ಕಳವು ಪ್ರಕರಣ ಬಯಲಿಗೆ: ರೂ. ೨ ಲಕ್ಷ ಬೆಲೆಯ ಆಭರಣಗಳು ವಶ, ಒಬ್ಬನ ಬಂಧನ

Theft k(rul)

ಬಂಧಿತ ಆರೋಪಿ: ಪ್ರವೀಣ್ ಕುಮಾರ್‍

ದಿನಾಂಕ ೨೭-೧೦-೨೦೦೯ ರಂದು ಮದ್ಯಾಹ್ನ ಕೋಲಾರ ತಾಲೂಕು ಬಟ್ರಹಳ್ಳಿ ಗ್ರಾಮದ ವಾಸಿ ಆರ್‍.ಮುನೇಗೌಡ ಎಂಬುವರ ವಾಸದ ಮನೆಗೆ ನುಗ್ಗಿದ್ದ ಯರೋ ಕಳ್ಳರು ೨ ಲಕ್ಷ ರೂ ಬೆಲೆ ಬಾಳುವ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಕೋಲಾರ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶ್ರೀ ಎ.ಧನಂಜಯ ಹಾಗೂ ಅಪರಾಧ ಪತ್ತೆ ದಳದ ಸಿಬ್ಬಂದಿಯವರಾದ ಎ.ಎಸ್.ಐ ವೆಂಕಟೇಶ್, ಪಿ.ಸಿ ೩೧೦ ಎ.ರಮೇಶ್, ಪಿ.ಸಿ ೬೮೭ ಮುನಿವೆಂಕಟಸ್ವಾಮಿ, ಪಿ.ಸಿ ೩೭೮ ರಮೇಶ್ ಬಾಬು ಮತ್ತು ಪಿ.ಸಿ ೧೩೬ ಖಾಸಿಂ ಎಂಬುವರನ್ನೊಳಗೊಂಡ ತಂಡ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಕೋಲಾರ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ಕೆ.ಪಿ.ಪುಟ್ಟಸ್ವಾಮಿ, ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರಿ. ಫಣೀಂದ್ರಸಿಂಗ್ ರವರ ಮಾರ್ಗದರ್ಶನದಲ್ಲಿ ತನಿಖೆಯನ್ನು ಮುಂದುವರಿಸಿದ ಮೇಲ್ಕಂಡ ತಂಡ ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿ ಕೆ.ಎನ್.ಪ್ರವೀಣ್ ಕುಮಾರ್‍ (೧೬) ತಂದೆ ನಾರಾಯಣಪ್ಪ ವಾಸ: ಕಳ್ಳಕುಪ್ಪ ಗ್ರಾಮ, ಬಂಗಾರಪೇಟೆ ತಾಲೂಕು ಎಂಬುವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತದೆ.  ಬಂಧಿತನು ನೀಡಿದ ಮಾಹಿತಿ ಮೇರೆಗೆ ಕಳುವಾದ ರೂ. ೨ ಲಕ್ಷ ಬೆಲೆಯ ಈ ಕೆಳಕಂಡ ಆಭರಣಗಳನ್ನು ವಶಪಡಿಸಿಕೊಳ್ಳಾಗಿರುತ್ತದೆ.

೧. ಒಂದು ಚಿನ್ನದ ಸರ

೨. ಲಕ್ಷ್ಮಿ ಡಾಲರ್‍ ಇರುವ ಮತ್ತೊಂದು ಚಿನ್ನದ ಸರ

೩. ಒಂದು ಕೈ ಚೈನ್

೪. ಒಂದು ಸಾದಾ ನೆಕ್ಲೆಸ್

೫. ೩ ಎಳೆ ಚಿನ್ನದ ಸರ

೬. ಒಂದು ಜೊತೆ ಬಳೆ

೭. ಹ್ಯಾಂಗಿಗ್ಸ್ ಓಲೆ ಒಂದು ಜೊತೆ

೮. ಒಂದು ಜೊತೆ ಕಿವಿ ಮಾಟಿಗಳು

೯. ಎರಡು ವೆಂಕಿ ಉಂಗುರಗಳು

೧೦. ೩ ಉಂಗುರಗಳು

೧೧. ಒಂದು ಸಾಧಾ ಉಂಗುರ.

ಬಂಧಿತ ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು. ಪ್ರಸ್ತುತ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿರುತ್ತದೆ.

Leave a Reply