ದಿನದ ಅಪರಾಧಗಳ ಪಕ್ಷಿನೋಟ ೦೯ ನೇ ನವಂಬರ್ ೨೦೦೯

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೦೯-೧೧-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೧

ನಂಗಲಿ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ಈಗ್ಗೆ ಒಂದು ವರ್ಷದ ಹಿಂದೆ ತಾತಿಕಲ್ಲು ಗ್ರಾಮದ ವಾಸಿ, ಚಿಕ್ಕರೆಡ್ಡಮ್ಮ ಎಂಬುವರನ್ನು ಚಿಕ್ಕಬಾಬು ಎಂಬುವರಿಗೆ ವರದಕ್ಷಿಣೆಯಾಗಿ ರೂ, ೧,೭೫,೦೦೦/- ಮತ್ತು ೨೦ ಗ್ರಾಂ, ಬಂಗಾರದ ವಡವೆಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದರು. ನಂತರ ಗಂಡ ಚಿಕ್ಕಬಾಬು ಮತ್ತು ಅವರ ಮನೆಯವರು ಇನ್ನೂ ಹೆಚ್ಚಿನ ವರದಕ್ಷಿಣಯಾಗಿ ರೂ, ೫೦,೦೦೦/- ಗಳನ್ನು ವರದಕ್ಷಿಣೆಯಾಗಿ ತರುವಂತೆ ಮಾನಸಿಕ ಹಾಗು ದೈಹಿಕ ಹಿಂಸೆ ನೀಡಿ, ಬೆಕರಿಕೆ ಹಾಕಿರುತ್ತಾರೆ.

ರಸ್ತೆ ಅಪಘಾತಗಳು ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ : ೦೨

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೮-೧೧-೨೦೦೯ ರಂದು ೧೭೪೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು, ಹೊಸೂರು ಗ್ರಾಮದ ವಾಸಿ, ರವಿಕುಮಾರ್‍  ಎಂಬುವರು,  ತನ್ನ ಹೊಂಡಾ  ತ್ರಿಚಕ್ರ ಸಂಖ್ಯೆ ಕೆ.ಎ-೦೪ ಇ.ಎಸ್. ೪೪೬೯ ರಲ್ಲಿ ರಾಷ್ಟೀಯ ಹೆದ್ದಾರಿ ೪ ರ ಚಲುವನಹಳ್ಳಿ ಗೇಟ್ ಬಳಿ ಬರುತ್ತಿದ್ದರು.  ಆ ಸಮಯದಲ್ಲಿ ಕೋಲಾರ ಕಡೆಯಿಂದ ಬಂದ ಮಾರುತಿ ಕಾರು ಸಂಖ್ಯೆ ಕೆ.ಎ-೦೫ ಎಂ.ಡಿ ೬೧೦೦ ರ ಚಾಲಕ, ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತ್ರಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ,  ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುತ್ತಾನೆ.  ಇದರ ಪರಿಣಾಮ ರವಿಕುಮಾರ್‍ ರವರ ಕಾಲು ಮತ್ತು ಕೈಗಳಿಗೆ ಗಾಯಗಳಾಗಿರುತ್ತದೆ. ಗಾಯಾಳು ಚಿಕಿತ್ಸೆಗಾಗಿ ಕೋಲಾರದ ಎಸ್.ಎನ್.ಆರ್‍ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಧಾರಣ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೮-೧೧-೨೦೦೯ ರಂದು  ೧೯೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು  ರಾಜಕಲ್ಲಹಳ್ಳಿ ಗ್ರಾಮದ ವಾಸಿ ಎ.ಕೃಷ್ಣಪ್ಪ ಮತ್ತು ನಾಗರಾಜ  ಎಂಬುವರು ತನ್ನ ಹೀರೋ ಹೊಂಡಾ ಫ್ಯಾಷನ್ ದ್ವಿಚಕ್ರ ಸಂಖ್ಯೆ ಕೆಎ-೦೫-ಇವೈ- ೪೯೧೯ ರಲ್ಲಿ ವೇಮಗಲ್ – ನರಸಾಪುರ ರಸ್ತೆಯ ಚೌಡದೇನಹಳ್ಳಿ ಗೇಟ್ ಬಳಿ ಹೋಗುತ್ತಿದ್ದರು.  ಆ ಸಮಯದಲ್ಲಿ ನರಸಾಪುರ ಕಡೆಯಿಂದ ಬಂದ ಕಾರು ಸಂಖ್ಯೆ ಕೆಎ-೦೨-ಎಂಎಫ್- ೩೨೧೩ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿರುತ್ತಾನೆ.  ಇದರ ಪರಿಣಾಮ ನಾಗರಾಜ್  ರವರ ತಲೆಗೆ ಗಾಯಗಳಾಗಿರುತ್ತದೆ. ಗಾಯಾಳು ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೩

ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಶ್ರೀನಿವಾಸಪುರ ತಾಲೂಕು ಕಶೆಟ್ಟಿಪಲ್ಲಿ ಗ್ರಾಮದಲ್ಲಿ ಕೃತ್ಯ ಸಂಬವಿಸಿರುತ್ತದೆ. ದಿನಾಂಕ: ೦೮-೧೧-೨೦೦೯ ರಂದು ೧೩೦೦ ಗಂಟೆ ಸಮಯದಲ್ಲಿ ಕಶಟ್ಟಿಹಳ್ಳಿ ಗ್ರಾಮದ ವಾಸಿ, ವೆಂಕಟಸ್ವಾಮಿ ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ, ಗೋಪಾಲರೆಡ್ಡಿ ಮತ್ತಿತರೆ ಮೂವರು ಕೈಗಳಿಂದ ಹಾಗು ದೊಣ್ಣೆಗಳಿಂದ ಹೊಡೆದು, ಗಾಯ ಪಡಿಸಿರುತ್ತಾರೆ.

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ತಾಲೂಕು ಮಟ್ನಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಬವಿಸಿರುತ್ತದೆ. ದಿನಾಂಕ: ೦೨-೧೧-೨೦೦೯ ರಂದು ೧೬೦೦ ಗಂಟೆ ಸಮಯದಲ್ಲಿ ಮಟ್ನಹಳ್ಳಿ ಗ್ರಾಮದ ವಾಸಿ, ಸರಸ್ವತಮ್ಮ ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ, ಮತ್ತಿತರೆ ಇಬ್ಬರು ಕೈಗಳಿಂದ ಹಾಗು ದೊಣ್ಣೆಗಳಿಂದ ಹೊಡೆದು, ಪ್ರಾಣ ಬೆದರಿಕೆ ಹಾಕಿರುತ್ತಾರೆ.  ಜಮೀನಿನ ವಿವಾದದ ಹಿನ್ನೆಲೆಯಲ್ಲಿ ಕೃತ್ಯ ಸಂಬವಿಸಿರುತ್ತದೆ.

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಕೋಲಾರ ತಾಲೂಕು ಸುಗುಟೂರು ಗ್ರಾಮದಲ್ಲಿ ಕೃತ್ಯ ಸಂಬವಿಸಿರುತ್ತದೆ.  ದಿನಾಂಕ: ೦೮-೧೧-೨೦೦೯ ರಂದು ೧೬೩೦ ಗಂಟೆ ಸಮಯದಲ್ಲಿ ಕೆ ನಾಗೇಶ ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ ರಾಮಪ್ಪ ಎಂಬುವುರ ಹಳೆ ವೈಷಮ್ಯದ ಹಿನ್ನಲೆಯಲ್ಲಿ ರಾಡಿನಿಂದ ತೊಡೆಗೆ ಹೊಡೆದು ಗಾಯಪಡಿಸಿರುತ್ತಾರೆ. ಗಾಯಾಳು ಚಿಕಿತ್ಸೆಗಾಗಿ ಕೋಲಾರ ಎಸ್.ಎನ್.ಆರ್‍ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೧

ವೇಮಗಲ್ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೯-೧೧-೨೦೦೯ ರಂದು ೧೦೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಸಿಂಗೇಹಳ್ಳಿ ಗ್ರಾಮದ ವಾಸಿ ಎಸ್.ಎನ್.ವಿಜಯ ಕುಮಾರ್‍ ಎಂಬುವರ ಪತ್ನಿಯಾದ ಶ್ರೀಮತಿ ಕಲ್ಪನಾ(೨೩) ರವರು ವೇಮಗಲ್ ಸರ್ಕಾರಿ ಆಸ್ಪತ್ರೆಯ ಬಳಿಯಿಂದ ಕಾಣೆಯಾಗಿರುತ್ತಾರೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು : ಇಲ್ಲ

-ಸ್ಥಳ ದಂಡ ಮೊತ್ತ : ರೂ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply