ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೩-೦೭-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ೦೧
ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲೂಕು ಬೆಟಗೇರಹಳ್ಳಿ ಗ್ರಾಮದ ವಾಸುಕಿ ಜೆಲ್ಲಿ ಕ್ರಷರ್ ನಲ್ಲಿ ಕಳವು ಕೃತ್ಯ ಸಂಬವಿಸಿರುತ್ತದೆ. ದಿನಾಂಕ ೦೮-೦೭-೨೦೦೯ ರಂದು ೧೩೩೦ ಗಂಟೆ ಸಮಯದಲ್ಲಿ ಬೆಟಗೇರಹಳ್ಳಿ ಗ್ರಾಮದ ವಾಸಿ ಟಿ.ನಾಗರಾಜ ಎಂಬುವರಿಗೆ ಸೇರಿದ ವಾಸುಕಿ ಜಲ್ಲಿ ಕ್ರಷರ್ ಪ್ಲಾಂಟ್ ನಲ್ಲಿದ್ದ ರೂ. ೩೭,೦೦೦/ ಬೆಲೆ ಬಾಳುವ ಯಂತ್ರೋಪಕರಣಗಳು ಹಾಗೂ ಅದರ ಬಿಡಿಭಾಗಗಳು ಕಳುವಾಗಿರುತ್ತದೆ. ಈ ಪ್ಲಾಂಟಿನ ಉಸ್ತುವಾರಿಯಾಗಿ ನೇಮಿಸಿದ್ದ ಅರಬಿಕೊತ್ತನೂರು ಗ್ರಾಮದ ವಾಸಿ ಪ್ರಕಾಶ್, ಗೋವಿಂದಪ್ಪ, ಗಂಗಮ್ಮ ಮತ್ತಿತರೇ ಇಬ್ಬರು ಈ ಕೃತ್ಯ ಎಸಗಿರುವುದಾಗಿ ಪ್ರಕಾಶ್ ರವರು ತಮ್ಮ ದೂರಿನಲ್ಲಿ ತಿಳಿಸಿರುತ್ತಾರೆ.
ವಾಹನ ಕಳ್ಳತನ : ೦೨
ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ವಾಹನಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರದ ವಾಸಿ ಇಂತಿಯಾಜ್ ಅಹ್ಮದ್ ಎಂಬುವರಿಗೆ ಸೇರಿದ ಸುಜುಕಿ ಸಮುರಾಯ್ ಸಂಖ್ಯೆ ಜಿಎ-೦೧-ಹೆಚ್-೬೦೮೦ ದ್ವಿಚಕ್ರವಾಹನ ಕಳುವಾಗಿರುತ್ತದೆ. ದಿನಾಂಕ ೩೦-೦೬-೨೦೦೮ ರಂದು ೧೪೩೦ ಗಂಟೆ ಸಮಯದಲ್ಲಿ ಇಂತಿಯಾಜ್ ರವರು ತಮ್ಮ ವಾಹನವನ್ನು ತನ್ನ ಮನೆಯ ಮುಂದೆ ನಿಲ್ಲಿಸಿದ್ದ ಸಮಯದಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ವಾಹನದ ಬೆಲೆ ರೂ, ೮,೦೦೦/ ಆಗಿರುತ್ತದೆ.
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಸಂಗೊಂಡಹಳ್ಳಿ ಗ್ರಾಮದ ಬಳಿ ಇರುವ ಎಂ.ಎಸ್.ಕೆ ಇಟ್ಟಿಗೆ ಫ್ಯಾಕ್ಟರಿ ಬಳಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೨-೦೬-೨೦೦೯ ರಂದು ರಾತ್ರಿ ಮೇಲ್ಕಂಡ ಸ್ಥಳದಲ್ಲಿ ನಿಲ್ಲಿಸಿದ್ದ ಕೋಲಾರ ನಗರ ಹವೇಲಿ ಮೊಹಲ್ಲಾದ ವಾಸಿ ಅಬ್ದುಲ್ ಖಾನ್ ಮಲಾನ್ (೬೦) ಎಂಬುವರಿಗೆ ಸೇರಿದ ಕೆಎ-೦೭-ಟಿ-೭೪೩೯ ಸಂಖ್ಯೆಯ ಟ್ರಾಕ್ಟರ್ ಅನ್ನು ಅದಕ್ಕೆ ಅಳವಡಿಸಿದ್ದ ನೇಗಿಲ ಸಮೇತ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ
ರಸ್ತೆ ಅಪಘಾತಗಳು: ೦೩
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೩
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೨-೦೭-೨೦೦೯ ರಂದು ೨೦೪೫ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ವಿಟ್ಟಪ್ಪನಹಳ್ಳಿ ಗ್ರಾಮದ ವಾಸಿಯಾದ ವೆಂಕಟೇಶ ಮತ್ತು ಸುರೇಶಬಾಬು ಎಂಬುವರು ದ್ವಿಚಕ್ರವಾಹನ ಸಂಖ್ಯೆ ಕೆಎ-೦೫-ಇವಿ-೯೩೮೩ ರಲ್ಲಿ ಎನ್.ಹೆಚ್ ೪ ರಸ್ತೆಯ ಕುಂಬಾರಹಳ್ಳಿ ಗೇಟ್ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಟೆಂಪೋ ಚಾಲಕ ತನ್ನ ವಾಹನವನ್ನು ಅತಿವೇಘ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ದ್ವಿಚಕ್ರವಾಹನ ಸವಾರರಿಗೆ ಗಾಯಗಳುಂಟಾಗಿರುತ್ತದೆ.
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೮-೦೭-೨೦೦೯ ರಂದು ೧೯೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಮಣಿಘಟ್ಟ ಗ್ರಾಮದ ವಾಸಿಗಳಾದ ಮಂಜುನಾತ ಮತ್ತು ರಾಜಣ್ಣ ಎಂಬುವರು ಕಾಳಹಸ್ತಿಪುರದ ಗೇಟ್ ಬಳಿ ನಿಂತಿದ್ದರು. ಆ ಸಮಯದಲ್ಲಿ ದ್ವಿಚಕ್ರವಾಹನ ಸಂಖ್ಯೆ ಕೆಎ-೦೭-ಎಲ್-೩೭೧೬ ರ ಚಾಲಕ ಅರಸೇಗೌಡ ಎಂಬುವನು ತನ್ನ ವಾಹನವನ್ನು ಅತಿವೇಘ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಮಂಜುನಾತ ಮತ್ತು ರಾಜಣ್ಣ ರವರಿಗೆ ಗಾಯಗಳುಂಟಾಗಿರುತ್ತದೆ
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಮತ್ತೊಂದು ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೩-೦೭-೨೦೦೯ ರಂದು ರಾತ್ರಿ ೧೨೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ರಾಮಸಂದ್ರ ಗ್ರಾಮದ ವಾಸಿಯಾದ ರಾಜೇಶ್ ಎಂಬುವರು ರಾಷ್ಟ್ರೀಯ ಹೆದ್ದಾರಿ ೪ ರ ಕುಂಬಾರಹಳ್ಳಿ ಗೇಟ್ ಬಳಿ ರಸ್ತೆ ದಾಟುತ್ತಿದ್ದಾಗ ಕೋಲಾರ ಕಡೆಯಿಂದ ಬಂದ ಲಾರಿ ಸಂಖ್ಯೆ ಕೆಎ-೦೪-ಸಿ-೫೨೯೨ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಾಜೇಶ್ ಗೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ರಾಜೇಶ್ ರವರ ಎಡಕಾಲಿನ ಪಾದಕ್ಕೆ ತೀವ್ರವಾದ ಗಾಯವುಂಟಾಗಿ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಲಾರಿ ಚಾಲಕ ಸ್ಥಳದಲ್ಲಿ ವಾಹನ ನಿಲ್ಲಿಸದೆ ಹೋರಟು ಹೋಗಿರುತ್ತಾನೆ.
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
ವೇಮಗಲ್ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ನರಸಾಪುರ ಗ್ರಾಮದ ವಾಸಿ ಮುನಿರಾಜ ಎಂಬುವರ ಮೇಲೆ ಜಗಳ ತೆಗೆದ ಬೆಳ್ಳೂರು ಗ್ರಾಮದ ವಾಸಿಗಳಾದ ಅಬಿಲ್, ಕಿಶೋರ್, ಮಂಜುನಾಥ ಮತ್ತು ಸುರೇಶ್ ಎಂಬುವರು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಮತ್ತು ಕಲ್ಲುಗಳಿಂದ ಹೊಡೆದು ಪ್ರಾಣಬೆದರಿಕೆ ಹಾಕಿರುತ್ತಾರೆ. ಹಳೇ ವೈಷಮ್ಯ ಈ ಕೃತ್ಯ ಸಂಭವಿಸಿರುತ್ತದೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ೦೧
ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ಗಾಂಧಿನಗರದ ವಾಸಿ ರವಿಚಂದ್ರ(೨೪) ಎಂಬುವರು ಕಾಣೆಯಾಗಿರುತ್ತಾರೆ. ದಿನಾಂಕ ೨೦-೦೬-೨೦೦೯ ರಂದು ೧೩೦೦ ಗಂಟೆ ಸಮಯದಲ್ಲಿ ಪೈಂಟಿಂಗ್ ಕೆಲಸಕ್ಕಾಗಿ ಹೋಗುವುದಾಗಿ ಮನೆಯಿಂದ ಹೊರಟ ರವಿಚಂದ್ರ ಹಿಂತಿರುಗಿ ಬಾರದೇ ಕಾಣೆಯಾಗಿರುತ್ತಾರೆ.
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ೦೭
-ಸ್ಥಳ ದಂಡ ಮೊತ್ತ: ೭೦೦/-
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Posted by kolarpolice



