ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೭-೦೭-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ೦೧
ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆಗೆ ಸಂಬಂಧಿಸಿದಂತೆಅಪರಾಧ ಪ್ರಕರಣ ದಾಖಲಾಗಿರುತ್ತದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಯಿಂದ ಮಾಂಗಲ್ಯದ ಸರವನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ಕೋಲಾರ ಹಾರೋಹಳ್ಳಿಯ ಶಾಂತನಿವಾಸ ಎಂಬ ಮನೆಯ ಮುಂದೆ ಸಂಭವಿಸಿರುತ್ತದೆ. ದಿನಾಂಕ ೧೬-೦೭-೨೦೦೯ ರಂದು ೧೮೩೦ ಗಂಟೆ ಸಮಯದಲ್ಲಿ ಕೋಲಾರ ಹಾರೋಹಳ್ಳಿ ಬಡಾವಣೆಯ ವಾಸಿ ಎಸ್.ಭಾಗ್ಯಲಕ್ಷ್ಮಿ (೫೦) ಎಂಬುವರು ಗೋಕುಲ್ ಕಾಲೇಜ್ ಮುಂಭಾಗ ಇರುವ ಫ್ಲೋರ್ ಮಿಲ್ ನಲ್ಲಿ ಗೋಧಿ ಹಿಟ್ಟು ಹಾಕಿಸಿಕೊಂಡು ತಮ್ಮ ಮನೆಗೆ ಹೋಗುತ್ತಿದ್ದರು. ಆ ಸಮಯದಲ್ಲಿ ಬೈಪಾಸ್ ರಸ್ತೆಯ ಕಡೆಯಿಂದ ದ್ವಿಚಕ್ರವಾಹನವೊಂದರಲ್ಲಿ ಬಂದ ಇಬ್ಬರು ಅಪರಿಚಿತರು ಭಾಗ್ಯಲಕ್ಷ್ಮಿ ರವರ ಕತ್ತಿನಲ್ಲಿದ್ದ ೬೦ ಗ್ರಾಂ ತೂಕದ ಮಾಂಗಲ್ಯದ ಸರವನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆ. ಈ ಸರದ ಬೆಲೆ ರೂ. ೮೦,೦೦೦/ ಆಗಿರುತ್ತದೆ.
ಮನೆಗಳ್ಳತನ: ೦೬
ವೇಮಗಲ್ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಸರಣಿ ಕಳ್ಳತನವಾದ ಬಗ್ಗೆ ಅಪರಾಧ ಪ್ರಕರಣಗಳು ದಾಖಲಾಗಿರುತ್ತದೆ. ದಿನಾಂಕ ೧೬-೦೭-೨೦೦೯ ರಂದು ರಾತ್ರಿ ಯಾರೋ ಕಳ್ಳರು ಈ ಕೆಳಕಂಡ ಶಾಲೆಗಳ ಅಡುಗೆ ಕೋಣೆಗಳಿಗೆ ಹಾಕಿದ್ದ ಬೀಗವನ್ನು ಮುರಿದು ಒಳ ಪ್ರವೇಶಿಸಿ ಗ್ಯಾಸ್ ಸಿಲಿಂಡರ್ ಮತ್ತು ಇನ್ನಿತರೆ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
೧. ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲೆ, ಪೆರ್ಜೇನಹಳ್ಳಿ, ಕೋಲಾರ ತಾಲೂಕು.
೨. ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲೆ, ಸಿಂಗಹಳ್ಳಿ, ಕೋಲಾರ ತಾಲೂಕು.
೩. ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲೆ, ಹೊಲೇರಹಳ್ಳಿ, ಕೋಲಾರ ತಾಲೂಕು.
೪. ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲೆ, ಕಡಗಟ್ಟೂರು, ಕೋಲಾರ ತಾಲೂಕು.
೫. ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲೆ, ಕಾಮಾಂಡಹಳ್ಳಿ, ಕೋಲಾರ ತಾಲೂಕು.
೬. ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲೆ, ಹಾರ್ಜೇನಹಳ್ಳಿ, ಕೋಲಾರ ತಾಲೂಕು.
ಈ ಬಗ್ಗೆ ಮೇಲ್ಕಂಡ ಶಾಲೆಗಳ ಮುಖ್ಯೋಪಾಧ್ಯಾಯರುಗಳು ದೂರು ನೀಡಿದ್ದು ವೇಮಗಲ್ ಠಾಣೆಯಲ್ಲಿ ಆರು ಅಪರಾಧ ಪ್ರಕರಣಗಳು ದಾಖಲಾಗಿರುತ್ತದೆ.
