ದಿನದ ಅಪರಾಧಗಳ ಪಕ್ಷಿನೋಟ ೨೮ನೇ ಜುಲ್ಯೆ ೨೦೦೯

July 27, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೨೮-೦೭-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು:  ಇಲ್ಲ

-ಮಾರಣಾಂತಿಕ: ಇಲ್ಲ 

-ಸಾಧಾರಣ: ಇಲ್ಲ

 ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ 

ದೊಂಬಿ: ೦೧

ನಂಗಲಿ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.   ದಿನಾಂಕ ೨೭-೦೭-೨೦೦೯ ರಂದು ೦೭೩೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಭಟ್ರಹಳ್ಳಿ ಗ್ರಾಮದ ವಾಸಿಯಾದ ಮುನಿರಾಜು ಮತ್ತು ಅವರ ಮನೆಯವರು ತಮ್ಮ ಬಾಬ್ತು ಖಾಲಿ ನಿವೇಶನದಲ್ಲಿ ಪಾಯವನ್ನು ತೆಗೆಯುತ್ತಿದ್ದರು.   ಅ ಸಮಯದಲ್ಲಿ ಬಂದ ಅದೇ ಗ್ರಾಮದ ವಾಸಿಗಳಾದ ರಘುಪತಿ ಮತ್ತು ಇತರೆ ೫ ಜನರು ಖಾಲಿ ನಿವೇಶನದ ವಿಚಾರದಲ್ಲಿ ಜಗಳ ತೆಗೆದು ಅಕ್ರಮ ಗುಂಪು ಕಟ್ಟಿಕೊಂಡು  ಬಂದು ಅವಾಚ್ಚಶಬ್ದಗಳಿಂದ ಬೈದು ಮುನಿರಾಜು ಮತ್ತು ಅವರ ಮನೆಯವರನ್ನು ಕೈಗಳಿಂದ ಮತ್ತು ಕಲ್ಲಿನಿಂದ ಹೊಡೆದು ಗಾಯಪಡಿಸಿ ಪ್ರಾಣಬೆದರಿಕೆ ಹಾಕಿರುತ್ತಾರೆ.

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.   ದಿನಾಂಕ ೨೭-೦೭-೨೦೦೯ ರಂದು ೧೮೩೦ ಗಂಟೆ ಸಮಯದಲ್ಲಿ ಕೋಲಾರ ಗ್ರಾಮಾಂತರ ಠಾಣೆಯ  ಮುಖ್ಯ ಪೇದೆ ೭೫ ಎಸ್.ನಾರಾಯಣ ಎಂಬುವರು  ಸಿಬ್ಬಂದಿಯೊಂದಿಗೆ ಸರ್ಕಾರಿ ವಾಹನದಲ್ಲಿ ಅರ್ಜಿ ವಿಚಾರವಾಗಿ ಕಮ್ಮಸಂದ್ರ ಗ್ರಾಮಕ್ಕೆ ಹೋಗಲು ಶಾಗತ್ತೂರು ಗ್ರಾಮದ ಮಾರ್ಗವಾಗಿ ಹೋಗಲು ಗ್ರಾಮದಲ್ಲಿ ಬರುವಷ್ಟರಲ್ಲಿ ಅಲ್ಲಿ ಸೇರಿದ್ದ ಸುಮಾರು ೫೦ ರಿಂದ ೬೦ ಜನರು ಜಗಳವಾಡುತ್ತಿದ್ದವರು ಪೊಲೀಸರನ್ನು ಕಂಡು ದಾಳಿ ಮಾಡಿ  ಅವಾಚ್ಚಶಬ್ದಗಳಿಂದ ಬೈದು ಕಲ್ಲು ಮತ್ತು ದೊಣ್ಣೆಗಳಿಂದ ಹೊಡೆದು ರಕ್ತಗಾಯಪಡಿಸಿ, ಸರ್ಕಾರಿ ವಾಹನವನ್ನು ಜಖಂಗೊಳಿಸಿ, ಸರ್ಕಾರಿ ಕೆಲಸಕ್ಕೆ ಅಡ್ಡಪಡಿಸಿ ಸಾಯಿಸುವುದಾಗಿ ಬೆದರಿಕೆ ಹಾಕಿರುತ್ತಾರೆ.

 

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು:  ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು:   

-ಸ್ಥಳ ದಂಡ ಮೊತ್ತ:  ರೂ.  

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.