ದಿನದ ಅಪರಾಧಗಳ ಪಕ್ಷಿನೋಟ ೪ ನೇ ನವಂಬರ್ ೨೦೦೯

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೦೩-೧೧-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಸುಮಾರು ೨೫-೩೦ ವರ್ಷ ವಯಸ್ಸಿನ ಅಪರಿಚಿತ ಗಂಡಸು ಕೊಲೆಗೀಡಾಗಿದ್ದು ಕೋಲಾರ ತಾಲೂಕು ಸೂಲೂರು ಗ್ರಾಮದ ಗೇಟ್ ಬಳಿ ಶವ ದೊರೆತಿರುತ್ತದೆ. ಮೃತ ವ್ಯಕ್ತಿಯ ಕೈ ಮತ್ತು ಕಾಲುಗಳನ್ನು ವಿದ್ಯುತ್ ವೈರ್‍‌ನಿಂದ ಕಟ್ಟಿಹಾಕಲಾಗಿದ್ದು ಶವವನ್ನು ಕಂಡ ಪೆಮ್ಮಶೆಟ್ಟಿಹಳ್ಳಿ ಗ್ರಾಮದ ವಾಸಿ ಪಿ.ದೇವರಾಜ ಎಂಬುವರು ನೀಡಿದ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ. ಕೊಲೆಯಾದ ವ್ಯಕ್ತಿಯ ವಿವರ ಮತ್ತು ಕೊಲೆಗೆ ಕಾರಣವನ್ನು ತಿಳಿಯಬೇಕಾಗಿರುತ್ತದೆ.

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗ್ಯಾಸ್ ಸಿಲಿಂಡರ್‍ ಕಳುವಾದ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ವಡಗೆರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಕಳವು ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೩೧-೧೦-೨೦೦೯ ರಂದು ರಾತ್ರಿ ಶಾಲೆಯ ಬಾಗಿಲ ಬೀಗವನ್ನು ಮುರಿದು ಒಳ ಪ್ರವೇಶಿಸಿದ ಯಾರೋ ಕಳ್ಳರು ಶಾಲೆಯಲ್ಲಿದ್ದ ರೂ. ೧,೩೦೦/ ಬೆಲೆ ಬಾಳುವ ಎರಡು ಗ್ರಾಸ್ ಸಿಲಿಂಡರುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕರಾದ ಜಯಲಲಿತ ಎಂಬುವರು ದೂರು ನೀಡಿದ್ದು ಪ್ರಕರಣ ದಾಖಲಾಗಿರುತ್ತದೆ.

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ : ೦೧

ನಂಗಲಿ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೩-೧೧-೨೦೦೯ ರಂದು ೧೫೦೦ ಗಂಟೆ ಸಮಯದಲ್ಲಿ ಬೆಂಗಳೂರು ನಗರದ ವಾಸಿಗಳಾದ ಮಧುನಸೂಧನ್ ಮತ್ತು ಕಿರಣ್ ಎಂಬುವರು ಸಂಖ್ಯೆ ಕೆಎ-೦೪-ಸಿ-೧೭೮೭ ಟಾಟಾ ಇಂಡಿಕಾ ಕಾರಿನಲ್ಲಿ ಬೆಂಗಳೂರಿಗೆ ಹೋಗುವ ಸಲುವಾಗಿ ಮುಳಬಾಗಿಲು-ಪುಂಗನೂರು ರಸ್ತೆಯ ಶ್ರೀನಿವಾಸ ನಗರ ಗೇಟ್ ಸಮೀಪ ಹೋಗುತ್ತಿದ್ದರು. ಆ ಸಮಯದಲ್ಲಿ ವಡ್ಡಹಳ್ಳಿ ಕಡೆಯಿಂದ ಬಂದ ಕೆಎ-೦೧-ಎ-೧೧೪೧ ಸಂಖ್ಯೆಯ ಲಾರಿ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕಾರಿಗೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಕಾರು ಜಖಂಗೊಂಡು ಕಾರಿನಲ್ಲಿದ್ದವರಿಗೆ ಗಾಯಗಳುಂಟಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

ವೇಮಗಲ್ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ನರಸಾಪುರ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೦೧-೧೧-೨೦೦೯ ರಂದು ೨೦೦೦ ಗಂಟೆ ಸಮಯದಲ್ಲಿ ನಾರಸಾಪುರ ಗ್ರಾಮದ ವಾಸಿ ಗಂಗಾಧರ ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ ಮುನಿರಾಜ, ಮುನಿಯಪ್ಪ, ಪದ್ಮ ಮತ್ತು ಚಿಕ್ಕ ಮುನಿಯಮ್ಮ ಎಂಬುವರು ಅಕ್ರಮಗುಂಪು ಕಟ್ಟಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿ ಗಾಯಪಡಿಸಿರುತ್ತಾರೆ. ಈ ಬಗ್ಗೆ ಎರಡೂ ಗುಂಪಿನವರು ಹೊಡೆದಾಡಿಕೊಂಡಿದ್ದು ದೂರು ಮತ್ತು ಪ್ರತಿದೂರು ಬಂದ ಹಿನ್ನೆಲೆಯಲ್ಲಿ ಕೇಸು ಮತ್ತು ಪ್ರತಿಕೇಸಿನ ಅಡಿಯಲ್ಲಿ ಹಲ್ಲೆಗೆ ಸಂಬಂದಿಸಿದಂತೆ ಸಹಾ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು :

-ಸ್ಥಳ ದಂಡ ಮೊತ್ತ : ರೂ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply