ದಿನದ ಅಪರಾಧಗಳ ಪಕ್ಷಿನೋಟ ೧೯ ನೇ ಜುಲ್ಯೆ ೨೦೦೯

July 18, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೧೯-೦೭-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

ಮಾಲೂರು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೮-೦೭-೨೦೦೯ ರಂದು ೧೨೪೫ ಗಂಟೆ ಸಮಯದಲ್ಲಿ ಹೊಸಕೋಟೆ ತಾಲೂಕು ಕಟ್ಟಿಗೇನಹಳ್ಳಿ ಗ್ರಾಮದ ವಾಸಿಗಳಾದ ಶಹಬಾದ್ ಬೇಗ್ ಮತ್ತು ಇಂತಿಯಾಜ್ ಬೇಗ್ ಎಂಬುವರು ಬಜಾಜ್ ಪ್ಲಾಟೀನಂ ಸಂಖ್ಯೆ ಕೆಎ-೦೪-ಇಟಿ-೯೭೯೨ ದ್ವಿಚಕ್ರವಾಹನದಲ್ಲಿ ಮಾಲೂರು ತಾಲೂಕು ಹೊಸಕೋಟೆ ರಸ್ತೆಯ ಚೊಕ್ಕಂಡಹಳ್ಳಿ ಗೇಟ್ ಬಳಿ ಬರುತ್ತಿದ್ದರು. ಆ ಸಮದಯಲ್ಲಿ ಎದುರುಗಡೆಯಿಂದ ಬಂದ ಲಾರಿ ಸಂಖ್ಯೆ ಎಪಿ-೧೬-ಟಿಡಬ್ಲ್ಯೂ-೨೨೫೭ ರ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ದ್ವಿಚಕ್ರವಾಹನ ಸವಾರರಿಗೆ ತೀವ್ರವಾದ ಗಾಯಗಳಾಗಿದ್ದು ಆ ಪೈಕಿ ಇಂತಿಯಾಜ್ ಬೇಗ್ ಎಂಬುವರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.

-ಸಾಧಾರಣ: ೦೧

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ: ೧೭-೦೭-೨೦೦೯ ರಂದು ೧೨೩೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲ್ಲುಕು ಹೊಗಳಗೆರೆ ಗ್ರಾಮದ ವಾಸಿಯಾದ ಲಕ್ಸ್ಮೀದೇವಮ್ಮ ಎಂಬುವರು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದರು.  ಅ ಸಮಯದಲ್ಲಿ ಹಿಂದುಗಡೆಯಿಂದ ಬಂದ ಯಾವುದೋ ದ್ವಿಚಕ್ರ ವಾಹನದ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಲಕ್ಷ್ಮೀದೇವಮ್ಮ ರವರಿಗೆ ಡಿಕ್ಕಿ ಹೊಡೆದಿದ್ದು ಇದರ ಪರಿಣಾಮವಾಗಿ ಅಕೆಗೆ ರಕ್ತಗಾಯಗಳಾಗಿರುತ್ತವೆ.  ದ್ವಿಚಕ್ರ ವಾಹನದ ಸವಾರ ತನ್ನ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಹೊರಟು ಹೋಗಿರುತ್ತಾನೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಹೊಟ್ಟೆ ನೋವಿನಿಂದ ಬೇಸರವಾಗಿ ಅತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೧೮-೦೭-೨೦೦೯ ರಂದು ಮಾಸ್ತಿ ಗ್ರಾಮದ ಎ.ಡಿ.ಕಾಲೋನಿಯ ವಾಸಿಯಾದ ಮುನಿರತ್ನಮ್ಮ ಎಂಬುವರು ಹೊಟ್ಟೆ ನೋವು ತಾಳಲಾರದೆ ಮನೆಯಲ್ಲಿ ಇಟ್ಟಿದ್ದ ಇರುವೆಗಳಿಗೆ ಹಾಕುವು ವಿಷವನ್ನು ಕುಡಿದು ಆತ್ಮಹತ್ಯ ಮಾಡಿಕೊಂಡಿರುತ್ತಾಳೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೨೭

-ಸ್ಥಳ ದಂಡ ಮೊತ್ತ: ರೂ. ೩೫೦೦/

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದ್ವಿಚಕ್ರ ವಾಹನ ಕಳ್ಳನ ಬಂಧನ: ೨೧ ದ್ವಿಚಕ್ರವಾಹನಗಳ ವಶ

