ಕರ್ನಾಟಕ ರಾಜ್ಯ ಪೊಲೀಸ್ ದ್ಜಜ ದಿನಾಚರಣೆ ಸಮಾರಂಭ

April 3, 2008

ದಿನಾಂಕ ೦೨-೦೪-೨೦೦೮ ರಂದು ಕೋಲಾರ ಜಿಲ್ಲಾ ಕವಾಯತು ಮೈದಾನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ದ್ವಜ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೋಲಾರ ಉಪ ವಿಭಾಗದ ಆರಕ್ಷಕ ಉಪಾಧೀಕ್ಷಕರಾದ ಶ್ರೀ ಮುನಿರೆಡ್ಡಿರವರು ಸ್ವಾಗತ ಭಾಷಣವನ್ನು ಮಾಡಿದ್ದು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಕೆ.ವಿ.ನಾರಾಯಣಪ್ಪ, ನಿವೃತ್ತ ಪೊಲೀಸ್ ಉಪಾಧೀಕ್ಷಕ ರವರು ಪೊಲೀಸ್ ದ್ವಜಗಳ ವಿತರಣೆಯನ್ನು ಮಾಡಿದರು. ಇದೇ ಸಂಧರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿರವರಿಗೆ ಕೋಲಾರ ಜಿಲ್ಲಾ ಪ್ರಭಾರ ಪೊಲೀಸ್ ಅಧೀಕ್ಷಕರಾದ ಶ್ರೀ ಯಲ್ಲಪ್ಪ ರವರು ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸದರು.  ಮುಳಬಾಗಿಲು ಉಪವಿಭಾಗದ ಆರಕ್ಷಕ ಉಪಾಧೀಕ್ಷಕರಾದ ಶ್ರೀ ಧರಣೇಂದ್ರರವರು ವಂದನಾರ್ಪಣೆ ಮಾಡಿದರು.