ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: ೨೫-೦೧-೨೦೧೨ ರಂದು ೧೪೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕಾಣೆಯಾದವರ ಬಗ್ಗೆ :
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೨೩-೦೧-೨೦೧೨ ರಂದು ರಾತ್ರಿ ಸಮಯದಲ್ಲಿ ಕೋಲಾರ ತಾಲೂಕು ಕೊಂಡರಾಜನಹಳ್ಳಿ ಗ್ರಾಮದ ವಾಸಿ ಬಾಬುರಾವ್ ಎಂಬುವರ ತಂಗಿಯಾದ ದೀಪಾ(೨೧) ಎಂಬುವರು ಮನೆಯಲ್ಲಿದ್ದವರು ಕಾಣೆಯಾಗಿರುತ್ತಾರೆ.
ಹಲ್ಲೆ :
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೩-೦೯-೨೦೧೧ ರಂದು ೦೬೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಹಳೇ ಸೋಮಾರಸನಹಳ್ಳಿ ಗ್ರಾಮದ ವಾಸಿ ಲಕ್ಷ್ಮಯ್ಯ ಎಂಬುವರು ತನ್ನ ಗ್ರಾಮದಲ್ಲಿರುವ ಹೊಸ ರಸ್ತೆಗೆ ನೀರು ಹಾಕುತ್ತಿದ್ದರು. ಕಾಮಗಾರಿ ರಸ್ತೆಯ ಮೇಲೆ ಅದೇ ಗ್ರಾಮದ ವಾಸಿಯಾದ ಯಲ್ಲಪ್ಪ ಎಂಬುವರು ಟೆಂಪೋ ಚಾಲನೆ ಮಾಡಿಕೊಂಡು ಬಂದಿದ್ದು, ಇದನ್ನು ಪ್ರಶ್ನಿಸಿದ ಲಕ್ಷ್ಮಯ್ಯ ರವರಿಗೆ ಯಲ್ಲಪ್ಪ ಮತ್ತು ಇತರೆ ೩ ಜನರು ದೊಣ್ಣೆಯಿಂದ ಹೊಡೆದು ಗಾಯಪಡಿಸಿರುತ್ತರೆ.
ವರದಕ್ಷಿಣೆ ಕಿರುಕುಳ :
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೦-೦೫-೨೦೧೦ ರಂದು ಕೋಲಾರ ತಾಲೂಕು ಹಾರೋಹಳ್ಳಿ ಗ್ರಾಮದ ವಾಸಿ ಅರುಣಾ ಎಂಬುವರನ್ನು ಬೆಗ್ಲಿಬೆಣಜೇನಹಳ್ಳಿ ಗ್ರಾಮದ ವಾಸಿ ಮಂಜುನಾಥ ಎಂಬುವರಿಗೆ ಮದುವೆ ಮಾಡಿ ಕೊಟ್ಟಿದ್ದರು. ಮದುವೆ ಸಮಯದಲ್ಲಿ ಒಡವೆ, ನಗದು ಮತ್ತು ದ್ವಿಚಕ್ರ ವಾಹನ ನೀಡಿದ್ದರು ಸಹ ಗಂಡ ಮಂಜುನಾಥ ಮತ್ತು ಅವರ ಮನೆಯವರು ಇನ್ನು ಹೆಚ್ಚಿನ ರೂ. ೫೦,೦೦೦/- ವರದಕ್ಷಿಣೆ ತರುವಂತೆ ಒತ್ತಾಯ ಮಾಡಿ ಅವಾಚ್ಚ ಶಬ್ದಗಳಿಂದ ಬೈದು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
ಮನೆ ಕಳ್ಳತನ :
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೪-೦೧-೨೦೧೨ ರಂದು ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಕೋಲಾರ ತಾಲೂಕು ವಕ್ಕಲೇರಿ ಗ್ರಾಮದ ವಾಸಿ ವೆಂಕಟಾಚಲಯ್ಯ ಎಂಬುವರ ಅಂಗಡಿಗೆ ಹಾಕಿದ್ದ ರೋಲಿಂಗ್ ಷಲ್ಟರ್ ಅನ್ನು ಮೀಟಿ ತೆಗೆದು ಅಂಗಡಿಯಲ್ಲಿದ್ದ ೩ ಮೊಬೈಲ್ ಫೋನ್ ಮತ್ತು ರೂ. ೧,೫೦೦/- ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೧-೨೦೧೨ ರಿಂದ ೨೪-೦೧-೨೦೧೨ ರ ನಡುವೆ ಯಾರೋ ಕಳ್ಳರು ಕೋಲಾರ ನಗರದ ಹಾರೋಹಳ್ಳಿ ವಾಸಿ ಪಂಕಜಮ್ಮ ಎಂಬುವರ ಮನೆಗೆ ಹಾಕಿದ್ದ ಬೀಗವನ್ನು ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ ಬಂಗಾರ ಮತ್ತು ವಜ್ರದ ವಡವೆ ನಗದು ರೂ. ೧,೦೦,೦೦೦/- ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
ಜಾನುವಾರು ಕಳ್ಳತನ :
ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸೀಮೆ ಹಸು ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೨-೦೧-೨೦೧೨ ರಂದು ೧೭೦೦ ಗಂಟೆ ಸಮಯದಲ್ಲಿ ಯಾರೋ ಕಳ್ಳರು ಮುಳಬಾಗಿಲು ತಾಲೂಕು ಬೆಳ್ಳಂಬಳ್ಳಿ ಗ್ರಾಮದ ವಾಸಿ ಮಂಜುನಾಥ ಎಂಬುವರ ಮನೆಯ ಬಳಿ ಕಟ್ಟಿ ಹಾಕಿದ್ದ ರೂ. ೪೦,೦೦೦/- ಬೆಲೆ ಬಾಳುವ ಸೀಮೆ ಹಸುವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
ಬಾಲಕಿ ಅಪಹರಣ :
ವೇಮಗಲ್ ಪೊಲೀಸ್ ಠಾಣೆಯಲ್ಲಿ ಅಪಹರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೨೧-೦೧-೨೦೧೨ ರಂದು ೧೦೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ರಾಮಸಂದ್ರ ಗ್ರಾಮದ ವಾಸಿ ಸಾವಿತ್ರಮ್ಮ ಎಂಬುವರ ಮಗಳಾದ ಕು. ಪವಿತ್ತಾ @ ದೇವಿ(೧೭) ಎಂಬುವನರನು ಸೊಣ್ಣೇನಹಳ್ಳಿ ಗ್ರಾಮದ ವಾಸಿಗಳಾದ ರಮೇಶ ಮತ್ತು ವೇಣುಮಾಧವ ಎಂಬುವರು ನರಸಾಪುರ ಕಾಲೇಜಿನ ಬಳಿ ದ್ವಿಚಕ್ರ ವಾಹನದಲ್ಲಿ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.