ದಿನದ ಅಪರಾಧಗಳ ಪಕ್ಷಿನೋಟ ೧೪ ನೇ ಡಿಸೆಂಬರ್ ೨೦೦೯

December 14, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೧೪-೧೨-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ  

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ  ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೧

ನಂಗಲಿ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ, ಈಗ್ಗೆ ೩ ವರ್ಷಗಳ ಹಿಂದೆ ಸಾವಿತ್ರಮ್ಮ ಎಂಬುವರನ್ನು ಮುಳಬಾಗಿಲು ತಾಲೂಕು ಯಡಹಳ್ಳಿ ಗ್ರಾಮದ ವಾಸಿ ರವಿ ಕುಮಾರ್‍ ಎಂಬುವರಿಗೆ ಮದುವೆ ಮಾಡಿ ಕೊಟ್ಟಿದ್ದರು. ಈಗ ಸುಮಾರು ೬ ತಿಂಗಳಿನಿಂದ ರವಿಕುಮಾರ್‍ ಕುಡಿತಕ್ಕಾಗಿ ತವರು ಮನೆಯಿಂದ ಹಣ ತರುವಂತೆ ಒತ್ತಾಯ ಮಾಡುತ್ತಿದ್ದು, ದಿನಾಂಕ ೧೨-೧೨-೨೦೦೯ ರಂದು ೧೯೦೦ ಗಂಟೆ ಸಮಯದಲ್ಲಿ ಹಣ ತರಲಿಲ್ಲ ಎಂದು ಜಗಳ ತೆಗೆದು ಮಚ್ಚಿನಿಂದ ಕೈಗಳ ಮೇಲೆ, ಸೊಂಟಕ್ಕೆ ಮತ್ತು ಕತ್ತಿನ ಹಿಂಬಾಗಕ್ಕೆ ಹೊಡೆದು ಕೊಲೆ ಮಾಡಲು ಪ್ರಯತ್ನ ಪಟ್ಟಿರುತ್ತಾನೆ.

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ೦೧

ಮಾಲೂರು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೩-೧೨-೨೦೦೯ ರಂದು ೧೯೩೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ಕುಡಿಯನೂರು ಗ್ರಾಮದ ವಾಸಿ ಮಂಜುನಾಥ  ಎಂಬುವರು  ತನ್ನ ಆಟೋ ಸಂಖ್ಯೆ ಕೆಎ-೦೨-ಎ-೧೨೬೪ಅನ್ನು ಚಾಲನೆ ಮಾಡಿಕೊಂಡು ಮಾಲೂರು – ಮಾಸ್ತಿ ರಸ್ತೆಯ ಸಂತಹಳ್ಳಿ ಗೇಟ್ ಬಳಿ  ಬರುತ್ತಿದ್ದರು. ಆ ಸಮಯದಲ್ಲಿ  ಎದುರುಗಡೆಯಿಂದ ಬಂದ ಖಾಸಗಿ ಬಸ್ ಸಂಖ್ಯೆ ಕೆಎ-೦೧-ಎ-೭೨೮ರ ಚಾಲಕ ತನ್ನ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಆಟೋಗೆ ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ಮಂಜುನಾಥ ರವರಿಗೆ ತೀವ್ರತರವಾದ  ಗಾಯಗಳಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ.   

-ಸಾಧಾರಣ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೩-೧೨-೨೦೦೯ ರಂದು ೧೫೦೦ ಗಂಟೆ ಸಮಯದಲ್ಲಿ ಕೋಲಾರ ನಗರದ ಮಿಲ್ಲತ್‌ನಗರ ವಾಸಿ ಅಮೀರ್‌ಜಾನ್ ಎಂಬುವರು  ತನ್ನ ಆಟೋ ಸಂಖ್ಯೆ ಕೆಎ-೦೨-ಎ-೧೨೬೪ಅನ್ನು ಚಾಲನೆ ಮಾಡಿಕೊಂಡು ಕೋಲಾರ ತಾಲೂಕು ರಾಷ್ಟ್ರೀಯ ಹೆದ್ದಾರಿ-೪ ಸೀಸಂದ್ರ ಗೇಟ್ ಬಳಿ ಕೋಲಾರ ಕಡೆ ಬರುತ್ತಿದ್ದರು. ಆ ಸಮಯದಲ್ಲಿ  ಬಂದ ಖಾಸಗಿ ಬಸ್ ಸಂಖ್ಯೆ ಎಪಿ-೦೩-ಎನ್ -೭೯೯೭ರ ಚಾಲಕ ತನ್ನ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಆಟೋಗೆ ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ  ಆಟೋ ಜಖಂಗೊಂಡು ಆಟೋನಲ್ಲಿದ್ದವರಿಗೆ ಗಾಯಗಳಾಗಿರುತ್ತದೆ. 

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೩

ನಂಗಲಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೦-೧೧-೨೦೦೯ ರಂದು ೦೯೪೫ ಮುಳಬಾಗಿಲು ತಾಲೂಕು ಎನ್.ಯಲುವಹಳ್ಳಿ ಗ್ರಾಮದ ವಾಸಿ ಮಂಜುನಾಥ ಎಂಬುವರು ತಮ್ಮ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದರು. ಆ ಸಮಯದಲ್ಲಿ ಅದೇ ಗ್ರಾಮದ ವಾಸಿಯಾದ ಹನುಮಂತರೆಡ್ಡಿ ಎಂಬುವರು ಅವಾಚ್ಚ ಶಬ್ದಗಳಿಂದ ಬೈದು ಸೆನಕೆಯಿಂದ ತಲೆಗೆ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಎರಡು ಅಪರಾಧ  ಪ್ರಕರಣಗಳು ದಾಖಲಾಗಿರುತ್ತವೆ.  ದಿನಾಂಕ: ೧೨-೧೨-೨೦೦೯ ರಂದು ೦೮೩೦ ಗಂಟೆ ಸಮಯದಲ್ಲಿ  ಶ್ರೀನಿವಾಸಪುರ ತಾಲ್ಲೂಕು ಬಂಗವಾದಿ ಗ್ರಾಮದ ವಾಸಿಯಾದ ರಾಜೇಶ್ ಮತ್ತು ಮಂಜುನಾಥ ಎಂಬುವರು   ಹಳೇ ವೈಷ್ಯಮದ ಹಿನ್ನಲೆಯಲ್ಲಿ ಒಬ್ಬರಿಗೊಬ್ಬರು ದೊಣ್ಡೆ ಮತ್ತು ಕೈಗಳಿಂದ ಹೊಡೆದಾಡಿಕೊಂಡು ಗಾಯಗಳನ್ನುಂಟು ಮಾಡಿಕೊಂಡಿರುತ್ತಾರೆ.  ಈ ಬಗ್ಗೆ ದೂರು ಮತ್ತು ಪ್ರತಿದೂರುಗಳು ದಾಖಲಾಗಿರುತ್ತವೆ.