July 18, 2009

ದ್ವಿಚಕ್ರವಾಹನ ಕಳ್ಳನೊಬ್ಬನನ್ನು ಬಂಧಿಸಲಾಗಿದ್ದು  ಆತನಿಂದ ೨೧ ಹೀರೋಹೋಂಡಾ ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಕೆ.ಪಿ.ಪುಟ್ಟಸ್ವಾಮಿ, ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಪಣೀಂದ್ರಸಿಂಗ್ ಹಾಗೂ ಮುಳಬಾಗಿಲು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ  ಮಾರ್ಗದರ್ಶನದಲ್ಲಿ ಶ್ರೀನಿವಾಸಪುರ ಆರಕ್ಷಕ ವೃತ್ತ ನಿರೀಕ್ಷಕರಾದ ಶ್ರೀ ಹೆಚ್.ಶ್ರೀನಿವಾಸ್, ಶ್ರೀನಿವಾಸಪುರ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ಡಿ.ಆರ‍್.ಪ್ರಕಾಶ್ ರವರು ತಮ್ಮ ಸಿಬ್ಬಂದಿಯೊಡನೆ ದಿನಾಂಕ ೧೪-೦೭-೨೦೦೯ ರಂದು ರಾತ್ರಿ ಶ್ರೀನಿವಾಸಪುರ ಟೌನ್ ಇಂದಿರಾಭವನ ವೃತ್ತದ ಬಳಿ ಅನುಮಾನಸ್ಪದವಾಗಿ ನಿಂತಿದ್ದ ವ್ಯಕ್ತಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿರುತ್ತಾರೆ. ವಿಚಾರಣೆ ವೇಳೆ ಆರೋಪಿಯು ಮಂಜುನಾಥ @ ಮಂಜು ತಂದೆ ವೆಂಕಟರೆಡ್ಡಿ, ೩೩ ವರ್ಷ, ಅಬ್ಬಗುಂಡು, ಚಿಂತಾಮಣಿ ಟೌನ್ ಎಂಬುದಾಗಿ ತಿಳಿಸಿದ್ದು ತಾನು ನಂದಗುಡಿ, ಹೊಸಕೋಟೆ, ಚಿಂತಾಮಣಿ, ಕೆ.ಆರ‍್.ಪುರಂ. ಶಿಡ್ಲಘಟ್ಟ ಮುಂತಾದ ಕಡೆ ದ್ವಿಚಕ್ರವಾಹನಗಳನ್ನು ಕಳವು ಮಾಡಿರುವ ಬಗ್ಗೆ ಮಾಹಿತಿ ನೀಡಿರುತ್ತಾನೆ. ಕಳವು ಮಾಡಿ ಮಾರಲಾಗಿದ್ದ ಎಲ್ಲಾ ೨೧ ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಾಗಿರುತ್ತದೆ. ಇವುಗಳ ಒಟ್ಟು ಬೆಲೆ ರೂ. ೭,೦೯,೦೦೦/ ಆಗಿರುತ್ತದೆ.

ಪೊಲೀಸ್ ಸಿಬ್ಬಂದಿಯವರಾದ ಶ್ರೀ ಸೋಮಶೇಖರ‍್, ಶ್ರೀ ಎಸ್.ಮಹೇಶ್, ಶ್ರೀ ಬಿ.ಸಿ.ಮುರಳಿಮೋಹನ್, ಶ್ರೀ ವಾಸುದೇವಮೂರ್ತಿ, ಶ್ರೀ ನಾರಾಯಣಸ್ವಾಮಿ, ಶ್ರೀ ಶೇಕ್ ಹುಸೇನ್ ರವರುಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ. ಈ ಬಗ್ಗೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೮ ನೇ ಜುಲ್ಯೆ ೨೦೦೯

July 18, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೧೮-೦೭-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೬-೦೭-೨೦೦೯ ರಂದು ರಾತ್ರಿ ಯಾರೋ ಕಳ್ಳರು ಕೋಲಾರ ತಾಲೂಕು ಹುತ್ತೂರು ಗ್ರಾಮದ ಬಳಿ ವಿದ್ಯುತ್ ಕಂಬಗಳಿಗೆ ಅಳವಡಿಸಿದ್ದ ವಿದ್ಯುತ್ ತಂತಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕೆಂಬೋಡಿ ಶಾಖೆಯ ಬೆಸ್ಕಾಂ ಶಾಖಾಧಿಕಾರಿಗಳಾದ ವೆಂಕಟಚಲಯ್ಯ ರವರು ದೂರು ನೀಡಿದ್ದು ಕಳುವಾದ ವಿದ್ಯುತ್ ತಂತಿಯ ಒಟ್ಟು ಬೆಲೆ ರೂ. ೩೪,೨೦೦/ ಆಗಿರುತ್ತದೆ.

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣವು ಕೋಲಾರ ತಾಲೂಕು ವಿಟ್ಟಪ್ಪನಹಳ್ಳಿ ಗ್ರಾಮದ ವಾಸಿ ವಿ.ಉಮಾ ಎಂಬುವರು ನೀಡಿದ ದೂರಿನ ಆಧಾರದ ಮೇರೆಗೆ ದಾಖಲಾಗಿರುತ್ತದೆ. ಉಮಾ ರವರು ವಿಟ್ಟಪ್ಪನಹಳ್ಳಿ ಗ್ರಾಮದ ವಾಸಿ ಸುಬ್ರಮಣಿ ಎಂಬುವರೊಡನೆ ವಿವಾಹವಾಗಿದ್ದು ಈಗ್ಗೆ ೫ ವರ್ಷಗಳಿಂದೀಚೆಗೆ ಸುಬ್ರಮಣಿ ಇವರ ತಾಯಿ ದ್ಯಾವೀರಪ್ಪ ಮತ್ತು ತಂಗಿ ಸುಜಾತ ಎಂಬುವರೆಲ್ಲರೂ ಸೇರಿಕೊಂಡು ಉಮಾ ರವರಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿರುವುದಾಗಿಯೂ ೫ ತಿಂಗಳ ಹಿಂದೆ ಸುಬ್ರಮಣಿ ರವರು ಮತ್ತೊಂದು ವಿವಾಹ ಮಾಡಿಕೊಂಡು ವಂಚನೆ ಎಸಗಿರುವುದಾಗಿ ಉಮಾ ರವರು ತಮ್ಮ ದೂರಿನಲ್ಲಿ ತಿಳಿಸಿರುತ್ತಾರೆ.

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೧೫

-ಸ್ಥಳ ದಂಡ ಮೊತ್ತ: ರೂ. ೨೦೦೦/

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.