ಸ್ವಾತಂತ್ರ ದಿನಾಚರಣೆಯ ಶುಭಾಶಯಗಳು

August 14, 2009

ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ಸಮಸ್ತರಿಗೂ ಸ್ವತಂತ್ರ ದಿನೋತ್ಸವದ ಶುಭಾಶಯಗಳು

independenceday


ಕಾಣೆಯಾದ ಹುಡುಗಿ ಅಪೂರ್ವ

June 18, 2009

ಕಾಣೆಯಾದ ಹುಡುಗಿ ಅಪೂರ್ವ

ಕಾಣೆಯಾದ ಹುಡುಗಿ ಅಪೂರ್ವ

ಸರ್ಜೆಂಟ್ ರವಿಶಂಕರ್‍ ಎಂಬುವರು ಕಾರ್‍-ನಿಕೋಬಾರ್‍ ಏರ್‍ ಪೋರ್‍ ಸ್ಟೇಷನ್ ನಲ್ಲಿ ಕೆಲಸ ಮಾಡುತ್ತಿದ್ದು ೨೦೦೪ ರಲ್ಲಿ ಅನಿರೀಕ್ಷಿತವಾಗಿ  ಬಂದ ಸುನಾಮಿ ದುರ್ಘಟನೆಯಿಂದ ಇವರ ೧೨ ವರ್ಷದ ಮಗಳಾದ ಅಪೂರ್ವ (ಮೇಲ್ಕಂಡ ಭಾವಚಿತ್ರದಲ್ಲಿರುವ ಹುಡುಗಿ) ಎಂಬ ಹುಡುಗಿ ಕಾಣೆಯಾಗಿರುತ್ತಾಳೆ.  ಹೀಗೆ ಕಾಣೆಯಾದ ಅಪೂರ್ವ ನಂತರ ೨೦೦೫ ರಲ್ಲಿ ಈಕೆಯ ತಂದೆ ಹಾಗೂ ತಾಯಿಗೆ ಚನ್ನೈ ರಿಲೀಫ್ ಕ್ಯಾಂಪಿನಲ್ಲಿ ಕಾಣಿಸಿಕೊಂಡಿರುತ್ತಾಳೆ. ಕೆಲ ದಿನಗಳ ಬಳಿಕ ಅಪೂರ್ವ ಪುನಃ ಅಲ್ಲಿಂದಲೂ ಸಹಾ ಕಾಣೆಯಾಗಿರುತ್ತಾಳೆ. ಈ ಬಗ್ಗೆ ಮಾಹಿತಿಯನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗಿರುತ್ತದೆ. ತನ್ನ ಮಗಳನ್ನು ಮರೆಯಲಾಗದ ಪೋಷಕರು ಊಟ ನಿದ್ರೆಯನ್ನು ತೊರೆದು ಪರಿತಪಿಸುತ್ತಿದ್ದಾರೆ.

ಈ ರೀತಿಯಾಗಿ ಕಾಣೆಯಾದ ಅಪೂರ್ವ ಬಗ್ಗೆ ಸರಾಳ್ ಎಂಬ ಉರ್ದು ದಿನಪತ್ರಿಕೆಯಲ್ಲಿ ದಿನಾಂಕ ೧೮-೦೬-೨೦೦೯ ರಂದು ಮಾಹಿತಿ ಪ್ರಕಟಿಸಲಾಗಿದ್ದು ಈ ಬಗ್ಗೆ ಶ್ರೀ ಅಫ್ರೋಜ್ ಖಾನ್ ಎಂಬುವರು ೧೫ ದಿನಗಳ ಹಿಂದೆ ಕಾಣೆಯಾದ ಹುಡುಗಿ ಅಪೂರ್ವಳನ್ನು ಕೋಲಾರ ನಗರದ ಖುತುಬ್ ಘೋರಿ ದರ್ಗಾ ಬಳಿ ಸುಮಾರು ೫೦ ವರ್ಷ ವಯಸ್ಸಿನ ವ್ಯಕ್ತಿ ಹಾಗೂ ಇಬ್ಬರು ಮಹಿಳೆಯರೊಡನೆ ತಾನು ನೋಡಿದ್ದಾಗಿ ನುಡಿದಿರುತ್ತಾರೆ. ಆದುದರಿಂದ ಮೇಲ್ಕಂಡ ಭಾವಚಿತ್ರದಲ್ಲಿನ ಹುಡುಗಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಲ್ಲಿ ಈ ಕೆಳಕಂಡ ದೂರವಾಣಿ ಸಂಖ್ಯೆ ಅಥವಾ ಇ-ಮೇಲ್ ವಿಳಾಸಕ್ಕೆ ಮಾಹಿತಿ ನಿಡಲು ಕೋರಲಾಗಿದೆ.