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು: ಇಲ್ಲ  

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ  ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು :  ೭

-ಸ್ಥಳ ದಂಡ ಮೊತ್ತ : ರೂ.೯೦೦/-         

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೩ ನೇ ಡಿಸೆಂಬರ್ ೨೦೦೯

December 12, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೧೩-೧೨-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ  

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ  ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ  

ರಸ್ತೆ ಅಪಘಾತಗಳು: ೦೬

-ಮಾರಣಾಂತಿಕ: ೦೨

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೨-೧೨-೨೦೦೯ ರಂದು ೧೯೦೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಮಲ್ಲಕಚ್ಚನಹಳ್ಳಿ ಗ್ರಾಮದ ವಾಸಿ ಷರಫೂನ್ ಬೀ ಎಂಬುವರು ತಮ್ಮ ಗ್ರಾಮದ ವಾಸಿ ಸುಬ್ಬಣ ಎಂಬುವರ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೪-ಕೆ-೭೧೧೫ರಲ್ಲಿ ಮುಳಬಾಗಿಲು – ತಾಯಲೂರು ರಸ್ತೆಯ ಕನ್ನತ್ತ ಗೇಟ್ ಬಳಿ ಬರುತ್ತಿದ್ದರು. ಆ ಸಮಯದಲ್ಲಿ ಬಂದ ಹೀರೋ ಹೋಂಡಾ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೭-ಆರ್‍-೦೫೭೨ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸುಬ್ಬಣ ರವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ಸುಬ್ಬಣ ಮತ್ತು ಷರಪೂನ್‌ಬೀ ರವರಿಗೆ ತೀವ್ರತರವಾದ ಗಾಯಗಳಾಗಿ ಚಿಕಿತ್ಸೆಗಾಗಿ ಸಾಗಿಸುವ ಮಾರ್ಗ ಮದ್ಯ ಷರಪೋನ್‌ಬೀ ರವರು ಮೃತ ಪಟ್ಟಿದ್ದು ಸುಬ್ಬಣ ರವರು ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ವೇಮಗಲ್ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೧-೧೨-೨೦೦೯ ರಂದು ೧೯೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಶೆಟ್ಟಿಮಾದಮಂಗಲ ಗ್ರಾಮದ ವಾಸಿ ಶ್ರೀನಿವಾಸ ಮತ್ತು ಮುನಿಸ್ವಾಮಿಚಾರಿ   ಎಂಬುವುರ ಟಿವಿಎಸ್ ಹೆವಿ ಡ್ಯೂಟಿ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೭-ಕ್ಯೂ-೮೧೭೦ರಲ್ಲಿ  ಕೋಲಾರ ತಾಲೂಕು ಪಚ್ಚಾರಹಳ್ಳಿ ಒಟಿ ಕೆರೆಯ ಮೋರಿ ಬಳಿ ಬರುತ್ತಿದ್ದರು. ಆ ಸಮಯದಲ್ಲಿ  ದ್ವಿಚಕ್ರ ವಾಹನ  ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ಬದಿಯ ಮೋರಿಗೆ ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಶ್ರೀನಿವಾಸ ರವರಿಗೆ ತೀವ್ರತರವಾದ ಗಾಯಗಳಾಗಿ ಚಿಕಿತ್ಸೆಗಾಗಿ ಸಾಗಿಸುವ ಮಾರ್ಗ ಮದ್ಯ ಮೃತ ಪಟ್ಟಿರುತ್ತಾರೆ.

-ಸಾಧಾರಣ: ೦೪

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೧-೧೨-೨೦೦೯ ರಂದು ೧೯೧೫ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ಆಲಂಗೂರ್‍  ಗ್ರಾಮದ ವಾಸಿ ರಾಮಕೃಷ್ಣ ಎಂಬುವರು  ಆಟೋರಿಕ್ಷಾ  ಸಂಖ್ಯೆ ಕೆಎ-೦೭-೮೪೨೧ರಲ್ಲಿ ಮುಳಬಾಗಿಲು – ಕೆ.ಬ್ಯಯಪಲ್ಲಿ ರಸ್ತೆಯ ಪಂಪ್‌ ಹೌಸ್ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ  ಆಟೋರಿಕ್ಷಾ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮುನಿರೆಡ್ಡಿ ಎಂಬುವರ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೭-ಜೆ-೮೪೩೯ಕ್ಕೆ ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ರಾಮಕೃಷ್ಣ ಮತ್ತು ಮುನಿರೆಡ್ಡಿ ರವರಿಗೆ  ಗಾಯಗಳಾಗಿರುತ್ತದೆ.

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೨-೧೨-೨೦೦೯ ರಂದು ೦೨೩೦ ಗಂಟೆ ಸಮಯದಲ್ಲಿ ಚಿತ್ತೂರು ಜಿಲ್ಲೆ  ಅಂಡಿಗಾದಪಲ್ಲಿ ಗ್ರಾಮದ ವಾಸಿ ನಾರಾಯಣ ಎಂಬುವರು   ಕೋಲಾರ ತಾಲೂಕು ರಾಷ್ಟ್ರೀಯ ಹೆದ್ದಾರಿ-೪ ಕೊಂಡರಾಜನಹಳ್ಳಿ ಬಳಿ ನಡೆದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ  ಬಂದ ಲಾರಿ ಸಂಖ್ಯೆ ಕೆಎ-೦೧-ಬಿ-೪೭೨೨ರ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾರಯಣ  ರವರಿಗೆ ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ಗಾಯಗಳಾಗಿ ಚಿಕಿತ್ಸೆಗಾಗಿ ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೨-೧೨-೨೦೦೯ ರಂದು ೦೫೦೦ ಗಂಟೆ ಸಮಯದಲ್ಲಿ ತಮಿಳುನಾಡಿನ ಪೋಚಂಪಲ್ಲಿ ತಾಲೂಕು ಕಲಾರ್‌ಪತಿ  ಗ್ರಾಮದ ವಾಸಿ ಎಸ್.ತಂಗರಾಜ್ ಎಂಬುವರು  ತನ್ನ ಲಾರಿ ಸಂಖ್ಯೆ ಟಿಎನ್-೨೪-ಎ-೪೫೮೮ಅನ್ನು ಚಾಲನೆ ಮಾಡಿಕೊಂಡು ಕೋಲಾರ ತಾಲೂಕು ರಾಷ್ಟ್ರೀಯ ಹೆದ್ದಾರಿ-೪ ಚಲುವನಹಳ್ಳಿ ಗೇಟ್ ಬಳಿ ಕೋಲಾರ ಕಡೆ ಬರುತ್ತಿದ್ದರು. ಆ ಸಮಯದಲ್ಲಿ  ಬಂದ ಸ್ಯಾಂಟ್ರೋ ಕಾರು ಸಂಖ್ಯೆ ಕೆಎ-೦೪-ಎಂಎಫ್-೨೦೨೫ರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಲಾರಿಗೆ ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ಎರೆಡು ವಾಹನಗಳು ಜಖಂಗೊಂಡು ಕಾರಿನಲ್ಲಿದ್ದವರಿಗೆ ಗಾಯಗಳಾಗಿರುತ್ತದೆ. 

ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೧-೧೨-೨೦೦೯ ರಂದು ೧೮೩೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ನರಸಾಪುರ ಗ್ರಾಮದ ವಾಸಿ ಮುರಳಿ ಮತ್ತು ಇತರರು ಆಟೋ ಸಂಖ್ಯೆ ಕೆಎ-೦೭-೮೬೭೦ರಲ್ಲಿ ನರಸಾಪುರದಿಂದ ಸ್ವಲ್ಪ ಮುಂದೆ ದರ್ಗಾ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ   ಎದರುಗಡೆಯಿಂದ  ಬಂದ ಯಾವುದೋ ಟ್ರಾಕ್ಟರ್‍ ಚಾಲಕ ತನ್ನ ಟ್ರಾಕ್ಟರ್‌ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಆಟೋಗೆ ಡಿಕ್ಕಿ  ಹೊಡೆಸಿರುತ್ತಾನೆ. ಪರಿಣಾಮ ಆಟೋನಲ್ಲಿದ್ದ ಮುರಳಿ ಮತ್ತು ಇತರೆ ಇಬ್ಬರಿಗೆ ಗಾಯಗಳಾಗಿರುತ್ತದೆ. 

