ಅಕ್ರಮ ಮದ್ಯ ಮಾರಾಟ: ಇಬ್ಬರ ಬಂಧನ , ಅಕ್ರಮ ಮದ್ಯ ವಶ

ದಿನಾಂಕ ೦೬-೦೭-೨೦೦೯ ರಂದು ೧೫೩೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರಾದ ಶ್ರೀ ಡಿ.ಆರ್‍.ಪ್ರಕಾಶ್ ರವರು ತಮಗೆ ಬಂದ ಖಚಿತ ವರ್ತಮಾನದ ಮೇರೆಗೆ ತಮ್ಮ ಸಿಬ್ಬಂದಿಯೊಡನೆ ಶ್ರೀನಿವಾಸಪುರ ಟೌನ್ ಎ.ಪಿ.ಎಂ.ಸಿ ಯಾರ್ಡ್ ಬಳಿ ದಾಳಿ ನಡೆಸಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುತ್ತಾರೆ. ಆರೋಪಿಗಳಾದ ಶ್ರೀನಿವಾಸಪುರ ಟೌನ್ ಸಂತೇ ಮೈದಾನದ ವಾಸಿ ನಾರಾಯಣಸ್ವಾಮಿ @ ಮೊಘಲ್ ಹಾಗೂ ನರಸಿಂಹಪ್ಪ ಎಂಬುವರು ತಮ್ಮ ಬಳಿ ಯಾವುದೇ ಪರವಾನಗಿ ಇಲ್ಲದೇ ಅಕ್ರವಾಗಿ ಮದ್ಯಮಾರಾಟದಲ್ಲಿ ತೊಡಗಿದ್ದು ಬಂಧಿತರಾಗಿರುತ್ತಾರೆ. ಕಾರ್ಯಾಚರಣೆ ವೇಳೆ ಅಕ್ರಮ ಮಾರಾಟಕ್ಕೆ ಬಳಸುತ್ತಿದ್ದ ರಾಜಾ ವಿಸ್ಕಿ ಬಾಟಲ್ ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಈ ಬಗ್ಗೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಎರಡು ಪ್ರಕರಣಗಳು ದಾಖಲಾಗಿರುತ್ತದೆ.

Leave a Reply