ಅಶ್ಲೀಲ ಸಿ.ಡಿ/ಡಿ.ವಿ.ಡಿ ಮಾರಾಟ: ಇಬ್ಬರ ಬಂಧನ

ದಿನಾಂಕ ೦೬-೦೭-೨೦೦೯ ರಂದು ೧೯೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರಾದ ಶ್ರೀ ಡಿ.ಆರ್‍.ಪ್ರಕಾಶ್ ರವರು ತಮಗೆ ಬಂದ ಖಚಿತ ವರ್ತಮಾನದ ಮೇರೆಗೆ ತಮ್ಮ ಸಿಬ್ಬಂದಿಯೊಡನೆ ಶ್ರೀನಿವಾಸಪುರ ಟೌನ್ ವಿಷ್ಣು ಎಲೆಕ್ಟ್ರಾನಿಕ್ಸ್ ಮತ್ತು ಜಹೀರ್‍ ಸಿ.ಡಿ ಅಂಗಡಿಗಳಲ್ಲಿ ಪ್ರತ್ಯೇಕವಾಗಿ ದಾಳಿ ನಡೆಸಿ ಅಕ್ರಮವಾಗಿ ಅಶ್ಲೀಲ ಸಿ.ಡಿ ಮತ್ತು ಡಿ.ವಿ.ಡಿ ಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುತ್ತಾರೆ. ಆರೋಪಿಗಳಾದ ಶ್ರೀನಿವಾಸಪುರ ಟೌನ್ ರಾಮಕೃಷ್ಣ ಬಡಾವಣೆ ವಾಸಿ ರವಿ ಹಾಗೂ ಕೊಳ್ಳೂರು ಕಾಲೋನಿ ವಾಸಿ ರಾಮು ಎಂಬುವರು ಅಕ್ರಮ ಮಾರಾಟದಲ್ಲಿ ತೊಡಗಿದ್ದು ಬಂಧಿತರಾಗಿರುತ್ತಾರೆ. ಕಾರ್ಯಾಚರಣೆ ವೇಳೆ ಅಕ್ರಮ ಮಾರಾಟಕ್ಕೆ ಬಳಸುತ್ತಿದ್ದ ಸಿ.ಡಿ ಮತ್ತು ಡಿ.ವಿ.ಡಿ ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಈ ಬಗ್ಗೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿರುತ್ತದೆ.

Leave a Reply