ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೩೧-೦೭-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ೦೧
ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳ್ಳತನಕ್ಕೆ ಸಂಬಂಧಿಸಿಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೭-೦೭-೨೦೦೯ ರಂದು ೧೪೦೦ ರಂದು ೧೪೦೦ ಗಂಟೆ ಸಮಯದಲ್ಲಿ ಯಾರೋ ಕಳ್ಳರು ಕೋಲಾರ ತಾಲೂಕು ಕೋಡಿಕಣ್ಣೂರು ಗ್ರಾಮದ ವಾಸಿ ಎನ್.ವಿಜಯ ಸಾರಥಿ ಎಂಬುವರ ಹೀರೋ ಹೋಂಡಾ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೭-ಎಲ್-೭೦೫೧ನ್ನು ಕೋಲಾರ ನಗರದ ಮುನೇಶ್ವರನಗರದ ಅವರ ಅಕ್ಕನ ಮನೆಯ ಮುಂದೆ ನಿಲ್ಲಿಸಿದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ರೂ. ೩೩,೬೦೦/- ಗಳಾಗಿರುತ್ತದೆ.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ೦೧
ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ನಕಲಿ ಕೈ ಗಡಿಯಾರ ತಯಾರು ಮಾಡಿ ಕಂಪನಿಗೆ ಮೋಸ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೦೭-೨೦೦೯ಕ್ಕೆ ಹಿಂದೆ ಕೋಲಾರ ನಗರದ ರಹಮತ್‌ನಗರದ ಎಸ್.ಆರ್.ಎಸ್.ವಾಚ್ ಅಂಗಡಿಯಲ್ಲಿ ಟೈಟಾನ್ ಕಂಪನಿಯ ಕೈಗಡಿಯಾರಗಳನ್ನು ಅಸಲಿಗೆ ಹೋಲಿಕೆಯಾಗುವಂತೆ ನಕಲಿ ಕೈಗಡಿಯಾರಗಳನ್ನು ತಯಾರು ಮಾಡಿ ಸಾರ್ವಜನಿಕರಿಗೆ ಮಾರಾಟ ಮಾಡಿ ಮೋಸ ಮತ್ತು ಕಂಪನಿಗೆ ನಷ್ಟವನ್ನುಂಟು ಮಾಡಿರುತ್ತಾರೆ. ಈ ಬಗ್ಗೆ ಶ್ರೀ ಲವಕುಮಾರ್, ಇನ್‌ವೆಸ್ಟೀಗೇಷನ್ ಆಫೀಸರ್, ಮೆ. ಇ.ಐ.ಪಿ.ಆರ್(ಇಂಡಿಯಾ) ಲಿ. ಬೆಂಗಳೂರು ರವರು ದೂರನ್ನು ನೀಡಿದ್ದು ರೂ. ೧೫,೦೦೦/- ಬೆಲೆ ಬಾಳುವ ನಕಲಿ ಕೈಗಡಿಯಾರ ಮತ್ತು ಇತರೆ ವಸ್ತುಗಳನ್ನು ಅಮಾನತ್ತು ಪಡಿಸಿರುತ್ತಾರೆ.
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ಇಲ್ಲ
ಇತರೆ: ೦೧
ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ನಕಲಿ ಕ್ರಾಂಪ್ಟನ್ ಗ್ರೇವ್ ಪಾಲಿಸ್ಟರ್ ಬಲಾಸ್ಟ್ ಲಾಂಛನವನ್ನು ಬಳಸಿಕೊಂಡು ಟೂಬ್ ಲೈಟ್‌ನ ಚೌಕ್‌ಗಳನ್ನು ನಕಲಿಯಾಗಿ ತಯಾರು ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೦೭-೨೦೦೯ಕ್ಕೆ ಹಿಂದೆ ಕೋಲಾರ ನಗರದ ಬಂಬೂ ಬಜಾರ್ ನಲ್ಲಿರುವ ಕಿಸಾನ್ ಎಲೆಕ್ಟ್ರಿಕಲ್ಸ್ ಅಂಗಡಿಯಲ್ಲಿ ಕ್ರಾಂಪ್ಟನ್ ಗ್ರೇವ್ ಪಾಲಿಸ್ಟರ್ ಬಲಾಸ್ಟ್ ಅನ್ನು ಅಸಲಿಗೆ ಹೋಲಿಕೆಯಾಗುವಂತೆ ನಕಲಿ ಟೂಬ್ ಲೈಟ್‌ನ ಚೌಕ್‌ಗಳನ್ನು ತಯಾರು ಮಾಡಿ ಕಂಪನಿಗೆ ನಷ್ಟವನ್ನುಂಟು ಮಾಡಿರುತ್ತಾರೆ. ಈ ಬಗ್ಗೆ ಶ್ರೀ ಲವಕುಮಾರ್, ಇನ್‌ವೆಸ್ಟೀಗೇಷನ್ ಆಫೀಸರ್, ಮೆ. ಇ.ಐ.ಪಿ.ಆರ್(ಇಂಡಿಯಾ) ಲಿ. ಬೆಂಗಳೂರು ರವರು ದೂರನ್ನು ನೀಡಿದ್ದು ರೂ. ೩,೩೦೦/- ಬೆಲೆ ಬಾಳುವ ನಕಲಿ ಟೂಬ್ ಲೈಟ್‌ನ ಚೌಕ್‌ಗಳನ್ನು ಅಮಾನತ್ತು ಪಡಿಸಿರುತ್ತಾರೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ೦೧
ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೦೭-೨೦೦೯ ರಂದು ೦೮೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಕೊತ್ತಮಂಗಲ ಗ್ರಾಮದ ವಾಸಿ ಎಂ.ರಾಮಚಂದ್ರಪ್ಪ ಎಂಬುವರ ಮಗಳಾದ ಕುಮಾರಿ ಕೆ.ಆರ್.ಪದ್ಮಶ್ರೀ @ ರಾಧಿಕ ಎಂಬುವರು ಮನೆಯಿಂದ ಮುಳಬಾಗಿಲು ಪಟ್ಟಣಕ್ಕೆ ಡಿ.ಇಡಿ ಕೋಚಿಂಗ್ ತರಬೇತಿಗೆ ಹೋಗಿ ಬರುವುದಾಗಿ ಹೇಳಿ ಬಂದವರು ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ.
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು:
-ಸ್ಥಳ ದಂಡ ಮೊತ್ತ: ರೂ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Posted by kolarpolice
Posted by kolarpolice