ದೂರವಾಣಿ ಸಂಖ್ಯೆಗಳು;

ಕಂಟ್ರೋಲ್ ರೂಂ: 08152-243066

ಕೋಲಾರ ಪುರ ಠಾಣೆ: 08152-222024

ಎಸ್.ಪಿ ಕೋಲಾರ: 08152-243060

ಎ.ಎಸ್.ಪಿ, ಕೋಲಾರ: 08152-243061

ಇ-ಮೇಲ್: ccklr@ksp.gov.in


ವಶಪಡಿಸಿಕೊಂಡಿರುವ ಕಳವು ಮಾಲುಗಳ ಪ್ರದರ್ಶನ

April 27, 2009

ದಿನಾಂಕ ೦೨-೦೫-೨೦೦೯ ರಂದು ಬೆಳಿಗ್ಗೆ ೧೧೦೦ ಗಂಟೆ ಸಮಯದಲ್ಲಿ ಇಲಾಖೆಯಿಂದ ವಶಪಡಿಸಿಕೊಂಡಿರುವ ಕಳವು ಮಾಲುಗಳ ಪ್ರದರ್ಶನವನ್ನು ಕೋಲಾರ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಲಾಗಿರುತ್ತದೆ. ಈ ಸಂಬಂಧ ಎಲ್ಲ ಪತ್ರಿಕಾ ಪ್ರತಿನಿಧಿಗಳು / ವರದಿಗಾರರು ಮತ್ತು ಛಾಯಾಚಿತ್ರಗ್ರಾಹಕರಿಗೆ ಪ್ರದರ್ಶನಕ್ಕೆ ಹಾಜರಾಗಲು ಆಹ್ವಾನಿಸಲಾಗಿದೆ. ಈ ಪ್ರದರ್ಶನವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶವನ್ನು ಕಲ್ಪಿಸಲಾಗಿದ್ದು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಕೋರಿದೆ.


ಹೊಸ ಆಶಯಯೊಂದಿಗೆ ಹೊಸ ವರುಷದ ಶುಭಾಷಯ

December 31, 2008

 

