ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೬-೦೭-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ೦೧
ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೧-೦೭-೨೦೦೯ ರಂದು ರಾತ್ರಿ ಯಾರೋ ಕಳ್ಳರು ಶ್ರೀನಿವಾಸಪುರ ತಾಲ್ಲೂಕು ಶೆಟ್ಟಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೀಗವನ್ನು ಹೊಡೆದು ಒಳಗೆ ಪ್ರವೇಶ ಮಾಡಿ ಒಳಗಡೆ ಇದ್ದ ೪ ಗ್ಯಾಸ್ ಸಿಲಿಂಡರ್ ಮತ್ತು ೭ ಕೆ.ಜಿ. ಅಡಿಗೆ ಎಣ್ಣೆಯನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ವಸ್ತುಗಳ ಬೆಲೆ ೬,೦೦೦/- ಅಗಿರುತ್ತದೆ ಎಂದು ಅ ಶಾಲೆಯ ಮೂಖ್ಯೋಪಾಧ್ಯಾಯರಾದ ಶ್ರೀಮತಿ ವೆಂಕಟಲಕ್ಷ್ಮಮ್ಮ ರವರು ತಮ್ಮ ದೂರಿನಲ್ಲಿ ತಿಳಿಸಿರುತ್ತಾರೆ.
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ೦೧
ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೦೭-೨೦೦೯ ರಂದು ೧೭೦೦ ಗಂಟೆ ಸಮಯದಲ್ಲಿ ಕೋಲಾರ ತಾಲ್ಲೂಕು ಕಾಮದೇನಹಳ್ಳಿ ಗ್ರಾಮದ ವಾಸಿಯಾದ ವಸಂತ ಕುಮಾರ್ ಎಂಬುವರು ತಮ್ಮ ದ್ವಿಚಕ್ರ ವಾಹನ ಸಂ. ಕೆಎ-೦೭-ಕೆ-೩೯೯೧ ಅನ್ನು ಕೋಲಾರ ನಗರದ ಹಳೇ ಬಸ್ ಸ್ಟ್ಯಾಂಡ್ ಬಳಿ ಇರುವ ಇಂಡಿಯನ್ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದರು. ಅ ಸಮಯದಲ್ಲಿ ಯಾರೋ ಕಳ್ಳರು ದ್ವಿಚಕ್ರ ವಾಹನವನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ದ್ವಿಚಕ್ರ ವಾಹನದ ಬೆಲೆ ಸುಮಾರು ೨೫,೦೦೦/- ರೂಗಳಾಗಿರುತ್ತದೆ ಎಂದು ಪಿರ್‍ಯಾದಿದಾರರು ತಮ್ಮ ದೂರಿನಲ್ಲಿ ತಿಳಿಸಿರುತ್ತಾರೆ.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ೦೩
ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೦೭-೨೦೦೯ ರಂದು ೨೩೩೦ ಗಂಟೆ ಸಮಯದಲ್ಲಿ ಕೋಲಾರ ನಗರದ ಪಿ.ಸಿ.ಬಡಾವಣೆ ವಾಸಿಯಾದ ಮುರಳಿ ಎಂಬುವರು ತಮ್ಮ ಮನೆಯಲ್ಲಿದ್ದರು ಅ ಸಮಯದಲ್ಲಿ ಅಲ್ಲಿಗೆ ಬಂದ ಅದೇ ಬಡಾವಣೆಯ ವಾಸಿಗಳಾದ ಉಮೇಶ್ ಮತ್ತು ಇತರೆ ೩ ಜನರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಮುರಳಿ ರವರನ್ನು ಮನೆಯಿಂದ ಹೊರಗಡೆ ಕರೆದು ವಿನಾಕಾರಣ ಜಗಳ ಮಾಡಿ ದೊಣ್ಣೆಗಳಿಂದ ಮತ್ತು ಕೈಗಳಿಂದ ತಲೆ ಮತ್ತು ಮುಖಕ್ಕೆ ಹೊಡೆದೆ ಗಾಯಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣಬೆದರಿಕೆ ಹಾಕಿರುತ್ತಾರೆ.
