ದಿನದ ಅಪರಾಧಗಳ ಪಕ್ಷಿನೋಟ ೫ ನೇ ನವಂಬರ್ ೨೦೦೯

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೦೫-೧೧-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಕೂಟೇರಿ ಗ್ರಾಮದ ವಾಸಿ ವೆಂಕಟೇಶಪ್ಪ ಎಂಬುವರ ಮನೆಯಲ್ಲಿ ಕಳವು ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೩೧-೦೭-೨೦೦೯ ರಂದು ೧೯೦೦ ಗಂಟೆ ಸಮಯದಲ್ಲಿ ವೆಂಕಟೇಶಪ್ಪ ರವರ ಹೆಂಡತಿ ಲಕ್ಷ್ಮಿ ಪೂಜೆ ಮಾಡುವ ಸಲುವಾಗಿ ತನ್ನ ಓಲೆ ಜುಮುಕಿ ಇನ್ನಿತರ ಆಭರಣಗಳನ್ನು ದೇವರ ಫೋಟೋ ಮುಂದೆ ಇಟ್ಟಿದ್ದರು. ಆ ಸಮಯದಲ್ಲಿ ಯಾರೋ ಕಳ್ಳರು ಈ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ವೆಂಕಟೇಶಪ್ಪ ರವರು ದೂರು ನೀಡಿದ್ದು ತನ್ನ ಗ್ರಾಮದ ವಾಸಿ ನಾಗೇಶ್ (೧೯) ಎಂಬುವನ ಮೇಲೆ ಅನುಮಾನವಿರುವುದಾಗಿ ತಿಳಿಸಿರುತ್ತಾರೆ. ಕಳುವಾದ ಆಭರಣಗಳ ಬೆಲೆ ರೂ. ೭,೦೦೦/ ಆಗಿರುತ್ತದೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ೦೧

ಮಾಲೂರು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆಗೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ ೨೯-೦೯-೦೯ ರಂದು ರಾತ್ರಿ  ಮಾಲೂರು ತಾಲ್ಲೂಕು ಕುಡಿಯನೂರು ಗ್ರಾಮದ ವಾಸಿಯಾದ ವೆಂಕಟೇಶಪ್ಪ ಎಂಬುವರು ತಮ್ಮ ಟಿ.ವಿ.ಎಸ್. ದ್ವಿಚಕ್ರ ವಾಹನ ಸಂ. ಕೆಎ-೦೧-ಡ್ಲೂಯು-೩೭೧೫ ರಲ್ಲಿ ಮೈ;ಲಾಂಡಹಳ್ಳಿ ಗೇಟ್ ಬಳಿ ಹೋಗುತ್ತಿದ್ದರು.  ಅ ಸಮಯದಲ್ಲಿ ಯಾವುದೋ ವಾಹನದ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ವೆಂಕಟೇಶಪ್ಪ ರವರಿಗೆ ಡಿಕ್ಕಿ ಹೊಡೆದಿದ್ದರು ಪರಿಣಾಮವಾಗಿ ಅವರಿಗೆ ತೀವ್ರವಾದ ಗಾಯಗಳಾಗಿರುತ್ತದೆ.  ಇವರನ್ನು ಅದೇ ಗ್ರಾಮದ ವಾಸಿಯಾದ ಶಶಿ ಎಂಬುವರು ಮರುದಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ : ೦೧-೧೦-೨೦೦೯ ರಂದು ಮೃತಪಟ್ಟಿರುವುದಾಗಿ ವಿಕ್ಟೋರಿಯ ಆಸ್ಪತ್ರೆ ಪೊಲೀಸ್ ಠಾಣೆಯ ಠಾಣಾಧಿಕಾರಿರವರು ಇಂದು ಮಾಲೂರು ಠಾಣೆಗೆ ಮಾಹಿತಿ ರವಾನಿಸಿರುತ್ತಾರೆ.

-ಸಾಧಾರಣ : ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ಇಲ್ಲ  

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ  ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು : ಇಲ್ಲ.

-ಸ್ಥಳ ದಂಡ ಮೊತ್ತ : ರೂ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply