ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೩-೦೮-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ೦೧
ಮಾಲೂರು ಪೊಲೀಸ್ ಠಾಣೆಯಲ್ಲಿ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೨೨-೦೮-೨೦೦೯ ರಂದು ೨೦೧೫ ಗಂಟೆ ಸಮಯದಲ್ಲಿ ಮಾಲೂರು ಪಟ್ಟಣದ ಮಾರುತಿ ಬಡಾವಣೆ ವಾಸಿ ಸುಗುಣಮ್ಮ ಎಂಬುವರು ಪಟ್ಟಣದ ಪೊಲೀಸ್ ಆಚಾರಿ ರವರ ಮನೆಯ ಮುಂದೆ ನಡೆದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ ಬಂದ ಇಬ್ಬರು ಅಪರಿಚಿತ ವ್ಯೆಕ್ತಿಗಳು ಸುಗುಣಮ್ಮ ರವರ ಕತ್ತಿನಲ್ಲಿದ್ದ ರೂ. ೧,೪೦,೦೦೦/- ಬೆಲೆ ಬಾಳುವ ೧೦೦ ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುತ್ತಾರೆ,
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ
ರಸ್ತೆ ಅಪಘಾತಗಳು: ೦೧
-ಮಾರಣಾಂತಿಕ: ಇಲ್ಲ
-ಸಾಧಾರಣ: ೦೧
ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೮-೨೦೦೯ ರಂದು ೧೯೩೦ ಗಂಟೆ ಸಮಯದಲ್ಲಿ ಕೋಲಾರ ನಗರದ ವಾಸಿ ರಿಯಾಜ್ ಎಂಬುವರು ತನ್ನ ಬಜಾಜ್ ಸ್ಕೂಟರ್‌ನಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಬಂದ ಕೆಎಸ್‌ಆರ್‌ಟಿಸಿ ಬಸ್ ಸಂಖ್ಯೆ ಕೆಎ-೦೭-ಎಫ್-೧೩೨೭ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ರಿಯಾಜ್ ರವರಿಗೆ ಗಾಯಗಳಾಗಿರುತ್ತದೆ..
ಮೋಸ / ವಂಚನೆ ಪ್ರಕರಣಗಳು: ೦೧
ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಹಣ ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೧೮-೦೯-೨೦೦೮ ಮತ್ತು ೨೬-೦೯-೨೦೦೮ ರ ಮಧ್ಯೆ ೧. ಎಂ.ವೆಂಕಟೇಶಪ್ಪ, ಸಹಕಾರ ಸಂಘದ ಕಾರ್ಯದರ್ಶಿ. ೨. ಎಂ.ಶ್ರೀನಿವಾಸಪ್ಪ, ಮಾಜಿ ಅಧ್ಯಕ್ಷರು, ೩. ಹುಸೇನ್ ಸಾಬ್ ದೊಡ್ಡಮುನಿ, ಶಾಖಾ ವ್ಯವಸ್ಥಾಪಕರು, ಡಿ.ಸಿ.ಸಿ.ಬ್ಯಾಂಕ್, ೪. ಕೆ.ಎಂ.ಜಗದೀಶ್, ಮಾಜಿ ಕಾರ್ಯಾದರ್ಶಿ ಎಂಬುವರು ಕೆ.ಎಸ್.ಎಸ್.ಸಿ.ಎಫ್.ಸಿ.ಬ್ಯಾಂಕ್ ನಿಂದ ಯಶಸ್ವಿನಿ ಬಾಬ್ತು ರೂ. ೨,೮೯,೦೦೦/- ಗಳನ್ನು ದುರುಪಯೋಗ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಜಿ.ಪ್ರಕಾಶ್, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಕೋಲಾರ ವಿಭಾಗ ರವರು ದೂರನ್ನು ದಾಖಲಿಸಿರುತ್ತಾರೆ.
