ದಿನದ ಅಪರಾಧಗಳ ಪಕ್ಷಿನೋಟ ೨೨ ನೇ ಜುಲ್ಯೆ ೨೦೦೯

July 21, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೨೨-೦೭-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೧

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣವು ಕೋಲಾರ ಅಂಬೇಡ್ಕರ್‍ ನಗರದ ವಾಸಿ ಅಮರಾವತಿ (೨೦) ಎಂಬುವರ ದೂರಿನ ಆಧಾರದ ಮೇರೆಗೆ ದಾಖಲಾಗಿರುತ್ತದೆ. ಅಮರಾವತಿ ರವರು ಅಂಬೇಡ್ಕರ್‍ ನಗರದ ವಾಸಿ ಸಂತೋಷ ಎಂಬುವರನ್ನು ದಿನಾಂಕ ೧೩-೦೫-೨೦೦೭ ರಂದು ವಿವಾಹವಾಗಿದ್ದರು. ವಿವಾಹ ಕಾಲದಲ್ಲಿ ಹಾಗೂ ವಿವಾಹ ನಂತರ ಹಲವಾರು ಬಾರಿ ವರದಕ್ಷಿಣೆಯಾಗಿ ಹಣವನ್ನು ತನ್ನ ಗಂಡನಿಗೆ ನೀಡಿದ್ದು ದಿನಾಂಕ ೧೪-೦೬-೨೦೦೯ ರಂದು ಇವರ ಮೇಲೆ ಜಗಳ ತೆಗೆದ ಗಂಡ ಸಂತೋಷ ಹಾಗೂ ಅತ್ತೆ ಪಿಳ್ಳಮ್ಮ ಎಂಬುವರು ವರದಕ್ಷಿಣೆ ತರುವಂತೆ ಒತ್ತಾಯಿಸಿ ಕೈಗಳಿಂದ ಹೊಡೆದು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಮನೆಯಿಂದ ಹೊರಹಾಕಿರುವುದಾಗಿ ಅಮರಾವತಿ ರವರು ತಮ್ಮ ದೂರಿನಲ್ಲಿ ತಿಳಿಸಿರುತ್ತಾರೆ.

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ೦೨

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೦೭-೨೦೦೯ ರಂದು ೧೪೪೫ ಗಂಟೆ ಸಮಯದಲ್ಲಿ ಮೂಲತಃ ಆಂದ್ರ ಪ್ರದೇಶದ ವಾಸಿಗಳಾದ ಜಗದೀಶ್ ಮತ್ತು ನಾಗರತ್ನಂರೆಡ್ಡಿ ಎಂಬುವರು ಬೆಂಗಳೂರಿನಿಂದ ಚಿತ್ತೂರಿಗೆ ಹೋಗುವ ಸಲುವಾಗಿ ದ್ವಿಚಕ್ರವಾಹನ ಸಂಖ್ಯೆ ಕೆಎ-೦೫-ಇಡಬ್ಲ್ಯೂ-೪೨೬೯ ರಲ್ಲಿ ಮುಳಬಾಗಿಲು ಸಮೀಪ ಎನ್.ಹೆಚ್ ೪ ರಸ್ತೆಯ ಕೆ.ಬೈಪಲ್ಲಿ ಕ್ರಾಸ್ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ನಾಗರತ್ನಂರೆಡ್ಡಿ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದು ಚಾಹನ ರಸ್ತೆ ಬದಿಯ ಹಳ್ಳವೊಂದಕ್ಕೆ ಉರುಳಿ ಬಿದ್ದಿರುತ್ತದೆ. ಇದರ ಪರಿಣಾಮ ದ್ವಿಚಕ್ರವಾಹನ ಸವಾರರಿಗೆ ಗಾಯಗಳಾಗಿದ್ದು ಆ ಪೈಕಿ ನಾಗರತ್ನಂರೆಡ್ಡಿ ರವರು ಕೋಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಯಲ್ಲ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೭-೨೦೦೯ ರಂದು ೦೮೪೫ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಹೆಚ್.ಗೊಲ್ಲಹಳ್ಳಿ ಗ್ರಾಮದ ವಾಸಿ ಶ್ರೀನಾಥ, ಸತೀಶ ಮತ್ತು ಜಗದೀಶ ಎಂಬುವರು ತಮ್ಮೊಡನೆ ಮಂಜಮ್ಮ, ರತ್ನಮ್ಮ ಮತ್ತಿಬ್ಬರನ್ನು ಕುಳ್ಳರಿಸಿಕೊಂಡು ಟ್ರಾಕ್ಟರ್‍ ಸಂಖ್ಯೆ ಕೆಎ-೦೭-ಟಿ-೭೨೯೩ ರಲ್ಲಿ ವಮ್ಮಸಂದ್ರ-ಮುಳಬಾಗಿಲು ರಸ್ತೆಯ ಕಲ್ಕೆರೆ ಗ್ರಾಮದ ಕ್ರಾಸ್ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಟ್ರಾಕ್ಟರ್‍ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದು ನಿಯಂತ್ರಣ ತಪ್ಪಿ ಟ್ರಾಕ್ಟರಿನ ಟ್ರಾಲಿ ಉರುಳಿ ಬಿದ್ದಿರುತ್ತದೆ. ಟ್ರಾಕ್ಟರಿನಲ್ಲಿದ್ದವರು ಟ್ರಾಲಿಯ ಅಡಿಯಲ್ಲಿ ಸಿಲುಕಿ ಗಾಯಗೊಂಡಿದ್ದು ಆ ಪೈಕಿ ಮಂಜಮ್ಮ ಎಂ‌ಬುವರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಉಳಿದ ಗಾಯಾಳುಗಳು ಮುಳಬಾಗಿಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುತ್ತಾರೆ.

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು:  ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:

-ಸ್ಥಳ ದಂಡ ಮೊತ್ತ: ರೂ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.