ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೧-೧೦-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ೦೨
ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಕೋಲಾರ ನಗರದ ವೀರಾಂಜನೇಯ ನಗರದಲ್ಲಿ ದಿನಾಂಕ: ೩೦-೦೯-೨೦೦೯ ರಂದು ೧೧೦೦ ಗಂಟೆಯಿಂದ ೧೨೦೦ ಗಂಟೆ ಸಮಯದಲ್ಲಿ ಸಂಭವಿಸಿರುತ್ತದೆ. ವೀರಾಂಜನೇಯ ನಗರದ ವಾಸಿಯಾದ ಅಂಬರೀಶ್ ಎಂಬುವರು ಈಗ್ಗೆ ೧೦ ವರ್ಷಗಳ ಹಿಂದೆ ಮುಳಬಾಗಿಲು ತಾಲ್ಲೂಕು ದುಗ್ಗಸಂದ್ರ ಗ್ರಾಮದ ವಾಸಿಯಾದ ರಾಮಯ್ಯ ಎಂಬುವರ ಮಗಳಾದ ಶಾರದಮ್ಮ ಎಂಬುವರನ್ನು ಮದುವೆ ಮಾಡಿಕೊಂಡಿರುತ್ತಾರೆ. ನಂತರ ಈಗ್ಗೆ ೮ ವರ್ಷಗಳ ಹಿಂದೆ ಶಾರದಮ್ಮ ರವರ ಅಕ್ಕ ಪ್ರಮೀಳಮ್ಮ ಎಂಬುವರನ್ನು ಎರಡನೇ ಮದುವೆ (ಅಕೆಯ ಗಂಡ ತೀರಿಕೊಂಡಿದ್ದ ಕಾರಣ) ಮಾಡಿಕೊಂಡು ಒಟ್ಟಿಗೆ ಜೀವನ ಸಾಗಿಸುತ್ತಿರುತ್ತಾರೆ. ಈಗಿರುವಾಗ ೬ ತಿಂಗಳ ಹಿಂದೆ ಅಕ್ಕ ತಂಗಿಯರ ನಡುವೆ ಮನಸ್ಥಾಪಗಳುಂಟಾಗಿ ಬೇರೆ ಬೇರೆ ಮನೆಗಳಲ್ಲಿ ವಾಸವಾಗಿರುತ್ತಾರೆ. ದಿನಾಂಕ ೨೦-೦೯-೨೦೦೯ ರಂದು ಅಂಬರೀಶ್ ತನ್ನ ಪತ್ನಿ ಶಾರದಮ್ಮ ರವರೊಂದಿಗೆ ಸಂಸಾರದ ವಿಚಾರದಲ್ಲಿ ಜಗಳ ಮಾಡಿಕೊಂಡು ಅಕೆಯ ಕತ್ತನ್ನು ಹಿಸುಕಿ ಕೊಲೆ ಮಾಡಿರುತ್ತಾನೆ.
ಮಾಸ್ತಿ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೧-೧೦-೨೦೦೯ ಕ್ಕೆ ಹಿಂದೆ ಯಾರೋ ದುರಾತ್ಮರು ಸುಮಾರು ೨೫ ವರ್ಷ ವಯಸ್ಸಿನ ಹೆಂಗಸನ್ನು ಮಾಲೂರು ತಾಲ್ಲೂಕು ಕೊಂಡಶೆಟ್ಟಿಹಳ್ಳಿ ಗ್ರಾಮದ ಸಲೀಂ ಎಂಬುವರ ನೀಲಿಗಿರಿ ತೋಪಿನಲ್ಲಿ ಯಾವುದೋ ಉದ್ದೇಶದಿಂದ ಕೊಲೆ ಮಾಡಿ ಶವವನ್ನು ನೀಲಿಗಿರಿ ಸೊಪ್ಪಿನಿಂದ ಸುಟ್ಟು ಹಾಕಿರುತ್ತಾರೆ. ಈ ಬಗ್ಗೆ ತೋಟದ ಮಾಲೀಕರಾದ ಸಲೀಂ ರವರು ದೂರು ದಾಖಲು ಮಾಡಿರುತ್ತಾರೆ.