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು: ಇಲ್ಲ  

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ  ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು :    ೧೧

-ಸ್ಥಳ ದಂಡ ಮೊತ್ತ : ರೂ. ೧,೪೦೦/-       

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೨ ನೇ ಡಿಸೆಂಬರ್ ೨೦೦೯

December 11, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೧೨-೧೨-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ  

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶಾಲೆಯಲ್ಲಿ ಗ್ಯಾಸ್ ಸಿಲಿಂಡರ್‍ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೦-೧೨-೨೦೦೯ ರಂದು ರಾತ್ರಿ ಯಾರೋ ಕಳ್ಳರು ಕೋಲಾರ ತಾಲೂಕು ಮುದುವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಬೀಗವನ್ನು ಮುರಿದು ಒಳಗೆ ಪ್ರವೇಶ ಮಾಡಿ ರೂ. ೭,೫೦೦/- ಬೆಲೆ ಬಾಳುವ ೩ ಗ್ಯಾಸ್ ಸಿಲಿಂಡರ್‌ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕದರಯ್ಯ, ಪ್ರಭಾರಿ ಬಿಇಓ, ಕೋಲಾರ ತಾಲೂಕು ರವರು ದೂರನ್ನು ದಾಖಲಿಸಿರುತ್ತಾರೆ.

ಸಾಧಾರಣ  ಕಳ್ಳತನ: ಇಲ್ಲ

ವಾಹನ ಕಳ್ಳತನ : ೦೧

ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ಆಟೋ ರಿಕ್ಷಾ ಕಳ್ಳತನಕ್ಕೆ ಸಂಬಂಧಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೦೨-೧೨-೨೦೦೯ ರಂದು ರಾತ್ರಿ ಕೋಲಾರ ನಗರದ ರಹಮತ್‌ನಗರದ ವಾಸಿಗಳಾದ ಬರ್ಕತ್ ಮತ್ತು ನಜೀರ್‍ ಎಂಬುವರು ಕುಂಬಾರಪೇಟೆ ವಾಸಿ ಮುನಾವರ್‌ಪಾಷ ಎಂಬುವರ ಆಟೋರಿಕ್ಷಾ ಸಂಖ್ಯೆ ಕೆಎಲ್-೧೦-ಇ-೯೭೮೮ ಅನ್ನು ಮನೆಯ ಮುಂದೆ ನಿಲ್ಲಿಸಿದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ  

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ೦೧

ನಂಗಲಿ ಪೊಲೀಸ್ ಠಾಣೆಯಲ್ಲಿ ದೊಂಬಿಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ, ದಿನಾಂಕ ೦೭-೧೨-೨೦೦೯ ರಂದು ಮುಳಬಾಗಿಲು ತಾಲೂಕು ಕಂಬಂದಿನ್ನೆ ವಾಸಿ ಅರುಣಮ್ಮ ಎಂಬುವರ ಮೇಲೆ ಜಮೀನಿನ ವಿಚಾರದಲ್ಲಿ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ ಚಂಬಕೂರು ನಾರಾಯಣಪ್ಪ ಮತ್ತು ಇತರರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಜಗಳತೆ ತೆಗೆದು ಹೊಡೆದು ಗಾಯ ಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಹಲ್ಲೆ: ಇಲ್ಲ

ಇತರೆ: ೦೧

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಸಿಮೆಂಟ್ ಗೋಡೆ ಕುಸಿದು ಮೃತ ಪಟ್ಟಿರುವ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೦-೧೧-೨೦೦೯ ರಂದು ೨೩೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಹಾರೋಹಳ್ಳಿ ವಾಸಿ ನಾಗರಾಜ ಮತ್ತು ಒರಿಸ್ಸಾ ರಾಜ್ಯದ ವಾಸಿ ಪೆಂಗಾ ಶ್ರೀನಿವಾಸ ಎಂಬುವರು ಗಾಜಲದಿನ್ನೆ ಗೇಟ್ ಬಳಿ ಎನ್‌ಹೆಚ್‌-೪ ರಸ್ತೆ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆ ಸಮಯದಲ್ಲಿ ಲ್ಯಾಂಕೋ ಕಂಪನಿ ಅಧಿಕಾರಿಗಳಾದ ನಿರ್ಲಕ್ಷ್ಯದಿಂದ ಸಿಮೆಂಟ್ ಗೋಡೆ ಕುಸಿದು ನಾಗರಾಜಪ್ಪ ಮತ್ತು ಪೆಂಗ ಶ್ರೀನಿವಾಸ ರವರ ಮೇಲೆ ಬಿದ್ದು ಗಾಯಗಳಾಗಿ ಚಿಕಿತ್ಸೆಗಾಗಿ ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಪೆಂಗ ಶ್ರೀನಿವಾಸ ಮೃತ ಪಟ್ಟಿರುತ್ತಾನೆ.  

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು: ಇಲ್ಲ  

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ  ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು :      ಇಲ್ಲ

-ಸ್ಥಳ ದಂಡ ಮೊತ್ತ : ರೂ. ಇಲ್ಲ       

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


: ಜೂಜಾಟ ದಾಳಿ: ೧೩ ಜನರ ಬಂದನ: ೫ ದ್ವಿಚಕ್ರ ವಾಹನ , ೧೩ ಮೊಬೈಲ್ ಮತ್ತು ರೂ. ೩೦,೧೨೦/- ವಶ :

December 11, 2009

ಕೋಲಾರ ನಗರ ಠಾಣೆಯ ಆರಕ್ಷಕ ಉಪ-ನಿರೀಕ್ಷಕರಾದ ಶ್ರೀ ಎಸ್.ವೈ.ಮೊಹನ್ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಕೋಲಾರ ನಗರದ ಎಪಿಎಂಸಿ ಮಾರುಕಟ್ಟೆ ಬಳಿ ಹಣವನ್ನು ಪಣವಾಗಿಟ್ಟು ಅಂದರ್‍ ಬಾಹರ್‍ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ಮಾಡಿ ೧೩ ಜನರನ್ನು ಬಂದಸಿ ೫ ದ್ವಿಚಕ್ರ ವಾಹನ , ೧೩ ಮೊಬೈಲ್ ಮತ್ತು ರೂ. ೩೦,೧೨೦/- ಗಳನ್ನು  ವಶ ಪಡಿಸಿಕೊಂಡಿರುತ್ತಾರೆ.

ಬಂದಿತರ ವಿವರಗಳು:

  • ಸಲೀಂ ಬಿನ್ ಲೇಟ್ ಶೇಕ್ ಅಹ್ಮದ್, ೩೭ ವರ್ಷ, ಟೈಲರ್‍, ದೇವಾಂಗಪೇಟ್, ಕೋಲಾರ.
  • ಅಯ್ಯೂಬ್ ಬಿನ್ ಲೇಟ್  ಅಹ್ಮದ್ ಸಾಬ್, ೪೦ ವರ್ಷ, ಟೈಲರ್‍, ರಹಮತ್‌ನಗರ, ಕೋಲಾರ.
  • ಷಹಜಾನ್  ಬಿನ್ ಅಬ್ದುಲ್ ರವೂಫ್, ೪೮ ವರ್ಷ, ರೇಷ್ಮೆ ವ್ಯಾಪಾರಿ, ನೂರ್‌ ನಗರ್‍, ಕೋಲಾರ.
  • ಆಶೋಕ ಬಿನ್ ನಾರಯಣಪ್ಪ, ೩೨ ವರ್ಷ, ೨ನೇ ಕ್ರಾಸ್, ಗಣೇಶ ಬ್ಲಾಕ್, ಸುಲ್ತಾನ್ ಪಾಳ್ಯ, ಬೆಂಗಳೂರು.
  • ಗಜೇಂದ್ರ ಬಿನ್ ಲೇಟ್ ಮುನಿಯಪ್ಪ, ೩೫ ವರ್ಷ, ಜನಘಟ್ಟ, ಕೋಲಾರ ತಾಲೂಕು
  • ತಬರೇಜ್ ಬಿನ್ ಲೇಟ್ ಬಹದ್ದೂರ್‍ ಸಾಬ್, ೨೭ ವರ್ಷ, ಹವೇಲಿ ಮೊಹಲ್ಲಾ, ಕೋಲಾರ,
  • ಇಕ್ಬಾಲ್ ಬಿನ್ ಅಬ್ದುಲ್ ಜಬ್ಬಾರ್‍, ೩೪ ವರ್ಷ, ರೇಷ್ಮೇ ವ್ಯಾಪಾರಿ, ಕುಂಬಾರಪೇಟೆ, ಕೋಲಾರ.
  • ಮುರಳಿ ಕೃಷ್ಣ ಬಿನ್ ಲೇಟ್ ನಾರಾಯಣ, ೩೬ ವರ್ಷ, ಧರ್ಮರಾಯನಗರ, ಕೋಲಾರ.
  • ಅಯ್ಯೂಬ್ ಬಿನ್ ಕರೀಂ, ೨೫ ವರ್ಷ, ಅಮ್ಮವಾರಿಪೇಟೆ, ಕೋಲಾರ.
  • ಅಫ್ಜಲ್ ಬಿನ್ ಲೇಟ್ ಅಮೀರ್‍ ಜಾನ್, ೩೬ ವರ್ಷ, ರಹಮತ್‌ನಗರ, ಕೋಲಾರ.
  • ಸೈಯದ್ ಅಷೋರ್‍ ಬಿನ್ ಲೇಟ್ ಕಾಸಿಂ ಸಾಬ್, ೪೫ ವರ್ಷ, ಬೀಡಿ ಕಾಲೋನಿ, ಕೋಲಾರ,
  • ಚಂದ್ರಪ್ಪ, ಬಿನ್ ಸೀನಪ್ಪ @ ಕೆ.ವಿ.ಶ್ರೀನಿವಾಸಗೌಡ, ೩೩ ವರ್ಷ, ಕುರುಬೂರು, ಚಿಂತಾಮಣಿ ತಾಲೂಕು.
  • ಶಿವಣ್ಣ ಬಿನ್ ಚಿಕ್ಕ ಮುನಿಯಪ್ಪ, ೩೫ ವರ್ಷ, ಜನಘಟ್ಟ, ಕೋಲಾರ ತಾಲೂಕು.

ಈ ಬಗ್ಗೆ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೧ ನೇ ಡಿಸೆಂಬರ್ ೨೦೦೯

December 11, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೧೧-೧೨-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೨

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೫-೧೨-೨೦೦೯ ರಂದು೨೩೩೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಗೌಡನಹಳ್ಳಿ ಗ್ರಾಮದ ವಾಸಿ ಮಾರಪ್ಪ ಎಂಬುವರ ಮಗಳಾದ ಕುಮಾರಿ ನೇತ್ರಾವತಿ(೧೫) ಎಂಬುವರು  ಮೂತ್ರ ವಿಸರ್ಜನೆಗೆಂದು ಹೊರಗೆ ಮತ್ತೆ ಮನೆಯ ಒಳಗೆ ಹೋಗುವಷ್ಠರಲ್ಲಿ ಅದೇ ಗ್ರಾಮದ ವಾಸಿ ಎನ್.ವೆಂಕಟರಾಮಪ್ಪ ಎಂಬುವನು ಬಂದು ತನ್ನ ಬಾಯಿಯನ್ನು ಕಿರುಚಾಡದಂತೆ ಮುಚ್ಚಿಕೊಂಡು ಬಾಗಿಗೆ ಬಟ್ಟೆ ತುರುಕಿ ತನ್ನ ಇಷ್ಠಕ್ಕೆ ವಿರುದ್ದವಾಗಿ ಹಠಸಂಭೋಗ ಮಾಡಿರುತ್ತಾನೆ.

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೫-೦೮-೨೦೦೫ ರಂದು ಶ್ರೀನಿವಾಸಪುರ ಪಟ್ಟಣದ ಜಾಕೀರ್‍ ಹುಸೇನ್ ಮೊಹಲ್ಲಾ ವಾಸಿ ಅಖಿಲಾ ಖಾನಂ ಎಂಬುವರನ್ನು ಅಬ್ದುಲ್ ಪಾಷಾ ಎಂಬುವರಿಗೆ ಬಂಗಾರದ ಒಡವೆ, ೨ ಲಕ್ಷ ನಗದು ವರದಕ್ಷಿಣೆಯಾಗಿ ಕೊಟ್ಟು ಮದುವೆ ಮಾಡಿ ಕೊಟ್ಟಿದ್ದರು. ನಂತರ ಇನ್ನು ೧ ಲಕ್ಷ ರೂ ವರದಕ್ಷಿಣೆ ಹಣ ತರುವಂತೆ ಒತ್ತಾಯ ಮಾಡಿದ್ದು, ರೂ. ೫೦,೦೦೦/- ಗಳನ್ನು ತಂದು ಕೊಟ್ಟರು ಗಂಡ ಅಬ್ದುಲ್ ಪಾಷ ಮತ್ತು ಅವರ ಮನೆಯವರು ದಿನಾಂಕ ೧೦-೧೨-೨೦೦೯ ರಂದು ೧೦೦೦ ಗಂಟೆ ಸಮಯದಲ್ಲಿ ವರದಕ್ಷಿಣೆ ವಿಚಾರದಲ್ಲಿ ಜಗಳ ತೆಗೆದು ಮಾನಸಿ ಮತ್ತು ದೈಹಿಕ ಹಿಂಸೆ ನೀಡಿ ಮುಖಕ್ಕೆ ಹೊಡೆದು ಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

ವೇಮಗಲ್ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೦-೧೨-೨೦೦೯ ರಂದು ೧೭೪೫ ಗಂಟೆ ಸಮಯದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಖ್ಯೆ ಕೆಎ-೦೧-ಎಫ್-೮೪೦೨ ರ ಚಾಲಕ ತನ್ನ ಬಸ್ಸನ್ನು ಚಾಲನೆ ಮಾಡಿಕೊಂಡು ರಾಷ್ಟ್ರೀಯ ಹೆದ್ದಾರಿ-೪ರ ಮಾಲೂರು ಕ್ರಾಸ್ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಬೆಂಗಳೂರು ಕಡೆಯಿಂದ ಬಂದ ಖಾಸಗಿ ಬಸ್ಸು ಸಂಖ್ಯೆ ಕೆಎ-೫೧-೪೨೮೯ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಹೆಚ್.ಎಸ್.ಲೋಕೇಶ ಮತ್ತು ನಿರ್ವಾಹಕ ಪುಟ್ಟಸ್ವಾಮಿ ರವರಿಗೆ ಗಾಯಗಳಾಗಿರುತ್ತದ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ೦೧

ಕೋಲಾರ ನಗರ ಪೊಲೀಸ ಠಾಣೆಯಲ್ಲಿ ಹುಡುಗಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ೦೬-೧೨-೨೦೦೯ ರಂದು ೧೫೦೦ ಗಂಟೆ ಸಮಯದಲ್ಲಿ ಕೋಲಾರನಗರ ಹಳೇ ಬಡಾವಣೆ ವಾಸಿ ಲಕ್ಷ್ಮೀನಾರಾಯಣ ಎಂಬುವರ ಮಗಳಾದ ಕುಮಾರಿ ಪ್ರೀತಿ (೧೯) ಎಂಬುವರು ಸ್ನೇಹಿತಳ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೋದವರು ವಾಪಸ್ಸು ಬಾರದೆ ಕಾಣೆಯಾಗಿರುತ್ತಾರೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು :

-ಸ್ಥಳ ದಂಡ ಮೊತ್ತ : ರೂ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೧೦ ನೇ ಡಿಸೆಂಬರ್ ೨೦೦೯

December 9, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೧೦-೧೨-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ  

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ  ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೮-೧೨-೨೦೦೯ ರಂದು ೧೬೩೦ ಗಂಟೆ ಸಮಯದಲ್ಲಿ ಆನೇಕಲ್ ತಾಲೂಕು ಮೇಡಹಳ್ಳಿ ಗ್ರಾಮದ ವಾಸಿಗಳಾದ ರಮೇಶ ಮತ್ತು ಇತರರು ತಮ್ಮ ಮ್ಯಾಕ್ಸಿ ಕ್ಯಾಬ್ ವಾಹನ ಸಂಖ್ಯೆ ಕೆಎ-೫೧-೯೩೪೩ರಲ್ಲಿ ರಾಷ್ಟ್ರೀಯ ಹೆದ್ದಾರಿ-೪ ವಡಗೂರು ಗೇಟ್ ಕೋಲಾರ ಕಡೆ ಬರುತ್ತಿದ್ದರು. ಆ ಸಮಯದಲ್ಲಿ ಕೋಲಾರ ಕಡೆಯಿಂದ ಬಂದ ಟ್ರೇಲರ್‍ ಸಂಖ್ಯೆ ಎನ್ಎಲ್-೦೧-ಡಿ-೨೬೧೯ ರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ  ರಮೇಶ ಮತ್ತು  ಇತರೆ ೬ ಜನರಿಗೆ ಗಾಯಗಳಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು: ೦೧

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕವಾಗಿ ಮೃತ ಪಟ್ಟಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೯-೧೨-೨೦೦೯ ರಂದು ೧೭೩೦ ಗಂಟೆ ಸಮಯದಲ್ಲಿ  ಪೀಲೇರಿ ತಾಲೂಕು  ಕದಿರಾಮಚರುವು ಗ್ರಾಮದ ವಾಸಿ  ಹರಿನಾಥ (೩೦) ಎಂಬುವರು  ಮಹಡಿ ಮೆಟ್ಟಿಲುಗಳಿಂದ ಇಳಿಯುತ್ತಿದ್ದ ಸಮಯದಲ್ಲಿ ಕುಸಿದು ಬಿದ್ದು ಮೃತ ಪಟ್ಟಿರುತ್ತಾರೆ.  

ವ್ಯಕ್ತಿ ಕಾಣೆ ಪ್ರಕರಣಗಳು: ೦೧

ಮಾಲೂರು ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೭-೧೨-೨೦೦೯ ರಂದು ಮಾಲೂರು ತಾಲೂಕು ದಿನ್ನೇರಿಹಾರೋಹಳ್ಳಿ ವಾಸಿ ಚಂದ್ರಪ್ಪ ಎಂಬುವರ ಮಗಳಾದ ಕುಮಾರಿ ಶಿಲ್ಪಾ(೧೯) ಎಂಬುವರು ಮಾಲೂರು ತಾಲೂಕು ಸಂತಹಳ್ಳಿ ಕ್ರಾಸ್ ಬಳಿ ಇರುವ ಗಾರ್‌ಮೆಂಟ್ಸ್ ಫ್ಯಾಕ್ಟರಿಗೆ ಕೆಲಸಕ್ಕೆಂದು ಹೋದವಳು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ.

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ  ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು :      

-ಸ್ಥಳ ದಂಡ ಮೊತ್ತ : ರೂ.        

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


:: ಜೂಜಾಟ ದಾಳಿ: ೮ ಜನರ ಬಂದನ: ರೂ. ೨,೭೦೦/- ವಶ ::

December 9, 2009

ದಿನಾಂಕ ೦೯-೧೨-೨೦೦೯ ರಂದು ೧೬೪೫ ಗಂಟೆ ಸಮಯದಲ್ಲಿ ಕೋಲಾರ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶ್ರೀ ಧನುಂಜಯ ಕುಮಾರ್‍ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ಕೋಲಾರ ತಾಲೂಕು ಜಂಗಾಲಹಳ್ಳಿ ಗ್ರಾಮ ಕೆರೆಯ ಅಂಗಳದ ಅರಣ್ಯ ಪ್ರದೇಶದಲ್ಲಿ ಹಣವನ್ನು ಪಣವಾಗಿಟ್ಟು ಅಂದರ್‍ ಬಾಹರ್‍ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ಮಾಡಿ ೮ ಜನರನ್ನು ಬಂದಿಸಿ ಪಣವಾಗಿಟ್ಟಿದ್ದ ರೂ. ೨,೭೦೦/- ಗಳನ್ನು ವಶ ಪಡಿಸಿಕೊಂಡಿರುತ್ತಾರೆ.

ಬಂದಿತರ ವಿವರಗಳು:

  • ಮುನಿರಾಜು ಬಿನ್ ಲೇಟ್ ಮುನಿಯಪ್ಪ, ವಡಗೆರೆ, ಕೋಲಾರ ತಾಲೂಕು.
  • ಚಿನ್ನಪ್ಪ ಬಿನ್  ಅಪ್ಪಯ್ಯ, ಶೆಟ್ಟಿಗಾನಹಳ್ಳಿ, ಕೋಲಾರ ತಾಲೂಕು.
  • ವೆಂಕಟೇಶಪ್ಪ ಬಿನ್ ವೆಂಕಟರಾಮಪ್ಪ, ಮಾಗೇರಿ, ಬಂಗಾರಪೇಟೆ ತಾಲೂಕು.
  • ಮುನಿರಾಜು ಬಿನ್ ಮುನಿಯಪ್ಪ, ವಡಗೆರೆ, ಕೋಲಾರ ತಾಲೂಕು.
  • ಮುನಿಬೈರಪ್ಪ ಬಿನ್ ಚಿಕ್ಕಮುನಿಯಪ್ಪ, ಮುದುವತ್ತಿ, ಕೋಲಾರ ತಾಲೂಕು.
  • ನಾರಾಯಣಸ್ವಾಮಿ ಬಿನ್ ಯಲ್ಲಪ್ಪ, ಪಾರ್ಶ್ವಗಾನಹಳ್ಳಿ, ಕೋಲಾರ ತಾಲೂಕು.
  • ವೆಂಕಟೇಶ ಬಿನ್  ಮುನಿಯಪ್ಪ, ವಡಗೆರೆ, ಕೋಲಾರ ತಾಲೂಕು.
  • ಪ್ರಕಾಶ ಬಿನ್ ರಾಮಪ್ಪ, ಗಾಜಲದಿನ್ನೆ, ಕೋಲಾರ ತಾಲೂಕು.

 

ಈ ಬಗ್ಗೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೦೯ ನೇ ಡಿಸೆಂಬರ್ ೨೦೦೯

December 8, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೦೯-೧೨-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ  

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶಾಲೆಗಳಲ್ಲಿ ಕಳ್ಳತನ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೫-೧೨-೨೦೦೯ ಮತ್ತು ೦೬-೧೨-೨೦೦೯ ರ ರಾತ್ರಿ ಯಾರೋ ಕಳ್ಳರು ಕೋಲಾರ ತಾಲೂಕು ಬೆತ್ತನಿ, ಶೆಟ್ಟಿಗಾನಹಳ್ಳಿ, ವಕ್ಕಲೇರಿ, ಮಡೇರಹಳ್ಳಿ, ಅರಾಭಿಕೊತ್ತನೂರು, ಚೌಡದೇನಹಳ್ಳಿ ಮತ್ತು ಬೆಗ್ಲಿಹೊಸಹಳ್ಳಿ ಗ್ರಾಮಗಳಲ್ಲಿರುವ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಗಳ ಬೀಗಗಳನ್ನು ಮುರಿದು ಒಳಗೆ ಪ್ರವೇಶ ಮಾಡಿ ರೂ. ೫,೯೦೦/- ಬೆಲೆ ಬಾಳುವ ಗ್ಯಾಸ್ ಸಿಲಿಂಡರ್‌ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕದರಯ್ಯ, ಬಿ.ಇ.ಓ., ಕೋಲಾರ ರವರು ದೂರುನ್ನು ದಾಖಲಿಸಿರುತ್ತಾರೆ.

ಸಾಧಾರಣ  ಕಳ್ಳತನ: ಇಲ್ಲ

ವಾಹನ ಕಳ್ಳತನ : ೦೧

ನಂಗಲಿ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ: ೦೪-೧೨-೨೦೦೯ ರಂದು ೧೭೩೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲ್ಲೂಕು ಕೆ.ಬೈಯಪಲ್ಲಿ ಗ್ರಾಮದ ವಾಸಿ ಹಾಗೂ ಆರ್‍.ಎಂ.ಪಿ. ವೈದ್ಯರಾದ  ಎ.ಗಂಗಾಧರ್‍ ಎಂಬುವರು ತಮ್ಮ ಹೀರೋ ಹೋಡಾ ಫ್ಯಾಷನ್ ದ್ವಿಚಕ್ರ ವಾಹನ ಸಂ. ಕೆಎ-೦೭-ಕೆ-೮೯೭೪ ಅನ್ನು ತಮ್ಮ  ಆಸ್ಪತ್ರೆಯ ಮುಂಭಾಗದಲ್ಲಿ ನಿಲ್ಲಿಸಿದ್ದರು.  ಅ ಸಮಯದಲ್ಲಿ ಯಾರೋ ಕಳ್ಳರು ಸದರಿ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಕಳುವಾಗಿರುವ ವಾಹನದ ಬೆಲೆ ಸುಮಾರು ರೂ. ೨೦,೦೦೦/- ಎಂದು ಗಂಗಾಧರ್‍ ರವರು ತಮ್ಮ ದೂರಿನಲ್ಲಿ ತಿಳಿಸಿರುತ್ತಾರೆ.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೧

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲೂಕು ಯಲ್ದೂರು ಗ್ರಾಮದ ವಾಸಿ ಶ್ರೀಮತಿ ವಿಮಲ ಎಂಬುವರನ್ನು ಅದೇ ಗ್ರಾಮದ ವಾಸಿ ಮಂಜುನಾಥ ಎಂಬುವರಿಗೆ ಮದುವೆ ಮಾಡಿಕೊಟ್ಟಿದ್ದು, ದಿನಾಂಕ ೨೩-೦೮-೨೦೦೯ ರಂದು ೧೨೩೦ ಗಂಟೆ ಸಮಯದಲ್ಲಿ ಮಂಜುನಾಥ ಮತ್ತು ಅವರ ಮನೆಯವರು ಮನೆ ಬಿಟ್ಟು ಹೋಗುವಂತೆ ಒತ್ತಾಯ ಮಾಡಿ ಕೈಗಳಿಂದ ಹೊಡೆದು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಪ್ರಾಣ ತೆಗೆಯುವುದಾಗಿ ಬೆದರಿಕೆ ಹಾಕಿರುತ್ತಾರೆ.

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೨

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೮-೧೨-೨೦೦೯ ರಂದು ೦೭೩೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ವಿ.ಗುಟ್ಟಹಳ್ಳಿ ಗ್ರಾಮದ ವಾಸಿ ವಿ.ಸಂತೋಷ್ ಮತ್ತು ಕಾಮನೂರು ಗ್ರಾಮದ ವಾಸಿಗಳಾದ ಚಂದ್ರಶೇಖರ್‍ ಮತ್ತು ಮುನೇಂದ್ರ ಎಂಬುವರು ತಮ್ಮ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೮-ಕೆ-೫೭೮೪ಅನ್ನು ನಿಲ್ಲಿಸಿಕೊಂಡು ಮದರಸಾ ಬಳಿ ರಸ್ತೆ ಬದಿಯಲ್ಲಿ ನಿಂತು ಮಾತನಾಡುತ್ತಿದ್ದರು. ಆ ಸಮಯದಲ್ಲಿ ಕೋಲಾರ ಕಡೆಯಿಂದ ಬಂದ ಖಾಸಗಿ ಬಸ್ ಸಂಖ್ಯೆ ಕೆಎ-೦೭-ಸಿ-೩೯೯೯ ರ ಚಾಲಕ ತನ್ನ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ಸಂತೋಷ್, ಚಂದ್ರಶೇಖರ್‍ ಮತ್ತು ಮುನೇಂದ್ರ ರವರಿಗೆ ಗಾಯಗಳಾಗಿರುತ್ತದೆ.

ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೮-೧೨-೨೦೦೯ ರಂದು ೧೧೩೦ ಗಂಟೆ ಸಮಯದಲ್ಲಿ ಮುಳಬಾಗಿಲು ತಾಲೂಕು ನಂಗಲಿ ಗ್ರಾಮದ ವಾಸಿ ಸೈಯದ್ ಅಮೀರ್‍ ಎಂಬುವರು  ಕೋಲಾರ ಡೂಂಲೈಟ್ ಸರ್ಕಲ್‌ನಲ್ಲಿ ಕೆ.ಜಿ.ಎಫ್.ಗೆ ಹೋಗಲು ಬಸ್ಸಿಗಾಗಿ ಕಾಯುತ್ತಾ ನಿಂತಿದ್ದರು.   ಆ ಸಮಯದಲ್ಲಿ ಕ್ಲಾಕ್ ಟವರ್‍ ಕಡೆಯಿಂದ ಬಂದ ಕೆ.ಎಸ್.ಆರ್‌.ಟಿ.ಸಿ. ಬಸ್ ಸಂಖ್ಯೆ ಕೆಎ-೦೭-ಎಫ್-೮೪೩ ರ ಚಾಲಕ ತನ್ನ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ಸೈಯದ್ ಅಮೀರ್‍ ರವರಿಗೆ ಗಾಯಗಳಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೪-೧೨-೨೦೦೯ ರಂದು ೨೦೪೫ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ಕುಪ್ಪೂರು ಗ್ರಾಮದ ವಾಸಿ ಮುನಿಯಪ್ಪ ಎಂಬುವರ ಮೇಲೆ  ಅದೇ ಗ್ರಾಮದ ವಾಸಿಯಾದ  ಮಾರಪ್ಪ ಎಂಬುವರು ಹಳೇ ದ್ವೇಷದ  ಹಿನ್ನೆಲೆಯಲ್ಲಿ  ಮುನಿಯಪ್ಪ ಮತ್ತು ಅವರ ಹೆಂಡತಿ ಮಲಗಿದ್ದ ಸಮಯದಲ್ಲಿ ಕಲ್ಲಿನಿಂದ ತಲೆಗೆ ಮತ್ತು ಕಣ್ಣಿಗೆ ಹೊಡೆದು ಗಾಯಪಡಿಸಿರುತ್ತಾನೆ.

