ದಿನದ ಅಪರಾಧಗಳ ಪಕ್ಷಿನೋಟ ೧೨ ನೇ ಜುಲ್ಯೆ ೨೦೦೯

July 11, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೨-೦೭-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೨

ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ  ೧೦-೦೭-೨೦೦೯ ರಂದು ೧೯೪೫ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ನರಸಾಪುರ ಗ್ರಾಮದ ವಾಸಿಯಾದ ಆನಂದ ಮತ್ತು ನಾರಾಯಣಸ್ವಾಮಿ  ಎಂಬವರು ತನ್ನ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೫-ಇಎನ್-೯೧೫೧ರಲ್ಲಿ ರಾಷ್ಷ್ರೀಯ ಹದ್ದಾರಿ-೪ರ ಕಾಫೀ ಡೇ ಮುಂಬಾಗ  ಹೋಗುತ್ತಿದ್ದರು. ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಸ್ಯಾಂಟ್ರೋ ಕಾರ್‍  ಸಂಖ್ಯೆ ಕೆಎ-೦೫-ಎಂಡಿ-೨೦೫೭ರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ   ಹಿಂಬದಿ ಸವಾರನಾದ ನಾರಾಯಣಸ್ವಾಮಿ ರವರಿಗೆ  ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೧-೦೭-೨೦೦೯ ರಂದು ೧೮೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಕೀಲಾಗಾಣಿ ಗ್ರಾಮದ ವಾಸಿ ಶಿವ ಎಂಬುವರು ತಮ್ಮ ಬಜಾಜ್ ಪಲ್ಸರ್‍ ಸಂಖ್ಯೆ ಕೆಎ-೦೭-ಹೆಚ್-೮೩೩೦ ದ್ವಿಚಕ್ರವಾಹನದಲ್ಲಿ ಎನ್.ಹೆಚ್ ೪ ರಸ್ತೆಯ ಮದರಸಾ ಜಿಗ್ ಜಾಗ್ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಟಾಟಾ ಕ್ವಾಲೀಸ್ ಸಂಖ್ಯೆ ಕೆಎ-೧೯-೭೯೩೭ ರ ಚಾಲಕ ಪ್ರದೀಪ್ ಮೆಂಡನ್ ಎಂಬುವರು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಶಿವ ರವರಿಗೆ ಗಾಯಗಳುಂಟಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೧೧-೦೭-೨೦೦೯ ರಂದು ೨೩೩೦ ಗಂಟೆ ಸಮಯದಲ್ಲಿ  ಶ್ರೀನಿವಾಸಪುರ ತಾಲೂಕು ನಾರಮಾಕಲಹಳ್ಳಿ ಗ್ರಾಮದ ವಾಸಿಯಾದ ಶ್ರೀನಾಥ ಎಂಬುವರ ಮೇಲೆ ಅದೇ ಗ್ರಾಮದ ವಾಸಿಗಳಾದ ಗೋಪಾಲರೆಡ್ಡಿ ಮತ್ತು ಇತರರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಶ್ರೀನಾಥ ರವರನ್ನು ಮನೆಯಿಂದ ಹೊರಗೆ ಎಳೆದುಕೊಂಡು ಬಂದು ಕೈಗಳಿಂದ ಹೊಡೆದು ಗಾಯಪಡಿಸಿ ಪ್ರಾಣಬೆದರಿಕೆ ಹಾಕಿರುತ್ತಾರೆ,

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೧೨-೦೭-೨೦೦೯ ರಂದು ೦೧೩೦ ಗಂಟೆ ಸಮಯದಲ್ಲಿ  ಶ್ರೀನಿವಾಸಪುರ ತಾಲೂಕು ನಾರಮಾಕಲಹಳ್ಳಿ ಗ್ರಾಮದ ವಾಸಿಯಾದ ಶ್ರೀಮತಿ ಸುಗುಣ ಎಂಬುವರ ಮೇಲೆ ಅದೇ ಗ್ರಾಮದ ವಾಸಿಗಳಾದ ನಾಗರಾಜ ಮತ್ತು ಇತರೆ ೭ ಜನರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಸುಗುಣ ರವರನ್ನು ಮನೆಯಿಂದ ಹೊರಗೆ ಎಳೆದುಕೊಂಡು ಬಂದು ಕೈಗಳಿಂದ ಮತ್ತು ಕಲ್ಲಿನಿಂದ ಹೊಡೆದು ರಕ್ತ ಗಾಯಪಡಿಸಿರುತ್ತಾರೆ,

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು:  ‌ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು:  ೦೧

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೦೬-೦೭-೨೦೦೯ ರಂದು ೧೦೩೦ ಗಂಟೆ ಸಮಯದಲ್ಲಿ  ಶ್ರೀನಿವಾಸಪುರ ಪಟ್ಟಣದ ರಾಮಕೃಷ್ಣ ಬಡಾವಣೆಯ ವಾಸಿ ಕುಪ್ಪುಸ್ವಾಮಿ ಎಂಬುವರ ಮಗಳಾದ ಕುಮಾರಿ ಶ್ವೇತ(೧೭) ಎಂಬುವರು ಮನೆ ಸಾಮಾನು ತರುವುದಾಗಿ ಹೇಳಿ ಮನೆಯಿಂದ ಹೊದವರು ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ,

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:

-ಸ್ಥಳ ದಂಡ ಮೊತ್ತ: ರೂ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.