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ೦೧
ಮಾಲೂರು ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ನಗರದ ವಾಸಿ ಕೋಟಿ ದೊರೆಸ್ವಾಮಿ ಗೌಡ ಎಂಬುವರಿಗೆ ಸೇರಿದ ಬಜಾಜ್ ಬಾಕ್ಸರ್ ಸಂಖ್ಯೆ ಕೆಎ-೦೮-ಹೆಚ್-೮೮೬೩ ದ್ವಿಚಕ್ರವಾಹನ ಕಳುವಾಗಿರುತ್ತದೆ. ದಿನಾಂಕ ೧೪-೦೭-೨೦೦೯ ರಂದು ೧೯೩೦ ಗಂಟೆ ಸಮಯದಲ್ಲಿ ತಮ್ಮ ಮನೆಯ ಮುಂದೆ ದ್ವಿಚಕ್ರವಾಹನವನ್ನು ನಿಲ್ಲಿಸಿದ್ದಾಗ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.ಕಳುವಾದ ದ್ವಿಚಕ್ರವಾಹನದ ಬೆಲೆ ರೂ. ೧೦,೦೦೦/ ಆಗಿರುತ್ತದೆ.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೨
ಮಾಸ್ತಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಮಾನಭಂಗ ಯತ್ನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲೂಕು ಜಿನಿಗತಿಮ್ಮನಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೧-೦೭-೨೦೦೯ ರಂದು ೨೦೦೦ ಗಂಟೆ ಸಮಯದಲ್ಲಿ ಜಿನಿಗತಿಮ್ಮನಹಳ್ಳಿ ಗ್ರಾಮದ ವಾಸಿ ಅಲವೇಲಮ್ಮ ಎಂಬುವರು ತಮ್ಮ ಮನೆಯಲ್ಲಿದ್ದರು. ಮನೆಯಲ್ಲಿ ಯಾರೂ ಗಂಡಸರಲಿಲ್ಲದ ಸಮಯವನ್ನು ನೋಡಿಕೊಂಡು ಒಳನುಗ್ಗಿದ ಅದೇ ಗ್ರಾಮದ ವಾಸಿ ಮುನಿಸ್ವಾಮಿ ಎಂಬುವನು ಅಲವೇಲಮ್ಮ ರವರ ಮೇಲೆ ಮಾನಭಂಗ ಯತ್ನ ನಡೆಸಿರುತ್ತಾನೆ. ಈ ವಿಷಯವಾಗಿ ಅಲವೇಲಮ್ಮ ರವರ ಗಂಡನ ಮೇಲೆ ಸಹಾ ಮುನಿಸ್ವಾಮಿ ಜಗಳ ತೆಗೆದು ಭರ್ಜಿಯಿಂದ ತಿವಿದು ಗಾಯಪಡಿಸಿರುತ್ತಾನೆ.
ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಾಯ್ದೆ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ಗಾಂದಿನಗರದಲ್ಲಿ ಕೃತ್ಯ ಸಂಭವಿಸಿರುತ್ತದೆ. ಈ ಪ್ರಕರಣವು ಗಾಂದಿನಗರದ ವಾಸಿ ಶ್ರೀಮತಿ ದಾಕ್ಷಾಯಣಿ ಎಂಬುವರು ನೀಡಿದ ದೂರಿನ ಆಧಾರದ ಮೇರೆಗೆ ದಾಖಲಾಗಿರುತ್ತದೆ. ದಾಕ್ಷಾಯಣಿರವರಿಗೆ ಗಾಂದಿನಗರದ ವಾಸಿ ವಿ.ದೇವರಾಜ್ ಎಂಬವರೊಡನೆ ವಿವಾಹವಾಗಿದ್ದು ವಿವಾಹ ಸಮಯದಲ್ಲಿ ಹಣ ಮತ್ತು ಒಡವೆಯನ್ನು ವರದಕ್ಷಿಣೆಯಾಗಿ ನಿಡಿದ್ದು ವಿವಾಹ ನಂತರ ಇನ್ನೂ ಹೆಚ್ಚಿನ ವರದಕ್ಷಿಣೆ ತರುವಂತೆ ವಿ.ದೇವರಾಜ್ ರವರು ತಮ್ಮ ತಾಯಿ ಮುನಿವೆಂಕಟಮ್ಮ ರವರೊಡನೆ ಸೇರಿಕೊಂಡು ದಿನಾಂಕ ೧೫-೦೭-೨೦೦೯ ರಂದು ರಾತ್ರಿ ದಾಕ್ಷಾಯಣಿ ರವರ ಮೇಲೆ ಜಗಳ ತೆಗೆದು ಕೈಗಳಿಂದ ಹೊಡೆದು ಗಾಯಪಡಿಸಿರುವುದಾಗಿ ದಾಕ್ಷಾಯಿಣಿ ರವರ ತಮ್ಮ ದೂರಿನಲ್ಲಿ ತಿಳಿಸಿರುತ್ತಾರೆ.
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ೦೧
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಚಿನ್ನಾಪುರ ಗ್ರಾಮದ ವಾಸಿ ಕೃಷ್ಣಪ್ಪ ಎಂಬುವರ ಮಗನಾದ ಸಿ.ಕೆ.ವೇಣುಗೋಪಾಲ್ (೨೩) ಎಂಬುವರು ಕಾಣೆಯಾಗಿರುತ್ತಾರೆ. ದಿನಾಂಕ ೨೪-೦೬-೨೦೦೯ ರಂದು ತನ್ನ ಮನೆಯಿಂದ ಹೊರಟ ವೇಣುಗೋಪಾಲ್ ಹಿಂತಿರುಗಿ ಬಾರದೇ ಕಾಣೆಯಾಗಿರುತ್ತಾನೆ.
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ೧೪
-ಸ್ಥಳ ದಂಡ ಮೊತ್ತ: ರೂ. ೧೬೦೦/
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Posted by kolarpolice



