ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೧-೦೭-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ೦೧
ಮಾಲೂರು ಪೊಲೀಸ್ ಠಾಣೆಯಲ್ಲಿ ಸುಲಿಗೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೨೦-೦೭-೨೦೦೯ ರಂದು ೧೨೧೦ ಗಂಟೆ ಸಮಯದಲ್ಲಿ ಜಿ,ನಾಗರಾಮಮೋಹನ್, ಮ್ಯಾನೇಜರ್, ವಿಜಯ ಬ್ಯಾಂಕ್, ಚಿಕ್ಕಕುಂತೂರು ಶಾಖೆ, ರವರು ಬ್ಯಾಂಕಿನ ಗ್ರಾಹಕರಿಂದ ರೂ. ೫,೫೩,೮೨೫/- ಗಳನ್ನು ವಸೂಲಿ ಮಾಡಿಕೊಂಡು ತನ್ನ ವಾಹನದಲ್ಲಿ ವಾಪಸ್ಸು ಸೊಣ್ಣಹಳ್ಳಿ ಗೇಟ್ ಬಳಿ ಹೋಗುತ್ತದ್ದರು. ಆ ಸಮಯದಲ್ಲಿ ಪಲ್ಸ್‌ರ್ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದ ೩ ಜನ ಅಪರಿಚಿತರು ನಾಗರಾಮಮೋಹನ್ ರವರನ್ನು ವಾಹನದಿಂದ ಕೆಳಗೆ ತಳ್ಳಿ ಅವರ ಬಳಿ ಇದ್ದ ಹಣದ ಚೀಲವನ್ನು ಕಿತ್ತುಕೊಂಡು ಕಣ್ಣುಗಳಿಗೆ ಕಾರದ ಪುಡಿ ಎರಚಿ ಪರಾರಿಯಾಗಿರುತ್ತಾರೆ.
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ
ರಸ್ತೆ ಅಪಘಾತಗಳು: ೦೨
-ಮಾರಣಾಂತಿಕ:
-ಸಾಧಾರಣ: ೦೨
ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೦-೦೭-೨೦೦೯ ರಂದು ೧೦೪೫ ಗಂಟೆ ಸಮಯದಲ್ಲಿ ಬೆಂಗಳೂರು ನಗರದ ಅಂಚೇಪಾಳ್ಯ ವಾಸಿಯಾದ ಟಿ.ಕೃಷ್ಣಪ್ಪ ಎಂಬುವರು ತನ್ನ ಕುಟುಂಬ ಸಮೇತ ಮಾರುತಿ ಓಮ್ನಿ ಕಾರು ಸಂಖ್ಯೆ ಕೆಎ-೦೨-ಎಂಬಿ-೫೭೦೧ರಲ್ಲಿ ರಾಷ್ಷ್ರೀಯ ಹೆದ್ದಾರಿ-೪ ರ ನರಸಿಂಹತೀರ್ಥದ ಬಳಿ ಹೋಗುತ್ತಿದ್ದರು. ಅ ಸಮಯದಲ್ಲಿ ಎದುರುಗಡೆಯಿಂದ ಬಂದ ಗೂಡ್ಸ್ ಟೆಂಪೋ ಸಂಖ್ಯೆ ಕೆಎ-೦೭-೫೯೬೦ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮಾರುತಿ ಓಮ್ನಿ ಕಾರಿಗೆ ಡಿಕ್ಕಿ ಹೊಡೆಸಿದ ಪರಿಣಾಮವಾಗಿ ಕಾರಿನಲ್ಲಿದ ಕೃಷ್ಣಪ್ಪ ರವರ ಮಗಳಾದ ರಷ್ಮಿರವರಿಗೆ ರಕ್ತಗಾಯಗಳಾಗಿರುತ್ತವೆ.
ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೧-೦೭-೨೦೦೯ ರಂದು ೦೬೦೦ ಗಂಟೆ ಸಮಯದಲ್ಲಿ ಬೆಂಗಳೂರು ನಗರದ ಕಸ್ತೂರಿಬಾ ನಗರದ ವಾಸಿಯಾದ ಶ್ರೀಧರ ಎಂಬುವರು ಬೆಂಗಳುರಿಗೆ ಹೋಗುವ ಸಲುವಾಗಿ ತನ್ನ ಕುಟುಂಬ ಸಮೇತ ಕ್ವಾಲೀಸ್ ವಾಹನ ಸಂಖ್ಯೆ ಕೆಎ-೨೩-ಎಂಸಿ-೮೧೮೧ ರಲ್ಲಿ ರಾಷ್ಷ್ರೀಯ ಹೆದ್ದಾರಿ-೪ ರ ಆರ್.ಎಂ.ಸಿ ಯಾರ್ಡ್ ಬಳಿ ಹೋಗುತ್ತಿದ್ದರು. ಅ ಸಮಯದಲ್ಲಿ ಎದುರುಗಡೆಯಿಂದ ಬಂದ ಲಾರಿ ಸಂಖ್ಯೆ ಕೆಎ-೨೦-೪೪೯೧ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮಾರುತಿ ಕ್ವಾಲೀಸ್ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮವಾಗಿ ಕ್ವಾಲೀಸ್ ವಾಹನದಲ್ಲಿದ್ದ ಮಿಲ್ಲಾ (೧೩) ಮತ್ತು ರಶೀದಾ (೩೭) ಎಂಬುವರಿಗೆ ಗಾಯಗಳುಂಟಗಿದ್ದು ಪ್ರಸ್ತುತ ಎಸ್.ಎನ್.ಅರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ.
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು:
-ಸ್ಥಳ ದಂಡ ಮೊತ್ತ: ರೂ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Posted by kolarpolice
Posted by kolarpolice
Posted by kolarpolice



