ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೧-೦೮-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ೦೧
ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಎ.ಟಿ.ಎಂ ನಲ್ಲಿ ಹಣ ಕಳ್ಳತನಕ್ಕೆ ಪ್ರಯತ್ನ ಪಟ್ಟಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೧-೦೭-೨೦೦೯ ರಂದು ರಾತ್ರಿ ಮುಳಬಾಗಿಲು ಪಟ್ಟಣದ ಎಂ.ಸಿ.ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ಅಳವಡಿಸಿರುವ ಎಟಿಎಂ ಕೇಂದ್ರದಲ್ಲಿ ಎಟಿಎಂ ಯಂತ್ರವನ್ನು ಹೊಡೆದು ಹಾಕಿ ಹಣ ಕಳ್ಳತನ ಮಾಡಲು ಪ್ರಯತ್ನ ಪಟ್ಟಿರುತ್ತಾರೆ. ಈ ಬಗ್ಗೆ ಬ್ಯಾಂಕಿನ ಮ್ಯಾನೇಜರ್ ಪಿ.ಎಸ್.ಸತ್ಯಮೂರ್ತಿ ಎಂಬುವರು ದೂರನ್ನು ದಾಖಲಿಸಿರುತ್ತಾರೆ,
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೨೮೦೭-೨೦೦೯ ರಂದು ೧೬೩೦ ಗಂಟೆ ಸಮಯದಲ್ಲಿ ಕೋಲಾರ ನಗರದ ಕುರುಬರಪೇಟೆ ವಾಸಿಗಳಾದ ಶ್ರೀಮತಿ ರಮಾ ಮತ್ತು ಅವರ ಮಗ ಭರತ್ ರವರ ತಮ್ಮ ಖಾಲಿ ನಿವೇಶನದ ಬಳಿ ಇದ್ದರು. ಆ ಸಮಯದಲ್ಲಿ ಅದೇ ಪೇಟೆಯ ವಾಸಿಗಳಾದ ಮುನಿಪರಸಯ್ಯ ಮತ್ತು ಅರುಣ್ ಎಂಬುವರು ಖಾಲಿ ನಿವೇಶನದಲ್ಲಿ ಅತಿಕ್ರಮ ಪ್ರವೇಶ ಮಾಡಿ ಅವಾಚ್ಚಶಬ್ದಗಳಿಂದ ಬೈದು ಕೈಗಳಿಂದ ಮುಖದ ಮೇಲೆ ಗುದ್ದಿ ರಕ್ತಗಾಯಪಡಿಸಿ ಪ್ರಾಣ ತೆಗೆಯುವುದಾಗಿ ಬೆದರಿಕೆ ಹಾಕಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಆಸ್ವಾಭಾವಿಕ ಸಾವಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೦೭-೨೦೦೯ ರಂದು ರಾತ್ರಿ ವೈ.ಜಯರಾಜು, ಚಾಲಕ, ಕೆಎಸ್‌ಆರ್‌ಟಿಸಿ, ಶ್ರೀನಿವಾಸಪುರ ಘಟಕ ರವರು ವಿಶ್ರಾಂತಿಗೆಂದು ಬಸ್ಸಿನಲ್ಲಿ ಮಲಗಿದ್ದವರು ಮೃತಪಟ್ಟಿರುತ್ತಾರೆ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ೨೨
-ಸ್ಥಳ ದಂಡ ಮೊತ್ತ: ರೂ. ೩,೨೦೦/-
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Posted by kolarpolice



