೭೬೪೧ ರಲ್ಲಿ ತೂಪಲ್ಲಿ ಕೆರೆ ಕಟ್ಟೆ ಕ್ರಾಸ್ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ರವಣ ತನ್ನ ವಾಹನವನ್ನು ಅತಿವೇಗ ಮತ್ತು
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲೂಕು ಆರ್.ತಿಮ್ಮಸಂದ್ರ ಗ್ರಾಮದ ಬಳಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೦೬-೦೭-೨೦೦೯ ರಂದು ೨೦೦೦ ಗಂಟೆ ಸಮಯದಲ್ಲಿ ಆರ್.ತಿಮ್ಮಸಂದ್ರ ಗ್ರಾಮದ ವಾಸಿ ಟಿ.ಹೆಚ್.ಆಂಜನೇಯಪ್ಪ ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ ಟಿ.ಹೆಚ್.ನಾಗರಾಜ ಮತ್ತು ಸುಗುಣಮ್ಮ ಎಂಬುವರು ಕೈಗಳಿಂದ ಮತ್ತು ದೊಣ್ಣೆಯಿಂದ ಹೊಡೆದು ಗಾಯಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣಬೆದರಿಕೆ ಹಾಕಿರುತ್ತಾರೆ. ಹಳೇ ವೈಷಮ್ಯ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು:
-ಸ್ಥಳ ದಂಡ ಮೊತ್ತ: ರೂ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Posted by kolarpolice
Posted by kolarpolice
Posted by kolarpolice



