ದಿನಾಂಕ: ೨೨-೦೧-೨೦೧೨ ರಂದು ೧೭೩೦ ಗಂಟೆ ಸಮಯದಲ್ಲಿ ವೇಮಗಲ್ ಪೊಲೀಸ್ ಠಾಣೆಯ ಪಿಎಸ್‌ಐ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ತಮ್ಮ ಸಿಬ್ಬಂದಿಯವರೊಂದಿಗೆ ಕೋಲಾರ ತಾಲೂಕು ತಲಗುಂದ ಗ್ರಾಮದ ಸಮೀಪ ಹಣವನ್ನು ಪಣವಾಗಿಟ್ಟು ಅಂದರ್ – ಬಾಹರ್ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ಮಾಡಿ ಶ್ರೀನಿವಾಸ ಮತ್ತು ಇತರೆ ೩ ಜನರನ್ನು ಬಂದಿಸಿ ಪಣವಾಗಿಟ್ಟಿದ್ದ ರೂ. ೧,೦೦೦/- ಗಳನ್ನು ವಶ ಪಡಿಸಿಕೊಂಡಿರುತ್ತಾರೆ.
ಬಂದಿತರ ವಿವರಗಳು :
- ಶ್ರೀನಿವಾಸ ಬಿನ್ ರಾಮಣ್ಣ, ತಲಗುಂದ ಗ್ರಾಮ, ಕೋಲಾರ ತಾಲೂಕು.
- ಸುಬ್ರಮಣಿ ಬಿನ್ ನರಸಿಂಹಯ್ಯ, ತಲಗುಂದ ಗ್ರಾಮ, ಕೋಲಾರ ತಾಲೂಕು.
- ಚಿರಂಜೀವಿ ಬಿನ್ ಕಾಳಪ್ಪ, ತಲಗುಂದ ಗ್ರಾಮ, ಕೋಲಾರ ತಾಲೂಕು.
- ವಿನೋದ್ ಬಿನ್ ತಿಮ್ಮರಾಯಪ್ಪ, ತಲಗುಂದ ಗ್ರಾಮ, ಕೋಲಾರ ತಾಲೂಕು.
ಈ ಬಗ್ಗೆ ವೇಮಗಲ್ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.