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೩
ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೧೮-೦೮-೨೦೦೯ ರಂದು ೧೧೦೦ ಗಂಟೆ ಸಮಯದಲ್ಲಿ ಮುಳಬಾಗಿಲು ಪಟ್ಟಣದ ಪಳ್ಳಿಗರಪಾಳ್ಯ ವಾಸಿ ವಿವೇಕಾನಂದ ಮತ್ತು ಅವರ ಪತ್ನಿಯ ಮೇಲೆ ಜಗಳ ತೆಗೆದ ಕುರುಬರಪಾಳ್ಯ ವಾಸಿ ಶಂಕರ್ ಎಂಬುವರು ಜಗಳ ತೆಗೆದು ಅವಾಚ್ಚಶಬ್ದಗಳಿಂದ ಬೈದು ದೊಣ್ಣೆಯಿಂದ ಹೊಡೆದು ಗಾಯಪಡಿಸಿರುತ್ತಾರೆ.
ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೨೨-೦೮-೨೦೦೯ ರಂದು ೧೩೩೦ ಗಂಟೆ ಸಮಯದಲ್ಲಿ ಕೋಲಾರ ಪಟ್ಟಣದ ಟಮಕ ವಾಸಿ ವೆಂಕಟೇಶಪ್ಪ ಎಂಬುವರ ನಿವೇಶನದಲ್ಲಿ ಗೋವಿಂದಪ್ಪ, ಪ್ರಮೀಳಮ್ಮ ಮತ್ತು ವೆಂಕಟರಾಮ ಎಂಬುವರು ಕಲ್ಲು ಚಪ್ಪಡಿಗಳನ್ನು ಹಾಕುತ್ತಿದ್ದರು. ಇದನ್ನು ಪ್ರಶ್ನಿಸಿದ ವೆಂಕಟೇಶಪ್ಪ ರವರಿಗೆ ಅವಾಚ್ಚಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ಗಾಯಪಡಿಸಿರುತ್ತಾರೆ.
ನಂಗಲಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೨೧-೦೮-೨೦೦೯ ರಂದು ೧೭೩೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಹೆಬ್ಬಣಿ ಗ್ರಾಮದ ವಾಸಿ ಕೆ.ಎನ್.ಶ್ರೀರಾಮಪ್ಪ ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ ಶಂಕರಪ್ಪ ಮತ್ತು ಇತರೆ ೩ ಜನರು ಮಳೆಯ ನೀರು ಮೊಲ್ಡ್ ಮೇಲೆ ಬಿಟ್ಟ ವಿಚಾರದಲ್ಲಿ ಜಗಳ ತೆಗೆದು ಅವಾಚ್ಚಶಬ್ದಗಳಿಂದ ಬೈದು ದೊಣ್ಣೆಯಿಂದ ಹೊಡೆದು ಗಾಯಪಡಿಸಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
ನಂಗಲಿ ಪೊಲೀಸ್ ಠಾಣೆಯಲ್ಲಿ ವಿಧ್ಯುತ್ ತಂತಿ ಸ್ಪರ್ಶದಿಂದ ಸಾವಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೨೨-೦೮-೨೦೦೯ ರಂದು ಬೆಳಿಗ್ಗೆ ಮುಳಬಾಗಿಲು ತಾಲೂಕು ಕೆ.ಬಿ.ಕೊತ್ತೂರು ಗ್ರಾಮದ ವಾಸಿ ರಾಮಚಂದ್ರಪ್ಪ ರವರಿಗೆ ಅವರ ತೋಟದಲ್ಲಿ ವಿಧ್ಯುತ್ ತಂತಿ ಸ್ಪರ್ಶವಾದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.
ವ್ಯಕ್ತಿ ಕಾಣೆ ಪ್ರಕರಣಗಳು: ೦೧
ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೨೦-೦೮-೨೦೦೯ ರಂದು ಶ್ರೀನಿವಾಸಪುರ ತಾಲೂಕು ವೆಂಕಟೇಶನಗರ ಗ್ರಾಮದ ವಾಸಿ ಆರ್.ಗೋಪಾಲಕೃಷ್ಣ ಎಂಬುವರ ಮಗಳಾದ ಸುಮಾ ಎಂಬುವರು ಶಾಲೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ.
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು : ೦೯
-ಸ್ಥಳ ದಂಡ ಮೊತ್ತ : ರೂ. ೯೦೦
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.