ದಿನದ ಅಪರಾಧಗಳ ಪಕ್ಷಿನೋಟ ೧೫ ನೇ ಜುಲ್ಯೆ ೨೦೦೯

July 14, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೧೫-೦೭-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶಾಲೆಯಲ್ಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೧-೦೨-೨೦೦೯ ರಂದು ರಾತ್ರಿ ಯಾರೋ ಕಳ್ಳರು ಕೋಲಾರ ತಾಲೂಕು ಅರಾಭಿಕೊತ್ತನೂರು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆಯ ಬೀಗವನ್ನು ಮುರಿದು ಒಳಗೆ ಪ್ರವೇಶ ಮಾಡಿ  ರೂ. ೨,೧೫೦/- ಬೆಲೆ ಬಾಳುವ ೩ ಗ್ಯಾಸ್ ಸಿಲಿಂಡರ್‌ಗಳನ್ನು    ಕಳವು ಮಾಡಿಕೊಂಡು ಹೋಗಿರುತ್ತಾರೆ.  ಈ ಬಗ್ಗೆ ಶ್ರೀ ಶಾಮಕೃಷ್ಣಪ್ರಸಾದ್, ಮುಖ್ಯೋಪಾಧ್ಯಾರು ರವರು ದೂರನ್ನು ದಾಖಲಿಸಿರುತ್ತಾರೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೨

ವೇಮಗಲ್ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೧೯-೦೮-೨೦೦೨ ರಂದು ಕೋಲಾರ ನಗರದ ಹೊಸ ಬಡಾವಣೆ ವಾಸಿ ಶ್ರೀದೇವಿ @ ಭುವನೇಶ್ವರಿ ಎಂಬುವರನ್ನು ಕೋಲಾರ ತಾಲೂಕು ಗಿರಿಜನಪೇಟೆ ವಾಸಿ ರಮೇಶ ಎಂಬುವನಿಗೆ ಕೊಟ್ಟು ಮದುವೆ ಮಾಡಿದ್ದರು. ಮದುವೆ ಸಮಯದಲ್ಲಿ ವರದಕ್ಷಿಣೆ ಹಣವನ್ನು ಪಡೆದಿದ್ದು, ನಂತರ ಇನ್ನು ಹೆಚ್ಚಿನ ಹಣ ತರುವಂತೆ ಶ್ರೀದೇವಿ ರವರಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿ ಅವಾಚ್ಚಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ,

ಮಾಸ್ತಿ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಸಾವಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಈಗ್ಗೆ ಸುಮಾರು ೬ ವರ್ಷದ ಹಿಂದೆ ಬಂಗಾರುಪೇಟೆ ತಾಲೂಕು ಅಂಕಂಡಹಳ್ಳಿ ಗ್ರಾಮದ ವಾಸಿ ಪೆರುಮಾಳಪ್ಪ ಎಂಬುವರ ಮಗಳಾದ ಜಾನಕಿ ಎಂಬುವರನ್ನು ಮಾಲೂರು ತಾಲೂಕು ರಾಯಸಂದ್ರ ಗ್ರಾಮದ ವಾಸಿ ಮುನಿರಾಜು ಎಂಬುವರಿಗೆ ಕೊಟ್ಟು ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ವರದಕ್ಷಿಣೆಯಾಗಿ ಬಂಗಾರದ ಒಡವೆಗಳನ್ನು ಕೊಟ್ಟು ಮದುವೆ ಮಾಡಿದ್ದರು.  ಮದುವೆಯಾದ ಒಂದು ವರ್ಷ ಅನ್ಯೂನ್ಯವಾಗಿದ್ದು ನಂತರ ಹೆಚ್ಚನ ವರದಕ್ಷಿಣೆಗಾಗಿ ಪೀಡಿಸಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದರಿಂದ ಜಾನಕಿ ರವರು ನೇಣುಹಾಕಿಕೊಂಡು ಮೃತಪಟ್ಟಿರುತ್ತಾಳೆ.

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೪-೦೭-೨೦೦೯ ರಂದು ೧೪೪೦ ಗಂಟೆ ಸಮಯದಲ್ಲಿ ಕೋಲಾರ ಕೋಲಾರ ನಗರದ  ವಾಸಿಯಾದ ನವಾಜ್(೧೫) ಎಂಬುವರು ಸೈಕಲ್‌ನಲ್ಲಿ ಸೆಂಟಾನ್ಸ್ ಶಾಲೆಯ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಬೆಂಗಳೂರು ಕಡೆಯಿಂದ ಬಂದ ಖಾಸಗಿ ಬಸ್ ಸಂಖ್ಯೆ ಕೆಎ-೦೭-೭೯೫೧ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ನವಾಜ್‌ ರವರ ತಲೆಗೆ  ಗಾಯಗಳುಂಟಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ 

