ದಿನದ ಅಪರಾಧಗಳ ಪಕ್ಷಿನೋಟ ೨೭ನೇ ಜುಲ್ಯೆ ೨೦೦೯

July 26, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೨೭-೦೭-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು:  ೦೨

-ಮಾರಣಾಂತಿಕ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೭-೨೦೦೯ ರಂದು ೨೦೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ವೇಮಗಲ್ ಗ್ರಾಮದ ವಾಸಿಗಳಾದ ನಾಗರಾಜ  ಮತ್ತು ಗಂಗಾಧರ ಎಂಬುವರು ತನ್ನ ಹೀರೋ ಹೋಂಡಾ ಸ್ಪ್ಲೆಂಡರ್‍ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೭-ಕೆ-೪೬೦೧ರಲ್ಲಿ ಕೋಲಾರ ತಾಲೂಕು ಗರುಡನಹಳ್ಳಿ ಗೇಟ್ ಬಳಿ   ಬರುತ್ತಿದ್ದರು. ಆ ಸಮಯದಲ್ಲಿ ವೇಮಗಲ್ ಕಡೆಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಸಂಖ್ಯೆ ಕೆಎ-೦೭-ಎಫ್-೯೫೭ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಆಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರಿಗೂ ತೀವ್ರತರವಾದ ರಕ್ತಗಾಯಗಳಾಗಿ ನಾಗರಾಜ ಎಂಬುವರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಗಂಗಾಧರ ಎಂಬುವರನ್ನು ಚಿಕಿತ್ಸೆಗಾಗಿ ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾರೆ, 

-ಸಾಧಾರಣ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾದಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೨೬-೦೭-೨೦೦೯ ರಂದು ೧೬೦೦ ಗಂಟೆ ಸಮಯದಲ್ಲಿ ಮುಳಬಾಗಿಲು ಪಟ್ಟಣದ ಗುಣಗಂಟಪಾಳ್ಯ ವಾಸಿ ದೇವರಾಜ ಎಂಬುವರು ತನ್ನ ಹೀರೋ ಹೋಂಡಾ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೭-ಜೆ-೮೮೮೯ರಲ್ಲಿ ಹೋಗುತ್ತಿದ್ದರು. ಆಸಮಯದಲ್ಲಿ ಬಂದ ಅಪರಿಚಿ ಆಟೋ ಚಾಲಕ ತನ್ನ ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಆಟೋ ನಿಲ್ಲಿಸದೆ ಪರಾರಿಯಾಗಿರುತ್ತಾನೆ, ಪರಿಣಾಮ ದೇವರಾಜು ರವರಿಗೆ ಗಾಯಗಳಾಗಿರುತ್ತದೆ.

 ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ 

ದೊಂಬಿ: ೦೧

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.   ದಿನಾಂಕ ೨೬-೦೭-೨೦೦೯ ರಂದು ೧೪೦೦ ಗಂಟೆ ಸಮಯದಲ್ಲಿ ಕೋಲಾರ ನಗರದ ಪಿ.ಸಿ.ಬಡಾವಣೆ ವಾಸಿಯಾದ ವಿಕಾಸ್ ಬೈರೇಗೌಡ ಎಂಬುವರು ತಮ್ಮ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೭-೨೯೯೯ರಲ್ಲಿ ಮಿನಿ ಹೋಟಲ್ ಕಡೆಯಿಂದ ಮನೆಗೆ  ಹೋಗುತ್ತಿದ್ದರು. ಅ ಸಮಯದಲ್ಲಿ ಬಂದ ಅದೇ ಬಡಾವಣೆಯ ವಾಸಿಗಳಾದ ರಾಖೇಶ್ ಮತ್ತು ಇತರೆ ೫ ಜನರು ಹಳೇ ದ್ವೇಷದ ಹಿನ್ನೆಲೆಯಲ್ಲಿ ಅಕ್ರಮ ಗುಂಪು ಕಟ್ಟಿಕೊಂಡು ಬಂದು ವಿಕಾಸ್ ರವರನ್ನು ಅಡ್ಡಗಟ್ಟಿ ದ್ವಿಚಕ್ರ ವಾಹನವನ್ನು ಕಿತ್ತುಕೊಂಡು ಮನೆಯೋಳಗೆ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ವೆಂಕಟೇಗೌಡ ರವರನ್ನು ದೊಣ್ಣೆಯಿಂದ ತಲೆಗೆ ಮತ್ತು ಕಾಲಿಗೆ ಹೊಡೆದು ಕಿಟಕಿ ಗಾಜು ಮತ್ತು ಟಿವಿಯನ್ನು ಹೊಡೆದು ಹಾಕಿ ವೆಂಕಟೇಗೌಡ ರವರ ತಾಯಿ ಮತ್ತು ಹೆಂಡತಿಯ ಕತ್ತಿನಲ್ಲಿದ್ದ   ಬಂಗಾರದ ಚೈನುಗಳನ್ನು ಕಿತ್ತುಕೊಂಡು ಪ್ರಾಣಬೆದರಿಕೆ ಹಾಕಿರುತ್ತಾರೆ.