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು: ೦೧

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಮೃತ ಪಟ್ಟಿರುವ ಬಗ್ಗೆ  ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೩೧-೦೭-೨೦೦೯ ರಂದು ಮಾಲೂರು ತಾಲೂಕು ಹಳೇಹಳ್ಳಿ ಗ್ರಾಮದ ವಾಸಿ ಶ್ರೀಮತಿ ವರಲಕ್ಷ್ಮೀ ಎಂಬರಿಗೆ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ ೦೮-೧೨-೨೦೦೯ ರಂದು ೧೩೩೦ ಗಂಟೆ ಸಮಯದಲ್ಲಿ ಮೃತ ಪಟ್ಟಿರುತ್ತಾರೆ.  

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ  ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು :   ೨೧   

-ಸ್ಥಳ ದಂಡ ಮೊತ್ತ : ರೂ.೩,೦೦೦/-       

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೦೭ ನೇ ಡಿಸೆಂಬರ್ ೨೦೦೯

December 6, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೦೭-೧೨-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ  

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೨

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೬-೧೨-೨೦೦೯ ರಂದು ರಾತ್ರಿ ಯಾರೋ ಕಳ್ಳರು ಕೋಲಾರ ತಾಲೂಕು ಅಂತರಗಂಗೆ ಯಲ್ಲಿರುವ ಶಿವ ದೇವಸ್ಥಾನದ ಬೀಗವನ್ನು ಮುರಿದು ಒಳಗೆ ಪ್ರವೇಶ ಮಾಡಿ ಹುಂಡಿಯಲ್ಲಿದ್ದ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕೆ.ಎಸ್.ಮಂಜುನಾಥ ದೀಕ್ಷಿತ್, ದೇವಸ್ಥಾನ ಅರ್ಚಕರು ದೂರನ್ನು ದಾಖಲಿಸಿರುತ್ತಾರೆ.

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಕಳ್ಳತನಕ್ಕೆ ಪ್ರಯತ್ನ ಪಟ್ಟಿರುವ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೬-೧೨-೨೦೦೯ ರಂದು ರಾತ್ರಿ ೦೩೦೦ ಗಂಟೆ ಸಮಯದಲ್ಲಿ ಯಾರೋ ಕಳ್ಳರು ಮುಳಬಾಗಿಲು ತಾಲೂಕು ವಿರೂಪಾಕ್ಷಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಬೀಗವನ್ನು ಮುರಿದು ಒಳಗೆ ಪ್ರವೇಶ ಮಾಡಿ ಎಣ್ಣೆ, ಬೇಳೆ ಕಾಳುಗಳು ಮತ್ತು ಅಲ್ಯೂಮಿನಿಯಂ ಪಾತ್ರೆಗಳುನ್ನು ಕಳುವು ಮಾಡಿ ದ್ವಿಚಕ್ರ ವಾಹನ ಸಂಖ್ಯೆ ಕೆಎ-೦೫-ಇಕ್ಯೂ-೭೮೬೨ರಲ್ಲಿ ಸಾಗಿಲು ಪ್ರಯತ್ನ ಪಡುತ್ತಿದ್ದ ಸಮಯದಲ್ಲಿ ಮುಖ್ಯೋಪಾಧ್ಯಾರು ಬರುವುದನ್ನು ಕಂಡು ವಾಹನ ಸ್ಥಳದಲ್ಲಿಯೇ ಬಿಟ್ಟು ಹೊರಟು ಹೋಗಿರುತ್ತಾನೆ. ಈ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾರಾದ ಎಂ.ಶ್ರೀನಿವಾಸಯ್ಯ ರವರು ದೂರನ್ನು ದಾಖಲಿಸಿರುತ್ತಾರೆ.

ಸಾಧಾರಣ  ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ೦೨

ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೯-೦೨-೧೯೯೬ ರಂದು ರುಕ್ಮಿಣಿಯಮ್ಮ ಎಂಬುವರನ್ನು ಕೋಲಾರ ನಗರದ ಗಾಂದೀನಗರದ ವಾಸಿ ನಾಗರಾಜು ಎಂಬುವನಿಗೆ ಬಂಗಾರದ ಒಡವೆ ಮತ್ತು ರೂ. ೨೦,೦೦೦/-ಗಳನ್ನು ವರದಕ್ಷಿಣೆಯಾಗಿ ನೀಡಿ ಸಂಪ್ರದಾಯದಂತೆ ಮದುವೆ ಮಾಡಿ ಕೊಟ್ಟಿದ್ದರು. ನಂತರ ನಾಗರಾಜ, ನಂಜಮ್ಮ ಮತ್ತು ತುಳಸಿದೇವಿ ಎಂಬುವರು ಇನ್ನು ಹೆಚ್ಚಿನ ವರದಕ್ಷಿಣೆ ತರುವಂತೆ ಒತ್ತಾಯ ಮಾಡಿ   ಕೈಗಳಿಂದ ಹೊಡೆದು ಆಸೀಡ್ ಹಾಕಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ.

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಜಾತಿ ನಿಂದನೆ ಮಾಡಿರುವ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೧-೧೦-೨೦೦೯ ರಂದು ೧೮೩೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಪಣಸಮಾಕನಹಳ್ಳಿ ಗ್ರಾಮದ ವಾಸಿ ವೆಂಕಟರವಣಪ್ಪ ಎಂಬುವರ ಮಗಳಾದ ಕುಮಾರಿ ಡಿ.ವಿ.ಶೋಭ(೧೬) ಎಂಬುವರು ಬರ್ಹಿದೆಸೆಗೆಂದು ತಮ್ಮ ಗ್ರಾಮದ ಸುಬ್ಬರಾಯಪ್ಪ ರವರ ಕಂಬಳಿ ತೋಟದ ಕಡೆ ಹೋಗುತ್ತಿದ್ದರು. ಆ ಸಮಯದಲ್ಲಿ ಅದೇ ಗ್ರಾಮದ ವಾಸಿಗಳಾದ ಸುರೇಶ ಬಿನ್ ಚಿಕ್ಕರಾಮಪ್ಪ, ನಾಗೇಶ ಬಿನ್ ವೆಂಕಟರೆಡ್ಡಿ, ನಾಗರಾಜ ಬಿನ್ ವೆಂಕಟೇಶಪ್ಪ ಮತ್ತು ಸುರೇಶ ಬಿನ್ ಮುನಿಯಪ್ಪ ಎಂಬುವರು ಬಲವಂತವಾಗಿ ಶೋಭ ರವರನ್ನು ಪಕ್ಕದ ಮಾವಿನ ತೋಪಿನಲ್ಲಿ ಎಳೆದುಕೊಂಡು ಹೋಗಿ ಕಿರುಚಾಡಿದರು ಬಿಡದೆ ತನ್ನ ಇಷ್ಟಕ್ಕೆ ವಿರುದ್ದವಾಗಿ ಒಬ್ಬರನಂತರ ಒಬ್ಬರು ಹಟಸಂಭೋಗ ಮಾಡಿರುತ್ತಾರೆ.

