ದಿನದ ಅಪರಾಧಗಳ ಪಕ್ಷಿನೋಟ ೨೮ ನೇ ಜನವರಿ ೨೦೧೨

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: ೨೮-೦೧-೨೦೧೨ ರಂದು ೧೪೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು  ದಾಖಲಾಗಿರುತ್ತವೆ.

ಹಲ್ಲೆ :

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.   ದಿನಾಂಕ: ೨೭-೦೧-೨೦೧೨ ರಂದು ೧೧೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಜಡೇರಿ ಗ್ರಾಮದ ವಾಸಿಯಾದ  ವೆಂಕಟೇಶಗೌಡ ಎಂಬುವರನ್ನು ಅಶ್ವತ್ಥಗೌಡ ಎಂಬುವರು ತನ್ನ ತಾಯಿಯನ್ನು ಸರಿಯಾಗಿ ನೋಡಿಕೊಂಡಿಲ್ಲ ಎಂದು ಜಗಳ ತೆಗೆದು ಹೊಡೆದು ಗಾಯಪಡಿಸಿರುತ್ತಾನೆ.

ಪರಿಶಿಷ್ಟ ಜಾತಿ ಮತ್ತು ಪಂಗಡದವರ ದೌರ್ಜನ್ಯ :

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.   ದಿನಾಂಕ: ೨೨-೦೧-೨೦೧೨ ರಂದು ೧೬೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಕುಪ್ಪಂಪಾಳ್ಯ  ವಾಸಿಗಳಾದ ರಂಗಪ್ಪ ಮತ್ತು ಅವರ ಸಂಬಂಧಿಕರು ತಮ್ಮ ಗ್ರಾಮದ ಸುಬ್ಬರಾಯಪ್ಪ ರವರ ಜಮೀನಿನಲ್ಲಿ ಸೀಗೇಕಾಯಿ ಕೀಳುವ ಕೂಲಿ ಕೆಲಸಕ್ಕೆ ಹೋಗಿದ್ದರು. ಆ ಸಮಯದಲ್ಲಿ ಸುವರ್ಣಹಳ್ಳಿ ಗ್ರಾಮದ ವಾಸಿಗಳಾದ ಗೋಪಾಲಪ್ಪ, ಮೋಹನ್ ಮತ್ತು ಬಾಬು ಎಂಬುವರು ಅವಾಚ್ಚಶಬ್ದಗಳಿಂದ ಬೈದು  ಜಾತಿನಿಂದನೆ ಮಾಡಿ ಮಚ್ಚಿನಿಂದ ಹೊಡೆದು ಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಅಸ್ವಾಭಾವಿಕ ಸಾವು :

ಶ್ರೀನಿವಾಸಪುರ  ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.   ದಿನಾಂಕ: ೨೭-೦೧-೨೦೧೨ ರಂದು ೨೩೩೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ಪಟ್ಟಣದ ಕೊಲ್ಲೂರು ರಸ್ತೆಯ ವಾಸಿ ಶ್ರೀಮತಿ ಕಮಲ ಎಂಬುವರು ತನಗೆ ಬರುತ್ತಿದ್ದ ಒಂಟಿ ತಲೆನೋವಿಗೆ ತಾಳಲಾರದೆ ಜೀವನದಲ್ಲಿ ಜಿಗುಪ್ಸೆ ಹೊಂದಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ಶ್ರೀನಿವಾಸಪುರ  ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.   ದಿನಾಂಕ: ೨೮-೦೧-೨೦೧೨ ರಂದು ೧೦೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ಪಟ್ಟಣದ ವಿನೋಭ ರಸ್ತೆಯ ವಾಸಿ ಶ್ರೀಮತಿ ಕಮಲಮ್ಮ ಎಂಬುವರು ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಸಮಯದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟಗಾಯಗಳಾಗಿ ಮೃತ ಪಟ್ಟಿರುತ್ತಾರೆ.

ಸಾಮಾನ್ಯ ಅಪಘಾತ :

ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.   ದಿನಾಂಕ: ೨೮-೦೧-೨೦೧೨ ರಂದು ೦೯೦೦ ಗಂಟೆ ಸಮಯದಲ್ಲಿ ಚಿಂತಾಮಣಿ ತಾಲೂಕು ಕುತಾರಾಜನಹಳ್ಳಿ ಗ್ರಾಮದ ವಾಸಿಯಾದ ಮುನಿವೆಂಕಟಪ್ಪ ಎಂಬುವರು ಕೋಲಾರ ನಗರದ ಟಮಕ ಜಿಗ್-ಜಾಗ್ ಬಳಿ ರಸ್ತೆ ದಾಟುತ್ತಿದ್ದರು. ಆ ಸಮಯದಲ್ಲಿ   ಬಂದ ಸರ್ಕಾರಿ ಬಸ್ ಸಂಖ್ಯೆ ಕೆಎ-೦೭-ಎಫ್-೧೨೬೦ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮುನಿವೆಂಕಟಪ್ಪ ರವರಿಗೆ ಡಿಕ್ಕಿ  ಹೊಡೆದ ಪರಿಣಾಮ ತಲೆಗೆ ಮತ್ತು ಇತರೆ ಕಡೆಗಳಲ್ಲಿ ಗಾಯಗಳಾಗಿ ಚಿಕತ್ಸೆಗಾಗಿ ದಾಖಲಾಗಿರುತ್ತಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s