ವೇಮಗಲ್ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೪-೦೭-೨೦೦೯ ರಂದು ೧೬೩೦ ಗಂಟೆ ಸಮಯದಲ್ಲಿ ಕೋಲಾರ ತಾಲ್ಲೂಕು ಅಮ್ಮನಲ್ಲೂರು ಗ್ರಾಮದ ವಾಸಿಗಳಾದ ನಾಗರಾಜ ಎಂಬುವರು ತಮ್ಮ ಮನೆಯ ಮುಂದೆ ಇದ್ದರು. ಅ ಸಮಯದಲ್ಲಿ ಅದೇ ಗ್ರಾಮದ ವಾಸಿಗಳಾದ ನಾರಾಯಣಪ್ಪ ಮತ್ತು ಇತರೆ ೧೪ ಜನರು ಕೋಳಿ ಅಕ್ರಮ ಪ್ರವೇಶದ ಮತ್ತು ಹಳೇ ಜಮೀನಿನ ವಿಚಾರದಲ್ಲಿ ಅಕ್ರಮ ಗುಂಪು ಕಟ್ಟಿಕೊಂಡು ಬಂದು ಮಾರಾಕಾಸ್ತ್ರಗಳಿಂದ ನಾಗರಾಜ ಮತ್ತು ಇತರೆ ೩ ಜನ ಮಹಿಳೆಯರನ್ನು ಹೊಡೆದು ಗಾಯಪಡಿಸಿರುತ್ತಾರೆ.
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ : ೨೧-೦೭-೨೦೦೯ ರಂದು ೧೯೦೦ ಗಂಟೆ ಸಮಯದಲ್ಲಿ ಕೋಲಾರ ತಾಲ್ಲೂಕು ಹರಟಿ ಗ್ರಾಮದ ವಾಸಿಯಾದ ಯಲ್ಲಪ್ಪ ಎಂಬುವರು ತಮ್ಮ ಗ್ರಾಮದ ಹನುಮಪ್ಪ ರವರ ಮನೆಯ ಮುಂದೆ ಇದ್ದರು. ಅ ಸಮಯದಲ್ಲಿ ಅದೇ ಗ್ರಾಮದ ವಾಸಿಗಳಾದ ಹರೀಶ್ ಮತ್ತು ಇತರೆ ೬ ಜನರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಜಮೀನು ವಿಚಾರದಲ್ಲಿ ಜಗಳ ಮಾಡಿ ಯಲ್ಲಪ್ಪ ಮತ್ತು ಇತರೆ ೩ ಜನರನ್ನು ಅವಾಚ್ಯ ಶಬ್ದಗಳಿಂದ ಬೈದು ದೊಣ್ನೆ ಮತ್ತು ಮಚ್ಚಿನಿಂದ ಹೊಡೆದು ಗಾಯಪಡಿಸಿರುತ್ತಾರೆ.
ಹಲ್ಲೆ: ಇಲ್ಲ
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ವಿಷ ಸೇವಿಸಿ ಆತ್ಮಹತ್ಯ ಮಾಡಿಕೊಂಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೪-೦೭-೨೦೦೯ ರಂದು ಕೋಲಾರ ನಗರದ ಗಲ್ ಪೇಟೆ ವಾಸಿಯಾದ ದೇವದಾಸ್ ಎಂಬುವರು ಹೊಟ್ಟೆ ನೋವು ತಾಳಲಾರದೆ ಮನೆಯಲ್ಲಿದ್ದ ವಿಷವನ್ನು ಕುಡಿದು ಆತ್ಮಹತ್ಯ ಮಾಡಿಕೊಂಡಿರುತ್ತಾರೆ.
ನಂಗಲಿ ಪೊಲೀಸ್ ಠಾಣೆಯಲ್ಲಿ ವಿಷ ಸೇವಿಸಿ ಆತ್ಮಹತ್ಯ ಮಾಡಿಕೊಂಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೫-೦೭-೨೦೦೯ ರಂದು ರಾತ್ರಿ ಮುಳಬಾಗಿಲು ತಾಲ್ಲೂಕು ಕಲ್ಲರಸನಹಳ್ಳಿ ಗ್ರಾಮದ ವಾಸಿಯಾದ ವೆಂಕಟರವಣಪ್ಪ ಎಂಬುವರು ಪಿ.ಎಲ್.ಡಿ. ಭ್ಯಾಂಕಿನಲ್ಲಿ ಸಾಲ ಮಾಡಿದ್ದು ಭ್ಯಾಂಕಿನ ಅಧಿಕಾರಿಗಳು ಜಮೀನು ಹರಾಜು ಹಾಕುವುದಾಗಿ ಡಂಗೂರು ಸಾರಿದ್ದು ಇದರಿಂದ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯ ಮಾಡಿಕೊಂಡಿರುತ್ತಾರೆ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ೦೮
-ಸ್ಥಳ ದಂಡ ಮೊತ್ತ: ರೂ. ೮೦೦/-
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Posted by kolarpolice



