ದಿನದ ಅಪರಾಧಗಳ ಪಕ್ಷಿನೋಟ ೧೬ ನೇ ಜುಲ್ಯೆ ೨೦೦೯

July 15, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೧೬-೦೭-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶಾಲೆಯಲ್ಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೧-೦೨-೨೦೦೯ ರಂದು ರಾತ್ರಿ ಯಾರೋ ಕಳ್ಳರು ಕೋಲಾರ ತಾಲೂಕು ಮಢೇರಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆಯ ಬೀಗವನ್ನು ಮುರಿದು ಒಳಗೆ ಪ್ರವೇಶ ಮಾಡಿ  ರೂ. ೧,೩೦೦/- ಬೆಲೆ ಬಾಳುವ ೨ ಗ್ಯಾಸ್ ಸಿಲಿಂಡರ್‌ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.  ಈ ಬಗ್ಗೆ ಕೆ.ಎಂ.ವನಜಾಕ್ಷಿ, ಮುಖ್ಯೋಪಾಧ್ಯಾರು ರವರು ದೂರನ್ನು ದಾಖಲಿಸಿರುತ್ತಾರೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೧೫-೦೭-೨೦೦೯ ರಂದು ೧೦೪೫ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ವೇಗಮಡುಗು  ಗ್ರಾಮದ ವಾಸಿಗಳಾದ ನಾಗರಾಜ ಮತ್ತು ನರಸಿಂಹಪ್ಪ ರವರು ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೭-ಹೆಚ್-೯೪೬೬ ರಲ್ಲಿ ಮೋಪುರಹಳ್ಳಿ ಗ್ರಾಮದ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಮುಳಬಾಗಿಲು ಕಡೆಯಿಂದ ಬಂದ ಗೂಡ್ಸ್ ಆಟೋ ಸಂಖ್ಯೆ: ಕೆಎ-೫೩-೭೩೨೯ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ನಾಗರಾಜ ರವರಿಗೆ ತೀವ್ರತರವಾದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಹಿಂಬದಿ ಸವಾರನಾದ ನರಸಿಂಹಪ್ಪ ರವರಿಗೆ ಗಾಯಗಳಾಗಿರುತ್ತದೆ,

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನೆರೆ ಮನೆಯವರ ಕಿರುಕುಳ ತಾಳಲಾರದೇ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಪಾರೇ ಹೊಸಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ಪಾರೇಹೊಸಹಳ್ಳಿ ಗ್ರಾಮದ ವಾಸಿ ಎಂ.ಪಿ.ಸೌಭಾಗ್ಯ ಎಂಬುವರ ಮೇಲೆ ನೀರಿನ ವಿಚಾರವಾಗಿ ಪಕ್ಕದ ಮನೆಯ ವಾಸಿಗಳಾದ ದರೋಜಪ್ಪ, ನಾರಾಯಣಪ್ಪ, ಯಾಮಣ್ಣ, ಮುನಿಯಪ್ಪ, ನಾರಾಯಣಮ್ಮ, ನಾಗೇಶ ಮತ್ತು ರವಿ ಎಂಬುವರು ಆಗಿಂದಾಗ್ಗೆ ಜಗಳ ತೆಗೆಯುತ್ತಿದ್ದರು. ಈ ವಿಷಯವಾಗಿ ಮನನೊಂದ ಎಂ.ಪಿ.ಸೌಭಾಗ್ಯ ರವರು ತನ್ನ ಇಬ್ಬರು ಮಕ್ಕಳಾದ ಮನೋಜ್ (೭) ಮತ್ತು ಭವ್ಯ (೮) ಎಂಬುವರೊಡನೆ ದಿನಾಂಕ ೧೪-೦೭-೨೦೦೯ ರಂದು ಕಾಣೆಯಾಗಿದ್ದರು. ಈ ರೀತಿ ಕಾಣೆಯಾದ ಇವರುಗಳ ಮೃತದೇಹ ದಿನಾಂಕ ೧೬-೦೭-೨೦೦೯ ರಂದು ಗ್ರಾಮದ ಗೋಕುಂಟೆ ನೀರಿನಲ್ಲಿ ದೊರೆತಿರುತ್ತದೆ. ಈ ಬಗ್ಗೆ ಮೃತ ಮಹಿಳೆ ಸೌಭಾಗ್ಯ ರವರ ತಂದೆ ಪ್ಯಾಯಪ್ಪ (೫೭) ರವರು ದೂರು ನೀಡಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು:  ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ಇಲ್ಲ

-ಸ್ಥಳ ದಂಡ ಮೊತ್ತ: ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.