ದೊಂಬಿ: ೦೨

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿಂದಂತೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೧೩-೦೭-೨೦೦೯ ರಂದು ೨೦೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಅಗ್ನಿಹಳ್ಳಿ ಗ್ರಾಮದ ವಾಸಿಯಾದ ರಾಮಚಂದ್ರಪ್ಪ ಎಂಬುವರ ಮೇಲೆ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಅದೇ ಗ್ರಾಮದ ವಾಸಿಗಳಾದ ರಾಜೇಶ್ ಮತ್ತು ಇತರರು ಅಕ್ರಮ ಗುಂಪು ಕಟ್ಟಿಕೊಂಡು ಕೈಗಳಲ್ಲಿ ದೊಣ್ಣೆ, ಕಬ್ಬಿಣದ ಕಂಬಿ ಮತ್ತು ಕಲ್ಲಿನಿಂದ ಹೊಡೆದು ರಾಮಚಂದ್ರಪ್ಪ, ಮುನಿಯಪ್ಪ, ಕಮಲಮ್ಮ, ಶ್ರೀನಾಥ ಮತ್ತು ಅಮರಾವತಿ ಎಂಬುವರಿಗೆ ಹೊಡೆದು ಗಾಯಪಡಿಸಿರುತ್ತಾರೆ.  

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ಪಟ್ಟಣದ ಕುರುಬರಪಾಳ್ಯ ವಾಸಿ ಬಾಬು ಎಂಬುವರು ಬಸ್ ನಿಲ್ದಾಣದಲ್ಲಿ ಎಂಜೆಡ್‌ ಎಂಬ ಹೆಸರಿನ ಬಸ್ಸಿಗೆ ಜನರನ್ನು ಹತ್ತಿಸುತ್ತಿದ್ದರು.  ಆ ಸಮಯದಲ್ಲಿ ತಜಮುಲ್ಲಾ ಮತ್ತು ಇತರರು ಗುಂಪು ಕಟ್ಟಿಕೊಂಡು ಕೈಗಳಲ್ಲಿ ಕಲ್ಲು ಮತ್ತು ದೊಣ್ಣೆಗಳನ್ನು ಹಿಡಿದುಕೊಂಡು ಬಂದು  ಬಸ್‌ ಬಿಡುವ ಸಮಯದ ವಿಚಾರದಲ್ಲಿ ಜಗಳ ತೆಗೆದು ನಿರ್ವಾಹಕ ನಂದೀಶ್ ರವರಿಗೆ ಮುಖಕ್ಕೆ ತಲೆಗೆ ಹಾಗೂ ಬಾಬು ರವರಿಗೆ ದೊಣ್ಣೆಯಿಂದ  ಹೊಡೆದು ಗಾಯಪಡಿಸಿ ಪ್ರಾಣಬೆದರಿಕೆ ಹಾಕಿರುತ್ತಾರೆ.

ಹಲ್ಲೆ: ೦೨

ವೇಮಗಲ್ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ತಾಲೂಕು ವೇಮಗಲ್ ಗ್ರಾಮದ ವಾಸಿ ಪದ್ಮಮ್ಮ ಎಂಬುವರ ಮೇಲೆ ತೋಟದ ದಾರಿ ವಿಚಾರದಲ್ಲಿ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ ಕರೀಂ ಮತ್ತು ಆಸೀಫ್ ಎಂಬುವರು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ಕಾಲಿನಿಂದ ಒದ್ದು  ಪ್ರಾಣಬೆದರಿಕೆ ಹಾಕಿರುತ್ತಾರೆ.   

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ಪಟ್ಟಣದ ಕುರುಬರಪಾಳ್ಯ ವಾಸಿ ಅಸ್ಲಂಪಾಷ ಎಂಬುವರು ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಆ ಸಮಯದಲ್ಲಿ ಎಸ್‌ವಿಎಂಎಸ್‌ ಮತ್ತು ಎಂಜೆಡ್‌ ಬಸ್ಸಿನವರು ಬಸ್‌ ಬಿಡುವ ಸಮಯದ ವಿಚಾರದಲ್ಲಿ ಜಗಳ ಮಾಡಿಕೊಳ್ಳುತ್ತಿದ್ದರು. ಆಗ ಜಗಳ ಬಿಡಿಸಲು ಹೋದ ಅಸ್ಲಂಪಾಷ ರವರಿಗೆ ಗುಂಪಿನಲ್ಲಿದ್ದ ಯಾರೋ ಒಬ್ಬ ಆಸಾಮಿ ಹರಿತವಾದ ಆಯುಧದಿಂದ ಹೊಟ್ಟೆಯ ಎಡಬಾಗದ ಬಳಿ ಹೊಡೆದು ಗಾಯಡಿಸಿರುತ್ತಾರೆ.

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು: ಇಲ್ಲ 

ವ್ಯಕ್ತಿ ಕಾಣೆ ಪ್ರಕರಣಗಳು:  ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:  ಇಲ್ಲ

-ಸ್ಥಳ ದಂಡ ಮೊತ್ತ:  ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.