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ೦೧
ಮಾಸ್ತಿ ಪೊಲೀಸ್ ಠಾಣೆಯಲ್ಲಿ ವಿವಿಧ ಶಾಲೆಗಳಲ್ಲಿ ಗ್ಯಾಸ್ ಸಿಲಿಂಡರ್ ಕಳ್ಳತನಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೯-೨೦೦೯ ರಂದು ರಾತ್ರಿ ಯಾರೋ ಕಳ್ಳರು ಮಾಲೂರು ತಾಲ್ಲೂಕು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಾದ ಚಿನಪಗಾನಹಳ್ಳಿ, ನಕ್ಕನಹಳ್ಳಿ, ಲಕ್ಷ್ಮೀಸಾಗರ, ಆಗಲಕೋಟೆ, ಬಲ್ಲೇರಿ ಮತ್ತು ಅನಿಗಾನಹಳ್ಳಿ ಕರಡಗುರ್ಕಿ ಮತ್ತು ಪದವಿ ಪೂರ್ವ ಕಾಲೇಜು ಟೇಕಲ್ ಶಾಲೆಗಳ ಬೀಗಗಳನ್ನು ಹೊಡೆದು ಒಳಗೆ ಪ್ರವೇಶ ಮಾಡಿ ಒಟ್ಟು ೨೦ ಸಾವಿರ ರೂ ಬೆಲೆ ಬಾಳುವ ೨೦ ಗ್ಯಾಸ್ ಸಿಲಿಂಡರ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ವೆಂಕಟರಾಮರೆಡ್ಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಲೂರು ರವರು ದೂರನ್ನು ದಾಖಲಿಸಿರುತ್ತಾರೆ.
ಸಾಧಾರಣ ಕಳ್ಳತನ: ೦೧
ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಟೆಲಿಪೋನ್ ಕೇಬಲ್ ವೈರ್ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೦೯-೨೦೦೯ ರಂದು ಯಾರೋ ಕಳ್ಳರು ಬೆಸ್ಕಾಂ ಇಲಾಖೆಗೆ ಸಂಬಂದಿಸಿದ ಕೋಡಿಕಣ್ಣೂರು ಕೆರೆಯ ಬಳಿ ಅಳವಡಿಸಿದ್ದ ೧೬ ಮೀಟರ್ ಕೇಬಲ್ ವೈರನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಮಾಲಿನ ದರ ೫೦೦೦/- ರೂಗಳಾಗಿರುತ್ತದೆ. ಈ ಬಗ್ಗೆ ರಹಮತ್ತುಲ್ಲಾ ಷರೀಪ್, ಟೆಲಿಪೋನ್ ಮೆಕ್ಯಾನಿಕ್ ರಹಮತ್ ನಗರ ಎಕ್ಸಚೇಂಚ್ ಕೋಲಾರ ರವರು ದೂರನ್ನು ದಾಖಲು ಮಾಡಿರುತ್ತಾರೆ.
ವಾಹನ ಕಳ್ಳತನ : ೦೧
ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೯-೨೦೦೯ ರಂದು ರಾತ್ರಿ ೨೩೩೦ ಗಂಟೆ ಸಮಯದಲ್ಲಿ ಕೋಲಾರ ನಗರದ ಎಂ.ಬಿ.ರಸ್ತೆಯ ವಾಸಿ ಎಂ.ಈಶ್ವರ ರೆಡ್ಡಿ ಎಂಬುವರು ತನ್ನ ಹೀರೋ ಹೋಂಡಾ ಸ್ಪ್ಲಂಡರ್ ಪ್ಲಸ್ ದ್ವಿಚಕ್ರ ವಾಹನ ಸಂ. ಎಪಿ-೦೪-ಎನ್-೫೭೭೬ ಅನ್ನು ತಮ್ಮ ಕಾಂಪೌಡಿನಲ್ಲಿ ನಿಲ್ಲಿಸಿದ್ದರು. ಅ ಸಮಯದಲ್ಲಿ ಯಾರೋ ಕಳ್ಳರು ಅ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ವಾಹನದ ಬೆಲೆ ತಿಳಿಯಬೇಕಾಗಿರುತ್ತದೆ.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೧
ವೇಮಗಲ್ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಸಾವಿಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ದಿನಾಂಕ ೨೯-೦೯-೨೦೦೯ ರಂದು ಕೋಲಾರ ತಾಲ್ಲೂಕು ಲಕ್ಷ್ಮೀಸಾಗರ ಗ್ರಾಮದ ಬಳಿ ಇರುವ ಶ್ರೀ ಲಕ್ಷ್ಮೀ ನರಸಿಂಹ ಜಲ್ಲಿ ಕ್ರಷರ್ ನಲ್ಲಿ ಸಂಭವಿಸಿರುತ್ತದೆ. ಈಗ್ಗೆ ೩ ತಿಂಗಳ ಹಿಂದೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಕೊನನಕಲ್ಲು ಗ್ರಾಮದ ವಾಸಿಯಾದ ನೀಲಕಂಠರಾವ್ ಎಂಬುವರ ಮಗಳಾದ ವರಲಕ್ಷ್ಮೀಬಾಯಿ ಮತ್ತು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹಂದೇನಹಳ್ಳಿ ಗ್ರಾಮದ ವಾಸಿ ಕೃಷ್ಣಪ್ಪ ಎಂಬುವರು ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಿ ಮದುವೆ ಮಾಡಿಕೊಂಡಿರುತ್ತಾರೆ. ಗಂಡ ಕೃಷ್ಣಪ್ಪ ಪ್ರತಿ ದಿನ ಕುಡಿದು ಬಂದು ತವರು ಮನೆಯಿಂದ ಒಂದು ಲಕ್ಷ ರೂ. ಗಳನ್ನು ತರುವಂತೆ ಹಿಂಸೆ ಮಾಡುತ್ತಿದ್ದು ದಿನಾಂಕ ೨೯-೦೯-೨೦೦೯ ರಂದು ರಾತ್ರಿ ಕೃಷ್ಣಪ್ಪ ಅಕೆಗೆ ಸೀಮೆಎಣ್ಣೆ ಹಾಕಿ ಬೆಂಕಿ ಹಚ್ಚಿದ್ದರಿಂದ ತೀವ್ರವಾದ ಸುಟ್ಟುಗಾಯಗಳಾಗಿ ಚಿಕಿತ್ಸೆಗಾಗಿ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಯಾಗದೆ ಮೃತಪಟ್ಟಿರುತ್ತಾರೆ.
ರಸ್ತೆ ಅಪಘಾತಗಳು: ೦೩
-ಮಾರಣಾಂತಿಕ: ೦೧
ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೦೯-೨೦೦೯ ರಂದು ೧೯೩೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಕಾಮಸಾನಹಳ್ಳಿ ಗ್ರಾಮದ ವಾಸಿ ವೆಂಕಟೇಶ್ ಮತ್ತು ಗುರ್‍ರಪ್ಪ ಎಂಬುವರು ದ್ವಿಚಕ್ರವಾಹನ ಸಂಖ್ಯೆ ಕೆಎ-೦೫-ಎಲ್-೩೧೧೦ ರಲ್ಲಿ ಎನ್.ಹೆಚ್ ೪ ರ ಆರ್.ಟಿ.ಒ ಚೆಕ್‌ಪೋಸ್ಟ್ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಹಿಂದುಗಡೆಯಿಂದ ಬಂದ ನೋಂದಣಿ ಸಂಖ್ಯೆ ಇಲ್ಲದ ಟ್ರಾಕ್ಟರ್ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ವೆಂಕಟೇಶ್ ರವರ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ದ್ವಿಚಕ್ರವಾಹನ ಸವಾರರಾದ ವೆಂಕಟೇಶ್ ಮತ್ತು ಗುರ್‍ರಪ್ಪ ರವರಿಗೆ ಗಾಯಗಳಾಗಿದ್ದು ಈ ಸಂಬಂಧ ಚಿಕಿತ್ಸೆಗಾಗಿ ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಇವರ ಪೈಕಿ ಗುರ್‍ರಪ್ಪ ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.
-ಸಾಧಾರಣ: ೦೩
ನಂಗಲಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೯-೨೦೦೯ ರಂದು ೧೪೩೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಎಂ.ವೆಂಕಟಾಪುರ ಗ್ರಾಮದ ವಾಸಿ ಚಿನ್ನಮ್ಮ ಎಂಬುವರು ತಮ್ಮ ಗ್ರಾಮದಿಂದ ಎನ್.ವಡ್ಡಹಳ್ಳಿಗೆ ಹೋಗುವ ಸಲುವಾಗಿ ಎನ್.ಹೆಚ್ ೪ ರಸ್ತೆಯ ಮಾರ್ಗವಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ ನಂಗಲಿ ಕಡೆಯಿಂದ ಬಂದ ಕೆಎ-೩೩-ಎಂ-೫೧೦ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಚಿನ್ನಮ್ಮ ರವರಿಗೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಚಿನ್ನಮ್ಮ ರವರಿಗೆ ಗಾಯಗಳುಂಟಾಗಿರುತ್ತದೆ.
ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೬-೦೯-೨೦೦೯ ರಂದು ೧೪೩೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಎಂ.ವೆಂಕಟಾಪುರ ಗ್ರಾಮದ ವಾಸಿ ಚಿನ್ನಮ್ಮ ಎಂಬುವರು ತಮ್ಮ ಗ್ರಾಮದಿಂದ ಎನ್.ವಡ್ಡಹಳ್ಳಿಗೆ ಹೋಗುವ ಸಲುವಾಗಿ ಎನ್.ಹೆಚ್ ೪ ರಸ್ತೆಯ ಮಾರ್ಗವಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ ನಂಗಲಿ ಕಡೆಯಿಂದ ಬಂದ ಕೆಎ-೩೩-ಎಂ-೫೧೦ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಚಿನ್ನಮ್ಮ ರವರಿಗೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಚಿನ್ನಮ್ಮ ರವರಿಗೆ ಗಾಯಗಳುಂಟಾಗಿರುತ್ತದೆ.
ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೮-೦೯-೨೦೦೯ ರಂದು ೧೧೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಹಿರಣ್ಯಗೌಡನಹಳ್ಳಿ ಗ್ರಾಮದ ವಾಸಿ ಮುನಿವೆಂಕಟಪ್ಪ ಎಂಬುವರು ಮುಳಬಾಗಿಲು ಟೌನ್ ಕ.ಇ.ಬಿ ಕಛೇರು ಮುಂಬಾಗ ನಡೆದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ ಹಿಂಭಾಗದಿಂದ ಬಂದ ಟಾಟಾ ಸುಮೋ ಸಂಖ್ಯೆ ಎಪಿ-೦೩-ಟಿವಿ-೫೭೮೬ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮುನಿವೆಂಕಟಪ್ಪ ರವರಿಗೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಮುನಿವೆಂಕಟಪ್ಪ ರವರಿಗೆ ಗಾಯಗಳುಂಟಾಗಿರುತ್ತದೆ.
ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೯-೦೯-೨೦೦೯ ರಂದು ೧೨೦೦ ಗಂಟೆ ಸಮಯದಲ್ಲಿ ತಮಿಳುನಾಡಿನ ರಾಜು ಮತ್ತು ರಾಜೇಂದ್ರ ಎಂಬುವರು ತಮ್ಮ ದ್ವಿಚಕ್ರವಾಹನ ಹೀರೋಹೋಂಡ ಸಂಖ್ಯೆ ಟಿಎನ್-೨೯-ಎಜಡ್-೫೧೫೨ ರಲ್ಲಿ ಮುಳಬಾಗಿಲು ತಾಲೂಕು ಕೊಂಡೇನಹಳ್ಳಿ ಕೆರೆಯ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಹೀರೋಹೋಂಡಾ ಸ್ಪ್ಲೆಂಡರ್ ಸಂಖ್ಯೆ ಕೆಎ-೦೭-ಕ್ಯೂ-೭೪೯೨ರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಹಿಂಬದಿಯಲ್ಲಿದ್ದ ರಾಜೇಂದ್ರ ರವರಿಗೆ ಗಾಯಗಳುಂಟಾಗಿರುತ್ತದೆ.
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ: ೦೧
ಮಾಸ್ತಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೦೯-೨೦೦೯ ರಂದು ೧೧೩೦ ಗಂಟೆ ಸಮಯದಲ್ಲಿ ಮಾಲೂರು ತಾಲ್ಲೂಕು ಬೆಟ್ಟಹಳ್ಳಿ ಗ್ರಾಮದ ವಾಸಿ ನಾರಾಯಣಸ್ವಾಮಿ ಮತ್ತು ಅವರ ಮನೆಯವರು ತಮ್ಮ ತೋಟದಲ್ಲಿ ಟಮಾಟೋ ಬಿಡುಸುತ್ತಿದ್ದರು. ಅ ಸಮಯದಲ್ಲಿ ಅದೆ ಗ್ರಾಮದ ವಾಸಿಗಳಾದ ಸುರೇಶ್ ಮತ್ತು ಇತರೆ ೩ ಜನರು ಜಗಳ ಮಾಡುವ ಉದ್ದೇಶದಿಂದ ನಾರಾಯಣಸ್ವಾಮಿ ಮತ್ತು ಅವರ ಮಗನಿಗೆ ಗಡಾರಿ ಮತ್ತು ಚನಿಕೆಯಿಂದ ಹೊಡೆದು ಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು :
-ಸ್ಥಳ ದಂಡ ಮೊತ್ತ : ರೂ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Posted by kolarpolice
Posted by kolarpolice
Posted by kolarpolice