ಕೋಲಾರ ಜಿಲ್ಲಾ ಪೊಲೀಸರ ಪರವಾಗಿ ಸಮಸ್ತರಿಗೂ ಹೊಸ ವರುಷದ ಹಾರ್ಧಿಕ ಶುಭಾಷಯಗಳು

Wish you all a Happy New Year


ದಿನದ ಅಪರಾಧಗಳ ಪಕ್ಷಿನೋಟ ೦೬ ನೇ ನವೆಂಬರ್ ೦೮

December 6, 2008

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ -೧೧-೨೦೦೮ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪಂಪ್ಹೌಸ್ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೨-೧೧-೨೦೦೮ ರಂದು ರಾತ್ರಿ ಕೋಲಾರ ತಾಲೂಕು ಪಾರೇಹೊಸಹಳ್ಳಿ ಗ್ರಾಮದ ವಾಸಿ ಪಿ.ಎನ್.ಬಾಬು ಮತ್ತು ಮುಳಬಾಗಿಲು ತಾಲೂಕು ಯಳಗೊಂಡನಹಳ್ಳಿ ಗ್ರಾಮದ ವಾಸಿ ಮಂಜುನಾಥ ಎಂಬುವರು ಕೋಲಾರ ತಾಲೂಕು ಸೀಸಂದ್ರ ಗ್ರಾಮದ ವಾಸಿಯಾದ ಎಸ್.ನಾಗರಾಜ ಎಂಬುವರ ಪಂಪ್ಹೌಸ್ ಮೇಲ್ಚಾವಣಿಯ ಚಪ್ಪಡಿಗಳನ್ನು ಪಕ್ಕಕ್ಕೆ ಸರಿಸಿ ಒಳಗಡೆ ಪ್ರವೇಶ ಮಾಡಿ ಅಲ್ಲಿದ್ದ ಸುಮಾರು ರೂ. ೨೪,೦೦೦/- ಬೆಲೆ ಬಾಳುವ ೧೮೦ ಮೀಟರ್ಕೇಬಲ್ ವೈರ್‍, ಅಲ್ಯೂಮಿನಿಯಂ ಸಿಲ್ಕ್ವೈರ್‍, ಒಂದು ಪ್ಯಾನೆಲ್ ಬೋರ್ಡ ಮತ್ತು ಔಷಧಿ ಹೊಡೆಯು ಪಂಪ್ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಿ.ಎನ್.ಬಾಬು ಎಂಬುವರನ್ನು ದಸ್ತಗಿರಿ ಮಾಡಿ ಕಳುವು ಮಾಡಿಕೊಂಡು ಹೋಗಿರುವ ಮಾಲನ್ನು ವಶ ಪಡಿಸಿಕೊಂಡಿರುತ್ತಾರೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೩-೧೧-೨೦೦೮ ರಂದು ೧೧೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಉಪ್ಪುಕುಂಟೆ ಗ್ರಾಮದ ವಾಸಿಗಳಾದ ಆರ್‍.ಚಂಗಪ್ಪ, ಸತೀಶ್ ಮತ್ತು ವೆಂಕಟಸ್ವಾಮಿ ಎಂಬುವರು ಮುಳಬಾಗಿಲು ತಾಲೂಕು ಅರಹಳ್ಳಿ ಗ್ರಾಮದ ಕೋಳಿ ಫಾರಂ ಬಳಿ ನಡೆದುಕೊಂಡು ಹೋಗುತ್ತಿದ್ದರು. ಸಮಯದಲ್ಲಿ ಬಂದ ಟ್ರಾಕ್ಟರ್ಸಂಖ್ಯೆ ಕೆಎ-೦೭-ಟಿ-೮೬೮೮ ಚಾಲಕ ತನ್ನ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ವೆಂಕಟಸ್ವಾಮಿ ರವರಿಗೆ ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ವೆಂಕಟಸ್ವಾಮಿ ರವರ ತಲೆಗೆ ತೀವ್ರತರವಾದ ಗಾಯಗಳಾಗಿ ಚಿಕಿತ್ಸೆಗಾಗಿ ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ ೦೬-೧೧-೨೦೦೮ ರಂದು ೦೪೩೦ ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆ.

-ಸಾಧಾರಣ: ೦೧

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ -೧೧-೨೦೦೮ ರಂದು ೦೦ ಗಂಟೆ ಸಮಯದಲ್ಲಿ ಶಿಡ್ಲಘಟ್ಟ ತಾಲೂಕು ಮಳ್ಳೂರು ಗ್ರಾಮದ ವಾಸಿಯಾದ ಮಂಜುನಾಥ ಎಂಬುವರು ತಮ್ಮ ಕುಟುಂಬದೊಂದಿಗೆ ಮಾರೂತಿ ಕಾರು ಸಂಖ್ಯೆ ಕೆಎ-೦೫-ಝಡ್-೪೧೭೭ ರಲ್ಲಿ ರಾಷ್ಟ್ರೀಯ ಹೆದ್ದಾರಿ- ಮದರಸಾ ಬಳಿ ಹೋಗುತ್ತಿದ್ದರು. ಆಸಮಯದಲ್ಲಿ ಕೋಲಾರ ಕಡೆಯಿಂದ ಬಂದ ಮಾರುತಿ ಕಾರು ಸಂಖ್ಯೆ ಕೆಎ-೦೩-ಎಂಜಿ-೧೩೨೪ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮಂಜುನಾಥ ರವರ ಕಾರಿಗೆ ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ಕಾರಿನಲ್ಲಿದ್ದ ಮಂಜುನಾಥ ಅವರ ತಾಯಿ ಮತ್ತು ಪತ್ನಿಯವರಿಗೆ ಗಾಯಗಳಾಗಿ ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧

ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲೂಕು ಕೂರಿಗೆಪಲ್ಲಿ ಗ್ರಾಮದ ವಾಸಿ ನಾಗರಾಜ ಎಂಬುವರು ಮೃತಪಟ್ಟಿರುತ್ತಾರೆ. ನಾಗರಾಜ ರವರಿಗೆ ಕುಡಿತದ ಚಟ ಇದ್ದು ದಿನಾಂಕ ೨೪-೧೦-೨೦೦೮ ರಂದು ತನ್ನ ಹೆಂಡತಿಯನ್ನು ಕುರಿತು ಕುಡಿಯಲು ಹಣ ಕೊಡಲು ಕೇಳಿದ್ದು ಈತನ ಹೆಂಡತಿ ಇದಕ್ಕೆ ನಿರಾಕರಿಸಿರುತ್ತಾರೆ. ಇದರಿಂದ ಜಿಗುಪ್ಸೆಗೊಂಡ ನಾಗರಾಜ ತನ್ನ ಮೈಮೇಲೆ ತಾನೇ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುತ್ತಾನೆ. ಇದರ ಪರಿಣಾಮ ಸುಟ್ಟಗಾಯಗಳಾಗಿದ್ದು ಗಾಯಾಳು ನಾಗರಾಜ ರವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದ ವೇಳೆ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ ೨೬-೧೦-೨೦೦೮ ರಂದು ೦೮೧೦ ಗಂಟೆಗೆ ಮೃತಪಟ್ಟಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ೧೩

-ಸ್ಥಳ ದಂಡ ಮೊತ್ತ: ರೂ. ,೭೦೦/-

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದೀಪಾವಳಿ ಹಬ್ಬದಲ್ಲಿ ಪಟಾಕಿಗಳನ್ನು ಬಳಸುವ ಕುರಿತು ಸೂಚನೆಗಳು

October 28, 2008

ದೀಪಾವಳಿ ಹಬ್ಬದಂದು ಸಾಂಕೇತಿಕವಾಗಿ ಪಟಾಕಿಗಳನ್ನು ಸಿಡಿಸುವುದು ನಮ್ಮ ಸಂಪ್ರದಾಯದ ಪ್ರತೀಕವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪಟಾಕಿಗಳನ್ನು ಅತಿ ಹೆಚ್ಚಾಗಿ ಸಿಡಿಸುವುದರಿಂದ ಶಬ್ದ ಹಾಗೂ ವಾಯು ಮಾಲಿನ್ಯ ಉಂಟಾಗುತ್ತದೆ. ಇದು ಹೃದಯಘಾತ ಉಸಿರಾಟದ ತೊಂದರೆ ಹಾಗೂ ಶಾಶ್ವತ ಶ್ರವಣ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಮ್ಮ ಸುತ್ತ ಮುತ್ತ ಇರುವ ವೃದ್ದರು, ಶಿಶುಗಳು ಹಾಗೂ ರೋಗಿಗಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಹಿಂದೆ ದೀಪಾವಳಿ ಹಬ್ಬದ ದಿನಗಳಲ್ಲಿ ಶಬ್ದವನ್ನು ತಪಾಸಣೆ ಮಾಡಿದಾಗ ಶಬ್ದವು ಸೂಚಿಸಿರುವ ಮಿತಿಯನ್ನು ದಾಟಿರುವುದು ಕಂಡು ಬಂದಿರುತ್ತದೆ. ಅದ್ದರಿಂದ ಮುಂಜಾಗ್ರತೆ ವಹಿಸದಿದ್ದರೆ ಪಟಾಕಿಯನ್ನು ಸಿಡಿಸುವುದರಿಂದ ಸಣ್ಣ ಪುಟ್ಟ ಗಾಯಗಳು ಆಗಬಹುದು ಹಾಗೂ ದೊಡ್ಡ ಪ್ರಮಾಣದಲ್ಲಿ ಬೆಂಕಿ ಅನಾಹುತಗಳಾಗಬಹುದು. ಈ ಕಾರಣದಿಂದ ದೀಪಾವಳಿ ಹಬ್ಬದ ಸಮಯದಲ್ಲಿ ಜನತೆಯ ಹಿತ ದೃಷ್ಠಿಯಿಂದ ಪಟಾಕಿಯನ್ನು ಸಿಡಿಸುವುದರಲ್ಲಿ ಅಗತ್ಯ ಮುಂಜಾಗ್ರತೆ ವಹಿಸಬೇಕಾಗಿದ್ದು ಈ ನಿಟ್ಟಿನಲ್ಲಿ ಕೆಳಗೆ ಸೂಚಿಸಿರುವ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕೋರಲಾಗಿದೆ.

1. ಸಗಟು ಹಾಗೂ ಚಿಲ್ಲರೆ ಪಟಾಕಿಗಳ ಮಾರಾಟಗಾರರು ಸರ್ಕಾರವು ನಿಗಧಿಪಡಿಸಿದ ಅವಧಿಯಲ್ಲಿ ಹಾಗೂ ನಿಗಧಿತ ಪ್ರದೇಶದಲ್ಲಿಯೇ ಪಟಾಕಿಗಳನ್ನು ಮಾರಾಟ ಮಾಡಬೇಕು.

2. ಆಟಮ್‌ ಬಾಂಬ್‌, ಬೆಳ್ಳುಳ್ಳಿ ಪಟಾಕಿ ಮತ್ತು ಹೆಚ್ಚು ಶಬ್ದ ಮಾಡುವ (೧೨೫ ಡೆಸಿಬಲಗಿಂತ ಹೆಚ್ಚು ಶಬ್ದ ಮಾಡುವ) ಇತರೆ ಪಟಾಕಿಗಳ ಬಳಕೆ ಮಾರಾಟ ಮತ್ತು ಸಿಡಿಸುವುದನ್ನು ನಿಷೇದಿಸಿದೆ. ಇಂತಹ ಪಟಾಕಿ ಹಾಗೂ ಸಿಡಿಮದ್ದು ಮಾರಾಟ ಮಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

3. ಪಟಾಕಿ ಮತ್ತು ಸಿಡಿಮದ್ದುಗಳನ್ನು ವಸತಿ ಪ್ರದೇಶ, ಆಸ್ಪತ್ರೆ, ಪೆಟ್ರೋಲ್‌ಬಂಕ್ಸರ್ಕಾರಿ ಕಛೇರಿಗಳು, ಶಾಲಾ ಪ್ರದೇಶ ಹಾಗೂ ಇತರೆ ಶಬ್ದರಹಿತ ವಲಯದಲ್ಲಿ ಸಿಡಿಸಬಾರದು.

4. ವಿಶಾಲ ಮೈದಾನಗಳಲ್ಲಿ ಎಲ್ಲರೂ ಸಂಘಟಿತರಾಗಿ ಪಟಾಕಿ ಸಿಡಿಸಬೇಕು.

5. ಹಬ್ಬದ ದಿನಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಮನೆಯಲ್ಲಿ ಸಿದ್ದಪಡಿಸಿ ಇಟ್ಟುಕೊಳ್ಳಬೇಕು.

6. ವಾಹನಗಳನ್ನು ಸುರಕ್ಷಿತ ಸ್ಥಳಗಳಲ್ಲಿ ನಿಲ್ಲಿಸುವುದು.

7. ಪಟಾಕಿಗಳನ್ನು ರಾತ್ರಿ ೨೨೦೦ ಗಂಟೆಯಿಂದ ಬೆಳಿಗ್ಗೆ ೦೬೦೦ ಗಂಟೆಯವರೆಗೆ ಸಿಡಿಸಬಾರದು.

8. ಪಟಾಕಿ ಸಿಡಿಸುವ ಸಂದರ್ಭದಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಹತ್ತಿ ಬಟ್ಟೆಗಳನ್ನು ಧರಿಸಿಕೊಳ್ಳತಕ್ಕದ್ದು ಹಾಗೂ ಪಾದರಕ್ಷೆಗಳನ್ನು ಧರಿಸತಕ್ಕದ್ದು.