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೨

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೭-೧೨-೨೦೦೯ ರಂದು ೦೨೩೦ ಗಂಟೆ ಸಮಯದಲ್ಲಿ ಕೇರಳ ರಾಜ್ಯದ ಪಾಂಡೀಚರಿ ವಾಸಿಯಾದ ಆರ್‍.ಜಯಮೂರ್ತಿ ಎಂಬುವರು ತನ್ನ ವಾಹನ ಸಂಖ್ಯೆ ಪಿವೈ-೦೧-ಎಲ್-೩೬೨೭ ವಾಹನದಲ್ಲಿ ತಿರುಪತಿ ಯಿಂದ ಬೆಂಗಳೂರಿಗೆ ಹೋಗಲು ರಾಷ್ಟ್ರೀಯ ಹೆದ್ದಾರಿ-೪ ತಂಬಿಹಳ್ಳಿ ಗೇಟ್ ಬಳಿ ಬರುತ್ತಿದ್ದರು. ಆ ಸಮಯದಲ್ಲಿ ಹಿಂದಿನಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಸಂಖ್ಯೆ ಕೆಎ-೪೨-ಎಫ್-೦೫೯ರ ಚಾಲಕ ತನ್ನ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ಜಯಮೂರ್ತಿ ಮತ್ತು ಇತರೆ ೫ ಜನರಿಗೆ ಗಾಯಗಳಾಗಿರುತ್ತದೆ.

ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಸ್ವರೂಪದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೫-೧೨-೨೦೦೯ ರಂದು ೨೦೪೫ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಟಮಕ  ವಾಸಿಯಾದ ಕಣ್ಣನ್ ಎಂಬುವರು  ನಡೆದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ  ಬಂದ ಕಾರ್‍ ಸಂಖ್ಯೆ ಕೆಎ-೧೯-ಎಂಎಫ್-೧೩೨೧ರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿರುತ್ತಾನೆ. ಪರಿಣಾಮ ಕಣ್ಣನ್ ರವರಿಗೆ ಗಾಯಗಳಾಗಿರುತ್ತದೆ.

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು:  ೦೨

ವೇಮಗಲ್ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೬-೧೨-೨೦೦೯ ರಂದು ಕೋಲಾರ ತಾಲೂಕು ವೀರೇನಹಳ್ಳಿ ಗ್ರಾಮದ ವಾಸಿ ಹನುಮಂತರಾಯಪ್ಪ (೪೮) ಎಂಬುವರು ಸೀಗೆ ಮರಕ್ಕೆ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾರೆ.

ಮಾಸ್ತಿ ಪೊಲೀಸ್ ಠಾಣೆಯಲ್ಲಿ  ಅಸ್ವಾಭಾವಿಕ ಸಾವಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೬-೧೨-೨೦೦೯ ರಂದು ೦೪೦೦ ಗಂಟೆ ಸಮಯದಲ್ಲಿ ಮಾಲೂರು ತಾಲೂಕು ತೃಣಸಿ ಗ್ರಾಮದ ವಾಸಿ ನಾರಾಯಣಪ್ಪ ಎಂಬುವರ ಮಗನಾದ ಟಿ.ಎನ್.ಶಿವಶಂಕರ್‍(೧೮) ಎಂಬುವರಿಗೆ ಬರುತ್ತಿದ್ದ ಹೊಟ್ಟೆ ನೋವು ವಾಸಿಯಾಗದೆ ಮೃತ ಪಟ್ಟಿರುತ್ತಾರೆ.

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ  ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು :      

-ಸ್ಥಳ ದಂಡ ಮೊತ್ತ : ರೂ.       

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.


ದಿನದ ಅಪರಾಧಗಳ ಪಕ್ಷಿನೋಟ ೦೬ ನೇ ಡಿಸೆಂಬರ್ ೨೦೦೯

December 6, 2009

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ  ೦೬-೧೨-೨೦೦೯ ರಂದು ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ೦೧

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಕಾಮಧೇನಹಳ್ಳಿ ಗ್ರಾಮದ  ವಾಸಿ ಶ್ರೀನಿವಾಸಗೌಡ ಎಂಬುವರು ಶ್ರೀನಿವಾಸಪುರ ತಾಲೂಕು ತಿನ್ನಲಿ ಗ್ರಾಮದ ವಾಸಿ ವೆಂಕಟೇಶಪ್ಪ ಎಂಬುವರ ಮಗಳಾದ ರುಕ್ಮಿಣಿಯನ್ನು ಮದುವೆಯಾಗಿದ್ದು, ಈಗ್ಗೆ ೩ ತಿಂಗಳಿನಿಂದ ಇಬ್ಬರ ನಡೆವೆ ಜಗಳ ನಡೆದು ರುಕ್ಮಿಣಿ ರವರು ತವರು ಮನೆಯಲ್ಲಿ ವಾಸವಾಗಿದ್ದು,  ದಿನಾಂಕ ೨೮-೧೧-೨೦೦೯ ರ ರಾತ್ರಿ  ಶ್ರೀನಿವಾಸಗೌಡ ರವರು ತಿನ್ನಲಿ ಗ್ರಾಮಕ್ಕೆ ಹೋಗಿದ್ದ ಸಮಯದಲ್ಲಿ  ಹೆಂಡತಿ ರುಕ್ಮಿಣಿಯಮ್ಮ,  ಅಣ್ಣ ನಾರಾಯಣಸ್ವಾಮಿ, ತಂದೆ ವೆಂಕಟೇಶಪ್ಪ ಮತ್ತು  ರಘು, ಅರಳಕುಂಟೆ ಕೃಷ್ಣಪ್ಪ  ಎಂಬುವರು ಸೇರಿಕೊಂಡು ಶ್ರೀನಿವಾಸಗೌಡ ರವರನ್ನು ಮನೆಯಲ್ಲಿ ಕೊಲೆ ಮಾಡಿ ಮಾರನೇ ದಿನ ಪಕ್ಕದ ಅರಣ್ಯಕ್ಕೆ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಗುರುತು ಸಿಗದಂತೆ ಸುಟ್ಟು ಹಾಕಿರುತ್ತಾರೆ.  

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ    

ಸಾಧಾರಣ  ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ   

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ  ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

ವೇಮಗಲ್ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೪-೧೨-೨೦೦೯ ರಂದು ೨೦೦೦ ಗಂಟೆ ಸಮಯದಲ್ಲಿ ಕೋಲಾರ ತಾಲೂಕು ಕ್ಯಾಲನೂರು ಗ್ರಾಮದ ವಾಸಿ ಅಫ್ರೋಜ್ ಪಾಷ ಎಂಬುವರ ಮೇಲೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ ಸಮೀಉಲ್ಲಾ ಮತ್ತು ಇತರೆ ೩ ಜನರು ಕೈಗಳಿಂದ ಹೊಡೆದು ಗಾಯಪಡಿಸಿರುತ್ತಾರೆ.

ಇತರೆ: ಇಲ್ಲ

ವಿಶೇಷ  ಹಾಗೂ  ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ  ಮರಣದ  ಪ್ರಕರಣಗಳು:  ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರು  ವಾಹನ  ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು :      

-ಸ್ಥಳ ದಂಡ ಮೊತ್ತ : ರೂ.       

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೨-೨೪೩೦೬೬ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.