ಹಲ್ಲೆ: ೦೨

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.   ದಿನಾಂಕ ೨೬-೦೭-೨೦೦೯ ರಂದು ೧೦೦೦ ಗಂಟೆ ಸಮಯದಲ್ಲಿ ಕೋಲಾರ ನಗರದ ಪಿ.ಸಿ.ಬಡಾವಣೆ ವಾಸಿಯಾದ ರಾಕೇಶ್ ಎಂಬುವರು ಮಹೇಶ್ ರವರ ಅಂಗಡಿ ಬಳಿ ನಿಂತಿದ್ದರು. ಅ ಸಮಯದಲ್ಲಿ ಅಲ್ಲಿಗೆ ಬಂದ ಅದೇ ಬಡಾವಣೆಯ ವಾಸಿಗಳಾದ ವೆಂಕಟೇಗೌಡ ಮತ್ತು ವಿಕಾಸ್ ಎಂಬುವರು ಹಳೇ ದ್ವೇಷದ ಹಿನ್ನೆಲೆಯಲ್ಲಿ ಜಗಳ ತೆಗೆದು   ಅವಾಚ್ಚಶಬ್ದಗಳಿಂದ ಬೈದು ಚೈನರ್‍ ಪ್ಯಾಕೇಟ್ ನಿಂದ ತಲೆಗೆ  ಮತ್ತು ತುಟಿಗೆ ಹೊಡೆದು ರಕ್ತಗಾಯಪಡಿಸಿ ಮುರಳಿ ರವರು ಕತ್ತಿನಲ್ಲಿದ್ದ ಬಂಗಾರದ ಚೈನು ಮತ್ತು ಒಂದು ಸಾವಿರ ರೂಪಾಯಿಗಳನ್ನು  ಕಿತ್ತುಕೊಂಡು ಪ್ರಾಣಬೆದರಿಕೆ ಹಾಕಿರುತ್ತಾರೆ.

ಮಾಲೂರು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.   ದಿನಾಂಕ ೨೬-೦೭-೨೦೦೯ ರಂದು ೨೦೦೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ದೊಮ್ಮರಹಳ್ಳಿ ಗ್ರಾಮದ ವಾಸಿಯಾದ  ಬಯಮ್ಮ ಎಂಬುವರನ್ನು ಅದೇ ವಾಸಿಗಳಾದ ಮುನಿರಾಜು ಮತ್ತು ಇತರೆ ಇಬ್ಬರು  ಹಳೇ ದ್ವೇಷದ ಹಿನ್ನೆಲೆಯಲ್ಲಿ ಜಗಳ ತೆಗೆದು   ಅವಾಚ್ಚಶಬ್ದಗಳಿಂದ ಬೈದು ದೊಣ್ಣೆಯಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ.

ಇತರೆ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಬೆದರಿಕೆ ಹಾಕಿರುವ ಬಗ್ಗೆ  ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೨೩-೦೭-೨೦೦೯ ರಂದು ೦೯೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಚಿಕ್ಕನಹಳ್ಳಿ ಗ್ರಾಮದ ವಾಸಿ ಪದ್ಮನಾಭ ಎಂಬುವರಿಗೆ ಪಾತನಪಲ್ಲಿ ಗ್ರಾಮದ ವಾಸಿ ಆನಂದ ಎಂಬುವರು ಜಮೀನು ವಿಚಾರದಲ್ಲಿ ದೂರವಾಣಿ ಕರೆ ಮಾಡಿ ಅವಾಚ್ಚ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು:  ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:   

-ಸ್ಥಳ ದಂಡ ಮೊತ್ತ:  ರೂ.  

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.