9. ಶಬ್ದ ಮಾಲಿನ್ಯದಿಂದ ರಕ್ಷಿಸಿಕೊಳ್ಳುವ ಸಲುವಾಗಿ ಕಿವಿಗಳಲ್ಲಿ ಹತ್ತಿ ಉಂಡೆಗಳನ್ನು ಇಟ್ಟುಕೊಳ್ಳತಕ್ಕದ್ದು.

ದೀಪಾವಳಿ ಹಬ್ಬವನ್ನು ಆಚರಿಸಿ ಶಬ್ದ ಹಾಗೂ ವಾಯು ಮಾಲಿನ್ಯ ತಡೆಗಟ್ಟಲು ಸಹಕರಿಸಬೇಕೆಂದು ಮತ್ತೊಮ್ಮೆ ಕೋರಲಾಗಿದೆ.


ಕವಾಯತು ಕಾರ್ಯಕ್ರಮದ ಚರ್ಚಾ ಸಭೆಯ ಮುಂದೂಡಿಕೆ

August 4, 2008

೬೧ ನೇ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಕವಾಯತು ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ದಿನಾಂಕ ೦೫-೦೮-೨೦೦೮ ರಂದು ಅಪರಾಹ್ನ ೦೪೦೦ ಗಂಟೆಗೆ ಏರ್ಪಡಿಸಲಾಗಿದ್ದ ಕವಾಯತು ಕಾರ್ಯಕ್ರಮದ ಚರ್ಚಾ ಸಭೆಯನ್ನು ಅನಿವಾರ್ಯ ಕಾರಣಗಳಿಂದಾಗಿ ದಿನಾಂಕ ೦೬-೦೮-೨೦೦೮ ರಂದು ಬೆಳಗ್ಗೆ ೧೧೦೦ ಗಂಟೆಗೆ ಮುಂದೂಡಲಾಗಿರುತ್ತದೆ. 


ಪೊಲೀಸ್ ತಂಗುದಾಣ ಕಟ್ಟಡದ ಉದ್ಘಾಟನೆ

January 21, 2008

ನೂತನವಾಗಿ ನಿರ್ಮಿಸಿರುವ ಕೋಲಾರ ಜಿಲ್ಲೆಯ ಪೊಲೀಸ್ ತಂಗುದಾಣದ ಉದ್ಘಾಟನೆ ದಿನಾಂಕ ೨೧-೦೧-೨೦೦೮ ರಂದು ನಡೆದಿರುತ್ತದೆ.  ಮಾನ್ಯ ಶ್ರೀ ಬಿ.ದಯಾನಂದ ಐ.ಪಿ.ಎಸ್ ಆರಕ್ಷಕ ಅಧೀಕ್ಷಕರು, ಕೋಲಾರ ಜಿಲ್ಲೆ ರವರು ಉದ್ಘಾಟನೆಯನ್ನು ಮಾಡಿರುತ್ತಾರೆ.  ೨೩೦ ಚದರ ಮೀಟರುಗಳ ವಿಸ್ತೀರ್ಣ ಇರುವ ಈ ಕಟ್ಟಡವನ್ನು ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಕೋಲಾರ ಪೊಲೀಸ್ ವಸತಿಗೃಹಗಳ ಬಳಿ ನಿರ್ಮಿಸಿದ್ದು ಕರ್ತವ್ಯ ನಿಮಿತ್ತ ಅನ್ಯ ಕಡೆಗಳಿಂದ ಬರುವ ಪೊಲೀಸ್ ಸಿಬ್ಬಂದಿಯವರಿಗೆ  ತಾತ್ಕಾಲಿಕ ವಸತಿ ಸೌಕರ್ಯ ಒದಗಿಸುವ ಉದ್ದೇಶದಿಂದ ನಿರ್ಮಿಸಲಾಗಿರುತ್ತದೆ.  ಕಟ್ಟಡದ ನಿರ್ಮಾಣಕಾರ್ಯ ದಿನಾಂಕ ೧೭-೦೫-೨೦೦೫ ರಂದು ಆರಂಭವಾಗಿದ್ದು ದಿನಾಂಕ ೧೫-೧೨-೨೦೦೭ ರಂದು ಮುಕ್ತಾಯವಾಗಿರುತ್ತದೆ.


ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ಸಾರ್ವಜನಿಕರಿಗಾಗಿ ಬಂದೂಕು ತರಬೇತಿ

January 17, 2008

 

ಆತ್ಮರಕ್ಷಣೆ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣದ ಉದ್ದೇಶದಿಂದ ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ಸಾರ್ವಜನಿಕರಿಗಾಗಿ ದಿನಾಂಕ ೦೭-೦೧-೨೦೦೮ ರಿಂದ ೭ ದಿನಗಳ ಕಾಲ ಬಂದೂಕು ತರಬೇತಿಯನ್ನು ನಡೆಸಲಾಗಿರುತ್ತದೆ.  ತರಬೇತಿಯ ಶಿಬಿರದಲ್ಲಿ ಒಟ್ಟು ೭೩ ಜನ ನಾಗರೀಕರು ಪಾಲ್ಗೊಂಡಿದ್ದು ಯಶಸ್ವಿಯಾಗಿ ತರಬೇತಿಯನ್ನು ಪೂರ್ತಿಗೊಳಿಸಿರುತ್ತಾರೆ.  ತರಬೇತಿಯಲ್ಲಿ ಇಬ್ಬರು ಮಹಿಳೆಯರೂ ಸೇರಿದಂತೆ ಒಬ್ಬ ಅಂಗವಿಕಲ ಅಭ್ಯರ್ಥಿಯೂ ಪಾಲ್ಗೊಂಡಿದ್ದು ವಿಶೇಷವಾಗಿರುತ್ತದೆ.

ತರಬೇತಿಯ ಪ್ರಶಸ್ತಿ ವಿತರಣಾ ಸಮಾರಂಭವನ್ನು ದಿನಾಂಕ ೧೬-೦೧-೨೦೦೮ ರಂದು ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ  ಶ್ರೀ ದಯಾನಂದ ಐ.ಪಿ.ಎಸ್ ಆರಕ್ಷಕ ಅಧಿಕ್ಷಕರು ಕೋಲಾರ ಜಿಲ್ಲೆ ರವರು ಪ್ರಮಾಣಪತ್ರಗಳನ್ನು ವಿತರಣೆ ಮಾಡಿರುತ್ತಾರೆ.


ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ಸಾರ್ವಜನಿಕರಿಗಾಗಿ ಬಂದೂಕು ತರಬೇತಿ

December 26, 2007

ಆತ್ಮರಕ್ಷಣೆ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣದ ಉದ್ದೇಶದಿಂದ ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ಸಾರ್ವಜನಿಕರಿಗಾಗಿ ದಿನಾಂಕ ೦೭-೦೧-೨೦೦೮ ರಿಂದ ೭ ದಿನಗಳ ಕಾಲ ಬಂದೂಕು ತರಬೇತಿಯನ್ನು ಆಯೋಜಿಸಲಾಗಿರುತ್ತದೆ.  ತರಬೇತಿಯನ್ನು ಮೇಲ್ಕಂಡ ದಿನಗಳಲ್ಲಿ ಪ್ರತಿದಿನ  ಬೆಳಿಗ್ಗೆ ೦೭೩೦ ಗಂಟೆಯಿಂದ ೦೯೦೦ ಗಂಟೆಯ ಅವಧಿಯಲ್ಲಿ ನೀಡಲಾಗುತ್ತದೆ. ತರಬೇತಿಯ ವೆಚ್ಚ ರೂ. ೩೦೦/ ಆಗಿದ್ದು ಆಸಕ್ತ ನಾಗರೀಕರು ಅರ್ಜಿಯನ್ನು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ, ಗಲ್ ಪೇಟೆ, ಕೋಲಾರ ಇಲ್ಲಿ ಪಡೆಯಬಹುದಾಗಿರುತ್ತದೆ. ಮತದಾರರ ಗುರುತಿನ ಚೀಟಿ ಮತ್ತು ಮೂರು ಭಾವಚಿತ್ರಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ ೦೫-೦೧-೨೦೦೮ ರ ಒಳಗಾಗಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ, ಗಲ್ ಪೇಟೆ, ಕೋಲಾರ ಇಲ್ಲಿ ಸಲ್ಲಿಸಬಹುದು.